Tag: Kamal Haasan

  • ತೆರೆಮೇಲೆ ಮತ್ತೆ ಒಂದಾದ ರಜನಿಕಾಂತ್-ಕಮಲ್ ಹಾಸನ್

    ತೆರೆಮೇಲೆ ಮತ್ತೆ ಒಂದಾದ ರಜನಿಕಾಂತ್-ಕಮಲ್ ಹಾಸನ್

    ಕಾಲಿವುಡ್‌ನ ಆಪ್ತ ಮಿತ್ರ ಸ್ಟಾರ್ ನಟರು ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಕಮಲ್ ಹಾಸನ್. ಇಬ್ಬರೂ ನಿರ್ದೇಶಕ ಕೆ.ಬಾಲಚಂದರ್ ಶಿಷ್ಯಂದಿರು. 21 ಚಿತ್ರಗಳಲ್ಲಿ ಒಟ್ಟಾಗಿ ನಟಿಸಿದ್ದ ಜೋಡಿ ಇದು. ಅವುಗಳಲ್ಲಿ 7 ಚಿತ್ರಗಳನ್ನ ಕೆ. ಬಾಲಚಂದರ್ ನಿರ್ದೇಶಿಸಿದ್ದರು. 70ರ ದಶಕದಲ್ಲಿ ರಜನಿಕಾಂತ್-ಕಮಲ್ ಹಾಸನ್ ಕಾಂಬಿನೇಷನ್ ಚಿತ್ರಗಳು ಮಾಡಿದ್ದ ದಾಖಲೆ ಲೆಕ್ಕಕ್ಕಿಲ್ಲ. ಆದರೆ ಇಬ್ಬರೂ ಜಂಟಿಯಾಗಿ ತೆರೆ ಹಂಚಿಕೊಳ್ಳದೆ 40 ವರ್ಷ ಉರುಳಿದೆ. ವಿಶೇಷ ಅಂದ್ರೆ ಇದೀಗ ಫ್ಯಾನ್ಸ್‌ಗೆ ಮತ್ತೆ ಒಟ್ಟಾಗಿ ನಟಿಸುವ ಶುಭ ಸುದ್ದಿ ಕೊಟ್ಟಿದ್ದಾರೆ. ಇದು ಕಟ್ಟುಕಥೆಯಲ್ಲ, ನಿಜ ಸಂಗತಿ.

    ದಕ್ಷಿಣ ಭಾರತದ ಈ ಇಬ್ಬರು ಸೂಪರ್‌ಸ್ಟಾರ್‌ಗಳು ಮತ್ತೆ ಒಟ್ಟಿಗೆ ನಟಿಸುವುದು ಕೇವಲ ಗಾಳಿ ಸುದ್ದಿ ಎಂದು ಭಾವಿಸಿರುವಾಗಲೇ ಅಧಿಕೃತ ಸುದ್ದಿಯೊಂದು ತೇಲಿಬಂದಿದೆ. 40 ವರ್ಷಗಳ ಬಳಿಕ ದಿಗ್ಗಜರನ್ನ ಒಂದೇ ಸ್ಕ್ರೀನ್‌ನಲ್ಲಿ ತೋರಿಸುವ ಧೈರ್ಯ, ತಾಕತ್ತು ಬೇಕು. ಈ ಚಿತ್ರವನ್ನ ಕೈಗೆತ್ತಿಕೊಂಡಿರೋದು ಸ್ಟಾರ್ ಡೈರೆಕ್ಟರ್ ಲೋಕೇಶ್ ಕನಕರಾಜ್. ಕೂಲಿ ಸಕ್ಸಸ್ ಬೆನ್ನಲ್ಲೇ ರಜನಿಕಾಂತ್ ಜೊತೆ ಮತ್ತೆ ಸಿನಿಮಾ ಮಾಡುತ್ತಿದ್ದಾರೆ ಲೋಕೇಶ್, ಜೊತೆಗೆ ವಿಕ್ರಂ ಬಳಿಕ ಕಮಲ್ ಹಾಸನ್ ಜೊತೆ ಸಿನಿಮಾ ಮಾಡುವ ಡೇಟ್ಸ್ನ್ನೂ ಲೋಕೇಶ್ ಪಡೆದುಕೊಂಡಿದ್ದರು. ಇಬ್ಬರನ್ನೂ ಕೊಲ್ಯಾಬರೇಟ್ ಮಾಡುತ್ತಿದ್ದಾರೆ ಲೋಕೇಶ್. ಈ ಚಿತ್ರ ಲೋಕೇಶ್ ಸಿನಿಮಾ ಸ್ಪೆಷಲ್‌ ಆಫ್ ಮೇಕಿಂಗ್, ಲೋಕೇಶ್ ಸಿನಿಮ್ಯಾಟಿಕ್ ಯುನಿವರ್ಸಲ್ ಸ್ಪೆಷಲ್‌ನಲ್ಲಿ ಬರುವ ಸಾಧ್ಯತೆ ಇದೆ.

    ಇಬ್ಬರು ಸ್ಟಾರ್ ನಟರ ಚಿತ್ರ ಎಂದಾಗ ಬಿಗ್ ಬಂಡವಾಳದ ಚಿತ್ರವಾಗಿ ಬರಬೇಕಿರುವುದು ಸಾಮಾನ್ಯ. ಮೂಲಗಳ ಪ್ರಕಾರ ಇದೇ ಸನ್ ಪಿಕ್ರ್ಸ್‌ ಚಿತ್ರವನ್ನ ನಿರ್ಮಾಣ ಮಾಡಲು ಮುಂದಾಗಿದೆ ಎನ್ನಲಾಗುತ್ತಿದೆ. ಘೋಷಣೆಯೊಂದೇ ಬಾಕಿ ಇದೆ. ಸದ್ಯಕ್ಕೆ ಕೂಲಿ ಬಾಕ್ಸಾಫೀಸ್‌ನಲ್ಲಿ ಸೌಂಡ್ ಮಾಡ್ತಿರೋದ್ರಿಂದ ಅಬ್ಬರ ನಡುವೆ ಘೋಷಣೆ ಬೇಡ ಎಂದು ಸುಮ್ಮನಿದೆ ಟೀಮ್ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಎಷ್ಟೋ ಸಿನಿ ಪ್ರಿಯರ ಕನಸು ಮತ್ತೆ ನನಸಾಗುತ್ತಿದೆ. ರಜನಿಕಾಂತ್-ಕಮಲ್ ಒಟ್ಟಿಗೆ ಕಾಣಿಸ್ಕೊಳ್ಳೋ ಚಿತ್ರ ತಯಾರಾಗುತ್ತಿದೆ.

  • ಕಮಲ್ ಹಾಸನ್ ವಿರುದ್ಧ ಕನಕಪುರ ಕೋರ್ಟ್‌ನಲ್ಲಿ ಖಾಸಗಿ ದೂರು – ಜು.5ಕ್ಕೆ ವಿಚಾರಣೆ

    ಕಮಲ್ ಹಾಸನ್ ವಿರುದ್ಧ ಕನಕಪುರ ಕೋರ್ಟ್‌ನಲ್ಲಿ ಖಾಸಗಿ ದೂರು – ಜು.5ಕ್ಕೆ ವಿಚಾರಣೆ

    ರಾಮನಗರ: ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ನಟ ಕಮಲ್ ಹಾಸನ್ (Kamal Haasan) ವಿರುದ್ಧ ಕನಕಪುರದ (Kanakapura) ಎರಡನೇ ಅಪರ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ.

    ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ನಾಗಾರ್ಜುನ್ ಗೌಡ ಎಂಬುವವರು ಕೋರ್ಟ್‌ಗೆ ಖಾಸಗಿ ದೂರು ದಾಖಲು ಮಾಡಿದ್ದಾರೆ. ಕನ್ನಡದ (Kannada) ಬಗ್ಗೆ ಕಮಲ್ ಹಾಸನ್ ಅವಹೇಳನ ಮಾಡಿರೋದು ವೈಯಕ್ತಿಕವಾಗಿ ನೋವು ತಂದಿದೆ. ಜೊತೆಗೆ ಮಾನಸಿಕವಾಗಿ ಖಿನ್ನತೆಯನ್ನ ತರಿಸಿದೆ. ಕನ್ನಡಕ್ಕೆ ಅಪಮಾನ ಮಾಡಿದ ಬಗ್ಗೆ ಕ್ಷಮೆ ಕೇಳದೇ ಉದ್ಧಟತನ ತೋರಿದ್ದಾರೆ ಎಂದು ದಾವೆಹೂಡಿರೋ ನಾಗಾರ್ಜುನ್, ಪ್ರಕರಣದ ಸಾಕ್ಷಿಯಾಗಿ ನಟ ಶಿವರಾಜ್ ಕುಮಾರ್ ರನ್ನ ಪರಿಗಣಿಸುವಂತೆ ಕೋರ್ಟ್‌ಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಏಷ್ಯಾ ಕಪ್‌ ಟೂರ್ನಿಗೆ ಮುಹೂರ್ತ ಫಿಕ್ಸ್‌; ಸೆ.7ಕ್ಕೆ ಭಾರತ-ಪಾಕ್‌ ಮುಖಾಮುಖಿ

    ನಾಗಾರ್ಜುನ ಗೌಡ ಪರ ವಕೀಲ ವಿನೋದ್ ಎಂಬುವವರು ಕೋರ್ಟ್ನಲ್ಲಿ ಈ ಬಗ್ಗೆ ವಾದ ಮಂಡಿಸಿದ್ದು, ಪ್ರಕರಣವನ್ನ ಜುಲೈ 5ಕ್ಕೆ ವಿಚಾರಣೆಗೆ ಮುಂದೂಡಿ ಕೋರ್ಟ್ ಆದೇಶಿಸಿದೆ. ಕನಕಪುರದ 2ನೇ ಅಪರ ಸಿವಿಲ್ ಹಾಗೂ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಬೈಕ್ ಟ್ಯಾಕ್ಸಿಗೆ ಕೇಂದ್ರದಿಂದ ಅಸ್ತು – ಮಾರ್ಗಸೂಚಿ ಬಿಡುಗಡೆ

  • ಕಮಲ್ `ಥಗ್‌ಲೈಫ್’ಗೆ ಗಾಯದ ಮೇಲೆ ಬರೆ, 25 ಲಕ್ಷ ದಂಡ!

    ಕಮಲ್ `ಥಗ್‌ಲೈಫ್’ಗೆ ಗಾಯದ ಮೇಲೆ ಬರೆ, 25 ಲಕ್ಷ ದಂಡ!

    ರ್ನಾಟಕದಲ್ಲಿ ಬ್ಯಾನ್‌ಗೆ ಒಳಗಾದ ಕಮಲ್ ಹಾಸನ್ ಅಭಿನಯದ `ಥಗ್‌ಲೈಫ್’ (Thug Life) ಚಿತ್ರ ನಷ್ಟದ ಮೇಲೆ ನಷ್ಟ ಅನುಭವಿಸುತ್ತಿದೆ. ಇದೀಗ ಗಾಯದ ಮೇಲೆ ಬರೆ ಎಳೆಸಿಕೊಳ್ಳುವ ಸ್ಥಿತಿಗೆ ಬಂದಿದೆ ಸಿನಿಮಾ ತಂಡ. ಮೊದಲೇ ಚಿತ್ರಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾದ ಕಾರಣಕ್ಕೆ ಬಾಕ್ಸಾಫೀಸ್ ಕಲೆಕ್ಷನ್‌ನಲ್ಲಿ ಸೋತಿದೆ. ಈ ನಡುವೆ ಮಾತಿಗೆ ತಪ್ಪಿರುವುದರಿಂದ 25 ಲಕ್ಷ ರೂ. ದಂಡ ಅನುಭವಿಸುವಂತಾಗಿದೆ. ಕಾರಣ ಮಲ್ಟಿಪ್ಲೆಕ್ಸ್ಗಾಗಿ ಮಾಡಿಕೊಂಡಿದ್ದ ಒಪ್ಪಂದದ ಉಲ್ಲಂಘನೆ. ಹೀಗಾಗಿ ರಾಷ್ಟ್ರೀಯ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್‌ನಿಂದ ಭಾರಿ ದಂಡವನ್ನು ಎದುರಿಸುತ್ತಿದ್ದಾರೆ ಥಗ್‌ಲೈಫ್ ನಿರ್ಮಾಪಕರು.

    ಕನ್ನಡ ಭಾಷೆಯ ಕುರಿತು ವಿವಾದಾತ್ಮಕ ಹೇಳಿಕೆ ಕೊಟ್ಟು ಕ್ಷಮೆ ಕೇಳದೇ ಮೊಂಡುತನ ಮೆರೆದಿದ್ದ ಕಮಲ್ ಥಗ್‌ಲೈಫ್ ಚಿತ್ರ ಕರ್ನಾಟಕಕ್ಕೆ ಎಂಟ್ರಿ ಕೊಡಲೇ ಇಲ್ಲ. ಕೋರ್ಟ್‌ನಿಂದ ಕಮಲ್ ಅನುಮತಿ ಪಡೆದಿದ್ದರೂ ವಿತರಕರು ಮುಂದೆ ಬರದ ಕಾರಣಕ್ಕೆ ಕರ್ನಾಟಕದಲ್ಲಿ ತೆರೆ ಕಾಣಲಿಲ್ಲ. ಈ ನಡುವೆ ಭಾರೀ ಬಜೆಟ್‌ನಲ್ಲಿ ನಿರ್ಮಾಣವಾದ ಥಗ್‌ಲೈಫ್ ಹೀನಾಯವಾಗಿ ಸೋತಿದೆ ಎನ್ನಲಾಗಿದ್ದು, ಏಟಿನ ಮೇಲೆ ಏಟು ಎನ್ನುವಂತೆ ದಂಡ ಕಟ್ಟುವ ಸ್ಥಿತಿಗೆ ಬಂದಿದೆ.ಇದನ್ನೂ ಓದಿ: ಐತಿಹಾಸಿಕ ಕ್ಷಣಕ್ಕೆ ಭಾರತ ಸಾಕ್ಷಿ – ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಸೇರಿದ ಮೊದಲ ಭಾರತೀಯ ಶುಕ್ಲಾ

    ರಿಲೀಸ್‌ಗೂ ಮುನ್ನ ಭಾರೀ ಪ್ರಚಾರದ ಹೊರತಾಗಿಯೂ ಥಗ್‌ಲೈಫ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ನಿರಾಶಾದಾಯಕ ಗಳಿಕೆಯನ್ನು ಕಂಡಿತ್ತು. ದೊಡ್ಡ ಸ್ಟಾರ್‌ಗಳನ್ನೊಳಗೊಂಡ ಟೀಮ್ ಇದ್ರೂ ಉತ್ತಮ ಪ್ರದರ್ಶನ ನೀಡೋದ್ರಲ್ಲಿ ಎಡವಿದೆ. ಹೀಗಾಗಿ ನಿರ್ಮಾಪಕರು ನಿರೀಕ್ಷೆಗಿಂತ ಬೇಗ ಚಿತ್ರವನ್ನು ಓಟಿಟಿ ಬಿಡುಗಡೆ ಮಾಡಲು ಯೋಜನೆ ಮಾಡಿಕೊಂಡಿದ್ದಾರೆ. ರಾಷ್ಟ್ರೀಯ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಜೊತೆ ಚಿತ್ರತಂಡ ರಿಲೀಸ್ ಬಳಿಕ ಎಂಟು ವಾರಗಳ ಒಪ್ಪಂದ ಮಾಡಿಕೊಂಡಿತ್ತು. ಸದ್ಯ ಈ ಒಪ್ಪಂದವನ್ನು ಮೊಟಕುಗೊಳಿಸಲು ಚಿತ್ರತಂಡ ಯೋಜಿಸಿದೆ ಎನ್ನಲಾಗುತ್ತಿದೆ. ಹೀಗಾಗಿ ರಾಷ್ಟ್ರೀಯ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ತನ್ನ ನಿಯಮ ಉಲ್ಲಂಘಿಸಿದ ಥಗ್‌ಲೈಫ್‌ಗೆ ಭಾರೀ ದಂಡದ ಹೊಡೆತ ನೀಡಿದೆ.

    ರಾಷ್ಟ್ರೀಯ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಚಿತ್ರಕ್ಕೆ ಷರತ್ತಿನ ಆಧಾರದ ಮೇಲೆ ಚಿತ್ರವನ್ನು ತಮ್ಮ ಚಿತ್ರಮಂದಿರಗಳಲ್ಲಿ ಸ್ಟ್ರೀಮ್‌ ಮಾಡಲು ಅವಕಾಶ ನೀಡಿತ್ತು. ಆದರೆ ಥಗ್‌ಲೈಫ್ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ. ಜನರಿಲ್ಲದೆ ಥಿಯೇಟರ್‌ಗಳು ಬಣ ಬಣ ಎನ್ನುತ್ತಿದೆ. ಈ ಕಾರಣಕ್ಕೆ ಮಲ್ಟಿಪ್ಲೆಕ್ಸ್‌ನಲ್ಲಿ ಕಲೆಕ್ಷನ್ ಇಲ್ಲದಿದ್ರೂ ಸುಮ್ಮನೆ ಬಾಡಿಗೆ ಕೊಟ್ಟು ಚಿತ್ರ ಪ್ರದರ್ಶನ ಮಾಡಬೇಕಾದ ದುಃಸ್ಥಿತಿ ಥಗ್‌ಲೈಫ್ ತಂಡಕ್ಕಿದೆ. ಹೀಗಾಗಿ ಮೊಟಕು ಮಾಡಿ ಓಟಿಟಿಗೆ ಕೊಡಲು ಟೀಮ್ ಯೋಜಿಸಿ, ಮಲ್ಟಿಪ್ಲೆಕ್ಸ್ ಅಸೋಸಿಯೇಷನ್‌ಗೆ ಮನವಿ ಮಾಡಿಕೊಂಡಿತ್ತು. ಇದೀಗ ಒಪ್ಪಂದದ ಉಲ್ಲಂಘನೆಗಾಗಿ ನಿರ್ಮಾಪಕರಿಗೆ 25 ಲಕ್ಷ ರೂ.ಗಳ ಭಾರಿ ದಂಡವನ್ನು ವಿಧಿಸಿದೆ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್. ಆದ್ದರಿಂದ ಇದನ್ನ ಕಮಲ್ ಹಾಸನ್ ಹಠಕ್ಕಾಗಿ ತೆರುತ್ತಿರುವ ದಂಡ ಎನ್ನಬಹುದೇ?ಇದನ್ನೂ ಓದಿ: ‘ದೂರ ತೀರ ಯಾನ’ ಚಿತ್ರದಲ್ಲಿ ಶ್ರುತಿ ಹರಿಹರನ್ ಗೆಸ್ಟ್

  • ಥಗ್ ಲೈಫ್ ಸೋಲು – ಕ್ಷಮೆ ಕೇಳಿದ ನಿರ್ದೇಶಕ ಮಣಿರತ್ನಂ

    ಥಗ್ ಲೈಫ್ ಸೋಲು – ಕ್ಷಮೆ ಕೇಳಿದ ನಿರ್ದೇಶಕ ಮಣಿರತ್ನಂ

    ಮಲ್ ಹಾಸನ್ (Kamal Haasan) ಮತ್ತು ನಿರ್ದೇಶಕ ಮಣಿರತ್ನಂ ಕಾಂಬಿನೇಷನ್‌ನ ʻಥಗ್ ಲೈಫ್ʼ (Mani Ratnam) ಸಿನಿಮಾ ಕೊನೆಗೂ ಸೋಲನ್ನು ಒಪ್ಪಿಕೊಂಡಿದೆ. ಪ್ರೇಕ್ಷಕರು ನಿರೀಕ್ಷೆ ಮಾಡಿದಂತೆ ನಾವು ಚಿತ್ರವನ್ನು ಕೊಡಲಿಲ್ಲ ಅಂತ ಸ್ವತಃ ಮಣಿರತ್ನಂ ಅವರೇ ಒಪ್ಪಿಕೊಂಡಿದ್ದಾರೆ. ಹೊಸ ಮಾದರಿಯ ಸಿನಿಮಾವನ್ನು ಕೊಡಲು ನಾವು ಪ್ರಯತ್ನಿಸಿದೆವು. ಆದರೆ, ಎಲ್ಲೋ ಹಾದಿ ತಪ್ಪಿದೆ ಅಂತಾನೂ ಅವರು ವಿನಮ್ರ ವಾಗಿ ಹೇಳಿಕೊಂಡಿದ್ದಾರೆ.

    ಥಗ್ ಲೈಫ್ಸ್ ಸಿನಿಮಾ ಟ್ರೈಲರ್ ಹಾಗೂ ಟೀಸರ್ ನೋಡಿದ್ದ ಪ್ರೇಕ್ಷಕರು, ಅತೀವ ನಿರೀಕ್ಷೆ ಇಟ್ಟುಕೊಂಡಿದ್ದರು. ಕಮಲ್ ಹಾಸನ್ ಮತ್ತು ಮಣಿರತ್ನಂ ಬರೋಬ್ಬರಿ 37 ವರ್ಷಗಳ ನಂತರ ಒಟ್ಟಾಗಿ ಸಿನಿಮಾ ಮಾಡಿದ್ದರಿಂದ ಬೇರೆ ರೀತಿಯ ಚಿತ್ರವನ್ನೇ ನಿರೀಕ್ಷೆ ಮಾಡಲಾಗಿತ್ತು. ಮತ್ತೊಂದು ನಾಯಗನ್ ರೀತಿಯ ಸಿನಿಮಾ ಆಗಿರಲಿದೆ ಅಂತ ನಂಬಿಕೊಂಡಿತ್ತು. ಆದರೆ, ಸಿನಿಮಾ ರಿಲೀಸ್ ನಂತರ ಎಲ್ಲವೂ ಹುಸಿಯಾಗಿತ್ತು. ಇದನ್ನೂ ಓದಿ: `ಥಗ್‌ಲೈಫ್’ ರಿಲೀಸ್‌ಗೆ ಸುಪ್ರೀಂ ಗ್ರೀನ್ ಸಿಗ್ನಲ್ – ಕನ್ನಡ ಪರ ಸಂಘಟನೆಯ ಪ್ರಮುಖರಿಗೆ ಪೊಲೀಸರಿಂದ ನೋಟಿಸ್

    ಇದೀಗ ಥಗ್ ಲೈಫ್ ಸೋಲಿಗೆ ಕ್ಷಮೆ ಕೇಳಿದ್ದಾರೆ ನಿರ್ದೇಶಕ ಮಣಿರತ್ನಂ. ಥಗ್ ಲೈಫ್ ಬಗ್ಗೆ ಭಾರತವೇ ಅತೀ ನಿರೀಕ್ಷೆ ಹೊಂದಿತ್ತು. ಆದರೆ, ಜನರ ಮನಸ್ಸನ್ನು ಗೆಲ್ಲುವಲ್ಲಿ ʻಥಗ್ ಲೈಫ್ʼ ಸಿನಿಮಾ ಸೋತಿದೆ. ಜನರು ಅತೀ ನಿರೀಕ್ಷೆಯನ್ನು ಹೊಂದಿದ್ದರು. ನಾಯಗನ್ ರೀತಿಯ ಸಿನಿಮಾ ಆಗಲಿದೆ ಅಂತ ಕನಸು ಕಟ್ಟಿದ್ದರು. ಈ ಹಿಂದಿನ ಇತಿಹಾಸವನ್ನು ಸೃಷ್ಟಿಸುವಲ್ಲಿ ನಾವು ಎಡವಿದ್ದೆ. ಹೊಸ ಪ್ರಯತ್ನ ಮಾಡಿದೆವು. ಆದರೆ, ಅದು ಸರಿಯಾದ ದಾರಿಯಲ್ಲಿ ಇರಲಿಲ್ಲ ಅನಿಸತ್ತೆ. ಪ್ರೇಕ್ಷಕರಿಗೆ ನಿರಾಸೆ ಮಾಡಿದ್ದಕ್ಕೆ ಕ್ಷಮಿಸಿ’ ಅಂದಿದ್ದಾರೆ ಮಣಿರತ್ನಂ. ಇದನ್ನೂ ಓದಿ: ದರ್ಶನ್ ಪತ್ನಿಯ ಹೊಸ ಲುಕ್ ವೈರಲ್

  • Thug Life | ಹಿಂಸಾಚಾರ, ಬೆದರಿಕೆ ಹಾಕಿದವರ ವಿರುದ್ಧ ಕ್ರಮ ಯಾಕಿಲ್ಲ – ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಪ್ರಶ್ನೆ

    Thug Life | ಹಿಂಸಾಚಾರ, ಬೆದರಿಕೆ ಹಾಕಿದವರ ವಿರುದ್ಧ ಕ್ರಮ ಯಾಕಿಲ್ಲ – ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಪ್ರಶ್ನೆ

    ನವದೆಹಲಿ: ನಟ, ರಾಜಕಾರಣಿ ಕಮಲ್ ಹಾಸನ್ (Kamal Hassan) ಅವರ `ಥಗ್ ಲೈಫ್’ (Thag Life) ಚಿತ್ರ ಬಿಡುಗಡೆಯ ಸಂದರ್ಭದಲ್ಲಿ ಹಿಂಸಾಚಾರ, ಬೆದರಿಕೆ ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳದ ಕರ್ನಾಟಕ ಸರ್ಕಾರ ಮತ್ತು ರಾಜ್ಯ ಚಲನಚಿತ್ರ ಮಂಡಳಿಯನ್ನು ಸುಪ್ರೀಂ ಕೋರ್ಟ್ (Supreme Court) ತರಾಟೆಗೆ ತೆಗೆದುಕೊಂಡಿದೆ.

    ಚಿತ್ರದ ಮೇಲೆ ಯಾವುದೇ ನಿರ್ಬಂಧ ಹೇರಿಲ್ಲ. ನಿರ್ಮಾಪಕರು ಸಿನಿಮಾ ಬಿಡುಗಡೆ ಮಾಡಲು ಮನಸ್ಸು ಮಾಡಿದರೆ ಸಂಪೂರ್ಣ ಭದ್ರತೆಯನ್ನು ಒದಗಿಸುವುದಾಗಿ ರಾಜ್ಯ ಸರ್ಕಾರ ಸಲ್ಲಿಸಿದ ಅಫಿಡವಿಟ್ ಅನ್ನು ದಾಖಲಿಸಿಕೊಂಡ ನ್ಯಾಯಾಲಯ, ಬೆದರಿಕೆ ಹಾಕಿದವರ ವಿರುದ್ಧ ಏಕೆ ಕ್ರಮ ಕೈಗೊಳ್ಳಲಿಲ್ಲ ಎಂದು ಪ್ರಶ್ನಿಸಿತು. ಇದನ್ನೂ ಓದಿ: ಆರ್‌ಸಿಬಿ ಮ್ಯಾಚ್‌ ಫಿಕ್ಸಿಂಗ್‌ ಮಾಡಿಕೊಂಡಿದೆ – ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಹಾಂ ಬಾಂಬ್

    ದ್ವೇಷ ಭಾಷಣ ಮತ್ತು ಹಿಂಸಾಚಾರದ ಬೆದರಿಕೆಗಳ ಕುರಿತು ಮಾರ್ಗಸೂಚಿಗಳನ್ನು ಕೋರಿ ನಿರ್ಮಾಪಕ ಮತ್ತು ಮೂರನೇ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ನಡೆಸಿದ ಪೀಠವು, ಭಾವನೆಗಳಿಗೆ ನೋವುಂಟು ಮಾಡುವ ಹೇಳಿಕೆ ಎಂದು ಅಭಿವ್ಯಕ್ತಿ ಸ್ವಾತಂತ್ರ‍್ಯವನ್ನು ಮೊಟಕುಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಇದನ್ನೂ ಓದಿ: ಗುತ್ತಿಗೆ ಆಯ್ತು, ಈಗ ವಸತಿ ಯೋಜನೆಯಲ್ಲೂ ಮುಸ್ಲಿಮ್‌ ಮೀಸಲಾತಿ ಹೆಚ್ಚಳ!

    ಸ್ಟ್ಯಾಂಡ್-ಅಪ್ ಕಾಮಿಕ್ಸ್ ಅನ್ನು ನಿಲ್ಲಿಸಬೇಕೇ? ಕವಿಗಳು ಕವಿತೆಗಳನ್ನು ಹೇಳಬಾರದೇ? ಎಂದು ನ್ಯಾಯಾಲಯವು ಪ್ರಶ್ನಿಸಿತು. ಭಾರತದಂತಹ ವೈವಿಧ್ಯಮಯ ದೇಶದಲ್ಲಿ ಕೆಲವು ಗುಂಪುಗಳು ಏನು ಬಿಡುಗಡೆ ಮಾಡಬಹುದು ಅಥವಾ ಬಿಡುಗಡೆ ಮಾಡಬಾರದು ಎಂದು ನಿರ್ದೇಶಿಸಲು ಅನುಮತಿಸಬಾರದು ಎಂದು ಒತ್ತಿ ಹೇಳಿತು.

    ಬೆಂಕಿ ಹಚ್ಚುವವರಿಗೆ, ಬೆದರಿಕೆ ಹಾಕುವವರಿಗೆ `ರಾಜನಂತಹ ವಿನಾಯಿತಿ’ ನೀಡಲಾಗಿದೆ ಎಂದು ಅರ್ಜಿದಾರರು ವಾದಿಸಿದರು. ಚಲನಚಿತ್ರ ನಿರ್ಮಾಪಕರು ಮತ್ತು ಚಿತ್ರಮಂದಿರ ಮಾಲೀಕರನ್ನು ರಕ್ಷಿಸುವಲ್ಲಿ ವಿಫಲವಾಗಿದೆ ಎಂದರು. ಇತ್ತೀಚಿನ ಬೆಳವಣಿಗೆಯಿಂದ ನಿರ್ಮಾಪಕರು 30 ಕೋಟಿ ರೂ.ಗಳವರೆಗೆ ನಷ್ಟವಾಗಿದೆ ಇದನ್ನು ಭರಿಸಿಕೊಡಬೇಕು ಇಂತಹ ಸನ್ನಿವೇಶ ನಿಭಾಯಿಸಲು ಮಾರ್ಗಸೂಚಿ ನೀಡಬೇಕು ಎಂದರು. ಇದನ್ನೂ ಓದಿ: ಕರ್ನಾಟಕಕ್ಕೆ ಹೆಚ್‌ಡಿಕೆ, ಜೋಶಿ ಕೊಡುಗೆ ಏನು? ಚರ್ಚೆಗೆ ಬರಲಿ: ಪ್ರದೀಪ್ ಈಶ್ವರ್ ಪಂಥಾಹ್ವಾನ

    ವಾದ ಆಲಿಸಿದ ನ್ಯಾಯಲಯವು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿತು. ಹೋರಾಟಗಾರರು ಸಂಸ್ಥೆಗೆ ಮುತ್ತಿಗೆ ಹಾಕಿದರೆ, ನೀವು ಪೊಲೀಸ್ ಭದ್ರತೆ ಪಡೆಯಬೇಕು. ನೀವು ಒತ್ತಡಕ್ಕೆ ಒಳಗಾಗುವುದು ಸರಿಯಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಮಂಡಳಿ ಪರ ವಕೀಲರು ನಾವು ನಟನಿಗೆ ಕ್ಷಮೆ ಕೇಳುವಂತೆ ಪತ್ರ ಬರೆದಿಲ್ಲ ಎಂದು ಸ್ಪಷ್ಟಪಡಿಸಿದರು.

    ಈ ವೇಳೆ ನಿರ್ಮಾಪಕ ಮತ್ತು ಫಿಲ್ಮ್ ಚೇಂಬರ್ ನಡುವೆ ವಿವಾದ ಉದ್ಭವಿಸಿತು. ನಿರ್ಮಾಪಕರು ಸ್ವಯಂಪ್ರೇರಣೆಯಿಂದ ಚಿತ್ರ ಬಿಡುಗಡೆಯನ್ನು ತಡೆಹಿಡಿದಿದ್ದಾರೆ ಎಂದು ಕರ್ನಾಟಕ ಸರ್ಕಾರ ವಾದಿಸಿತು. ಚಿತ್ರ ಬಿಡುಗಡೆ ಮಾಡಿದರೆ ನಾವು ಅಗತ್ಯ ಭದ್ರತೆ ನೀಡಲು ಸಿದ್ಧವಿದ್ದೇವೆ. ಅಲ್ಲದೇ ರಾಜ್ಯವು ಈಗ ತನ್ನ ಅಫಿಡವಿಟ್‌ಗೆ ಬದ್ಧವಾಗಿದೆ ಎಂದು ಹೇಳಿತು. ಇದನ್ನೂ ಓದಿ: ‘666 ಆಪರೇಷನ್ ಡ್ರೀಮ್ ಥಿಯೇಟರ್’ನಲ್ಲಿ ಡಾಲಿ, ಶಿವಣ್ಣ

    ರಾಜ್ಯ ಸರ್ಕಾರದ ಅಫಿಡವಿಟ್‌ನಿಂದ ತೃಪ್ತವಾದ ನ್ಯಾಯಲಯವು ನಾವು ಯಾವುದೇ ಪರಿಹಾರಕ್ಕೆ ಸೂಚಿಸುವುದಿಲ್ಲ ಅಥವಾ ಮಾರ್ಗಸೂಚಿ ನೀಡುವುದಿಲ್ಲ. ಸರ್ಕಾರ ಇಂತಹ ಪರಿಸ್ಥಿತಿಗಳನ್ನು ಸಮರ್ಥವಾಗಿ ನಿಭಾಯಿಸಬೇಕು ಮತ್ತು ಚಿತ್ರ ಬಿಡುಗಡೆಗೆ ಅವಕಾಶ ನೀಡಿ, ಕಾನೂನು ಕೈಗೆ ತೆಗೆದುಕೊಳ್ಳುವವರ ವಿರುದ್ಧ ಕ್ರಿಮಿನಲ್ ಕಾನೂನು ಅಡಿಯಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ನ್ಯಾ. ಉಜ್ಜಲ್ ಭುಯಾನ್ ನೇತೃತ್ವದ ದ್ವಿ ಸದಸ್ಯ ಪೀಠ ಆದೇಶಿಸಿತು.

  • `ಥಗ್‌ಲೈಫ್’ ರಿಲೀಸ್‌ಗೆ ಸುಪ್ರೀಂ ಗ್ರೀನ್ ಸಿಗ್ನಲ್ – ಕನ್ನಡ ಪರ ಸಂಘಟನೆಯ ಪ್ರಮುಖರಿಗೆ ಪೊಲೀಸರಿಂದ ನೋಟಿಸ್

    `ಥಗ್‌ಲೈಫ್’ ರಿಲೀಸ್‌ಗೆ ಸುಪ್ರೀಂ ಗ್ರೀನ್ ಸಿಗ್ನಲ್ – ಕನ್ನಡ ಪರ ಸಂಘಟನೆಯ ಪ್ರಮುಖರಿಗೆ ಪೊಲೀಸರಿಂದ ನೋಟಿಸ್

    -ಚಿತ್ರಮಂದಿರದ ಬಳಿ ಪ್ರತಿಭಟನೆ ಮಾಡಿದರೆ ಕಾನೂನು ಕ್ರಮದ ಎಚ್ಚರಿಕೆ

    ಬೆಂಗಳೂರು: ಕಮಲ್ ಹಾಸನ್ (Kamal Haasan) ನಟನೆಯ `ಥಗ್‌ಲೈಫ್’ (Thug Life) ಸಿನಿಮಾ ರಿಲೀಸ್‌ಗೆ ಸುಪ್ರೀಂ (Supreme Court) ಗ್ರೀನ್ ಸಿಗ್ನಲ್ ನೀಡಿದ ಬೆನ್ನಲ್ಲೇ ಕನ್ನಡ ಪರ ಸಂಘಟನೆಯ ಪ್ರಮುಖರಿಗೆ ಪೊಲೀಸರು ನೋಟಿಸ್ ನೀಡಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.

    ಕರವೇ ನಾರಾಯಣ ಗೌಡ, ಪ್ರವೀಣ್ ಶೆಟ್ಟಿ ಸೇರಿದಂತೆ ಕನ್ನಡ ಪರ ಸಂಘಟನೆಯ ಪ್ರಮುಖರಿಗೆ ಮಂಗಳವಾರ ನೋಟಿಸ್ ಕೊಟ್ಟಿದ್ದಾರೆ. ಈ ಮೂಲಕ ಚಿತ್ರಬಿಡುಗಡೆಗೆ ತಡೆ ನೀಡುವ ನಿಟ್ಟಿನಲ್ಲಿ ಆದೇಶ ಮೀರಿ ಹೋರಾಟಕ್ಕೆ ಮುಂದಾದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.ಇದನ್ನೂ ಓದಿ: Mangaluru | ಹೆದ್ದಾರಿ ತಡೆಗೋಡೆಗೆ ಕಾರು ಡಿಕ್ಕಿ – ಇಬ್ಬರು ಯುವಕರು ಸಾವು

    ಪ್ರತಿಭಟನೆ ಮಾಡುವ ಹಾಗಿದ್ದರೆ ಕೋರ್ಟ್ ಆದೇಶದಂತೆ ನೀವು ನಿಗದಿತ ಸ್ಥಳದಲ್ಲಿ ಅಂದರೆ ಫ್ರೀಡಂ ಪಾರ್ಕ್‌ನಲ್ಲಿ ಮಾತ್ರ ಪ್ರತಿಭಟನೆ ಮಾಡಬೇಕು. ಒಂದು ವೇಳೆ ಥಗ್‌ಲೈಫ್ ಸಿನಿಮಾ ಬಿಡುಗಡೆ ಆಗಿರುವ ಚಿತ್ರಮಂದಿರದ ಬಳಿ ಹೋಗಿ ಪ್ರತಿಭಟನೆ ಮಾಡಿದರೆ, ಕಾನೂನು ಕ್ರಮ ಕೈಗೊಳ್ಳುವುದಾಗಿ ನೋಟಿಸ್‌ನಲ್ಲಿ ಉಲ್ಲೇಖಿಸಿದ್ದಾರೆ.

    ಪೊಲೀಸರ ನೋಟಿಸ್ ಬೆನ್ನಲ್ಲೇ ಇಲಾಖೆ ವಿರುದ್ಧ ಕರವೇ ಪ್ರವೀಣ್ ಶೆಟ್ಟಿ ಆಕ್ರೋಶ ಹೊರ ಹಾಕಿದ್ದಾರೆ. `ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಕನ್ನಡ ಪರ ಹೋರಾಟಗಾರರು ಉಗ್ರಾಗಾಮಿಗಳೋ, ದೇಶದ್ರೋಹಿಗಳೋ ಅಲ್ಲ. ಕನ್ನಡದ ವಿಚಾರಗಳಿಗಾಗಿ ಎದೆ ತಟ್ಟಿ ನಿಂತಿರುವವರು. ಸಿನಿಮಾ ಬಿಡುಗಡೆ ವಿಚಾರವಾಗಿ, ನಾವು ಇನ್ನೂ ಹೋರಾಟಕ್ಕೆ ನಿರ್ಧಾರವನ್ನೇ ಮಾಡಿಲ್ಲ. ಆಗಲೇ ನೋಟಿಸ್ ಕೊಟ್ಟಿದ್ದಾರೆ ಎಂದರು.

    ಸರ್ಕಾರವೇ ನಟನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತ್ತು. ಆದರೇ ಈಗ ಹೀಗ್ಯಾಕೆ ಮಾಡಿದ್ದಾರೋ ಗೊತ್ತಿಲ್ಲ. ರಾತ್ರಿಯೇ ಮನೆ ಬಳಿ ಬಂದು ನೋಟಿಸ್ ಅಂಟಿಸಿ, ಪೊಲೀಸರು ನೋಟಿಸ್ ಕೊಟ್ಟಿದ್ದಾರೆ. ಜನ ಈಗಾಗಲೇ ಸಿನಿಮಾ ತಿರಸ್ಕಾರ ಮಾಡಿದ್ದಾರೆ. ಆದರೂ ಹುಂಬತನಕ್ಕೆ ಬಿದ್ದು, ಸಿನಿಮಾ ರಿಲೀಸ್‌ಗೆ ಮುಂದಾಗಿದ್ದಾರೆ. ಥಿಯೇಟರ್‌ಗೂ ಕೂಡ ನಮ್ಮ ಜನ ಹೋಗಲ್ಲ ಎನ್ನುವ ನಂಬಿಕೆ ಇದೆ. ವಾಣಿಜ್ಯ ಮಂಡಳಿಯವರು ಕೂಡ ಥಿಯೇಟರ್‌ನವರು ಮುಂದೆ ಬರುತ್ತಿಲ್ಲ ಅಂತ ಹೇಳಿದ್ದಾರೆ. ಹಾಗಾಗಿ ನಮ್ಮ ಜನ ಕೂಡ ತಿರಸ್ಕಾರ ಮಾಡಲಿದ್ದಾರೆ ಎಂದರು.

    ಬೆಂಗಳೂರಿಗೆ (Bengaluru) ಥಗ್‌ಲೈಫ್ ಸಿನಿಮಾ ಪ್ರಮೋಷನ್‌ಗಾಗಿ ಬಂದಿದ್ದ ನಟ ಕಮಲ್ ಹಾಸನ್ `ತಮಿಳಿನಿಂದಲೇ ಕನ್ನಡ ಹುಟ್ಟಿದ್ದು’ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದರಿಂದ ಕನ್ನಡಿಗರಲ್ಲಿ ಆಕ್ರೋಶದ ಕಟ್ಟೆಯೊಡೆದಿತ್ತು. ಬಳಿಕ ಹೈಕೋರ್ಟ್ ಮೆಟ್ಟಿಲೇರಿದ್ದ ಕಮಲ್‌ಗೆ, ಥಗ್‌ಲೈಫ್ ರಿಲೀಸ್‌ಗೆ ಒಂದು ವಾರಗಳ ಕಾಲ ತಡೆ ನೀಡಿ ಆದೇಶ ಹೊರಡಿಸಿ ಶಾಕ್ ನೀಡಿತ್ತು. ಬಳಿಕ ಆದೇಶ ಪ್ರಶ್ನಿಸಿ ನಟ ಸುಪ್ರೀಂ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ಕೋರ್ಟ್ ಸಿನಿಮಾ ಬಿಡುಗಡೆಗೆ ಅನುಮತಿಸಿ ಆದೇಶ ಹೊರಡಿಸಿದೆ.ಇದನ್ನೂ ಓದಿ: ಶುಭಾಂಶು ಶುಕ್ಲಾ ಬಾಹ್ಯಾಕಾಶ ಯಾತ್ರೆ ಮತ್ತೆ ವಿಳಂಬ – ಜ್ವೆಜ್ಡಾ ಸೇವಾ ಮಾಡ್ಯೂಲ್‌ ದುರಸ್ತಿ ಬಳಿಕ ಮಿಷನ್ ಶುರು

  • ಇಷ್ಟ ಇಲ್ಲದಿದ್ರೆ ಸಿನಿಮಾ ನೋಡಬೇಡಿ: ಕರ್ನಾಟಕದಲ್ಲಿ ‘ಥಗ್‌ ಲೈಫ್‌’ ಸಿನಿಮಾ ರಿಲೀಸ್‌ಗೆ ಸುಪ್ರೀಂ ಸೂಚನೆ

    ಇಷ್ಟ ಇಲ್ಲದಿದ್ರೆ ಸಿನಿಮಾ ನೋಡಬೇಡಿ: ಕರ್ನಾಟಕದಲ್ಲಿ ‘ಥಗ್‌ ಲೈಫ್‌’ ಸಿನಿಮಾ ರಿಲೀಸ್‌ಗೆ ಸುಪ್ರೀಂ ಸೂಚನೆ

    ನವದೆಹಲಿ: ನಟ ಕಮಲ್ ಹಾಸನ್ (Kamal Haasan) ಅಭಿನಯದ ‌’ಥಗ್ ಲೈಫ್’ (Thug Life) ಚಿತ್ರವನ್ನು ಕರ್ನಾಟಕದಲ್ಲಿ ಪ್ರದರ್ಶಿಸಲು ಅವಕಾಶ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಗುಂಪು ಬೆದರಿಕೆಗಳಿಗೆ ಕಾನೂನಿನ ನಿಯಮವನ್ನು ಒತ್ತೆಯಾಗಿ ಇಡಲು ಸಾಧ್ಯವಿಲ್ಲ. ಚಿತ್ರಮಂದಿರಗಳಲ್ಲಿ ಏನು ಪ್ರದರ್ಶಿಸಬೇಕೆಂದು ‘ಗೂಂಡಾಗಳ ಗುಂಪುಗಳು’ ನಿರ್ಧರಿಸಲು ಅವಕಾಶ ನೀಡಲಾಗುವುದಿಲ್ಲ ಎಂದು ಕೋರ್ಟ್ ಎಚ್ಚರಿಕೆ ನೀಡಿದೆ.

    ಕನ್ನಡ ತಮಿಳಿನಿಂದ ಹುಟ್ಟಿತು ಎಂಬ ಕಮಲ್ ಹಾಸನ್ ಅವರ ಹೇಳಿಕೆ ಇತ್ತೀಚೆಗೆ ವ್ಯಾಪಕ ವಿರೋಧಕ್ಕೆ ಕಾರಣವಾಗಿತ್ತು.‌ ಅವರ ಚಿತ್ರವನ್ನು ಬಹಿಷ್ಕರಿಸುವಂತೆ ಕರೆಗಳು ಬಂದಿದ್ದವು. ಚಿತ್ರದ ನಿರ್ಮಾಪಕರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಹೈಕೋರ್ಟ್‌, ಸಮಸ್ಯೆಯನ್ನು ಪರಿಹರಿಸಲು ನಟ ಕ್ಷಮೆಯಾಚಿಸಬೇಕೆಂಬ ಸಲಹೆ ನೀಡಿತ್ತು.

    ಈ ಸಲಹೆ ವಿರುದ್ಧ ನಿರ್ಮಾಪಕರು ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ನ್ಯಾ. ಉಜ್ಜಲ್ ಭುಯಾನ್ ಮತ್ತು ನ್ಯಾಯಮೂರ್ತಿ ಮನಮೋಹನ್ ಅವರಿದ್ದ ಪೀಠ ಹೈಕೋರ್ಟ್ ಸಲಹೆಯನ್ನು ಪ್ರಶ್ನಿಸಿತು. ಸಂಘಟನೆಗಳ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರವನ್ನು ಟೀಕಿಸಿತು.

    ಕಾನೂನಿನ ನಿಯಮವು ಮೇಲುಗೈ ಸಾಧಿಸಬೇಕು ಎಂದ ಸುಪ್ರೀಂ ಕೋರ್ಟ್ (Supreme Court), ನಾವು ಇಂತಹ ಬೆಳವಣಿಗೆ ಅನುಮತಿಸಲು ಸಾಧ್ಯವಿಲ್ಲ. ಕಾನೂನಿನ ನಿಯಮವು ಯಾವುದೇ ವ್ಯಕ್ತಿಗೆ ಚಲನಚಿತ್ರ ಬಿಡುಗಡೆ ಮಾಡಲು ಅವಕಾಶ ನೀಡಬೇಕೆಂದು ಹೇಳುತ್ತದೆ. ಚಿತ್ರಮಂದಿರಗಳು ಸುಟ್ಟುಹೋಗುತ್ತವೆ ಎಂಬ ಭಯದಿಂದ ಅದನ್ನು ತಡೆಯಲು ಸಾಧ್ಯವಿಲ್ಲ. ಜನರು ಬಂದು ಚಿತ್ರವನ್ನು ನೋಡಬೇಕು ಎಂದು ನಾವು ಹೇಳುತ್ತಿಲ್ಲ. ಆದರೆ ಚಿತ್ರವನ್ನು ಬಿಡುಗಡೆ ಮಾಡಬೇಕು ಎಂದು ಪೀಠ ಹೇಳಿತು.

    ಒಬ್ಬರು ವಿಭಿನ್ನ ಅಭಿಪ್ರಾಯ ಹೊಂದಿದ್ದಾರೆ ಎಂದ ಮಾತ್ರಕ್ಕೆ ಆ ಸಿನಿಮಾವನ್ನು ನಿಷೇಧಿಸಬೇಕು ಎಂದರ್ಥವಲ್ಲ. ಸಿಬಿಎಫ್‌ಸಿ ಪ್ರಮಾಣಪತ್ರ ಹೊಂದಿರುವ ಯಾವುದೇ ಸಿನಿಮಾ ಬಿಡುಗಡೆ ಮಾಡಬೇಕು ಎಂಬುದು ಕಾನೂನಿನ ನಿಯಮವಿದೆ. ಕನ್ನಡ ಭಾಷೆಯ ಬಗ್ಗೆ ಕಮಲ್ ಹಾಸನ್ ಹೇಳಿಕೆ ನೀಡಿದ್ದಾರೆ ಎಂಬ ಕಾರಣಕ್ಕೆ ಚಿತ್ರ ಬಿಡುಗಡೆಯನ್ನು ತಡೆಯಲು ಜನಸಮೂಹಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ. ಈ ವ್ಯವಸ್ಥೆಯಲ್ಲಿ ಏನೋ ತಪ್ಪಿದೆ. ಒಬ್ಬ ವ್ಯಕ್ತಿ ಹೇಳಿಕೆ ನೀಡುತ್ತಾನೆ ಮತ್ತು ಜನರು ಅದನ್ನು ಸುವಾರ್ತೆಯ ಸತ್ಯವೆಂದು ಭಾವಿಸುತ್ತಾರೆ. ಚರ್ಚೆ ನಡೆಯಲಿ! ಬೆಂಗಳೂರಿನ ಪ್ರಬುದ್ಧ ಜನರು ಕಮಲ‌ ಹಾಸನ್ ಏಕೆ ತಪ್ಪು, ಅವರು ಹೇಳುವುದು ಅಸಂಬದ್ಧ ಎಂದು ಹೇಳಲಿ.

    ಕರ್ನಾಟಕ ಹೈಕೋರ್ಟ್‌ನಿಂದ ಸುಪ್ರೀಂ ಕೋರ್ಟ್‌ಗೆ ವರ್ಗಾಯಿಸಲು ನಿರ್ದೇಶನ ನೀಡಿ, ಬುಧವಾರದೊಳಗೆ ಪ್ರತಿ ಅಫಿಡವಿಟ್ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಕೋರ್ಟ್ ಸೂಚಿಸಿತು. ಈ ವಿಷಯವನ್ನು ಗುರುವಾರ ವಿಚಾರಣೆಗೆ ತೆಗೆದುಕೊಳ್ಳುವುದಾಗಿ ಹೇಳಿ ಸಿನಿಮಾ‌ ಬಿಡುಗಡೆ ಮಾಡಬೇಕು ಎಂದು ಹೇಳಿದೆ.

  • ಖಡ್ಗ ಕೊಡಲು ಬಂದ ಅಭಿಮಾನಿ ಮೇಲೆ ಕಮಲ್‌ ಹಾಸನ್‌ ಗರಂ

    ಖಡ್ಗ ಕೊಡಲು ಬಂದ ಅಭಿಮಾನಿ ಮೇಲೆ ಕಮಲ್‌ ಹಾಸನ್‌ ಗರಂ

    ನಟ ಕಮಲ್‌ ಹಾಸನ್‌ (Kamal Haasan) ಅಭಿನಂದಿಸಲು ಬಂದ ಅಭಿಮಾನಿ ಮೇಲೆ ಗರಂ ಆದ ಪ್ರಸಂಗ ನಡೆದಿದೆ.

    ರಾಜ್ಯಸಭೆಗೆ ನಾಮಕರಣಗೊಂಡ ಹಿನ್ನೆಲೆ ಚೆನ್ನೈನಲ್ಲಿ (Chennai) ಎಂಎನ್‍ಎಂ ಪಕ್ಷದ ಕಾರ್ಯಕರ್ತರ ಸಭೆ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಕಮಲ್‌ ಭಾಗಿಯಾಗಿದ್ದರು. ಈ ವೇಳೆ ಅಭಿಮಾನಿಯೊಬ್ಬ ವೇದಿಕೆ ಮೇಲೆ ಖಡ್ಗದ ಗಿಫ್ಟ್ ಕೊಡಲು ಮುಂದಾಗಿದ್ದಾರೆ. ಇದು ಕಮಲ್‍ಗೆ ಇಷ್ಟ ಆಗಲಿಲ್ಲ. ಖಡ್ಗವನ್ನು ಹಿಡಿಯಲು ನಿರಾಕರಿಸಿದರು. ಇದನ್ನೂ ಓದಿ: ನಟ ಸೂರ್ಯ ಜೊತೆಗೆ ಬಿಗ್‌ ಬಜೆಟ್‌ ಸಿನಿಮಾಗೆ ಕಮಲ್‌ ಪ್ಲ್ಯಾನ್‌

    ಎಚ್ಚರಿಕೆ ಕೊಟ್ಟರೂ ಅಭಿಮಾನಿ ಕೇಳಲಿಲ್ಲ. ಬಲವಂತವಾಗಿ ಖಡ್ಗ ನೀಡಲು ಮುಂದಾಗಿದ್ದಾನೆ. ಆಗ ಕಮಲ್‍ಗೆ ಕೋಪ ಬಂದು, ಗರಂ ಆಗಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಇತ್ತೀಚೆಗೆ ಕಮಲ್‌ ಹಾಸನ್‌ ಕನ್ನಡ ಭಾಷೆಯ ಬಗ್ಗೆ ನೀಡಿದ್ದ ಹೇಳಿಕೆಗೆ, ಕರ್ನಾಟಕದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದೇ ಕಾರಣಕ್ಕೆ ಕರ್ನಾಟಕದಲ್ಲಿ ಕಮಲ್‌ ಅಭಿನಯದ ಥಗ್‌ಲೈಫ್‌ ಚಿತ್ರ ರಿಲೀಸ್‌ಗೆ ಅವಕಾಶ ನಿರಾಕರಿಸಲಾಗಿತ್ತು. ಇದನ್ನು ಪ್ರಶ್ನಿಸಿ ಚಿತ್ರತಂಡ ಹೈಕೋರ್ಟ್‌ ಮೊರೆ ಹೋಗಿತ್ತು. ವಿಚಾರಣೆ ವೇಳೆ ಕನ್ನಡಿಗರ ಕ್ಷಮೆ ಕೇಳದ ಕಮಲ್‌ಗೆ ಹೈಕೋರ್ಟ್‌ ಚಾಟಿ ಬೀಸಿತ್ತು. ಬಳಿಕ ಥಗ್‌ಲೈಫ್ (Thug Life) ಬಿಡುಗಡೆ ಕುರಿತ ವಿಚಾರಣೆಯನ್ನು ಹೈಕೋರ್ಟ್ ಜೂ.20ಕ್ಕೆ ಮುಂದೂಡಿತ್ತು.

    ಶುಕ್ರವಾರ ವಿಚಾರಣೆ ನಡೆಸಿದ್ದ ನ್ಯಾ.ನಾಗಪ್ರಸನ್ನ ಅವರು, ಕಮಲ್ ಹಾಸನ್‌ಗೆ ಕ್ಷಮೆಯಾಚನೆ ಮತ್ತು ವಿವಾದ ಇತ್ಯರ್ಥ ಮಾಡಿಕೊಳ್ಳಲು ಒಂದು ವಾರ ಅವಕಾಶ ಕೋರಲಾಗಿತ್ತು. ಇನ್ನೂ ಕಮಲ್ ಹಾಸನ್ ಕ್ಷಮೆ ಕೇಳಲಿಲ್ವಾ? ಸುಪ್ರೀಂ ಕೋರ್ಟ್ ವಿಚಾರಣೆ ಏನಾಯ್ತು? ಎಂದು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ ಕಮಲ್ ಪರ ವಕೀಲರು ಕ್ಷಮೆ ಕೇಳಿಲ್ಲ, ಸುಪ್ರೀಂಕೋರ್ಟ್ ಕರ್ನಾಟಕ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ ಎಂದು ಉತ್ತರಿಸಿದ್ದರು. ಇದನ್ನೂ ಓದಿ: ಕಮಲ್ `ಕನ್ನಡ’ ವಿವಾದ – ಜೂ.20ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್

  • ಕಮಲ್ `ಕನ್ನಡ’ ವಿವಾದ – ಜೂ.20ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್

    ಕಮಲ್ `ಕನ್ನಡ’ ವಿವಾದ – ಜೂ.20ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್

    ಬೆಂಗಳೂರು: ತಮಿಳಿನಿಂದಲೇ ಕನ್ನಡ ಹುಟ್ಟಿದೆ ಎಂಬ ಕಮಲ್ ಹಾಸನ್ (Kamal Haasan) ಹೇಳಿಕೆ ಹಾಗೂ ಥಗ್‌ಲೈಫ್ (ThugLife) ಬಿಡುಗಡೆ ಕುರಿತ ವಿಚಾರಣೆಯನ್ನು ಹೈಕೋರ್ಟ್ ಜೂ.20ಕ್ಕೆ ಮುಂದೂಡಿದೆ.

    ಶುಕ್ರವಾರ ವಿಚಾರಣೆ ನಡೆಸಿದ ನ್ಯಾ.ನಾಗಪ್ರಸನ್ನ ಅವರು, ಕಮಲ್ ಹಾಸನ್‌ಗೆ ಕ್ಷಮೆಯಾಚನೆ ಮತ್ತು ವಿವಾದ ಇತ್ಯರ್ಥ ಮಾಡಿಕೊಳ್ಳಲು ಒಂದು ವಾರ ಅವಕಾಶ ಕೋರಲಾಗಿತ್ತು. ಇನ್ನೂ ಕಮಲ್ ಹಾಸನ್ ಕ್ಷಮೆ ಕೇಳಲಿಲ್ವಾ? ಸುಪ್ರೀಂ ಕೋರ್ಟ್ ವಿಚಾರಣೆ ಏನಾಯ್ತು? ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಕಮಲ್ ಪರ ವಕೀಲರು ಕ್ಷಮೆ ಕೇಳಿಲ್ಲ, ಸುಪ್ರೀಂಕೋರ್ಟ್ ಕರ್ನಾಟಕ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ ಅಂದರು.ಇದನ್ನೂ ಓದಿ: ವಿಮಾನ ದುರಂತದಲ್ಲಿ ಸಾವನ್ನಪ್ಪಿದ ಡಾ.ಪ್ರತೀಕ್ ಜೋಶಿ ಬೆಳಗಾವಿಯ ವಿದ್ಯಾರ್ಥಿ – ಕಣ್ಣೀರಿಟ್ಟ ಸಹಪಾಠಿಗಳು

    ಇದರ ನಡುವೆ ಕೋರ್ಟ್‌ಗೆ ತಮ್ಮ ವಾದ ಆಲಿಸುವಂತೆ ಕನ್ನಡ ಸಾಹಿತ್ಯ ಪರಿಷತ್ ಅರ್ಜಿ ಸಲ್ಲಿಸಿತ್ತು. ಈ ಕುರಿತು ಕಸಾಪ ಪರ ವಾದ ಮಂಡಿಸಿದ ಹಿರಿಯ ವಕೀಲ ಎಸ್.ಬಸವರಾಜ್ ಅವರು, ಕಮಲ ಹಾಸನ್ ಸ್ಟುಪಿಡ್ ಸ್ಟೇಟ್‌ಮೆಂಟ್ ನೀಡಿದ್ದಾರೆ. ಕರ್ನಾಟಕ, ಕನ್ನಡ ಪದ ಪುರಾಣಗಳಲ್ಲೂ ಬಳಕೆಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಇದೇ ವೇಳೆ ಕಮಲ್ ಪರ ವಕೀಲರು, ಕಸಾಪ ಅರ್ಜಿಗೆ ಆಕ್ಷೇಪಣೆ ಸಲ್ಲಿಸುತ್ತೇವೆ. ಥಗ್‌ಲೈಫ್ ಸಿನಿಮಾ ಬಿಡುಗಡೆ ಮಾಡುವುದಿಲ್ಲ ಎಂದು ವಕೀಲರು ಹೇಳಿದರು.

    ಕೊನೆಗೆ ನ್ಯಾ.ನಾಗಪ್ರಸನ್ನ ಅವರು, ವಿವೇಚನೆಯೂ ಶೌರ್ಯದ ಅತ್ಯುತ್ತಮ ಭಾಗ. ವಿವೇಚನೆ ಬಳಸಿ ಎಂದು ಕಮಲ್ ವರ ವಕೀಲರಿಗೆ ತಿಳಿಸಿ ವಿಚಾರಣೆಯನ್ನು ಜೂನ್ 20ಕ್ಕೆ ವಿಚಾರಣೆ ಮುಂದೂಡಿದ್ದಾರೆ.ಇದನ್ನೂ ಓದಿ:ದೇಶದ ಯಾವ್ಯಾವ ವಿಮಾನ ನಿಲ್ದಾಣಗಳು ಅನ್‌ಸೇಫ್?

  • ನಟ ಸೂರ್ಯ ಜೊತೆಗೆ ಬಿಗ್‌ ಬಜೆಟ್‌ ಸಿನಿಮಾಗೆ ಕಮಲ್‌ ಪ್ಲ್ಯಾನ್‌

    ನಟ ಸೂರ್ಯ ಜೊತೆಗೆ ಬಿಗ್‌ ಬಜೆಟ್‌ ಸಿನಿಮಾಗೆ ಕಮಲ್‌ ಪ್ಲ್ಯಾನ್‌

    ನಾಯಕನಲ್ಲದೇ ನಿರ್ಮಾಪಕನಾಗಿಯೂ ಕೆಲಸ ಮಾಡ್ತಿರೋ ಕಮಲ್‌ ಹಾಸನ್‌ (Kamal Haasan) ಈಗ ನಟ ರಾಕ್ಷಸ ಸೂರ್ಯ (Surya) ಜೊತೆಗೆ ಬಿಗ್‌ ಬಜೆಟ್‌ ಸಿನಿಮಾವೊಂದಕ್ಕೆ ಪ್ಲ್ಯಾನ್‌ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

    ಯೆಸ್‌… ಕಳೆದ ವರ್ಷ ಕಮಲ್‌ ತಮ್ಮ ರಾಜ್‌ಕಮಲ್ ಫಿಲ್ಮ್ ಇಂಟರ್‌ನ್ಯಾಷನಲ್ ಬ್ಯಾನರ್ ಅಡಿ ʻಅಮರನ್‌ʼ (Amaran) ಚಿತ್ರ ನಿರ್ಮಿಸಿದ್ದರು. ಶಿವಕಾರ್ತಿಕೇಯನ್‌, ಸಾಯಿ ಪಲ್ಲವಿ ನಟನೆಯ ಹಾಗೂ ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶನದ ಈ ಚಿತ್ರ ಸಕ್ಸಸ್‌ ಕಂಡಿತ್ತು. ಆ ಬಳಿಕ ಇದೇ ಬ್ಯಾನರ್‌ ಅಡಿಯಲ್ಲಿ ಮದ್ರಾಸ್ ಟಾಕೀಸ್ ನಿರ್ಮಿಸಿದ ಥಗ್‌ ಲೈಫ್‌ ಸಿನಿಮಾ ಇತ್ತೀಚೆಗಷ್ಟೇ ತೆರೆ ಕಂಡಿತ್ತು. ಆದ್ರೆ ಕರ್ನಾಟಕದಲ್ಲಿ ಈ ಚಿತ್ರಕ್ಕೆ ನಿಷೇಧ ಹೇರಿರೋದ್ರಿಂದ ಈ ಚಿತ್ರದ ಗಳಿಕೆಯೂ ಕುಸಿದಿದೆ. ಈ ಬೆನ್ನಲ್ಲೇ ಕಮಲ್‌ ಪ್ರಸಿದ್ಧ ಸ್ಟಂಟ್‌ ಮಾಸ್ಟರ್‌ ಅನ್ಬರಿವು ಚಿತ್ರದಲ್ಲಿ ನಾಯಕ ನಟನಾಗಿ ನಟಿಸಲು ತಯಾರಿ ನಡೆಸುತ್ತಿದ್ದಾರೆ. ಇದರ ನಡುವೆಯೇ ಮತ್ತೊಂದು ಬಿಗ್‌ ಬಜೆಟ್‌ ಸಿನಿಮಾ ನಿರ್ಮಾಣಕ್ಕೆ ಪ್ಲ್ಯಾನ್‌ ಮಾಡಿಕೊಂಡಿದ್ದಾರೆ ಅನ್ನೋದು ಗೊತ್ತಾಗಿದೆ. ಇದನ್ನೂ ಓದಿ: ಕಮಲ್‌ ಹಾಸನ್‌ಗೆ ಮತ್ತೆ ಶಾಕ್‌ – ತುರ್ತು ವಿಚಾರಣೆ ನಡೆಸಲ್ಲ ಎಂದ ಸುಪ್ರೀಂ ಕೋರ್ಟ್‌

    ಸದ್ಯ ಚಿತ್ರಕ್ಕೆ ಇನ್ನೂ ಟೈಟಲ್‌ ಫಿಕ್ಸ್‌ ಆಗಿಲ್ಲ, ಆದ್ರೆ ಯು. ಅರುಣ್‌ಕುಮಾರ್‌ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ಅರುಣ್‌ ಕುಮಾರ್‌ ಈಗಾಗಲೇ ನಿರ್ದೇಶಿಸಿರುವ ಸಿದ್ಧಾರ್ಥ್‌ ಅಭಿನಯದ ʻಚಿತ್ತʼ, ವಿಕ್ರಮ್‌ ನಟನೆಯ ʻವೀರ ಧೀರ ಸೂರನ್‌ʼ ಚಿತ್ರಗಳು ಬ್ಲಾಕ್‌ ಬಸ್ಟರ್‌ ಹಿಟ್‌ ಆಗಿವೆ. ಇದೀಗ ಕಮಲ್‌ ನಿರ್ಮಾಣ ಸಂಸ್ಥೆಯ ಚಿತ್ರಕ್ಕೆ ಆಕ್ಷನ್‌ ಕಟ್ ಹೇಳಲು ಸಜ್ಜಾಗುತ್ತಿದ್ದಾರೆ. ಈ ಚಿತ್ರಕ್ಕೆ ನಟ ಸೂರ್ಯ ನಾಯಕನಾಗಿ ನಟಿಸಲಿದ್ದು, ಬಿಗ್‌ ಬಜೆಟ್‌ ಸಿನಿಮಾ ಇದಾಗಿರಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಬಾಲಯ್ಯ ಜನ್ಮದಿನಕ್ಕೆ `ಅಖಂಡ-2′ ಟೀಸರ್ ರಿಲೀಸ್ – ಮಾಸ್ ಅವತಾರದಲ್ಲಿ ಅಬ್ಬರಿಸಿದ ನಂದಮೂರಿ ಬಾಲಕೃಷ್ಣ

    2022ರಲ್ಲಿ ತೆರೆಕಂಡ ʻವಿಕ್ರಮ್‌ʼ ಸಿನಿಮಾ ಭಾರೀ ಹಿಟ್‌ ಆಗಿದ್ದು, ಇದರ ಭಾಗ-2 ಪ್ರಕ್ರಿಯೆ ನಡೆಯುತ್ತಿದೆ. ಈ ಸಿನಿಮಾದಲ್ಲಿ ಕಮಲ್‌ ನಾಯಕನಾಗಿ ನಟಿಸಿದ್ದು, ಸೂರ್ಯ ವಿಲನ್‌ ಆಗಿ ಕಾಣಿಸಿಕೊಂಡಿದ್ದರು. ಅಲ್ಲದೇ ಭಾಗ-2ನಲ್ಲಿ ಸೂರ್ಯ ಅವರ ಪಾತ್ರದ ಬಗ್ಗೆ ಭಾರೀ ಕುತೂಹಲ ಕೆರಳಿಸಿದೆ. ಇದನ್ನೂ ಓದಿ: ಹೊಸ ಚಿತ್ರ ಘೋಷಿಸಿದ ರವಿ ಮೋಹನ್ – `ಬ್ರೋಕೋಡ್’ ಮೂಲಕ ನಿರ್ಮಾಣ ರಂಗಕ್ಕಿಳಿದ ತಮಿಳು ನಟ