Tag: kamakhya temple

  • ಇತ್ತ `ಡಿ’ ಫ್ಯಾನ್ಸ್ ಜಟಾಪಟಿ – ಅತ್ತ ಕಾಮಾಕ್ಯದಲ್ಲಿ ದರ್ಶನ್

    ಇತ್ತ `ಡಿ’ ಫ್ಯಾನ್ಸ್ ಜಟಾಪಟಿ – ಅತ್ತ ಕಾಮಾಕ್ಯದಲ್ಲಿ ದರ್ಶನ್

    ಟ ದರ್ಶನ್ (Darshan) ಪ್ರಸಿದ್ಧ ಕಾಮಾಕ್ಯ ದೇವಿಯ ಶಕ್ತಿಪೀಠಕ್ಕೆ ತೆರಳಿದ್ದಾರೆ. ಅಸ್ಸಾಂನ ಗುವಾಹಟಿಯಲ್ಲಿರುವ ಸುಪ್ರಸಿದ್ಧ ಕಾಮಾಕ್ಯ ದೇವಿ ದೇವಸ್ಥಾನಕ್ಕೆ (Kamakhya Devi temple) ದರ್ಶನ್, ಪತ್ನಿ ವಿಜಯಲಕ್ಷ್ಮಿ ಜೊತೆ ತೆರಳಿದ್ದಾರೆ. ದೇವಿಗೆ ಹರಕೆ ತೀರಿಸಿದ್ದಾರೆ.

    ಸಂಕಷ್ಟದಲ್ಲಿರುವ ದರ್ಶನ್ ದೇವಿಯ ಮೊರೆ ಹೋಗಿದ್ದಾರೆ. ಶೀಘ್ರದಲ್ಲೇ ದರ್ಶನ್‌ಗೆ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಕುರಿತು ಆದೇಶ ಪ್ರಕಟವಾಗಲಿದ್ದು ದರ್ಶನ್‌ಗೆ ಇದು ಸಂದಿಗ್ಧ ಸ್ಥಿತಿ. ದರ್ಶನ್ ಜೈಲಲ್ಲಿದ್ದಾಗ ವಿಜಯಲಕ್ಷ್ಮಿ ಕಾಮಾಕ್ಯ ದೇವಿ ದೇವಸ್ಥಾನಕ್ಕೆ ತೆರಳಿ ಪೂಜೆ ಮಾಡಿಸಿಕೊಂಡು ಬಂದಿದ್ದರು. ಇದೀಗ ಪತಿಯೊಂದಿಗೆ ತೆರಳಿ ಶಕ್ತಿದೇವಿಗೆ ಮತ್ತೆ ಮೊರೆಹೋಗಿದ್ದಾರೆ. ಅಭಿಮಾನಿಗಳ ಜೊತೆ ಫೋಟೋ ತೆಗೆಸಿಕೊಳ್ಳುವ ವೀಡಿಯೋ ರಿವೀಲ್ ಆಗಿದೆ. ಇದನ್ನೂ ಓದಿ: ಶಿರೂರು ಭೂಕುಸಿತ ದುರಂತ; ಮಲೆಯಾಳಂನಲ್ಲಿ ಸಿನಿಮಾ ಸಟ್ಟೇರಲು ಸಿದ್ಧತೆ

    ಇತ್ತ ದರ್ಶನ್ ಫ್ಯಾನ್ಸ್ ವಿರುದ್ಧ ನಟಿ ರಮ್ಯಾ ನಟ ಪ್ರಥಮ್ ಸೇರಿ ಹಲವರು ಪೊಲೀಸರಿಗೆ ದೂರು ನೀಡಿದ್ದಾರೆ. ದರ್ಶನ್ ಅವರಿಗೆ ಬುದ್ಧಿ ಹೇಳಬೇಕು ಎಂದು ಆಗ್ರಹಿಸುತ್ತಿದ್ದಾರೆ. ಆದರೆ ದರ್ಶನ್ ಇದೀಗ ಕಾಮಾಕ್ಯ ದೇವಿ ದೇವಸ್ಥಾನದಲ್ಲಿ ಪ್ರತ್ಯಕ್ಷವಾಗಿದ್ದಾರೆ. ಇದನ್ನೂ ಓದಿ: 11 ದಿನದಲ್ಲಿ 250 ಕೋಟಿ ರೂ. ದಾಟಿದ `ಸೈಯಾರಾ’ ಕಲೆಕ್ಷನ್

    ಶೀಘ್ರದಲ್ಲೇ ಸುಪ್ರೀಂ ಕೋರ್ಟ್‌ನಿಂದ ಆದೇಶ ಹೊರಬೀಳಲಿದ್ದು ದರ್ಶನ್‌ಗೆ ಭಾರಿ ಆತಂಕ ಇರುವಂತೆ ಕಾಣುತ್ತಿದೆ. ಈ ಹೊತ್ತಲ್ಲಿ ಕಾಮಾಕ್ಯದೇವಿಯ ದರ್ಶನ ಪಡೆದಿದ್ದಾರೆ ನಟ ದರ್ಶನ್. ಮರಳಿ ಬಂದ ಬಳಿಕ ಅಭಿಮಾನಿಗಳಿಗೆ ಬುದ್ಧಿ ಹೇಳ್ತಾರಾ? ಅಥವಾ ಸುಮ್ಮನಾಗ್ತಾರಾ ಅನ್ನೋ ಪ್ರಶ್ನೆ ಎದುರಾಗಿದೆ.

  • ಕುಟುಂಬ ಸಮೇತ ಅಸ್ಸಾಂನ ಕಾಮಾಕ್ಯ ದೇವಿಯ ಹರಕೆ ತೀರಿಸಿದ ದರ್ಶನ್

    ಕುಟುಂಬ ಸಮೇತ ಅಸ್ಸಾಂನ ಕಾಮಾಕ್ಯ ದೇವಿಯ ಹರಕೆ ತೀರಿಸಿದ ದರ್ಶನ್

    ಸ್ಸಾಂನ ಗುವಾಹಟಿಯಲ್ಲಿರುವ ಪ್ರಸಿದ್ಧ ಕಾಮಾಕ್ಯ ದೇವಿ ದೇವಸ್ಥಾನಕ್ಕೆ ನಟ ದರ್ಶನ್ ಕುಟುಂಬ ಸಮೇತರಾಗಿ ಭೇಟಿ ನೀಡಿದ್ದಾರೆ.

    ರಾಜ್ಯದಲ್ಲಿ ಡಿ-ಫ್ಯಾನ್ಸ್, ರಮ್ಯಾ ಮತ್ತು ಒಳ್ಳೆ ಹುಡ್ಗ ಪ್ರಥಮ್ ವಿಷಯಗಳ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲೇ ನಟ ದರ್ಶನ್ ಕಾಮಾಕ್ಯ ದೇವಿ ಮೊರೆ ಹೋಗಿದ್ದಾರೆ.ಇದನ್ನೂ ಓದಿ: ಡಿ-ಬಾಸ್ ಫ್ಯಾನ್ಸ್‌ನಿಂದ ಅಶ್ಲೀಲ ಮೆಸೇಜ್ – ನಟಿ ರಮ್ಯಾ ಬೆಂಬಲಕ್ಕೆ ನಿಂತ ದೊಡ್ಮನೆ ಕುಟುಂಬ

    ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಜೈಲು ಸೇರಿದ್ದ ನಟ ದರ್ಶನ್ ಬಿಡುಗಡೆಗಾಗಿ ಪತ್ನಿ ವಿಜಯಲಕ್ಷಿö್ಮ ಇದೇ ಕಾಮಾಕ್ಯ ದೇವಿ ದೇವಸ್ಥಾನಕ್ಕೆ ತೆರಳಿ ಹರಕೆ ಹೊತ್ತಿದ್ದರು. ಜೊತೆಗೆ ಕೆಲವೇ ದಿನಗಳಲ್ಲಿ ಸುಪ್ರೀಂ ತೀರ್ಪು ಬರುವ ಸಾಧ್ಯತೆಯಿದ್ದು, ದರ್ಶನ್ ಆತಂಕದಲ್ಲಿದ್ದಾರೆ. ಹೀಗಾಗಿ ಹರಕೆ ತೀರಿಸಲು ಕುಟುಂಬ ಸಮೇತರಾಗಿ ದೇವಸ್ಥಾನಕ್ಕೆ ತೆರಳಿದ್ದಾರೆ.

    ಕಳೆದ ವಾರ ಸುಪ್ರೀಂ ಕೋರ್ಟ್ನಲ್ಲಿ, ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ವಾದ-ಪ್ರತಿವಾದಗಳು ನಡೆದಿದ್ದು, ಒಂದು ವಾರದಲ್ಲಿ ತೀರ್ಪು ನೀಡುವುದಾಗಿ ಕೋರ್ಟ್ ತಿಳಿಸಿತ್ತು. ಇನ್ನೂ ನಟಿ ರಮ್ಯಾ ದರ್ಶನ್ ಅಭಿಮಾನಿಗಳ ವಿರುದ್ಧ ಕಾನೂನು ಸಮರಕ್ಕಿಳಿದಿದ್ದು, ಒಳ್ಳೆ ಹುಡ್ಗ ಪ್ರಥಮ್ ಧರಣಿ ಕೂರುವುದಾಗಿ ಎಚ್ಚರಿಕೆ ನೀಡಿದ್ದಾರೆ.ಇದನ್ನೂ ಓದಿ: ಮಿರಾಯ್ ಸಿನಿಮಾದ ಮೊದಲ ಹಾಡಿಗೆ ಭರ್ಜರಿ ರೆಸ್ಪಾನ್ಸ್: ಹನುಮಾನ್ ಹುಡುಗನ ಚಿತ್ರ

  • ಕಾಮಾಕ್ಯ ದೇಗುಲಕ್ಕೆ ನಟಿ ಕಾರುಣ್ಯ ರಾಮ್ ಭೇಟಿ

    ಕಾಮಾಕ್ಯ ದೇಗುಲಕ್ಕೆ ನಟಿ ಕಾರುಣ್ಯ ರಾಮ್ ಭೇಟಿ

    ಸ್ಯಾಂಡಲ್‌ವುಡ್ ನಟಿ ಕಾರಣ್ಯ ರಾಮ್ ಅವರು ಕಾಮಾಕ್ಯ ದೇಗುಲಕ್ಕೆ (Kamakhya Temple) ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಕುರಿತ ಫೋಟೋಗಳನ್ನು ನಟಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:‘ಜಾವಾ’ ಸಿನಿಮಾದಲ್ಲಿ ರಾಗಿಣಿ ಬೋಲ್ಡ್ ಅವತಾರ- ಪೋಸ್ಟರ್ ರಿವೀಲ್

    51 ಶಕ್ತಿಪೀಠಗಳಲ್ಲಿ ಒಂದಾಗಿರುವ ಗುವಾಹಟಿಯ (Guwahati) ಕಾಮಾಕ್ಯ ದೇಗುಲಕ್ಕೆ ಕಾರುಣ್ಯ ಭೇಟಿ ಕೊಟ್ಟಿದ್ದಾರೆ. ಕೆಲ ಕಾಲ ದೇವಸ್ಥಾನದಲ್ಲಿ ನಟಿ ಸಮಯ ಕಳೆದಿದ್ದಾರೆ. ಕೆಂಪು ಸೀರೆಯುಟ್ಟು ದೇವರ ಪೂಜೆಯಲ್ಲಿ ನಟಿ ಭಾಗಿಯಾಗಿದ್ದಾರೆ. ಇದನ್ನೂ ಓದಿ:‘ಚೌಕಿದಾರ್’ ಚಿತ್ರದ ಟೀಸರ್ ರಿಲೀಸ್- ರಕ್ತಸಿಕ್ತ ಅವತಾರದಲ್ಲಿ ಪೃಥ್ವಿ ಅಂಬರ್ ಅಬ್ಬರ

     

    View this post on Instagram

     

    A post shared by Karunya Ram 🧿 (@ikarunya)

    ವಜ್ರಕಾಯ, ಕಿರಗೂರಿನ ಗಯ್ಯಾಳಿಗಳು, ಪೆಟ್ರೋಮ್ಯಾಕ್ಸ್ ಚಿತ್ರಗಳಲ್ಲೂ ಕಾರುಣ್ಯ ನಟಿಸಿದ್ದಾರೆ.

  • ಕಾಮಾಕ್ಯ ದೇವಸ್ಥಾನಕ್ಕೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಭೇಟಿ

    ಕಾಮಾಕ್ಯ ದೇವಸ್ಥಾನಕ್ಕೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಭೇಟಿ

    ನಟ ದರ್ಶನ್ (Darshan) ಪತ್ನಿ ವಿಜಯಲಕ್ಷ್ಮಿ (Vijayalakshmi) ಅಸ್ಸಾಂನ ಗುವಾಹಟಿಯ ಕಾಮಾಕ್ಯ ದೇವಸ್ಥಾನಕ್ಕೆ (Kamakhya Temple)  ಭೇಟಿ ನೀಡಿದ್ದಾರೆ. ದೇವಸ್ಥಾನದಲ್ಲಿರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:‘ಪುಷ್ಪ’ ಸಿನಿಮಾ ಪಾರ್ಟ್ 10ರವರೆಗೆ ಬರಲಿದ್ಯಾ?: ಸುಳಿವು ಕೊಟ್ಟ ಮ್ಯೂಸಿಕ್ ಡೈರೆಕ್ಟರ್

    ವಿಜಯಲಕ್ಷ್ಮಿ ಅವರು ದೇವಿಯ ಆರಾಧಕಿ. ಆಗಾಗ ಶಕ್ತಿ ದೇವತೆಯ ಮೊರೆ ಹೋಗುತ್ತಾರೆ. ಇದೀಗ ಅಸ್ಸಾಂನ ಗುವಾಹಟಿಯ ಕಾಮಾಕ್ಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದೇವಸ್ಥಾನದಲ್ಲಿ ಕೆಲ ಕಾಲ ಸಮಯ ಕಳೆದಿದ್ದಾರೆ.

     

    View this post on Instagram

     

    A post shared by Vijayalakshmi darshan (@viji.darshan)


    ಇನ್ನೂ ಈ ಹಿಂದೆ ದರ್ಶನ್ ಅವರು ರೇಣುಕಾಸ್ವಾಮಿ ಪ್ರಕರಣದಲ್ಲಿ ಅರೆಸ್ಟ್ ಆದ ಸಂದರ್ಭದಲ್ಲಿ ಕಾಮಾಕ್ಯ ದೇವಾಲಯಕ್ಕೆ ಭೇಟಿ ನೀಡಿದ್ದರು.

  • ಕಾಮಾಕ್ಯ ದೇವಸ್ಥಾನಕ್ಕೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಭೇಟಿ

    ಕಾಮಾಕ್ಯ ದೇವಸ್ಥಾನಕ್ಕೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಭೇಟಿ

    ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ (Shilpa Shetty) ಅವರು ಮಂಗಳೂರಿಗೆ ಬಂದು ದೈವ ಕೋಲದಲ್ಲಿ ಭಾಗಿಯಾದ ಬೆನ್ನಲ್ಲೇ ಇದೀಗ ಕಾಮಾಕ್ಯ ದೇವಸ್ಥಾನಕ್ಕೆ (Kamakhya Temple) ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಕುರಿತ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ.

    ಅಸ್ಸಾಂನ ಗೌವಾಹಟಿಯಲ್ಲಿರುವ ಕಾಮಾಕ್ಯ ದೇವಸ್ಥಾನಕ್ಕೆ ತಾಯಿ ಸುನಂದಾ ಶೆಟ್ಟಿ ಜೊತೆ ಶಿಲ್ಪಾ ಭೇಟಿ ನೀಡಿ ಕೆಲ ಕಾಲ ಸಮಯ ಕಳೆದಿದ್ದಾರೆ. ದೇವರ ಸನ್ನಿಧಿಯಲ್ಲಿ ನಟಿ ಕುಳಿತು ಪೂಜೆ ಮಾಡುತ್ತಿರುವ ಫೋಟೋ ಈಗ ವೈರಲ್‌ ಆಗಿದೆ. ಇದನ್ನೂ ಓದಿ:ಮತ್ತಷ್ಟು ಎತ್ತರಕ್ಕೆ ಏರುತ್ತೀಯ- ‘ಕೆಜಿಎಫ್’ ನಟಿಗೆ ದೈವದ ಅಭಯ

    ಅಂದಹಾಗೆ, ಹಲವು ವರ್ಷಗಳ ನಂತರ ಶಿಲ್ಪಾ ಶೆಟ್ಟಿ ‘ಕೆಡಿ’ ಸಿನಿಮಾದ ಮೂಲಕ ಕನ್ನಡ ಚಿತ್ರಕ್ಕೆ ಕಮ್‌ ಬ್ಯಾಕ್ ಆಗಿದ್ದಾರೆ. ಈ ಹಿಂದೆ ಆಟೋ ಶಂಕರ್, ಒಂದಾಗೋಣ ಬಾ, ಪ್ರೀತ್ಸೋದ್ ತಪ್ಪಾ? ಸಿನಿಮಾಗಳಲ್ಲಿ ಶಿಲ್ಪಾ ನಟಿಸಿದ್ದರು.