Tag: kamala hassan

  • ಬಹುಭಾಷಾ ನಟಿ ಶ್ರುತಿ ಹಾಸನ್‍ಗೆ ಕೂಡಿ ಬಂದಿದ್ಯಾ ಕಂಕಣ ಭಾಗ್ಯ?

    ಬಹುಭಾಷಾ ನಟಿ ಶ್ರುತಿ ಹಾಸನ್‍ಗೆ ಕೂಡಿ ಬಂದಿದ್ಯಾ ಕಂಕಣ ಭಾಗ್ಯ?

    ಚೆನ್ನೈ: ಬಹುಭಾಷಾ ನಟಿ ಶ್ರುತಿ ಹಾಸನ್ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದ್ಯಾ ಎಂಬ ಪ್ರಶ್ನೆ ಮೂಡಿದೆ. ಈ ಕುರಿತ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಭಾರೀ ಚರ್ಚೆಗೆ ಕಾರಣವಾಗಿದೆ.

    ತಮಿಳು ಚಿತ್ರ ನಟ ಕಮಲ್ ಹಾಸನ್ ಪುತ್ರಿ ಶೃತಿ ಹಾಸನ್ ಬಹುದಿನಗಳಿಂದ ಲಂಡನ್ ಮೂಲದ ನಟ ಮೈಕಲ್ ಕೊರ್ಸೆಲ್ ಜೊತೆ ಡೇಟಿಂಗ್ ನಲ್ಲಿರುವ ಕುರಿತ ಗಾಸಿಪ್ ಹರಿದಾಡುತ್ತಿದೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ನಟಿ ಶ್ರುತಿ ಹಾಸನ್, ಅವರ ತಾಯಿ ಸಾರಿಕಾ ಹಾಗೂ ಮೈಕಲ್ ಮೂವರೂ ಜೊತೆಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಈ ಫೋಟೋದಲ್ಲಿ ನಟಿ ಶ್ರುತಿ ಹಾಸನ್ ತಾಯಿ ಸರಿಕಾ ಅವರು ಕೈಯಲ್ಲಿ ಹೂ ಗುಚ್ಛ ಹಿಡಿದು ಬರುತ್ತಿದ್ದಾರೆ. ಅಲ್ಲದೇ ಕಮಲ್ ಹಾಸನ್ ಅವರನ್ನೂ ಕೂಡ ಈ ಹಿಂದೆ ನಟ ಮೈಕಲ್ ಕೊರ್ಸೆಲ್ ಭೇಟಿಯಾಗಿದ್ದರು. ಶೃತಿ ಹಾಗೂ ಮೈಕಲ್ ಹಲವಾರು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಇವರ ಪೋಸ್ಟ್‍ಗಳಿಂದ ಇಬ್ಬರೂ ಡೇಟಿಂಗ್ ಮಾಡ್ತಿದ್ದಾರೆ ಎಂಬ ಸುದ್ದಿ ಶುರುವಾಗಿತ್ತು. ಆದ್ರೆ ಈವರೆಗೆ ಈ ವಿಷಯ ಖಚಿತವಾಗಿಲ್ಲ.

    ಈ ಕುರಿತು ಸಂದರ್ಶನವೊಂದರಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ್ದ ಶೃತಿ ಹಾಸನ್, ಅಂತಹ ಊಹೆಗಳ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಹಾಗೂ ಅದರ ಬಗ್ಗೆ ಕಮೆಂಟ್ ಮಾಡಲು ಬಯಸುವುದಿಲ್ಲ. ಇದರಿಂದ ನನಗೆ ಕಿರಿಕಿರಿಯೂ ಆಗವುದಿಲ್ಲ. ನನ್ನ ವೈಯಕ್ತಿಕ ಜೀವನ ವಿಷಯಗಳ ಬಗ್ಗೆ ಮಾತನಾಡಲು ಇಷ್ಟವಿಲ್ಲ ಎಂದು ಹೇಳಿದ್ದರು.

    ಈ ಜೋಡಿಯ ಮದುವೆಗೆ ಕಮಲ್ ಹಾಸನ್ ಮತ್ತು ಸಾರಿಕಾ ಕೂಡಾ ಒಪ್ಪಿಗೆ ನೀಡಿದ್ದಾರೆ ಎನ್ನಲಾಗುತ್ತಿದೆ. ಎಲ್ಲಾ ಅಂದುಕೊಂಡಂತೆ ಆದರೆ ಐಶ್ವರ್ಯ ರೈ, ಕರೀನಾ ಕಪೂರ್, ಕಾಜೋಲ್, ಸಮಂತಾರಂತೆ ಸ್ಟಾರ್ ಕಪಲ್‍ಗಳ ಸಾಲಿಗೆ ಶ್ರುತಿ ಹಾಸನ್ ಕೂಡಾ ಸೇರಲಿದ್ದಾರೆ.

    https://www.instagram.com/p/BcHUL6qlCUN/?taken-by=ishrutihaasan

    https://www.instagram.com/p/BcHUXcwlDyx/?taken-by=ishrutihaasan

    https://www.instagram.com/p/Bb6bcxFFTZF/?taken-by=ishrutihaasan

    https://www.instagram.com/p/Bbm7v5IFwQ0/?taken-by=ishrutihaasan

    https://www.instagram.com/p/BbrXOVMFceg/?taken-by=ishrutihaasan

  • ಚೆನ್ನೈನ ಮನೆಯಲ್ಲಿ ಸಂಭವಿಸಿದ ಬೆಂಕಿ ಅವಘಡದಿಂದ ಪಾರಾದ ನಟ ಕಮಲ್ ಹಾಸನ್

    ಚೆನ್ನೈನ ಮನೆಯಲ್ಲಿ ಸಂಭವಿಸಿದ ಬೆಂಕಿ ಅವಘಡದಿಂದ ಪಾರಾದ ನಟ ಕಮಲ್ ಹಾಸನ್

    ಚೆನ್ನೈ: ಬಹುಭಾಷಾ ನಟ ಕಮಾಲ್ ಹಾಸನ್ ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಕಳೆದ ರಾತ್ರಿ ಚೈನ್ನೈ ನಗರದ ಆಳ್ವಾರ್‍ಪೇಟ್‍ನಲ್ಲಿರೋ ಕಮಾಲ್ ಹಾಸನ್ ರವರ ಮನೆಯಲ್ಲಿ ದಿಢೀರ್ ಅಗ್ನಿ ಅವಘಡ ಸಂಭವಿಸಿದ್ದು, ಅದೃಷ್ಟವಶಾತ್ ಮನೆಯಲ್ಲಿದ್ದ ಯಾರಿಗೂ ಯಾವುದೇ ಅಪಾಯವಾಗಿಲ್ಲ.

    ಘಟನೆಯಿಂದಾಗಿ ಕೆಲ ಪುಸ್ತಕಗಳು ಸುಟ್ಟಿದ್ದು ಹೊರತುಪಡಿಸಿದರೆ ಮನೆಯಲ್ಲಿ ದೊಡ್ಡ ನಷ್ಟವೇನೂ ಆಗಿಲ್ಲ. ಈ ವಿಷಯವನ್ನು ಕಮಲ್ ಹಾಸನ್ ಅವರೇ ಟ್ವಿಟ್ಟರ್‍ನಲ್ಲಿ ಹೇಳಿಕೊಂಡಿದ್ದಾರೆ.

    ನನ್ನ ಸಿಬ್ಬಂದಿಗೆ ಧನ್ಯವಾದ. ಮನೆಯಲ್ಲಿ ನಡೆದ ಅಗ್ನಿ ಅವಘಡದಿಂದ ಪಾರಾಗಿದ್ದೇನೆ. ಮನೆ ಹೊಗೆಯಿಂದ ಆವೃತ್ತವಾಗಿತ್ತು. ಶ್ವಾಸಕೋಶದ ತುಂಬಾ ಹೊಗೆ. ನಾನು ಮೂರನೇ ಮಹಡಿಯಿಂದ ಇಳಿದು ಬಂದೆ. ಈಗ ಸುರಕ್ಷಿತವಾಗಿದ್ದೇನೆ. ಯಾರಿಗೂ ಯಾವುದೇ ತೊಂದರೆಯಾಗಿಲ್ಲ. ಗುಡ್ ನೈಟ್ ಎಂದು ಕಮಲ್ ಹಾಸನ್ ಶುಕ್ರವಾರ ರಾತ್ರಿ ಟ್ವೀಟ್ ಮಾಡಿದ್ದರು.

    ಅಗ್ನಿ ಅವಘಡದ ಕುರಿತು ಕಮಲ್ ಹಾಸನ್ ಅವರ ಟ್ವೀಟ್ ನೋಡಿ ನೂರಾರು ಅಭಿಮಾನಿಗಳು ಹಾಗೂ ಹಿತೈಷಿಗಳು ಕಮಲ್ ಹಾಸನ್ ಅವರು ಬಚಾವಾಗಿದ್ದಕ್ಕೆ ಕಾಳಜಿಯಿಂದ ಟ್ವೀಟ್‍ಗಳನ್ನ ಮಾಡಿದ್ದಾರೆ. ನಂತರ ಕಮಲ್ ಹಾಸನ್, ನನ್ನ ಮೇಲಿನ ನಿಮ್ಮಲ್ಲರ ಪ್ರೀತಿ, ಕಾಳಜಿಗೆ ಧನ್ಯವಾದ. ಈಗ ನಿದ್ದೆ ಮಾಡಲು ಹೋಗ್ತಾ ಇದ್ದೀನಿ ಎಲ್ಲರಿಗೂ ಶುಭರಾತ್ರಿ’ ಅಂತಾ ಮತ್ತೊಂದು ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.