Tag: Kamal Haasan

  • ಥಗ್‌ಲೈಫ್‌ಲ್ಲಿ ‘ಶುಗರ್ ಬೇಬಿ’ ತ್ರಿಷಾ ಮಿಂಚಿಂಗ್‌ – ವಿವಾದಕ್ಕೀಡಾಗುತ್ತಾ ಹಾಡು?

    ಥಗ್‌ಲೈಫ್‌ಲ್ಲಿ ‘ಶುಗರ್ ಬೇಬಿ’ ತ್ರಿಷಾ ಮಿಂಚಿಂಗ್‌ – ವಿವಾದಕ್ಕೀಡಾಗುತ್ತಾ ಹಾಡು?

    ಣಿರತ್ನಂ ನಿರ್ದೇಶನದ ಕಮಲ್ ಹಾಸನ್ (Kamal Haasan) ನಟಿಸಿರುವ ಬಹುನಿರೀಕ್ಷಿತ ‘ಥಗ್‌ಲೈಫ್’ (Thuglife) ಚಿತ್ರದ ʻಶುಗರ್‌ ಬೇಬಿʼ (Sugar Baby) ಹಾಡು ವಿವಾದಕ್ಕೀಡಾಗುವ ಸಾಧ್ಯತೆ ಇದೆ ಎಂಬ ಚರ್ಚೆ ಸಿನಿಪ್ರಿಯರಲ್ಲಿ ಶುರುವಾಗಿದೆ.

    ʻಶುಗರ್ ಬೇಬಿʼ ಎಂಬ ಪದವು ಸಾಮಾನ್ಯವಾಗಿ ಹಣಕ್ಕಾಗಿ ವಯಸ್ಸಾದ ಪುರುಷನೊಂದಿಗೆ ಕಿರಿಯ ಯುವತಿ ಹೊಂದಿರುವ ಸಂಬಂಧವನ್ನು ಸೂಚಿಸುತ್ತದೆ. ಇದರಿಂದ ಚಿತ್ರದಲ್ಲಿ ತ್ರಿಷಾ (Trisha) ಅವರನ್ನು ವಿವಾದಾತ್ಮಕ ಪಾತ್ರದಲ್ಲಿ ಚಿತ್ರಿಸಿರಬಹುದು ಎಂಬ ಊಹಾಪೋಹಕ್ಕೆ ಎಡೆಮಾಡಿಕೊಟ್ಟಿದೆ. ಮಂಗಳವಾರ ಹಾಡಿನ ಪ್ರೋಮೋ ಅನೇಕರ ಕುತೂಹಲ ಕೆರಳಿಸಿತ್ತು. ಇಂದು ಹಾಡು ಬಿಡುಗಡೆಯಾಗಲಿದ್ದು, ಮತ್ತಷ್ಟು ಚರ್ಚೆಗಳನ್ನು ಹುಟ್ಟುಹಾಕಬಹುದೇ ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ನಡೆಯುತ್ತಿದೆ. ಇದನ್ನೂ ಓದಿ: ತ್ರಿಷಾ ಜೊತೆ ರೊಮ್ಯಾನ್ಸ್.. ಅಭಿರಾಮಿಗೆ ಲಿಪ್‌ಲಾಕ್ – ಕಮಲ್ ಹಾಸನ್ ʻಥಗ್ ಲೈಫ್‌ʼ!

    ಚಿತ್ರದ ಸಂಗೀತ ಬಿಡುಗಡೆಯ ಭಾಗವಾಗಿ, ‘ಶುಗರ್ ಬೇಬಿ’ ಹಾಡು ಇಂದು ಸಂಜೆ 5 ಗಂಟೆಗೆ ಬಿಡುಗಡೆಯಾಗಲಿದೆ. ಇನ್ನೂ ಈ ಹಾಡಿನ ಶೀರ್ಷಿಕೆ ಮತ್ತು ನಟಿ ತ್ರಿಷಾ ಮಿಂಚಿಂಗ್‌ ದೃಶ್ಯಗಳ ಪ್ರೋಮೋ ಈಗಾಗಲೇ ಆರಂಭಿಕ ಸಂಚಲನ ಮೂಡಿಸಿದೆ.

    ಪ್ರಚೋದನಕಾರಿ ವಿಷಯಗಳನ್ನು ನಿಭಾಯಿಸುವಲ್ಲಿ ಹೆಸರುವಾಸಿಯಾದ ಮಣಿರತ್ನಂ ಮತ್ತು ಕಮಲ್ ಹಾಸನ್ ಅವರ ಹಿಂದಿನ ವಿಚಾರಗಳನ್ನು ಗಮನಿಸಿದರೆ, ಈ ಚಿತ್ರವೂ ಅದೇ ಹಾದಿಯಲ್ಲಿ ಸಾಗ್ತಿದಿಯೇ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ಅಲ್ಲದೇ ಮಣಿರತ್ನಂ ನೀವು ಚೆನ್ನಾಗಿದ್ದೀರಾ ಎಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.

    ಮೇ 17 ರಂದು ಟ್ರೈಲರ್‌ ರಿಲೀಸ್‌ ಆಗಿತ್ತು. ಇದರಲ್ಲಿ ತ್ರಿಷಾ ಜೊತೆ ರೊಮ್ಯಾನ್ಸ್.. ಅಭಿರಾಮಿಗೆ ಲಿಪ್‌ಲಾಕ್ ಮಾಡುವ ಸೀನ್‌ ಅಭಿಮಾನಿಗಳ ಕಾತರವನ್ನು ಹೆಚ್ಚಿಸಿತ್ತು. ಇನ್ನೂ ಸಿನಿ ರಸಿಕರ ಈ ಕಾತರ ತಣಿಯಲು ಜೂ.5ರ ವರೆಗೆ ಕಾಯಲೇ ಬೇಕಿದೆ! ಇದನ್ನೂ ಓದಿ: ಮಾದಕ ಲುಕ್‌ನಲ್ಲಿ ಮಿಂಚಿದ ರಶ್ಮಿಕಾ- ಶ್ರೀವಲ್ಲಿ ಬ್ಯೂಟಿಗೆ ಫ್ಯಾನ್ಸ್ ಫಿದಾ

  • ತ್ರಿಷಾ ಜೊತೆ ರೊಮ್ಯಾನ್ಸ್.. ಅಭಿರಾಮಿಗೆ ಲಿಪ್‌ಲಾಕ್ – ಕಮಲ್ ಹಾಸನ್ ʻಥಗ್ ಲೈಫ್‌ʼ!

    ತ್ರಿಷಾ ಜೊತೆ ರೊಮ್ಯಾನ್ಸ್.. ಅಭಿರಾಮಿಗೆ ಲಿಪ್‌ಲಾಕ್ – ಕಮಲ್ ಹಾಸನ್ ʻಥಗ್ ಲೈಫ್‌ʼ!

    ಮಲ್ ಹಾಸನ್ (Kamal Haasan) ಅಭಿನಯದ ʻಥಗ್‌ ಲೈಫ್ʼಚಿತ್ರದ (Thug Life) ಟ್ರೈಲರ್‌ ರಿಲೀಸ್‌ ಆಗಿದ್ದು, ತ್ರಿಷಾ ಜೊತೆ ರೊಮ್ಯಾನ್ಸ್.. ಅಭಿರಾಮಿಗೆ ಲಿಪ್‌ಲಾಕ್ ಮಾಡುವ ಸೀನ್‌ ಅಭಿಮಾನಿಗಳ ಕಾತುರ ಹೆಚ್ಚಿಸಿದೆ. ಸಿನಿ ರಸಿಕರ ಈ ಕಾತುರ ತಣಿಯಲು ಜೂ.5ರ ವರೆಗೆ ಕಾಯಲೇ ಬೇಕಿದೆ!

    ರಿಲೀಸ್‌ ಆಗಿರುವ ಟ್ರೈಲರ್‌ನಲ್ಲಿ ಕಮಲ್ ಹಾಸನ್ ನಟಿ ತ್ರಿಷಾ (Trisha) ಜೊತೆ ಪ್ರೇಮಿಯಂತೆ ಕಾಣಿಸಿಕೊಂಡಿದ್ದಾರೆ. ಇನ್ನೂ ನಟಿ ಅಭಿರಾಮಿ (Abhirami) ಜೊತೆ ಲಿಪ್‌ಲಾಕ್ ಮಾಡುವ ದೃಶ್ಯ ಪ್ರೇಕ್ಷಕರನ್ನು ಗೊಂದಲಕ್ಕೀಡು ಮಾಡಿದೆ. ಚಿತ್ರದಲ್ಲಿ ಸಿಂಬು ಜೊತೆ ತ್ರಿಷಾ ಜೋಡಿಯಾಗುತ್ತಾರೆ ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ ಕಮಲ್ ಜೊತೆ ತ್ರಿಷಾ ಅವರನ್ನು ನೋಡಿದ ನಂತರ ʻಏನಪ್ಪ ಈ ಥಗ್ ಲೈಫ್‌ʼ ಅಂತ ಜನ ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ನಾನಾ ರೀತಿಯ ಚರ್ಚೆಗಳು ಈಗಾಗಲೆ ಆರಂಭವಾಗಿದೆ.

    ಚೆನ್ನೈ, ಕಾಂಚಿಪುರಂ, ಪಾಂಡಿಚೇರಿ, ನವದೆಹಲಿಯಲ್ಲಿ ‘ಥಗ್ ಲೈಫ್’ ಚಿತ್ರದ ಚಿತ್ರೀಕರಣ ನಡೆದಿದೆ. ಈಗಾಗಲೇ ಚಿತ್ರದ 4 ಹಾಡುಗಳು ಬಿಡುಗಡೆಯಾಗಿ ಸದ್ದು ಮಾಡುತ್ತಿವೆ. ನೆಟ್‌ಫ್ಲಿಕ್ಸ್ ಸಂಸ್ಥೆ 149 ಕೋಟಿ ರೂ.ಗೆ ಚಿತ್ರದ ಓಟಿಟಿ ರೈಟ್ಸ್ ಖರೀದಿಸಿದೆ ಎಂದು ವರದಿಯಾಗಿದೆ.

    ರಾಜ್ ಕಮಲ್ ಪ್ರೊಡಕ್ಷನ್ಸ್ ನಿರ್ಮಿಸಿರುವ ಈ ಚಿತ್ರದಲ್ಲಿ ಕಮಲ್ ಹಾಸನ್, ಸಿಂಬು, ತ್ರಿಷಾ, ಅಭಿರಾಮಿ, ಜೋಜು ಜಾರ್ಜ್, ಅಶೋಕ್ ಸೆಲ್ವನ್, ಐಶ್ವರ್ಯ ಲಕ್ಷ್ಮಿ, ನಾಸರ್ ಸೇರಿದಂತೆ ಹಲವು ಪ್ರಮುಖ ತಾರೆಯರು ನಟಿಸಿದ್ದಾರೆ. ಚಿತ್ರಕ್ಕೆ ಮಣಿರತ್ನಂ ಹಾಗೂ ಕಮಲ್‌ ಇಬ್ಬರೂ ಕತೆ ಬರೆದಿದ್ದಾರೆ. ರೆಹಮಾನ್‌ ಸಂಗೀತ ಚಿತ್ರಕ್ಕೆ ದೊಡ್ಡ ಶಕ್ತಿಯಾಗುವ ನಿರೀಕ್ಷೆ ಇದೆ.

    ಕಳೆದ ವಾರವೇ ಚಿತ್ರದ ಟ್ರೈಲರ್ ಬಿಡುಗಡೆಗೆ ಸಿದ್ಧತೆ ನಡೆದಿತ್ತು. ಆದರೆ ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಳಿಕ ಭಾರತ-ಪಾಕ್ ಗಡಿಯಲ್ಲಿ ಘರ್ಷಣೆಯಿಂದಾಗಿ ಕಮಲ್‌ ಹಾಸನ್‌ ಮುಂದೂಡಿದ್ದರು.

  • ಮಲಯಾಳಂ ಚಿತ್ರರಂಗ ನನ್ನ ವೃತ್ತಿಜೀವನವನ್ನೇ ಬದಲಿಸಿದೆ: ಕಮಲ್ ಹಾಸನ್

    ಮಲಯಾಳಂ ಚಿತ್ರರಂಗ ನನ್ನ ವೃತ್ತಿಜೀವನವನ್ನೇ ಬದಲಿಸಿದೆ: ಕಮಲ್ ಹಾಸನ್

    ಲಯಾಳಂ ಚಿತ್ರರಂಗದಿಂದ ನಾನು ಬಹಳಷ್ಟು ಕಲಿತಿದ್ದೇನೆ ಎಂದು ಬಹುಭಾಷಾ ನಟ ಕಮಲ್ ಹಾಸನ್ (Kamal Haasan) ಹೇಳಿಕೊಂಡಿದ್ದಾರೆ.

    ಮಾಧ್ಯಮವೊಂದರ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ. ಈ ವೇಳೆ, ತಮ್ಮ ಸಿನಿಮಾದಲ್ಲಿನ ಆರಂಭಿಕ ದಿನಗಳು, ಕಲಿಯುವ ನಿರಂತರ ಬಯಕೆ ಮತ್ತು ಮಲಯಾಳಂ ಸಿನಿಮಾಗಳಿಂದ (Malayalam Cinema) ಕಲಿತ ಪ್ರಮುಖ ಪಾಠಗಳ ಬಗ್ಗೆ ವಿವರಿಸಿದ್ದಾರೆ.

    ಸೃಜನಾತ್ಮಕವಾದ ಹೊಸ ಮಾರ್ಗಗಳನ್ನು ಹುಡುಕುತ್ತಿದ್ದ ಸಮಯದಲ್ಲಿ ನಾನು ಮಲಯಾಳಂ ಚಿತ್ರಗಳತ್ತ ಮುಖ ಮಾಡಿದೆ. ಈ ನಿರ್ಧಾರ ಚಲನಚಿತ್ರ ನಿರ್ಮಾಣ ಮತ್ತು ನಟನೆಯ ಬಗ್ಗೆ ಇದ್ದ ದೃಷ್ಟಿಕೋನವನ್ನು ಸಂಪೂರ್ಣವಾಗಿ ಬದಲಾಯಿಸಿತು. ಈ ಹಂತವನ್ನು ನಾನು ವೃತ್ತಿಜೀವನದಲ್ಲಿ ನಿರ್ಣಾಯಕ ತರಬೇತಿ ಅವಧಿ ಎಂದು ಪರಿಗಣಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.

    ಕಮಲ್ ಹಾಸನ್ ಅವರ ಮಣಿರತ್ನಂ ನಿರ್ದೇಶನದ ಮತ್ತು ಎ.ಆರ್. ರೆಹಮಾನ್ ಸಂಗೀತ ಸಂಯೋಜನೆಯ ಬಹುಭಾಷಾ ಚಿತ್ರ ‘ಥಗ್ ಲೈಫ್’, ಜೂ. 5 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಸಿಲಂಬರಸನ್ (ಸಿಂಬು), ತ್ರಿಶಾ, ಅಶೋಕ್ ಸೆಲ್ವನ್ ಮತ್ತು ಅಭಿರಾಮಿ ಕೂಡ ನಟಿಸಿದ್ದು, ಅಭಿಮಾನಿಗಳಲ್ಲಿ ಹೆಚ್ಚಿನ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

    ಈ ಚಿತ್ರದ ಕತೆ, ಚಿತ್ರಕತೆಯನ್ನು ಮಣಿರತ್ನಂ ಮತ್ತು ಕಮಲ್ ಹಾಸನ್ ಬರೆದಿದ್ದು, ಮಣಿರತ್ನಂ ನಿರ್ದೇಶನದಲ್ಲಿ ರವಿ ಆರ್ ಚಂದ್ರನ್ ಅವರ ಛಾಯಾಗ್ರಹಣ, ಅನ್ವರಿವ್ ಅವರ ಸಾಹಸ ನಿರ್ದೇಶನವಿದೆ. ಅಂದಹಾಗೆ ಥಗ್ ಲೈಫ್ ಸಿನಿಮಾ ತಮಿಳು, ಕನ್ನಡ, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದೆ.

    ಚಿತ್ರದ ಪ್ರಚಾರ ಕಾರ್ಯಗಳು ಪ್ರಸ್ತುತ ಭರದಿಂದ ಸಾಗುತ್ತಿದೆ. ಇದರ ನಡುವೆ ಅವರು ಸಂದರ್ಶನದಲ್ಲಿ ಮಲಯಾಳಂ ಚಿತ್ರಗಳ ಬಗ್ಗೆ ಮಾತಾಡಿದ್ದು, ಅಲ್ಲಿಂದ ಕಲಿತ ವಿಚಾರಗಳ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ.

  • ಭಾರತ-ಪಾಕ್ ನಡುವೆ ಉದ್ವಿಗ್ನ ಹೊತ್ತಲ್ಲೇ ದಿಟ್ಟ ನಿರ್ಧಾರ ಕೈಗೊಂಡ ಕಮಲ್ ಹಾಸನ್

    ಭಾರತ-ಪಾಕ್ ನಡುವೆ ಉದ್ವಿಗ್ನ ಹೊತ್ತಲ್ಲೇ ದಿಟ್ಟ ನಿರ್ಧಾರ ಕೈಗೊಂಡ ಕಮಲ್ ಹಾಸನ್

    ಭಾರತ (India) ಮತ್ತು ಪಾಕ್ ನಡುವೆ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ. ಭಾರತೀಯ ಯೋಧರು ಪ್ರಾಣವನ್ನೂ ಲೆಕ್ಕಿಸದೇ ಪಾಕ್‌ಗೆ ತಕ್ಕ ಪಾಠ ಕಲಿಸುತ್ತಿದ್ದಾರೆ. ಇದರ ನಡುವೆ ನಟ ಕಮಲ್ ಹಾಸನ್ ದಿಟ್ಟ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ. ಮೇ 16ರಂದು ಆಯೋಜಿಸಿದ್ದ ‘ಥಗ್ ಲೈಫ್’ (Thug Life) ಆಡಿಯೋ ರಿಲೀಸ್ ಕಾರ್ಯಕ್ರಮವನ್ನು ರದ್ದು ಮಾಡಿದ್ದಾರೆ. ಇದನ್ನೂ ಓದಿ: 

    ಯುದ್ಧದ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದಂತೆ ಐಪಿಎಲ್ ಅನ್ನು ರದ್ದು ಮಾಡಿದೆ. ಅದೇ ರೀತಿ ಕಮಲ್ ಹಾಸನ್ ಅವರು ‘ಥಗ್ ಲೈಫ್’ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮವನ್ನು ಮುಂದೂಡಿದ್ದಾರೆ. ಈ ಕಾರ್ಯಕ್ರಮವು ಮೇ 16ರಂದು ನಡೆಯಬೇಕಿತ್ತು. ಆದರೀಗ ಭಾರತ, ಪಾಕ್ ನಡುವೆ ದಾಳಿ-ಪ್ರತಿದಾಳಿ ತೀವ್ರಗೊಂಡ ಹಿನ್ನೆಲೆ ಕಾರ್ಯಕ್ರಮ ರದ್ದು ಮಾಡಿದ್ದಾರೆ.ಇದನ್ನೂ ಓದಿ: ಭಾರತ-ಪಾಕ್ ಉದ್ವಿಗ್ನತೆ ನಡುವೆ ಖಡಕ್ ಸೂಚನೆ ಕೊಟ್ಟ ಯಶ್

    ದೇಶಕ್ಕಾಗಿ ನಮ್ಮ ಯೋಧರು ಪಾಕ್ ಜೊತೆ ಯುದ್ಧ ಮಾಡುವಾಗ ಸಿನಿಮಾ ಕಾರ್ಯಕ್ರಮದ ಮೂಲಕ ಸಂಭ್ರಮಿಸೋದು ಬೇಡವೆಂದು ಕಮಲ್ ಹಾಸನ್ ಈ ನಿರ್ಧಾರ ಕೈಗೊಂಡಿದ್ದಾರೆ. ಸದ್ಯದಲ್ಲೇ ಸಾಂಗ್ ಲಾಂಚ್ ಕಾರ್ಯಕ್ರಮದ ಹೊಸ ದಿನಾಂಕವನ್ನು ಚಿತ್ರತಂಡ ತಿಳಿಸಲಿದೆ.

    ಅಂದಹಾಗೆ, ‘ಥಗ್ ಲೈಫ್’ ಸಿನಿಮಾದಲ್ಲಿ ಕಮಲ್ ಹಾಸನ್ ಜೊತೆ ತ್ರಿಷಾ ಕೃಷ್ಣನ್, ಸಿಂಭು ಸೇರಿದಂತೆ ಅನೇಕರು ನಟಿಸಿದ್ದಾರೆ. ಈ ಸಿನಿಮಾಗೆ ಮಣಿರತ್ನಂ ಆ್ಯಕ್ಷನ್ ಕಟ್ ಹೇಳಿದ್ದಾರೆ.

  • ಕಮಲ್- ಮಣಿರತ್ನಂ ಕಾಂಬಿನೇಷನ್ ಚಿತ್ರದ ರಿಲೀಸ್ ಡೇಟ್ ಫಿಕ್ಸ್

    ಕಮಲ್- ಮಣಿರತ್ನಂ ಕಾಂಬಿನೇಷನ್ ಚಿತ್ರದ ರಿಲೀಸ್ ಡೇಟ್ ಫಿಕ್ಸ್

    ಮಲ್ ಹಾಸನ್ (Kamal Haasan) ಮತ್ತು ಮಣಿರತ್ನಂ (Mani Ratnam) ಅವರು 37 ವರ್ಷಗಳ ನಂತರ ‘ಥಗ್ ಲೈಫ್’ (Thug Life) ಚಿತ್ರದೊಂದಿಗೆ ಮತ್ತೆ ಒಂದಾಗಿದ್ದಾರೆ. ಈ ಚಿತ್ರವು 2025ರ ಜೂನ್ 5ರಂದು ಪ್ರಪಂಚದಾದ್ಯಂತ ಬಿಡುಗಡೆಯಾಗಲಿದ್ದು, ಇಂದು ಕಮಲ್ ಹಾಸನ್ ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿ ಬಿಡುಗಡೆ ದಿನಾಂಕವನ್ನು ಘೋಷಿಸಲಾಯಿತು.

    ರಾಜ್ ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ ಮತ್ತು ಮದ್ರಾಸ್ ಟಾಕೀಸ್ ಸಹ-ನಿರ್ಮಾಣದಲ್ಲಿ ಬರುತ್ತಿರುವ ಈ ಚಿತ್ರವನ್ನು ರೆಡ್ ಜೈಯಂಟ್ ಮೂವೀಸ್ ವಿತರಿಸಲಿದೆ‌. ಚಿತ್ರದ ತಾರಾಗಣ ಕಮಲ್ ಹಾಸನ್, ಸಿಲಂಬರಸನ್ ಟಿಆರ್, ತ್ರಿಷಾ, ಅಶೋಕ್ ಸೆಲ್ವನ್, ಐಶ್ವರ್ಯ ಲಕ್ಷ್ಮಿ, ಜೋಜು ಜಾರ್ಜ್, ಅಭಿರಾಮಿ ಮತ್ತು ನಾಸರ್ ಮತ್ತಿತರ ನಟರನ್ನು ಒಳಗೊಂಡಿದೆ. ಈ ಬಹು ನಿರೀಕ್ಷಿತ ಚಿತ್ರಕ್ಕೆ ದಿಗ್ಗಜ ಎ.ಆರ್. ರೆಹಮಾನ್ ಅವರ ಸಂಗೀತವಿದೆ.

    ಈ ಚಿತ್ರದ ಕತೆ, ಚಿತ್ರಕತೆಯನ್ನು ಮಣಿರತ್ನಂ ಮತ್ತು ಕಮಲ್ ಹಾಸನ್ ಬರೆದಿದ್ದು, ಮಣಿರತ್ನಂ ನಿರ್ದೇಶನದಲ್ಲಿ ರವಿ ಆರ್ ಚಂದ್ರನ್ ಅವರ ಸಿನಿಮಾಟೋಗ್ರಫಿ, ಅನ್ಬರಿವ್ ಅವರ ಆ್ಯಕ್ಷನ್ ಕೋರಿಯಾಗ್ರಫಿ ಈ ಚಿತ್ರಕ್ಕಿದೆ.

  • ಮಾಸ್ ಆಗಿ ಎಂಟ್ರಿ ಕೊಟ್ಟ ಕಮಲ್ ಹಾಸನ್- ‘ಥಗ್ ಲೈಫ್’ ಚಿತ್ರದ ಟೀಸರ್ ಔಟ್

    ಮಾಸ್ ಆಗಿ ಎಂಟ್ರಿ ಕೊಟ್ಟ ಕಮಲ್ ಹಾಸನ್- ‘ಥಗ್ ಲೈಫ್’ ಚಿತ್ರದ ಟೀಸರ್ ಔಟ್

    ಮಿಳಿನ ಸ್ಟಾರ್ ನಟ ಕಮಲ್ ಹಾಸನ್ (Kamal Haasan) ನಟನೆಯ ‘ಥಗ್ ಲೈಫ್’ (Thug Life) ಸಿನಿಮಾದ ಮೊದಲ ಟೀಸರ್ ರಿಲೀಸ್ ಆಗಿದೆ. ಪಕ್ಕಾ ಮಾಸ್ ಆಗಿ ನಟ ಎಂಟ್ರಿ ಕೊಟ್ಟಿದ್ದಾರೆ. ಕಮಲ್ ಹಾಸನ್ ಹುಟ್ಟುಹಬ್ಬದಂದು (ನ.7) ಚಿತ್ರದ ಟೀಸರ್ ರಿವೀಲ್ ಮಾಡುವ ಮೂಲಕ ಅವರ ಅಭಿಮಾನಿಗಳಿಗೆ ಚಿತ್ರತಂಡ ಸರ್ಪ್ರೈಸ್ ಗಿಫ್ಟ್ ಕೊಟ್ಟಿದೆ.

    ರಿಲೀಸ್ ಆಗಿರುವ ಟೀಸರ್‌ನಲ್ಲಿ ಕಮಲ್ ಹಾಸನ್ ಮಾಸ್ & ಕ್ಲಾಸ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ವಿಕ್ರಮ್ ಸಿನಿಮಾದ ನಂತರ ಮತ್ತೆ ಖಡಕ್ ಅವತಾರ ತಾಳಿದ್ದಾರೆ. ಈ ಚಿತ್ರದಲ್ಲಿ ಸಿಂಬು, ತ್ರಿಷಾ (Trisha Krishnan) ಕೂಡ ನಟಿಸಿದ್ದಾರೆ. ‘ಥಗ್ ಲೈಫ್’ ಚಿತ್ರವನ್ನು ಮಣಿರತ್ನಂ ನಿರ್ದೇಶನ ಮಾಡಿದ್ದಾರೆ. ಇದನ್ನೂ ಓದಿ:ಅದ್ಧೂರಿಯಾಗಿ 2ನೇ ಮದುವೆಯಾದ ‘ಜೊತೆ ಜೊತೆಯಲಿ’ ನಟಿ ಮಾನಸ

    ‘ಥಗ್ ಲೈಫ್’ ಚಿತ್ರ ತಮಿಳು, ಕನ್ನಡ ಸೇರಿದಂತೆ ಬಹುಭಾಷೆಗಳಲ್ಲಿ ರಿಲೀಸ್ ಆಗಲಿದೆ. ಮುಂದಿನ ವರ್ಷ ಜೂನ್ 5ರಂದು ರಿಲೀಸ್ ಆಗಲಿದೆ. ಹಲವು ವರ್ಷಗಳ ಬಳಿಕ ಕಮಲ್‌ ಮತ್ತು ಮಣಿರತ್ನಂ ಜೊತೆಯಾಗಿ ಕೆಲಸ ಮಾಡಿರುವ ಥಗ್‌ ಲೈಫ್‌ ಚಿತ್ರದ ಮೇಲೆ ಅಭಿಮಾನಿಗಳಿಗೆ ಬೆಟ್ಟದಷ್ಟು ನಿರೀಕ್ಷೆಯಿದೆ.

  • ಭರ್ತಿ 150 ಕೋಟಿಗೆ ಮಾರಾಟ ಆಯ್ತು ಕಮಲ್ ನಟನೆಯ `ಥಗ್ ಲೈಫ್’

    ಭರ್ತಿ 150 ಕೋಟಿಗೆ ಮಾರಾಟ ಆಯ್ತು ಕಮಲ್ ನಟನೆಯ `ಥಗ್ ಲೈಫ್’

    ಫ್ಟರ್ ಎ ಲಾಂಗ್‌ಟೈಂ ಮಣಿರತ್ನಂ (Mani Ratnam) ಹಾಗೂ ಕಮಲ್ ಹಾಸನ್ (Kamal Haasan) ಕಾಂಬಿನೇಷನ್‌ನಲ್ಲಿ `ಥಗ್ ಲೈಫ್ (Thug Life) ‘ ಸಿನಿಮಾ ಮೂಡಿ ಬರ್ತಿದೆ. ಸಿನಿಮಾ ರಿಲೀಸ್‌ಗೂ ಮುನ್ನವೇ ಭಾರಿ ಮೊತ್ತಕ್ಕೆ ಓಟಿಟಿ ರೈಟ್ಸ್ ಸೇಲ್ ಆಗಿರೋದು ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ. ಬರೋಬ್ಬರಿ 149.7 ಕೋಟಿಗೆ ಸಿನಿಮಾದ ಓಟಿಟಿ ಹಕ್ಕನ್ನ ನೆಟ್‌ಫ್ಲಿಕ್ಸ್ ಸಂಸ್ಥೆ ತನ್ನ ತನ್ನದಾಗಿಸಿಕೊಂಡಿದೆ.

    ಕಮಲ್ ಹಾಸನ್, ತ್ರಿಶಾ ಕೃಷ್ಣನ್, ಸಿಲಂಬರಸನ್, ಅಶೋಕ್ ಸೆಲ್ವನ್, ನಾಸರ್ ಸೇರಿದಂತೆ ಅತೀದೊಡ್ಡ ತಾರಾಗಣ `ಥಗ್ ಲೈಫ್’ ಸಿನಿಮಾದಲ್ಲಿದೆ. ಈಗಾಗಲೇ ಚಿತ್ರತಂಡ ಬಿಟ್ಟಿರುವ ಮೇಕಿಂಗ್‌ನಿಂದಲೇ ಇಡೀ ದೇಶದ ಗಮನಸೆಳೆದಿರುವ ಈ ಸಿನಿಮಾ ರಿಲೀಸ್‌ಗೂ ಮುನ್ನವೇ ಕ್ರೇಜ್ ಕ್ರಿಯೇಟ್ ಮಾಡಿದೆ. ಕಮಲ್ ಹಾಸನ್ ಫ್ಯಾನ್ಸ್ ಈ ಸುದ್ದಿ ಕೇಳಿ ರಣಕೇಕೆ ಹಾಕಿದ್ದಾರೆ.

    `ಪೊನ್ನಿಯನ್ ಸೆಲ್ವನ್’ ಪಾರ್ಟ್-2 ಸಿನಿಮಾದ ನಂತರ ಮಣಿರತ್ನಂ ನಿರ್ದೇಶನಕ್ಕೆ ಕೈಹಾಕಿದ ಸಿನಿಮಾ `ಥಗ್ ಲೈಫ್’. ಹೀಗಾಗಿನೇ ಸಿನಿಮಾ ರಿಲೀಸ್‌ಗೂ ಮುನ್ನವೇ ಭಾರಿ ಸೌಂಡ್ ಮಾಡ್ತಿದೆ. ಹತ್ತತ್ತಿರ 150 ಕೋಟಿಗೆ ಈ ಸಿನಿಮಾ ಓಟಿಟಿ ಹಕ್ಕು ಸೇಲ್ ಮಾಡಿ ಕಮಾಲ್ ಮಾಡ್ತಿದೆ. ಹಾಗಾಗಿ ಕಮಲ್ ಹಾಸನ್ ಹಾಗೂ ಮಣಿರತ್ನಂ ಕಾಂಬಿನೇಷನ್‌ಗೆ ಇರೋ ತಾಕತ್ತು ಇದೇ ಅಂತಾ ಅವರ ಅಭಿಮಾನಿ ಬಳಗ ಕೂಗಿ ಹೇಳುತ್ತಿದೆ.

    ಪ್ಯಾನ್ ಇಂಡಿಯಾ ಕಾನ್ಸೆಪ್ಟ್ನಲ್ಲಿ ತಯಾರಾಗಿರುವ `ಥಗ್ ಲೈಫ್’ ಸಿನಿಮಾ ಭಾರತದಾದ್ಯಂತ ಸುತ್ತಿ ಶೂಟಿಂಗ್ ಮಾಡಿದೆ. ಇನ್ನು ಥಿಯೇಟರ್‌ಗೆ ಬರುವ ಮುನ್ನವೇ ಭರ್ಜರಿ ಮೊತ್ತಕ್ಕೆ ಓಟಿಟಿ ಹಕ್ಕು ಮಾರಾಟವಾಗಿರೋದು ಇಡೀ ಚಿತ್ರತಂಡಕ್ಕೆ ಎಲ್ಲಿಲ್ಲದ ಸಂಭ್ರಮ. ರಿಲೀಸ್ ಆಗಿ ಬಾಕ್ಸಾಫೀಸ್‌ನಲ್ಲಿ ಹೇಗೆಲ್ಲ ಸದ್ದು ಮಾಡುತ್ತೆ ಕಾದು ನೋಡ್ಬೇಕು.

  • Bigg Boss Tamil 8: ದೊಡ್ಮನೆ ಆಟಕ್ಕೆ ವಿಜಯ್ ಸೇತುಪತಿ ಹೋಸ್ಟ್- ಪ್ರೋಮೋ ಔಟ್

    Bigg Boss Tamil 8: ದೊಡ್ಮನೆ ಆಟಕ್ಕೆ ವಿಜಯ್ ಸೇತುಪತಿ ಹೋಸ್ಟ್- ಪ್ರೋಮೋ ಔಟ್

    ತೆಲುಗಿನ ಬಿಗ್ ಬಾಸ್ ಸೀಸನ್ 8ಕ್ಕೆ ಈಗಾಗಲೇ ಅದ್ಧೂರಿಯಾಗಿ ಚಾಲನೆ ಸಿಕ್ಕಿದೆ. ಇತ್ತ ತಮಿಳು ಬಿಗ್ ಬಾಸ್ (Bigg Boss Tamil 8) ಆರಂಭಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಕಮಲ್ ಹಾಸನ್ ಬದಲು ಹೊಸ ನಿರೂಪಕನಾಗಿ ವಿಜಯ್ ಸೇತುಪತಿ (Vijay Sethupathi) ಎಂಟ್ರಿ ಕೊಟ್ಟಿರುವ ಪ್ರೋಮೋ ರಿಲೀಸ್ ಆಗಿದೆ. ಇದನ್ನೂ ಓದಿ:ಗಂಡು ಮಗುವಿಗೆ ಜನ್ಮ ನೀಡಿದ ಪ್ರಣೀತಾ ಸುಭಾಷ್

    ಕಮಲ್ ಹಾಸನ್ (Kamal Haasan) ಬಿಗ್ ಬಾಸ್‌ಗೆ ಗುಡ್ ಬೈ ಹೇಳಿದ ಬಳಿಕ ಯಾರು ನಿರೂಪಕರಾಗುತ್ತಾರೆ ಎಂಬ ಕುತೂಹಲಕ್ಕೆ ತೆರೆಬಿದ್ದಿದೆ. ದುಬಾರಿ ಸಂಭಾವನೆ ಪಡೆದು ವಿಜಯ್ ಸೇತುಪತಿ ಬಿಗ್ ಬಾಸ್‌ಗೆ ನಿರೂಪಕನಾಗಿ ಎಂಟ್ರಿ ಕೊಟ್ಟಿದ್ದಾರೆ. ವಾಹಿನಿ ರಿಲೀಸ್ ಮಾಡಿರುವ ಪ್ರೋಮೋದಲ್ಲಿ ಖಡಕ್ ಆಗಿ ನಟ ಕಾಣಿಸಿಕೊಂಡಿದ್ದಾರೆ. ಈ ಪ್ರೋಮೋ ನೋಡಿರುವ ಫ್ಯಾನ್ಸ್‌ಗೆ ಕಾರ್ಯಕ್ರಮದ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ.

    ಇತ್ತೀಚೆಗೆ 7 ವರ್ಷಗಳ ಹಿಂದೆ ಶುರುವಾದ ನನ್ನ ಬಿಗ್ ಬಾಸ್ ಪಯಣಕ್ಕೆ ಬ್ರೇಕ್ ನೀಡಲು ನಿರ್ಧರಿಸಿದ್ದೇನೆ ಎಂದು ಭಾರವಾದ ಹೃದಯದಿಂದ ನಿಮಗೆ ತಿಳಿಸುತ್ತಿದ್ದೇನೆ. ಈ ಮೊದಲೇ ಒಪ್ಪಿಕೊಂಡ ಸಿನಿಮಾಗಳ ಕೆಲಸದ ಕಾರಣದಿಂದ ನನಗೆ ಈ ಬಾರಿಯ ಬಿಗ್ ಬಾಸ್ ಶೋ ನಿರೂಪಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಕಮಲ್ ಹಾಸನ್ ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದರು.

    `ಬಿಗ್ ಬಾಸ್’ ಕಾರ್ಯಕ್ರಮದ ಮೂಲಕ ನಿಮ್ಮ ಮನ ಮತ್ತು ಮನೆ ತಲುಪಿದ್ದೇನೆ. ಅಗಾಧ ಪ್ರೀತಿ ಮತ್ತು ಕಾಳಜಿಯನ್ನು ತೋರಿಸಿದ್ದೀರಿ. ನಿಮ್ಮ ಬೆಂಬಲದಿಂದಾಗಿ ಬಿಗ್ ಬಾಸ್ ತಮಿಳು ರಿಯಾಲಿಟಿ ಶೋ ನನ್ನ ಪಾಲಿಗೆ ಬೆಸ್ಟ್ ಆಯಿತು. ಕಲಿಕೆಯ ಅನುಭವ ನೀಡಿದ ಈ ಶೋಗೆ ನಾನು ಋಣಿಯಾಗಿದ್ದೇನೆ. ಸ್ಪರ್ಧಿಗಳಿಂದ ಹಿಡಿದು ಪ್ರತಿಯೊಬ್ಬರಿಗೂ ನನ್ನ ಧನ್ಯವಾದಗಳು ಎಂದು ಕಮಲ್ ಹಾಸನ್ ಭಾವುಕವಾಗಿ ಬರೆದುಕೊಂಡಿದ್ದರು.

  • ಸಲ್ಮಾನ್ ಖಾನ್ ಸಿನಿಮಾದಲ್ಲಿ ಕಮಲ್ ಹಾಸನ್- ಅಟ್ಲಿ ಆ್ಯಕ್ಷನ್ ಕಟ್

    ಸಲ್ಮಾನ್ ಖಾನ್ ಸಿನಿಮಾದಲ್ಲಿ ಕಮಲ್ ಹಾಸನ್- ಅಟ್ಲಿ ಆ್ಯಕ್ಷನ್ ಕಟ್

    ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಸಕ್ಸಸ್‌ಗಾಗಿ ಹೊಸ ತಂತ್ರ ರೂಪಿಸಿದ್ದಾರೆ. ಸೌತ್ ನಿರ್ದೇಶಕರ ಜೊತೆ ಕೆಲಸ ಮಾಡಲು ಸಲ್ಮಾನ್ ಉತ್ಸಾಹ ತೋರಿಸುತ್ತಿದ್ದಾರೆ. ಸದ್ಯ ತಮಿಳು ಡೈರೆಕ್ಟರ್ ಅಟ್ಲಿ (Atlee) ನಿರ್ದೇಶನದಲ್ಲಿ ಮೂಡಿ ಬರಲಿರುವ ಸಲ್ಮಾನ್ ಖಾನ್ ಹೊಸ ಸಿನಿಮಾಗೆ ಕಮಲ್ ಹಾಸನ್ ಸಾಥ್‌ ನೀಡಲಿದ್ದಾರೆ.

    ಶಾರುಖ್ ಖಾನ್ ನಟಿಸಿದ್ದ ‘ಜವಾನ್’ ಚಿತ್ರಕ್ಕೆ ನಿರ್ದೇಶನ ಮಾಡಿ ಗೆದ್ದಿದ್ದ ತಮಿಳು ನಿರ್ದೇಶಕ ಅಟ್ಲಿ ಜೊತೆ ಸಿನಿಮಾ ಮಾಡಲು ಸಲ್ಮಾನ್ ಕೈಜೋಡಿಸಿದ್ದಾರೆ. ಇದೇ ಸಿನಿಮಾದಲ್ಲಿ ಪವರ್‌ಫುಲ್ ಪಾತ್ರವೊಂದರಲ್ಲಿ ಕಮಲ್ ಹಾಸನ್ (Kamal Haasan) ಕೂಡ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:ಮತ್ತೆ ಸಿನಿಮಾಗೆ ದೀಪಿಕಾ ದಾಸ್ ಕಮ್‌ಬ್ಯಾಕ್- ‘ಪಾರು ಪಾರ್ವತಿ’ ಸಿನಿಮಾದಲ್ಲಿ ನಟಿ

    ಸಲ್ಮಾನ್ ಮತ್ತು ಕಮಲ್ ಹಾಸನ್ ಇಬ್ಬರಿಗೂ ಸಮಾನವಾದ ಪಾತ್ರವಿದೆಯಂತೆ. ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ತಾರೆ ಎಂಬುದು ಲೇಟೆಸ್ಟ್ ನ್ಯೂಸ್. ಆದರೆ ಕಮಲ್ ಹಾಸನ್ ಈ ಸಿನಿಮಾದಲ್ಲಿ ನಟಿಸುವ ಕುರಿತು ಸುದ್ದಿ ನಿಜನಾ? ಎಂಬುದನ್ನು ನಟನಾಗಲಿ ಅಥವಾ ಡೈರೆಕ್ಟರ್ ಅಟ್ಲಿ ಆಗಲಿ ಅಧಿಕೃತವಾಗಿ ತಿಳಿಸಿಲ್ಲ. ಸದ್ಯ ಈ ಸುದ್ದಿ ತಿಳಿದು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಕೇಳಿದ ಸುದ್ದಿ ನಿಜವಾಗಲಿ ಎಂದು ಫ್ಯಾನ್ಸ್‌ ಎದುರು ನೋಡ್ತಿದ್ದಾರೆ.

    ಇನ್ನೂ ಸಾಲು ಸಾಲು ಸಿನಿಮಾಗಳು ಸೋತ ಬೆನ್ನಲ್ಲೇ ಸೌತ್‌ನ ಸ್ಟಾರ್ ನಿರ್ದೇಶಕ ಎ.ಆರ್ ಮುರುಗದಾಸ್ ಜೊತೆ ಸಲ್ಮಾನ್ ಖಾನ್ ಸಿನಿಮಾ ಮಾಡ್ತಿದ್ದಾರೆ. ಈ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದಾರೆ. `ಸಿಖಂದರ್’ ಆಗಿ ಸಲ್ಮಾನ್ ಮಿಂಚಲಿದ್ದು, ಈ ಸಿನಿಮಾದ ಚಿತ್ರೀಕರಣ ಕೂಡ ಭರದಿಂದ ಸಾಗುತ್ತಿದೆ.

  • ಕಮಲ್ ಹಾಸನ್ ಬದಲು ವಿಜಯ್ ಸೇತುಪತಿ ಎಂಟ್ರಿ

    ಕಮಲ್ ಹಾಸನ್ ಬದಲು ವಿಜಯ್ ಸೇತುಪತಿ ಎಂಟ್ರಿ

    ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ತಮಿಳಿನ ಬಿಗ್ ಬಾಸ್‌ನಿಂದ ಕಮಲ್ ಹಾಸನ್ (Kamal Haasan) ಹೊರಬಂದ ಬೆನ್ನಲ್ಲೇ ಮತ್ತೊಂದು ಇಂಟರೆಸ್ಟಿಂಗ್ ಸುದ್ದಿ ಸಿಕ್ಕಿದೆ. ಇದೀಗ ಕಮಲ್ ಹಾಸನ್ ಜಾಗಕ್ಕೆ ವಿಜಯ್ ಸೇತುಪತಿ (Vijay Sethupathi) ಎಂಟ್ರಿ ಕೊಡಲಿದ್ದಾರೆ ಎಂದು ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ:ಯಶ್ ನಟನೆಯ ‘ಟಾಕ್ಸಿಕ್’ ಚಿತ್ರಕ್ಕೆ ಬಾಲಿವುಡ್ ನಟ ಅಕ್ಷಯ್ ಒಬೆರಾಯ್ ಎಂಟ್ರಿ

    ಕಮಲ್ ಹಾಸನ್ ನಂತರ ಬಿಗ್ ಬಾಸ್ (Bigg Boss Tamil 8) ನಿರೂಪಣೆಗೆ ಯಾರು ಎಂಟ್ರಿ ಕೊಡುತ್ತಾರೆ ಎಂದು ಕುತೂಹಲ ಮೂಡಿತ್ತು. ಆದರೆ ಅದಕ್ಕೆಲ್ಲಾ ಈಗ ಉತ್ತರ ಸಿಕ್ಕಿದೆ. ಕೈತುಂಬಾ ಸಿನಿಮಾಗಳ ನಡುವೆ ವಿಜಯ್ ಸೇತುಪತಿ ಈಗ ಬಿಗ್ ಬಾಸ್ ಕಾರ್ಯಕ್ರಮವನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಅಷ್ಟಕ್ಕೂ ಈ ಸುದ್ದಿ ಬಿಗ್ ಬಾಸ್ ಟೀಮ್ ಕಡೆಯಿಂದ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.

    ಅಂದಹಾಗೆ, 7 ವರ್ಷಗಳ ಹಿಂದೆ ಶುರುವಾದ ನನ್ನ ಬಿಗ್ ಬಾಸ್ ಪಯಣಕ್ಕೆ ಬ್ರೇಕ್ ನೀಡಲು ನಿರ್ಧರಿಸಿದ್ದೇನೆ ಎಂದು ಭಾರವಾದ ಹೃದಯದಿಂದ ನಿಮಗೆ ತಿಳಿಸುತ್ತಿದ್ದೇನೆ. ಈ ಮೊದಲೇ ಒಪ್ಪಿಕೊಂಡ ಸಿನಿಮಾಗಳ ಕೆಲಸದ ಕಾರಣದಿಂದ ನನಗೆ ಈ ಬಾರಿಯ ಬಿಗ್ ಬಾಸ್ ಶೋ ನಿರೂಪಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಕಮಲ್ ಹಾಸನ್ ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದರು.

    `ಬಿಗ್ ಬಾಸ್’ ಕಾರ್ಯಕ್ರಮದ ಮೂಲಕ ನಿಮ್ಮ ಮನ ಮತ್ತು ಮನೆ ತಲುಪಿದ್ದೇನೆ. ಅಗಾಧ ಪ್ರೀತಿ ಮತ್ತು ಕಾಳಜಿಯನ್ನು ತೋರಿಸಿದ್ದೀರಿ. ನಿಮ್ಮ ಬೆಂಬಲದಿಂದಾಗಿ ಬಿಗ್ ಬಾಸ್ ತಮಿಳು ರಿಯಾಲಿಟಿ ಶೋ ನನ್ನ ಪಾಲಿಗೆ ಬೆಸ್ಟ್ ಆಯಿತು. ಕಲಿಕೆಯ ಅನುಭವ ನೀಡಿದ ಈ ಶೋಗೆ ನಾನು ಋಣಿಯಾಗಿದ್ದೇನೆ. ಸ್ಪರ್ಧಿಗಳಿಂದ ಹಿಡಿದು ಪ್ರತಿಯೊಬ್ಬರಿಗೂ ನನ್ನ ಧನ್ಯವಾದಗಳು ಎಂದು ಕಮಲ್ ಹಾಸನ್ ಹೇಳಿದ್ದರು.