Tag: kamal panth

  • ಶಿಕ್ಷಣ ಸಂಸ್ಥೆಗಳ 200 ಮೀಟರ್ ವ್ಯಾಪ್ತಿಯಲ್ಲಿ ಪ್ರತಿಭಟನೆಗೆ ನಿಷೇಧ: ಕಮಲ್ ಪಂತ್

    ಶಿಕ್ಷಣ ಸಂಸ್ಥೆಗಳ 200 ಮೀಟರ್ ವ್ಯಾಪ್ತಿಯಲ್ಲಿ ಪ್ರತಿಭಟನೆಗೆ ನಿಷೇಧ: ಕಮಲ್ ಪಂತ್

    ಬೆಂಗಳೂರು: ಶಾಲಾ ಕಾಲೇಜ್, ಶಿಕ್ಷಣ ಸಂಸ್ಥೆಗಳ ಗೇಟ್‍ನಿಂದ 200 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಸಭೆ ಸಮಾರಂಭ, ಪ್ರತಿಭಟನೆ ಮಾಡದಂತೆ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿನೇ ದಿನೇ ಕಾಲೇಜುಗಳಲ್ಲಿ ಹಿಜಬ್ ಹಾಗೂ ಕೇಸರಿ ಶಾಲು ಗಲಾಟೆ ಹೆಚ್ಚುತ್ತಿರುವುದರ ಹಿನ್ನೆಲೆಯಲ್ಲಿ ಎರಡು ವಾರಗಳ ಕಾಲ ಈ ಮಹತ್ವದ ಆದೇಶ ಹೊರಡಿಸಲಾಗಿದೆ. ಬೆಂಗಳೂರು ನಗರದ ಶಾಲೆಗಳು, ಪಿಯು ಕಾಲೇಜುಗಳು, ಪದವಿ ಕಾಲೇಜುಗಳಲ್ಲಿ ಈ ನಿಯಮ ಅನ್ವಯವಾಗುತ್ತದೆ ಎಂದು ತಿಳಿಸಿದರು.

    ಶಿಕ್ಷಣ ಸಂಸ್ಥೆಗಳ ಗೇಟ್‍ನಿಂದ 200 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಸಭೆಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ. ಅಷ್ಟೇ ಅಲ್ಲದೇ ಆಂದೋಲನಗಳು ಅಥವಾ ಪ್ರತಿಭಟನೆಗಳನ್ನು ತಕ್ಷಣವೇ ಜಾರಿಗೆ ಬರುವಂತೆ ಎರಡು ವಾರಗಳವರೆಗೆ ನಿಷೇಧಿಸಲಾಗಿದೆ ಎಂದು ಸೂಚನೆ ನೀಡಿದರು.  ಇದನ್ನೂ ಓದಿ: ನಾನು ಭಯ ಯಾಕೆ ಪಡಬೇಕು, ಧರ್ಮ ಪಾಲನೆ ಮಾಡಿದ್ದೇನೆ: ಮಂಡ್ಯ ವಿದ್ಯಾರ್ಥಿನಿ

  • ಅನಾವಶ್ಯಕ ಓಡಾಟ ನಡೆಸಿದರೆ ಅರೆಸ್ಟ್: ಕಮಲ್ ಪಂತ್ ಎಚ್ಚರಿಕೆ

    ಅನಾವಶ್ಯಕ ಓಡಾಟ ನಡೆಸಿದರೆ ಅರೆಸ್ಟ್: ಕಮಲ್ ಪಂತ್ ಎಚ್ಚರಿಕೆ

    ಬೆಂಗಳೂರು: ರಾಜ್ಯದಲ್ಲಿ ಜನತಾ ಲೌಕ್‍ಡೌನ್ ಮಧ್ಯೆ ಜನ ರಸ್ತೆಗಿಳಿದಿದ್ದಾರೆ. ಸೋಮವಾರದಿಂದ ಜನ ರಸ್ತೆಗಿಳಿದರೆ ಅಂತವರನ್ನು ಆರೆಸ್ಟ್ ಮಾಡಿ ಜೈಲಿಗೆ ಹಾಕುತ್ತೇವೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಕಮಲ್ ಪಂತ್ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

    ಬೆಂಗಳೂರಿನಲ್ಲಿ ಲಾಕ್‍ಡೌನ್ ಮಧ್ಯೆ ಜನರ ಓಡಾಟದ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಕಮಲ್ ಪಂತ್ ಅವರು, ಇವತ್ತು ಕೂಡ ಬೇಕಾಬಿಟ್ಟಿಯಾಗಿ ರಸ್ತೆಗಿಳಿಯುತ್ತಿರುವ ವಾಹನಗಳನ್ನು ನಾವು ಸೀಜ್ ಮಾಡುತ್ತಿದ್ದೇವೆ. ಪ್ರತಿ ಜಂಕ್ಷನ್‍ಗಳಲ್ಲಿ ಪೊಲೀಸರು ವಾಹನಗಳನ್ನು ತಪಾಸಣೆ ಮಾಡಿ ಬಿಡುತ್ತಿದ್ದಾರೆ. ಆದರೆ ಸೋಮವಾರದಿಂದ ಈ ರೀತಿ ಜನ ರಸ್ತೆಗಿಳಿದರೆ ಅಂತವರನ್ನು ಬಂಧಿಸುತ್ತೇವೆ. ಪ್ರತಿ ಜಂಕ್ಷನ್‍ಗಳಲ್ಲಿ ಕೆಎಸ್‍ಆರ್‍ಪಿ ಅಥವಾ ಬಿಬಿಎಂಪಿ ವಾಹನವನ್ನು ನಿಲ್ಲಿಸಿ ಬಿಗಿ ಕ್ರಮಕ್ಕೆ ಮುಂದಾಗುತ್ತೇವೆ ಎಂದು ತಿಳಿಸಿದರು.

    ಎಲ್ಲಾ ಪ್ರಮುಖ ರಸ್ತೆಗಳಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದೇವೆ. ಬೇಕಾಬಿಟ್ಟಿ ರಸ್ತೆಗೆ ಬಂದಂತಹ ಕಾರು, ಬೈಕ್‍ಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಸೋಮವಾರದಿಂದ ರಸ್ತೆಗಳಲ್ಲಿ ಯಾವ ಕಾರಣಕ್ಕೂ ಜನ ಕಾಣಬಾರದು. ರಸ್ತೆಗಳಲ್ಲಿ ಜನ ಕಂಡುಬಂದರೆ ಅಂತವರ ವಾಹನ ಹಾಗೂ ಅವರನ್ನು ಅರೆಸ್ಟ್ ಮಾಡಿ ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚನೆ ನೀಡಿದ್ದೇನೆ ಎಂದು ಮಾಹಿತಿ ನೀಡಿದರು.

  • ಬೆಡ್ ಬ್ಲಾಕಿಂಗ್ ದಂಧೆ ಪ್ರಕರಣ ಸಿಸಿಬಿಗೆ ವರ್ಗಾವಣೆ- ಇಬ್ಬರ ಬಂಧನ

    ಬೆಡ್ ಬ್ಲಾಕಿಂಗ್ ದಂಧೆ ಪ್ರಕರಣ ಸಿಸಿಬಿಗೆ ವರ್ಗಾವಣೆ- ಇಬ್ಬರ ಬಂಧನ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇಂದು ಬೆಳಕಿಗೆ ಬಂದ ಬೆಡ್ ಬ್ಲಾಕಿಂಗ್ ದಂಧೆ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಕಮಲ್ ಪಂಥ್ ತಿಳಿಸಿದ್ದಾರೆ.

    ಈ ಸಂಬಂಧ ಟ್ವೀಟ್ ಮಾಡಿದ ಅವರು, ಬಿಬಿಎಂಪಿ ಪೋರ್ಟಲ್ ಮೂಲಕ ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ಬೆಡ್ ಕಾಯ್ದಿರಿಸುವ ವಿಧಾನದಲ್ಲಿ ಅಕ್ರಮ ಎಸಗಿದವರ ವಿರುದ್ಧ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದ್ದು, ಅಕ್ರಮದಲ್ಲಿ ಭಾಗಿಯಾದವರ ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಲಾಗಿದೆ ಎಂದು ತಿಳಿಸಿದ್ದಾರೆ.

    ಏನಿದು ಪ್ರಕರಣ..?
    ಹೋಂ ಐಸೋಲೇಟ್ ಆಗುವ ವ್ಯಕ್ತಿಗಳಿಗೆ ತಿಳಿಯದಂತೆ ಅವರ ಹೆಸರಿನಲ್ಲಿ ಬೆಡ್ ಮೀಸಲಿರಿಸುವ ಮಹಾದಂಧೆ ಬಯಲಾಗಿತ್ತು. ಸಂಸದ ತೇಜಸ್ವಿ ಸೂರ್ಯ ಬಿಬಿಎಂಪಿಯ ಕಳ್ಳಾಟವನ್ನ ಬಯಲು ಮಾಡಿದ್ದು, ಸೋಂಕಿತರ ಜೊತೆ ಮಾತನಾಡಿ ಸೀಟ್ ಸಿಕ್ಕಿದೆಯಾ ಅಥವಾ ಇಲ್ಲವಾ ಅನ್ನೋದನ್ನ ಖಚಿತಪಡಿಸಿಕೊಂಡಿದ್ದರು. ಸೋಂಕಿತರ ಕುಟುಂಬಸ್ಥರ ಜೊತೆ ತೇಜಸ್ವಿ ಸೂರ್ಯ ಮಾತನಾಡಿರುವ ಆಡಿಯೋಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿತ್ತು. ಇದನ್ನೂ ಓದಿ: ಬೆಡ್ ದಂಧೆ ನಡೆಯೋದು ಹೇಗೆ ಅನ್ನೋದನ್ನ ವಿವರಿಸಿದ ತೇಜಸ್ವಿ ಸೂರ್ಯ

    ಬೆಂಗಳೂರು ದಕ್ಷಿಣ ಭಾಗದಲ್ಲಿ ಬಿಬಿಎಂಪಿಯ ವಾರ್ ರೂಂ ಅಧಿಕಾರಿಗಳೇ ಕೃತಕ ಬೆಡ್ ಅಭಾವ ಸೃಷ್ಟಿಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಹೋಂ ಐಸೋಲೇಟ್ ನಲ್ಲಿರುವ ಸೋಂಕಿತನ ಹೆಸರಲ್ಲಿ ಬೆಡ್ ಬುಕ್ ಆದ್ರೆ, ಅದು ಯಾರಿಗೆ ನೀಡಲಾಗುತ್ತೆ ಎಂಬುದರ ಬಗ್ಗೆ ತಿಳಿದು ಬರಬೇಕಿದೆ. ಮಹಾನಗರ ಬೆಂಗಳೂರಿನಲ್ಲಿ ಕೃತಕ ಬೆಡ್ ಅಭಾವದಿಂದಲೇ ಈ ಹೆಲ್ತ್ ಎಮೆರ್ಜೆನ್ಸಿ ಉಂಟಾಗಿದೆಯಾ ಅನ್ನೋ ಅನುಮಾನಗಳು ದಟ್ಟವಾಗಿದೆ. ಇದನ್ನೂ ಓದಿ: ನೀವೂ ಮನೆಯಲ್ಲಿದ್ರೂ ನಿಮ್ಮ ಹೆಸರಲ್ಲಿ ಬುಕ್ ಆಗುತ್ತೆ ಬೆಡ್ – ಬೇಕಾದವರಿಗೆ ಬೆಡ್ ನೀಡುವ ಧನದಾಹಿಗಳು

  • ಕಮಲ್ ಪಂಥ್ ಮೇಲೆ ಸಿಎಂ ಬಿಎಸ್‌ವೈ ಗರಂ – ಫುಲ್ ಕ್ಲಾಸ್

    ಕಮಲ್ ಪಂಥ್ ಮೇಲೆ ಸಿಎಂ ಬಿಎಸ್‌ವೈ ಗರಂ – ಫುಲ್ ಕ್ಲಾಸ್

    ಬೆಂಗಳೂರು: ಕೋವಿಡ್ 19 ಮಾರ್ಗಸೂಚಿ ಬೆಂಗಳೂರು ನಗರದಲ್ಲಿ ಸರಿಯಾಗಿ ಪಾಲನೆಯಾಗದ್ದಕ್ಕೆ ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಮೇಲೆ ಸಿಎಂ ಯಡಿಯೂರಪ್ಪ ಗರಂ ಆಗಿದ್ದಾರೆ.

    ಬೆಳಗ್ಗೆ ಮಣಿಪಾಲ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಕಾವೇರಿಗೆ ಬರುವಾಗ ಅಂಗಡಿಗಳು ಓಪನ್ ಆಗಿದ್ದನ್ನು ಯಡಿಯೂರಪ್ಪ ನೋಡಿದ್ದರು. ಇದರಿಂದ ಆಯುಕ್ತರ ಮೇಲೆ ಸಿಟ್ಟಾದ ಯಡಿಯೂರಪ್ಪ, 144 ಸೆಕ್ಷನ್ ಜಾರಿಯಾಗಿದ್ದರೂ ಅಂಗಡಿಗಳು ಓಪನ್ ಆಗಿದೆ. ಹೀಗೆ ಇದ್ದರೆ ಮಾರ್ಗಸೂಚಿಗೆ ಏನು ಬೆಲೆ? ಹೀಗಾದ್ರೆ ಕೊರೊನಾ ನಿಯಂತ್ರಣ ಸಾಧ್ಯನಾ ಎಂದು ಆಯುಕ್ತರಿಗೆ ಯಡಿಯೂರಪ್ಪ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಯಡಿಯೂರಪ್ಪ ಗರಂ ಬೆನ್ನಲ್ಲೇ ಕಮಲ್ ಪಂಥ್ ಈಗ ಅಂಗಡಿಗಳು ಮುಚ್ಚಿಸಲು ಸೂಚನೆ ನೀಡಿದ್ದಾರೆ. ಪೊಲೀಸ್ ಆಯುಕ್ತರ ಸೂಚನೆ ಮೇರೆಗೆ ಅಗತ್ಯ ವಸ್ತುಗಳ ಅಂಗಡಿ ಬಿಟ್ಟು ಉಳಿದ ಅಂಗಡಿಗಳನ್ನು ಪೊಲೀಸರು ಮುಚ್ಚಿಸುತ್ತಿದ್ದಾರೆ.

  • ಯಾರಾದ್ರೂ ಚೇಷ್ಟೆ ಮಾಡಿದ್ರೆ ಯಾವುದೇ ಕಾರಣಕ್ಕೂ ಬಿಡಲ್ಲ: ಕಮಲ್ ಪಂಥ್

    ಯಾರಾದ್ರೂ ಚೇಷ್ಟೆ ಮಾಡಿದ್ರೆ ಯಾವುದೇ ಕಾರಣಕ್ಕೂ ಬಿಡಲ್ಲ: ಕಮಲ್ ಪಂಥ್

    ಬೆಂಗಳೂರು: ಯಾರಾದರೂ ಚೇಷ್ಟೆ ಮಾಡಿದರೆ ಅವರನ್ನು ಯಾವುದೇ ಕಾರಣಕ್ಕೂ ಬಿಡಲ್ಲ ಎಂದು ಪೊಲೀಸ್ ಆಯುಕ್ತ ಕಮಲ್ ಪಂಥ್ ಎಚ್ಚರಿಸಿದ್ದಾರೆ.

    ನಾಳೆಯಿಂದ ಸಾರಿಗೆ ನೌಕರರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಪ್ರೋಟೋಕಾಲ್ ಜಾರಿಯಲ್ಲಿದೆ. ಯಾವ ಪ್ರತಿಭಟನೆ ಮಾಡುವಂತಿಲ್ಲ. ಪ್ರತಿಭಟನೆ ನಡೆಸಿದ್ರೆ ಬಂಧಿಸುತ್ತೇವೆ ಎಂದು ವಾರ್ನ್ ಮಾಡಿದ್ದಾರೆ.

    ಎಲ್ಲ ಬಂದೋಬಸ್ತ್ ಗೂ ನಾವು ತಯಾರಾಗಿದ್ದೀವಿ. ಯಾರಾದ್ರೂ ಚೇಷ್ಟೆ ಮಾಡಿದ್ರೆ ಅವರನ್ನ ಯಾವುದೇ ಕಾರಣಕ್ಕೂ ಬಿಡಲ್ಲ. ಕರ್ತವ್ಯಕ್ಕೆ ಹಾಜರಾಗುವವರಿಗೆ ಆರ್ಮ್ ಎಸ್ಕಾರ್ಟ್ ನಲ್ಲಿ ಭದ್ರತೆ ಕೊಡ್ತೀವಿ. ಡ್ಯೂಟಿಗೆ ಬರೋದು ಬಿಡೊದು ಅವರ ಡಿಪಾರ್ಟ್ಮೆಂಟ್ ಗೆ ಸಂಬಂಧಿಸಿದ್ದು ಎಂದು ಅವರು ತಿಳಿಸಿದ್ದಾರೆ.

    ರಸ್ತೆಗಿಳಿದು ಕಲ್ಲು ತೂರಾಟ ರಸ್ತೆ ತಡೆ ಮಾಡಿದ್ರೆ ಅದಕ್ಕೆ ತಕ್ಕ ಶಾಸ್ತಿ ಮಾಡ್ತೀವಿ. 21 ನೇ ತಾರೀಕಿನವರೆಗೇ ಕೋವಿಡ್ ಪ್ರೋಟೋಕಾಲ್ ಇದೆ. ಈಗಾಗಲೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತುಕತೆ ನಡೆದಿದೆ. ನಾಳೆ ಬಸ್ ಇಲ್ಲದಿದ್ದರೆ ಖಾಸಗಿಯವರು ಸಹಕಾರ ನೀಡಿದ್ರೆ ಅವರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವುದಾಗಿ ಕಮಲ್ ಪಂಥ್ ಭರವಸೆ ನೀಡಿದ್ದಾರೆ.