Tag: kamalanagar

  • ಬೆಂಗ್ಳೂರಿನ ಕಮಲಾನಗರದಲ್ಲಿ ಕಟ್ಟಡ ಕುಸಿಯೋ ಭೀತಿ!

    ಬೆಂಗ್ಳೂರಿನ ಕಮಲಾನಗರದಲ್ಲಿ ಕಟ್ಟಡ ಕುಸಿಯೋ ಭೀತಿ!

    – ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ, ಪರಿಶೀಲನೆ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಕಟ್ಟಡ ಕುಸಿಯುವ ಭೀತಿ ಎದುರಾಗಿದೆ. ಯಾವುದೇ ಕ್ಷಣದಲ್ಲಾದ್ರೂ ಕಟ್ಟಡ ಕುಸಿಯುವ ಸಾಧ್ಯತೆಗಳಿವೆ.

    ಹೌದು. ಕಮಲಾನಗರದ ಶಂಕರ್‍ನಾಗ್ ಬಸ್ ನಿಲ್ದಾಣದ ಬಳಿ ಇರುವ ಮೂರು ಅಂತಸ್ತಿನ ಕಟ್ಟಡ ಕುಸಿದು ಬೀಳುವ ಹಂತದಲ್ಲಿದೆ. ರಾಜೇಶ್ವರಿ ಎಂಬುವರಿಗೆ ಸೇರಿದ ಬಿಲ್ಡಿಂಗ್ ಕುಸಿಯುತ್ತಿರುವ ಮುನ್ಸೂಚನೆ ಸಿಗುತ್ತಿದ್ದಂತೆಯೇ ವಾಸವಿದ್ದ 4 ಕುಟುಂಬ ಹೊರಗೆ ಓಡಿ ಬಂದಿದೆ. ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಬಹುಮಹಡಿ ಕಟ್ಟಡ ಕುಸಿತ- ತಪ್ಪಿದ ಭಾರೀ ಅನಾಹುತ

    ಮನೆಯೊಳಗಡೆ ಪಾತ್ರೆ-ಪಗಟೆ, ಬಟ್ಟೆ, ವಸ್ತುಗಳು ಹಾಗೆಯೇ ಇವೆ. ಸದ್ಯ ಈ 4 ಕುಟುಂಬ ದಿಕ್ಕು ತೋಚದೆ ಕಂಗಾಲಾಗಿವೆ. ಇದೇ ಕಟ್ಟಡದಲ್ಲಿ 6 ಕುಟುಂಬಗಳು ವಾಸವಾಗಿದ್ದವು. ಆದರೆ ಶಿಥಿಲಾವಸ್ಥೆಗೊಂಡಿದ್ದ ಕಾರಣ 3 ಮನೆಗಳನ್ನು ಖಾಲಿ ಮಾಡಲಾಗಿತ್ತು. ಇದನ್ನೂ ಓದಿ: ರಾಜ್ಯದಲ್ಲಿ ಮುಂದುವರಿದ ವರುಣಾರ್ಭಟ – ದಾವಣಗೆರೆಯಲ್ಲಿ 20ಕ್ಕೂ ಹೆಚ್ಚು ಮನೆಗಳು ಜಲಾವೃತ

    ಸದ್ಯ ಕಟ್ಟಡದಲ್ಲಿ 4 ಕುಟುಂಬಗಳು ವಾಸವಾಗಿವೆ. ಇದೀಗ ಕುಸಿಯುವ ಹಂತದಲ್ಲಿದ್ದು, ಸ್ಥಳಕ್ಕೆ ಬಿಬಿಎಂಪಿ, ಅಧಿಕಾರಿಗಳು ಹಾಗೂ ಎನ್ ಡಿ ಆರ್ ಎಫ್ ನ ನುರಿತ ತಜ್ಞರಿಂದ ಪರಿಶೀಲನೆ ನಂತರ ತೆರವು ಕಾರ್ಯಾಚರಣೆ ನಡೆಯಲಿದೆ. ಕಟ್ಟಡದ ಸುತ್ತಮುತ್ತ ಮನೆಗೆ ಹಾನಿ ಆಗದಂತೆ ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ.

  • ನಮಗೆ ವಿಷ ಕೊಟ್ಟು ಬಿಡಿ ಸಾಯ್ತೇವೆ – ಬಿಬಿಎಂಪಿ ಮೇಲೆ ಫಲಾನುಭವಿಗಳ ಆಕ್ರೋಶ

    ನಮಗೆ ವಿಷ ಕೊಟ್ಟು ಬಿಡಿ ಸಾಯ್ತೇವೆ – ಬಿಬಿಎಂಪಿ ಮೇಲೆ ಫಲಾನುಭವಿಗಳ ಆಕ್ರೋಶ

    ಬೆಂಗಳೂರು : ಬಿಬಿಎಂಪಿಯ ವಿಳಂಬ ಧೋರಣೆಗೆ ಬೇಸತ್ತು ನಮಗೆ ವಿಷ ಕೊಡಿ. ಕುಡಿದು ನಾವೇ ಸಾಯುತ್ತೇವೆ ಎಂದು ಮನೆ ಕಳೆದುಕೊಂಡ ಫಲಾನುಭವಿಗಳು ಕಣ್ಣೀರು ಹಾಕಿದ ಘಟನೆ ಕಮಲನಗರದಲ್ಲಿ ನಡೆದಿದೆ.

    ಕಮಲನಗರದ ನಾಲ್ಕನೇ ಮುಖ್ಯರಸ್ತೆಯಲ್ಲಿ ಕಳೆದ ಒಂದು ವರ್ಷದ ಹಿಂದೆ ಬಿಬಿಎಂಪಿ ಸೇತುವೆ ನಿರ್ಮಾಣ ಕಾಮಗಾರಿಯನ್ನು ಆರಂಭಿಸಿತ್ತು. ಈ ವೇಳೆ ಅಕ್ಕಪಕ್ಕದ ಮನೆಗಳು ಬಿರುಕು ಬಿಟ್ಟಿದ್ದವು. ಬಿರುಕುಬಿಟ್ಟ ನಾಲ್ಕೈದು ಮನೆಯವರನ್ನುಶಿಫ್ಟ್ ಮಾಡಿ, ಬಾಡಿಗೆ ಮನೆಯಲ್ಲಿರಿ. ಇದರ ವೆಚ್ಚವನ್ನು ಬಿಬಿಎಂಪಿಯೇ ನೀಡಲಿದೆ ಎಂದು ಭರವಸೆ ಕೊಟ್ಟಿತ್ತು.

    ಭರವಸೆ ಮಾತ್ರ ನೀಡಿತ್ತು. ಆದರೆ ಇವರೆಗೂ ಮನೆಕಳೆದುಕೊಂಡು ಕಣ್ಣೀರು ಹಾಕ್ತಿರುವ ಫಲಾನುಭವಿಗಳಿಗೆ ಪರಿಹಾರ ಹಣವನ್ನ ಪಾಲಿಕೆ ನೀಡಲಿಲ್ಲ. ಇದರಿಂದ ಬೇಸತ್ತಿರುವ ಫಲಾನುಭವಿಗಳು ನಮಗೆ ವಿಷ ಕೊಡಿ ಸಾಯುತ್ತೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಸದ್ಯ ಸೇತುವೆ ನಿರ್ಮಾಣ ಕಾಮಗಾರಿ ನೆನೆಗುದಿಗೆ ಬಿದ್ದಿದ್ದು, ಮತ್ತೆ ಕಾಮಗಾರಿ ಪುನರ್ ಆರಂಭವಾದರೆ ಮತ್ತಷ್ಟು ಮನೆಗಳು ಬಿರುಕು ಬಿಟ್ಟು ಕುಸಿಯುವ ಆತಂಕ ನಿರ್ಮಾಣವಾಗಿದೆ. ಈಗಾಗಲೇ ಒಂದು ಮನೆಗೆ ಕಬ್ಬಿಣದ ರಾಡ್ ಗಳಿಂದ ಸಪೋರ್ಟಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ. ಪಾಲಿಕೆಯ ಈ ಅವೈಜ್ಞಾನಿಕ ಕಾಮಗಾರಿಗೆ ವಾರ್ಡ್‌ ಜನ ಹಿಡಿಶಾಪ ಹಾಕುತ್ತಿದ್ದಾರೆ.

  • ಬ್ರೇಕ್ ವೈಫಲ್ಯದಿಂದ ಶೆಡ್‍ಗೆ ನುಗ್ಗಿದ ಟಿಪ್ಪರ್ ಲಾರಿ- ಒಂದೇ ಕುಟುಂಬದ ಇಬ್ಬರು ಸಾವು

    ಬ್ರೇಕ್ ವೈಫಲ್ಯದಿಂದ ಶೆಡ್‍ಗೆ ನುಗ್ಗಿದ ಟಿಪ್ಪರ್ ಲಾರಿ- ಒಂದೇ ಕುಟುಂಬದ ಇಬ್ಬರು ಸಾವು

    ಬೆಂಗಳೂರು: ಬ್ರೇಕ್ ವೈಫಲ್ಯದಿಂದ ಟಿಪ್ಪರ್ ಲಾರಿ ಶೆಡ್‍ಗೆ ನುಗ್ಗಿ ಒಂದೇ ಕುಟುಂಬದ ಇಬ್ಬರು ಸಾವನ್ನಪ್ಪಿರುವ ಘಟನೆ ಕಮಲಾ ನಗರದ ವೀರಭದ್ರೇಶ್ವರ ಥಿಯೇಟರ್ ಬಳಿ ನಡೆದಿದೆ.

    ಲಾರಿ ಮಾಲೀಕ ನಟರಾಜ್ ಮತ್ತು ಅವರ ಬಾಮೈದ ವಿನಯ್ ಮೃತ ದುರ್ದೈವಿಗಳು. ಇವರು ದೇವನಹಳ್ಳಿಯ ಕೋಡಿಮಂಜೇನಹಳ್ಳಿಯ ಮೂಲದವರಾಗಿದ್ದಾರೆ.

    ಬುಧವಾರ ಮಧ್ಯರಾತ್ರಿ 11.30 ರ ಸಮಯಕ್ಕೆ ಬಸವೇಶ್ವರನಗರದ ಕಟ್ಟಡವೊಂದರ ನಿರ್ಮಾಣಕ್ಕೆ ಮರಳು ಸರಬರಾಜು ಮಾಡಲು ಲಾರಿ ಬಂದಿದ್ದು, ಬ್ರೇಕ್ ವೈಫಲ್ಯದಿಂದಾಗಿ ಲಾರಿ ಶೆಡ್‍ಗೆ ನುಗ್ಗಿದೆ. ಸಿಕ್ಕಿ ಹಾಕಿಕೊಂಡಿದ್ದ ಲಾರಿಯನ್ನು ಕ್ರೈನ್ ಮತ್ತು ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಿ ಮೃತ ದೇಹಗಳನ್ನು ಹೊರತೆಗೆಯಲಾಗಿದೆ.

    ಘಟನೆ ಬಗ್ಗೆ ವಿಜಯನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.