ಬೆಂಗಳೂರು: ಕಮಲ್ ಹಾಸನ್ (Kamal Haasan) ಆಗ ಒಳ್ಳೆಯ ನಟ. ಈಗ ಚಾಲ್ತಿಯಲ್ಲಿ ಇಲ್ಲದ ನಾಣ್ಯ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಮಲ್ ಹಾಸನ್ ಅವರ ಕನ್ನಡ (Kannada) ವಿರೋಧಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಈ ವೇಳೆ, ಕಮಲ್ ಹಾಸನ್‌ಗೆ ಈಗ ಮೌಲ್ಯ ಇಲ್ಲ. ಸಿನಿಮಾಗಳು ಇಲ್ಲ, ರಾಜಕೀಯದಲ್ಲೂ ಸಕ್ಸಸ್ ಇಲ್ಲ. ಪ್ರಚಾರಕ್ಕಾಗಿ ಕಮಲ್ ಹಾಸನ್ ಅವಮಾನ ಮಾಡುವ ಕೆಲಸ ಮಾಡ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಕನ್ನಡ ಭಾಷೆ ಬಗ್ಗೆ ವಿವಾದಾತ್ಮಕ ಹೇಳಿಕೆ; ನೀವು ಕ್ಷಮೆ ಕೇಳಿದ್ರೆ ಕ್ಷಮಾ ಹಾಸನ್ ಆಗ್ತೀರಿ: ಹಂಸಲೇಖ
ಕರ್ನಾಟಕ, ತಮಿಳುನಾಡು ನಡುವೆ ಭಾಷೆ, ನೀರಿನ ವಿಷಯದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡ್ತಾರೆ. ನಾನು ಕಮಲ್ ಹಾಸನ್ ಹೇಳಿಕೆಯನ್ನು ಖಂಡಿಸುತ್ತೇನೆ. ಭಾಷಾ ತಜ್ಞರು, ಕನ್ನಡ ಮತ್ತು ತಮಿಳು ಭಾಷೆ ಅವಳಿ ಮಕ್ಕಳು ಎಂದು ಕರೆದಿದ್ದಾರೆ. ಅದೇ ನಮ್ಮ ನಿಲುವು ಎಂದಿದ್ದಾರೆ.
ತಪ್ಪು ಮಾಡಿದ್ಮೇಲೆ ಕ್ಷಮೆ ಕೇಳೋದ್ರಲ್ಲಿ ತಪ್ಪೇನಿದೆ ಎಂದು ಕಮಲ್ ಹಾಸನ್ (Kamal Haasan) ಕನ್ನಡ ಕಾಂಟ್ರವರ್ಸಿಗೆ ರಚಿತಾ ರಾಮ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮಿಳಿನಿಂದ ಕನ್ನಡ ಎಂದು ಹೇಳಿಕೆ ನೀಡಿದ್ದಲ್ಲದೇ ಕ್ಷಮೆ ಕೇಳಲ್ಲ ಎಂದು ಪಟ್ಟು ಹಿಡಿದ ಕಮಲ್ ಹಾಸನ್‌ಗೆ ರಚಿತಾ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ:ಹೃತಿಕ್ ರೋಷನ್‌ಗೆ ಪೃಥ್ವಿರಾಜ್ ಸುಕುಮಾರನ್ ಆ್ಯಕ್ಷನ್ ಕಟ್?
‘ಎಲ್ಲಾದರೂ ಇರು.. ಎಂತಾದರೂ ಇರು.. ಎಂದೆಂದಿಗೂ ನೀ ಕನ್ನಡವಾಗಿರು’ ಎಂಬ ಕವಿತೆಯ ಸಾಲುಗಳನ್ನು ಉಲ್ಲೇಖಿಸಿ ರಚಿತಾ ರಾಮ್ ಮಾತನಾಡಿ, ಯಾಕೆ ಈ ಹಾಡು ಹೇಳ್ತಿದ್ದೀನಿ ಅಂತ ಎಲ್ಲರಿಗೂ ಅರ್ಥವಾಗಿರುತ್ತದೆ. ಕನ್ನಡ, ಕರ್ನಾಟಕ ಅಂತ ಬಂದಾಗ ಇದು ಪ್ರತಿಯೊಬ್ಬ ಕನ್ನಡಿಗನಿಗೂ ಎಮೋಷನ್. ಹಾಗೆಯೇ ನಮ್ಮ ಕನ್ನಡ ಭಾಷೆಯ ಬಗ್ಗೆ ಯಾರಾದರೂ ಟೀಕೆ ಮಾಡ್ತಿದ್ದಾರೆ ಅಂದಾಗ ಸುಮ್ಮನೆ ಕೂರಲು ಆಗಲ್ಲ ಎಂದಿದ್ದಾರೆ. ಇದನ್ನೂ ಓದಿ:ಕ್ಷಮೆ ಕೇಳಲ್ಲ ಅಂದಾಗ ಬಿಸಿ ಮುಟ್ಟಿಸಬೇಕು- ಕಮಲ್ ಹಾಸನ್ ವಿರುದ್ಧ ವಸಿಷ್ಠ ಸಿಂಹ ಆಕ್ರೋಶ
ನಾವು ಕನ್ನಡದ ಜನ ವಿಶಾಲ ಹೃದಯದವರು. ಪ್ರತಿ ಭಾಷೆ ಸಿನಿಮಾವನ್ನು ನೋಡುತ್ತೇವೆ. ಪ್ರತಿ ಭಾಷೆ ಸಿನಿಮಾ ಹಾಡುಗಳನ್ನು ಕೇಳುತ್ತೇವೆ. ಬೇರೆ ಭಾಷೆಯ ಕಲಾವಿದರನ್ನು ಕೂಡ ನಾವು ಪ್ರೋತ್ಸಾಹಿಸುತ್ತೇವೆ. ಆದರೆ ನಮ್ಮ ಭಾಷೆಯ ಬಗ್ಗೆ ಯಾರಾದರೂ ಮಾತನಾಡ್ತಿದ್ದಾರೆ ಅಂದಾಗ ಯಾಕೆ ಧ್ವನಿಯೆತ್ತಬಾರದು. ನಾವಿಲ್ಲಿ ಯಾವ ಭಾಷೆಯ ಬಗ್ಗೆಯೂ ಕೆಟ್ಟದಾಗಿ ಮಾತನಾಡುತ್ತಿಲ್ಲ. ಎಲ್ಲಾ ಭಾಷೆಯನ್ನು ನಾವು ಗೌರವಿಸುತ್ತೇವೆ. ನಮ್ಮ ಭಾಷೆಯ ಬಗ್ಗೆ ಮಾತನಾಡಿದಾಗ ನಾವು ನಿಲ್ಲಬೇಕು ಎಂದರು.
ದೊಡ್ಡವರೆಲ್ಲ ಜಾಣರಲ್ಲ ಚಿಕ್ಕವರೆಲ್ಲ ಕೋಣರಲ್ಲ ಎಂದು ತಮಿಳು ನಟನಿಗೆ ರಚಿತಾ ಟಾಂಗ್ ಕೊಟ್ಟಿದ್ದಾರೆ. ಚಿಕ್ಕವರು ತಪ್ಪು ಮಾಡಿದಾಕ್ಷಣ ಕ್ಷಮೆ ಕೇಳೋವರೆಗೂ ದೊಡ್ಡವರು ಬಿಡಲ್ಲ. ಅದೇ ದೊಡ್ಡವರು ತಪ್ಪು ಮಾಡಿದ್ರೆ ಏನು ಮಾಡಬೇಕು. ತಪ್ಪು ಮಾಡಿದ್ಮೇಲೆ ಕ್ಷಮೆ ಕೇಳೋದ್ರಲ್ಲಿ ತಪ್ಪೇನಿದೆ. ಕನ್ನಡವನ್ನು ತಪ್ಪು ಮಾತನಾಡುವವರನ್ನು ನಾವು ತಿದ್ದಿ ಕಲಿಸುತ್ತೇವೆ. ಕನ್ನಡ ಭಾಷೆಯ ಬಗ್ಗೆ ತಪ್ಪಾಗಿ ಮಾತನಾಡಿರುವರನ್ನು ಏನು ಅಂತ ಹೇಳೋಣ ಎಂದು ನಟಿ ಪ್ರಶ್ನಿಸಿದ್ದಾರೆ. ಈಗ ನಮ್ಮ ಭಾಷೆಯ ಮೇಲಿರುವಂತಹ ಗೌರವ ಪ್ರೀತಿಯನ್ನು ತಿಳಿಸೋಣ ಏನ್ ಹೇಳ್ತೀರಾ ಎಂದಿದ್ದಾರೆ. ಈ ಮೂಲಕ ಕಮಲ್ ಹಾಸನ್ ಹೇಳಿಕೆ ತಪ್ಪು. ಕ್ಷಮೆಯಾಚಿಸಬೇಕು ಎಂದಿದ್ದಾರೆ ರಚಿತಾ.
ಇಂದು (ಮೇ 30) ಚೆನ್ನೈನಲ್ಲಿ ಕಮಲ್ ಹಾಸನ್ ಮಾತನಾಡಿ, ಕ್ಷಮೆ ಕೇಳಲ್ಲ ಎಂದು ಹೇಳಿ ಮತ್ತೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದು ಪ್ರಜಾಪ್ರಭುತ್ವ. ನಾನು ಕಾನೂನು ಮತ್ತು ನ್ಯಾಯವನ್ನು ನಂಬುತ್ತೇನೆ. ಕರ್ನಾಟಕ, ಆಂಧ್ರಪ್ರದೇಶ ಮತ್ತು ಕೇರಳದ ಮೇಲಿನ ನನ್ನ ಪ್ರೀತಿ ನಿಜ. ನಾನು ತಪ್ಪು ಮಾಡಿಲ್ಲ, ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ನನ್ನಿಂದ ತಪ್ಪಾಗಿದ್ರೆ ಕ್ಷಮೆ ಕೇಳುವೆ, ನನ್ನಿಂದ ತಪ್ಪು ಆಗಿಲ್ಲ. ನನ್ನ ನಿರ್ಧಾರಕ್ಕೆ ಬದ್ಧವಾಗಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಯಾವುದೇ ಬೆದರಿಕೆ, ಎಚ್ಚರಿಕೆಗೆ ನಾನು ಹೆದರುವುದಿಲ್ಲ. ಕಾನೂನು ಹಾಗೂ ನ್ಯಾಯದ ಮೇಲೆ ನಂಬಿಕೆ ಇಟ್ಟಿದ್ದೇನೆ ಎಂದು ಹೇಳಿದ್ದಾರೆ.
ತಮಿಳು ಭಾಷೆಯಿಂದ ಕನ್ನಡ ಹುಟ್ಟಿದ್ದು ಎಂಬ ಕಮಲ್ ಹಾಸನ್ ಹೇಳಿಕೆಗೆ ಕರ್ನಾಟಕದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ತಮ್ಮ ನಟನೆಯ ಥಗ್ ಲೈಫ್ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಕನ್ನಡದ ಹಿರಿಯ ನಟ ಶಿವರಾಜ್‌ಕುಮಾರ್ ಅವರ ಎದುರೇ ಕಮಲ್ ಹಾಸನ್ ಈ ಹೇಳಿಕೆ ನೀಡಿದ್ದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಕಮಲ್ ಹಾಸನ್ ಹೇಳಿಕೆ ಶುದ್ಧ ಸುಳ್ಳು. ಭಾಷಾ ಪ್ರಾವಿಣ್ಯತೆ ಇಲ್ಲದೇ ಈ ರೀತಿಯ ಉದ್ಧಟತನದ ಹೇಳಿಕೆ ನೀಡುವುದು ಸರಿಯಲ್ಲ ಎಂದು ಭಾಷಾ ವಿಜ್ಞಾನಿಗಳು ಖಂಡಿಸಿದ್ದಾರೆ. ನಟನ ಹೇಳಿಕೆಗೆ ಕನ್ನಡಪರ ಸಂಘಟನೆಗಳು ಆಕ್ರೋಶ ಹೊರಹಾಕಿವೆ. ಕೂಡಲೇ ಕನ್ನಡಿಗರ ಕ್ಷಮೆಯಾಚಿಸಿ, ಇಲ್ಲದಿದ್ದರೆ ನಿಮ್ಮ ಸಿನಿಮಾವನ್ನು ಕರ್ನಾಟಕದಲ್ಲಿ ಬ್ಯಾನ್ ಮಾಡಲಾಗುವುದು ಎಂದು ಹೋರಾಟಗಾರರು ನಟನಿಗೆ ಎಚ್ಚರಿಕೆ ನೀಡಿದ್ದಾರೆ.
ಕಮಲ್ ಹಾಸನ್ (Kamal Haasan) ಅವರನ್ನು ಅತಿಯಾಗಿ ಪ್ರೀತಿಸುತ್ತೇವೆ, ಹಾಗಂತ ಅವರು ಹೇಳಿದ್ದನ್ನು ಒಪ್ಪಲು ಆಗಲ್ಲ ಎಂದು ನಟನ ಕನ್ನಡ ವಿವಾದಕ್ಕೆ ವಸಿಷ್ಠ ಸಿಂಹ ಪ್ರತಿಕ್ರಿಯೆ ನೀಡಿದ್ದಾರೆ. ಕ್ಷಮೆ ಕೇಳಲ್ಲ ಎಂದು ಪಟ್ಟಹಿಡಿದಿರೋ ಕಮಲ್ ಹಾಸನ್ ವಿರುದ್ಧ ವಸಿಷ್ಠ ಸಿಂಹ (Vasishta Simha) ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ:ನಾನು ಬೆದರಿಕೆಗೆ ಹೆದರಲ್ಲ, ಕ್ಷಮೆ ಕೇಳಲ್ಲ- ಕಮಲ್ ಹಾಸನ್ ಉದ್ಧಟತನ
ಕಮಲ್ ಹಾಸನ್ ಕನ್ನಡ ವಿವಾದಕ್ಕೆ ವಸಿಷ್ಠ ಮಾತನಾಡಿ, ಪ್ರೀತಿಯಿದ್ದ ಕಡೆ ಕ್ಷಮೆ ಇರಬೇಕು. ಗೌರವನೂ ಇರಬೇಕು. ಅವರು ಆಡಿರುವ ಮಾತಿಗೆ ಕ್ಷಮೆ ಕೇಳಿದ್ರೆ ದೊಡ್ಡವರಾಗುತ್ತಿದ್ದರು. ನಾವೆಲ್ಲರೂ ಅವರನ್ನು ಇಷ್ಟಪಡುತ್ತೇವೆ. ಬೇಡದ ಜಾಗದಲ್ಲಿ ಬೇಡದ ಮಾತುಗಳನ್ನಾಡಬಾರದು. ಅದು ಅವರ ವಿವೇಚನೆಗೆ ಬಿಟ್ಟಿದ್ದು ಎಂದರು. ಇದನ್ನೂ ಓದಿ:ಕನ್ನಡಕ್ಕೆ ಅಪಮಾನ ಮಾಡಿದಾಗ ಶಿವರಾಜ್ ಕುಮಾರ್ ಮಾತಾಡಬೇಕು – ರವಿ ಗಣಿಗ
ಸಿನಿಮಾ ರಿಲೀಸ್ ವೇಳೆಯೇ ಭಾಷೆಯ ಸೆಂಟಿಮೆಂಟ್‌ನ ಕೆಣಕೋದು ತಪ್ಪು. ಸೂಕ್ಷ್ಮ ವಿಚಾರವನ್ನು ಅಂತಹ ವೇದಿಕೆಯಲ್ಲಿ ಬಳಸಿಕೊಂಡಿದ್ದು ತಪ್ಪು. ಕಮಲ್ ಹಾಸನ್ ಅವರನ್ನು ಅತಿಯಾಗಿ ಪ್ರೀತಿಸುತ್ತೇವೆ. ಹಾಗಂತ ಎಲ್ಲವನ್ನು ಒಪ್ಪೋಕೆ ಆಗಲ್ಲ. ತಪ್ಪು ತಪ್ಪೇ. ಇಷ್ಟು ವರ್ಷಗಳ ಕಾಲ ಸಿನಿಮಾಗಳ ಮೂಲಕ ನಮ್ಮೆಲ್ಲರ ಮನಸ್ಸನ್ನು ಗೆದ್ದಿದ್ದೀರಿ. ಹೀಗಿರುವಾಗ ಭಾಷೆಯ ವಿಚಾರವನ್ನು ಟ್ರಿಗರ್ ಮಾಡುವ ಅವಶ್ಯಕತೆಯಿರಲಿಲ್ಲ. ಪ್ರೀತಿಯನ್ನು ಪಡೆದುಕೊಳ್ಳೋದು, ಕಳೆದುಕೊಳ್ಳೋದು ನಮ್ಮ ಕೈಯಲ್ಲಿಯೇ ಇದೆ ಎಂದಿದ್ದಾರೆ.
ಭಾಷೆ ಎಲ್ಲರಿಗೂ ತಾಯಿ ಇದ್ದಂತೆ. ಎಲ್ಲಾ ಭಾಷೆಯನ್ನು ಗೌರವದಿಂದ ಕಾಣಬೇಕು. ಬೆಳೆದ್ಮೇಲೆ ಏನು ಬೇಕಾದರೂ ಮಾತನಾಡಿದ್ರೆ ನಡೆಯುತ್ತದೆ ಅನ್ನೋದಲ್ಲ. ಜವಾಬ್ದಾರಿಯಿಂದ ಮಾತನಾಡಬೇಕು. ನಮ್ಮನ್ನು ಅನುಸರಿಸುವವರಿಗೆ ನಾವು ಮಾದರಿಯಾಗಿರಬೇಕು. ಇದೀಗ ಕ್ಷಮೆ ಕೇಳಲ್ಲ ಅಂದಾಗ ನಾವು ಕೂಡ ಬಿಸಿ ಮುಟ್ಟಿಸುವ ಕೆಲಸ ಮಾಡಬೇಕು ಎಂದು ವಸಿಷ್ಠ ಸಿಂಹ ಮಾತನಾಡಿದ್ದಾರೆ.
ಇಂದು (ಮೇ 30) ಚೆನ್ನೈನಲ್ಲಿ ಕಮಲ್ ಹಾಸನ್ ಮಾತನಾಡಿ, ಕ್ಷಮೆ ಕೇಳಲ್ಲ ಎಂದು ಹೇಳಿ ಮತ್ತೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದು ಪ್ರಜಾಪ್ರಭುತ್ವ. ನಾನು ಕಾನೂನು ಮತ್ತು ನ್ಯಾಯವನ್ನು ನಂಬುತ್ತೇನೆ. ಕರ್ನಾಟಕ, ಆಂಧ್ರಪ್ರದೇಶ ಮತ್ತು ಕೇರಳದ ಮೇಲಿನ ನನ್ನ ಪ್ರೀತಿ ನಿಜ. ನಾನು ತಪ್ಪು ಮಾಡಿಲ್ಲ, ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ನನ್ನಿಂದ ತಪ್ಪಾಗಿದ್ರೆ ಕ್ಷಮೆ ಕೇಳುವೆ, ನನ್ನಿಂದ ತಪ್ಪು ಆಗಿಲ್ಲ. ನನ್ನ ನಿರ್ಧಾರಕ್ಕೆ ಬದ್ಧವಾಗಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಯಾವುದೇ ಬೆದರಿಕೆ, ಎಚ್ಚರಿಕೆಗೆ ನಾನು ಹೆದರುವುದಿಲ್ಲ. ಕಾನೂನು ಹಾಗೂ ನ್ಯಾಯದ ಮೇಲೆ ನಂಬಿಕೆ ಇಟ್ಟಿದ್ದೇನೆ ಎಂದು ಹೇಳಿದ್ದಾರೆ.
ತಮಿಳು ಭಾಷೆಯಿಂದ ಕನ್ನಡ ಹುಟ್ಟಿದ್ದು ಎಂಬ ಕಮಲ್ ಹಾಸನ್ ಹೇಳಿಕೆಗೆ ಕರ್ನಾಟಕದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ತಮ್ಮ ನಟನೆಯ ಥಗ್ ಲೈಫ್ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಕನ್ನಡದ ಹಿರಿಯ ನಟ ಶಿವರಾಜ್‌ಕುಮಾರ್ ಅವರ ಎದುರೇ ಕಮಲ್ ಹಾಸನ್ ಈ ಹೇಳಿಕೆ ನೀಡಿದ್ದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಕಮಲ್ ಹಾಸನ್ ಹೇಳಿಕೆ ಶುದ್ಧ ಸುಳ್ಳು. ಭಾಷಾ ಪ್ರಾವಿಣ್ಯತೆ ಇಲ್ಲದೇ ಈ ರೀತಿಯ ಉದ್ಧಟತನದ ಹೇಳಿಕೆ ನೀಡುವುದು ಸರಿಯಲ್ಲ ಎಂದು ಭಾಷಾ ವಿಜ್ಞಾನಿಗಳು ಖಂಡಿಸಿದ್ದಾರೆ. ನಟನ ಹೇಳಿಕೆಗೆ ಕನ್ನಡಪರ ಸಂಘಟನೆಗಳು ಆಕ್ರೋಶ ಹೊರಹಾಕಿವೆ. ಕೂಡಲೇ ಕನ್ನಡಿಗರ ಕ್ಷಮೆಯಾಚಿಸಿ, ಇಲ್ಲದಿದ್ದರೆ ನಿಮ್ಮ ಸಿನಿಮಾವನ್ನು ಕರ್ನಾಟಕದಲ್ಲಿ ಬ್ಯಾನ್ ಮಾಡಲಾಗುವುದು ಎಂದು ಹೋರಾಟಗಾರರು ನಟನಿಗೆ ಎಚ್ಚರಿಕೆ ನೀಡಿದ್ದಾರೆ.
– ಕನ್ನಡದ ಅನ್ನ ತಿನ್ನೋರು ಕನ್ನಡದ ಬಗ್ಗೆ ಮಾತಾಡಿದಾಗ ಖಂಡಿಸಬೇಕು ಎಂದ ಶಾಸಕ
ಬೆಂಗಳೂರು: ಕನ್ನಡಕ್ಕೆ ಯಾರಾದರೂ ಅಪಮಾನ ಮಾಡಿದಾಗ ಶಿವರಾಜ್ ಕುಮಾರ್ (Shivaraj Kumar) ಮಾತಾಡಬೇಕು ಎಂದು ಶಾಸಕ ರವಿ ಗಣಿಗ (Ravi Ganiga) ವಾಗ್ದಾಳಿ ನಡೆಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಕ್ಷಮೆ ಕೇಳಲ್ಲ ಎನ್ನುವ ಕಮಲ್ ಹಾಸನ್ (Kamal Haasan) ಉದ್ಧಟತನ ವಿಚಾರವಾಗಿ, ಅವರು ನಾಲಿಗೆ ಬಿಗಿ ಹಿಡಿದು ಮಾತಾಡಬೇಕು. ಕಮಲ್ ಅಂದರೆ ತಮಿಳಿನಲ್ಲಿ ತೇವರ್ ಎಂದರ್ಥ. ಹಾಗಾದ್ರೆ ತೇವರ್ ಹಾಸನ್ ಎಂದು ಹೆಸರು ಇಟ್ಟುಕೊಳ್ಳಿ. ಇವೆಲ್ಲಾ ದುರಹಂಕಾರದ ಮಾತುಗಳು. ನಟ ಕಮಲ್ ಹಾಸನ್‌ರನ್ನ ಶಿವರಾಜ್ ಕುಮಾರ್ ಅಪ್ಪಿಕೊಳ್ಳೋದು ಸರಿಯಲ್ಲ. ಕನ್ನಡಕ್ಕೆ ಅಪಮಾನ ಮಾಡಿದಾಗ ಅವರು ಮಾತಾಡಬೇಕು. ಆದರೆ ಅವರನ್ನು ರಕ್ಷಣೆ ಮಾಡುತ್ತಿದ್ದಾರೆ, ಇದು ಸರಿಯಲ್ಲ ಎಂದು ಕಿಡಿಕಾರಿದರು.ಇದನ್ನೂ ಓದಿ: ಪ್ರಧಾನಿ ಮೋದಿ ಪಾದ ಮುಟ್ಟಿ ನಮಸ್ಕರಿಸಿದ ವೈಭವ್ ಸೂರ್ಯವಂಶಿ
ಹೊಸೂರು ಹಿಂದೆ ಮೈಸೂರು (Mysuru) ಭಾಗವಾಗಿತ್ತು. ಹಾಗಾದರೆ ಅದನ್ನು ಕೊಟ್ಟು ಬಿಡಲಿ. ಕಮಲ್ ಹಾಸನ್ ಕೂಡಲೇ ಕ್ಷಮೆ ಕೇಳಬೇಕು. ಇಲ್ಲದೆ ಹೋದರೆ ಸಿನಿಮಾ ರಿಲೀಸ್ ಮಾಡಲು ಬಿಡುವುದಿಲ್ಲ. ವಾಣಿಜ್ಯ ಮಂಡಳಿಯಿಂದ ಬೆಣ್ಣೆ ಹಚ್ಚುವ ಮಾತು ಬೇಡ. ಕೂಡಲೇ ಸಿನಿಮಾ ಬ್ಯಾನ್ ಮಾಡಲಿ. ಇಲ್ಲದೆ ಹೋದರೆ ಸರ್ಕಾರ ಅವರ ಸಿನಿಮಾ ಬ್ಯಾನ್ ಮಾಡಬೇಕು ಎಂದು ಆಗ್ರಹಿಸಿದರು.
ರಮ್ಯ, ಶಿವರಾಜ್ ಕುಮಾರ್ ಯಾಕೆ ಮಾತನಾಡುತ್ತಿಲ್ಲ ಎಂದು ಗೊತ್ತಿಲ್ಲ. ಕನ್ನಡದ ಅನ್ನ ತಿನ್ನೋರು ಕನ್ನಡದ ಬಗ್ಗೆ ಮಾತನಾಡಿದಾಗ ಅದನ್ನ ಖಂಡಿಸಬೇಕು. ಮೊದಲು ನಟರು ಬೆಣ್ಣೆ ಹಚ್ಚುವುದನ್ನು ಬಿಡಬೇಕು. ದರ್ಶನ್ ಖಂಡಿಸಿರುವುದನ್ನು ನೋಡಿದ್ದೇನೆ. ಬೇರೆಯವರು ಅದಕ್ಕೆ ಟಾಂಗ್ ಕೊಡುವ ಮನಸ್ಥಿತಿ ಬೆಳೆಸಿಕೊಳ್ಳಬೇಕು ಎಂದು ಆಕ್ರೋಶ ಹೊರಹಾಕಿದರು.
ಏನಿದು ವಿವಾದ?
ಮೇ 27ರಂದು `ಥಗ್ ಲೈಫ್’ (Thug Life) ಸಿನಿಮಾದ ಪ್ರಚಾರಕ್ಕಾಗಿ ಚಿತ್ರತಂಡ ಬೆಂಗಳೂರಿಗೆ ಆಗಮಿಸಿತ್ತು. ಸಿನಿಮಾದ ನಾಯಕ ಕಾಲಿವುಡ್ ನಟ ಕಮಲ್ ಹಾಸನ್ ಅವರು ಕೂಡ ಆಗಮಿಸಿದ್ದರು. ಈ ವೇಳೆ ಕಮಲ್ ಹಾಸನ್ `ತಮಿಳಿನಿಂದ ಕನ್ನಡ ಹುಟ್ಟಿದ್ದು’ ಎಂದು ಹೇಳಿಕೆ ನೀಡುವ ಮೂಲಕ ವಿವಾದ ಹುಟ್ಟುಹಾಕಿದ್ದರು. ಈ ಕುರಿತು ಇತ್ತೀಚಿಗೆ ನಡೆದ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ್ದ ಅವರು, ನಾನು ಹೇಳಿದ್ದು ನನ್ನ ಪ್ರಕಾರ ಸರಿ, ನಾನು ಕ್ಷಮೆ ಕೇಳಲ್ಲ ಎಂದು ಹೇಳಿದ್ದರು.
ಇಂದು ಮತ್ತೆ ಪ್ರತಿಕ್ರಿಯಿಸಿದ ಕಮಲ್ ಹಾಸನ್, ನಾನು ಕಾನೂನು ಮತ್ತು ನ್ಯಾಯವನ್ನು ನಂಬುತ್ತೇನೆ. ಕರ್ನಾಟಕ, ಆಂಧ್ರಪ್ರದೇಶ ಮತ್ತು ಕೇರಳದ ಮೇಲಿನ ನನ್ನ ಪ್ರೀತಿ ನಿಜ. ನಾನು ತಪ್ಪು ಮಾಡಿಲ್ಲ, ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ನನ್ನಿಂದ ತಪ್ಪಾಗಿದ್ರೆ ಕ್ಷಮೆ ಕೇಳುವೆ, ನನ್ನಿಂದ ತಪ್ಪು ಆಗಿಲ್ಲ. ನನ್ನ ನಿರ್ಧಾರಕ್ಕೆ ಬದ್ಧವಾಗಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದಾರೆ.ಇದನ್ನೂ ಓದಿ: ಹೆಚ್‌ಎಂಟಿ ಡಿನೋಟಿಫಿಕೇಷನ್ ಪ್ರಕರಣ – IFS ಅಧಿಕಾರಿ ಅಮಾನತಿಗೆ ಈಶ್ವರ್ ಖಂಡ್ರೆ ಶಿಫಾರಸು
ಇಂದು (ಮೇ 30) ಚೆನ್ನೈನಲ್ಲಿ ಕಮಲ್ ಹಾಸನ್ ಮಾತನಾಡಿ, ಇದು ಪ್ರಜಾಪ್ರಭುತ್ವ. ನಾನು ಕಾನೂನು ಮತ್ತು ನ್ಯಾಯವನ್ನು ನಂಬುತ್ತೇನೆ. ಕರ್ನಾಟಕ, ಆಂಧ್ರಪ್ರದೇಶ ಮತ್ತು ಕೇರಳದ ಮೇಲಿನ ನನ್ನ ಪ್ರೀತಿ ನಿಜ. ನಾನು ತಪ್ಪು ಮಾಡಿಲ್ಲ, ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ನನ್ನಿಂದ ತಪ್ಪಾಗಿದ್ರೆ ಕ್ಷಮೆ ಕೇಳುವೆ, ನನ್ನಿಂದ ತಪ್ಪು ಆಗಿಲ್ಲ. ನನ್ನ ನಿರ್ಧಾರಕ್ಕೆ ಬದ್ಧವಾಗಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದಾರೆ.
ತಮಿಳು ಭಾಷೆಯಿಂದ ಕನ್ನಡ ಹುಟ್ಟಿದ್ದು ಎಂಬ ಕಮಲ್ ಹಾಸನ್ ಹೇಳಿಕೆಗೆ ಕರ್ನಾಟಕದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ತಮ್ಮ ನಟನೆಯ ‘ಥಗ್ ಲೈಫ್’ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಕನ್ನಡದ ಹಿರಿಯ ನಟ ಶಿವರಾಜ್‌ಕುಮಾರ್ ಅವರ ಎದುರೇ ಕಮಲ್ ಹಾಸನ್ ಈ ಹೇಳಿಕೆ ನೀಡಿದ್ದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಕಮಲ್ ಹಾಸನ್ ಹೇಳಿಕೆ ಶುದ್ಧ ಸುಳ್ಳು. ಭಾಷಾ ಪ್ರಾವಿಣ್ಯತೆ ಇಲ್ಲದೇ ಈ ರೀತಿಯ ಉದ್ಧಟತನದ ಹೇಳಿಕೆ ನೀಡುವುದು ಸರಿಯಲ್ಲ ಎಂದು ಭಾಷಾ ವಿಜ್ಞಾನಿಗಳು ಖಂಡಿಸಿದ್ದಾರೆ. ನಟನ ಹೇಳಿಕೆಗೆ ಕನ್ನಡಪರ ಸಂಘಟನೆಗಳು ಆಕ್ರೋಶ ಹೊರಹಾಕಿವೆ. ಕೂಡಲೇ ಕನ್ನಡಿಗರ ಕ್ಷಮೆಯಾಚಿಸಿ, ಇಲ್ಲದಿದ್ದರೆ ನಿಮ್ಮ ಸಿನಿಮಾವನ್ನು ಕರ್ನಾಟಕದಲ್ಲಿ ಬ್ಯಾನ್ ಮಾಡಲಾಗುವುದು ಎಂದು ಹೋರಾಟಗಾರರು ನಟನಿಗೆ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು: ನಟ ಕಮಲ್ ಹಾಸನ್ (Kamal Haasan) ಭಾವಚಿತ್ರಕ್ಕೆ ಬೆಂಕಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದ ಕನ್ನಡ ಪರ ಸಂಘಟನೆಯ ಇಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಾಗಿದೆ.
ನಟ ಕಮಲ್ ಹಾಸನ್ ಅವರ ತಮಿಳಿನಿಂದಲೇ ಕನ್ನಡ ಹುಟ್ಟಿದ್ದು ಎಂಬ ಹೇಳಿಕೆ ರಾಜ್ಯದಲ್ಲಿ ತ್ರೀವ ಆಕ್ರೋಶ ಹುಟ್ಟುಹಾಕಿದೆ. ಹೇಳಿಕೆ ಖಂಡಿಸಿ ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ಬಸವೇಶ್ವರ ನಗರದ (Basaveshwar Nagar) ಪವಿತ್ರ ಪ್ಯಾರಡೈಸ್ ಬಳಿ ನಟನ ಭಾವಚಿತ್ರಕ್ಕೆ ಬೆಂಕಿ ಹಾಕಿ ಪ್ರತಿಭಟಿಸಿದ್ದರು.ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ಗುಡ್ಡ ಕುಸಿತ, ಪ್ರಾಣಹಾನಿ – ರಕ್ಷಣಾ ಕಾರ್ಯಕ್ಕೆ ಯು.ಟಿ ಖಾದರ್ ಸೂಚನೆ
ಪೊಲೀಸರ ಅನುಮತಿ ಪಡೆಯದೇ ರಸ್ತೆಯಲ್ಲಿ ಬೆಂಕಿ ಹಾಕಿ ಆಕ್ರೋಶ ವ್ಯಕ್ತಪಡಿಸಿರುವ ಆರೋಪದ ಬೆನ್ನಲ್ಲೇ ಇದೀಗ ಕನ್ನಡ ಪರ ಸಂಘಟನೆಯ ಕಾರ್ಯಕರ್ತರಾದ ರವಿಕುಮಾರ್ ಹಾಗೂ ಬಸವೇಶ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಸದ್ಯ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು, ನೋಟಿಸ್ ಕೊಟ್ಟು ಕಳುಹಿಸಿದ್ದಾರೆ.
ಏನಿದು ವಿವಾದ?
ಮೇ 27ರಂದು `ಥಗ್ ಲೈಫ್’ (Thug Life) ಸಿನಿಮಾದ ಪ್ರಚಾರಕ್ಕಾಗಿ ಚಿತ್ರತಂಡ ಬೆಂಗಳೂರಿಗೆ ಆಗಮಿಸಿತ್ತು. ಸಿನಿಮಾದ ನಾಯಕ ಕಾಲಿವುಡ್ ನಟ ಕಮಲ್ ಹಾಸನ್ ಅವರು ಕೂಡ ಆಗಮಿಸಿದ್ದರು. ಈ ವೇಳೆ ಕಮಲ್ ಹಾಸನ್ `ತಮಿಳಿನಿಂದ ಕನ್ನಡ ಹುಟ್ಟಿದ್ದು’ ಎಂದು ಹೇಳಿಕೆ ನೀಡುವ ಮೂಲಕ ವಿವಾದ ಹುಟ್ಟುಹಾಕಿದ್ದರು.ಇದನ್ನೂ ಓದಿ: ಕಮಲ್ ಹಾಸನ್ ಬ್ಯಾನರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ
ನೀವು ಕ್ಷಮೆ ಕೇಳಿದರೆ ಕ್ಷಮಾ ಹಾಸನ್ ಆಗುತ್ತೀರಿ. ಇಲ್ಲ ಅಂದ್ರೆ ಆ ಹಾಸನ್ ಆಗುತ್ತೀರಿ ಎಂದು ಕಮಲ್ ಹಾಸನ್ (Kamal Haasan)ವಿವಾದಾತ್ಮಕ ಹೇಳಿಕೆಗೆ ಸಂಗೀತ ನಿರ್ದೇಶಕ ಹಂಸಲೇಖ (Hamsalekha) ಕಿಡಿಕಾರಿದ್ದಾರೆ.
ಕನ್ನಡ ತಮಿಳಿನಿಂದ ಹುಟ್ಟಿದ್ದು ಎಂಬ ನಟ ಕಮಲ್ ಹಾಸನ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಕಮಲ್ ಹಾಸನ್ ಅವರನ್ನು ‘ಮಿಸ್ಟರ್ ತಮಿಳು ಹಾಸನ್’ ಎಂದು ಕರೆದರು. ತಮಿಳು ಮುಖ್ಯಮಂತ್ರಿ ಸ್ಟಾಲಿನ್ ಅವರು ಇಡೀ ದಕ್ಷಿಣ ಭಾರತವನ್ನು ಒಂದುಗೂಡಿಸಬೇಕು ಎಂಬ ಆಶಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಕನಸು ಕಟ್ಟುತ್ತಿದ್ದಾರೆ. ತೆಂಕಣವನ್ನು ಕಟ್ಟಬೇಕು ಅನ್ನೋದು ಸ್ಟಾಲಿನ್ ಕನಸು. ಅವರ ಕನಸಿಗೆ ಕಮಲ್ ಮಾತು ಸಹಾಯ ಮಾಡಬೇಕಿತ್ತು. ನೀವು ಆ ಪಕ್ಷದ ಮಿತ್ರ ಪಕ್ಷ. ನೀವು ಒಳ್ಳೆಯ ಮಾತುಗಳನ್ನು ಆಡಬೇಕು. ಯೋಚಿಸಿ ಮಾತಾಡಬೇಕು ಎಂದರು. ಇದನ್ನೂ ಓದಿ: ಕಮಲ್ ಹಾಸನ್ ಪರ ಬ್ಯಾಟ್ ಬೀಸಿದ ರಮ್ಯಾ – ಸಿನಿಮಾ ಬಹಿಷ್ಕರಿಸುವುದು ಸ್ವಲ್ಪ ಜಾಸ್ತಿ ಆಯ್ತು ಅಲ್ಲವೇ? ಎಂದ ನಟಿ
ನಾನು ಕನ್ನಡಿಗರು, ಭಾಷಾ ಪ್ರಿಯರು. ಭಾಷಾ ಅಂಧತೆ ನಮಗಿಲ್ಲ. ನಮ್ಮ ಕನ್ನಡ ದೇಶದ ಸಾಂಸ್ಕೃತಿ ರಾಯಭಾರಿ ಬಸವಣ್ಣ. ಬಸವಣ್ಣ ನಮಗೆ ಕೊಟ್ಟಿದ್ದು ವಚನಗಳು. ನಾವು ವಚನಗಳಿಗೆ ಯಜಮಾನರು. ವಚನಗಳು ಅಂದರೆ ಮಾತು ಸ್ವಾಮಿ. ಮಾತು ಎಚ್ಚರಿಕೆಯಿಂದ ಆಡಬೇಕು ಎಂದು ಹೇಳಿದರು. ಇದನ್ನೂ ಓದಿ: ನಟ ಕಮಲ್ ಹಾಸನ್ ಕ್ಷಮೆಯಾಚನೆಗೆ ಆಗ್ರಹ – ಫಿಲಂ ಚೇಂಬರ್‌ಗೆ ಕರವೇ ಮುತ್ತಿಗೆ
ತಮಿಳಿಗೆ ಲಿಪಿಯನ್ನು ಕೊಟ್ಟಿದ್ದು ಕನ್ನಡ ಭಾಷೆ ಎಂದು ವಿದ್ವಾಂಸರು ಹೇಳುತ್ತಾರೆ. ಅದರ ಬಗ್ಗೆ ಸ್ವಲ್ಪ ವಿಚಾರಿಸಿ ನೋಡಿ. ನಾವು ಕಲಾವಿದರು, ತೆಂಕಣವನ್ನು ಕಟ್ಟುವ ಕನಸು ಹೊತ್ತವರು. ಎಲ್ಲರೂ ಒಟ್ಟಾಗಿ ಬದುಕಬೇಕು ಅನ್ನುವ ಭಾರತಿಯರು. ಹಾಗಾಗಿ ನೀವು ದಯವಿಟ್ಟು ಕ್ಷಮೆ ಕೇಳಿ, ಏನೂ ತಪ್ಪಿಲ್ಲ. ನೀವು ಕ್ಷಮೆ ಕೇಳಿದ್ರೆ ಕ್ಷಮಾ ಹಾಸನ್ ಆಗುತ್ತೀರಿ. ಇಲ್ಲ ಅಂದ್ರೆ ಆ ಹಾಸನ್ ಆಗುತ್ತೀರಿ. ಆ ಹಾಸನ್‌ನಲ್ಲಿ ಮತಾಂಧತೆ, ಭಾಷಾಂಧತೆ ಅನ್ನುವ ಕೊಳೆತ, ಕೊಳಕು ಬೀಜಗಳು ಇವೆ ಅನ್ನೋ ಅನುಮಾನ ಇದೆ ಎಂದರು. ಇದನ್ನೂ ಓದಿ: ಬಹಿರಂಗವಾಗಿ ಕ್ಷಮೆ ಕೇಳದಿದ್ರೆ ಕಮಲ್ ಸಿನಿಮಾ ರಿಲೀಸ್ ಮಾಡೋಕೆ ಅವಕಾಶ ಕೊಡಲ್ಲ: ಸಾರಾ ಗೋವಿಂದು
ಬೆಂಗಳೂರು: ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂದ ನಟ ಕಮಲ್ ಹಾಸನ್ (Kamal Haasan) ಪರವಾಗಿ ಮಾಜಿ ಸಂಸದೆ, ನಟಿ ರಮ್ಯಾ (Actress) ಬ್ಯಾಟ್ ಬೀಸಿದ್ದಾರೆ.
ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟೋರಿಯೊಂದನ್ನ ಹಂಚಿಕೊಂಡಿದ್ದಾರೆ. ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಎಲ್ಲವೂ ದ್ರಾವಿಡ ಭಾಷೆಗಳ ಒಂದೇ ಕೊಡಿಯಡಿಯಲ್ಲಿ ಬರುತ್ತವೆ. ಆದ್ರೆ ನಮ್ಮಲ್ಲಿನ ಕೆಲವು ಸಾಮಾನ್ಯತೆ ಮತ್ತು ಹಂಚಿಕೆಯಾಗಿರುವ ಭಾಷಾ ವಂಶಾವಳಿ ಬೇರೆ ಇರಬಹುದು. ಅವರೆಡೂ ಶ್ರೇಷ್ಠವಲ್ಲ. ಸಂಸ್ಕೃತ ಎಲ್ಲಾ ಭಾಷೆಗಳ ತಾಯಿ ಎಂದು ಭಾವಿಸುವವರಿಗೆ ನೀವು ಕೂಡ ತಪ್ಪಾಗಿ ಕಾಣಿಸಿಸುತ್ತಿದ್ದೀರಿ. ಏಕೆಂದರೆ ಸಂಸ್ಕೃತ ಇಂಡೋ – ಆರ್ಯನ್ ಭಾಷೆ. ನಾವು ದ್ರಾವೀಡರು, ಎರಡೂ ಪಸ್ಪರ ಭಿನ್ನ. ಕಮಲ್ ಹಾಸನ್ ಅವರು ತಪ್ಪು ಮಾಡಿದ್ದಾರೆ? ಆದ್ರೆ ಚಿತ್ರವನ್ನ ಬಹಿಷ್ಕರಿಸುವುದು ಸ್ವಲ್ಪ ಜಾಸ್ತಿ ಆಯ್ತು ಅಲ್ಲವೇ? ಹಿಂದಿ ಹೇರಿಕೆಯ ವಿರುದ್ಧ ನಾವು ಒಂದಾಗಬೇಕು. ಅದಕ್ಕಾಗಿ ನಾವು ಮೊದಲು ಪರಸ್ಪರ ಗೌರವಿಸುವದನ್ನು ಕಲಿಯಬೇಕು ಎಂದು ತಮ್ಮ ಇನ್‌ಸ್ಟಾ ಸ್ಟೋರಿಯಲ್ಲಿ ಚಾರ್ಟ್ ಸಮೇತ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಕನ್ನಡದ ಬಗ್ಗೆ ಕಮಲ್ ಹಾಸನ್‌ಗೆ ಪ್ರೀತಿಯಿದೆ, ಯಾಕೆ ಅದನ್ನ ದೊಡ್ಡ ವಿಷಯ ಮಾಡ್ತೀರಾ?: ಶಿವಣ್ಣ
ಇನ್ನೂ ತಮಿಳಿನಿಂದ ಕನ್ನಡ ಹುಟ್ಟಿದೆ ಅನ್ನೋ ಕಮಲ್ ಹಾಸನ್ ವಿವಾದದಲ್ಲಿ ತಮಿಳುನಾಡಿನ ರಾಜಕಾರಣಿಗಳು ಮೂಗು ತೂರಿಸ್ತಿದ್ದಾರೆ. ವಿಸಿಕೆ ಪಕ್ಷದ ಮುಖ್ಯಸ್ಥ ತಿರುಮಾವಳವನ್, ತಮಿಳು ದ್ರಾವಿಡ ಭಾಷೆಯ ತಾಯಿ, ಈಗಾಗಲೇ ಇತಿಹಾಸದಿಂದ ಸಾಬೀತಾಗಿದೆ. ಇತಿಹಾಸ ತಜ್ಞರು ಕೂಡ ಇದನ್ನು ಸಾಬೀತುಪಡಿಸಿದ್ದಾರೆ. ಕಮಲ್ ಹಾಸನ್ ಹೇಳಿರೋ ಮಾತನ್ನು ಕನ್ನಡಿಗರು ಹಾಗೂ ಮಲಯಾಳಿಗಳು ಒಪ್ಪುತ್ತಿಲ್ಲ. ತಮಿಳು ಎಲ್ಲ ಭಾಷೆಗಳ ತಾಯಿ ಅನ್ನೋದು ಇತಿಹಾಸ. ಇದು ಸತ್ಯ ಅಂತ ತುಪ್ಪ ಸುರಿದಿದ್ದಾರೆ. ಇದನ್ನೂ ಓದಿ: ಮತ್ತೆ ಕಮಲ್ ಹಾಸನ್ ಮೊಂಡಾಟ – ಕ್ಷಮೆ ಕೇಳಲ್ಲ ಎಂದ ನಟ
ಆದರೆ, ಕಮಲ್ ಹಾಸನ್ ದುರಂಹಕಾರಿ, ವಿಷಬೀಜ ಬಿತ್ತುತ್ತಿದ್ದಾರೆ ಅಂತ ವಿಜಯೇಂದ್ರ ಖಂಡಿಸಿದ್ರೆ, ಕ್ಷಮೆ ಕೇಳಲೇಬೇಕು ಅಂತ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ. ಸಿಟಿ ರವಿ ಕೂಡ ನಾವೆಲ್ಲಾ ಒಂದೇ ತಾಯಿಯ ಮಕ್ಕಳು ಅಂತ ಗೌರವ ಕೊಟ್ಟಿದ್ದೇವೆ ಅಂದಿದ್ದಾರೆ. ಇದನ್ನೂ ಓದಿ: ನಟ ಕಮಲ್ ಹಾಸನ್ ಕ್ಷಮೆಯಾಚನೆಗೆ ಆಗ್ರಹ – ಫಿಲಂ ಚೇಂಬರ್‌ಗೆ ಕರವೇ ಮುತ್ತಿಗೆ
ತಮಿಳು ನಟ ಕಮಲ್ ಹಾಸನ್ (Kamal Haasan) ವಿವಾದಾತ್ಮಕ ಹೇಳಿಕೆಗೆ ರಾಜ್ಯದಲ್ಲಿ ತೀವ್ರ ವಿರೋಧ ವ್ಯಕ್ತವಾಗ್ತಿದೆ. ಆದರೆ ಮತ್ತೆ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡು ಕಮಲ್ ಹಾಸನ್ ಉದ್ಧಟತನ ತೋರಿದ್ದಾರೆ. ನಾನು ಹೇಳಿದ್ದು ನನ್ನ ಪ್ರಕಾರ ಸರಿ, ನಾನು ಕ್ಷಮೆ ಕೇಳಲ್ಲ ಎಂದಿದ್ದಾರೆ. ಇತ್ತ ರಾಜ್ಯದ ವಿವಿಧೆಡೆ ಪ್ರತಿಭಟನೆಗಳು ತೀವ್ರಗೊಂಡಿದ್ದು, ಅವರ ಸಿನಿಮಾ ರಾಜ್ಯದಲ್ಲಿ ಬಿಡುಗಡೆಗೆ ಅವಕಾಶ ಕೊಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಮಲ್ ಚಿತ್ರ ರಾಜ್ಯದಲ್ಲಿ ಬಿಡುಗಡೆ ಸಂಬಂಧ ಫಿಲಂ ಚೇಂಬರ್‌ನಲ್ಲಿ (Film Chamber) ಸಭೆ ನಡೆಯುತ್ತಿದ್ದ ವೇಳೆಯೇ ಫಿಲಂ ಚೇಂಬರ್‌ಗೆ ಕನ್ನಡಪರ ಹೋರಾಟಗಾರರು ಮುತ್ತಿಗೆ ಹಾಕಿದರು. ಕರವೇ ನಾರಾಯಣಗೌಡರ ಬಣ ಮುತ್ತಿಗೆ ಹಾಕಿ ಕಮಲ್ ಕ್ಷಮೆ ಕೇಳೋವರೆಗೂ ಚಿತ್ರ ಬಿಡುಗಡೆ ಮಾಡದಂತೆ ಆಗ್ರಹಿಸಿದರು. ಫಿಲಂ ಚೇಂಬರ್ ಒಳಗೆ ನುಗ್ಗಿ ಅಧ್ಯಕ್ಷರ ಮುಂದೆ ಕೂತು ಕರ್ನಾಟಕದಲ್ಲಿ ಕಮಲ್ ಹಾಸನ್ ಸಿನಿಮಾ ರಿಲೀಸ್ ಆಗಲು ಬಿಡಲ್ಲ. ಸಿನಿಮಾ ಬಿಡುಗಡೆ ಮಾಡುತ್ತಿರುವ ಡಿಸ್ಟ್ರಿಬ್ಯೂಟರ್ ಅವರಿಗೆ ವಾರ್ನಿಂಗ್ ಕೊಡುತ್ತೇವೆ, ಫಿಲಂ ಚೇಂಬರ್ ಚಿತ್ರ ರಿಲೀಸ್ ಆಗೋಕೆ ಬಿಡಬಾರದು ಎಂದು ಮನವಿ ಮಾಡಿದರು. ಇದನ್ನೂ ಓದಿ: ಕಮಲ್ ಹಾಸನ್ ಸಣ್ಣತನದ ಹೇಳಿಕೆ ನೀಡಿ, ಕನ್ನಡಿಗರಿಗೆ ಕ್ಷಮೆ ಕೇಳದೇ ಮೊಂಡುತನ: ಚೇತನ್
ಇನ್ನು ಕನ್ನಡದ ಬಗ್ಗೆ ಕಮಲ್ ಹಾಸನ್ ಅವಿವೇಕದ ಮಾತಾಡಿದ್ದಾರೆ. ಅವರ ಚಿತ್ರ ಕರ್ನಾಟಕದಲ್ಲಿ ರಿಲೀಸ್ ಆಗಬಾರದು. ಕರ್ನಾಟಕದ ಅನ್ನ ತಿಂದ ಕನ್ನಡ ನಟರು ಇದರ ಬಗ್ಗೆ ಧ್ವನಿಯೆತ್ತಬೇಕು. ಕಮಲ್ ಹಾಸನ್ ವಿರುದ್ಧ ಕನ್ನಡ ನಟ-ನಟಿಯರು ಯಾಕೆ ಧ್ವನಿ ಎತ್ತಿಲ್ಲ ಎಂದು ಕರವೇ ಶಿವರಾಮೇಗೌಡ ಪ್ರಶ್ನಿಸಿದರು. ಇದನ್ನೂ ಓದಿ: ಕಮಲ್ ಹಾಸನ್ `ಕನ್ನಡ’ ವಿವಾದ – ಸಾಕು ಸರ್ ಎಂದ ನ್ಯಾಚುರಲ್ ಸ್ಟಾರ್
ಕಮಲ್ ಹಾಸನ್‌ಗೆ ಮತ್ತೆ ಡೆಡ್‌ಲೈನ್:
ಫಿಲಂ ಚೇಂಬರ್‌ನಲ್ಲಿ ಸಭೆ ಬಳಿಕ ಮಾತಾಡಿದ ಕನ್ನಡ ಹೋರಾಟಗಾರ, ಕರ್ನಾಟಕ ಚಲನಚಿತ್ರ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ ಗೋವಿಂದು ಕಮಲ ಹಾಸನ್‌ಗೆ ಮತ್ತೆ ಡೆಡ್‌ಲೈನ್ ಕೊಟ್ಟಿದ್ದಾರೆ. ಕಮಲ್ ಹಾಸನ್ ಬಗ್ಗೆ ನಮಗೆ ಯಾರಿಗೂ ಕನಿಕರ ಇಲ್ಲ. ಇಂದು ಅಥವಾ ನಾಳೆ ಒಳಗೆ ಕಮಲ್ ಹಾಸನ್ ಕ್ಷಮೆ ಕೇಳಲೇಬೇಕು. ಇಲ್ಲದಿದ್ದರೆ ಯಾವುದೇ ಕಾರಣಕ್ಕೂ ಸಿನಿಮಾ ರಿಲೀಸ್ ಮಾಡೋಕೆ ಅವಕಾಶ ಮಾಡಿಕೊಡಲ್ಲ. ಕ್ಷಮಾಪಣೆ ಅಂತಾ ಪದ ಬರದಿದ್ದರೆ ಸಿನಿಮಾ ರಿಲೀಸ್ ಮಾಡೋಕೆ ಬಿಡಲ್ಲ ಎಂದು ಗುಡುಗಿದರು. ಇನ್ನು ಡಿಸ್ಟ್ರಿಬ್ಯೂಟರ್ ವೆಂಕಟೇಶ್ ಮಾತನಾಡಿ, ಕನ್ನಡ ಹಾಗೂ ಬ್ಯುಸಿನೆಸ್ ಎರಡೂ ನನಗೆ ಇಂಪಾರ್ಟೆಂಟ್. ಫಿಲಂ ಚೇಂಬರ್ ಸಭೆಯಲ್ಲಿ ಏನೇನು ಆಯ್ತು ಎಲ್ಲವನ್ನು ಕಮಲ್‌ಗೆ ಹೇಳುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಕಮಲ್ ಹಾಸನ್ ಬ್ಯಾನರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ
ನಟ ಕಮಲ್ ಹಾಸನ್ ವಿವಾದದ ಬಗ್ಗೆ ನಟ ಶಿವರಾಜ್ ಕುಮಾರ್ ಫಸ್ಟ್ ರಿಯಾಕ್ಷನ್ ಕೊಟ್ಟಿದ್ದಾರೆ. ಕನ್ನಡದ ಬಗ್ಗೆ ಕಮಲ್ ಹಾಸನ್‌ಗೆ ಪ್ರೀತಿ ಇದೆ. ನಟ ಕಮಲ್ ಹಾಸನ್‌ಗೆ ಇದೆಲ್ಲ ಗೊತ್ತಾಗುತ್ತೆ. ಕಮಲ್ ಅವರೇ ಅದನ್ನ ಸರಿ ಮಾಡಿಕೊಳ್ಳುತ್ತಾರೆ. ಬರೀ ಬಾಯಿ ಮಾತಲ್ಲಿ ಮಾತ್ರ ಕನ್ನಡ ಎನ್ನಬಾರದು. ಕನ್ನಡಕ್ಕಾಗಿ ಸಾಯುತ್ತೀವಿ, ಹೋರಾಟ ಮಾಡ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಕನ್ನಡದ ಬಗ್ಗೆ ಕಮಲ್ ಹಾಸನ್‌ಗೆ ಪ್ರೀತಿಯಿದೆ, ಯಾಕೆ ಅದನ್ನ ದೊಡ್ಡ ವಿಷಯ ಮಾಡ್ತೀರಾ?: ಶಿವಣ್ಣ
ಇನ್ನು ಕಮಲ ಹಾಸನ್ ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ಹಿರಿಯ ನಟಿ ಜಯಮಾಲಾ, ಕಮಲ್ ಹಾಸನ್‌ಗೆ ಅವರ ತಪ್ಪು ಮನವರಿಕೆ ಮಾಡಬೇಕು. ಅವರು ತಿಳಿದು ಹೇಳಿದ್ರೋ, ತಿಳಿಯದೇ ಹೇಳಿದ್ರೋ ಗೊತ್ತಿಲ್ಲ. ಒಂದಂತೂ ಸತ್ಯ. ತಮಿಳಿನಿಂದ ಕನ್ನಡ ಹುಟ್ಟಿಲ್ಲ. ಅವರು ಕ್ಷಮೆ ಕೇಳಬೇಕು. ಇನ್ನು ಕಮಲ್ ಹೀಗೆಲ್ಲಾ ಮಾತನಾಡುವಾಗ ಶಿವಣ್ಣ ಸುಮ್ಮನಿದ್ದರು ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಶಿವಣ್ಣ ಅವರಿಗೆ ಅವತ್ತು ಗೊತ್ತಾಗಿಲ್ಲ. ಆರೋಗ್ಯ ದೃಷ್ಟಿಯಿಂದ ಸ್ವಲ್ಪ ಕುಗ್ಗಿದ್ದಾರೆ. ಹೀಗಾಗಿ ಗೊತ್ತಾಗಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಮತ್ತೆ ಕಮಲ್ ಹಾಸನ್ ಮೊಂಡಾಟ – ಕ್ಷಮೆ ಕೇಳಲ್ಲ ಎಂದ ನಟ
– ಕ್ಷಮೇ ಕೇಳಿಸುವ ಪ್ರಯತ್ನ ಮಾಡ್ತೀವಿ ಎಂದ ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು
ಬೆಂಗಳೂರು: ನಟ ಕಮಲ್ ಹಾಸನ್ (Kamal Haasan) ಕೊಟ್ಟ ಉದ್ಧಟತನದ ಹೇಳಿಕೆ ಇಡೀ ರಾಜ್ಯದ ಜನರ ಆಕ್ರೋಶ ಕಟ್ಟೆಯೊಡೆಯುವಂತೆ ಮಾಡಿದೆ. ರಾಜ್ಯದಲ್ಲಿ ಕಮಲ್ ಸಿನಿಮಾಗಳನ್ನ ಬ್ಯಾನ್ ಮಾಡುವಂತೆ ಕನ್ನಪರ ಸಂಘಟನೆಗಳು ಆಕ್ರೋಶ ಹೊರಹಾಕಿವೆ. ಈ ನಡುವೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ (Karnataka Film Chamber) ಸಭೆ ನಡೆಸಿದ್ದು, ಕ್ಷಮೆ ಕೇಳಿಸುವ ಪ್ರಯತ್ನ ಮಾಡುವುದಾಗಿ ಹೇಳಿದೆ.
ಸಭೆಯಲ್ಲಿ ನಿರ್ಮಾಪಕ ಸಾರಾ ಗೋವಿಂದು ಮಾತನಾಡಿ, ಕಮಲ್ ಹಾಸನ್ ಬಗ್ಗೆ ನಮಗೆ ಯಾರಿಗೂ ಕನಿಕರ ಇಲ್ಲ. ಇವತ್ತು ಅಥವಾ ನಾಳೆ ಒಳಗೆ ಕಮಲ್ ಹಾಸನ್ ಕ್ಷಮೆ ಕೇಳದೇ ಇದ್ರೆ ಖಂಡನೆ ಮಾಡ್ತೀವಿ. ಕಮಲ್ ಹಾಸನ್ ಬಹಿರಂಗವಾಗಿ ಕ್ಷಮೆ ಕೇಳದೇ ಇದ್ರೆ ಯಾವುದೇ ಕಾರಣಕ್ಕೂ ಸಿನಿಮಾ ರಿಲೀಸ್ ಮಾಡೋಕೆ ಅವಕಾಶ ಮಾಡಿಕೊಡಲ್ಲ ಅಂತ ಎಚ್ಚೆರಿಕೆ ನೀಡಿದ್ದಾರೆ. ಇದನ್ನೂ ಓದಿ: ರಾಮಾಯಣ ಸಿನಿಮಾದ ಯಶ್ ಪಾತ್ರದ ಮೊದಲ ಆಕ್ಷನ್ ಸೀಕ್ವೆನ್ಸ್ ಲುಕ್ ರಿವಿಲ್
ಇನ್ನೂ ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು ಮಾತನಾಡಿ, ಕನ್ನಡ ರಕ್ಷಣಾ ವೇದಿಕೆಯವರು, ಹಲವಾರು ಸಂಘ ಸಂಸ್ಥೆಗಳು ಖಂಡಿಸಿದ್ದಾರೆ. ಸಿನಿಮಾ ಬ್ಯಾನ್ ಮಾಡ್ಬೇಕು ಅಂತಾ ಪಟ್ಟು ಹಿಡಿದಿದ್ದಾರೆ. ಕಮಲ್ ಹಾಸನ್ ಕ್ಷಮೆ ಕೇಳ್ಬೇಕು ಅಂತಾ ಒತ್ತಾಯಿಸಿದ್ದಾರೆ. ಕಮಲ್ ಹಾಸನ್ ಮಾಡಿರುವ ತಪ್ಪನ್ನ ಮನವರಿಕೆ ಮಾಡಿಸಿ ಕ್ಷಮೆ ಕೇಳಿಸುವ ಪ್ರಯತ್ನ ಮಾಡ್ತೀವಿ ಅಂತ ಹೇಳಿದ್ದಾರೆ. ಇದನ್ನೂ ಓದಿ: ಕ್ಷಮೆ ಕೇಳದಿದ್ದರೆ ಕರ್ನಾಟಕದಲ್ಲಿ ಕಮಲ್ ಹಾಸನ್ ಚಿತ್ರಗಳನ್ನ ನಿರ್ಬಂಧಿಸಿ: ಶಿವರಾಜ್ ತಂಗಡಗಿ ಪತ್ರ
ಫಿಲ್ಮ್ ಚೇಂಬರ್ ಮುತ್ತಿಗೆಗೆ ಯತ್ನ:
ಕಮಲ್ ಹಾಸನ್ ಚಲನಚಿತ್ರಗಳನ್ನ ಬ್ಯಾನ್‌ಗೆ ಒತ್ತಾಯ ಹೆಚ್ಚಾದಂತೆ ಕರ್ನಾಟಕ ಸಿನಿಮಾ ವಿತರಕ ಕಮಲಾಕರ್ ಅವರ ನೇತೃತ್ವದಲ್ಲಿಂದು ಸಭೆ ನಡೆಸಲಾಯಿತು. ಸಭೆಯಲ್ಲಿ ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷರಾದ ಸಾರಾ ಗೋವಿಂದು, ಥಾಮಸ್ ಡಿಸೋಜಾ ಭಾಗಿ, ಪ್ರದರ್ಶಕ ವಲಯದ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ನಿರ್ಮಾಪಕರು ಭಾಗಿಯಾಗಿದ್ದರು. ಸಭೆ ನಡೆಯುತ್ತಿದ್ದಾಗಲೇ ಕೆಲ ಕನ್ನಡಪರ ಹೋರಾಟಗಾರರು ಮುತ್ತಿಗೆಗೆ ಉತ್ನಿಸಿದ ಘಟನೆಯೂ ನಡೆಯಿತು. ಇದನ್ನೂ ಓದಿ: ಕಮಲ್ ಹಾಸನ್ `ಕನ್ನಡ’ ವಿವಾದ – ಸಾಕು ಸರ್ ಎಂದ ನ್ಯಾಚುರಲ್ ಸ್ಟಾರ್