Tag: Kamalapur

  • ಧಾರವಾಡವನ್ನು ಬೆಚ್ಚಿ ಬೀಳಿಸಿದ್ದ ಮರ್ಡರ್ ಪ್ರಕರಣ: ಪಿಸ್ತೂಲ್ ಕೊಟ್ಟವ ಅರೆಸ್ಟ್

    ಧಾರವಾಡವನ್ನು ಬೆಚ್ಚಿ ಬೀಳಿಸಿದ್ದ ಮರ್ಡರ್ ಪ್ರಕರಣ: ಪಿಸ್ತೂಲ್ ಕೊಟ್ಟವ ಅರೆಸ್ಟ್

    ಧಾರವಾಡ: ಹುಬ್ಬಳ್ಳಿ (Hubballi) ಹಾಗೂ ಧಾರವಾಡದ (Dharwad) ಜನತೆಯನ್ನು ಬೆಚ್ಚಿ ಬೀಳಿಸಿದ್ದ ಕಮಲಾಪುರದ (Kamalapur) ಜೋಡಿ ಕೊಲೆಗೆ (Murder) ಪಿಸ್ತೂಲ್ ಕೊಟ್ಟ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನು ರೌಡಿಶೀಟರ್ ಮಂಜು ಸಾವಂತ ಎಂದು ಗುರುತಿಸಲಾಗಿದೆ. ಇದುವರೆಗೂ ಪ್ರಕರಣದಲ್ಲಿ ಒಟ್ಟು 7 ಅರೋಪಿಗಳನ್ನು ಬಂಧಿಸಲಾಗಿತ್ತು. ಈತನ ಬಂಧನದಿಂದಾಗಿ ಆರೋಪಿಗಳ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಧಾರವಾಡದಲ್ಲಿ ಡಬಲ್ ಮರ್ಡರ್ – ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು

    ಕಳೆದ ಮೇ 25 ರಂದು ಹಣದ ವಿಚಾರಕ್ಕೆ ರಿಯಲ್ ಎಸ್ಟೇಟ್ ಉದ್ಯಮಿ (Real Estate) ಮಹ್ಮದ್ ಕುಡಚಿ ಎಂಬುವವರನ್ನು ಕೊಲೆ ಮಾಡಲಾಗಿತ್ತು. ಈ ವೇಳೆ ಇನ್ನೋರ್ವ ಗಣೇಶ ಎಂಬಾತ ಕೂಡ ಸಾವಿಗೀಡಾಗಿದ್ದ. ನಂತರ ತನಿಖೆ ಕೈಗೊಂಡಿದ್ದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದರು. ವಿಚಾರಣೆ ವೇಳೆ ಮಂಜು ಸಾವಂತ ಬಳಿ ಪಿಸ್ತೂಲ್ ಪಡೆದಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದರು. ಇದನ್ನೂ ಓದಿ: ಉದ್ದೇಶಪೂರ್ವಕವಾಗಿಯೇ ಉರುಳಿಸಲಾಗಿದೆ: 1700 ಕೋಟಿಯ ಸೇತುವೆ ಕುಸಿತಕ್ಕೆ ಬಿಹಾರ ಡಿಸಿಎಂ ಸಮರ್ಥನೆ

  • ಧಾರವಾಡದಲ್ಲಿ ಡಬಲ್ ಮರ್ಡರ್ – ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು

    ಧಾರವಾಡದಲ್ಲಿ ಡಬಲ್ ಮರ್ಡರ್ – ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು

    ಧಾರವಾಡ: ರಿಯಲ್ ಎಸ್ಟೇಟ್ (Real Estate) ಉದ್ಯಮಿ ಸೇರಿ ಇಬ್ಬರನ್ನು ಬರ್ಬರವಾಗಿ ಹತ್ಯೆ (Murder) ಮಾಡಿರುವ ಘಟನೆ ಧಾರವಾಡದಲ್ಲಿ (Dharwad) ತಡರಾತ್ರಿ ನಡೆದಿದೆ.

    ರಿಯಲ್ ಎಸ್ಟೇಟ್ ಉದ್ಯಮಿ ಮಹಮ್ಮದ್ ಕುಡಚಿ ಹಾಗೂ ಮತ್ತೊರ್ವ ವ್ಯಕ್ತಿಯನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದಾರೆ. ನಗರದ ಕಮಲಾಪುರ (Kamalapur) ಹೊರವಲಯದ ಮನೆ ಎದುರು ಮಹಮ್ಮದ್ ಕುಳಿತಿದ್ದಾಗ ದುಷ್ಕರ್ಮಿಗಳ ಗುಂಪು ಅವರ ಮೇಲೆ ದಾಳಿ ನಡೆಸಿದೆ. ಈ ವೇಳೆ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದನ್ನೂ ಓದಿ: ವಿಜಯ್ ಮಲ್ಯಗೆ ಮುಳುವಾಗಿದ್ದ ಟಿಪ್ಪು ಖಡ್ಗ 145 ಕೋಟಿಗೆ ಹರಾಜು

    ಮಹಮ್ಮದ್ ಅವರ ಅವರ ಮನೆಯಲ್ಲಿದ್ದ ಮತ್ತೋರ್ವನ ಮೇಲೂ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ದಾಳಿಯಿಂದ ತಪ್ಪಿಸಿಕೊಳ್ಳಲು ಆತ ಓಡಿ ಹೋಗಿದ್ದು, ಮನೆಯಿಂದ ರಸ್ತೆಯುದ್ದಕ್ಕೂ ರಕ್ತ ಚೆಲ್ಲಾಡಿದೆ. ಆತ ಕೂಡ ಸ್ವಲ್ಪ ದೂರದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಆತನ ಹೆಸರು ತಿಳಿದು ಬಂದಿಲ್ಲ.

    ಸ್ಥಳಕ್ಕೆ ಪೊಲೀಸ್ ಆಯುಕ್ತ ರಮಣ್ ಗುಪ್ತಾ ಸೇರಿದಂತೆ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೋಡಿ ಕೊಲೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು. ಈ ಹತ್ಯೆ ಹಿಂದಿನ ಕಾರಣ ಏನು ಎಂಬುದನ್ನು ಬಹಿರಂಗಪಡಿಸಲಾಗುವುದು ಎಂದು ಗುಪ್ತಾ ಅವರು ತಿಳಿಸಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಮಾರಕಾಸ್ತ್ರಗಳು ಪತ್ತೆಯಾಗಿವೆ. ಆರೋಪಿಗಳ ಪತ್ತೆಗೆ ತನಿಖಾ ತಂಡ ರಚನೆ ಮಾಡಲಾಗಿದೆ. ಡಾಗ್ ಸ್ಕ್ವಾಡ್ ಹಾಗೂ ಬೆರಳಚ್ಚು ತಜ್ಞರು ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಮಹಿಳೆಯರಿಗೆ ಉಚಿತ ಪ್ರಯಾಣ – ಮಾರ್ಗಸೂಚಿಯಲ್ಲಿ ಏನಿರಬಹುದು?