Tag: Kamal Haasan

  • ಐರೆನ್ ಲೆಗ್ ಎಂದು ಟೀಕಿಸಿದವರಿಗೆ ಉತ್ತರ ಕೊಟ್ಟ ಶ್ರುತಿ ಹಾಸನ್

    ಐರೆನ್ ಲೆಗ್ ಎಂದು ಟೀಕಿಸಿದವರಿಗೆ ಉತ್ತರ ಕೊಟ್ಟ ಶ್ರುತಿ ಹಾಸನ್

    ಸೂಪರ್ ಸ್ಟಾರ್ ಕಮಲ್ ಹಾಸನ್ (Kamal Haasan)  ಮಗಳಾಗಿ ಚಿತ್ರರಂಗಕ್ಕೆ ಕಾಲಿಟ್ಟ ಶ್ರುತಿ ಹಾಸನ್ (Shruti Haasan) ನಂತರದ ದಿನಗಳಲ್ಲಿ ಸರಿಯಾದ ಹಿಟ್‌ಗಳಿಲ್ಲದೇ ಸಾಕಷ್ಟು ವರ್ಷಗಳ ಕಾಲ ಐರೆನ್ ಲೆಗ್ ಎಂದು ಹಂಗಿಸಿದ್ದರು. ಇದೀಗ ಮತ್ತೆ ಶ್ರುತಿ ಹಾಸನ್ ಅಬ್ಬರ ಜೋರಾಗಿದೆ. ಟೀಕಿಸಿದವರಿಗೆ ಶ್ರುತಿ ಉತ್ತರಿಸಿದ್ದಾರೆ. ಇದನ್ನೂ ಓದಿ:ನಟಿ ಅನುಷ್ಕಾ ಶೆಟ್ಟಿಗೆ ನಿನ್ನೆ ಎಲೋನ್ ಮಸ್ಕ್ ಕೊಟ್ಟ ಗಿಫ್ಟ್ ಏನು?

    ಶ್ರುತಿ ಹಾಸನ್ ಅವರು ಸದಾ ಲವ್, ಡೇಟಿಂಗ್, ಬ್ರೇಕಪ್ ವಿಚಾರವಾಗಿಯೇ ಸುದ್ದಿಯಲ್ಲಿರುತ್ತಾರೆ. ಇದೀಗ ಚಿತ್ರರಂಗದಲ್ಲಿ ಸೆಕೆಂಡ್ ಇನ್ನಿಂಗ್ಸ್ ಮೂಲಕ ಕಮಾಲ್ ಮಾಡ್ತಿದ್ದಾರೆ.

    ಗ್ಯಾಪ್ ಬಳಿಕ ಶ್ರುತಿ ಹಾಸನ್, ರವಿತೇಜಾ ಜೊತೆ ಕ್ರ್ಯಾಕ್, ಪವನ್ ಕಲ್ಯಾಣ್ ಜೊತೆ ‘ವಕೀಲ್ ಸಾಬ್’ ಸಿನಿಮಾ ಮೂಲಕ ಮೋಡಿ ಮಾಡಿದ್ದರು. ಈ ವರ್ಷ ‘ವೀರಸಿಂಹ ರೆಡ್ಡಿ’ ಚಿತ್ರದಲ್ಲಿ ಬಾಲಯ್ಯ ಜೊತೆ ಶ್ರುತಿ ನಟಿಸಿದ್ದರು. ‘ವಾಲ್ತೇರು ವೀರಯ್ಯ’ ಸಿನಿಮಾದಲ್ಲಿ  ಮೆಗಾಸ್ಟಾರ್ ಚಿರಂಜೀವಿಗೆ ನಾಯಕಿಯಾಗಿ ನಟಿಸಿದ್ದರು.

    ಈ ವರ್ಷ ಸ್ಟಾರ್ ನಟರಿಗೆ ನಾಯಕಿಯಾಗುವ ಮೂಲಕ ಐರೆನ್ ಲೆಗ್ (Iron Leg) ಎಂಬ ಟೀಕೆಗೆ ತನ್ನ ಸಕ್ಸಸ್‌ನಿಂದ ಖಡಕ್ ಉತ್ತರ ಕೊಟ್ಟಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್‌ʼನಲ್ಲಿ (Salaar) ನಾಯಕಿಯಾಗಿ ನಟಿಸಿದ್ದಾರೆ.

  • ಪೊನ್ನಿಯೆನ್ ಸೆಲ್ವನ್ 2 ಟ್ರೈಲರ್ ಇವೆಂಟ್ ಫೋಟೋ ಆಲ್ಬಂ

    ಪೊನ್ನಿಯೆನ್ ಸೆಲ್ವನ್ 2 ಟ್ರೈಲರ್ ಇವೆಂಟ್ ಫೋಟೋ ಆಲ್ಬಂ

    ಖ್ಯಾತ ನಿರ್ದೇಶಕ ಮಣಿರತ್ನಂ (Mani Ratnam) ಕನಸಿನ ಕೂಸು ಐತಿಹಾಸಿಕ ದೃಶ್ಯಕಾವ್ಯ ಪೊನ್ನಿಯೆನ್ ಸೆಲ್ವನ್-2  (Ponnien Selvan 2) ಸಿನಿಮಾದ ಟ್ರೈಲರ್ ಹಾಗೂ ಸಾಂಗ್ ಕಾರ್ಯಕ್ರಮಕ್ಕೆ  ರಿಲೀಸ್ ಮೊನ್ನೆಯಷ್ಟೇ ಚೆನ್ನೈನಲ್ಲಿ  ನಡೆಯಿತು.

    ಅದ್ಧೂರಿಯಾಗಿ ನಡೆದ ಟ್ರೇಲರ್ (Trailer) ಹಾಗೂ ಆಡಿಯೋ (Song) ಲಾಂಚ್ ಕಾರ್ಯಕ್ರಮದಲ್ಲಿ ಚಿತ್ರರಂಗದ ಅನೇಕ ಗಣ್ಯರು ಹಾಜರಿದ್ದರು. ಕಾರ್ಯಕ್ರಮದಲ್ಲಿ ಮಾತುಗಳ ಜೊತೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಒತ್ತು ನೀಡಲಾಗಿತ್ತು.

    ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಉಳಗನಾಯಗನ್ ಕಮಲ್ ಹಾಸನ್ (Kamal Haasan) ಆಗಮಿಸಿ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ನೀಡಿದ್ದಾರೆ. ಟ್ರೇಲರ್ ಲಾಂಚ್ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದರು.

    ಮಣಿರತ್ನಂ, ಕಾರ್ತಿ, ಐಶ್ವರ್ಯ ರೈ (Aishwarya Rai), ವಿಕ್ರಮ್, ತ್ರಿಶಾ, ಜಯಂರವಿ, ಪ್ರಕಾಶ್ ರೈ (Prakash raj), ಶರತ್ ಕುಮಾರ್ ಸೇರಿದಂತೆ ಹಲವು ಸೂಪರ್ ಸ್ಟಾರ್ಸ್ ಈ ಕಾರ್ಯಕ್ರಮ ಸಾಕ್ಷಿಯಾಗಿದ್ದು ವಿಶೇಷವಾಗಿತ್ತು.

    ಕಲ್ಕಿ ಕೃಷ್ಣಮೂರ್ತಿ ಬರೆದ ಪೊನ್ನಿಯಿನ್ ಸೆಲ್ವನ್ ಕಾದಂಬರಿ ಆಧಾರಿಸಿ ನಿರ್ದೇಶಕ ಮಣಿರತ್ನಂ ಎರಡು ಭಾಗದಲ್ಲಿ ಈ ಚಿತ್ರವನ್ನು ತಯಾರಿಸಿದ್ದಾರೆ. ಕಳೆದ ವರ್ಷ ರಿಲೀಸ್ ಆಗಿದ್ದ ಮೊದಲ ಭಾಗಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು.

    ಪೊನ್ನಿಯಿನ್ ಸೆಲ್ವನ್ 500 ಕೋಟಿ ಬಾಚಿ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಲೈಕಾ ಪ್ರೊಡಕ್ಷನ್ ಜೊತೆಗೂಡಿ ಮಣಿರತ್ನಂ ನಿರ್ಮಿಸಿ ನಿರ್ದೇಶಿಸಿರುವ ಪೊನ್ನಿಯಿನ್ ಸೆಲ್ವನ್-2 ಸೀಕ್ವೆಲ್ ಟ್ರೇಲರ್ ರಿಲೀಸ್ ಆಗಿದ್ದು, ನಿರೀಕ್ಷೆ ನೂರ್ಮಡಿಗೊಳಿಸಿದೆ.

    ಚೋಳ ಸಾಮ್ರಾಜ್ಯದ ಗದ್ದುಗೆಗಾಗಿ ನಡೆಯುವ ಹೋರಾಟ, ಪಾಂಡ್ಯ ರಾಜರ ಕುತಂತ್ರ, ಚೋಳ ಸಾಮ್ರಾಜ್ಯ ನಾಶಪಡಿಸಲು ನಂದಿನಿ ಮಾಡುವ ಶಪಥ, ಕರಿಕಾಲನ್ ವೀರಾವೇಶದ ಹೋರಾಟ, ನಂದಿನಿ ಕರಿಕಾಲನ್ ಮುಖಾಮುಖಿಯಾಗುವ ಸನ್ನಿವೇಶ ಅದ್ಧೂರಿ ಮೇಕಿಂಗ್, ಬೃಹತ್ ಸೆಟ್ ಗಳು ಟ್ರೇಲರ್ ನಲ್ಲಿ ಝಗಮಗಿಸಿವೆ.

    ಕನ್ನಡ ಸೇರಿದಂತೆ ಐದು ಭಾಷೆಯಲ್ಲಿಯೂ ಪೊನ್ನಿಯಿನ್ ಸೆಲ್ವನ್-2 ಮೊದಲ ನೋಟ ರಿಲೀಸ್ ಆಗಿದ್ದು, ಭಾರೀ ಮೆಚ್ಚುಗೆಗೆ ಪಡೆದುಕೊಂಡಿದೆ. ಆಸ್ಕರ್ ವಿಜೇತ ಎ ಆರ್ ರೆಹಮಾನ್  (A.R. Rehaman) ಸಂಗೀತ ಸಿನಿಮಾಕ್ಕಿದೆ.

    ಪ್ಯಾನ್ ಇಂಡಿಯಾ ಸಿನಿಮಾವಾಗಿರುವ ಪೊನ್ನಿಯಿನ್ ಸೆಲ್ವನ್-2 ಏಪ್ರಿಲ್ 28ಕ್ಕೆ ವರ್ಲ್ಡ್ ವೈಡ್ ತೆರೆಗೆ ಬರ್ತಿದೆ. ಐಶ್ವರ್ಯ ರೈ, ತ್ರಿಷಾ, ಕಾರ್ತಿ, ವಿಕ್ರಂ, ಪ್ರಕಾಶ್ ರೈ, ಶರತ್ ಕುಮಾರ್, ಜಯಂರವಿ, ಐಶ್ವರ್ಯ ಲಕ್ಷ್ಮೀ, ಶೋಭಿತಾ ಧುಲಿಪಾಲ, ಪ್ರಭು ಸೇರಿದಂತೆ ದೊಡ್ಡ ಕ್ಯಾನ್ವಸ್ ಚಿತ್ರದಲ್ಲಿದೆ.

  • ಬಾಯ್ ಫ್ರೆಂಡ್  ಜೊತೆಗಿನ ‘ಆ’ ಫೋಟೋ ಹಂಚಿಕೊಂಡ ಕಮಲ್ ಹಾಸನ್ ಪುತ್ರಿ

    ಬಾಯ್ ಫ್ರೆಂಡ್ ಜೊತೆಗಿನ ‘ಆ’ ಫೋಟೋ ಹಂಚಿಕೊಂಡ ಕಮಲ್ ಹಾಸನ್ ಪುತ್ರಿ

    ಭಾರತೀಯ ಸಿನಿಮಾ ರಂಗದ ಖ್ಯಾತ ನಟ ಕಮಲ್ ಹಾಸನ್ (Kamal Haasan) ಪುತ್ರಿ ಹಾಗೂ ನಟಿಯೂ ಆಗಿರುವ ಶ್ರುತಿ ಹಾಸನ್ (Shruti Haasan) ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಬಾಯ್ ಫ್ರೆಂಡ್ ಜೊತೆಗಿನ ಫೋಟೊ ಹಂಚಿಕೊಂಡಿದ್ದಾರೆ. ಖಾಸಗಿ ಕ್ಷಣದ ಆ ಫೋಟೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೇ, ಇಂಥ ಫೋಟೊ ಹಂಚಿಕೊಳ್ಳಲು ಕಾರಣವೇನು ಎಂದು ಹಲವರು ಪ್ರಶ್ನೆ ಮಾಡಿದ್ದಾರೆ.

    ಹಲವು ವರ್ಷಗಳಿಂದ ಶ್ರುತಿ ಹಾಸನ್, ಶಾಂತನು (Shantanu) ಜೊತೆ ರಿಲೇಷನ್ ಶಿಪ್ ನಲ್ಲಿ (Relationship) ಇದ್ದಾರೆ. ಅಲ್ಲದೇ, ಮುಂಬೈನಲ್ಲಿ ಒಂದೇ ಮನೆಯಲ್ಲೇ ವಾಸಿಸುತ್ತಿದ್ದಾರೆ. ಶಾಂತನು ಜೊತೆಗಿನ ಸಂಬಂಧಕ್ಕಾಗಿ ಸಾಕಷ್ಟು ಸುದ್ದಿ ಕೂಡ ಮಾಡಿದ್ದಾರೆ. ಶಾಂತನು ಕುರಿತಾಗಿ ಆಗಾಗ್ಗೆ ಪೋಸ್ಟ್ ಗಳನ್ನು ಹಾಕುತ್ತಲೇ ಇರುತ್ತಾರೆ. ಆದರೆ, ಈ ಬಾರಿ ಬೆಡ್ ರೂಮ್ ನಲ್ಲಿರುವ ಫೋಟೋ ಹಂಚಿಕೊಂಡು ಎಡವಟ್ಟು ಮಾಡಿಕೊಂಡಿದ್ದಾರೆ. ಇದನ್ನೂ ಓದಿ:ನನಗೆ ಮಕ್ಕಳು ಇಲ್ಲದಿರಬಹುದು, ಶ್ವಾನಗಳೇ ನನಗೆ ಮಕ್ಕಳ ಸಮಾನ: ರಮ್ಯಾ

    ಇಬ್ಬರೂ ಅರೆನಗ್ನರಂತೆ ಕಾಣುವ ಫೋಟೋವೊಂದನ್ನು ಶೇರ್ ಮಾಡಿರುವ ಶ್ರುತಿ ಹಾಸನ್, ‘ಶಾಂತನು, ನೀನು ನನ್ನ ಲವ್, ನೀನು ನನ್ನ ವಜ್ರ, ನೀನು ನಕ್ಷತ್ರ, ಬೆಳಕು ಎಂತಹ ಸ್ಥಿತಿಯಲ್ಲೂ ನಾನು ನಿನ್ನೊಂದಿಗೆ ಇರುತ್ತೇನೆ’ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಶಾಂತನು ಮೇಲಿನ ಪ್ರೀತಿಯನ್ನು ಅವರು ಈ ಮೂಲಕ ವ್ಯಕ್ತಪಡಿಸಿದ್ದಾರೆ.

    ಶಾಂತನು ಮತ್ತು ಶ್ರುತಿ ಹಾಸನ್ ಹಲವು ವರ್ಷಗಳಿಂದ ಸಹಜೀವನ ನಡೆಸುತ್ತಿರುವುದು ಗುಟ್ಟಿನ ಸಂಗತಿ ಏನೂ ಅಲ್ಲ. ಎರಡೂ ಕುಟುಂಬಗಳ ಒಪ್ಪಿಗೆ ಪಡೆದುಕೊಂಡೇ ಅವರು ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅಲ್ಲದೇ, ಅನೇಕ ಪ್ರವಾಸಗಳನ್ನು ಒಟ್ಟಿಗೆ ಮಾಡಿದ್ದಾರೆ. ಹಾಗಾಗಿ ಈ ಫೋಟೋಗಳು ಸಹಜ ಎನ್ನುವ ಕಾಮೆಂಟ್ ಕೂಡ ಹರಿದಾಡುತ್ತಿವೆ.

  • ಬ್ಯಾಕ್‌ಲೆಸ್ ಫೋಟೋ ಶೇರ್‌, ಇಂಟರ್‌ನೆಟ್‌ಗೆ ಬೆಂಕಿ ಹಚ್ಚಿದ `ಸಲಾರ್’ ನಟಿ

    ಬ್ಯಾಕ್‌ಲೆಸ್ ಫೋಟೋ ಶೇರ್‌, ಇಂಟರ್‌ನೆಟ್‌ಗೆ ಬೆಂಕಿ ಹಚ್ಚಿದ `ಸಲಾರ್’ ನಟಿ

    ಸೌತ್‌ನ ಬ್ಯುಸಿ ಶ್ರುತಿ ಹಾಸನ್ (Shruthi Haasan) ತಮ್ಮ ಹೊಸ ಫೋಟೋಶೂಟ್ ಮೂಲಕ ಇಂಟರ್‌ನೆಟ್‌ನಲ್ಲಿ ಸದ್ದು ಮಾಡ್ತಿದ್ದಾರೆ. ಕೈತುಂಬಾ ಸಿನಿಮಾಗಳ ಮಧ್ಯೆ ಇದೀಗ ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ನಟಿಯ ಬ್ಯಾಕ್‌ಲೆಸ್‌ ಫೋಟೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.

    ಈ ವರ್ಷ ಸೂಪರ್ ಸ್ಟಾರ್ ಬಾಲಯ್ಯ (Balayya)ಮತ್ತು ಮೆಗಾಸ್ಟಾರ್ ಚಿರಂಜೀವಿ (Chiranjeevi) ಸಿನಿಮಾಗೆ ನಾಯಕಿಯಾಗುವ ಭರ್ಜರಿ ಓಪನಿಂಗ್ಸ್ ಸಿಕ್ಕಿತ್ತು. ಇದೀಗ ಮತ್ತಷ್ಟು ಸಿನಿಮಾಗಳತ್ತ ನಟಿ ಬ್ಯುಸಿಯಾಗಿದ್ದಾರೆ. ಬಾಯ್‌ಫ್ರೆಂಡ್ ಜೊತೆಗಿನ ಸುತ್ತಾಟದ ಬಗ್ಗೆ ಆಗಾಗ ಸುದ್ದಿಯಲ್ಲಿರುವ ನಟಿ ಈಗ ಗ್ಲ್ಯಾಮರಸ್ ಫೋಟೋಶೂಟ್‌ನಿಂದ ಶ್ರುತಿ ಸುದ್ದಿಯಲ್ಲಿದ್ದಾರೆ. ಇದನ್ನೂ ಓದಿ: ಮತ್ತೊಂದು ಮದುವೆ ಸಂಭ್ರಮಕ್ಕೆ ಸಿದ್ಧವಾದ ಸ್ವರಾ ಭಾಸ್ಕರ್

     

    View this post on Instagram

     

    A post shared by Shruti Haasan (@shrutzhaasan)

    ಕಪ್ಪು ಬಣ್ಣದ ಡ್ರೆಸ್ ಧರಿಸಿ ಚೆಂದದ ಹೇರ್ ಸ್ಟೈಲ್ ಮಾಡಿಕೊಂಡು ನಟಿ ಮಿಂಚ್ತಿದ್ದಾರೆ. ಶ್ರುತಿ ಮಾದಕ ನೋಟ ಪಡ್ಡೆಹುಡುಗರ ನಿದ್ದೆಕೆಡಿಸುತ್ತಿದೆ. ಸಲಾರ್ ಸುಂದರಿಯ ಹಾಟ್ ಪೋಸ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

     

    View this post on Instagram

     

    A post shared by Shruti Haasan (@shrutzhaasan)

    ಸೌತ್ ಬ್ಯೂಟಿ ಶ್ರುತಿ ಹಾಸನ್ ಸದ್ಯ ಪ್ರಶಾಂತ್ ನೀಲ್ ನಿರ್ದೇಶನದ `ಸಲಾರ್’ (Salar), ಹಾಲಿವುಡ್‌ನ (Hollywood) ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ಹೊಸ ಬಗೆಯ ಕಥೆ ಕೇಳುವಲ್ಲಿ ನಟಿ ಬ್ಯುಸಿಯಾಗಿದ್ದಾರೆ.

  • ತಮಿಳಿನ ಈ ಹೀರೋಗೆ 100 ಕೋಟಿ ವೆಚ್ಚದಲ್ಲಿ ಚಿತ್ರ ನಿರ್ಮಾಣ ಮಾಡ್ತಾರೆ ಕಮಲ್ ಹಾಸನ್

    ತಮಿಳಿನ ಈ ಹೀರೋಗೆ 100 ಕೋಟಿ ವೆಚ್ಚದಲ್ಲಿ ಚಿತ್ರ ನಿರ್ಮಾಣ ಮಾಡ್ತಾರೆ ಕಮಲ್ ಹಾಸನ್

    ಕಾಲಿವುಡ್ (Kollywood) ಸೂಪರ್ ಸ್ಟಾರ್ ಕಮಲ್ ಹಾಸನ್ `ವಿಕ್ರಮ್’ (Vikram) ಸಿನಿಮಾದ ಸಕ್ಸಸ್ ನಂತರ ಹಲವು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗ ನಟನೆ ಜೊತೆ ನಿರ್ಮಾಣಕ್ಕೂ ಕೈಹಾಕಿದ್ದಾರೆ. ತಮಿಳಿನ ಸ್ಟಾರ್ ಹೀರೋಗೆ 100 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲು ಕಮಲ್ ಮುಂದಾಗಿದ್ದಾರೆ.

    ಸಕ್ಸಸ್ ಸಿಗದೇ ಕಂಗಲಾಗಿದ್ದ ಕಮಲ್ ಹಾಸನ್ (Kamal Haasan), ಕಳೆದ ವರ್ಷ ಅವರು ಭರ್ಜರಿ ಗೆಲುವು ಪಡೆದರು. ಅವರು ನಟಿಸಿದ `ವಿಕ್ರಮ್’ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಯಿತು. ಲೋಕೇಶ್ ಕನಗರಾಜ್ ನಿರ್ದೇಶನದ ಆ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಕಮಲ್ ಹಾಸನ್. ವಿಶ್ವಾದ್ಯಂತ ಭರ್ಜರಿ ಪ್ರದರ್ಶನ ಕಂಡಿತ್ತು. ಸಿನಿಮಾ 400 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತು. ಇದರಿಂದ ಕಮಲ್ ಹಾಸನ್ ಅವರಿಗೆ ಸಖತ್ ಲಾಭ ಆಯಿತು. ಇದನ್ನೂ ಓದಿ: ವರುಣ್ ತೇಜ್ ಜೊತೆ ಲಾವಣ್ಯ ಮದುವೆ? ಸ್ಪಷ್ಟನೆ ನೀಡಿದ ನಟಿ

    `ವಿಕ್ರಮ್’ ಚಿತ್ರದಿಂದ ಕಾಸು ಮಾಡಿಕೊಂಡಿರುವ ಕಮಲ್ ಹಾಸನ್ ಅವರು ಮತ್ತೆ ನಿರ್ಮಾಪಕನಾಗಿ ಹೆಜ್ಜೆ ಇಡುತ್ತಿದ್ದಾರೆ. ನಟ ಸಿಂಬು ನಟಿಸಲಿರುವ ಹೊಸ ಚಿತ್ರಕ್ಕೆ ಕಮಲ್ ಹಾಸನ್ ಅವರು 100 ಕೋಟಿ ರೂಪಾಯಿ ಬಂಡವಾಳ ಹೂಡಲಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಆದರೆ ಈ ಬಗ್ಗೆ ಯಾರೂ ಅಧಿಕೃತವಾಗಿ ಹೇಳಿಕೆ ನೀಡಿಲ್ಲ.

    ತಮಿಳಿನ ಪ್ರತಿಭಾನ್ವಿತ ನಟ ಸಿಂಬು (Actor Simbu) ಕೂಡ ಸಕ್ಸಸ್‌ಫುಲ್ ನಟನಾಗಿದ್ದಾರೆ. ಕಮಲ್ ಹಾಸನ್ ನಿರ್ಮಾಣದ ಸಿನಿಮಾದಲ್ಲಿ ಅವರು ದ್ವಿಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

  • ಕಾಂಗ್ರೆಸ್‌ನಿಂದ ಎಂಪಿ ಟಿಕೆಟ್ ಏಕೆ ನಿರೀಕ್ಷಿಸಬಾರದು- ಕಮಲ್ ಹಾಸನ್ ಪ್ರಶ್ನೆ

    ಕಾಂಗ್ರೆಸ್‌ನಿಂದ ಎಂಪಿ ಟಿಕೆಟ್ ಏಕೆ ನಿರೀಕ್ಷಿಸಬಾರದು- ಕಮಲ್ ಹಾಸನ್ ಪ್ರಶ್ನೆ

    ಚೆನ್ನೈ: ತಮಿಳುನಾಡಿನ ಈರೋಡ್ ಪೂರ್ವ ಉಪಚುನಾವಣೆಯಲ್ಲಿ (Erode East Bypolls) ಕಾಂಗ್ರೆಸ್-ಡಿಎಂಕೆ ಮೈತ್ರಿಕೂಟದ ಅಭ್ಯರ್ಥಿ ಇವಿಕೆಎಸ್ ಇಳಂಗೋವನ್ (EVKS Elangovan) ಅವರಿಗೆ ಬೆಂಬಲ ಸೂಚಿಸಿರುವ ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ (Kamal Haasan), ಕಾಂಗ್ರೆಸ್ ನಿಂದ ಸಂಸದ ಟಿಕೆಟ್ ಏಕೆ ನಿರೀಕ್ಷಿಸಬಾರದು ಎಂದು ಪ್ರಶ್ನಿಸಿದ್ದಾರೆ.

    ಈರೋಡ್ ಪೂರ್ವ ಉಪಚುನಾವಣೆಯಲ್ಲಿ ತಮ್ಮ ಪಕ್ಷ ಮಕ್ಕಳ್ ನೀಧಿ ಮೈಯಂ (MNM) ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡಲಿದೆ ಎಂದು ಕಮಲ್ ಘೋಷಿಸಿದ್ದಾರೆ. ಈ ವೇಳೆ `ಕಾಂಗ್ರೆಸ್‌ನಿಂದ (Congress) ಸಂಸದ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದೀರಾ?’ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ `ರಾಷ್ಟ್ರದ ಹಿತಕ್ಕಾಗಿ ನಾನೇಕೆ ಆಗಬಾರದು? ದೇಶದ ಹಿತಕ್ಕಾಗಿಯೇ ನಾವು ಈ ನಿರ್ಧಾರ ತೆಗೆದುಕೊಂಡಿದ್ದೇವೆ’ ಎಂದು ಸ್ಪಷ್ಟಪಡಿಸಿದ್ದಾರೆ.

    ಇಳಂಗೋವನ್ ಅವರು ಜನವರಿ 23 ರಂದು ಕಮಲ್ ಹಾಸನ್ ಅವರನ್ನು ಭೇಟಿಯಾಗಿ ಉಪಚುನಾವಣೆಗೆ ಬೆಂಬಲ ಕೋರಿದ ನಂತರ ಈ ಬೆಳವಣಿಗೆ ನಡೆದಿದೆ. ಎಂಎನ್‌ಎಂ ಕಾರ್ಯಕಾರಿ ಸದಸ್ಯರೊಂದಿಗೆ ಚರ್ಚಿಸಿದ ನಂತರ ಕಾಂಗ್ರೆಸ್ ಅಭ್ಯರ್ಥಿಯನ್ನ ಬೆಂಬಲಿಸುವ ನಿರ್ಧಾರ ಪ್ರಕಟಿಸಿದ್ದಾರೆ. ಇದನ್ನೂ ಓದಿ: ಡಾರ್ಕ್‌ನೆಟ್‌ ಬಳಸಿ ಮೋದಿ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಯತ್ನ- ರಣಾಂಗಣವಾದ ವಿವಿ ಕ್ಯಾಂಪಸ್

    ಬಳಿಕ ಮಾತನಾಡಿರುವ ಅವರು, ಈರೋಡ್ ಪೂರ್ವ ಉಪಚುನಾವಣೆಯಲ್ಲಿ ಕಾಂಗ್ರೆಸ್-ಡಿಎಂಕೆ ಮೈತ್ರಿಕೂಟದ ಅಭ್ಯರ್ಥಿಯನ್ನು ಬೆಂಬಲಿಸಲು ಪಕ್ಷದ ಕಾರ್ಯಕಾರಿ ಸದಸ್ಯರು ಸರ್ವಾನುಮತದಿಂದ ನಿರ್ಧರಿಸಿದ್ದಾರೆ. ಇದು ಪ್ರಸ್ತುತ ನಿರ್ಧಾರವಾಗಿದೆ. 2024ರ ಸಾರ್ವತ್ರಿಕ ಚುನಾವಣೆಯ ಬಗ್ಗೆ ಇನ್ನೂ ಒಂದು ವರ್ಷ ಸಮಯ ಇದೆ ಎಂದು ಹೇಳಿದ್ದಾರೆ.

    ನಾನು ಈ ಸಂದರ್ಭವನ್ನು ರಾಷ್ಟ್ರದ ಪ್ರಾಮುಖ್ಯತೆ ಎಂದು ಕರೆದಿದ್ದೇನೆ. ರಾಷ್ಟ್ರದ ಹಿತದೃಷ್ಟಿಯಿಂದ ಕಾಂಗ್ರೆಸ್ ಬೆಂಬಲಿಸುವ ನಿರ್ಧಾರ ತೆಗೆದುಕೊಂಡಿದ್ದೇನೆ. ಕೆಲವೊಮ್ಮೆ ರಾಷ್ಟ್ರದ ಪ್ರಾಮುಖ್ಯತೆ ವಿಷಯ ಬಂದಾಗ ಪಕ್ಷದ ಸಿದ್ಧಾಂತಗಳನ್ನ ಬಿಡಬೇಕಾಗುತ್ತದೆ. ಅದಕ್ಕೆ ಜನರು ಪ್ರಾಥಮಿಕರಾಗಿರುತ್ತಾರೆ ಎಂದು ತಿಳಿಸಿದ್ದಾರೆ.

    ಕಳೆದ ತಿಂಗಳು ದೆಹಲಿಯಲ್ಲಿ ನಡೆದ ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯಲ್ಲೂ ಕಮಲ್ ಹಾಸನ್, ರಾಹುಲ್ ಗಾಂಧಿ ಅವರೊಂದಿಗೆ ಪಾಲ್ಗೊಂಡಿದ್ದರು. ಇದನ್ನೂ ಓದಿ: PFI Ban: ಬೆಂಗಳೂರಿಗೆ ಟ್ರಿಬ್ಯೂನಲ್ ಟೀಂ – ಪಿಎಫ್‍ಐ ಪರ-ವಿರೋಧ ದೂರು ನೀಡಲು ಅವಕಾಶ

    ಈರೋಡ್ (ಪೂರ್ವ) ವಿಧಾನಸಭಾ ಕ್ಷೇತ್ರಕ್ಕೆ ಫೆಬ್ರವರಿ 27 ರಂದು ನಡೆಯಲಿರುವ ಉಪಚುನಾವಣೆಗೆ ತಮಿಳುನಾಡು ಕಾಂಗ್ರೆಸ್ ಸಮಿತಿ (ಟಿಎನ್‌ಸಿಸಿ) ಮಾಜಿ ಮುಖ್ಯಸ್ಥ ಇವಿಕೆಎಸ್ ಇಳಂಗೋವನ್ ಅವರನ್ನು ಪಕ್ಷದ ಅಭ್ಯರ್ಥಿ ಎಂದು ಕಾಂಗ್ರೆಸ್ ಭಾನುವಾರ ಘೋಷಿಸಿತು.

    ಇಳಂಗೋವನ್‌ ಯಾರು?: 1985 ರಲ್ಲಿ ಸತ್ಯಮಂಗಲಂ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿದ್ದ ಇಳಂಗೋವನ್, 2004ರಲ್ಲಿ ಲೋಕಸಭೆಗೆ ಆಯ್ಕೆಯಾದರು. ಅಲ್ಲಿ ಜವಳಿ ಖಾತೆಯ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದರು. ನಂತರ 2014 ರಿಂದ 2017ರ ವರೆಗೆ ತಮಿಳುನಾಡು ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. 2019ರ ಲೋಕಸಭೆ ಚುನಾವಣೆಯಲ್ಲಿ ತೇಣಿ ಕ್ಷೇತ್ರದಿಂದ ಸ್ಪರ್ಧಿಸಿ ಎಐಎಡಿಎಂಕೆಯ ಪಿ.ರವೀಂದ್ರನಾಥ್ ಕುಮಾರ್ ವಿರುದ್ಧ ಪರಾಭವಗೊಂಡಿದ್ದರು.

    ಮುಂದಿನ ಫೆಬ್ರವರಿ 27 ರಂದು ತಮಿಳುನಾಡಿನ ಈರೋಡ್ (ಪೂರ್ವ) ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದ್ದು, ಮಾರ್ಚ್ 2 ರಂದು ಮತ ಏಣಿಕೆ ಕಾರ್ಯ ನಡೆಯಲಿದೆ. ಇದೇ ತಿಂಗಳ ಜನವರಿ 31 ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಫೆಬ್ರವರಿ 7ರಂದು ಕೊನೆಯದಿನವಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಮಲ್ ಹಾಸನ್ `ಇಂಡಿಯನ್ 2’ಗೆ ರಾಕುಲ್ ಪ್ರೀತ್ ಸಿಂಗ್ ನಾಯಕಿ

    ಕಮಲ್ ಹಾಸನ್ `ಇಂಡಿಯನ್ 2’ಗೆ ರಾಕುಲ್ ಪ್ರೀತ್ ಸಿಂಗ್ ನಾಯಕಿ

    `ವಿಕ್ರಮ್’ (Vikram) ಸಿನಿಮಾದ ಸಕ್ಸಸ್ ಅಲೆಯಲ್ಲಿ ತೇಲುತ್ತಿರುವ ಕಮಲ್ ಹಾಸನ್ (Kamal Haasan) ಇದೀಗ `ಇಂಡಿಯನ್ 2′ (Indian 2) ಚಿತ್ರವನ್ನ ಕೈಗೆತ್ತಿಕೊಂಡಿದ್ದಾರೆ. ಕಮಲ್ ಹಾಸನ್‌ಗೆ ರಾಕುಲ್ ಪ್ರೀತ್‌ ಸಿಂಗ್‌ (Rakul Preet Singh) ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ.

    ತಮಿಳಿನ `ವಿಕ್ರಮ್’ ಚಿತ್ರ ಇತ್ತೀಚೆಗೆ ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಕೋಟಿ ಲೂಟಿ ಮಾಡಿತ್ತು. ಈ ಚಿತ್ರದ ಸಕ್ಸಸ್ ನಂತರ ಕಮಲ್ ಹಾಸನ್, ತಮ್ಮ ಸಿನಿಮಾ ಆಯ್ಕೆಯಲ್ಲಿ ಸಖತ್ ಚ್ಯೂಸಿಯಾಗಿದ್ದಾರೆ. ಎಸ್. ಶಂಕರ್ ನಿರ್ದೇಶನದ ಇಂಡಿಯನ್ 2ನಲ್ಲಿ ಕಮಲ್ ಹಾಸನ್ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ: ಬಾಲಯ್ಯ ಮುಂದೆ ಅಬ್ಬರಿಸಲು ದುನಿಯಾ ವಿಜಯ್ ಪಡೆದ ಸಂಭಾವನೆ ಎಷ್ಟು ಗೊತ್ತಾ?

    ಇನ್ನೂ ಈ ಸಿನಿಮಾಗೆ ನಾಯಕಿ ಯಾರು ಎಂಬುದರ ಬಗ್ಗೆ ಸಖತ್ ಚರ್ಚೆಯಾಗಿತ್ತು.ಅದಕ್ಕೀಗ ಉತ್ತರ ಸಿಕ್ಕಿದೆ. ನಟ ಕಮಲ್‌ಗೆ ನಾಯಕಿಯಾಗಿ ಬಹುಭಾಷಾ ನಟಿ ರಾಕುಲ್ ಪ್ರೀತ್ ಸಿಂಗ್ ಎಂಟ್ರಿ ಕೊಟ್ಟಿದ್ದಾರೆ. ಇನ್ನೂ ತಮ್ಮ ಪಾತ್ರದ ಬಗ್ಗೆ ನಟಿ ರಿಯಾಕ್ಟ್ ಮಾಡಿದ್ದಾರೆ.

    `ಇಂಡಿಯನ್ 2’ನಲ್ಲಿ ನಟಿಸಲು ಕಾಯುತ್ತಿದ್ದೇನೆ. ನಾನು ತುಂಬಾ ಲಕ್ಕಿ ಕಮಲ್ ಹಾಸನ್ ಅವರ ಜೊತೆ ನಟಿಸುವ ಅವಕಾಶ ಸಿಕ್ಕಿದೆ ಎಂದು ಮಾತನಾಡಿದ್ದಾರೆ. ಸಿನಿಮಾದಲ್ಲಿ ನಟಿಸುವ ಬಗ್ಗೆ ಅಧಿಕೃತವಾಗಿ ಆಂಗ್ಲ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮುಂದಿನ ಸಿನಿಮಾದಿಂದ ‘ಕಾಂತಾರ’ ದಾಖಲೆಯನ್ನೇ ಮುರಿಯಿರಿ: ರಿಷಬ್‌ಗೆ ಕಮಲ್ ಹಾಸನ್ ಪತ್ರ

    ಮುಂದಿನ ಸಿನಿಮಾದಿಂದ ‘ಕಾಂತಾರ’ ದಾಖಲೆಯನ್ನೇ ಮುರಿಯಿರಿ: ರಿಷಬ್‌ಗೆ ಕಮಲ್ ಹಾಸನ್ ಪತ್ರ

    ‘ಕಾಂತಾರ’ (Kantara) ಚಿತ್ರ ನೋಡಿ ಇಡೀ ದೇಶವೇ ಕೊಂಡಾಡುತ್ತಿದೆ. ಕನ್ನಡದ ಸಿನಿಮಾ‌ವನ್ನ ಪರಭಾಷಿಗರು ಕೂಡ ಹಾಡಿ ಹೊಗಳುತ್ತಿದ್ದಾರೆ. ಹೀಗಿರುವಾಗ ‘ಕಾಂತಾರ’ ಸಿನಿಮಾ ನೋಡಿರುವ ಕಮಲ್​ ಹಾಸನ್​ (Kamal Haasan) ಅವರು ರಿಷಬ್​ ಶೆಟ್ಟಿಗೆ (Rishab Shetty) ದೀರ್ಘವಾಗಿ ಪತ್ರ ಬರೆದಿದ್ದಾರೆ. ಮಹಾನ್ ನಟನಿಂದ ಈ ರೀತಿಯ ಮೆಚ್ಚುಗೆ ಪತ್ರ ಸಿಕ್ಕಿದ್ದಕ್ಕೆ ರಿಷಬ್​ ದಿಲ್ ಖುಷಿ ಆಗಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ರಿಷಬ್ ಹೇಳಿಕೊಂಡಿದ್ದಾರೆ.

    ಕಮಲ್​ ಹಾಸನ್​ ಅವರಿಂದ ಈ ರೀತಿಯ ಮೆಚ್ಚುಗೆ ಪತ್ರ ಸಿಕ್ಕಿದ್ದಕ್ಕೆ ರಿಷಬ್​ ಶೆಟ್ಟಿ ತುಂಬ ಥ್ರಿಲ್ ಆಗಿದ್ದಾರೆ. ‘ಭಾರತೀಯ ಸಿನಿಮಾ ಲೋಕದ ದಿಗ್ಗಜ ನಟನಿಂದ ಈ ಪತ್ರ ಬಂದಿದೆ. ಕಮಲ್​ ಸರ್​ ನೀಡಿದ ಈ ಅಚ್ಚರಿಯ ಗಿಫ್ಟ್​ ನೋಡಿ ಅಪಾರ ಸಂತಸ ಆಗಿದೆ’ ಎಂದು ರಿಷಬ್​ ಶೆಟ್ಟಿ ಮಾಡಿರುವ ಈ ಪೋಸ್ಟ್​ ಸದ್ದು ಮಾಡುತ್ತಿದೆ.

     

    View this post on Instagram

     

    A post shared by Rishab Shetty (@rishabshettyofficial)

    ಈ ಹಿಂದೆ ಕಮಲ್​ ಹಾಸನ್​ ಅವರು ‘ಕಾಂತಾರ’ ಸಿನಿಮಾ ನೋಡಿದ್ದರು. ಆಗಲೂ ಅವರು ಫೋನ್ ಮೂಲಕ ರಿಷಬ್​ ಶೆಟ್ಟಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ‘ಈಗಾಗಲೇ ನಾನು ಫೋನ್​ನಲ್ಲಿ ಹೇಳಿದಂತೆ ಕಾಂತಾರ ಸಿನಿಮಾದ ದಾಖಲೆಯನ್ನು ನಿಮ್ಮ ಮುಂದಿನ ಸಿನಿಮಾದಿಂದ ಮುರಿಯಿರಿ’ ಎಂದು ಸಲಹೆ ನೀಡುವ ಮೂಲಕ ಕಮಲ್​ ಹಾಸನ್​ ಅವರು ಪತ್ರವನ್ನು ಕಂಪ್ಲಿಟ್ ಮಾಡಿದ್ದಾರೆ. ಇದನ್ನೂ ಓದಿ: ಮದುವೆ ಬಗ್ಗೆ ಮೌನ ಮುರಿದ ರಾಗಿಣಿ ದ್ವಿವೇದಿ

     

    ಇನ್ನೂ ಪ್ರತಿಷ್ಟಿತ ಆಸ್ಕರ್ ರೇಸ್ ನಲ್ಲಿ ‘ಕಾಂತಾರ’ ಚಿತ್ರ ಕೂಡ ಅರ್ಹತೆ ಪಡೆದಿದೆ. ಈ ಖುಷಿ ಸುದ್ದಿಯನ್ನು ಇತ್ತೀಚೆಗೆ ‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆಯ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳಲಾಗಿತ್ತು. ಕನ್ನಡದ ಕಾಂತಾರ‌ ಸಿನಿಮಾ ಆಸ್ಕರ್​ ಪ್ರಶಸ್ತಿ ಗೆಲ್ಲಲಿ ಎಂದು ಫ್ಯಾನ್ ಹಾರೈಸುತ್ತಿದ್ದಾರೆ. ಜೊತೆಗೆ ‘ಕಾಂತಾರ 2’ಗಾಗಿ ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಇದನ್ನೂ ಓದಿ: Breaking- ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕನ ಚಿತ್ರಕ್ಕೆ ‘ಕಾಂತಾರ’ ಹುಡುಗಿ ಹೀರೋಯಿನ್

    Live Tv 
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಭಾರತ್ ಜೋಡೋ ಯಾತ್ರೆಗೆ ಶ್ವಾನ, ಹಸು, ಹಂದಿಗಳೂ ಬಂದಿವೆ – ರಾಗಾ

    ಭಾರತ್ ಜೋಡೋ ಯಾತ್ರೆಗೆ ಶ್ವಾನ, ಹಸು, ಹಂದಿಗಳೂ ಬಂದಿವೆ – ರಾಗಾ

    ನವದೆಹಲಿ: ಕಾಂಗ್ರೆಸ್ (Congress) ಬಲವರ್ಧನೆಗೆ ಕೈಗೊಂಡಿರುವ ಭಾರತ್ ಜೋಡೋ ಯಾತ್ರೆ (Bharat Jodo Yatra) ದೆಹಲಿ ಪ್ರವೇಶಿಸಿದೆ. ರಾಹುಲ್ ಗಾಂಧಿ (RahulGandhi) ಅವರ ನೇತೃತ್ವದಲ್ಲಿ ನಡೆಯುತ್ತಿರೋ ಈ ಯಾತ್ರೆ ದ್ವೇಷ-ಹಿಂಸೆಗಳಿಲ್ಲದ ಭಾರತದ ಪ್ರತಿರೂಪ ಎಂದು ಜನರು ಹೇಳುತ್ತಿದ್ದಾರೆ.

    ವಿಶೇಷವೆಂದರೆ ಈ ಯಾತ್ರೆಯಲ್ಲಿ ಸಾರ್ವಜನಿಕರನ್ನು ಮಾತ್ರವಲ್ಲದೇ ಪ್ರಾಣಿಗಳನ್ನು ಸ್ವಾಗತಿಸಲಾಗಿದೆ ಎಂಬುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಸ್ಥಳೀಯ, ವಿದೇಶಿ ಎನ್‌ಜಿಒಗಳಲ್ಲಿ ಮಹಿಳೆ ಉದ್ಯೋಗಿಗಳಿಗೆ ಅವಕಾಶ ಕೊಡ್ಬೇಡಿ – ತಾಲಿಬಾನ್‌ ಆದೇಶ

    ದೆಹಲಿಯ ಕೆಂಪು ಕೋಟೆಯಲ್ಲಿ `ಭಾರತ್ ಜೋಡೋ ಯಾತ್ರೆ’ಯ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭಾರತ್ ಜೋಡೋ ಯಾತ್ರೆಯಲ್ಲಿ ನಾಯಿಗಳು, ಹಂದಿಗಳು, ಹಸುಗಳೂ ಸೇರಿದಂತೆ ಎಲ್ಲ ಪ್ರಾಣಿಗಳೂ ಬಂದಿವೆ. ಆದರೆ ಯಾವುದಕ್ಕೂ ಕೆಡಕುಂಟು ಮಾಡಿಲ್ಲ. ಎಲ್ಲ ಜನರು ನನ್ನೊಟ್ಟಿಗೆ ಬಂದಿದ್ದಾರೆ. ನಾನು 2,800 ಕಿಮೀ ನಡೆದಿದ್ದೇನೆ. ಆದ್ರೆ ಅಲ್ಲೆಲ್ಲೂ ಯಾವುದೇ ದ್ವೇಷವನ್ನು ನೋಡಲಿಲ್ಲ. ಆದರೆ ಟಿವಿ ಆನ್ ಮಾಡಿದಾಗ, ನಾನು ಹಿಂಸೆಯನ್ನು ನೋಡುತ್ತಿದ್ದೇನೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

    ಬಿಜೆಪಿ (BJP) ನನ್ನ ಇಮೇಜ್ ಡ್ಯಾಮೇಜ್ ಮಾಡಲು ಸಾವಿರಾರು ಕೋಟಿ ಖರ್ಚು ಮಾಡಿದೆ. ನಿಜವಾದ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಬಿಜೆಪಿ ದಿನದ 24 ಗಂಟೆಯೂ ಹಿಂದೂ-ಮುಸ್ಲಿಮರ (Hindu Muslims) ನಡುವೆ ದ್ವೇಷವನ್ನು ಹರಡುತ್ತಿದೆ. ಭಿನ್ನಾಭಿಪ್ರಾಯಗಳನ್ನು ಅಸ್ತ್ರವನ್ನಾಗಿ ಬಳಸಿಕೊಂಡು ದ್ವೇಷವನ್ನು ಹರಡುತ್ತಿದೆ. ಇದು ನರೇಂದ್ರ ಮೋದಿಯವರ (Narendra Modi) ಸರ್ಕಾರವಲ್ಲ. ಇದು ಅಂಬಾನಿ ಮತ್ತು ಅದಾನಿ ಸರ್ಕಾರ. ಇಂದು ಪದವಿ ಪಡೆದ ಯುವಕರು ಪಕೋಡಾಗಳನ್ನು ಮಾರುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: `ನೀವು ತುಂಬಾ ದಪ್ಪ’ – ಮಹಿಳೆಗೆ ವಿಮಾನ ಹತ್ತಲು ನಿರಾಕರಿಸಿದ ಕತಾರ್‌ ಏರ್‌ವೇಸ್‌ಗೆ 3 ಲಕ್ಷ ದಂಡ

    ಸೆ.7ರಂದು ಕನ್ಯಾಕುಮಾರಿಯಲ್ಲಿ ಆರಂಭವಾದ ಭಾರತ್ ಜೋಡೋ ಯಾತ್ರೆಯು ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಸಂಚರಿಸಿ ಈಗ ಹರಿಯಾಣ ಬಳಿಕ ಮತ್ತೆ ದೆಹಲಿ ಪ್ರವೇಶಿಸಿದೆ. ಜ.3 ರಿಂದ ಮತ್ತೆ ಯಾತ್ರೆ ಆರಂಭಿಸಿ ಅಂತಿಮವಾಗಿ ಕಾಶ್ಮೀರದಲ್ಲಿ ಯಾತ್ರೆ ಸಮಾಪ್ತಿಗೊಳ್ಳಲಿದೆ.

    Live Tv
    [brid partner=56869869 player=32851 video=960834 autoplay=true]

  • ಭಾರತ್ ಜೋಡೋ ಯಾತ್ರೆಯಲ್ಲಿ ಸ್ಟಾರ್ ನಟ ಕಮಲ್ ಹಾಸನ್ ಭಾಗಿ

    ಭಾರತ್ ಜೋಡೋ ಯಾತ್ರೆಯಲ್ಲಿ ಸ್ಟಾರ್ ನಟ ಕಮಲ್ ಹಾಸನ್ ಭಾಗಿ

    ನವದೆಹಲಿ: ಕೋವಿಡ್ ಮಾರ್ಗಸೂಚಿಗಳನ್ನು (Covid Guidelines) ಉಲ್ಲೇಖಿಸಿ ಭಾರತ್ ಜೋಡೋ ಯಾತ್ರೆ (Bharat Jodo Yatra) ನಿಲ್ಲಿಸಿ ಎಂಬ ಕೇಂದ್ರ ಸರ್ಕಾರದ ಸೂಚನೆಯ ನಡುವೆಯೂ ಇಂದು ಸಾವಿರಾರು ಮಂದಿ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ತಮಿಳು ಚಿತ್ರರಂಗದ ಸ್ಟಾರ್ ನಟ ಕಮಲ್ ಹಾಸನ್ (Kamal Haasan) ಸಹ ಭಾರತ್ ಜೋಡೊ ಯಾತ್ರೆಯಲ್ಲಿ ರಾಹುಲ್ ಗಾಂಧಿ (Rahul Gandhi) ಅವರೊಂದಿಗೆ ಹೆಜ್ಜೆ ಹಾಕಿದ್ದಾರೆ.

    ಇಂದು ಫರಿದಾಬಾದ್ ಮೂಲಕ ರಾಷ್ಟ್ರ ರಾಜಧಾನಿ ಪ್ರವೇಶಿಸಿದ ಭಾರತ್ ಜೋಡೋ ಯಾತ್ರೆಯನ್ನು ದೆಹಲಿ ಕಾಂಗ್ರೆಸ್ ಮುಖ್ಯಸ್ಥ ಅನಿಲ್ ಚೌಧರಿ (Anil Chaudhary) ಸ್ವಾಗತಿಸಿದರು. ಮೆರವಣಿಗೆ ದೆಹಲಿ ಪ್ರವೇಶಿಸುತ್ತಿದ್ದಂತೆ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi), ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ (Priyanka Gandhi), ಹಿರಿಯ ನಾಯಕರಾದ ಜೈರಾಮ್ ರಮೇಶ್, ಪವನ್ ಖೇರಾ, ಭೂಪಿಂದರ್ ಸಿಂಗ್ ಹೂಡಾ, ಕುಮಾರಿ ಸೆಲ್ಜಾ, ರಣದೀಪ್ ಸುರ್ಜೆವಾಲಾ ಮೆರವಣಿಗೆಯಲ್ಲಿ ಪಾಲ್ಗೊಂಡರು. ಇದನ್ನೂ ಓದಿ: ನಟ ವಿಷ್ಣುವರ್ಧನ್ ಅಭಿಮಾನಿಗಳ ಆದರ್ಶ ಯಾತ್ರೆ: ಆಸ್ಟ್ರೇಲಿಯಾ ವಾಸಿ ಬಲರಾಮ್ ನೇತೃತ್ವ

    ಇದೇ ವೇಳೆ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ದ್ವೇಷದ ಮಾರುಕಟ್ಟೆಯ ನಡುವೆ ಪ್ರೀತಿಯ ಅಂಗಡಿಗಳನ್ನು ತೆರೆಯುವುದು ನಮ್ಮ ಉದ್ದೇಶವಾಗಿದೆ. ದೇಶದ ಜನಸಾಮಾನ್ಯರು ಈಗ ಪ್ರೀತಿಯ ಬಗ್ಗೆ ಮಾತನಾಡುತ್ತಿದ್ದಾರೆ. ಪ್ರತಿ ರಾಜ್ಯದಲ್ಲೂ ಲಕ್ಷಾಂತರ ಜನರು ಯಾತ್ರೆಗೆ ಸೇರಿದ್ದಾರೆ. ನಿಮ್ಮ ದ್ವೇಷದ `ಬಜಾರ್’ನಲ್ಲಿ ಪ್ರೀತಿಯ ಅಂಗಡಿ ತೆರೆಯಲು ನಾವು ಇಲ್ಲಿದ್ದೇವೆ ಎಂದು ನಾನು ಆರ್‌ಎಸ್‌ಎಸ್ (RSS) ಮತ್ತು ಬಿಜೆಪಿಯ (BJP) ಜನರಿಗೆ ಹೇಳಿದ್ದೇನೆ ಎಂದು ನುಡಿದರು. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ ನಿಲ್ಲಿಸಲು ಕೇಂದ್ರಕ್ಕೆ ಕೊರೊನಾ ಒಂದು ನೆಪ: ರಾಹುಲ್ ಗಾಂಧಿ

    ಸೆ.7ರಂದು ಕನ್ಯಾಕುಮಾರಿಯಲ್ಲಿ ಆರಂಭವಾದ ಭಾರತ್ ಜೋಡೋ ಯಾತ್ರೆಯು ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಸಂಚರಿಸಿ ಈಗ ಹರಿಯಾಣ ಬಳಿಕ ಮತ್ತೆ ದೆಹಲಿ ಪ್ರವೇಶಿಸಿದೆ. ಜ.3 ರಿಂದ ಮತ್ತೆ ಯಾತ್ರೆ ಆರಂಭಿಸಿ ಅಂತಿಮವಾಗಿ ಕಾಶ್ಮೀರದಲ್ಲಿ ಯಾತ್ರೆ ಸಮಾಪ್ತಿಗೊಳಿಸಲಿದೆ.

    Live Tv
    [brid partner=56869869 player=32851 video=960834 autoplay=true]