Tag: Kamal Haasan

  • Kalki 2898 AD: ಪ್ರಭಾಸ್ ಸಿನಿಮಾದಲ್ಲಿ ಹೇಗಿರಲಿದೆ ಕಮಲ್ ಹಾಸನ್ ಪಾತ್ರ?

    Kalki 2898 AD: ಪ್ರಭಾಸ್ ಸಿನಿಮಾದಲ್ಲಿ ಹೇಗಿರಲಿದೆ ಕಮಲ್ ಹಾಸನ್ ಪಾತ್ರ?

    ಲಾರ್ ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ (Kalki 2898 AD) ಚಿತ್ರದ ದುಬಾರಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಸ್ಟಾರ್ ಕಲಾವಿದರ ದಂಡೇ ಈ ಚಿತ್ರದಲ್ಲಿದೆ. ಸೂಪರ್ ಸ್ಟಾರ್ ಬಿಗ್ ಬಿ ಜೊತೆ ತಮಿಳಿನ ಸ್ಟಾರ್ ನಟ ಕಮಲ್ ಹಾಸನ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹಾಗಾದ್ರೆ ಅವರ ಪಾತ್ರ ಹೇಗಿರಲಿದೆ ಎಂಬುದನ್ನು ಸ್ವತಃ ಕಮಲ್ ಹಾಸನ್ ಅವರೇ ರಿವೀಲ್ ಮಾಡಿದ್ದಾರೆ.

    ಕಲ್ಕಿ ಪ್ರಭಾಸ್ (Prabhas) ಎದುರು ಕಮಲ್ ಹಾಸನ್ (Kamal Haasan) ವಿಲನ್ ಆಗಿ ಘರ್ಜಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಆ ವಿಚಾರ ಸುಳ್ಳು ಎಂದು ಕಮಲ್ ಹಾಸನ್ ಪ್ರತಿಕ್ರಿಯೆ ನೀಡಿದ್ದಾರೆ. ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ. ಮೂಲಗಳ ಪ್ರಕಾರ, 2 ನಿಮಿಷಗಳ ಕಾಲ ಕಮಲ್ ನಟಿಸಿದ್ದಾರೆ ಎನ್ನಲಾಗಿದೆ.

    ‘ಕಲ್ಕಿ 2898 ಎಡಿ’ ಸಿನಿಮಾದ ಚಿತ್ರೀಕರಣ ಕಂಪ್ಲೀಟ್ ಆಗಿದೆ. ಇದೇ ಜುಲೈನಲ್ಲಿ ಪ್ರಭಾಸ್ ನಟನೆಯ ಈ ಚಿತ್ರ ರಿಲೀಸ್ ಆಗಲಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಇದನ್ನೂ ಓದಿ:‘ಪುಷ್ಪ’ ಡೈರೆಕ್ಟರ್ ಜೊತೆ ಮತ್ತೆ ಕೈ ಜೋಡಿಸಿದ ರಾಮ್ ಚರಣ್

    ಪ್ರಭಾಸ್ ಈ ಚಿತ್ರಕ್ಕೆ ನಾಗ್ ಅಶ್ವಿನ್ ನಿರ್ದೇಶನ ಮಾಡಿದ್ದಾರೆ. ಪ್ರಭಾಸ್‌ಗೆ ನಾಯಕಿಯಾಗಿ ದೀಪಿಕಾ ಪಡುಕೋಣೆ (Deepika Padukone) ನಟಿಸಿದ್ದಾರೆ. ಬಹುಭಾಷೆಗಳಲ್ಲಿ ಈ ಸಿನಿಮಾ ಮೂಡಿ ಬಂದಿದೆ.

  • ಇಳಯರಾಜ ಬಯೋಪಿಕ್: ಚಿತ್ರಕ್ಕೆ ಚಾಲನೆ ನೀಡಿದ ಕಮಲ್ ಹಾಸನ್

    ಇಳಯರಾಜ ಬಯೋಪಿಕ್: ಚಿತ್ರಕ್ಕೆ ಚಾಲನೆ ನೀಡಿದ ಕಮಲ್ ಹಾಸನ್

    ಸಂಗೀತದ ಜೀವಂತ ದಂತಕಥೆ ಇಳಯರಾಜ ಅವರ ಬಯೋಪಿಕ್ (Biopic) ಗೆ ಕೊನೆಗೂ ಚಾಲನೆ ಸಿಕ್ಕಿದೆ. ಇಂದು ಚೆನ್ನೈನಲ್ಲಿ ನಡೆದ ಸಮಾರಂಭದಲ್ಲಿ ಫಸ್ಟ್ ಲುಕ್ ಅನ್ನು ಕಮಲ್ ಹಾಸನ್ (, Kamal Haasan) ಮತ್ತು ಇಳಯರಾಜ ಅವರೇ ಬಿಡುಗಡೆ ಮಾಡಿದ್ದಾರೆ. ಅಚ್ಚರಿಯ ಸಂಗತಿ ಅಂದರೆ, ಈ ಚಿತ್ರಕ್ಕೆ ಇಳಯರಾಜ ಅವರೇ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

    ಇಳಯರಾಜ ಅವರ ಪಾತ್ರವನ್ನು ಯಾರು ಮಾಡುತ್ತಾರೆ ಎನ್ನುವ ಸಹಜ ಕುತೂಹಲ ಎಲ್ಲರಲ್ಲೂ ಇತ್ತು. ನಟ ಧನುಷ್ (Dhanush) ಅವರು ಆ ಪಾತ್ರವನ್ನು ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಅದು ಕೂಡ ನಿಜವಾಗಿದೆ. ಧನುಷ್ ಅವರೇ ಇಳಯರಾಜ ಪಾತ್ರವನ್ನು ಮಾಡಲಿದ್ದಾರೆ. ಇಂದು ಅವರು ಕೂಡ ಸಮಾರಂಭಕ್ಕೆ ಆಗಮಿಸಿದ್ದರು.

    ತಮ್ಮ ತಂದೆಯ ಜೀವನವನ್ನು ಆಧರಿಸಿದ ಸಿನಿಮಾ ಮಾಡುವುದಾದರೆ, ಆ ಪಾತ್ರದಲ್ಲಿ ನಾನು ಧನುಷ್ ಅವರನ್ನು ಕಾಣಲು ಬಯಸುತ್ತೇನೆ ಎಂದು ಈ ಹಿಂದೆಯೇ ಇಳಯರಾಜ (Ilayaraja) ಅವರ ಪುತ್ರ ಯುವನ್ ಶಂಕರ್ ರಾಜ್ ಹೇಳಿದ್ದರು. ತಮ್ಮ ತಂದೆಯನ್ನು ಧನುಷ್ ಅವರಲ್ಲಿ ಕಾಣಲು ಹೆಚ್ಚು ಉತ್ಸುಕನಾಗಿದ್ದೇನೆ ಎಂದೂ ಅವರು ಹೇಳಿಕೊಂಡಿದ್ದರು. ಅದು ಈಗ ನಿಜವಾಗಿದೆ.

    ಈ ಚಿತ್ರಕ್ಕೆ ಇಳಯರಾಜ ಎಂದು ಹೆಸರಿಡಲಾಗಿದ್ದು, ಅರುಣ್ ಮಾದೇಶ್ವರನ್ ನಿರ್ದೇಶನದಲ್ಲಿ ಚಿತ್ರ ಮೂಡಿ ಬರಲಿದೆ. ನೀರವ್ ಶಾ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಪಿಕೆ ಪ್ರೈಮ್ ಪ್ರೊಡಕ್ಷನ್ ಮತ್ತು ಮರ್ಕ್ಯೂರಿ ಮೂವಿ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿವೆ.

  • ಡಿಎಂಕೆ ಜೊತೆ ಕೈ ಜೋಡಿಸಿದ ನಟ ಕಮಲ್ ಹಾಸನ್

    ಡಿಎಂಕೆ ಜೊತೆ ಕೈ ಜೋಡಿಸಿದ ನಟ ಕಮಲ್ ಹಾಸನ್

    ಲೋಕಸಭೆ ಚುನಾವಣೆಗೆ (Elections) ಎಲ್ಲ ಪಕ್ಷಗಳು ಭರ್ಜರಿಯಾಗಿ ತಯಾರಿ ಮಾಡಿಕೊಳ್ಳುತ್ತಿವೆ. ಅದರಲ್ಲೂ ದಕ್ಷಿಣದಲ್ಲಿ ಹೆಚ್ಚೆಚ್ಚು ಮತಗಳನ್ನು ಪಡೆಯಲು ಬಿಜೆಪಿ ಸೇರಿದಂತೆ ರಾಷ್ಟ್ರೀಯ ಪಕ್ಷಗಳು ತಮ್ಮದೇ ಆದಂತಹ ತಂತ್ರಗಳನ್ನು ಹೆಣೆಯುತ್ತಿವೆ. ಆದರೆ, ಪ್ರಾದೇಶಿಕ ಪಕ್ಷಗಳು ಉಳಿಯುವ ನಿಟ್ಟಿನಲ್ಲಿ ತಾವು ಡಿಎಂಕೆ ಜೊತೆ ಕೈ ಜೋಡಿಸುವುದಾಗಿ ನಟ ಕಮಲ್ ಹಾಸನ್ (Kamal Haasan) ತಿಳಿಸಿದ್ದಾರೆ.

    ಮುಂಬರುವ ಲೋಕಸಭೆ (Lok Sabha) ಚುನಾವಣೆಯಲ್ಲಿ ಕಮಲ್ ಹಾಸನ್ ಮತ್ತು ಕಮಲ್ ಪಕ್ಷ  ಮಕ್ಕಳ್ ನಿಧಿ ಮೈಯಂ (ಎಂಎನ್‍ಎಂ) ಸ್ಪರ್ಧೆ ಮಾಡದೇ ಇದ್ದರೂ, ದ್ರಾವಿಡ ಮುನ್ನೇತ್ರ ಕಳಗ ಪಕ್ಷ (ಡಿಎಂಕೆ)ಕ್ಕೆ ತಮ್ಮ ಬೆಂಬಲ ನೀಡುವುದಾಗಿ ಕಮಲ್ ಹಾಸನ್ ತಿಳಿಸಿದ್ದಾರೆ. ಪ್ರಾದೇಶಿಕ ಪಕ್ಷಗಳು ಉಳಿಯುವ ನಿಟ್ಟಿನಲ್ಲಿ ಈ ನಿರ್ಧಾರ ಎಂದೂ ಅವರು ತಿಳಿಸಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಕಮಲ್, ನಾನು ಯಾವುದೇ ಕ್ಷೇತ್ರದಿಂದಲೂ ಸ್ಪರ್ಧಿಸುವುದಿಲ್ಲ. ಜೊತೆಗೆ ನನ್ನ ಪಕ್ಷವು ಕೂಡ ಚುನಾವಣೆಯನ್ನು ಎದುರಿಸುವುದಿಲ್ಲ. ಆದರೆ, ಮೈತ್ರಿಗೆ ಸಹಾಯ ನೀಡುವುದರ ಮೂಲಕ ಡಿಎಂಕೆ ಪಕ್ಷವನ್ನು ಗೆಲ್ಲಿಸುವುದರತ್ತ ಹೆಜ್ಜೆ ಹಾಕುತ್ತೇವೆ ಎಂದಿದ್ದಾರೆ.

  • ಕಮಲ್ ಹಾಸನ್ ನಟನೆಯ ಬಿಗ್ ಬಜೆಟ್ ಚಿತ್ರದಿಂದ ದುಲ್ಕರ್ ಸಲ್ಮಾನ್ ಔಟ್

    ಕಮಲ್ ಹಾಸನ್ ನಟನೆಯ ಬಿಗ್ ಬಜೆಟ್ ಚಿತ್ರದಿಂದ ದುಲ್ಕರ್ ಸಲ್ಮಾನ್ ಔಟ್

    ಸ್ಟಾರ್ ಡೈರೆಕ್ಟರ್ ಮಣಿರತ್ನಂ, ಕಮಲ್ ಹಾಸನ್ (Kamal Haasan) ಮತ್ತೊಮ್ಮೆ ಜೊತೆಯಾಗುತ್ತಿದ್ದಾರೆ. ಆ ಚಿತ್ರಕ್ಕೆ ‘ಥಗ್ ಲೈಫ್’ (Thug Life) ಎಂದು ಟೈಟಲ್ ಇಡಲಾಗಿದೆ. 100 ಕೋಟಿ ಬಜೆಟ್‌ನಲ್ಲಿ ಮೂಡಿ ಬರಲಿರುವ ಚಿತ್ರದಿಂದ ‘ಸೀತಾರಾಮಂ’ (Seetha Ramam) ಹೀರೋ ದುಲ್ಕರ್ ಸಲ್ಮಾನ್ ಹೊರನಡೆದಿದ್ದಾರೆ ಎಂಬ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಇದು ನಟನ ಅಭಿಮಾನಿಗಳಿಗೆ ನಿರಾಸೆ ಆಗಿದೆ. ಇದನ್ನೂ ಓದಿ:ಪ್ರಶಾಂತ್ ನೀಲ್‌ಗೆ ಕೈ ಮುಗಿದು ಧನ್ಯವಾದ ತಿಳಿಸಿದ ರಿಯಲ್ ಸ್ಟಾರ್

    ಕೆಲ ವರ್ಷಗಳ ಹಿಂದೆ ‘ನಾಯಕನ್’ ಎಂಬ ಸಿನಿಮಾದಲ್ಲಿ ಮಣಿರತ್ನಂ, ಕಮಲ್ ಹಾಸನ್ ಜೊತೆಯಾಗಿ ಕೆಲಸ ಮಾಡಿದ್ದರು. ಆ ನಂತರ ಈ ಕಾಂಬಿನೇಷನ್ ಒಟ್ಟಾಗಿ ಕೆಲಸ ಮಾಡಿರಲಿಲ್ಲ. ಈಗ ‘ಥಗ್ ಲೈಫ್’ ಸಿನಿಮಾಗಾಗಿ ಮತ್ತೆ ಒಂದಾಗಿದ್ದಾರೆ. ಈ ಚಿತ್ರದಲ್ಲಿ ಸ್ಟಾರ್ ಕಲಾವಿದರ ದಂಡೇ ಇದೆ. ಇದನ್ನೂ ಓದಿ:ಕನ್ನಡತಿಯರ ಜಡೆ ಜಗಳದ ಮಧ್ಯೆ ಮೀನಾಕ್ಷಿಗೆ ಸಿಕ್ತು ಬಂಪರ್‌ ಆಫರ್‌

    ಕಮಲ್ ಹಾಸನ್, ತ್ರಿಷಾ ಕೃಷ್ಣನ್, ಜಯಂ ರವಿ, ಅಭಿರಾಮಿ ಸೇರಿದಂತೆ ಅನೇಕರು ಚಿತ್ರತಂಡದಲ್ಲಿದ್ದಾರೆ. ಈಗ ಕಮಲ್ ಚಿತ್ರವನ್ನು ದುಲ್ಕರ್ ಸಲ್ಮಾನ್ ಕೈಬಿಟ್ಟಿದ್ದಾರೆ ಎನ್ನಲಾಗುತ್ತಿದೆ. ‘ಕಿಂಗ್ ಆಫ್ ಕೋಥಾ’ ಚಿತ್ರದಿಂದ ನಂತರ ದುಲ್ಕರ್ (Dulquer Salman) ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಡೇಟ್ಸ್ ಹೊಂದಾಣಿಕೆಯಾಗದೇ ‘ಥಗ್ ಲೈಫ್’ ಚಿತ್ರ ಕೈ ಬಿಟ್ರಾ? ತಂಡದ ಜೊತೆ ಕಿರಿಕ್ ಆಗಿದ್ಯಾ? ಅಸಲಿತ್ತು ಎನು ಎಂಬುದು ತಿಳಿದು ಬಂದಿಲ್ಲ. ಚಿತ್ರತಂಡ ಅಧಿಕೃತ ಮಾಹಿತಿ ನೀಡುವವರೆಗೂ ಕಾಯಬೇಕಿದೆ.

    ಅಂದಹಾಗೆ, ಸೂರ್ಯ ನಟನೆಯ ಹೊಸ ಸಿನಿಮಾ, ವಿಜಯ್ ವರ್ಮಾ- ನಜ್ರಿಯಾ ಜೊತೆಗಿನ ಚಿತ್ರ, ಟಾಲಿವುಡ್ ಸ್ಟಾರ್ ಬಾಲಯ್ಯ (Balayya) ಜೊತೆ ಹೊಸ ಪ್ರಾಜೆಕ್ಟ್ ಸೇರಿದಂತೆ ಹಲವು ಚಿತ್ರಗಳು ದುಲ್ಕರ್ ಕೈಯಲ್ಲಿದೆ.

  • ವಿಜಯ್ ರಾಜಕೀಯಕ್ಕೆ ಬರೋಕೆ ನಾನೇ ಹೇಳಿದ್ದೆ: ನಟ ಕಮಲ್ ಹಾಸನ್

    ವಿಜಯ್ ರಾಜಕೀಯಕ್ಕೆ ಬರೋಕೆ ನಾನೇ ಹೇಳಿದ್ದೆ: ನಟ ಕಮಲ್ ಹಾಸನ್

    ಮಿಳು ನಾಡಿನಲ್ಲಿ ಸಿನಿಮಾದವರ ರಾಜಕೀಯ ಗರಿಗೆದರಿದೆ. ಮೊನ್ನೆಯಷ್ಟೇ ನಟ ವಿಜಯ್ ರಾಜಕಾರಣಕ್ಕೆ ಎಂಟ್ರಿ ಪಡೆದಿದ್ದಾರೆ. ಈ ವಿಷಯದ ಕುರಿತು ಮಾತನಾಡಿರುವ ಕಮಲ್ ಹಾಸನ್, ನಾನೇ ವಿಜಯ್ (Vijay) ಅವರನ್ನು ರಾಜಕಾರಣಕ್ಕೆ ಬರುವುದಕ್ಕೆ ಹೇಳಿದ್ದೆ ಎಂದಿದ್ದಾರೆ. ಜೊತೆಗೆ ವಿಜಯ್ ಅವರ ರಾಜಕೀಯ ಭವಿಷ್ಯಕ್ಕೆ ಶುಭ ಕೋರಿದ್ದಾರೆ.

    ಈ ನಡುವೆ ರಾಜಕಾರಣದ ಕುರಿತು ಮಾತನಾಡಿರುವ ಕಮಲ್, ಊಳಿಗಮಾನ್ಯ ರಾಜಕೀಯ ಬಿಟ್ಟು ರಾಷ್ಟ್ರದ ಬಗ್ಗೆ ನಿಸ್ವಾರ್ಥವಾಗಿ ಯೋಚಿಸುವ ಯಾವುದೇ ರಾಜಕೀಯ ಮೈತ್ರಿಯನ್ನು ತಮ್ಮ ಪಕ್ಷ ಬೆಂಬಲಿಸುತ್ತದೆ ಎಂದು ಮಕ್ಕಳ್ ನೀಧಿ ಮೈಯಂ (MNM) ಸಂಸ್ಥಾಪಕ, ನಟ ಕಮಲ್ ಹಾಸನ್ (Kamal Haasan) ತಿಳಿಸಿದ್ದಾರೆ.

    ಚೆನ್ನೈನಲ್ಲಿ (Chennai) ಎಂಎನ್‌ಎಂನ 7ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ, ತಮ್ಮ ಪಕ್ಷವು ಇಂಡಿಯಾ ಒಕ್ಕೂಟದ ಭಾಗವಾಗುತ್ತಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಪಕ್ಷ ಇನ್ನೂ ಇಂಡಿಯಾ ಬ್ಲಾಕ್‌ಗೆ ಸೇರಿಲ್ಲ. ಪಕ್ಷ ರಾಜಕೀಯವನ್ನು ಸಮಾಧಿ ಮಾಡಿ ರಾಷ್ಟ್ರದ ಬಗ್ಗೆ ಯೋಚಿಸಬೇಕು ಎಂದು ನಾನು ಈಗಾಗಲೇ ಹೇಳಿದ್ದೇನೆ. ರಾಷ್ಟ್ರದ ಬಗ್ಗೆ ನಿಸ್ವಾರ್ಥವಾಗಿ ಯೋಚಿಸುವ ಯಾರಿಗೇ ಆಗಲಿ ನನ್ನ ಪಕ್ಷ ಬೆಂಬಲಿಸುತ್ತದೆ. ಆದರೆ ಸ್ಥಳೀಯ, ಊಳಿಗಮಾನ್ಯ ರಾಜಕೀಯವನ್ನು ಮುಂದುವರಿಸಿದರೆ ನಾವು ಅದರ ಭಾಗವಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

     

    2024ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ತಮ್ಮ ಪಕ್ಷದ ಮೈತ್ರಿ ಕುರಿತು ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಆದಷ್ಟು ಬೇಗ ಒಳ್ಳೆಯ ಸುದ್ದಿಯನ್ನು ಮಾಧ್ಯಮಗಳಿಗೆ ತಿಳಿಸಲಾಗುವುದು ಎಂದಿದ್ದಾರೆ.  ಮುಂಬರುವ ಲೋಕಸಭೆ ಚುನಾವಣೆಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ನೇತೃತ್ವದ ಡಿಎಂಕೆ ಜೊತೆ ಹಾಸನ್ ಪಕ್ಷ ಮೈತ್ರಿ ಮಾತುಕತೆಯಲ್ಲಿ ತೊಡಗಿದೆ ಎಂಬ ಊಹಾಪೋಹಗಳು ಹರಿದಾಡುತ್ತಿದ್ದವು. ಇದೀಗ ಸ್ವತಃ ಕಮಲ್ ಹಾಸನ್ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

  • ‘ಇಂಡಿಯಾ’ ಬಣದಿಂದ ಅಂತರ ಕಾಪಾಡಿಕೊಂಡ ನಟ ಕಮಲ್ ಹಾಸನ್

    ‘ಇಂಡಿಯಾ’ ಬಣದಿಂದ ಅಂತರ ಕಾಪಾಡಿಕೊಂಡ ನಟ ಕಮಲ್ ಹಾಸನ್

    ಸಿನಿಮಾದೊಂದಿಗೆ ರಾಜಕಾರಣದಲ್ಲೂ ಸಕ್ರೀಯರಾಗಿರುವ ನಟ ಕಮಲ್ ಹಾಸನ್ (Kamal Haasan), ಇಂಡಿಯಾ ಬಣಕ್ಕೆ ಸೇರಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಕಮಲ್ ಹಾಸನ್ ಅವರ ಮಕ್ಕಳ್ ನೀದಿ ಮೈಯಂ ಪಕ್ಷವು ಇಂಡಿಯಾ ಬಣದೊಂದಿಗೆ ಇರಲಿದೆ ಎಂದೂ ಹೇಳಲಾಗಿತ್ತು. ಆದರೆ, ಇಂಡಿಯಾ ಬಣದಲ್ಲಿ ತಾವು ಇರುವುದಿಲ್ಲವೆಂದು ಕಮಲ್ ಹೇಳಿದ್ದಾರೆ.

    ಮಕ್ಕಳ್ ನೀದಿ ಮೈಯಂನ 7ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮಾತನಾಡಿರುವ ಕಮಲ್, ನಾನು ಯಾವುದೇ ಕಾರಣಕ್ಕೂ ಇಂಡಿಯಾ ಬಣದೊಂದಿಗೆ ಸೇರಿಕೊಳ್ಳುವುದಿಲ್ಲವೆಂದು ಅವರು ಹೇಳಿದ್ದಾರೆ. ಬೇರೆ ಬೇರೆ ಪಕ್ಷಗಳ ಜೊತೆ ಮೈತ್ರಿ ಕುರಿತಂತೆ ಚರ್ಚೆಗಳು ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ ಎಂದಿದ್ದಾರೆ.

     

    ಇದೇ ಸಂದರ್ಭದಲ್ಲಿ ವಿಜಯ್ ಅವರ ಪಕ್ಷವನ್ನು ಕಮಲ್ ಸ್ವಾಗತಿಸಿದ್ದಾರೆ. ಅಲ್ಲದೇ, ಎಂ.ಎನ್.ಎಂ  ಪಕ್ಷದ ಜೊತೆ ಯಾವುದೇ ಕಾರಣಕ್ಕೂ ಕೈ ಜೋಡಿಸುವುದಿಲ್ಲ ಎಂದೂ ಅವರು ಘೋಷಣೆ ಮಾಡಿದ್ದಾರೆ. ಜೊತೆಗೆ ದೆಹಲಿಯಲ್ಲಿ ನಡೆಯುತ್ತಿರುವ ರೈತರನ್ನು ಶತ್ರು ರಾಷ್ಟ್ರದ ಸೈನಿಕರಂತೆ ನಡೆಸಿಕೊಳ್ಳುತ್ತಿರುವುದನ್ನು ಖಂಡಿಸಿದ್ದಾರೆ.

  • ಕಮಲ್ ಹಾಸನ್ ಪುತ್ರಿಗೆ ‘ವಿಕ್ರಮ್’ ಡೈರೆಕ್ಟರ್ ಆ್ಯಕ್ಷನ್ ಕಟ್

    ಕಮಲ್ ಹಾಸನ್ ಪುತ್ರಿಗೆ ‘ವಿಕ್ರಮ್’ ಡೈರೆಕ್ಟರ್ ಆ್ಯಕ್ಷನ್ ಕಟ್

    ‘ಸಲಾರ್’ ಬೆಡಗಿ ಶ್ರುತಿ ಹಾಸನ್ (Shruti Haasan) ಅವರು ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ‘ಸಲಾರ್’ (Salaar) ಸಕ್ಸಸ್ ನಂತರ ಶ್ರುತಿ, ‘ವಿಕ್ರಮ್’ ಡೈರೆಕ್ಟರ್ ಲೋಕೇಶ್ ಕನಕರಾಜ್ ಜೊತೆ ಸಾಥ್ ನೀಡಿದ್ದಾರೆ.

    ಕಮಲ್ ಹಾಸನ್ (Kamal Haasan) ನಟನೆಯ ‘ವಿಕ್ರಮ್’ ಚಿತ್ರಕ್ಕೆ ಲೋಕೇಶ್ ನಿರ್ದೇಶನ ಮಾಡುವ ಮೂಲಕ ಸೈ ಎನಿಸಿಕೊಂಡಿದ್ದರು. ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಕೋಟಿ ಲೂಟಿ ಮಾಡಿತ್ತು. ಹಿಟ್ ಲಿಸ್ಟ್‌ಗೆ ವಿಕ್ರಮ್ ಸಿನಿಮಾ ಸೇರಿತ್ತು. ಈ ಚಿತ್ರಕ್ಕೆ ಕಮಲ್‌ ಹಾಸನ್‌ ನಿರ್ಮಾಣ ಮಾಡಿದ್ದರು. ಇದನ್ನೂ ಓದಿ:ಎಂಗೇಜ್‌ಮೆಂಟ್ ಸಂಭ್ರಮದಲ್ಲಿ ನಿರ್ದೇಶಕ ಅಭಿಷೇಕ್ ಶೆಟ್ಟಿ

    ಇದೀಗ ಮಗಳು ಶ್ರುತಿ ನಟನೆಯ ಸಿನಿಮಾಗೆ ತಂದೆ ಕಮಲ್ ಹಾಸನ್ ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ಶ್ರುತಿ ಮತ್ತು ಲೋಕೇಶ್ ಜೊತೆಯಿರುವ ಬ್ಲ್ಯಾಕ್ & ವೈಟ್ ಫೋಟೋ ಹಂಚಿಕೊಂಡು, ಇಬ್ಬರ ಕಾಂಬಿನೇಷನ್ ಸಿನಿಮಾ ಬಗ್ಗೆ ಚಿತ್ರತಂಡ ಅಧಿಕೃತ ಅಪ್‌ಡೇಟ್ ನೀಡಿದೆ.

    ಈ ಮೂಲಕ ಅಪ್ಪ ಕಮಲ್ ಮತ್ತು ಮಗಳು ಶೃತಿ ಜೊತೆಯಾಗಿ ಕೆಲಸ ಮಾಡುತ್ತಿದ್ದಾರೆ. ವಿಭಿನ್ನ ಕಥೆಯನ್ನು ತೆರೆಯ ಮೇಲೆ ತರಲು ಸಕಲ ತಯಾರಿ ನಡೆಯುತ್ತಿದೆ. ಸದ್ಯ ಈ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಸಿನಿಮಾ ಹೇಗಿರಲಿದೆ ಎಂದು ಕೌತುಕದಿಂದ ಫ್ಯಾನ್ಸ್ ಎದುರು ನೋಡ್ತಿದ್ದಾರೆ.

  • ತಮಿಳು ಬಿಗ್ ಬಾಸ್:  ಇತಿಹಾಸ ಬರೆದ ವಿನ್ನರ್ ಅರ್ಚನಾ

    ತಮಿಳು ಬಿಗ್ ಬಾಸ್: ಇತಿಹಾಸ ಬರೆದ ವಿನ್ನರ್ ಅರ್ಚನಾ

    ಮೊನ್ನೆಯಷ್ಟೇ ತೆಲುಗು ಬಿಗ್ ಬಾಸ್ (Bigg Boss Tamil) ಫಿನಾಲೆ ಮುಗಿಸಿ ಬೀಗಿತ್ತು. ಇದೀಗ ತಮಿಳಿನ ಬಿಗ್ ಬಾಸ್ ಕೂಡ ಮುಗಿದಿದೆ. ಈ ಬಾರಿ ಬಿಗ್ ಬಾಸ್ ಟೈಟಲ್ (Winner) ಗೆದ್ದಿರುವ ಅರ್ಚನಾ ರವಿಚಂದ್ರನ್ (Archana Ravichandran) ಹೊಸ ಇತಿಹಾಸವನ್ನು ಬರೆದಿದ್ದಾರೆ.  ಅರ್ಚನಾ ವೈಲ್ಡ್ ಕಾರ್ಡ್ ಎಂಟ್ರಿ ಪಡೆದುಕೊಂಡು ಬಿಗ್ ಬಾಸ್ ಮನೆ ಪ್ರವೇಶ ಮಾಡಿದವರು, ತಮಿಳು ಬಿಗ್ ಬಾಸ್ ಇತಿಹಾಸದಲ್ಲೇ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟು ಟೈಟಲ್ ವಿನ್ ಆಗಿದ್ದಾರೆ.

    ಅರ್ಚನಾ ತಮಿಳು ಬಿಗ್ ಬಾಸ್ ಗೆದ್ದಿದ್ದರೆ, ಮೊದಲ ರನ್ನರ್ ಅಪ್ ಆಗಿ ಮಣಿಚಂದ್ರನ್ ಹೊರ ಹೊಮ್ಮಿದ್ದಾರೆ. ಅರ್ಚನಾ ಗೆಲುವು ಸಾಧಿಸುತ್ತಿದ್ದಂತೆಯೇ ಭಾರೀ ಮೊತ್ತದ ಹಣವೇ ಅವರ ಗೆಲುವಿಗೆ ಸಾಕ್ಷಿಯಾಗಿದೆ. ವಾರಕ್ಕೆ ಅವರು ಎರಡೂವರೆ ಲಕ್ಷ ಸಂಭಾವನೆಯನ್ನು ಪಡೆಯುತ್ತಿದ್ದರು ಎಂದು ಹೇಳಲಾಗುತ್ತಿದೆ.

    77 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದ ಅರ್ಚನಾ, ಟಫ್ ಕಂಟೆಸ್ಟೆಂಟ್ ಆಗಿದ್ದರು. ಕೊನೆಗೂ ಅವರ ಶ್ರಮಕ್ಕೆ ಪ್ರತಿಫಲ ಸಿಕ್ಕಿದೆ. ಬಿಗ್ ಬಾಸ್ ಟ್ರೋಫಿಯ ಜೊತೆಗೆ 50 ಲಕ್ಷ ರೂಪಾಯಿ ಬಹುಮಾನ ಮೊತ್ತ ಬಂದಿದೆ. ಅಲ್ಲದೇ, ಹಲವು ಉಡುಗೊರೆಯನ್ನೂ ಅವರಿಗೆ ನೀಡಲಾಗಿದೆ.

    ಕನ್ನಡದ ಬಿಗ್ ಬಾಸ್ ಕೂಡ ಫಿನಾಲೆ ಹಂತದಲ್ಲಿದೆ. ಇನ್ನೆರಡು ವಾರ ಕಳೆದರೆ, ಕನ್ನಡದ ಬಿಗ್ ಬಾಸ್ ಕೂಡ ಮುಗಿಯಲಿದೆ. ಈ ಬಾರಿ ಟ್ರೋಫಿ ಯಾರ ಪಾಲಾಗಲಿದೆ ಎನ್ನುವುದೇ ಸದ್ಯದ ಕುತೂಹಲ.

  • ಕಮಲ್ ಹಾಸನ್ ಚಿತ್ರಕ್ಕೆ ಸ್ಟಂಟ್ ಡೈರೆಕ್ಟರ್ ನಿರ್ದೇಶನ

    ಕಮಲ್ ಹಾಸನ್ ಚಿತ್ರಕ್ಕೆ ಸ್ಟಂಟ್ ಡೈರೆಕ್ಟರ್ ನಿರ್ದೇಶನ

    ನ್ನಡದ ಕೆಜಿಎಫ್ ಸೇರಿದಂತೆ ಹಲವಾರು ಚಿತ್ರಗಳಿಗೆ ಸಾಹಸ ನಿರ್ದೇಶನ ಮಾಡಿರುವ ಅಂಬುಮಣಿ (Ambumani) ಹಾಗೂ ಅರಿವುಮಣಿ (Arivumani) ಸಹೋದರರು, ಇದೀಗ ನಿರ್ದೇಶಕರಾಗಿ ಭಡ್ತಿ ಪಡೆದಿದ್ದಾರೆ. ಅದೂ ಕಮಲ್ ಹಾಸನ್ (Kamal Haasan) ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ಈಗಾಗಲೇ ಚಿತ್ರದ ಟೀಸರ್ ಕೂಡ ರಿಲೀಸ್ ಆಗಿದೆ.

    ಇದು ಕಮಲ್ ಹಾಸನ್ ಅವರ 237ನೇ ಚಿತ್ರವಾಗಿದ್ದು, ಸಿನಿಮಾದ ಫಸ್ಟ್ ಲುಕ್ ಕೂಡ ರಿಲೀಸ್ ಆಗಿದೆ. ಸದ್ಯಕ್ಕೆ ಚಿತ್ರಕ್ಕೆ ಕೆಎಚ್ 237 ಎಂದು ತಾತ್ಕಾಲಿಕ ಟೈಟಲ್ ಇಟ್ಟು ಕೆಲಸ ಶುರು ಮಾಡಿದ್ದಾರೆ. ಅಂಬುಮಣಿ ಹಾಗೂ ಅರಿವುಮಣಿ. ಈ ಸಹೋದರರು ಕಮಲ್ ಹಾಸನ್ ಅವರ ಅದೆಷ್ಟೋ ಚಿತ್ರಗಳಿಗೆ ಸಾಹಸ ದೃಶ್ಯಗಳ ಸಂಯೋಜನೆ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ.

     

    ಈ ಚಿತ್ರವು ರಾಜ್ ಕಮಲ್ ಫಿಲ್ಮ್ಸ್ ಇಂಟರ್ ನ್ಯಾಷನಲ್ ಲಾಂಛನದಲ್ಲಿ ಮೂಡಿ ಬರಲಿದ್ದು,  ಚಿತ್ರದಲ್ಲಿ ಕಮಲ್ ಹೊಸ ರೀತಿಯ ಪಾತ್ರವನ್ನು ನಿರ್ವಹಿಸಲಿದ್ದಾರೆ. ಆ ತುಣುಕನ್ನು ಸ್ವತಃ ಕಮಲ್ ಹಾಸನ್ ಅವರೇ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

  • ಕಮಲ್ ಹುಟ್ಟು ಹಬ್ಬದ ಪಾರ್ಟಿಯಲ್ಲಿ ಭಾಗಿಯಾದ ಶಿವಣ್ಣ

    ಕಮಲ್ ಹುಟ್ಟು ಹಬ್ಬದ ಪಾರ್ಟಿಯಲ್ಲಿ ಭಾಗಿಯಾದ ಶಿವಣ್ಣ

    ಭಾರತೀಯ ಸಿನಿಮಾ ರಂಗದ ಖ್ಯಾತ ತಾರೆ ಕಮಲ್ ಹಾಸನ್ ನಿನ್ನೆ ತಮ್ಮ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ಅವರ ಹುಟ್ಟು ಹಬ್ಬದ ಸಮಾರಂಭದಲ್ಲಿ ಕನ್ನಡದ ಹೆಸರಾಂತ ನಟ ಶಿವರಾಜ್ ಕುಮಾರ್ ಸುಹಾಸಿನಿ, ಖುಷ್ಬೂ, ಆಮೀರ್ ಖಾನ್, ಸೂರ್ಯ ಸೇರಿದಂತೆ ಹಲವರು ಗಣ್ಯರು ಭಾಗಿಯಾಗಿದ್ದರು. ನೆಚ್ಚಿನ ನಟನ ಹುಟ್ಟು ಹಬ್ಬಕ್ಕೆ ಶುಭ ಕೋರಿದ್ದಾರೆ.

    ಕಮಲ್ ಹಾಸನ್ ಹುಟ್ಟು ಹಬ್ಬ (Birthday). ಈ ಸಡಗರವನ್ನು ಇನ್ನಷ್ಟು ಹೆಚ್ಚಿಸುವುದಕ್ಕಾಗಿ ಅವರ ನಟನೆಯ 234ನೇ ಸಿನಿಮಾದ ಟೈಟಲ್ ಘೋಷಣೆ ಆಗಿದೆ. ಮಣಿರತ್ನಂ ನಿರ್ದೇಶನದಲ್ಲಿ ಮೂಡಿ ಬರಲಿರುವ ಈ ಚಿತ್ರಕ್ಕೆ ‘ಥಗ್ ಲೈಫ್’ (Thug’s Life) ಎಂದು ಹೆಸರಿಡಲಾಗಿದೆ. ಶೀರ್ಷಿಕೆಯ ಕಾರಣದಿಂದಾಗಿಯೇ ಈ ಸಿನಿಮಾ ಕುತೂಹಲ ಮೂಡಿಸಿದೆ.

    ಶಿವಣ್ಣ ನಟನೆ?

    ಜೈಲರ್ ಸಿನಿಮಾದ ಯಶಸ್ಸಿನ ನಂತರ ತಮಿಳಿನಲ್ಲಿ ಶಿವರಾಜ್ ಕುಮಾರ್ (Shivaraj Kumar) ಬೇಡಿಕೆ ಹೆಚ್ಚಾಗಿದೆ. ಜೈಲರ್ ಸಿನಿಮಾದ ಜೊತೆ ಜೊತೆಗೆ ಕ್ಯಾಪ್ಟನ್ ಮಿಲ್ಲರ್ ಸಿನಿಮಾದಲ್ಲಿ ಶಿವಣ್ಣ ನಟಿಸಿದ್ದರು. ಇದೀಗ ಕಮಲ್ ಹಾಸನ್ ನಟನೆಯ ಹೊಸ ಸಿನಿಮಾದಲ್ಲೂ ಶಿವರಾಜ್ ಕುಮಾರ್ ಪಾತ್ರ ಮಾಡಲಿದ್ದಾರಂತೆ. ಈಗಾಗಲೇ ಶಿವಣ್ಣ ಜೊತೆ ಮಾತುಕತೆ ಕೂಡ ನಡೆದಿದೆ ಎನ್ನುವ ಸುದ್ದಿಯಿದೆ.

    ಶಿವರಾಜ್ ಕುಮಾರ್ ಒಪ್ಪಿಕೊಂಡಿದ್ದಾರೆ ಎನ್ನಲಾದ ಸಿನಿಮಾ ವಿಶೇಷವಾಗಿದೆ. ನಿರ್ದೇಶಕ ಮಣಿರತ್ನಂ (Mani Ratnam) ಮತ್ತು ಕಮಲ್ ಹಾಸನ್ (Kamal Haasan) ‘ನಾಯಗನ್’ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಆನಂತರ ಈ ಜೋಡಿ ಮತ್ತೆ ಒಟ್ಟಾಗಿ ಕೆಲಸ ಮಾಡಲೇ ಇಲ್ಲ. ಇದೀಗ ಮೂರುವರೆ ದಶಕದ ಬಳಿಕ ಮತ್ತೆ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ.

    ಈ ಸಿನಿಮಾ ಶುರುವಾಗುವುದಕ್ಕೆ ಇನ್ನೂ ಹಲವು ತಿಂಗಳು ಬೇಕು. ಅದಕ್ಕೂ ಮುನ್ನ ಅನೇಕ ವಿಷಯಗಳು ಹೊರ ಬಂದಿವೆ. ಈ ಸಿನಿಮಾದಲ್ಲಿ ಸ್ಟಾರ್ ನಟರೇ ದಂಡೇ ಇರಲಿದ್ದು, ತ್ರಿಷಾ (Trisha) ನಾಯಕಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅಲ್ಲದೇ, ದುಲ್ಕರ್ ಸಲ್ಮಾನ್ (Dulquer Salmaan) ಕೂಡ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರಂತೆ.

     

    ಈ ಕುರಿತಂತೆ ಮೇಕಪ್ ಆರ್ಟಿಸ್ಟ್ ರಂಜಿತ್ ಅಂಬಾಡಿ ಎನ್ನುವವರು ಹಲವು ಮಾಹಿತಿಗಳನ್ನು ಹೊರಹಾಕಿದ್ದಾರೆ. ಕಮಲ್ ಹಾಸನ್ ಮತ್ತು ಮಣಿರತ್ನಂ ಕಾಂಬಿನೇಷನ್ ನ ಈ ಸಿನಿಮಾದಲ್ಲಿ ಇವರೆಲ್ಲ ಕೆಲಸ ಮಾಡಲಿದ್ದಾರೆ ಎಂದು ಸಣ್ಣ ಸುಳಿವು ಕೊಟ್ಟಿದ್ದಾರೆ. ಜೊತೆಗೆ ಇನ್ನೂ ಅಚ್ಚರಿಯ ಸಂಗತಿಗಳು ಈ ಸಿನಿಮಾದಲ್ಲಿ ಇರಲಿವೆ ಎಂದೂ ಅವರು ಹೇಳಿಕೊಂಡಿದ್ದಾರೆ.