Tag: Kamal Haasan

  • ‘ಪುಷ್ಪಕ ವಿಮಾನ’ ರೀ- ರಿಲೀಸ್: ಅಪ್‌ಡೇಟ್‌ ಕೊಟ್ಟ ಕಮಲ್‌ ಹಾಸನ್

    ‘ಪುಷ್ಪಕ ವಿಮಾನ’ ರೀ- ರಿಲೀಸ್: ಅಪ್‌ಡೇಟ್‌ ಕೊಟ್ಟ ಕಮಲ್‌ ಹಾಸನ್

    ಭಾರತೀಯ ಚಿತ್ರರಂಗ ಕಂಡ ಎವರ್‌ಗ್ರೀನ್ ಸಿನಿಮಾ ಅಂದರೆ ಕಮಲ್ ಹಾಸನ್ (Kamal Haasan) ನಟನೆಯ ‘ಪುಷ್ಪಕ ವಿಮಾನ’. ಸಿನಿಮಾದಲ್ಲಿ ಒಂದೇ ಒಂದು ಡೈಲಾಗ್ ಇಲ್ಲದೇ ನಟನೆಯ ಮೂಲಕ ಕಮಲ್ & ಟೀಮ್ ಕಮಾಲ್ ಮಾಡಿದ್ರು. ಇದೀಗ ಮತ್ತೆ ಈ ಚಿತ್ರ ರೀ-ರಿಲೀಸ್ ಆಗುತ್ತಿದೆ. ಈ ಮೂಲಕ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

    ‘ಪುಷ್ಪಕ ವಿಮಾನ’ (Pushpaka Vimana) ಸಿನಿಮಾ ಮತ್ತೆ ಮರು ಬಿಡುಗಡೆ ಮಾಡೋದಕ್ಕೆ ಕಮಲ್ ಹಾಸನ್ ನಿರ್ಮಾಣ ಸಂಸ್ಥೆ ನಿರ್ಧರಿಸಿದೆ. ಕಮಲ್ ಒಡೆತನದ ರಾಜ್ ಕಮಲ್ ಫಿಲ್ಮ್ಸ್‌ ಇಂಟರ್‌ನ್ಯಾಷನಲ್ ಸಂಸ್ಥೆ ಟ್ವೀಟ್ ಮಾಡಿ ತಿಳಿಸಿದೆ. ಇದನ್ನೂ ಓದಿ:ಒಟಿಟಿಯಲ್ಲಿ ‘ತುಂಗಾ ಹಾಸ್ಟೆಲ್ ಬಾಯ್ಸ್’ ಹಾವಳಿ ಶುರು

    ಬೆಂಗಳೂರಿನ ವಿಂಡ್ಸರ್ ಮ್ಯಾನರ್‌ನಲ್ಲಿ ಬಹುತೇಕ ಸಿನಿಮಾ ಚಿತ್ರೀಕರಣವನ್ನು ಮಾಡಲಾಗಿತ್ತು. ಹೀಗಾಗಿ ಪುಷ್ಪಕ ವಿಮಾನ ಸಿನಿಮಾಗೂ ಕರ್ನಾಟಕಕ್ಕೂ ಬಿಡಲಾರದ ನಂಟಿದೆ. ಈ ಹಿಂದೆ ಕೂಡ ಈ ಸಿನಿಮಾ ಕನ್ನಡದಲ್ಲೂ ‘ಪುಷ್ಪಕ ವಿಮಾನ’ (Pushpaka Vimana) ಅಂತ ಟೈಟಲ್ ಕೊಟ್ಟು ಬಿಡುಗಡೆ ಮಾಡಲಾಗಿತ್ತು. ಆದ್ರೀಗ ಮರುಬಿಡುಗಡೆ ಬಗ್ಗೆ ಅನೌನ್ಸ್ಮೆಂಟ್‌ನಲ್ಲಿ ಪೋಸ್ಟರ್‌ನಲ್ಲಿ ತಮಿಳು ಮತ್ತ ಹಿಂದಿ ಚಿತ್ರದ ಪೋಸ್ಟರ್ ಇದೆ. ಕನ್ನಡದ ಟೈಟಲ್ ಇಲ್ಲದಂತಾಗಿದೆ. ಹೀಗಾಗಿ ಕನ್ನಡದ ಟೈಟಲ್ ಎಲ್ಲಿ ಅಂತಾ ನೆಟ್ಟಿಗರು ಪ್ರಶ್ನೆ ಮಾಡ್ತಿದ್ದಾರೆ.

    ಕಮಲ್ ಹಾಸನ್ ನಿರ್ಮಾಣ ಸಂಸ್ಥೆ ರಾಜ್ ಕಮಲ್ ಫಿಲ್ಮ್ಸ್ಇಂಟರ್‌ನ್ಯಾಷನಲ್ ಪುಷ್ಪಕ ವಿಮಾನ ಸಿನಿಮಾವನ್ನು ನಿರ್ಮಾಣ ಮಾಡಿತ್ತು. ಹಾಗೇ ಶ್ರೀನಗರ ನಾಗರಾಜ್ ಈ ಸಂಸ್ಥೆಯೊಂದಿಗೆ ಕೈ ಜೋಡಿಸಿದ್ದರು. ಸುಮಾರು 35 ಲಕ್ಷ ರೂಪಾಯಿ ವೆಚ್ಚದಲ್ಲಿ ಅಂದೇ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಈ ಚಿತ್ರಕ್ಕೆ ಎಲ್ಲಾ ಭಾಷೆಯಲ್ಲೂ ಅದ್ಭುತ ಯಶಸ್ಸು ಸಿಕ್ಕಿದ್ದರಿಂದ ಕೋಟಿ ಲೆಕ್ಕದಲ್ಲಿ ಕಲೆಕ್ಷನ್ ಆಗಿತ್ತು.

    1987ರಲ್ಲಿ ಬಹುಭಾಷೆಗಳಲ್ಲಿ ರಿಲೀಸ್ ಆದ ಹಾಗೇ ಈಗಲೂ ರಿಲೀಸ್ ಆಗುತ್ತಾ? ಮುಂದಿನ ದಿನಗಳಲ್ಲಿ ರಿಲೀಸ್‌ ಕುರಿತು ಹೆಚ್ಚಿನ ಅಪ್‌ಡೇಟ್ ಸಿಗುತ್ತಾ ಕಾಯಬೇಕಿದೆ. ಚಿತ್ರದಲ್ಲಿ ಕಮಲ್ ಜೊತೆ ಸಮೀರ್ ಕಕ್ಕರ್, ಟೀನು ಆನಂದ್, ಅಮಲಾ(Amala), ಕೆ.ಎಸ್ ರಮೇಶ್ ಸೇರಿದಂತೆ ಹಲವರು ನಟಿಸಿದ್ದರು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಣಿರತ್ನಂ-ಕಮಲ್ ಹಾಸನ್ ಸಿನಿಮಾ: ಬಿಗ್ ಅಪ್ ಡೇಟ್

    ಮಣಿರತ್ನಂ-ಕಮಲ್ ಹಾಸನ್ ಸಿನಿಮಾ: ಬಿಗ್ ಅಪ್ ಡೇಟ್

    ಭಾರತೀಯ ಸಿನಿಮಾ ರಂಗದ ಇಬ್ಬರು ದಂತಕಥೆಗಳು ಬರೋಬ್ಬರಿ 36 ವರ್ಷಗಳ ಬಳಿಕ ಒಂದಾಗುತ್ತಿದ್ದಾರೆ. ನಿರ್ದೇಶಕ ಮಣಿರತ್ನಂ (Mani Ratnam) ಮತ್ತು ಕಮಲ್ ಹಾಸನ್ (Kamal Haasan) ‘ನಾಯಗನ್’ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಆನಂತರ ಈ ಜೋಡಿ ಮತ್ತೆ ಒಟ್ಟಾಗಿ ಕೆಲಸ ಮಾಡಲೇ ಇಲ್ಲ. ಇದೀಗ ಮೂರುವರೆ ದಶಕದ ಬಳಿಕ ಮತ್ತೆ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಕಮಲ್ ಹಾಸನ್ ನಟನೆಯ 234ನೇ ಚಿತ್ರಕ್ಕೆ ಮಣಿರತ್ನಂ ನಿರ್ದೇಶನ ಮಾಡುತ್ತಿದ್ದಾರೆ.

    ಈ ಸಿನಿಮಾ ಶುರುವಾಗುವುದಕ್ಕೆ ಇನ್ನೂ ಹಲವು ತಿಂಗಳು ಬೇಕು. ಅದಕ್ಕೂ ಮುನ್ನ ಅನೇಕ ವಿಷಯಗಳು ಹೊರ ಬಂದಿವೆ. ಈ ಸಿನಿಮಾದಲ್ಲಿ ಸ್ಟಾರ್ ನಟರೇ ದಂಡೇ ಇರಲಿದ್ದು, ತ್ರಿಷಾ (Trisha) ನಾಯಕಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅಲ್ಲದೇ, ದುಲ್ಕರ್ ಸಲ್ಮಾನ್ (Dulquer Salmaan) ಕೂಡ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರಂತೆ.

    ಈ ಕುರಿತಂತೆ ಮೇಕಪ್ ಆರ್ಟಿಸ್ಟ್ ರಂಜಿತ್ ಅಂಬಾಡಿ ಎನ್ನುವವರು ಹಲವು ಮಾಹಿತಿಗಳನ್ನು ಹೊರಹಾಕಿದ್ದಾರೆ. ಕಮಲ್ ಹಾಸನ್ ಮತ್ತು ಮಣಿರತ್ನಂ ಕಾಂಬಿನೇಷನ್ ನ ಈ ಸಿನಿಮಾದಲ್ಲಿ ಇವರೆಲ್ಲ ಕೆಲಸ ಮಾಡಲಿದ್ದಾರೆ ಎಂದು ಸಣ್ಣ ಸುಳಿವು ಕೊಟ್ಟಿದ್ದಾರೆ. ಜೊತೆಗೆ ಇನ್ನೂ ಅಚ್ಚರಿಯ ಸಂಗತಿಗಳು ಈ ಸಿನಿಮಾದಲ್ಲಿ ಇರಲಿವೆ ಎಂದೂ ಅವರು ಹೇಳಿಕೊಂಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನನಗೆ 25 ಕೋಟಿ ರೂ. ಮೋಸವಾಗಿದೆ: ಕಮಲ್ ಹಾಸನ್ ಮಾಜಿ ಪ್ರೇಯಸಿ, ನಟಿ ಗೌತಮಿ ಅಳಲು

    ನನಗೆ 25 ಕೋಟಿ ರೂ. ಮೋಸವಾಗಿದೆ: ಕಮಲ್ ಹಾಸನ್ ಮಾಜಿ ಪ್ರೇಯಸಿ, ನಟಿ ಗೌತಮಿ ಅಳಲು

    ಮಿಳು (Tamil Nadu) ಸಿನಿಮಾ ರಂಗದ ಖ್ಯಾತ ನಟ ಕಮಲ್ ಹಾಸನ್ (Kamal Haasan) ಮಾಜಿ ಪ್ರೇಯಸಿ, ನಟಿ ಗೌತಮ್ (Gauthami) ತಮಗೆ ಕಂಪನಿಯೊಂದರಿಂದ ತಮಗೆ 25 ಕೋಟಿ ರೂಪಾಯಿ ಮೋಸವಾಗಿದೆ ಎಂದು ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ. ಅಳಗಪ್ಪನ್ ಕಂಪನಿಯ ಮುಖ್ಯಸ್ಥರಿಂದ ತಮಗೆ ದೋಖಾವಾಗಿದ್ದು, ತಮಗೆ ನ್ಯಾಯ ಕೊಡಿಸಬೇಕೆಂದು ಅವರು ಚೆನ್ನೈ ಸಿಟಿ ಪೊಲೀಸ್ ಕಮಿಷ್ನರ್ ಗೆ ದೂರು ಸಲ್ಲಿಸಿದ್ದಾರೆ.

    ಶ್ರೀಪರೆಂಬುದುರ್ ನಲ್ಲಿ ನಟಿ ಗೌತಮಿ ಅವರಿಗೆ ಸೇರಿದ್ದ 46 ಎಕರೆ ಜಮೀನು ಇದೆ. ಅದನ್ನು ಮಾರಾಟ ಮಾಡಲು ಅಳಗಪ್ಪನ್ ಕಂಪನಿಗೆ ಪವರ್ ಆಫ್ ಅಟಾರ್ನಿ ನೀಡಿದ್ದರಂತೆ. ಇದನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಗೌತಮಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೇ, ತಮ್ಮ ಕೃಷಿ ಭೂಮಿಯನ್ನು ನಾಲ್ಕು ಕೋಟಿ ರೂಪಾಯಿಗೆ ಮಾರಾಟ ಮಾಡಿದರೂ ಕಂಪನಿ ತಮಗೆ ಕೇವಲ 62 ಲಕ್ಷ ರೂಪಾಯಿಯನ್ನು ಮಾತ್ರ ನೀಡಿದೆ ಎಂದು ಅವರು ದೂರಿದ್ದಾರೆ.

    ಹಣದ ಮೋಸ (Cheating) ಮಾಡುವುದರ ಜೊತೆಗೆ ತಮ್ಮ ಸಹಿ ಕೂಡ ಫೋರ್ಜರಿ ಮಾಡಲಾಗಿದೆ ಎಂದು ಆರೋಪಿಸಿರುವ ಗೌತಮಿ, ತಮಗಾದ ಅನ್ಯಾಯವನ್ನು ಪ್ರಶ್ನಿಸಿದರೆ, ಕಂಪನಿಯವರು ತಮಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ತಾವು ಕಷ್ಟಪಟ್ಟು ಸಂಪಾದನೆ ಮಾಡಿರುವ ಆಸ್ತಿಯದು. ಇದೀಗ ಅನಿವಾರ್ಯ ಕಾರಣಗಳಿಂದ ಮಾರಾಟಕ್ಕೆ ಮುಂದಾಗಿದ್ದೆ. ಆದರೆ, ಈ ರೀತಿ ಮೋಸವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಮಲ್‌ ಹಾಸನ್‌ ಆಪ್ತ, ನಟ ಆರ್‌.ಎಸ್ ಶಿವಾಜಿ ನಿಧನ

    ಕಮಲ್‌ ಹಾಸನ್‌ ಆಪ್ತ, ನಟ ಆರ್‌.ಎಸ್ ಶಿವಾಜಿ ನಿಧನ

    ಸೌತ್ ನಟ ಆರ್.ಎಸ್ ಶಿವಾಜಿ (R.s Shivaji) ಅವರು ಇಹಲೋಕ ತ್ಯಜಿಸಿದ್ದಾರೆ. ಸಾಕಷ್ಟು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನಟ 66ನೇ ವಯಸ್ಸಿಗೆ ವಿಧಿವಶರಾಗಿದ್ದಾರೆ. ಹಿರಿಯ ನಟನ ನಿಧನಕ್ಕೆ ಚಿತ್ರರಂಗದ ನಟ-ನಟಿಯರು, ಆಪ್ತರು ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ:ಹುಚ್ಚರಂತೆ ಯಾಕೆ ಕೂಗುತ್ತಿದ್ದೀರಾ? ಪಾಪರಾಜಿಗಳಿಗೆ ಶಾಹಿದ್ ಕಪೂರ್ ಕ್ಲಾಸ್

    ಸಾಕಷ್ಟು ಕಾಲದಿಂದ ಶಿವಾಜಿ ಅನಾರೋಗ್ಯದಿಂದ ಬಳಲುತ್ತಿದ್ದರು. ಈಗ ಚಿಕಿತ್ಸೆ ಫಲಿಸದೇ ಸೆಪ್ಟೆಂಬರ್‌ 2ರಂದು ನಿಧನರಾಗಿದ್ದಾರೆ. ತೆಲುಗು- ತಮಿಳಿನಲ್ಲಿ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಆರ್.ಎಸ್ ಶಿವಾಜಿ ಅವರು ಕಮಲ್ ಹಾಸನ್ (Kamal Haasan) ಜೊತೆ ಸಾಕಷ್ಟು ಸಿನಿಮಾಗಳಲ್ಲಿ ತೆರೆಹಂಚಿಕೊಂಡಿದ್ದರು. ಕಮಲ್‌ ಹಾಸನ್‌ಗೆ ಶಿವಾಜಿ ಅವರು ಆಪ್ತರಾಗಿದ್ದರು.

    ನಟ ಶಿವಾಜಿ ಕಡೆಯದಾಗಿ ಸಾಯಿ ಪಲ್ಲವಿ (Sai Pallavi) ನಟನೆಯ ‘ಗಾರ್ಗಿ’ ಸಿನಿಮಾದಲ್ಲಿ ನಟಿಸಿದ್ದರು. ಚಿತ್ರದಲ್ಲಿನ ಶಿವಾಜಿ ನಟನೆಗೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿತ್ತು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಮಲ್ ಜೊತೆ ನಟಿಸಿದ್ದ ಸಹನಟನ ಮೃತದೇಹ ರಸ್ತೆಬದಿಯಲ್ಲಿ ಪತ್ತೆ

    ಕಮಲ್ ಜೊತೆ ನಟಿಸಿದ್ದ ಸಹನಟನ ಮೃತದೇಹ ರಸ್ತೆಬದಿಯಲ್ಲಿ ಪತ್ತೆ

    ಲವಾರು ಚಿತ್ರಗಳಲ್ಲಿ ಪೋಷಕ ಕಲಾವಿದನಾಗಿ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಂಡಿದ್ದ ಮೋಹನ್ (Mohan) ವಿಧಿವಶರಾಗಿದ್ದಾರೆ (Passed away). ಕಮಲ್ ಹಾಸನ್ (Kamal Haasan)ಸೇರಿದಂತೆ ಹಲವಾರು ನಟರ ಜೊತೆ ತೆರೆ ಹಂಚಿಕೊಂಡಿದ್ದ ಮೋಹನ್ ಅವರ ಮೃತದೇಹ ರಸ್ತೆ ಬದಿಯಲ್ಲಿ ಪತ್ತೆಯಾಗಿದೆ. ತಮಿಳಿನ ನಾಡಿನ ಮಧುರೈ (Madurai) ಜಿಲ್ಲೆಯ ತಿರುಪ್ಪಂಗುಂಡ್ರಂ ರಸ್ತೆಯಲ್ಲಿ ಅನಾಥ ಶವ ನೋಡಿದ್ದ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದರು.

    ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಶವವನ್ನು ಸರಕಾರಿ ಆಸ್ಪತ್ರೆಗೆ ರವಾನಿಸಿದ್ದರು. ಆಮೇಲೆ ಅದು ನಟ ಮೋಹನ್ ಅವರ ಮೃತದೇಹ ಎಂದು ಗೊತ್ತಾಗಿದೆ. ಅವರ ಕುಟುಂಬಸ್ಥರಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಮೋಹನ್ ಕುಟುಂಬಸ್ಥರು ಸೇಲಂ (Salem) ಜಿಲ್ಲೆಯ ಮೆಟ್ಟೂರಿನಲ್ಲಿ ವಾಸವಿದ್ದಾರೆ ಎಂದು ತಿಳಿದು ಬಂದಿದೆ.

    ಮೋಹನ್ ಕೂಡ ಅದೇ ಗ್ರಾಮದಲ್ಲಿ ವಾಸವಿದ್ದರು. ಆದರೆ, ಮಧುರೈಗೆ ಹೋಗಿದ್ದು ಏಕೆ ಎನ್ನುವ ಅನುಮಾನ ಮೂಡಿದೆ. ಮೂಲಗಳ ಪ್ರಕಾರ ಆರ್ಥಿಕ ಸ್ಥಿತಿ ತೀರಾ ಹದಗೆಟ್ಟ ಕಾರಣದಿಂದಾಗಿ ಕೆಲಸ ಹುಡುಕಿಕೊಂಡು ಬಂದಿದ್ದರು ಎಂದು ಹೇಳಲಾಗುತ್ತಿದೆ. 60ರ ವಯಸ್ಸಿನ ಮೋಹನ್ ಅನಾರೋಗ್ಯದ ಕಾರಣದಿಂದ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ. ತನಿಖೆ ನಡೆಯುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಮೆರಿಕಾದಲ್ಲಿ ಆಸ್ಕರ್ ಪ್ರಶಸ್ತಿ ವಿಜೇತ ಗೆಳೆಯನನ್ನು ಭೇಟಿ ಮಾಡಿದ ಕಮಲ್

    ಅಮೆರಿಕಾದಲ್ಲಿ ಆಸ್ಕರ್ ಪ್ರಶಸ್ತಿ ವಿಜೇತ ಗೆಳೆಯನನ್ನು ಭೇಟಿ ಮಾಡಿದ ಕಮಲ್

    ಪ್ರಾಜೆಕ್ಟ್ ಕೆ ಸಿನಿಮಾದ ಶೂಟಿಂಗ್ ಗಾಗಿ ಕಮಲ್ ಹಾಸನ್ (Kamal Haasan) ಅಮೆರಿಕಾದಲ್ಲಿ ಬೀಡು ಬಿಟ್ಟಿದ್ದಾರೆ. ಅಲ್ಲದೇ, ಮೊನ್ನೆಯಷ್ಟೇ ಈ ಸಿನಿಮಾದ ಗ್ಲಿಂಪ್ಸ್ ಕೂಡ ರಿಲೀಸ್ ಆಗಿತ್ತು. ಆ ಸಮಾರಂಭದಲ್ಲೂ ಭಾಗಿಯಾಗಲು ಕಮಲ್ ಅಮೆರಿಕಾ ಪ್ರಯಾಣ ಬೆಳೆಸಿದ್ದರು. ಇದೇ ವೇಳೆಯಲ್ಲಿ ಸಮಯ ತೆಗೆದುಕೊಂಡು ಆಸ್ಕರ್ (Oscar) ಪ್ರಶಸ್ತಿ ವಿಜೇತ ಗೆಳೆಯನನ್ನು ಭೇಟಿ ಮಾಡಿದ್ದಾರೆ ಕಮಲ್.

    ಕಮಲ್ ನಟನೆಯ ದಶಾವತಾರಂ, ಅವ್ವೈಷಣ್ಮುಗಿ ಸಿನಿಮಾಗಳಲ್ಲಿ ಮೇಕಪ್ ಮಾಡಿದವರು ಆಸ್ಕರ್ ಪ್ರಶಸ್ತಿ ವಿಜೇತ ಮೇಕಪ್ ಕಲಾವಿದ ಮೈಕೆಲ್ ವೆಸ್ಟ್ ಮೋರ್ (Michael Westmore). ನಲವತ್ತು ವರ್ಷಗಳಿಂದ ಕಮಲ್ ಮತ್ತು ಮೈಕೆಲ್ ಸ್ನೇಹಿತರು. ಸದ್ಯ ಮೈಕೆಲ್  ಅಮೆರಿಕಾದಲ್ಲೇ (America) ವಾಸವಿದ್ದಾರೆ. ಅವರನ್ನು ಕಮಲ್ ಭೇಟಿ ಮಾಡಿ ಒಂದಷ್ಟು ಸಮಯ ಕಳೆದಿದ್ದಾರೆ.

    ಮೈಕೆಲ್ ಅವರನ್ನು ಕಮಲ್ ಭೇಟಿ ಮಾಡಿದ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸ್ನೇಹಿತ ಮೈಕಲ್ ಜೊತೆಗಿನ ಗೆಳೆತನವನ್ನು ಮತ್ತೆ ಮೆಲುಕು ಹಾಕಿರುವ ವಿಚಾರವನ್ನು ಕೂಡ ವರದಿ ಮಾಡಿವೆ. ಸದ್ಯ ಕಮಲ್ ಅಮೆರಿಕಾದಲ್ಲಿ ನಡೆಯುತ್ತಿರುವ ಪ್ರಾಜೆಕ್ಟ್ ಕೆ ಶೂಟ್ ನಲ್ಲಿ ಬ್ಯುಸಿಯಾಗಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಲೋಕಸಭೆ ಚುನಾವಣಾ ಕಣಕ್ಕೆ ನಟ ಕಮಲ್ ಹಾಸನ್

    ಲೋಕಸಭೆ ಚುನಾವಣಾ ಕಣಕ್ಕೆ ನಟ ಕಮಲ್ ಹಾಸನ್

    ಲೋಕಸಭೆ (Lok Sabha) ಚುನಾವಣೆ ಇನ್ನೂ ಒಂದು ವರ್ಷ ಬಾಕಿ ಇದ್ದರೂ, ತಮಿಳು ನಾಡಿನ ನಾನಾ ಪಕ್ಷಗಳು  ಈಗಿನಿಂದಲೇ ತಯಾರಿ ಮಾಡಿಕೊಳ್ಳುತ್ತಿವೆ. ಅಭ್ಯರ್ಥಿಗಳು, ಕ್ಷೇತ್ರ, ಹಿನ್ನೆಲೆಯಾಗಿ ಪ್ರಚಾರ ಹೀಗೆ ನಾನಾ ರೀತಿಯ ಕಸರತ್ತುಗಳನ್ನು ಮಾಡುತ್ತಿವೆ. ಅಂತೆಯೇ ಈ ಬಾರಿ ಹೆಸರಾಂತ ನಟ ಕಮಲ್ ಹಾಸನ್ ಕೂಡ ಚುನಾವಣೆ ಕಣದಲ್ಲಿ ಇರಲಿದ್ದಾರೆ ಎಂದು ಹೇಳಾಗುತ್ತಿದೆ.

    ಚುನಾವಣೆ (Election) ಕಣಕ್ಕೆ ಇಳಿಯುವುದು ಕಮಲ್‍ (Kamal Haasan)ಗೆ ಹೊಸದಲ್ಲ. ಈಗಾಗಲೇ ಒಂದು ಬಾರಿ ಚುನಾವಣೆಯನ್ನು ಎದುರಿಸಿ ಸೋತಿದ್ದಾರೆ. ಈ ಬಾರಿ ಗೆದ್ದೇ ಗೆಲ್ಲುವ ವಿಶ್ವಾಸದಿಂದ ಕೊಯಮತ್ತೂರು ಕ್ಷೇತ್ರವನ್ನು ಆರಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿಯೇ ಆ ಕ್ಷೇತ್ರದಲ್ಲಿ ಒಂದಷ್ಟು ಕೆಲಸವನ್ನೂ ಮಾಡುತ್ತಿದ್ದಾರಂತೆ. ಇದನ್ನೂ ಓದಿ:ತಮಿಳು ‘ಜೈಲರ್’ ವಿರುದ್ದ ಮಲಯಾಳಂ ‘ಜೈಲರ್’ ರಿಲೀಸ್: ರಜನಿ ಸಿನಿಮಾಗೆ ಟಕ್ಕರ್

    ಕಮಲ್ ಹಾಸನ್ ತಮ್ಮದೇ ಎಂ.ಎನ್.ಎಂ (M.N.M) ಪಕ್ಷವನ್ನು ಸ್ಥಾಪಿಸಿದ್ದಾರೆ. ಆ ಪಕ್ಷದ ರಾಜ್ಯಮಟ್ಟದ ಪ್ರಚಾರದ ಅಭಿಯಾನವನ್ನು ನಿನ್ನೆಯಿಂದ ಕೊಯಮತ್ತೂರು (Coimbatore) ದಕ್ಷಿಣ ಕ್ಷೇತ್ರದಿಂದ ಆರಂಭಿಸಿದ್ದಾರೆ. ವಿಧಾನಸಭೆಯ ಒಟ್ಟು 234 ಕ್ಷೇತ್ರಗಳಲ್ಲೂ ಪ್ರಚಾರ ಮತ್ತು ಕಾರ್ಯಕರ್ತರ ಕುಂದುಕೊರತೆಗಳನ್ನು ಈ ಅಭಿಯಾನ ಪಟ್ಟಿ ಮಾಡಲಿದೆ.

    ಕೊಯಮತ್ತೂರು ಕ್ಷೇತ್ರದಿಂದಲೇ ಕಮಲ್ ಸ್ಪರ್ಧಿಸಬೇಕು ಎನ್ನುವುದು ಪಕ್ಷದ ಜಿಲ್ಲಾ ಪದಾಧಿಕಾರಿಗಳ ಮನವಿಯಾಗಿದೆಯಂತೆ. ಹೀಗಾಗಿ ಕಮಲ್ ಅದೇ ಕ್ಷೇತ್ರದಿಂದ ಸ್ಪರ್ಧಿಸುವ ಕುರಿತು ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಮಿತಾಭ್ ನಟನೆಯ ‘ಶೋಲೆ’ ಸಿನಿಮಾಗೆ ಕಮಲ್ ಹಾಸನ್ ಸಹಾಯಕ ನಿರ್ದೇಶಕ

    ಅಮಿತಾಭ್ ನಟನೆಯ ‘ಶೋಲೆ’ ಸಿನಿಮಾಗೆ ಕಮಲ್ ಹಾಸನ್ ಸಹಾಯಕ ನಿರ್ದೇಶಕ

    ಭಾರತೀಯ ಸಿನಿಮಾ ರಂಗದ ಇಬ್ಬರು ದಂತಕಥೆಗಳು ಒಬ್ಬರನ್ನೊಬ್ಬರು ಹಾಡಿ ಹೊಗಳುವ ಮೂಲಕ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಇಂಥದ್ದೊಂದು ಸಂಭ್ರಮಕ್ಕೆ ಸಾಕ್ಷಿಯಾಗಿದ್ದು ಅಮೆರಿಕಾ ಸ್ಯಾನ್ ಡಿಯಾಗೋದಲ್ಲಿ ನಡೆಯುತ್ತಿರುವ ಕಾಮಿಕ್ ಉತ್ಸವ. ಈ ಉತ್ಸವದಲ್ಲಿ ಪ್ರಭಾಸ್ ಮುಖ್ಯಭೂಮಿಕೆಯ ಪ್ರಾಜೆಕ್ಟ್ ಕೆ (Project K) ಗ್ಲಿಂಪ್ಸ್ ರಿಲೀಸ್ ಆಗಿದೆ.

    ಪ್ರಾಜೆಕ್ಟ್ ಕೆ ಸಿನಿಮಾದಲ್ಲಿ ಪ್ರಭಾಸ್ ಮುಖ್ಯ ಪಾತ್ರದಲ್ಲಿ ನಟಿಸಿದ್ದರೆ, ಇನ್ನೂ ಹಲವು ಪಾತ್ರಗಳಲ್ಲಿ ಅಮಿತಾಭ್ ಬಚ್ಚನ್, ಕಮಲ್ ಹಾಸನ್ (Kamal Haasan) , ರಾಣಾ ದಗ್ಗುಬಾಟಿ, ದೀಪಿಕಾ ಪಡುಕೋಣೆ ಸೇರಿದಂತೆ ದಿಗ್ಗಜ ಕಲಾವಿದರೇ ಇದ್ದಾರೆ. ಗ್ಲಿಂಪ್ಸ್ ಬಿಡುಗಡೆಗಾಗಿ ಅಮಿತಾಭ್ (Amitabh Bachchan) ಹೊರತುಪಡಿಸಿ ಎಲ್ಲರೂ ಅಮೆರಿಕಾಗೆ ಹಾರಿದ್ದಾರೆ. ಇದನ್ನೂ ಓದಿ:ಸಿನಿಮಾಗೆ ಗುಡ್ ಬೈ, ರಾಜಕೀಯಕ್ಕೆ ಅಭಿಷೇಕ್ ಬಚ್ಚನ್ ಎಂಟ್ರಿ?

    ಗ್ಲಿಂಪ್ಸ್ ರಿಲೀಸ್ ಆದ ಸಂದರ್ಭದಲ್ಲಿ ವಿಡಿಯೋ ಮೂಲಕ ತಮ್ಮ ಮನೆಯಿಂದಲೇ ಕನೆಕ್ಟ್ ಆದ ಅಮಿತಾಭ್ ಅವರು ಕಮಲ್ ಹಾಸನ್ ಅವರನ್ನು ಹಾಡಿಹೊಗಳಿದರು. ‘ನಿಮ್ಮ ಎನರ್ಜಿಯಿಂದ ನಾವು ಬದುಕುತ್ತಿದ್ದೇವೆ’ ಎಂದು ಕಮಲ್ ಹೇಳುತ್ತಿದ್ದಂತೆಯೇ ‘ನೀವು ದೊಡ್ಡ ಕಲಾವಿದರು. ನಿಮ್ಮ ಸಿನಿಮಾಗಳು ವಾಸ್ತವತೆಗೆ ಹತ್ತಿರವಿರುತ್ತವೆ. ನೀವು ಸಿನಿಮಾಗಾಗಿ ಸಾಕಷ್ಟು ಕಷ್ಟ ಪಡುತ್ತೀರಿ’ ಎಂದು ಅಮಿತಾಭ್ ಮಾತನಾಡಿದ್ದಾರೆ.

    ಇದೇ ವೇಳೆಯ ‘ನಾನು ನಿಮ್ಮ ಶೋಲೆ (Sholay) ಸಿನಿಮಾದಲ್ಲಿ ಸಹಾಯಕ ನಿರ್ದೇಶಕನಾಗಿ (Assistant Director) ಕೆಲಸ ಮಾಡುತ್ತಿದ್ದೆ. ಆ ಸಿನಿಮಾದ ಮೇಲೆ ನನಗೆ ಕೋಪವಿತ್ತು. ನಿಮ್ಮ ಮೇಲೂ ಕೋಪ, ನಿರ್ಮಾಪಕರ ಮೇಲೂ ಕೋಪ. ಅದನ್ನು ನಿಮ್ಮ ಮುಂದೆಯೂ ಹೇಳಿಕೊಂಡಿದ್ದೆ. ನೀವು ನನ್ನ ಸಿನಿಮಾಗಳನ್ನು ಹೊಗಳುತ್ತಿದ್ದೀರಿ. ನಾನು ನಿಮ್ಮ ಸಿನಿಮಾ ಬೈದೆ’ ಎಂದು ಆ ದಿನಗಳನ್ನು ನೆನಪಿಸಿಕೊಂಡರು ಕಮಲ್ ಹಾಸನ್.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ರಭಾಸ್ ನಟನೆಯ ‘ಪ್ರಾಜೆಕ್ಟ್ ಕೆ’ ಚಿತ್ರದ ಟೈಟಲ್ ಬೇರೆ: ಅಚ್ಚರಿ ಮೂಡಿಸಿದ ಗ್ಲಿಂಪ್ಸ್

    ಪ್ರಭಾಸ್ ನಟನೆಯ ‘ಪ್ರಾಜೆಕ್ಟ್ ಕೆ’ ಚಿತ್ರದ ಟೈಟಲ್ ಬೇರೆ: ಅಚ್ಚರಿ ಮೂಡಿಸಿದ ಗ್ಲಿಂಪ್ಸ್

    ಭಾರೀ ಬಜೆಟ್ ನಲ್ಲಿ ರೆಡಿ ಆಗುತ್ತಿರುವ ಪ್ರಾಜೆಕ್ಟ್ ಕೆ (Project K) ಸಿನಿಮಾದ ಪ್ರಭಾಸ್ (Prabhas) ಫಸ್ಟ್ ಲುಕ್ ಮೊನ್ನೆಯಷ್ಟೇ ರಿಲೀಸ್ ಆಗಿ, ಅಭಿಮಾನಿಗಳಿಗೆ ನಿರಾಸೆ ಮೂಡಿಸಿತ್ತು. ಸಿನಿಮಾ ತಂಡ ಬಿಲ್ಡ್ ಅಪ್ ಕೊಟ್ಟಂತೆ, ಅಚ್ಚರಿಯೊಂದು ಅಭಿಮಾನಿಗಳಿಗೆ ಕಾದಿದೆ ಎಂದೇ ಹೇಳಲಾಗಿತ್ತು. ಆದರೆ, ಯಾವುದೇ ಅಚ್ಚರಿ ಮೂಡಿಸದೇ ನಿರಾಸೆ ಮಾಡಿತ್ತು. ಇದೀಗ ಗ್ಲಿಂಪ್ಸ್  (Glimpse)ರಿಲೀಸ್ ಆಗಿದ್ದು ಅಚ್ಚರಿ ಎನ್ನುವಂತೆ ಅದ್ಭುತವಾಗಿದೆ.

    ಮಧ್ಯರಾತ್ರಿ ಪ್ರಾಜೆಕ್ಟ್ ಕೆ ಸಿನಿಮಾದ ಟೈಟಲ್ ಮತ್ತು ಗ್ಲಿಂಪ್ಸ್ ರಿಲೀಸ್ ಆಗಿದ್ದು, ಪ್ರಭಾಸ್ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ತುಂಬಾ ಅದ್ದೂರಿಯಾಗಿ ಗ್ಲಿಂಪ್ಸ್ ಮೂಡಿ ಬಂದಿದೆ. ಅಲ್ಲದೇ, ಈ ಸಿನಿಮಾಗೆ ‘ಕಲ್ಕಿ’ (Kalki) ಎಂದು ಹೆಸರಿಡಲಾಗಿದೆ. ಗ್ಲಿಂಪ್ಸ್ ನಲ್ಲಿ ಸಾಕಷ್ಟು ಸಂಗತಿಗಳನ್ನು ಹೇಳಿದ್ದಾರೆ ನಿರ್ದೇಶಕರು.

    ಈ ಸಿನಿಮಾದ ಶೂಟಿಂಗ್ ಈಗಾಗಲೇ ಶುರುವಾಗಿದ್ದು, ಪ್ರಭಾಸ್ ಜೊತೆ ಕಮಲ್ ಹಾಸನ್ (Kamal Haasan),  ರಾಣಾ ದಗ್ಗುಬಾಟಿ ಈಗಾಗಲೇ ಅಮೆರಿಕಾಗೆ ಪ್ರವಾಸ ಬೆಳೆಸಿದ್ದಾರೆ. ಸುಮಾರು 600 ಕೋಟಿಗೂ ಅಧಿಕ ಬಜೆಟ್ ನಲ್ಲಿ ಈ ಸಿನಿಮಾ ತಯಾರಾಗಲಿದ್ದು, ಅನೇಕ ದಿಗ್ಗಜ ಕಲಾವಿದರು ಈ ಚಿತ್ರಕ್ಕಾಗಿ ಒಂದಾಗಿದ್ದಾರೆ. ಇಷ್ಟೊಂದು ನಿರೀಕ್ಷೆ ಇಟ್ಟುಕೊಂಡಿರುವ ಸಿನಿಮಾದ ಫಸ್ಟ್ ಲುಕ್ (First Look) ಬೇರೆ ಹಂತದಲ್ಲಿ ಇರಬೇಕಿತ್ತು ಎಂದು ಅಭಿಮಾನಿಗಳು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಇದನ್ನೂ ಓದಿ:ಅಭಿಮಾನಿ ವರ್ತನೆಗೆ ಬೆಚ್ಚಿಬಿದ್ದ ವಿಜಯ್ ದೇವರಕೊಂಡ

    `ಪಠಾಣ್’ (Pathaan) ಚಿತ್ರದ ಸೂಪರ್ ಸಕ್ಸಸ್‌ನಲ್ಲಿರುವ ದೀಪಿಕಾ ಪಡುಕೋಣೆ (Deepika Padukone) `ಪ್ರಾಜೆಕ್ಟ್ ಕೆ’ ಸಿನಿಮಾಗೆ ಭರ್ಜರಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. `ಪಠಾಣ್’ ಸಿನಿಮಾ 1000 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಹೊಸ ದಾಖಲೆ ಬರೆದಿದೆ. ಹಾಗಾಗಿ `ಪ್ರಾಜೆಕ್ಟ್ ಕೆ’ ಚಿತ್ರಕ್ಕೆ ದುಬಾರಿ ಸಂಭಾವನೆಯನ್ನೇ ನಟಿ ಪಡೆದಿದ್ದಾರೆ.

    ಈ ಸಿನಿಮಾಗಾಗಿ ಅವರು ದೊಡ್ಡ ಕಾಲ್‌ಶೀಟ್ ನೀಡಿದ್ದಾರೆ. ಹಲವು ದಿನಗಳನ್ನ ಈ ಚಿತ್ರಕ್ಕಾಗಿ ಮುಡಿಪಿಟ್ಟಿದ್ದಾರೆ. ನಾಗ್ ಅಶ್ವೀನ್ ನಿರ್ದೇಶನದ ಈ ಚಿತ್ರಕ್ಕೆ 10 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ಕೆಲ ಸ್ಟಾರ್ ಹೀರೋಗಳು ಕೂಡ ಇಷ್ಟು ಸಂಭಾವನೆ ಪಡೆಯಲ್ಲ ಅನ್ನೋದು ಗಮಿನಿಸಬೇಕಾದ ವಿಷಯ. ಪ್ರಭಾಸ್ ಜೊತೆಗಿನ ಈ ಚಿತ್ರ ಮುಂದಿನ ವರ್ಷ ತೆರೆಗೆ ಅಪ್ಪಳಿಸಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಿರಾಸೆ ಮೂಡಿಸಿದ ಪ್ರಭಾಸ್ ನಟನೆಯ ‘ಪ್ರಾಜೆಕ್ಟ್ ಕೆ’ ಫಸ್ಟ್ ಲುಕ್

    ನಿರಾಸೆ ಮೂಡಿಸಿದ ಪ್ರಭಾಸ್ ನಟನೆಯ ‘ಪ್ರಾಜೆಕ್ಟ್ ಕೆ’ ಫಸ್ಟ್ ಲುಕ್

    ದುಬಾರಿ ಬಜೆಟ್ ನಲ್ಲಿ ರೆಡಿ ಆಗುತ್ತಿರುವ ಪ್ರಾಜೆಕ್ಟ್ ಕೆ (Project K) ಸಿನಿಮಾದ ಪ್ರಭಾಸ್ (Prabhas) ಫಸ್ಟ್ ಲುಕ್ ರಿಲೀಸ್ ಆಗಿದ್ದು, ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಸಿನಿಮಾ ತಂಡ ಬಿಲ್ಡ್ ಅಪ್ ಕೊಟ್ಟಂತೆ, ಅಚ್ಚರಿಯೊಂದು ಅಭಿಮಾನಿಗಳಿಗೆ ಕಾದಿದೆ ಎಂದೇ ಹೇಳಲಾಗಿತ್ತು. ಆದರೆ, ಯಾವುದೇ ಅಚ್ಚರಿ ಮೂಡಿಸದೇ ನಿರಾಸೆ ಮಾಡಿದೆ ಚಿತ್ರತಂಡ. ಪ್ರಭಾಸ್ ಅವರ ಮಾಮೂಲು ಲುಕ್ ಇರುವಂತಹ ಫಸ್ಟ್ ಲುಕ್ ಅದಾಗಿದೆ.

    ಈ ಸಿನಿಮಾದ ಶೂಟಿಂಗ್ ಈಗಾಗಲೇ ಶುರುವಾಗಿದ್ದು, ಪ್ರಭಾಸ್ ಜೊತೆ ಕಮಲ್ ಹಾಸನ್ (Kamal Haasan),  ರಾಣಾ ದಗ್ಗುಬಾಟಿ ಈಗಾಗಲೇ ಅಮೆರಿಕಾಗೆ ಪ್ರವಾಸ ಬೆಳೆಸಿದ್ದಾರೆ. ಸುಮಾರು 600 ಕೋಟಿಗೂ ಅಧಿಕ ಬಜೆಟ್ ನಲ್ಲಿ ಈ ಸಿನಿಮಾ ತಯಾರಾಗಲಿದ್ದು, ಅನೇಕ ದಿಗ್ಗಜ ಕಲಾವಿದರು ಈ ಚಿತ್ರಕ್ಕಾಗಿ ಒಂದಾಗಿದ್ದಾರೆ. ಇಷ್ಟೊಂದು ನಿರೀಕ್ಷೆ ಇಟ್ಟುಕೊಂಡಿರುವ ಸಿನಿಮಾದ ಫಸ್ಟ್ ಲುಕ್ (First Look) ಬೇರೆ ಹಂತದಲ್ಲಿ ಇರಬೇಕಿತ್ತು ಎಂದು ಅಭಿಮಾನಿಗಳು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಇದನ್ನೂ ಓದಿ:ಶಿವನ ಧ್ಯಾನದಲ್ಲಿ ಮುಳುಗಿದ ಸಮಂತಾ

    `ಪಠಾಣ್’ (Pathaan) ಚಿತ್ರದ ಸೂಪರ್ ಸಕ್ಸಸ್‌ನಲ್ಲಿರುವ ದೀಪಿಕಾ ಪಡುಕೋಣೆ (Deepika Padukone) ಈಗ ಪ್ರಭಾಸ್ ನಟನೆಯ `ಪ್ರಾಜೆಕ್ಟ್ ಕೆ’ ಸಿನಿಮಾಗೆ ಭರ್ಜರಿ ಸಂಭಾವನೆ ಪಡೆದಿದ್ದಾರೆ. `ಪಠಾಣ್’ ಸಿನಿಮಾ 1000 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಹೊಸ ದಾಖಲೆ ಬರೆದಿದೆ. ಹಾಗಾಗಿ `ಪ್ರಾಜೆಕ್ಟ್ ಕೆ’ ಚಿತ್ರಕ್ಕೆ ದುಬಾರಿ ಸಂಭಾವನೆಯನ್ನೇ ನಟಿ ಪಡೆದಿದ್ದಾರೆ.