Tag: Kamala

  • ಆ್ಯಪಲ್ ಸಹ ಸಂಸ್ಥಾಪಕ ಸ್ವೀವ್‌ ಜಾಬ್ಸ್‌ ಪತ್ನಿ ಲಾರೆನ್ ಇನ್ಮುಂದೆ ʻಕಮಲಾʼ – ಹಿಂದೂ ಹೆಸರು ನಾಮಕರಣ

    ಆ್ಯಪಲ್ ಸಹ ಸಂಸ್ಥಾಪಕ ಸ್ವೀವ್‌ ಜಾಬ್ಸ್‌ ಪತ್ನಿ ಲಾರೆನ್ ಇನ್ಮುಂದೆ ʻಕಮಲಾʼ – ಹಿಂದೂ ಹೆಸರು ನಾಮಕರಣ

    ಪ್ರಯಾಗ್‌ರಾಜ್‌: ಇಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿದೆ. ಕುಂಭಮೇಳಕ್ಕೆ ಆಗಮಿಸಿರುವ ಆ್ಯಪಲ್ ಸಹ ಸಂಸ್ಥಾಪಕ (Steve Jobs) ಸ್ಟೀವ್ ಜಾಬ್ಸ್ ಅವರ ಪತ್ನಿ ಲಾರೆನ್ ಪೊವೆಲ್ ಜಾಬ್ಸ್ (Laurene Powell Jobs) ಅವರು ತನ್ನ ಗುರು ನಿರಂಜನಿ ಅಖಾರದ ಕೈಲಾಶಾನಂದ ಗಿರಿ ಜಿ ಮಹಾರಾಜ್ ಅವರಿಂದ ಗೋತ್ರ ಸ್ವೀಕರಿಸಿದ್ದಾರೆ. ಈ ಮೂಲಕ ಹೊಸ ಗುರುತು ಪಡೆದುಕೊಂಡಿದ್ದಾರೆ.

    ಪ್ರಯಾಗ್‌ರಾಜ್‌ಗೆ ಕಾಲಿಟ್ಟ ಬಳಿಕ ಮೊದಲು ತಮ್ಮ ಗುರುಗಳಾದ ನಿರಂಜನಿ ಅಖಾಡ ಕೈಲಾಶಾನಂದ ಗಿರಿ ಜಿ ಮಹಾರಾಜ್ (Guru Niranjani Akhada Peethadheeshwar Swami Kailashanand Giri) ಅವರನ್ನ ಭೇಟಿಯಾಗಿದ್ದಾರೆ. ಇದನ್ನೂ ಓದಿ: ಮಹಾ ಕುಂಭಮೇಳಕ್ಕೆ ವಿದ್ಯುಕ್ತ ಚಾಲನೆ – ಲಕ್ಷಾಂತರ ನಾಗ ಸಾಧುಗಳಿಂದ ಶಾಹಿ ಸ್ನಾನ

    ಈ ಕುರಿತು ಪ್ರತಿಕ್ರಿಯಿಸಿದ ನಿರಂಜನಿ ಅಖಾರದ ಕೈಲಾಶಾನಂದ ಗಿರಿ ಮಹಾರಾಜ್ ಅವರು, ಲಾರೆನ್ ಪೊವೆಲ್ ಅವರಿಗೆ ಗೋತ್ರದ ಪ್ರಕಾರ ಕಮಲಾ ಎಂಬ ಹೆಸರು ಕೊಟ್ಟಿದ್ದೇನೆ. ಲಾರೆನ್ ಅವರು ನಮಗೆ ಮಗಳಿದ್ದಂತೆ. ಆಕೆ ಭಾರತಕ್ಕೆ ಎರಡನೇ ಬಾರಿ ಬರುತ್ತಿದ್ದಾರೆ. ಕುಂಭಮೇಳಕ್ಕೆ (Mahakumbh 2025) ಎಲ್ಲರಿಗೂ ಸ್ವಾಗತ ಎಂದು ಹೇಳಿದ್ದಾರೆ.

    ಕಮಲಾ ಸನಾತನ ಧರ್ಮದಲ್ಲಿ ಅಪಾರ ಆಸಕ್ತಿ ಹೊಂದಿದ್ದಾರೆ. ಜನವರಿ 29ರ ವರೆಗೆ ಹಿಂದೂ ಆಚರಣೆಗಳು ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಕುಂಭಮೇಳಕ್ಕೆ ಬರುವ ಮುನ್ನ ಪೊವೆಲ್‌ ವಾರಾಣಸಿಯ ಕಾಶಿ ವಿಶ್ವನಾಥ ದೇವಾಲಯಕ್ಕೆ ಭೇಟಿ ನೀಡಿದ್ದರು. ಇದನ್ನೂ ಓದಿ: ಮಹಾ ಕುಂಭಮೇಳ ವೈಭವ – ಇಂಚಿಂಚಿಗೂ ಹದ್ದಿನ ಕಣ್ಣು, 2,700 ಎಐ ಕ್ಯಾಮೆರಾ ಕಣ್ಗಾವಲು

    ಭಾರತೀಯ ಉಡುಪನ್ನು ಧರಿಸಿ ಬಂದಿದ್ದ ಲಾರೆನ್, ವಿಶ್ವನಾಥ ದೇವಾಲಯದಲ್ಲಿ ಗರ್ಭಗುಡಿಯ ಹೊರಗಿನಿಂದ ಪ್ರಾರ್ಥನೆ ಸಲ್ಲಿಸಿದರು. ಭಾರತೀಯ ಸಂಪ್ರದಾಯದಂತೆ, ಕಾಶಿ ವಿಶ್ವನಾಥದಲ್ಲಿ, ಬೇರೆ ಯಾವುದೇ ಸಮುದಾಯದವರು ಶಿವಲಿಂಗವನ್ನು ಮುಟ್ಟುವಂತಿಲ್ಲ. ಅದಕ್ಕಾಗಿಯೇ ಶಿವಲಿಂಗವನ್ನು ಹೊರಗಿನಿಂದ ನೋಡುವ ವ್ಯವಸ್ಥೆ ಮಾಡಲಾಗಿತ್ತು.

  • SSLC ಪರೀಕ್ಷೆ ಬರೆದ ಭಾರತದ ಕೊನೆಯ ಗ್ರಾಮದ ಮೊದಲ ವಿದ್ಯಾರ್ಥಿನಿ..!

    SSLC ಪರೀಕ್ಷೆ ಬರೆದ ಭಾರತದ ಕೊನೆಯ ಗ್ರಾಮದ ಮೊದಲ ವಿದ್ಯಾರ್ಥಿನಿ..!

    ಜೈಪುರ: ಅಂತಾರಾಷ್ಟ್ರೀಯ ಗಡಿಯಿಂದ ಸುಮಾರು 10 ಕಿ.ಮೀ. ದೂರದಲ್ಲಿರುವ ಬಾರ್ಮೇರ್ ಸಮೀಪದ ಭಿಲಾನ್ ಕಿ ಧಾನಿ ಎಂಬ ಕುಗ್ರಾಮವನ್ನು ದೇಶದ ಕೊನೆಯ ಗ್ರಾಮ ಎಂದು ಗುರುತಿಸಲಾಗಿದೆ. ಇಲ್ಲಿನ ಬಾಲಕಿಯೊಬ್ಬಳು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆದ ಮೊದಲ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆಗೆ ಪಡೆದು, ಜನರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.

    ಕಮಲ (16) ಭಾರತದ ಕೊನೆಯ ಗ್ರಾಮದಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಆಗಮಿಸಿದ ಮೊದಲ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆ ಪಡೆದಿದ್ದಾಳೆ. ಈ ಗ್ರಾಮದಲ್ಲಿ ಸಾಕ್ಷರತೆಯ ಪ್ರಮಾಣ ಶೇ.20ಕ್ಕಿಂತ ಕಡಿಮೆ ಇದೆ. ಅಲ್ಲದೆ ಗಡಿಭಾಗದಲ್ಲಿರುವ ಕಾರಣಕ್ಕೆ ಈ ಗ್ರಾಮದಲ್ಲಿ ಪೋಷಕರು ತಮ್ಮ ಹೆಣ್ಣು ಮಕ್ಕಳನ್ನು ಓದಲು ಶಾಲೆಗೆ ಕಳುಹಿಸುವುದಿಲ್ಲ. ಆದರೆ ಕಮಲ ಈ ನಿರ್ಬಂಧಗಳನ್ನು ಮೀರಿ ಶಾಲೆಗೆ ಹೋಗಿ 10ನೇ ತರಗತಿ ಪರೀಕ್ಷೆ ಬರೆದ ಮೊದಲ ವಿದ್ಯಾರ್ಥಿನಿ ಎಂಬ ಕೀರ್ತಿ ಪಡೆದಿದ್ದಾಳೆ.

    ಮರುಭೂಮಿಯ ಮಧ್ಯದಲ್ಲಿರುವ ಈ ಗ್ರಾಮದಲ್ಲಿ ಪ್ರಾಥಮಿಕ ಶಾಲೆಯಿದೆ. ಆದರೆ ಈಗ ಅಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ. ಹೆಚ್ಚಿನ ಶಿಕ್ಷಣಕ್ಕೆ ಇಲ್ಲಿನ ಮಕ್ಕಳು 6-7 ಕಿ.ಮೀ. ದೂರದಲ್ಲಿರುವ ಗದ್ರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಪ್ರೌಢಶಾಲೆಗೆ ಹೋಗಬೇಕು. ಆದರಿಂದ ಇಷ್ಟು ದೂರ ಹೆಣ್ಣು ಮಕ್ಕಳು ಹೋಗುವುದು ಸುರಕ್ಷಿತವಲ್ಲ. ಅದರಲ್ಲೂ ಈ ಗ್ರಾಮವಿರುವುದು ಗಡಿ ಪ್ರದೇಶದಲ್ಲಿ, ಹೀಗಾಗಿ ಹೆಣ್ಣುಮಕ್ಕಳಿಗೆ ಭದ್ರತೆ ಇರುವುದಿಲ್ಲ ಎಂಬ ಪೋಷಕರ ನಿರ್ಬಂಧದಿಂದ ದಶಕಗಳಿಂದ ಶೇ.90ರಷ್ಟು ಹೆಣ್ಣುಮಕ್ಕಳು ಶಾಲೆಯಿಂದ ದೂರವಿದ್ದಾರೆ.

    ಈ ಗ್ರಾಮದಲ್ಲಿ ಒಟ್ಟು 123 ಮನೆಗಳಿವೆ. ಭದ್ರತೆ ಭೀತಿಯಿಂದ ತಮ್ಮ ಹೆಣ್ಣು ಮಕ್ಕಳನ್ನು ದೂರದ ಶಾಲೆಗೆ ಕಳುಹಿಸದೆ ವಿದ್ಯಾಭ್ಯಾಸಕ್ಕೆ ಹೆತ್ತವರು ನಿಷೇಧ ಹೇರಿದ್ದಾರೆ. ಆದರೆ ಕಮಲಾಳ ಪೋಷಕರು ಮಾತ್ರ ಇದನ್ನೆಲ್ಲ ಮೀರಿ ತಮ್ಮ ಮಗಳನ್ನು ಪ್ರೌಢ ಶಾಲೆಗೆ ಧೈರ್ಯದಿಂದ ಕಳುಹಿಸಿದ್ದಾರೆ. ಆದರಿಂದ ಗ್ರಾಮದಿಂದ ರಾಜ್ಯ ಬೋರ್ಡ್ ಪರೀಕ್ಷೆ ಎದುರಿಸಿದ ಮೊದಲ ವಿದ್ಯಾರ್ಥಿನಿ ಎಂಬ ಮೆಚ್ಚುಗೆಗೆ ಕಮಲ ಪಾತ್ರಳಾಗಿದ್ದಾಳೆ.

    9ನೇ ತರಗತಿಯಲ್ಲಿದ್ದಾಗ ರಾಜಶ್ರೀ ಯೋಜನೆಯಿಂದ ಉಚಿತ ಸೈಕಲ್ ಪಡೆದಿದ್ದೆ. ಆಗಿನಿಂದಲೂ ಸೈಕಲ್‍ನಲ್ಲೇ ಶಾಲೆಗೆ ಹೋಗಿ ಬರುತ್ತಿರುವೆ. ಅಲ್ಲದೆ ಕಳೆದ 6 ವರ್ಷದಿಂದ 7-8 ವಿದ್ಯಾರ್ಥಿನಿಯರು ಮಾತ್ರ ಶಾಲೆಗೆ ಆಗಮಿಸುತ್ತಿದ್ದಾರೆ, ಉಳಿದ ಹೆಣ್ಣುಮಕ್ಕಳಲು ವಿದ್ಯೆಯಿಂದ ದೂರ ಉಳಿದಿದ್ದಾರೆ. ಈ ಗ್ರಾಮದಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆದ ಮೊದಲ ವಿದ್ಯಾರ್ಥಿನಿ ಆಗಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ. ಆದರೆ ಈ ಸಾಧನೆ ಮಾಡಿದ ಕೊನೆಯ ವಿದ್ಯಾರ್ಥಿನಿ ನಾನಾಗಬಾರದು. ನಮ್ಮ ಗ್ರಾಮದ ಎಲ್ಲಾ ಹೆಣ್ಣುಮಕ್ಕಳು ಉನ್ನತ ವಿದ್ಯಾಭ್ಯಾಸ ಪಡೆಯಬೇಕು ಎಂದು ಕಮಲ ಆಶಿಸಿದ್ದಾಳೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರೆಡ್ಡಿ ಗ್ಯಾಂಗ್ ಮಟ್ಟ ಹಾಕಲು ಕ್ರೈಂ ಬ್ರ್ಯಾಂಚ್ ಪೊಲೀಸರಿಗೆ ಸಿಎಂ ಸೂಚನೆ

    ರೆಡ್ಡಿ ಗ್ಯಾಂಗ್ ಮಟ್ಟ ಹಾಕಲು ಕ್ರೈಂ ಬ್ರ್ಯಾಂಚ್ ಪೊಲೀಸರಿಗೆ ಸಿಎಂ ಸೂಚನೆ

    ಬೆಂಗಳೂರು: ಉಪ ಚುನಾವಣಾ ಫಲಿತಾಂಶದ ಬೆನ್ನಲ್ಲೇ ಸಿಎಂ ಕುಮಾರಸ್ವಾಮಿ ಅವರು ಹೊಸ ಬಾಂಬ್ ಸಿಡಿಸಿದ್ದು, ಇದೀಗ ಮಾಜಿ ಸಚಿವ ಜನಾರ್ದನ ರೆಡ್ಡಿ ಗ್ಯಾಂಗ್ ಮಟ್ಟ ಹಾಕಲು ಬೆಂಗಳೂರು ಕ್ರೈಂ ಬ್ರ್ಯಾಂಚ್ ಪೊಲೀಸರಿಗೆ ಸಿಎಂ ಸೂಚನೆ ನೀಡಿದ್ದಾರೆ.

    ಸಮ್ಮಿಶ್ರ ಸರ್ಕಾರ ಬೀಳಿಸುವ ಸುಪಾರಿ ಕೊಟ್ಟಿದ್ದೇ ರೆಡ್ಡಿಗೆ ಎಂದು ಹೇಳಲಾಗುತ್ತಿದೆ. ಕುಮಾರಸ್ವಾಮಿ ಸರ್ಕಾರವನ್ನು ಬೀಳಿಸುತ್ತೇನೆ. ಆಪರೇಷನ್ ಕಮಲಕ್ಕೆ ಎಷ್ಟು ಕೋಟಿ ರೂ, ಸುರಿಯಲೂ ನಾನು ರೆಡಿ ಅಂತ ಬಿಜೆಪಿ ನಾಯಕರ ಮುಂದೆ ರೆಡ್ಡಿ ಹೇಳಿದ್ದರು. ರೆಡ್ಡಿ ಮಾತು ನಂಬಿ ಆಪರೇಷನ್ ಕಮಲಕ್ಕೆ ಬಿಜೆಪಿ ಕೈ ಹಾಕಿತ್ತು ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದನ್ನೂ ಓದಿ: ಜನಾರ್ದನ ರೆಡ್ಡಿಯ ಮೂವರು ಆಪ್ತರು ಸಿಸಿಬಿ ವಶಕ್ಕೆ

    ಜೆಡಿಎಸ್ ಶಾಸಕರನ್ನು ಕೋಟಿ ಕೋಟಿ ರೂಪಾಯಿ ಖರೀದಿಸಲು ರೆಡ್ಡಿ ಹುನ್ನಾರ ಹೂಡಿದ್ದರು. ಹೀಗಾಗಿ ಜೆಡಿಎಸ್ ನಿಂದ ಜಂಪ್ ಮಾಡುವ ಶಾಸಕರಿಗೆ ಬರೋಬ್ಬರಿ 25-30 ಕೋಟಿ ಆಫರ್ ನೀಡಲಾಗಿತ್ತು. ಈ ಹಣವನ್ನೆಲ್ಲಾ ಹೊಂದಿಸಲು ರೆಡ್ಡಿ ಒಪ್ಪಿಕೊಂಡಿದ್ದರು. ಈ ಬಗ್ಗೆ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಅವರು ಸುಳಿವು ಪಡೆದಿದ್ದರು. ಇದನ್ನೂ ಓದಿ: ರಾತ್ರೋರಾತ್ರಿ ಬಿಜೆಪಿ ನಾಯಕರಿಂದ ಕೋಟಿ ರೂ. ಆಮಿಷ – ಫಲಿತಾಂಶದ ಬೆನ್ನಲ್ಲೇ ಸಿಎಂ ಹೊಸ ಬಾಂಬ್

    ಆಪರೇಷನ್ ಕಮಲ ಮೂಲಕ ರೆಡ್ಡಿ ಕುತಂತ್ರದ ಹಿನ್ನೆಲೆಯಲ್ಲಿ ಇದೀಗ ಕಾರ್ಯಾಚರಣೆ ನಡೆಸಲಾಗುತ್ತಿದೆ. ಒಟ್ಟಿನಲ್ಲಿ ರೆಡ್ಡಿ ಗ್ಯಾಂಗ್ ಮಟ್ಟ ಹಾಕಲು ಬೆಂಗಳೂರು ಕ್ರೈಂ ಬ್ರ್ಯಾಂಚ್ ಪೊಲೀಸರಿಗೆ ಸಿಎಂ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಮಲದ ಗುರುತಿಗೆ ಮತ ಹಾಕುವಂತೆ ಮತಯಾಚನೆ ಮಾಡ್ತೀವಿ: ರಾಮನಗರ ಬಿಜೆಪಿ ಮುಖಂಡರು

    ಕಮಲದ ಗುರುತಿಗೆ ಮತ ಹಾಕುವಂತೆ ಮತಯಾಚನೆ ಮಾಡ್ತೀವಿ: ರಾಮನಗರ ಬಿಜೆಪಿ ಮುಖಂಡರು

    ರಾಮನಗರ: ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಅಭ್ಯರ್ಥಿ ಚಂದ್ರಶೇಖರ್ ಕೈ ಕೊಟ್ಟ ಹಿನ್ನೆಲೆಯಲ್ಲಿ ಕಮಲದ ಗುರುತಿಗೆ ಮತ ನೀಡುವಂತೆ ಮಾತಯಾಚನೆ ಮಾಡಲು ಮುಖಂಡರು ಹಾಗೂ ಕಾರ್ಯಕರ್ತರು ನಿರ್ಧರಿಸಿದ್ದಾರೆ.

    ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ರಾತ್ರೋ ರಾತ್ರಿ ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದ ಅಭ್ಯರ್ಥಿಗೆ ಬೆಂಬಲ ಸೂಚಿಸಿ, ಬಿಜೆಪಿ ಕೈಕೊಟ್ಟ ಹಿನ್ನೆಲೆಯಲ್ಲಿ ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರ ತುರ್ತು ಸಭೆಯನ್ನು ನಗರದ ಬಿಜೆಪಿ ಕಚೇರಿಯಲ್ಲಿ ಕರೆಯಲಾಗಿತ್ತು. ತುರ್ತು ಸಭೆಗೆ ರಾಮನಗರ ಜಿಲ್ಲಾಧ್ಯಕ್ಷ ಎಂ. ರುದ್ರೇಶ್, ರಾಜ್ಯ ಕಾರ್ಯದರ್ಶಿ ಮುನಿರಾಜುಗೌಡ ಹಾಗೂ ಮಾಜಿ ಸಚಿವ ಸೋಮಶೇಖರ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಿತು.

    ಸಭೆಯ ನಂತರ ಮಾತನಾಡಿದ ಮುನಿರಾಜು ಗೌಡ, ರಾಮನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಹೊರ ಹೋಗಿರಬಹುದು. ಆದರೆ ಮತದಾರರಲ್ಲಿ ಕಮಲದ ಗುರುತಿಗೆ ಮತ ನೀಡಿ ಅಂತಾ ಮತದಾರರಲ್ಲಿ ಮನವಿ ಮಾಡುತ್ತೇವೆ. ಬಹಿರಂಗ ಪ್ರಚಾರ ಮುಗಿದ ಹಿನ್ನೆಲೆಯಲ್ಲಿ ಮನೆ, ಮನೆಗೆ ತೆರಳಿ ಬಿಜೆಪಿಗೆ ಮತ ಹಾಕಿ ಎಂದು ಮತಯಾಚನೆ ನಡೆಸುತ್ತೇವೆ. ನಮಗೋಸ್ಕರವಲ್ಲದಿದ್ದರೂ ಅಭ್ಯರ್ಥಿ ವಿರುದ್ಧ ಹೋರಾಟಕ್ಕಾದರೂ ಈ ರೀತಿ ನಾವು ಮಾಡುತ್ತೇವೆ. ಕಲ್ಲುಬಂಡೆಗಳಂತಿರುವ ಡಿಕೆ ಸಹೋದರರು, ಮಣ್ಣಿನ ಮಕ್ಕಳ ಸಹವಾಸ ಮಾಡಿದ್ದಾರೆ. ಅವರಿಗೆ ಗೊತ್ತಿಲ್ಲ ಕಲ್ಲಿನ ಜೊತೆ ಮಣ್ಣಿನ ಅಡಿ ಅವರು ಸಿಲುಕಿಕೊಳ್ಳುತ್ತಾರೆ ಎಂದರು.

    ಬಿಜೆಪಿ ಮಾಜಿ ಶಾಸಕ ಸಿ.ಅಶ್ವಥ್ ನಾರಾಯಣ್ ಪ್ರತಿಕ್ರಿಯಿಸಿ, ಚಂದ್ರಶೇಖರ್ ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ಸೂಚಿಸುವ ಮೂಲಕ, ಬಿಜೆಪಿ ಹಾಗೂ ಪಕ್ಷಕ್ಕೆ ಮತ ಹಾಕಲು ಸಿದ್ಧರಿದ್ದ ಮತದಾರರಿಗೆ ಮೋಸ ಮಾಡಿದ್ದಾರೆ. ಈಗ ಅವರು ಬಿಜೆಪಿಗೆ ಕೈ ಕೊಟ್ಟಿರಬಹುದು, ಆದರೆ ಮುಂಬರುವ ದಿನಗಳಲ್ಲಿ ಅವರು ರಾಜಕೀಯವಾಗಿ ಸಾಕಷ್ಟು ಅನುಭವಿಸುತ್ತಾರೆ. ನಂಬಿಕೆ ದ್ರೋಹಿಗಳಿಗೆ ಹಾಗೂ ಕಾಂಗ್ರೆಸ್ ಸಂಸ್ಕೃತಿ ಬೆಳೆಸಿಕೊಂಡವರಿಗೆ ಸರಿಯಾದ ಪಾಠವಾಗಲಿದೆ ಎಂದು ತಿಳಿಸಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv