ಸೌತ್ ಸುಂದರಿ ಶ್ರುತಿ ಹಾಸನ್ ಸಿನಿಮಾ ವಿಚಾರವಲ್ಲದೇ ಆಗಾಗ ತಮ್ಮ ವೈಯಕ್ತಿಕ ವಿಚಾರವಾಗಿವೂ ಸುದ್ದಿಯಲ್ಲಿರುತ್ತಾರೆ. ಇದೀಗ ತಮ್ಮ ಬಾಯ್‌ಫ್ರೆಂಡ್ ಜೊತೆಗಿನ ರೊಮ್ಯಾಂಟಿಕ್ (Romantic) ಫೋಟೋ ಹಂಚಿಕೊಂಡಿದ್ದಾರೆ.
ಕಮಲ್ ಹಾಸನ್ (Kamal Haasan) ಪುತ್ರಿ ಶ್ರುತಿ ಹಾಸನ್ (Shruti Haasan) ಟಾಲಿವುಡ್, ಬಾಲಿವುಡ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಆಕ್ಟ್ ಮಾಡುತ್ತ ಬ್ಯುಸಿಯಾಗಿದ್ದಾರೆ. ಒಂದಿಷ್ಟು ಬ್ರೇಕಪ್ ನಂತರ ಇದೀಗ ಸಂತಾನೂ ಹಜಾರಿಕಾ (Santanu Hazarika) ಜೊತೆ ನಟಿ ಡೇಟಿಂಗ್ ಮಾಡ್ತಿದ್ದಾರೆ. ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದಾರೆ. ಇದನ್ನೂ ಓದಿ: ಕ್ರಿಸ್‌ಮಸ್ ಆಚರಣೆಗಾಗಿ ಮಗಳ ಜೊತೆ ವಿದೇಶಕ್ಕೆ ಹಾರಿದ ಪ್ರಿಯಾಂಕಾ ಚೋಪ್ರಾ
ಸದ್ಯ ಸಂತಾನೂ ಜೊತೆಗಿನ ರೊಮ್ಯಾಂಟಿಕ್ ಫೋಟೋ ಶೇರ್ ಮಾಡಿದ್ದಾರೆ. ಒಬ್ಬರನೊಬ್ಬರು ತಬ್ಬಿಕೊಂಡಿರುವ ಫೋಟೋ ಶೇರ್ ಮಾಡಿ, ನನಗೆ ಬೇಕಾಗಿರುವುದು ಎಂದು ಅಡಿಬರಹ ನೀಡಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋ ಇದೀಗ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಫ್ಯಾನ್ಸ್ ಈ ಜೋಡಿಗೆ, ಮದುವೆ ಯಾವಾಗ ಅಂತಾ ಕೇಳ್ತಿದ್ದಾರೆ.
Live Tv
[brid partner=56869869 player=32851 video=960834 autoplay=true]
ತೆಲುಗು ಸಿನಿಮಾ ರಂಗದ ಖ್ಯಾತ ನಿರ್ದೇಶಕ ರಾಜಮೌಳಿ ವಿರುದ್ಧ ಕನ್ನಡಿಗರು ಅಸಮಾಧಾನ ಹೊರ ಹಾಕಿದ್ದಾರೆ. ರಾಜಮೌಳಿ ಒಬ್ಬ ಅವಕಾಶವಾದಿ ಎಂದು ಜರಿದಿದ್ದಾರೆ. ಅವರ ಸಿನಿಮಾಗಳು ರಿಲೀಸ್ ಆಗುವ ಹೊತ್ತಿನಲ್ಲಿ ಮಾತ್ರ, ಕನ್ನಡ ಹಾಗೂ ಕರ್ನಾಟಕ ನೆನಪಾಗುತ್ತದೆ. ಉಳಿದಂತೆ ಅವರು ಕನ್ನಡವನ್ನು ಮರೆಯುತ್ತಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಇನ್ಮುಂದೆ ನೀವು ಕನ್ನಡಿಗರು ಅನಬೇಡಿ ಎಂದು ತಾಕೀತು ಕೂಡ ಮಾಡಿದ್ದಾರೆ.
ಅಷ್ಟಕ್ಕೂ ಕನ್ನಡಿಗರು ಗರಂ ಆಗಿರುವುದಕ್ಕೆ ಕಾರಣವೂ ಇದೆ. ಖಾಸಗಿ ವಾಹಿನಿಯಿಂದ ಖ್ಯಾತ ನಾಮರ ರೌಂಡ್ ಟೇಬಲ್ ಸಂದರ್ಶನವೊಂದನ್ನು ಏರ್ಪಡಿಸಿತ್ತು. ಇದರಲ್ಲಿ ಪೃಥ್ವಿರಾಜ್ ಸುಕುಮಾರನ್, ಕಮಲ್ ಹಾಸನ್, ರಾಜಮೌಳಿ, ಗೌತಮ್ ಮೆನನ್, ಲೋಕೇಶ್ ಕನಗರಾಜ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ರಾಜಮೌಳಿ ಕೇವಲ ತೆಲುಗು, ತಮಿಳು ಮತ್ತು ಮಲಯಾಳಂ ಸಿನಿಮಾ ರಂಗದ ಬಗ್ಗೆ ಮಾತನಾಡಿದ್ದಾರೆ. ಕನ್ನಡ ಚಿತ್ರೋದ್ಯಮವನ್ನು ಮರೆತು ಬಿಟ್ಟಿದ್ದಾರೆ. ಇದೇ ಕನ್ನಡಿಗರನ್ನು ಕೆರಳಿಸಿದೆ. ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಕಸ ಎಂದ ನಿರ್ದೇಶಕನಿಗೆ ವಿವೇಕ್ ಅಗ್ನಿಹೋತ್ರಿ ಸೌಮ್ಯ ಉತ್ತರ
ಮಲಯಾಳಂನಲ್ಲಿ ಅತ್ಯುತ್ತಮ ಬರಹಗಾರರು ಮತ್ತು ನಟರಿದ್ದಾರೆ. ತಮಿಳು ಸಿನಿಮಾ ರಂಗವು ತಾಂತ್ರಿಕವಾಗಿ ಭಾರೀ ಶ್ರೀಮಂತ ಉದ್ಯಮ, ತೆಲುಗಿನಲ್ಲಿ ಸಾಕಷ್ಟು ಜನಪ್ರಿಯ ಸಿನಿಮಾಗಳು ಬಂದಿವೆ. ನಾವೆಲ್ಲರೂ ಪ್ರೇಕ್ಷಕರಿಗೆ ಏನು ಬೇಕೋ ಅದನ್ನು ಕೊಡುತ್ತಾ ಬಂದಿದ್ದೇವೆ. ಮಲಯಾಳಂ ಸಿನಿಮಾ ರಂಗದ ಬರಹಗಾರರ ಬಗ್ಗೆ ನನಗೆ ಬಹಳಷ್ಟು ಪ್ರೀತಿ ಇದೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ. ಆದರೆ, ಕನ್ನಡ ಚಿತ್ರೋದ್ಯಮದ ಬಗ್ಗೆ ಒಂದು ಮಾತೂ ಕೂಡ ಅವರು ಆಡಲಿಲ್ಲ.
ಹಾಗಂತ ಅವರು ಕನ್ನಡ ಚಿತ್ರೋದ್ಯಮವನ್ನು ಪೂರ್ತಿ ಕಡೆಗಣಿಸಲಿಲ್ಲ. ಅವರ ಮಾತು ಕೇವಲ ಕಾಂತಾರ ಸಿನಿಮಾದ ಬಗ್ಗೆ ಮಾತ್ರವಿತ್ತು. ಕನ್ನಡದಲ್ಲಿ ಸಾಕಷ್ಟು ಪ್ರಯೋಗಾತ್ಮಕ ಮತ್ತು ಒಳ್ಳೊಳ್ಳೆ ಸಿನಿಮಾಗಳು ಬಂದಿದೆ. ಆದರೆ, ಕೇವಲ ಕಾಂತಾರದ ಬಗ್ಗೆ ಮಾತಾಡಿ, ಅಷ್ಟಕ್ಕೆ ಸುಮ್ಮನಾಗಿದ್ದು ನೆಟ್ಟಿಗರಿಗೆ ಕೋಪ ತರಿಸಿದೆ. ಮೂಲತಃ ಕನ್ನಡಿಗರೇ ಆಗಿರುವ ರಾಜಮೌಳಿ, ಕನ್ನಡ ಚಿತ್ರೋದ್ಯಮದ ಬಗ್ಗೆ ಹೆಚ್ಚೆಚ್ಚು ಮಾತನಾಡಬೇಕಿತ್ತು ಎಂದು ಕನ್ನಡಿಗರು ಆಗ್ರಹಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ಭಾರತೀಯ ಸಿನಿಮಾ ರಂಗದ ಹೆಸರಾಂತ ನಟ ಕಮಲ್ ಹಾಸನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಅವರನ್ನು ಚೆನ್ನೈನ ಶ್ರೀ ರಾಮಚಂದ್ರ ಮೆಡಿಕಲ್ ಸೆಂಟರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವು ದಿನಗಳಿಂದ ಅವರು ತೀರ್ವ ಜ್ವರದಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದ್ದು, ಜ್ವರ ಕಡಿಮೆ ಆಗದ ಕಾರಣಕ್ಕಾಗಿ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.
ನೆಚ್ಚಿನ ನಟ ಕಮಲ್ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆಯೇ ಅಭಿಮಾನಿಗಳಲ್ಲಿ ಆತಂಕ ಮನೆಮಾಡಿತ್ತು. ಕಮಲ್ ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ. ಸದ್ಯ ಕಮಲ್ ಗೆ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದ್ದು, ಇನ್ನೆರಡು ದಿನಗಳಲ್ಲಿ ಡಿಸ್ಚಾರ್ಜ್ ಆಗಬಹುದು ಎನ್ನಲಾಗುತ್ತಿದೆ. ಇದೀಗ ಜ್ವರ ಕೂಡ ಕಡಿಮೆ ಆಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂಬ ಓದಿ:51ನೇ ವಯಸ್ಸಿನಲ್ಲಿ ಮೂರನೇ ಮಗುವಿನ ನಿರೀಕ್ಷೆಯಲ್ಲಿರುವ ಮನೋಜ್ ತಿವಾರಿ
ದಣಿವರಿಯದ ಕೆಲಸವೇ ಜ್ವರಕ್ಕೆ ಕಾರಣ ಎಂದು ಹೇಳಲಾಗುತ್ತಿದ್ದ ಸಿನಿಮಾ, ರಿಯಾಲಿಟಿ ಶೋ ಸೇರಿದಂತೆ ಸಾಕಷ್ಟು ಕೆಲಸಗಳಲ್ಲಿ ಕಮಲ್ ಬ್ಯುಸಿಯಾಗಿದ್ದಾರೆ. ಇಂಡಿಯನ್ 2 ಸಿನಿಮಾದ ಶೂಟಿಂಗ್ ನಲ್ಲಿ ನಿರಂತರವಾಗಿ ಕಮಲ್ ಭಾಗಿಯಾಗಿದ್ದರು ಎಂದು ಹೇಳಲಾಗುತ್ತಿದೆ. ಈಗ ಕಮಲ್ ಅನಿವಾರ್ಯವಾಗಿ ರೆಸ್ಟ್ ತಗೆದುಕೊಳ್ಳಬೇಕಾಗಿದ್ದು, ಸದ್ಯ ವಿಶ್ರಾಂತಿಯಲ್ಲಿದ್ದಾರೆ ಕಮಲ್.
Live Tv
[brid partner=56869869 player=32851 video=960834 autoplay=true]
ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ಐವತ್ತು ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಸಿನಿಮಾ ಟೀಮ್ 50ನೇ ಸಂಭ್ರಮದಲ್ಲಿ ಇರುವಾಗ ಕಮಲ್ ಹಾಸನ್ ಚಿತ್ರ ವೀಕ್ಷಿಸಿದ್ದಾರೆ. ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಅಲ್ಲದೇ, ಸಿನಿಮಾದ ಕಥೆ, ಅದನ್ನು ನಿರೂಪಿಸಿದ ರೀತಿ ಹಾಗೂ ರಿಷಬ್ ಶೆಟ್ಟಿ ನಟನೆಯನ್ನು ಮೆಚ್ಚಿಕೊಂಡು ಬೆನ್ನು ತಟ್ಟಿದ್ದಾರೆ. ನವೆಂಬರ್ 18 ರಂದು ಕಾಂತಾರ ಸಿನಿಮಾ ನೋಡಿದ ಕಮಲ್ ಹಾನಸ್ ಅವರು ನಿರ್ದೇಶಕ ರಿಷಬ್ ಶೆಟ್ಟಿಗೆ ಕಾಲ್ ಮಾಡಿ, ಅಭಿನಂದಿಸಿದ್ದಾರೆ.
ಕಾಂತಾರ ಸಿನಿಮಾ ಐವತ್ತು ದಿನಗಳ ಪೂರೈಸಿದ ನಂತರವೂ ಅದರ ಕ್ರೇಜ್ ಮಾತ್ರ ಇನ್ನೂ ನಿಂತಿಲ್ಲ. ಬಿಡುವಾದಾಗೆಲ್ಲ ಸಿಲೆಬ್ರಿಟಿಗಳು ಸಿನಿಮಾ ನೋಡಿ, ಅದರ ಬಗ್ಗೆ ಮಾತನಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಕಾಂತಾರದ ಬಗ್ಗೆ ಬರೆದುಕೊಳ್ಳುತ್ತಿದ್ದಾರೆ. ಮೊನ್ನೆಯಷ್ಟೇ ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾ ನೋಡಿ, ರಿಷಬ್ ಶೆಟ್ಟಿ ಅವರನ್ನೇ ಮನೆಗೆ ಕರೆಯಿಸಿಕೊಂಡು ಸತ್ಕರಿಸಿದ್ದರು. ಇದೀಗ ಬಾಲಿವುಡ್ ನಟ ಸುನೀಲ್ ಶೆಟ್ಟಿ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ:ತಿರುಪತಿಯಲ್ಲಿ ಅವಳಿ ಮಕ್ಕಳ ಮುಡಿ ಕೊಟ್ಟ ಅಮೂಲ್ಯ ಜಗದೀಶ್ ದಂಪತಿ
‘ನಾನು ಕಾಂತಾರ ಸಿನಿಮಾ ನೋಡಿದೆ. ನನಗೆ ಅರಿವಿಲ್ಲದಂತೆ ಕಣ್ಣೀರು ಬಂತು. ತುಂಬಾ ಭಾವುಕನಾಗಿಬಿಟ್ಟೆ. ಯಾಕೆಂದರೆ, ನಾನು ಆ ನೆಲದವನು. ಅಲ್ಲಿ ಹುಟ್ಟಿ ಬೆಳೆದವನು. ಹಾಗಾಗಿ ಕಾಂತಾರ ಸಿನಿಮಾ ನನಗೆ ಬೇಗ ಕನೆಕ್ಟ್ ಆಯಿತು’ ಎಂದು ಮಾತನಾಡಿದ್ದಾರೆ. ರಿಷಬ್ ಶೆಟ್ಟಿ ಅವರ ನಿರ್ದೇಶನ ಹಾಗೂ ನಟನೆಯ ಬಗ್ಗೆಯೂ ಕೊಂಡಾಡಿದ್ದಾರೆ. ರಿಷಬ್ ಇಡೀ ಸಿನಿಮಾವನ್ನು ಆವರಿಸಿಕೊಂಡಿದ್ದಾರೆ. ಗ್ರೇಟ್ ಜಾಬ್ ಎಂದು ಹಾಡಿಹೊಗಳಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಸುನೀಲ್ ಶೆಟ್ಟಿ, ಕನ್ನಡದ ಸಿನಿಮಾ ಬಗ್ಗೆ ಹೆಮ್ಮೆ ಪಟ್ಟಿದ್ದಾರೆ.
‘ಕಾಂತಾರ’ ಚಿತ್ರವು ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿದೆ. ಸೆ. 30ರಂದು ಬಿಡುಗಡೆಯಾದ ಚಿತ್ರವು ರಾಜ್ಯದ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲದೆ, ವಿದೇಶಗಳಲ್ಲೂ ಹಲವು ಚಿತ್ರಮಂದಿರಗಳಲ್ಲಿ 50 ದಿನಗಳನ್ನು ಮುಗಿಸಿ, 100ನೇ ದಿನದತ್ತ ದಾಪುಗಾಲಿಟ್ಟಿದೆ. ಬರೀ ಕನ್ನಡವಷ್ಟೇ ಅಲ್ಲ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂಗೆ ಡಬ್ ಆಗಿರುವ ‘ಕಾಂತರ’, ಅಲ್ಲೂ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ.
Live Tv
[brid partner=56869869 player=32851 video=960834 autoplay=true]
ವಿಕ್ರಮ್ (Vikram) ಸಿನಿಮಾದ ಯಶಸ್ಸಿನ ನಂತರ ಕಮಲ್ ಹಾಸನ್ (Kamal Haasan) ಲಕ್ ಮತ್ತು ಲುಕ್ ಎರಡೂ ಬದಲಾಗಿದೆ. ಸಿನಿಮಾ ಮಾಡಿ ಸಾಲದ ಸುಳಿಯಲ್ಲಿ ಸಿಲುಕಿಕೊಂಡಿದ್ದ ಕಮಲ್ ಅವರಿಗೆ ವಿಕ್ರಮ್ ಬಂಪರ್ ಬೆಳೆ. ಸಾಲ ತೀರಿಸುವುದರ ಜೊತೆ ತುಂಬಾ ದಿನಗಳ ನಂತರ ದೊಡ್ಡ ಮಟ್ಟದಲ್ಲೇ ಯಶಸ್ಸು ತಂದುಕೊಟ್ಟ ಸಿನಿಮಾವಿದು. ತಮ್ಮದೇ ಬ್ಯಾನರ್ ನಲ್ಲಿ ಈ ಸಿನಿಮಾ ತಯಾರು ಮಾಡಿದ್ದರಿಂದ ಎಲ್ಲ ಸಾಲ ತೀರಿಸಿ ನಿರುಮ್ಮಳಾರಾಗಿದ್ದಾರೆ ಕಮಲ್.
ಸದ್ಯ ಇಂಡಿಯನ್ 2 ಸಿನಿಮಾದ ಶೂಟಿಂಗ್ ನಲ್ಲಿ ಕಮಲ್ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಶೂಟಿಂಗ್ ಯಾವಾಗ ಮುಗಿಯತ್ತೋ ಅವರಿಗೆ ಗೊತ್ತಿಲ್ಲ. ಆದರೂ, ಈ ನಡುವೆ ಮತ್ತೊಂದು ಸಿನಿಮಾ ಘೋಷಣೆ ಮಾಡಿದ್ದಾರೆ ಕಮಲ್. ಅದು ತಮ್ಮದೇ ಬ್ಯಾನರ್ ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ ಎನ್ನುವುದು ವಿಶೇಷ. ಈಗಾಗಲೇ ಕಥೆ ಕೂಡ ಫಿಕ್ಸ್ ಆಗಿದ್ದು, ನಿರ್ದೇಶಕರನ್ನೂ ಹುಡುಕಿದ್ದಾರೆ.
ಇಂಡಿಯನ್ 2 ನಂತರ ಕಮಲ್ ಮಾಡುತ್ತಿರುವ ಸಿನಿಮಾವಿದು. ಹಾಗಾಗಿ ಇನ್ನೂ ಹೆಸರಿಟ್ಟಿಲ್ಲ. ಇದು ಕಮಲ್ ನಟನೆಯ 233ನೇ ಚಿತ್ರ. ಈ ಸಿನಿಮಾವನ್ನು ಚದುರಂಗ ವೇಟ್ಟೈ ಸೇರಿದಂತೆ ಹಲವು ಚಿತ್ರಗಳನ್ನು ಮಾಡಿರುವ ನಿರ್ದೇಶಕ ಹೆಚ್.ವಿನೋದ್ (Vinod) ನಿರ್ದೇಶನ ಮಾಡಲಿದ್ದಾರೆ. ಇದೇ ನಿರ್ದೇಶಕರ ತುನಿವು ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಈ ಸಿನಿಮಾವನ್ನು ಥಿಯೇಟರ್ ಗೆ ಕಳುಹಿಸಿ, ಕಮಲ್ ಸಿನಿಮಾವನ್ನು ಕೈಗೆತ್ತಿಕೊಳ್ಳಲಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ಮತ್ತೆ ರೂಪೇಶ್ ರಾಜಣ್ಣ ಕಿರಿಕ್
ವಿಕ್ರಮ್ ಸಿನಿಮಾದಲ್ಲಿ ಕಮಲ್ ಜೊತೆ ನಟಿಸಿದ್ದ ವಿಜಯ್ ಸೇತುಪತಿ ಕೂಡ ಈ ಸಿನಿಮಾದಲ್ಲಿ ಇರಲಿದ್ದಾರೆ ಎಂದು ಹೇಳಲಾಗುತ್ತಿದೆ. ವಿಕ್ರಮ್ ಸಿನಿಮಾದಲ್ಲಿ ಈ ಜೋಡಿ ಸಖತ್ ಕಮಾಲ್ ಮಾಡಿತ್ತು. ಹಾಗಾಗಿ ಈ ಸಿನಿಮಾದಲ್ಲೂ ಅದು ಮುಂದುವರೆಯಲಿದೆ. ಕಮಲ್ ಮತ್ತು ವಿಜಯ್ ಸೇತುಪತಿ ಜೋಡಿಯ ಮತ್ತೊಂದು ಸಿನಿಮಾವನ್ನು ನೋಡಲು ಪ್ರೇಕ್ಷಕರು ಯಾವಾಗಲೂ ತುದಿಗಾಲಲ್ಲಿ ನಿಂತಿರುತ್ತಾರೆ ಎನ್ನುವುದು ಈ ಸಿನಿಮಾದ ಮೂಲಕ ಮತ್ತೊಮ್ಮೆ ಸಾಬೀತಾಗಿದೆ.
Live Tv
[brid partner=56869869 player=32851 video=960834 autoplay=true]
ನಾಯಗನ್ ಸಿನಿಮಾದ ನಂತರ ಕಮಲ್ ಹಾಸನ್ (Kamal Haasan) ಮತ್ತು ಮಣಿರತ್ನಂ ಮತ್ತೆ ಒಟ್ಟಾಗಿ ಕೆಲಸ ಮಾಡಬೇಕು ಎನ್ನುವುದು ಭಾರತೀಯ ಸಿನಿಮಾ ರಂಗದ ಕನಸಾಗಿತ್ತು. 1987ರಲ್ಲಿ ತೆರೆಕಂಡ ಈ ಸಿನಿಮಾ ಬಾಕ್ಸ್ ಆಫೀಸ್ ಅನ್ನೇ ಶೇಕ್ ಮಾಡಿತ್ತು. ಅಲ್ಲದೇ ಇಂಥದ್ದೊಂದು ಸಿನಿಮಾ ಇದೇ ಮೊದಲ ಬಾರಿಗೆ ಬಂದಿದೆಯೇನೋ ಎನ್ನುವಂತೆ ಪ್ರತಿಕ್ರಿಯೆ ಸಿಕ್ಕಿತ್ತು. ಈ ಸಿನಿಮಾ ಬಾಕ್ಸ್ ಆಫೀಸ್ ತುಂಬಿಸಿದ್ದು ಮಾತ್ರವಲ್ಲ, ರಾಷ್ಟ್ರ ಪ್ರಶಸ್ತಿಯನ್ನೂ ತಮ್ಮ ಅಭಿನಯಕ್ಕಾಗಿ ಪಡೆದುಕೊಂಡಿದ್ದರು ಕಮಲ್.
ಆನಂತರ ಕಮಲ್ ಮತ್ತು ಮಣಿರತ್ನಂ ಮತ್ತೆ ಒಟ್ಟಾಗಿ ಕೆಲಸ ಮಾಡುವುದಕ್ಕೆ ಆಗಲೇ ಇಲ್ಲ. ನಾಯಗನ್ ಸಿನಿಮಾ 175ಕ್ಕೂ ಹೆಚ್ಚು ದಿನಗಳ ಕಾಲ ಪ್ರದರ್ಶನ ಕಂಡರೂ, ಮತ್ತೆ ಕಾಂಬಿನೇಷನ್ ನಲ್ಲಿ ಸಿನಿಮಾ ಬರಲೇ ಇಲ್ಲ. ಹಾಗಾಗಿ ಸಹಜವಾಗಿಯೇ ಈ ಜೋಡಿಯಲ್ಲಿ ಮತ್ತೊಂದು ಸಿನಿಮಾ ಬರಬೇಕು ಎನ್ನುವುದು ಅಭಿಮಾನಿಗಳ ಆಸೆಯಾಗಿತ್ತು. ಬರೋಬ್ಬರಿ 35 ವರ್ಷಗಳ ನಂತರ ಆ ಆಸೆ ಈಡೇರುತ್ತಿದೆ. ಮಣಿರತ್ನಂ (Mani Ratnam) ಮತ್ತು ಕಮಲ್ ಹಾಸನ್ ಇದೀಗ ಜೊತೆಯಾಗಿ ಕೆಲಸ ಮಾಡಲಿದ್ದಾರೆ. ಈ ಸಿನಿಮಾವನ್ನು ಉದಯನಿಧಿ (Udayanidhi) ನಿರ್ಮಾಣ ಮಾಡಲಿದ್ದು, ಎ.ಆರ್.ರೆಹಮಾನ್ ಅವರ ಸಂಗೀತ ಸಂಯೋಜನೆಯಲ್ಲಿ ಹಾಡುಗಳು ಮೂಡಿ ಬರಲಿವೆ.
ಇದು ಕಮಲ್ ಹಾಸನ್ ಅವರ 234ನೇ ಸಿನಿಮಾವಾಗಿದ್ದು, 2024ರಲ್ಲಿ ಈ ಸಿನಿಮಾ ತೆರಿಗೆ ಬರಲಿದೆ ಎಂದು ಅಂದಾಜಿಸಲಾಗಿದೆ. ಸತತ ಸೋಲಿನ ಸುಳಿಯಲ್ಲೇ ಸಿಲುಕುತ್ತಿದ್ದ ಕಮಲ್ ಹಾಸನ್, ಏಜೆಂಟ್ ವಿಕ್ರಮ್ ಸಿನಿಮಾದ ಮೂಲಕ ಮತ್ತೆ ಅಬ್ಬರಿಸಿದ್ದಾರೆ. ಈ ಸಿನಿಮಾ ಕಮಲ್ ಅವರ ಅಷ್ಟೂ ಸಾಲ ತೀರಿಸಿದೆ ಎನ್ನಲಾಗುತ್ತಿದೆ. ಇತ್ತ ಮಣಿರತ್ನಂ ಕೂಡ ಪೊನ್ನಿಯಿನ್ ಸೆಲ್ವನ್ ಸಿನಿಮಾದ ಮೂಲಕ ಮತ್ತೊಂದು ಹಿಟ್ ಪಡೆದಿದ್ದಾರೆ. ಈ ಹಿಟ್ ಜೋಡಿಯಿಂದ ಮತ್ತೊಂದು ಹಿಟ್ ಸಿನಿಮಾ ಬರಲಿದೆ ಎನ್ನುವುದು ಇಂಡಸ್ಟ್ರಿ ಕನಸು.
Live Tv
[brid partner=56869869 player=32851 video=960834 autoplay=true]
ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಸಂಗೀತ ನಿರ್ದೇಶಕ ಮತ್ತು ರಾಕ್ಸ್ಟಾರ್ ಎಂದೇ ಜನಪ್ರಿಯರಾಗಿರುವ ದೇವಿ ಶ್ರೀಪ್ರಸಾದ್ (Devi Sriprasad) ಅಲಿಯಾಸ್ ಡಿಎಸ್ಪಿ, ಟಿ-ಸೀರೀಸ್ ಜೊತೆಗೆ ಕೈಜೋಡಿಸಿ ‘ಓ ಪರಿ’ (O Pari) ಎಂಬ ಹಿಂದಿ ಸಿಂಗಲ್ ಹೊರತಂದಿರುವುದು, ಅದನ್ನು ಇತ್ತೀಚೆಗೆ ಮುಂಬೈನಲ್ಲಿ ರಣವೀರ್ ಸಿಂಗ್ ಬಿಡುಗಡೆ ಮಾಡಿದ್ದು ಗೊತ್ತೇ ಇದೆ. ಇದೊಂದು ಪ್ಯಾನ್ ಇಂಡಿಯಾ ಹಾಡಾಗಿದ್ದು, ಹಿಂದಿಯಲ್ಲದೆ, ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲೂ ಮೂಡಿಬಂದಿದೆ. ಈಗ ‘ಓ ಪರಿ’ಯ ತಮಿಳಿನ ಅವತರಣಿಕೆಯಾದ ‘ಓ ಪೆಣ್ಣೆ’ ಮತ್ತು ತೆಲುಗು ಅವತರಣಿಕೆಯಾದ ‘ಓ ಪಿಲ್ಲ’ ಹಾಡುಗಳನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ. ತಮಿಳು ಮತ್ತು ತೆಲುಗು ‘ಬಿಗ್ ಬಾಸ್’ ಕಾರ್ಯಕ್ರಮಗಳ ಲಾಂಚ್ನಲ್ಲಿ ಎರಡೂ ಹಾಡುಗಳು ಬಿಡುಗಡೆಯಾಗಿದ್ದು, ತಮಿಳು ಹಾಡನ್ನು ಕಮಲ್ ಹಾಸನ್ ಬಿಡುಗಡೆ ಮಾಡಿದರೆ, ತೆಲುಗು ಹಾಡನ್ನು ನಾಗಾರ್ಜುನ ಬಿಡುಗಡೆ ಮಾಡಿ ಡಿಎಸ್ಪಿಗೆ ಶುಭ ಕೋರಿದ್ದಾರೆ.
‘ಓ ಪಿಲ್ಲ’ ಹಾಡನ್ನು ಬಿಡುಗಡೆ ಮಾಡಿ ಮಾತನಾಡಿರುವ ನಾಗಾರ್ಜುನ (Nagarjun), ‘’ಓ ಪರಿ’ ಹಾಡು ಸೂಪರ್ ಹಿಟ್ ಆಗಿದೆ, ಈ ಹಾಡು ತೆಲುಗಿನಲ್ಲೂ ಮೂಡಿಬರಬೇಕಿತ್ತು ಅಂದುಕೊಳ್ಳುತ್ತಿರುವಾಗಲೇ, ಡಿಎಸ್ಪಿ ತೆಲುಗು ಹಾಡಿನೊಂದಿಗೆ ಬಂದಿದ್ದಾರೆ. ಈ ಹಾಡು ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ. ನನಗೆ ಮೊದಲಿನಿಂದಲೂ ಡಿಎಸ್ಪಿ ಅವರ ಪ್ರತಿಭೆ ಕುರಿತು ವಿಶೇಷವಾದ ಕುತೂಹಲ, ಆಸಕ್ತಿ ಎರಡೂ ಇದೆ. ಅವರು ಹೇಗೆ ಇಷ್ಟೊಂದು ಅದ್ಭುತವಾಗಿ ಕೆಲಸ ಮಾಡುವುದರ ಜೊತೆಗೆ, ಹೇಗೆ ಈ ರೀತಿ ಹಿಟ್ ಹಾಡುಗಳನ್ನು ಕೊಡುವುದಕ್ಕೆ ಸಾಧ್ಯ ಎಂಬ ಪ್ರಶ್ನೆ ಇದೆ. ಹಾಗಿರುವಾಗಲೇ ಡಿಎಸ್ಪಿ ಇನ್ನೊಂದು ಅದ್ಭುತ ಹಾಡಿನೊಂದಿಗೆ ವಾಪಸ್ಸಾಗಿದ್ದಾರೆ’ ಎಂದಿದ್ದಾರೆ ನಾಗಾರ್ಜುನ. ಇದನ್ನೂ ಓದಿ:ಬಿಗ್ ಬಾಸ್ ಆಟಕ್ಕೆ ಫುಲ್ ಸ್ಟಾಪ್ ಇಡಲು ನಿರ್ಧರಿಸಿದ ಆರ್ಯವರ್ಧನ್ ಗುರೂಜಿ
ಡಿಎಸ್ಪಿ ತಮಗೆ ಬಹಳ ವರ್ಷಗಳಿಂದ ಗೊತ್ತು ಎಂದು ಹೇಳಿಕೊಂಡಿರುವ ಕಮಲ್ ಹಾಸನ್ (Kamal Haasan), ‘ಅವರು ತಮ್ಮ ಹಾಡು ಮತ್ತು ಪ್ರತಿಭೆಯಿಂದ ನನ್ನನ್ನು ಖುಷಿಪಡಿಸುತ್ತಲೇ ಇದ್ದಾರೆ. ತಮ್ಮ ಸಾಧನೆಗಳಿಂದ ಹೊಸಹೊಸ ಮೈಲಿಗಲ್ಲುಗಳನ್ನು ತಲುಪುತ್ತಿದ್ದಾರೆ. ಪ್ರತಿಯೊಬ್ಬ ಸಂಗೀತ ನಿರ್ದೇಶಕರು ಸಹ ಈ ನಿಟ್ಟಿನಲ್ಲಿ ಹೊಸ ಸಾಧನೆಗಳನ್ನು ಮಾಡುವುದರ ಬಗ್ಗೆ ಯೋಚಿಸಬೇಕು. ಅವರ ಸಾಧನೆ ಮತ್ತು ಕೆಲಸಗಳಿಗೆ ಪ್ರತಿಯಾಗಿ ಅವರಿಗೆ ಯಶಸ್ಸು ಸಿಗುತ್ತಲೇ ಇದ್ದು, ಈಗ ಓ ಪರಿ ಮೂಲಕ ಮತ್ತೊಂದು ದೊಡ್ಡ ಯಶಸ್ಸನ್ನು ಕಂಡಿದ್ದಾರೆ ಡಿಎಸ್ಪಿ. ಅವರು ಇನ್ನಷ್ಟು ಎತ್ತರಗಳನ್ನು ಕಾಣಲಿ ಎನ್ನುವುದರ ಜೊತೆಗೆ, ಅವರಿಗೆ ಬೆನ್ನೆಲುಬಾಗಿ ನಿಂತಿರುವ ಭೂಷಣ್ ಕುಮಾರ್‌ರಂತಹವರ ಸಹಕಾರ ಹೀಗೆಯೇ ಮುಂದುವರೆಯಲಿ’ ಎಂದು ಹಾರೈಸಿದ್ದಾರೆ.
ಕಮಲ್ ಹಾಸನ್ ಮತ್ತು ನಾಗಾರ್ಜುನ ಅವರ ಸಹಕಾರ ಮರೆಯುವುದಕ್ಕೆ ಸಾಧ್ಯವೇ ಇಲ್ಲ ಎನ್ನುವ ಡಿಎಸ್ಪಿ, ಅವರಿಬ್ಬರ ಪ್ರೋತ್ಸಾಹವಿಲ್ಲದೆ ಇಷ್ಟು ದೂರ ಬರುವುದಕ್ಕೆ ಸಾಧ್ಯವೇ ಇಲ್ಲ ಎಂದಿದ್ದಾರೆ. ಇಂಥದ್ದೊಂದು ಅಂತಾರಾಷ್ಟ್ರೀಯ ಮಟ್ಟದ ಹಾಡಿನ ಬಗ್ಗೆ ನಾನು ಮೊದಲು ಪ್ರಸ್ತಾಪ ಮಾಡಿದ್ದು ಕಮಲ್ ಹಾಸನ್ ಅವರ ಬಳಿ. ಅವರ ಪ್ರೋತ್ಸಾಹದ ಮಾತುಗಳು ನನ್ನನ್ನು ಈ ಹಾಡು ಸಂಯೋಜಿಸುವಂತೆ ಮಾಡಿತು. ಅವರ ಸಂಗೀತಾಸಕ್ತಿಯೇ ನಮ್ಮಿಬ್ಬರನ್ನೂ ಇಷ್ಟು ಹತ್ತಿರಕ್ಕೆ ಸೇರಿಸಿದ್ದು. ಅದೇ ಕಾರಣಕ್ಕೆ ಈ ಹಾಡನ್ನು ಅವರಿಂದಲೇ ಬಿಡುಗಡೆ ಮಾಡಿಸಲಾಯಿತು ಎಂದು ಹೇಳಿಕೊಂಡಿದ್ದಾರೆ.
Live Tv
[brid partner=56869869 player=32851 video=960834 autoplay=true]
ಭಾರತೀಯ ಸಿನಿಮಾ ರಂಗದ ಖ್ಯಾತ ನಟ ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್’ (Ponniyin Selvan) ಸಿನಿಮಾವನ್ನು ಸಿನಿ ಪ್ರೇಕ್ಷಕರು ಕೊಂಡಾಡುತ್ತಿದ್ದಾರೆ. ಬಾಕ್ಸ್ ಆಫೀಸಿನಲ್ಲಿ ದಾಖಲೆ ರೀತಿಯಲ್ಲಿ ಈ ಚಿತ್ರ ಕಲೆಕ್ಷನ್ ಮಾಡುತ್ತಿದೆ. ಈವರೆಗೂ 250 ಕೋಟಿಗೂ ಅಧಿಕ ಹಣವನ್ನು ಈ ಚಿತ್ರ ಗಳಿಸಿದೆ. ದೇಶಕ್ಕೆ ದೇಶವೇ ಈ ಸಿನಿಮಾವನ್ನು ಕೊಂಡಾಡುತ್ತಿರುವ ಹೊತ್ತಿನಲ್ಲಿ ತಮಿಳಿನ ಖ್ಯಾತ ನಟ ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನಿನ್ನೆಯಷ್ಟೇ ಈ ಸಿನಿಮಾವನ್ನು ಕಮಲ್ ಹಾಸನ್ (Kamal Haasan) ವೀಕ್ಷಿಸಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಕಮಲ್ ಹಾಸನ್, ಚಿತ್ರದ ಬಗ್ಗೆ ಸಾಕಷ್ಟು ಸಕಾರಾತ್ಮಕ ಮಾತುಗಳನ್ನು ಹೇಳಿದ್ದಾರೆ. ಕಥೆ ಚೆನ್ನಾಗಿದ್ದರೆ ಸಿನಿಮಾ ಗೆಲ್ಲುತ್ತದೆ ಎನ್ನುವುದಕ್ಕೆ ಈ ಚಿತ್ರವೇ ಸಾಕ್ಷಿ ಎಂದು ಹೇಳಿದ್ದಾರೆ. ಆಂಧ್ರದಲ್ಲಿ ಈ ಚಿತ್ರಕ್ಕೆ ಬೆಂಬಲ ಸಿಗುತ್ತಿಲ್ಲ ಎನ್ನುವ ಹೇಳಿಕೆಯನ್ನು ಅಲ್ಲಗಳೆದಿರುವ ಅವರು, ಯಾರೋ ಹೇಳುತ್ತಾರೆ ಅಂತ ನಂಬೋದು ಬೇಡ. ತೆಲುಗಿನಲ್ಲೂ ಈ ಚಿತ್ರಕ್ಕೆ ಬೆಂಬಲ ವ್ಯಕ್ತವಾಗಿದೆ ಅಂದಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಪೈಲ್ವಾನ್‌ಗಳು: ಎನು ಇದು ಹೊಸ ಟ್ವಿಸ್ಟ್
ಪೊನ್ನಿಯಿನ್ ಸೆಲ್ವನ್ ಸಿನಿಮಾದ ಕಥಾ ಹಂದರದ ಬಗ್ಗೆ ಮಾತನಾಡಿರುವ ಕಮಲ್, ಚೋಳ ರಾಜರು ಹಿಂದೂಗಳಲ್ಲ (Hindu) ಎಂದು ಹೇಳಿದ್ದು, ಈ ಮಾತೇ ವಿವಾದಕ್ಕೆ ಕಾರಣವಾಗಿದೆ. ಚೋಳ ರಾಜರು ಯಾಕೆ ಹಿಂದೂಗಳಲ್ಲ ಅನ್ನುವುದನ್ನೂ ವಿವರಿಸಿರುವ ಅವರು, ‘ಚೋಳನ ಕಾಲದಲ್ಲಿ ಹಿಂದೂ ಧರ್ಮವೇ ಇರಲಿಲ್ಲ. ರಾಜರಾಜ ಚೋಳನು ಆಳುತ್ತಿದ್ದ ವೇಳೆ ಶೈವ ಮತ್ತು ವೈಷ್ಣವ ಧರ್ಮ ಮಾತ್ರವಿತ್ತು. ಬ್ರಿಟಿಷರು ನಮ್ಮ ದೇಶಕ್ಕೆ ಬಂದಾಗ ನಮ್ಮನ್ನ ಹೇಗೆ ಕರೆಯಬೇಕು ಎಂದು ಅವರಿಗೆ ಗೊತ್ತಾಗಲಿಲ್ಲ. ಆನಂತರ ಅವರು ಹಿಂದೂ ಅಂತ ಕರೆದರು ಎಂದಿದ್ದಾರೆ.
ಕಮಲ್ ಹಾಸನ್ ಮಾತಿಗೂ ಮೊದಲು ತಮಿಳಿನ ಮತ್ತೋರ್ವ ಖ್ಯಾತ ನಿರ್ದೇಶಕ ವೆಟ್ರಿಮಾರನ್ ಕೂಡ ‘ರಾಜರಾಜ ಚೋಳನು ಹಿಂದೂ ಆಗಿರಲಿಲ್ಲ’ ಎಂಬ ಹೇಳಿಕೆ ನೀಡಿದ್ದರು. ಇದು ಕೂಡ ವಿವಾದಕ್ಕೆ ಕಾರಣವಾಗಿತ್ತು. ಪೊನ್ನಿಯಿನ್ ಸೆಲ್ವನ್ ಸಿನಿಮಾ ನೋಡಿದ ನಂತರ ಮಾತನಾಡಿದ್ದ ವೆಟ್ರಿಮಾರನ್ ‘ನಿರಂತರವಾಗಿ ನಮ್ಮಅಸ್ಮಿತೆಯನ್ನು ಕಸಿದುಕೊಳ್ಳಲಾಗುತ್ತಿದೆ. ವಳ್ಳುವರ್ ಅವರನ್ನು ಕೇಸರಿಕರಣ ಮಾಡುವುದು ಹಾಗೂ ರಾಜ ರಾಜ ಚೋಳನನ್ನು ಹಿಂದೂ ಎಂದು ಕರೆಯುವುದು ನಡೆದೇ ಇದೆ’ ಎಂದು ತಿವಿದಿದ್ದರು. ಅವರ ಮಾತು ಪರ ವಿರೋಧದ ಚರ್ಚೆಗೆ ಕಾರಣವಾಗಿತ್ತು.
ವೆಟ್ರಿಮಾರನ್ (Vetrimaran) ಆಡಿದ ಮಾತಿಗೆ ಬಿಜೆಪಿಯ ಮುಖಂಡ ಎಚ್.ರಾಜಾ (H.Raj) ಅವರು ಪ್ರತಿಕ್ರಿಯೆ ನೀಡಿ, ‘ನಿರ್ದೇಶಕ ವೆಟ್ರಿಮಾರನ್ ಅವರಿಗೆ ಇತಿಹಾಸ ಚೆನ್ನಾಗಿ ತಿಳಿದಿಲ್ಲ. ಅವರು ಇತಿಹಾಸವನ್ನು ಸರಿಯಾಗಿಯೂ ಓದಿಕೊಂಡಿಲ್ಲ. ರಾಜ ರಾಜ ಚೋಳನು ನಿರ್ಮಿಸಿದ ಎರಡು ಮಸೀದಿ ಅಥವಾ ಚರ್ಚ್ ತೋರಿಸಲಿ’ ಎಂದು ಸವಾಲು ಹಾಕಿದ್ದಾರೆ. ಈ ಮಾತಿಗೆ ಪೂರಕ ಎನ್ನುವಂತೆ ಕಮಲ್ ಹಾಸನ್ ಮಾತನಾಡಿದ್ದಾರೆ. ವೆಟ್ರಿಮಾರನ್ ಮಾತಿಗೆ ಬೆಂಬಲ ಸೂಚಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ವಿಕ್ರಮ್ ಸಿನಿಮಾದ ಗೆಲುವಿನ ಅಲೆಯಲ್ಲಿ ತೇಲುಗುತ್ತಿರುವ ಕಮಲ್ ಹಾಸನ್ ಅಭಿಮಾನಿಗಳಿಗೆ ಇವತ್ತು ಮತ್ತೊಂದು ಖುಷಿ ಸುದ್ದಿ ಸಿಕ್ಕಿದೆ. ಎರಡು ವರ್ಷಗಳ ಹಿಂದೆ ನಿಂತಿದ್ದ ಇಂಡಿಯನ್ 2 ಸಿನಿಮಾ ಮತ್ತೆ ಚಾಲನೆ ಸಿಕ್ಕಿದ್ದು, ಈ ಕುರಿತು ಚಿತ್ರತಂಡವು ಹೊಸ ಲುಕ್ ರಿಲೀಸ್ ಮಾಡುವ ಮೂಲಕ ಅಧಿಕೃತ ಮಾಹಿತಿಯನ್ನು ಹೊರ ಹಾಕಿದೆ. ರಿಲೀಸ್ ಆಗಿರುವ ನಯಾ ಲುಕ್ ನೋಡಿ ಕಮಲ್ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.
ಅಂದುಕೊಂಡಂತೆ ಆಗಿದ್ದರೆ ಇಂಡಿಯನ್ 2 ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿಯಬೇಕಿತ್ತು. 2020ರಲ್ಲಿ ನಿರ್ದೇಶಕ ಶಂಕರ್ ಈ ಸಿನಿಮಾದ ಚಿತ್ರೀಕರಣ ಶುರು ಮಾಡಿದ್ದರು. ಆದರೆ, ಕ್ರೇನ್ ದುರಂತಕ್ಕೆ ಕಾರ್ಮಿಕರು ಬಲಿಯಾಗಿ, ಅಲ್ಲಿಗೆ ಶೂಟಿಂಗ್ ನಿಲ್ಲಿಸಿದ್ದರು. ನಂತರದ ದಿನಗಳಲ್ಲಿ ಕೋವಿಡ್ ಎಂಬ ಮಹಾಮಾರಿ ಕಾಲಿಟ್ಟಿತ್ತು. ಹಾಗಾಗಿ ಎರಡು ವರ್ಷಗಳ ಕಾಲ ಅವರು ಈ ಸಿನಿಮಾದ ಬಗ್ಗೆ ಯಾವುದೇ ಮಾಹಿತಿಯನ್ನೂ ನೀಡಿರಲಿಲ್ಲ. ಇದನ್ನೂ ಓದಿ: ಸಿನಿಮಾ ಆಗಲಿದೆ ಸೋನು ಶ್ರೀನಿವಾಸ್ ಗೌಡ ಲೈಫ್ ಸ್ಟೋರಿ: ಯಾರಾಗಲಿದ್ದಾರೆ ಹೀರೋಯಿನ್?
ಇಂದು ಇಂಡಿಯನ್ 2 ಸಿನಿಮಾದ ಅಪ್ ಡೇಟ್ ವಿವರನ್ನು ನಿರ್ದೇಶಕ ಶಂಕರ್ ನೀಡಿದ್ದು, ಅತೀ ಶೀಘ್ರದಲ್ಲೇ ಶೂಟಿಂಗ್ ಶುರು ಮಾಡುವುದಾಗಿಯೂ ಹೇಳಿಕೊಂಡಿದ್ದಾರೆ. 1996ರಲ್ಲಿ ಇಂಡಿಯನ್ ಸಿನಿಮಾ ರಿಲೀಸ್ ಆಗಿತ್ತು. ಬಾಕ್ಸ್ ಆಫೀಸನಲ್ಲಿ ಭಾರೀ ಗಳಿಕೆ ಮಾಡಿತ್ತು. ಆನಂತರ ಇಂಡಿಯನ್ 2 ಸಿನಿಮಾ ಮಾಡುವ ವಿಚಾರ ಬಂತು. 24 ವರ್ಷಗಳ ಬಳಿಕೆ ಇಂಡಿಯನ್ ಸಿಕ್ವೆಲ್ ಸಿನಿಮಾ ಬರುತ್ತಿದ್ದು, ಸಹಜವಾಗಿಯೇ ಅಭಿಮಾನಿಗಳಿಗೆ ಖುಷಿ ಆಗಿದೆ.
Live Tv
[brid partner=56869869 player=32851 video=960834 autoplay=true]
ತಮಿಳಿನ ಖ್ಯಾತ ನಟ ಕಮಲ್ ಹಾಸನ್ ನಟನೆಯ ‘ವಿಕ್ರಮ್’ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಭರ್ಜರಿ ಬೇಟೆಯಾಡಿದೆ. ಅದು ಯಾವ ಮಟ್ಟಿಗೆ ಯಶಸ್ಸು ತಂದುಕೊಟ್ಟಿದೆ ಎಂದರೆ, ಕಮಲ್ ಈವರೆಗೂ ಮಾಡಿದ್ದ ಅಷ್ಟೂ ಸಾಲವನ್ನು ತೀರಿಸಿದೆಯಂತೆ. ಅಲ್ಲದೇ, ಹಲವು ವರ್ಷಗಳ ನಂತರ ಕಮಲ್ ಅವರಿಗೆ ದೊಡ್ಡ ಮಟ್ಟದ ಯಶಸ್ಸೂ ತಂದುಕೊಟ್ಟಿದೆ. ಹಾಗಾಗಿ ಕಮಲ್ ಜೊತೆ ನಿರ್ದೇಶಕ ಲೋಕೇಶ್ ಕೂಡ ಇದೀಗ ಸ್ಟಾರ್ ಡೈರೆಕ್ಟರ್ ಆಗಿದ್ದಾರೆ.
ವಿಕ್ರಮ್ ಭಾರೀ ಯಶಸ್ಸಿನ ಬೆನ್ನಲ್ಲೆ ಅವರಿಗೆ ಬಾಲಿವುಡ್ ನಲ್ಲಿ ಅವಕಾಶ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಅದೂ ಸಲ್ಮಾನ್ ಖಾನ್ ಸಿನಿಮಾದಲ್ಲಿ ಅನ್ನುವುದು ಮತ್ತೊಂದು ವಿಶೇಷ. ಸ್ವತಃ ಸಲ್ಮಾನ್ ಖಾನ್ ಅವರೇ ಲೋಕೇಶ್ ಅವರನ್ನು ಸಂಪರ್ಕಿಸಿ, ಮುಂದಿನ ದಿನಗಳಲ್ಲಿ ಕೆಲಸ ಮಾಡುವ ಆಹ್ವಾನ ನೀಡಿದ್ದಾರಂತೆ. ಈ ವಿಷಯ ಬಿಟೌನ್ ನಲ್ಲಿ ಭಾರೀ ಸದ್ದಂತೂ ಮಾಡುತ್ತಿದೆ. ಸಲ್ಮಾನ್ ಖಾನ್ ಕೂಡ ಓಡುವ ಕುದುರೆ ಆಗಿರುವುದರಿಂದ ಈಗಿನಿಂದಲೇ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ಇದನ್ನೂ ಓದಿ:ಅವಳಿ ಮಕ್ಕಳಿಗೆ ತಾಯಿಯಾಗಲಿದ್ದಾರಾ ಆಲಿಯಾ: ರಣ್‌ಬೀರ್ ಕೊಟ್ರು ಬ್ರೇಕಿಂಗ್ ನ್ಯೂಸ್
ವಿಕ್ರಮ್ ಸಿನಿಮಾದ ಬಹುತೇಕ ಯಶಸ್ಸನ್ನು ತನ್ನ ನಿರ್ದೇಶಕ ಮತ್ತು ಟೀಮ್ ಗೆ ಅರ್ಪಿಸಿದ್ದರು ಕಮಲ್. ದುಬಾರಿ ಕಾರನ್ನು ಉಡುಗೊರೆಯಾಗಿ ನೀಡಿದ್ದರು. ಸಹಾಯಕ ನಿರ್ದೇಶಕರಿಗೂ ಕೂಡ ಹಲವು ಉಡುಗೊರೆಯನ್ನು ನೀಡಿದ್ದರು. ಅಷ್ಟರ ಮಟ್ಟಿಗೆ ವಿಕ್ರಮ್ ಸಿನಿಮಾ ಗೆಲುವನ್ನು ದಾಖಲಿಸಿತ್ತು. ಹಾಗಾಗಿ ವಿಕ್ರಮ್ ಯಶಸ್ಸು ನಿರ್ದೇಶಕರಿಗೆ ಮತ್ತೊಂದು ಗುರುತರ ಜವಾಬ್ದಾರಿಯನ್ನು ನೀಡಿದೆ.
Live Tv
[brid partner=56869869 player=32851 video=960834 autoplay=true]