Tag: Kamala Harris

  • US Presidential Debate| ಮೊದಲ ಬಾರಿಗೆ ಟ್ರಂಪ್‌, ಕಮಲಾ ಮುಖಾಮುಖಿ: ಆರ್ಥಿಕತೆ, ವಲಸೆ ಬಗ್ಗೆ ಚರ್ಚೆ

    US Presidential Debate| ಮೊದಲ ಬಾರಿಗೆ ಟ್ರಂಪ್‌, ಕಮಲಾ ಮುಖಾಮುಖಿ: ಆರ್ಥಿಕತೆ, ವಲಸೆ ಬಗ್ಗೆ ಚರ್ಚೆ

    ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷೀಯ ಚುನಾವಣೆ (USA Presidential Election) ರಂಗೇರಿದ್ದು ಮಾಜಿ ಅಧ್ಯಕ್ಷ, ರಿಪಬ್ಲಿಕ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ (Donald Trump) ಮತ್ತು ಹಾಲಿ ಉಪಾಧ್ಯಕ್ಷೆ, ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್‌ (Kamala Harris) ಮೊದಲ ಬಾರಿಗೆ ಮುಖಾಮುಖಿಯಾಗಿದ್ದಾರೆ.

    ಪೆನ್ಸಿಲ್ವೇನಿಯಾದಲ್ಲಿ ಎಬಿಸಿ ವಾಹಿನಿ  ಆಯೋಜಿಸಿದ್ದ  ಬಹಿರಂಗ ಚರ್ಚೆಯಲ್ಲಿ  ಬಹಿರಂಗ ಚರ್ಚೆಯಲ್ಲಿ ಆರ್ಥಿಕತೆ, ವಲಸೆ ನೀತಿ, ಕ್ಯಾಪಿಟಲ್‌ ಹಿಲ್‌ ಗಲಭೆ ಇತ್ಯಾದಿ ವಿಚಾರಗಳ ಬಗ್ಗೆ ಇಬ್ಬರು ನಾಯಕರು ಮಾತನಾಡಿದರು.

    ಕಮಲಾ ಹ್ಯಾರಿಸ್‌ ಮಾರ್ಕ್ಸ್‌ವಾದಿಯಾಗಿದ್ದಾರೆ. ಅವರ ತಂದೆ ಮಾರ್ಕ್ಸ್‌ವಾದವನ್ನು ಕಲಿಸಿಕೊಟ್ಟಿದ್ದಾರೆ. ಅವರ ಹುಚ್ಚು ನೀತಿಯಿಂದ ದೇಶ ನಾಶವಾಗಿದೆ ಎಂದು ಟ್ರಂಪ್‌ ಟೀಕಿಸಿದರು.

    ಡೊನಾಲ್ಡ್ ಟ್ರಂಪ್ ಲಕ್ಷಾಂತರ ಜನರನ್ನು ವಜಾಗೊಳಿಸಿದ್ದಾರೆ. ಕೆಟ್ಟ ಉದ್ಯೋಗ ನೀತಿಯಿಂದ ದೇಶ ಸಮಸ್ಯೆಗೆ ಸಿಲುಕಿತ್ತು. ಟ್ರಂಪ್‌ ಅವಧಿಯಲ್ಲಿ ಆಗಿದ್ದ ಅವ್ಯವಸ್ಥೆಯನ್ನು ನಮ್ಮ ಅವಧಿಯಲ್ಲಿ ನಾವು ಸ್ವಚ್ಛ ಮಾಡಿದ್ದೇವೆ ಎಂದು ಹ್ಯಾರಿಸ್‌ ತಿರುಗೇಟು ನೀಡಿದರು.

     

    ಟ್ರಂಪ್‌ ವಾದ ಏನು?
    ಕಮಲಾ ಹ್ಯಾರಿಸ್‌ ಅಧಿಕಾರಕ್ಕೆ ಬಂದರೆ ಅಮೆರಿಕ ವೆನೆಜುವೆಲಾ ಆಗಲಿದೆ. ನನ್ನ ಯೋಜನೆ ಉತ್ತಮ ಯೋಜನೆಯಾಗಿದೆ. ಅವರ ಬಳಿ ಯಾವುದೇ ಯಾವುದೇ ಯೋಜನೆ ಇಲ್ಲ ಮತ್ತು ಬೈಡೆನ್ ಅವರ ಯೋಜನೆಯನ್ನು ನಕಲು ಮಾಡಿದ್ದಾರೆ.

     

    ಸಾಕುಪ್ರಾಣಿಗಳನ್ನು ಸೇವಿಸುವ ಹೈಟಿ ವಲಸಿಗರು ಅಮೆರಿಕ ಜನರು ಸಾಕಿದ್ದ ನಾಯಿ, ಬೆಕ್ಕುಗಳನ್ನು ತಿನ್ನುತ್ತಿದ್ದಾರೆ. ಬೈಡನ್‌ ಅವಧಿಯಲ್ಲಿ ಲಕ್ಷಾಂತರ ಕ್ರಿಮಿನಲ್‌ಗಳಿಗೆ ದೇಶಕ್ಕೆ ಬರಲು ಅವಕಾಶ ಸಿಕ್ಕಿದೆ. ಭಯೋತ್ಪಾದಕರು, ಡ್ರಗ್ ಡೀಲರ್‌ಗಳಿಗೆ ಬರಲು ಅವಕಾಶ ನೀಡಿ ಅವರ ಮತಗಳನ್ನು ಪಡೆಯುತ್ತಿದ್ದಾರೆ. ಅಕ್ರಮ ವಲಸಿಗರಿಂದ ದೇಶ ನಾಶವಾಗಲಿದೆ.

    ನಾವು ಭಯಾನಕ ಆರ್ಥಿಕತೆಯನ್ನು ಹೊಂದಿದ್ದೇವೆ. ಹಣದುಬ್ಬರ ವಿಪರೀತ ಏರಿಕೆಯಾಗಿದೆ. ಬಹುಶಃ ಅಮರಿಕದ ಇತಿಹಾಸದಲ್ಲಿ ಇಷ್ಟೊಂದು ಕೆಟ್ಟ ಆರ್ಥಿಕತೆ ನೋಡೇ ಇಲ್ಲ. ನಾನು ಕ್ಯಾಪಿಟಲ್‌ ಹಿಲ್‌ ಮೇಲೆ ದಾಳಿಗೆ ಯಾವುದೇ ಪ್ರಚೋದನೆ ನೀಡಿಲ್ಲ. ಬೆಂಬಲಿಗರನ್ನು ಉದ್ದೇಶಿಸಿ ಭಾಷಣ ಮಾತ್ರ ಮಾಡಿದ್ದೇನೆ.

     

    ಕಮಲಾ ಹ್ಯಾರಿಸ್‌ ಹೇಳಿದ್ದೇನು?
    ಟ್ರಂಪ್‌ ಪ್ರಚಾರ ಸಭೆಗೆ ಆಗಮಿಸುತ್ತಿರುವ ಜನರು ಕಾರ್ಯಕ್ರಮದ ಮಧ್ಯೆ ಬೇಸರದಿಂದ ತೊರೆಯುತ್ತಿದ್ದಾರೆ. ಇದನ್ನು ನೋಡಿದಾಗಲೇ ಜನರಿಗೆ ಅವರ ಮೇಲೆ ಇರುವ ನಂಬಿಕೆ ಏನು ಎನ್ನುವುದು ತಿಳಿಯುತ್ತೆ. ಟ್ರಂಪ್‌ ಯಾವುದೇ ಯೋಜನೆಯನ್ನು ಹೊಂದಿಲ್ಲ. ಸಮರ್ಥಿಸಿಕೊಳ್ಳಲು ಯೋಜನೆ ಬಗ್ಗೆ ಮಾತನಾಡುತ್ತಾರೆ.

    ದೇಶದ ರಾಜಧಾನಿಯಲ್ಲಿ ಗಲಾಟೆ ನಡೆಸಲು ಟ್ರಂಪ್‌ ಭಾಷಣ ಮಾಡಿ ಹಿಂಸಾತ್ಮಕ ಗುಂಪನ್ನು ಪ್ರಚೋದಿಸಿದರು. ಟ್ರಂಪ್‌ಗೆ ರಿಪಬ್ಲಿಕನ್‌ ಪಕ್ಷದಲ್ಲೇ ಬೆಂಬಲ ಸಿಗುತ್ತಿಲ್ಲ. ಟ್ರಂಪ್‌ ಅವಧಿಯಲ್ಲಿ ಕೆಲಸ ಮಾಡಿದ 200 ಕ್ಕೂ ಹೆಚ್ಚು ರಿಪಬ್ಲಿಕನ್‌ಗಳು ನನ್ನನ್ನು ಬೆಂಬಲಿಸಿದ್ದಾರೆ. ವಿಶ್ವದ ನಾಯಕರು ಟ್ರಂಪ್‌ ನೋಡಿ ನಗುತ್ತಿದ್ದಾರೆ. ಟ್ರಂಪ್‌ 81 ಮಿಲಿಯನ್‌ ಜನರನ್ನು ತೆಗೆದು ಹಾಕಿ ದೇಶದ ಆರ್ಥಿಕತೆಯನ್ನು ಹಾಳು ಮಾಡಿದ್ದಾರೆ.

     

  • ಇಂದು ರಾತ್ರಿಯೇ ಡಿಸಿಎಂ ಡಿಕೆಶಿ ಅಮೆರಿಕ ಪ್ರವಾಸ – ಕಮಲಾ ಹ್ಯಾರಿಸ್‌ರಿಂದ ಬಂತು ವಿಶೇಷ ಆಹ್ವಾನ?

    ಇಂದು ರಾತ್ರಿಯೇ ಡಿಸಿಎಂ ಡಿಕೆಶಿ ಅಮೆರಿಕ ಪ್ರವಾಸ – ಕಮಲಾ ಹ್ಯಾರಿಸ್‌ರಿಂದ ಬಂತು ವಿಶೇಷ ಆಹ್ವಾನ?

    ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಗಳ ನಡುವೆ ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ತಮ್ಮ ಕುಟುಂಬದ ಜೊತೆ ಅಮೆರಿಕ (USA) ಪ್ರವಾಸ ಕೈಗೊಂಡಿದ್ದಾರೆ. ಭಾನುವಾರ (ಇಂದು) ಮಧ್ಯರಾತ್ರಿಯಿಂದಲೇ ಡಿಕೆಶಿ ಅವರು 7 ದಿನಗಳ ಅಮೆರಿಕ ಪ್ರವಾಸಕ್ಕೆ ತೆರಳಲಿದ್ದಾರೆ.

    ಡಿ.ಕೆ ಶಿವಕುಮಾರ್ ಅವರೊಂದಿಗೆ ಪತ್ನಿ ಉಷಾ, ಪುತ್ರಿಯರಾದ ಐಶ್ವರ್ಯ, ಆಭರಣ, ಪುತ್ರ ಆಕಾಶ್ ಅಳಿಯ ಅಮರ್ತ್ಯ ಸುಬ್ರಹ್ಮಣ್ಯ ಹೆಗ್ಡೆ ಪ್ರವಾಸಕ್ಕೆ ತೆರಳುತ್ತಿದ್ದಾರೆ. ಇದನ್ನೂ ಓದಿ: ಭಯೋತ್ಪಾದನೆಗೆ ಪ್ರಾಯೋಜಕತ್ವ ನಿಲ್ಲಿಸಿದ್ರೆ ಪಾಕ್‌ ಜೊತೆ ಮಾತುಕತೆಗೆ ಭಾರತ ಸಿದ್ಧ: ರಾಜನಾಥ್‌ ಸಿಂಗ್‌

    ಪ್ರವಾಸದ ವೇಳೆ ಅಮೇರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ (US Elections) ಸ್ಪರ್ಧಿಸಿರೋ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಹಾಗೂ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಭೇಟಿಗೆ ಡಿಸಿಎಂ ಕಚೇರಿ ಸಮಯ ಕೇಳಿದೆ. ಇದುವರೆಗೂ ಭೇಟಿ ಬಗ್ಗೆ ಖಚಿತವಾಗಿಲ್ಲ. ಖಾಸಗಿ ಕಾರ್ಯಕ್ರಮಗಳ ನಡುವೆ ಭೇಟಿಗೆ ಅವಕಾಶ ಸಿಕ್ಕರೆ ಇಬ್ಬರನ್ನೂ ಭೇಟಿ ಮಾಡುವ ಸಾಧ್ಯತೆ ಎಂದು ಉನ್ನತ ಮೂಲಗಳು ತಿಳಿಸಿವೆ. ಈ ಮಧ್ಯೆ ಡಿ.ಕೆ ಶಿವಕುಮಾರ್ ಅವರಿಗೆ ಕಮಲಾ ಹ್ಯಾರಿಸ್ (Kamala Harris) ಅವರಿಂದ ವಿಶೇಷ ಆಹ್ವಾನ ಬಂದಿದೆ ಎಂಬ ಮಾತುಗಳು ಕೇಳಿಬಂದಿವೆ.

    ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್‌ ಎಕ್ಸ್‌ ಖಾತೆ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ನನ್ನ ಮುಂಬರುವ ಭೇಟಿಗೆ ಸಂಬಂಧಿಸಿದಂತೆ, ಹಬ್ಬಿರುವ ವದಂತಿಯನ್ನು ಹೋಗಲಾಡಿಸಲು ನಾನು ಬಯಸುತ್ತೇನೆ. ನನ್ನ ಭೇಟಿಯು ಸಂಪೂರ್ಣವಾಗಿ ವೈಯಕ್ತಿಕ ಕಾರಣಗಳಿಗಾಗಿ ಆಗಿದೆ. ಇದರ ಹಿಂದೆ ಯಾವುದೇ ರಾಜಕೀಯ ಉದ್ದೇಶಕ್ಕೆ ಸಂಬಂಧಿಸಿಲ್ಲ, ಜೊತೆಗೆ ರಾಜಕೀಯ ಆಹ್ವಾನದ ಕಾರಣದಿಂದಲೂ ಅಲ್ಲ. ಯಾವುದೇ ರೀತಿಯ ಊಹಾಪೋಹಗಳಿಗೆ ಒಳಗಾಗದಂತೆ ವಿನಂತಿಸುತ್ತೇನೆ ಎಂದು ಬರೆದುಕೊಂಡಿದ್ದೇನೆ.

    ಅಲ್ಲದೇ ಸೆಪ್ಟೆಂಬರ್ 9 ಹಾಗೂ 12 ರಂದು ಸಿಎಂ ಪ್ರಾಸಿಕ್ಯೂಷನ್ ಕೇಸ್‌ನಲ್ಲಿ ಮಹತ್ವದ ಬೆಳವಣಿಗೆ ಆಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಅಮೆರಿಕಾಗೆ ತೆರಳುವ ಮುನ್ನ ಮುಖ್ಯಮಂತ್ರಿಗಳನ್ನು ಡಿಸಿಎಂ ಭೇಟಿ ಮಾಡಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಭಾರತದಿಂದ ಶೇಖ್ ಹಸೀನಾ ಗಡಿಪಾರಿಗೆ ಅಗತ್ಯ ಕ್ರಮ: ಬಾಂಗ್ಲಾ ಎಚ್ಚರಿಕೆ

    ಪ್ರಾಸಿಕ್ಯೂಷನ್ ವಿಚಾರ, ನಿಗಮ ಮಂಡಳಿಗೆ ನಿರ್ದೇಶಕರು ಹಾಗೂ ಸದಸ್ಯರ ನೇಮಕ ಪಟ್ಟಿಯನ್ನು ಅಂತಿಮ ಗೊಳಿಸುವ ಸಂಬಂಧ ಸಿಎಂ ಜೊತೆ ಡಿಸಿಎಂ ಚರ್ಚೆ ನಡೆಸಿದ್ರು ಯಾವುದೇ ಪ್ರತಿಕ್ರಿಯೆ ಕೊಡದೇ ಕೈಮುಗಿದು ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: Duleep Trophy | ಕನ್ನಡಿಗ ರಾಹುಲ್‌ ಹೋರಾಟ ವ್ಯರ್ಥ – ಭಾರತ-ಬಿ ತಂಡಕ್ಕೆ 76 ರನ್‌ಗಳ ಭರ್ಜರಿ ಜಯ  

  • ಟ್ರಂಪ್ ದೇಶಕ್ಕೆ ಡೇಂಜರಸ್, ನಾವು ಮೊದಲೇ ಸಿನೆಮಾ ನೋಡಿದ್ದೇವೆ: ಬರಾಕ್ ಒಬಾಮ

    ಟ್ರಂಪ್ ದೇಶಕ್ಕೆ ಡೇಂಜರಸ್, ನಾವು ಮೊದಲೇ ಸಿನೆಮಾ ನೋಡಿದ್ದೇವೆ: ಬರಾಕ್ ಒಬಾಮ

    ಚಿಕಾಗೋ: ಟ್ರಂಪ್‌ರವರು ( Donald Trump) ದೇಶಕ್ಕೆ ‘ಅಪಾಯ’ ಎಂದು ಡೆಮೊಕ್ರಾಟಿಕ್ (Democratic) ನ್ಯಾಶನಲ್ ಕನ್ವೆನ್ಷನ್ ಭಾಷಣದಲ್ಲಿ ಮಾಜಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ (Barack Obama) ಹೇಳಿದರು.

    ಚಿಕಾಗೋ ಸಮಾವೇಶದಲ್ಲಿ ಮಾತನಾಡಿದ ಅವರು, ಟ್ರಂಪ್ ಅಧಿಕಾರವನ್ನು ಒಂದು ಸಾಧನವಾಗಿ ನೋಡುತ್ತಾರೆ. ನಾವು ಆ ಚಲನಚಿತ್ರವನ್ನು ಮೊದಲೇ ನೋಡಿದ್ದೇವೆ. ಟ್ರಂಪ್ ಅವರು ಹ್ಯಾರಿಸ್ (Kamala Harris) ವಿರುದ್ಧ ಸೋಲುವ ಭಯದಲ್ಲಿರುತ್ತಾರೆ ಮತ್ತು ಅವರು ಪಿತೂರಿಯ ಸಿದ್ಧಾಂತವನ್ನು ಹರಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ವಿಜಯೇಂದ್ರ ಟಿಕೆಟ್ ಕೊಡಿಸುವ ಮಾತು ಕೊಟ್ಟಿದ್ದಾರೆ, ನನ್ನ ಸ್ಪರ್ಧೆ ಖಚಿತ: ಸಿ.ಪಿ ಯೋಗೇಶ್ವರ್

    ಕಮಲಾ ಹ್ಯಾರಿಸ್ ದೇಶಕ್ಕಾಗಿ ಹೋರಾಡುತ್ತಾರೆ, ಹ್ಯಾರಿಸ್ ದೇಶದ ಬಗ್ಗೆ ಚಿಂತಿಸುತ್ತಾರೆ ಎಂದರು. ಇದನ್ನೂ ಓದಿ: ದಾಖಲಾತಿ ತಿದ್ದುವ ಪರಿಸ್ಥಿತಿ ನಮಗೆ ಬಂದಿಲ್ಲ, ಸಿಎಂ ಪತ್ನಿ ಅವರ ಪತ್ರ ತಿದ್ದುಪಡಿ ಆಗಿಲ್ಲ: ಬೈರತಿ ಸುರೇಶ

    ಮಾಜಿ ಅಧ್ಯಕ್ಷರನ್ನು ಉಲ್ಲೇಖಿಸಿ, 78 ವರ್ಷದ ಬಿಲಿಯನೇರ್ ಒಂಬತ್ತು ವರ್ಷಗಳ ಹಿಂದೆ ತನ್ನ “ಗೋಲ್ಡನ್ ಎಸ್ಕಲೇಟರ್” ಕೆಳಗೆ ಸವಾರಿ ಮಾಡಿದಾಗಿನಿಂದ ತನ್ನ ಸಮಸ್ಯೆಗಳ ಬಗ್ಗೆ ಕೊರಗುವುದನ್ನು ನಿಲ್ಲಿಸಲಿಲ್ಲ. ಟ್ರಂಪ್ ತಮ್ಮನ್ನು ನೆರೆಹೊರೆಯವರೊಂದಿಗೆ ಹೋಲಿಸಿಕೊಳ್ಳುವುದನ್ನು ನಾನು ಹಿಂದೊಮ್ಮೆ ಕೇಳಿದ್ದೆ ಎಂದು ಒಬಾಮಾ ಹೇಳಿದರು. . ಇದನ್ನೂ ಓದಿ: Karnataka Rain Alert | ಮುಂದಿನ 6 ದಿನಗಳ ಕಾಲ ರಾಜ್ಯದಲ್ಲಿ ಭಾರೀ ಮಳೆಯ ಮನ್ಸೂಚನೆ

    ಟ್ರಂಪ್ ಅವರ 4 ವರ್ಷ ಅವ್ಯವಸ್ಥೆಯನ್ನು ನಾವು ನೋಡಿದ್ದೇವೆ. ಮತ್ತೆ ನಮಗೆ ನಾಲ್ಕು ವರ್ಷಗಳ ಅವ್ಯವಸ್ಥೆಯ ಅಗತ್ಯವಿಲ್ಲ ಎಂದು ಒಬಾಮಾ ನುಡಿದರು.  ಇದನ್ನೂ ಓದಿ: Karnataka Rain Alert | ಮುಂದಿನ 6 ದಿನಗಳ ಕಾಲ ರಾಜ್ಯದಲ್ಲಿ ಭಾರೀ ಮಳೆಯ ಮನ್ಸೂಚನೆ

  • ತೀವ್ರಗಾಮಿ ಎಡಪಂಥೀಯ ಮನೋಸ್ಥಿತಿಯ ಹ್ಯಾರಿಸ್‌ ಆಡಳಿತಕ್ಕೆ ಅನರ್ಹ: ಟ್ರಂಪ್‌

    ತೀವ್ರಗಾಮಿ ಎಡಪಂಥೀಯ ಮನೋಸ್ಥಿತಿಯ ಹ್ಯಾರಿಸ್‌ ಆಡಳಿತಕ್ಕೆ ಅನರ್ಹ: ಟ್ರಂಪ್‌

    ವಾಷಿಂಗ್ಟನ್‌: ಕಮಲಾ ಹ್ಯಾರಿಸ್ (Kamala Harris) ಆಡಳಿತ ನಡೆಸಲು ಅನರ್ಹರಾಗಿದ್ದು, ತೀವ್ರಗಾಮಿ ಎಡಪಂಥೀಯ ಮನೋಸ್ಥಿತಿಯವರು ಎಂದು ಅಮೆರಿಕದ ಮಾಜಿ ಅಧ್ಯಕ್ಷ ಹಾಲಿ ರಿಪಬ್ಲಿಕ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ (Donald Trump) ವಾಗ್ದಾಳಿ ನಡೆಸಿದ್ದಾರೆ.

    ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮೂರುವರೆ ವರ್ಷಗಳಿಂದ ಕಮಲಾ ಹ್ಯಾರಿಸ್‌ ಅವರು ಜೋ ಬೈಡೆನ್‌ (Joe Biden) ಮಾಡಿದ ದುರಂತದ ಚಾಲನಾ ಶಕ್ತಿಯಾಗಿದ್ದಾರೆ. ಅವರೆನಾದರೂ ಅಧಿಕಾರಕ್ಕೆ ಏರಿದರೆ ನಮ್ಮ ದೇಶವನ್ನು ದೇಶವನ್ನು ನಾಶಮಾಡುತ್ತಾರೆ. ಅಮೆರಿಕವನ್ನು (USA) ನಾಶ ಮಾಡಲು ನಾವು ಬಿಡುವುದಿಲ್ಲ ಎಂದು ತಿಳಿಸಿದರು.ಇದನ್ನೂ ಓದಿ: ಮೋದಿಯನ್ನು ಭೇಟಿಯಾದ ಹೆಚ್‌ಡಿಡಿ, ಹೆಚ್‌ಡಿಕೆ – ಮಹತ್ವದ ವಿಚಾರಗಳ ಕುರಿತು ಚರ್ಚೆ

    ಹ್ಯಾರಿಸ್‌ಗೆ ಹಾಕುವ ಒಂದು ಮತ ಇನ್ನೂ ನಾಲ್ಕು ವರ್ಷಗಳ ಅಪ್ರಾಮಾಣಿಕತೆ, ಅಸಮರ್ಥತೆ, ದೌರ್ಬಲ್ಯ ಮತ್ತು ವೈಫಲ್ಯಕ್ಕೆ ಹಾಕುವ ಮತವಾಗುತ್ತದೆ ಎಂದು ಟ್ರಂಪ್‌ ಹೇಳಿದರು. ಇದನ್ನೂ ಓದಿ: 2 ವರ್ಷಗಳ ಬಳಿಕ ಭಾರೀ ವಾಹನಗಳ ಸಂಚಾರಕ್ಕೆ ಪೀಣ್ಯ ಫ್ಲೈಓವರ್‌ ಮುಕ್ತ – ಈ ಷರತ್ತು ಅನ್ವಯ

    ಕಮಲಾ ಹ್ಯಾರಿಸ್‌ ಮುಟ್ಟಿದ್ದೆಲ್ಲವೂ ದುರಂತವಾಗುತ್ತದೆ ಎಂದು ಆರೋಪಿಸಿದ ಅವರು, ಉಕ್ರೇನ್‌ ದಾಳಿ ಮಾಡದಂತೆ ರಷ್ಯಾವನ್ನು ತಡೆಯಲು ಕಮಲಾ ಹ್ಯಾರಿಸ್ ಅವರನ್ನು ಯುರೋಪ್‌ಗೆ ಕಳುಹಿಸಿದಾಗ ಏನಾಯ್ತು? ಅವರು ತೆರಳಿದ ಐದು ದಿನಗಳ ನಂತರ ರಷ್ಯಾ ದಾಳಿ ಮಾಡುವ ಮೂಲಕ ಉತ್ತರಿಸಿತು. ಪುಟಿನ್ ಏನಿಲ್ಲವೆಂಬಂತೆ ಅವರನ್ನು ನೋಡಿ ನಕ್ಕರು. ಕಮಲಾ ಮುಟ್ಟಿದ್ದೆಲ್ಲವೂ ಸಂಪೂರ್ಣ ವಿಪತ್ತಿಗೆ ಕಾರಣವಾಗುತ್ತದೆ  ಎಂದು ವಾಗ್ದಾಳಿ ನಡೆಸಿದರು.

     

  • ಅಮೆರಿಕ ಅಧ್ಯಕ್ಷೀಯ ಚುನಾವಣಾ ಕಣದಿಂದ ಬೈಡೆನ್‌ ಹೊರಕ್ಕೆ – ಭಾರತ ಮೂಲದ ಕಮಲಾ ಹ್ಯಾರಿಸ್‌ಗೆ ಮಣೆ

    ಅಮೆರಿಕ ಅಧ್ಯಕ್ಷೀಯ ಚುನಾವಣಾ ಕಣದಿಂದ ಬೈಡೆನ್‌ ಹೊರಕ್ಕೆ – ಭಾರತ ಮೂಲದ ಕಮಲಾ ಹ್ಯಾರಿಸ್‌ಗೆ ಮಣೆ

    ವಾಷಿಂಗ್ಟನ್: ಜೋ ಬೈಡೆನ್‌ (Joe Biden) ಯುಎಸ್‌ ಅಧ್ಯಕ್ಷೀಯ ಚುನಾವಣೆಯಿಂದ ಹೊರಗುಳಿದಿದ್ದಾರೆ. ಡೆಮಾಕ್ರಟಿಕ್‌ ಪಕ್ಷದ ಹೊಸ ಅಭ್ಯರ್ಥಿಯಾಗಿ ಉಪಾಧ್ಯಕ್ಷೆಯಾಗಿರುವ ಕಮಲಾ ಹ್ಯಾರಿಸ್‌ (Kamala Harris) ಅವರನ್ನು ಅನುಮೋದಿಸಿದ್ದಾರೆ.

    ಅಧ್ಯಕ್ಷೀಯ ಚುನಾವಣೆಗೆ ಬೈಡೆನ್‌ ಮತ್ತೆ ಸ್ಪರ್ಧಿಸುವ ವಿಚಾರವಾಗಿ ಅನೇಕ ಭಿನ್ನಾಭಿಪ್ರಾಯಗಳು ವ್ಯಕ್ತವಾಗಿವೆ. ಸ್ವತಃ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ ಅವರೇ, ಬೈಡೆನ್‌ ಸ್ಪರ್ಧೆ ಮಾಡುವುದು ಬೇಡ ಎಂಬಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಚರ್ಚೆಗಳ ಮಧ್ಯೆ ವಯಸ್ಸು ಹಾಗೂ ಮಾನಸಿಕ ಸಾಮರ್ಥ್ಯದ ದೃಷ್ಟಿಯಿಂದ ಬೈಡೆನ್‌ ಚುನಾವಣಾ ಕಣದಿಂದ ಹಿಂದೆ ಸರಿದಂತೆ ಕಾಣುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಸೇನಾ ಶಿಬಿರದ ಮೇಲೆ ಉಗ್ರರ ದಾಳಿ – ಓರ್ವ ಯೋಧನಿಗೆ ಗಾಯ

    ಚುನಾವಣೆ ಹೊತ್ತಲ್ಲಿ ಈ ಅಚ್ಚರಿದಾಯಕ ಬೆಳವಣಿಗೆ ಡೆಮಾಕ್ರಟಿಕ್‌ ಪಕ್ಷದಲ್ಲಿ ಪ್ರಕ್ಷಬ್ದತೆಗೆ ಕಾರಣವಾಗಬಹುದು. ಆದರೆ ಪಕ್ಷವನ್ನು ಪುನಶ್ಚೇತನಗೊಳಿಸಲು ಇದು ಸಹಕಾರಿಯಾಗಬಹುದು. ಪ್ರಬಲ ಪೈಪೋಟಿ ನೀಡುತ್ತಿರುವ ಡೊನಾಲ್ಡ್‌ ಟ್ರಂಪ್‌ ಸೋಲಿಸಿ, ಕಮಲಾ ಹ್ಯಾರಿಸ್‌ ಅವರನ್ನು ಅಮೆರಿಕದ ಮೊದಲ ಮಹಿಳಾ ಅಧ್ಯಕ್ಷರನ್ನಾಗಿ ಮಾಡುವ ಗುರಿಯೊಂದಿಗೆ ಪಕ್ಷ ಮುನ್ನಡೆಯಲು ಬೂಸ್ಟ್‌ ಕೊಡಬಹುದು ಎನ್ನಲಾಗಿದೆ.

    ಚುನಾವಣಾ ಪ್ರಚಾರ ರ‍್ಯಾಲಿಗಳಲ್ಲಿ ಬೈಡೆನ್‌ ಅವರನ್ನೇ ಗುರಿಯಾಗಿಸಿ ಟ್ರಂಪ್‌ ಮಾತನಾಡುತ್ತಿದ್ದರು. ಬೈಡೆನ್‌ ಮತ್ತೆ ಅಧ್ಯಕ್ಷರಾಗಲು ಯೋಗ್ಯರಲ್ಲ. ಅವರು ಸೇವೆ ಮಾಡಲು ಯೋಗ್ಯರಲ್ಲ ಎಂಬ ಮಾತುಗಳನ್ನಾಡಿದ್ದರು. ಇದನ್ನೂ ಓದಿ: ಅಗ್ನಿವೀರರಿಗೆ ಪೊಲೀಸ್, ಸರ್ಕಾರಿ ಇಲಾಖೆಗಳಲ್ಲಿ ಉದ್ಯೋಗ ನೀಡಲು ಉತ್ತರಾಖಂಡ ಸರ್ಕಾರ ನಿರ್ಧಾರ: ಸಿಎಂ ಧಾಮಿ

  • ಚೀನಾದ ಟಿಕ್‌ಟಾಕ್ ಅನ್ನು 30 ದಿನದೊಳಗೆ ಡಿವೈಸ್‌ಗಳಿಂದ ಡಿಲೀಟ್ ಮಾಡಿ – ಸರ್ಕಾರಿ ನೌಕರರಿಗೆ ಯುಎಸ್ ಸೂಚನೆ

    ಚೀನಾದ ಟಿಕ್‌ಟಾಕ್ ಅನ್ನು 30 ದಿನದೊಳಗೆ ಡಿವೈಸ್‌ಗಳಿಂದ ಡಿಲೀಟ್ ಮಾಡಿ – ಸರ್ಕಾರಿ ನೌಕರರಿಗೆ ಯುಎಸ್ ಸೂಚನೆ

    ವಾಷಿಂಗ್ಟನ್: ಅಮೆರಿಕದ (USA) ಫೈಟರ್ ಜೆಟ್‌ಗಳು ತಮ್ಮ ವಾಯುನೆಲೆಯ ಮೇಲೆ ಹಾರಾಡುತ್ತಿದ್ದ ಚೀನಾ (China) ಬೇಹುಗಾರಿಕಾ ಬಲೂನ್ ಅನ್ನು ಹೊಡೆದುರುಳಿಸಿದ ನಂತರ ಎರಡು ದೈತ್ಯ ಮಿಲಿಟರಿ ರಾಷ್ಟ್ರಗಳ ನಡುವೆ ಶೀತಲ ಸಮರ ಶುರುವಾಗಿದೆ.

    ಈ ನಡುವೆ ಎಲ್ಲಾ ಸರ್ಕಾರಿ ಡಿವೈಸ್‌ಗಳಿಂದ ಟಿಕ್‌ಟಾಕ್ (TikTok) ಅನ್ನು ಡಿಲೀಟ್ ಮಾಡುವಂತೆ ಅಮೆರಿಕ ವೈಟ್‌ಹೌಸ್ 30 ದಿನಗಳ ಗಡುವು ನೀಡಿದೆ. ಅಮೆರಿಕದ ರಕ್ಷಣಾ ಇಲಾಖೆಗಳು ಈಗಾಗಲೇ ಟಿಕ್‌ಟಾಕ್ ನಿರ್ಬಂಧಿಸಿವೆ. ಇದೀಗ ರಾಷ್ಟ್ರವ್ಯಾಪಿ ನಿಷೇಧಕ್ಕೆ ಮುಂದಾಗಿದ್ದು, ಇದು ಸರ್ಕಾರಿ ದತ್ತಾಂಶಗಳನ್ನು ರಕ್ಷಿಸುವಲ್ಲಿ ಮತ್ವದ ಹೆಜ್ಜೆ ಎಂದು ಹೇಳಲಾಗಿದೆ. ಇದನ್ನೂ ಓದಿ: ವಾರದಲ್ಲಿ 4ನೇ ಕಾರ್ಯಾಚರಣೆ – ಮತ್ತೊಂದು ಹಾರುವ ವಸ್ತುವನ್ನು ಹೊಡೆದುರುಳಿಸಿದ ಅಮೆರಿಕ

    joe biden 1

    ಜೋ ಬೈಡನ್ (Joe Biden) ಹಾಗೂ ಕಮಲಾ ಹ್ಯಾರಿಸ್ (Kamala Harris) ನೇತೃತ್ವದ ಆಡಳಿತವು ಡಿಜಿಟಲ್ ಮೂಲ ಸೌಕರ್ಯಗಳ ರಕ್ಷಣೆಗೆ ಮಹತ್ವದ ಹೆಜ್ಜೆಯನ್ನಿರಿಸಿದೆ. ಜೊತೆಗೆ ಅಮೆರಿಕದ ಜನರ ಸುರಕ್ಷತೆ ಹಾಗೂ ಗೌಪ್ಯತೆ ರಕ್ಷಿಸಲು ವಿದೇಶಿ ಆಪ್‌ಗಳ ಪ್ರವೇಶ ತಡೆಯಲು ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಫೆಡರಲ್ ಏಜೆನ್ಸಿಯ (Federal Agencies) ಮುಖ್ಯ ಮಾಹಿತಿ ಭದ್ರತಾ ಅಧಿಕಾರಿ ಕ್ರಿಸ್ ಡೆರುಶಾ ಹೇಳಿದ್ದಾರೆ. ಇದನ್ನೂ ಓದಿ: ಮತ್ತೆ ವಿಶ್ವದ ನಂ.1 ಶ್ರೀಮಂತ ವ್ಯಕ್ತಿ ಸ್ಥಾನಕ್ಕೇರಿದ ಎಲೋನ್ ಮಸ್ಕ್

    ಚೀನಾ ಮೂಲದ ಟಿಕ್‌ಟಾಕ್ ಆಪ್ ರಾಷ್ಟ್ರವ್ಯಾಪಿ ನಿಷೇಧಿಸಲು ಯುಎಸ್ ವಿದೇಶಾಂಗ ವ್ಯವಹಾರಗಳ ಸಮಿತಿಯು ಅಧ್ಯಕ್ಷ ಜೋ ಬೈಡನ್ ಅವರಿಗೆ ಅಧಿಕಾರ ನೀಡಲು ಒಮ್ಮತದ ನಿರ್ಧಾರ ಕೈಗೊಂಡು ಮತ ಹಾಕಿದೆ. ಈಗಾಗಲೇ ಮಸೂದೆ ಮಂಡಿಸಿದ್ದು, ಈ ಮಸೂದೆ ಅಂಗೀಕಾರವಾದರೆ ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಹಾಕುವ ಯಾವುದೇ ಸಾಫ್ಟ್‌ವೇರ್‌ ಅಪ್ಲಿಕೇಶನ್‌ಗಳನ್ನು ನಿಷೇಧಿಸಲು ಆಡಳಿತಕ್ಕೆ ಅವಕಾಶ ನೀಡಿದಂತಾಗುತ್ತದೆ ಎಂದು ವಿದೇಶಾಂಗ ಸಮಿತಿ ಅಧ್ಯಕ್ಷ ಮೆಕ್‌ಕಾಲ್ ಹೇಳಿದ್ದಾರೆ.

    Joe Biden

    ಸುಮಾರು 10 ಕೋಟಿ ಜನರು ಬೈಟ್‌ಡ್ಯಾನ್ಸ್ ಲಿ. (Byte Dance LT.) ಒಡೆತನದ ಟಿಕ್‌ಟಾಕ್ ಬಳಕೆದಾರರಿದ್ದಾರೆ. ಜೊತೆಗೆ ಹದಿಹರೆಯದ ವಯಸ್ಸಿನ 3ನೇ ಎರಡು ಭಾಗದಷ್ಟು ಮಂದಿ ಟಿಕ್‌ಟಾಕ್ ಬಳಸುತ್ತಿದ್ದು, ಇದರಿಂದ ಡೇಟಾ ಬಳಕೆಯ ಮೇಲೆ ನಿಯಂತ್ರಣ ಪಡೆಯಬಹುದಾಗಿದೆ. ಟಿಕ್‌ಟಾಕ್ ಡೌನ್‌ಲೋಡ್ ಮಾಡಿದರೆ, ಚೀನಾವು ವೈಯಕ್ತಿಕ ಮಾಹಿತಿಗಳನ್ನು ಕದಿಯಲು ಹಿಂಬಾಗಿಲು ತೆರೆದಂತಾಗುತ್ತದೆ. ಆದ್ದರಿಂದ ರಾಷ್ಟ್ರೀಯ ಭದ್ರತಾ ಪರಿಶೀಲನೆಯ ಭಾಗವಾಗಿ ಡೇಟಾ ಗೌಪ್ಯತಾ ಯೋಜನೆಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ವೈಟ್‌ಹೌಸ್ ತಿಳಿಸಿದೆ.

  • ದೀಪಾವಳಿ ಆಚರಿಸಿದ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್

    ದೀಪಾವಳಿ ಆಚರಿಸಿದ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್

    ವಾಷಿಂಗ್ಟನ್: ಅಮೆರಿಕದ (America) ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ (Kamala Harris) ಹಾಗೂ ಅವರ ಪತಿ ಡೌಗ್ ಎಂಹೊಫ್ ಅವರು ವಾಷಿಂಗ್ಟನ್‍ನ ತಮ್ಮ ನಿವಾಸದಲ್ಲಿ ಬೆಳಕಿನ ಹಬ್ಬ ದೀಪಾವಳಿಯನ್ನು (Diwali) ಅದ್ಧೂರಿಯಾಗಿ ಆಚರಿಸಿದರು.

    ಈ ಬಗ್ಗೆ ಕಮಲಾ ಹ್ಯಾರಿಸ್‌ ಅಭಿಮಾನಿ ಟ್ವಿಟ್ಟರ್‌ನಿಂದ ವೀಡಿಯೋವೊಂದು ಹಂಚಿಕೊಳ್ಳಲಾಗಿದೆ. ಅದರಲ್ಲಿ ಕಮಲಾ ಹ್ಯಾರಿಸ್ ಹಾಗೂ ಅವರ ಪತಿ ಸೇರಿ ಪಟಾಕಿಯನ್ನು ಹೊಡೆಯುವ ಮೂಲಕ ಸಂಭ್ರಮದಿಂದ ದೀಪಾವಳಿಯನ್ನು ಆಚರಿಸುತ್ತಿದ್ದಾರೆ. ಈ ವೀಡಿಯೋದಲ್ಲಿ ಅವರ ಜೊತೆ ಇನ್ನೂ ಅನೇಕರು ದೀಪಾವಳಿಯನ್ನು ಆಚರಿಸಿ ಸಂಭ್ರಮಿಸುತ್ತಿದ್ದಾರೆ. ಇದನ್ನೂ ಓದಿ: RSSನವರು ಹೆಚ್ಚು ಮಕ್ಕಳನ್ನು ಹುಟ್ಟಿಸಲಿ ನಾವು ಹುಟ್ಟಿಸಲ್ಲ: ಅಸಾದುದ್ದೀನ್ ಓವೈಸಿ

    ಮೂಲಗಳ ಪ್ರಕಾರ ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಸೇರಿದಂತೆ ಅನೇಕ ಗಣ್ಯರು ದೀಪಾವಳಿಯನ್ನು ಆಚರಿಸಿ ಸಂಭ್ರಮಿಸಿದ್ದಾರೆ. ಅಷ್ಟೇ ಅಲ್ಲದೇ ಮುಂದಿನ ವರ್ಷದಿಂದ ನ್ಯೂಯಾರ್ಕ್ ನಗರದಲ್ಲಿ ದೀಪಾವಳಿಗೆ ಸಾರ್ವಜನಿಕ ರಜೆಯನ್ನು ಘೋಷಿಸುವುದಾಗಿ ಈಗಾಗಲೇ ತಿಳಿಸಲಾಗಿದೆ. ಇದನ್ನೂ ಓದಿ: ಮುಂದಿನ ವರ್ಷದಿಂದ ದೀಪಾವಳಿಗೆ ನ್ಯೂಯಾರ್ಕ್‌ ನಗರದ ಶಾಲೆಗಳಿಗೆ ರಜೆ

    Live Tv
    [brid partner=56869869 player=32851 video=960834 autoplay=true]

  • ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ರನ್ನು ಸಂದರ್ಶಿಸಿದ ಬಾಲಿವುಡ್ ನಟಿ ಪಿಗ್ಗಿ

    ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ರನ್ನು ಸಂದರ್ಶಿಸಿದ ಬಾಲಿವುಡ್ ನಟಿ ಪಿಗ್ಗಿ

    ಬಾಲಿವುಡ್ (Bollywood) ಸಿನಿಮಾ ರಂಗದಿಂದಲೇ ದೂರ ಉಳಿದಿರುವ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಜಾಗತಿಕ ಮಟ್ಟದ ವಾಹಿನಿಯೊಂದಕ್ಕೆ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ. ಅಮೆರಿಕನ್ (America) ಟಿವಿ ಶೋ ಕ್ವಾಂಟಿಕೋದಲ್ಲಿ ಪ್ರಸಿದ್ಧ ವ್ಯಕ್ತಿಗಳನ್ನು ಸಂದರ್ಶಿಸುತ್ತಾರೆ. ಈ ಬಾರಿ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ (Kamala Harris) ಅವರನ್ನು ಸಂದರ್ಶಿಸಿದ್ದಾರೆ (Interview). ಆ ಫೋಟೋಗಳನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಶುಕ್ರವಾರ ಈ ಕಾರ್ಯಕ್ರಮ ನಡೆದಿದ್ದು, ಯುಎಸ್.ಎ ಬಂದೂಕು ಹಕ್ಕು, ವೇತನ ಸಮಾನತೆ ಸೇರಿದಂತೆ ಹತ್ತು ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ತಮ್ಮ ಬದುಕಿನಲ್ಲೂ ನಡೆದ ಹಲವು ಘಟನೆಗಳನ್ನು ಈ ಸಂದರ್ಭದಲ್ಲಿ ಹಂಚಿಕೊಂಡಿದ್ದು, ತಾವೂ ಕೂಡ ವೇತ ತಾರತಮ್ಯವನ್ನು ಎದುರಿಸಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಎರಡು ದಶಕದ ನಂತರ ತಾವು ಸಹ ನಟನ ಸಮಾನ ವೇತನವನ್ನು ಪಡೆದಿರುವ ಬಗ್ಗೆ ಖುಷಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಖ್ಯಾತ ನಟಿ ಆಶಾ ಪರೇಖ್ ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು

    ಕಮಲಾ ಹ್ಯಾರಿಸ್ ಜೊತೆ ಗರ್ಭಪಾತ ಕಾನೂನುಗಳ ಬಗ್ಗೆಯೂ ಮಾತನಾಡಿರುವ ಪ್ರಿಯಾಕಾ, ಇತ್ತೀಚೆಗಷ್ಟೇ ವೈವಾಹಿಕ ಸ್ಥಿತಿಯನ್ನು ಲೆಕ್ಕಿಸದೇ ಗರ್ಭಪಾತವನ್ನು ಕಾನೂನು ಬದ್ಧಗೊಳಿಸಿರುವ ಭಾರತದ ಸುಪ್ರೀಂ ಕೋರ್ಟ್ ತೀರ್ಪನ್ನು ಅವರು ಸ್ವಾಗತಿಸಿ, ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಈ ಸಂದರ್ಶನದ ಫೋಟೋಗಳನ್ನು ಮತ್ತು ವೈಟ್ ಹೌಸ್ ನ ಚಿತ್ರಗಳನ್ನು ಅವರು ಅಭಿಮಾನಿಗಳ ಜೊತೆ ಶೇರ್ ಮಾಡಿದ್ದಾರೆ.

    ಸದ್ಯ ಪ್ರಿಯಾಂಕಾ ಚೋಪ್ರಾ (Priyanka Chopra) ಬಾಲಿವುಡ್ ಸಿನಿಮಾ ರಂಗದಲ್ಲಿ ಸಕ್ರೀಯರಾಗಿಲ್ಲ. ಆದರೂ, ಅವರು ಟಿವಿ ಶೋನಿಂದಾಗಿ ಜಗತ್ತಿನ ಅನೇಕ ದಿಗ್ಗಜರ ಜೊತೆ ಒಡನಾಟ ಬೆಳೆಸಿದ್ದಾರೆ. ಪತಿ ನಿಕ್ ಜೋನಾಸ್ ಮತ್ತು ಮಗುವಿನ ಜೊತೆ ಕ್ವಾಲಿಟಿ ಟೈಮ್ ಅನ್ನು ಕಳೆಯುತ್ತಿದ್ದಾರೆ. ಮತ್ತೆ ಸಿನಿಮಾ ರಂಗಕ್ಕೆ ಬರುವ ಆಸೆಯನ್ನು ಪಿಗ್ಗಿ ವ್ಯಕ್ತ ಪಡಿಸಿದ್ದು, ಫರ್ಹಾನ್ ಅಖ್ತರ್ ನಟನೆಯ ಚಿತ್ರದ ಮೂಲಕ ವಾಪಸ್ಸಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ಗೆ ಕೋವಿಡ್

    ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ಗೆ ಕೋವಿಡ್

    ವಾಷಿಂಗ್ಟನ್: ಯುಎಸ್‌ನ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ಗೆ ಯಾವುದೇ ರೋಗ ಲಕ್ಷಣಗಳಿಲ್ಲದೇ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಶ್ವೇತಭವನದ ಪ್ರಕಟಣೆ ತಿಳಿಸಿದೆ.

    pm modi kamala harris

    ಕಮಲಾ ಹ್ಯಾರಿಸ್ ಇಂದು ಕೋವಿಡ್ ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಗಾಗಿದ್ದು, ಪಾಸಿಟಿವ್ ಪತ್ತೆಯಾಗಿದೆ ಎಂದು ವರದಿಯಾಗಿದೆ. ಆದರೂ ಅವರು ತನ್ನ ಪ್ರತ್ಯೇಕ ನಿವಾಸದಲ್ಲಿ ವಾಸವಿದ್ದು, ದೂರದಿಂದಲೇ ಕೆಲಸ ಮಾಡುವುದನ್ನು ಮುಂದುವರಿಸುತ್ತೇನೆ. ಕೋವಿಡ್ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದ ನಂತರವೇ ಶ್ವೇತ ಭವನಕ್ಕೆ ಮರಳುತ್ತೇನೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಚೀನಿಯರನ್ನು ಗುರಿಯಾಗಿಸಿ ಕರಾಚಿಯಲ್ಲಿ ಬಾಂಬ್ ಸ್ಫೋಟ – ನಾಲ್ವರು ಸಾವು

    Kamala Harris 3

    ಹ್ಯಾರಿಸ್(57) ಅಧಿಕಾರ ವಹಿಸಿಕೊಳ್ಳುವ ಕೆಲ ವಾರಗಳ ಮುನ್ನ ಮೊಡೆರ್ನಾ ಲಸಿಕೆಯ ಮೊದಲ ಡೋಸ್ ಪಡೆದಿದ್ದರು. ಅಧಿಕಾರ ಪಡೆದ ನಂತರ 2ನೇ ಡೋಸ್ ಲಸಿಕೆ ಪಡೆದುಕೊಂಡಿದ್ದರು. 2021ರ ಅಕ್ಟೋಬರ್ ಅಂತ್ಯದಲ್ಲಿ ಬೂಸ್ಟರ್ ಡೋಸ್ ಮತ್ತು ಏಪ್ರಿಲ್ 1 ರಂದು ಹೆಚ್ಚುವರಿ ಬೂಸ್ಟರ್ ಅನ್ನು ಪಡೆದುಕೊಂಡಿದ್ದರು. ಇದನ್ನೂ ಓದಿ: ಬಾತ್‌ರೂಮ್‌ ಗೋಡೆಯಲ್ಲಿ ಸಿಕ್ತು 60 ವರ್ಷದ ಮೆಕ್‍ಡೊನಾಲ್ಡ್ಸ್ ಊಟ!

    ಯುಎಸ್ ಅಧ್ಯಕ್ಷ ಜೋ ಬೈಡನ್ ಇತ್ತೀಚಿನ ದಿನಗಳಲ್ಲಿ ಹ್ಯಾರಿಸ್‌ನ ಹತ್ತಿರದ ಸಂಪರ್ಕದಲ್ಲಿದ್ದರು ಎಂದು ಶ್ವೇತಭವನ ಹೇಳಿದೆ.

  • ಕಮಲಾ ಹ್ಯಾರಿಸ್ ರಕ್ಷಣಾ ಸಲಹೆಗಾರರಾಗಿ ಭಾರತೀಯ ಮೂಲದ ಶಾಂತಿ ಸೇಠಿ ನೇಮಕ

    ಕಮಲಾ ಹ್ಯಾರಿಸ್ ರಕ್ಷಣಾ ಸಲಹೆಗಾರರಾಗಿ ಭಾರತೀಯ ಮೂಲದ ಶಾಂತಿ ಸೇಠಿ ನೇಮಕ

    ವಾಷಿಂಗ್ಟನ್: ಭಾರತೀಯ ಮೂಲದ ಅಮೆರಿಕ ನೌಕಾಪಡೆಯ ಅಧಿಕಾರಿ ಶಾಂತಿ ಸೇಠಿ ಅವರನ್ನು ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ರಕ್ಷಣಾ ಸಲಹಾಗಾರ್ತಿಯನ್ನಾಗಿ ನೇಮಕ ಮಾಡಲಾಗಿದೆ.

    ಶಾಂತಿ ಅವರು ಭಾರತ ಮೂಲದ ಮೊದಲ ಮಹಿಳಾ ಅಮೆರಿಕ ಕಮಾಂಡರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಶಾಂತಿ 2010ರಿಂದ 2012ರವರೆಗೆ ಕ್ಷಿಪಣಿ ವಿದ್ವಂಸಕ ಮಾರ್ಗದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಭಾರತೀಯ ಮೂಲದ ಅಮೆರಿಕ ನೌಕೆಯ ಮೊದಲ ಮಹಿಳಾ ಕಮಾಂಡರ್ ಕೂಡ ಆಗಿದ್ದರು.

    1993ರಲ್ಲಿ ನೌಕಾಪಡೆಗೆ ಸೇರಿದಾಗ, ಯುದ್ಧದ ಹೊರಗಿಡುವ ಕಾನೂನು ಇನ್ನೂ ಜಾರಿಯಲ್ಲಿತ್ತು. ನಂತರದಲ್ಲಿ ಆ ಕಾಯಿದೆಯನ್ನು ತೆಗೆದುಹಾಕಲಾಯಿತು. 1960ರಲ್ಲಿ ಶಾಂತಿ ಅವರ ತಂದೆ ಭಾರತದಿಂದ ಅಮೆರಿಕಕ್ಕೆ ವಲಸೆ ಹೋಗಿ ಅಲ್ಲೇ ನೆಲೆಸಿದರು. ಇದನ್ನೂ ಓದಿ:  ಚೀನಾ ಮೀರಿಸಿದ ಭಾರತ – ವಿಶ್ವದಲ್ಲೇ ಅತೀ ವೇಗದ ಅಭಿವೃದ್ಧಿ

    ಕಮಲಾ ಹ್ಯಾರಿಸ್ ಅವರು ಯುನೈಟೆಡ್ ಸ್ಟೇಟ್ಸ್‌ನ ಉಪಾಧ್ಯಕ್ಷರಾಗಿ ಆಯ್ಕೆಯಾದ ಮೊದಲ ಭಾರತೀಯ ಮೂಲದ ವ್ಯಕ್ತಿಯಾಗಿದ್ದಾರೆ. ಇದನ್ನೂ ಓದಿ: ಕಾರು ಪಲ್ಟಿ – ಪ್ರಾಣಾಪಾಯದಿಂದ ಟಿಬಿ ಜಯಚಂದ್ರ ಪಾರು