Tag: Kalyani

  • ಕಲ್ಯಾಣಿಯಲ್ಲಿ ಈಜಲು ಹೋದ ಹಾಸ್ಟೆಲ್ ವಿದ್ಯಾರ್ಥಿ ಸಾವು

    ಕಲ್ಯಾಣಿಯಲ್ಲಿ ಈಜಲು ಹೋದ ಹಾಸ್ಟೆಲ್ ವಿದ್ಯಾರ್ಥಿ ಸಾವು

    ಚಿಕ್ಕಬಳ್ಳಾಪುರ: ಕಲ್ಯಾಣಿಯಲ್ಲಿ ಈಜಲು ಹೋದ ಹಾಸ್ಟೆಲ್ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಗುಡಿಬಂಡೆ ಪಟ್ಟಣದ ಹೊರವಲಯದ ಬಿಳಿಗಿರಿರಂಗನ ಕಲ್ಯಾಣಿಯಲ್ಲಿ ನಡೆದಿದೆ.

    ಗುಡಿಬಂಟೆ ಪಟ್ಟಣದ ಐಟಿಐ ಕಾಲೇಜಿನಲ್ಲಿ (Chikkaballapur ITI College) ವ್ಯಾಸಂಗ ಮಾಡುತ್ತಿದ್ದು 17 ವರ್ಷದ ವೆಂಕಟಾಚಲಪತಿ ಮೃತ ವಿದ್ಯಾರ್ಥಿಯಾಗಿದ್ದಾನೆ. ಅಂದಹಾಗೆ ಮೂಲತಃ ಗೌರಿಬಿದನೂರು ತಾಲೂಕಿನ ಹೊಸೂರು ಹೋಬಳಿಯ ಭಕ್ತರಹಳ್ಳಿ ಗ್ರಾಮದವನಾಗಿದ್ದ ಮೃತ ವೆಂಕಟಾಚಲಪತಿ ಗುಡಿಬಂಡೆ ಪಟ್ಟಣದ ಸರ್ಕಾರಿ ಬಾಲಕರ ವಸತಿನಿಲಯದ (Hostel Student) ವಿದ್ಯಾರ್ಥಿಯಾಗಿದ್ದ.

    ಕಾಲೇಜಿನಿಂದ ಹಾಸ್ಟೆಲ್‌ಗೆ ಬಂದಿದ್ದ ವೆಂಕಟಾಚಲಪತಿ ಊಟ ಮುಗಿಸಿ ಹಾಸ್ಟೆಲ್ ಸಮೀಪವೇ ಇರುವ ಕಲ್ಯಾಣಿಯಲ್ಲಿ ಈಜಲು ತೆರಳಿದ್ದು ಈ ವೇಳೆ ಕಲ್ಯಾಣಿಯ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಘಟನೆ ಬಗ್ಗೆ ತಿಳಿದು ಜಿಲ್ಲಾಧಿಕಾರಿ ಪಿ.ಎನ್ ರವಿಂದ್ರ ಸಮೇತ ಅಧಿಕಾರಿಗಳು ದೌಡಾಯಿಸಿ ಪರಿಶೀಲನೆ ನಡೆಸಿದರು. ಇದನ್ನೂ ಓದಿ: ಹವಾಮಾನ ವೈಪರೀತ್ಯ – ಕೊಡಗಿನಲ್ಲಿ ವೈರಲ್ ಫೀವರ್, ಒಂದೇ ದಿನ 200 ರಿಂದ 300 ಜನರಿಗೆ ಚಿಕಿತ್ಸೆ

    ಇಡೀ ರಾತ್ರಿ ಹುಡುಕಾಟ ನಡೆಸಿದ್ದು ಮುಂಜಾನೆ ಮೃತ ಯುವಕನ ಮೃತದೇಹ ಪತ್ತೆಯಾಗಿದೆ. ಈ ಸಂಬಂಧ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: 10ನೇ ತರಗತಿ ಗಣಿತ, ವಿಜ್ಞಾನ ವಿಷಯಗಳ ಪಾಸಿಂಗ್ ಮಾರ್ಕ್ಸ್ 20ಕ್ಕೆ ಇಳಿಸಿದ ಮಹಾರಾಷ್ಟ್ರ

     

  • ‘ಹೃದಯಂ’ ನಟಿ ಕಲ್ಯಾಣಿ ಮೀಟ್ಸ್ ರಶ್ಮಿಕಾ ಮಂದಣ್ಣ- ಮ್ಯಾಟರ್ ಏನು?

    ‘ಹೃದಯಂ’ ನಟಿ ಕಲ್ಯಾಣಿ ಮೀಟ್ಸ್ ರಶ್ಮಿಕಾ ಮಂದಣ್ಣ- ಮ್ಯಾಟರ್ ಏನು?

    ಣ್ಣದ ಲೋಕದಲ್ಲಿ ಒಬ್ಬ ನಟಿಯನ್ನು ಕಂಡರೆ ಮತ್ತೊಬ್ಬರಿಗೆ ಆಗುವುದಿಲ್ಲ. ಸ್ಟಾರ್ ನಟಿಯರು ಒಬ್ಬರಿಗೊಬ್ಬರು ಫ್ರೆಂಡ್ಸ್ ಆಗೋದು ಇನ್ನೂ ದೂರದ ಮಾತು. ಹೀಗಿರುವಾಗ ನಟಿ ಕಲ್ಯಾಣಿ (Kalyani Priyadarshan) ಅವರನ್ನು ರಶ್ಮಿಕಾ ಮಂದಣ್ಣ (Rashmika Mandanna) ಭೇಟಿಯಾಗಿದ್ದಾರೆ. ಈ ಕುರಿತ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಮುಂಬೈ ವಿಮಾನ ನಿಲ್ದಾಣದಲ್ಲಿ ಕಲ್ಯಾಣಿ ಮತ್ತು ರಶ್ಮಿಕಾ ಮಂದಣ್ಣ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಕೈ ಕೈ ಹಿಡಿದು ಪಾಪರಾಜಿಗಳ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ಈ ಕುರಿತ ಫೋಟೋ, ವಿಡಿಯೋಗಳು ಇಂಟರ್‌ನೆಟ್‌ನಲ್ಲಿ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ:ಪ್ರಜ್ವಲ್ ದೇವರಾಜ್‌ಗೆ ಅಮೂಲ್ಯ ನಾಯಕಿ- ಯಾವ ಸಿನಿಮಾ?

    ಕಲ್ಯಾಣಿ (Actress Kalyani) ಜೊತೆಗಿನ ಚೆಂದದ ಫೋಟೋ ಹಂಚಿಕೊಂಡು ನನ್ನ ಕಡೆಯಿಂದ ಬರೀ ಪ್ರೀತಿ, ಮತ್ತೆ ಸಿಗೋಣ ಎಂದು ರಶ್ಮಿಕಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ:ದೊಡ್ಮನೆಯ ಹೀರೋ, ಹೀರೋಯಿನ್, ವಿಲನ್ ಇವರೇ ಎಂದ ತುಕಾಲಿ

    ವಿಮಾನ ನಿಲ್ದಾಣಕ್ಕೆ ಬರುವ ಮುಂಚೆಯೇ ಇಬ್ಬರೂ ಕೆಲ ಕಾಲ ಸಮಯ ಕಳೆದಿದ್ದಾರೆ. ಆದರೂ ಇಬ್ಬರ ಒಡನಾಟ ನೋಡಿ ಪರವಾಗಿಲ್ವೇ ಸ್ಟಾರ್ ನಟಿಯರು ಅಹಂ ಬಿಟ್ಟು ಒಟ್ಟಾಗುತ್ತಿದ್ದಾರಲ್ಲ ಎಂದು ಫ್ಯಾನ್ಸ್ ಖುಷಿಪಡುತ್ತಿದ್ದಾರೆ.

    ಇನ್ನೂ ರಶ್ಮಿಕಾ ‘ಅನಿಮಲ್’ (Animal) ಸಕ್ಸಸ್ ನಂತರ ಬಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ಕಲ್ಯಾಣಿ, ಸೌತ್ ಸಿನಿಮಾಗಳಲ್ಲಿ ಆ್ಯಕ್ಟೀವ್ ಆಗಿದ್ದಾರೆ.

  • ಕಲ್ಯಾಣಿಯಲ್ಲಿ ಮುಳುಗಿ ಐವರು ಸಾವು

    ಕಲ್ಯಾಣಿಯಲ್ಲಿ ಮುಳುಗಿ ಐವರು ಸಾವು

    ಚೆನ್ನೈ: ಪಂಗುಣಿ (Panguni) ಆಚರಣೆಯ ಅಂಗವಾಗಿ ಕಲ್ಯಾಣಿಯಲ್ಲಿ ಸ್ನಾನಕ್ಕೆಂದು ತೆರಳಿದ ಐವರು ಪುರೋಹಿತರು ನೀರಿನಲ್ಲಿ ಮುಳುಗಿ ಸಾವನ್ನಪಿರುವ ಘಟನೆ ತಮಿಳುನಾಡಿನ (Tamil Nadu) ನಂಗನಲ್ಲೂರಿನ ಧರ್ಮಲಿಂಗೇಶ್ವರ ದೇವಸ್ಥಾನದ ಬಳಿ ನಡೆದಿದೆ.

    ಮೃತಪಟ್ಟವರನ್ನು ಸೂರ್ಯ (24), ರಾಘವನ್‌ (22), ಯೋಗೇಶ್ವರನ್‌ (23), ರಾಘವನ್‌ (18) ಹಾಗೂ ವನೇಶ್ (20) ಎಂದು ಗುರುತಿಸಲಾಗಿದೆ. ಪಂಗುಣಿ ಆಚರಣೆಯ ಅಂಗವಾಗಿ ನಂಗನಲ್ಲೂರಿನ ಧರ್ಮಲಿಂಗೇಶ್ವರ ದೇವಾಸ್ಥಾನದ ಪುರೋಹಿತರು 10:30ರ ವೇಳೆಗೆ ಸ್ನಾನಕ್ಕೆಂದು ಮೂವರಸಂಪೇಟ್‌ ದೇವಸ್ಥಾನದ ಬಳಿಯಿದ್ದ ಕಲ್ಯಾಣಿಗೆ ತೆರಳಿದ್ದರು. ಈ ವೇಳೆ ಒಬ್ಬರು ಕಾಲು ಜಾರಿ ಬಿದ್ದಿದ್ದಾರೆ. ಅವರನ್ನು ರಕ್ಷಿಸಲು ಹೋಗಿ ಇನ್ನುಳಿದವರು ಸಾವನ್ನಪ್ಪಿದ್ದಾರೆ. ಎಲ್ಲಾ ಶವಗಳನ್ನು ನೀರಿನಿಂದ ಹೊರತೆಗೆದಿದ್ದು, ಈ ಕುರಿತು ತನಿಖೆ ಕೈಗೊಂಡಿದ್ದೇವೆ ಎಂದು ಚೆನ್ನೈ (Chennai) ಪೊಲೀಸ್ ಕಮಿಷನರ್ ಶಂಕರ್ ಜಿವಾಲ್ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ವರನ ಕೊಲೆಗೆ ಸ್ಕೆಚ್‌ ಹಾಕಿ ಸ್ಫೋಟಕ ತುಂಬಿ ಗಿಫ್ಟ್‌ ಕೊಟ್ಟ ವಧುವಿನ ಮಾಜಿ ಲವ್ವರ್! 

    ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಐವರೂ ಚೆನ್ನೈನ ಮೂರು ಬೇರೆ ಬೇರೆ ಸ್ಥಳಗಳಿಗೆ ಸೇರಿದವರಾಗಿದ್ದು, ಅಗ್ನಿಶಾಮಕ ಮತ್ತು ರಕ್ಷಣಾ ತಂಡಗಳು ಶೋಧ ಕಾರ್ಯವನ್ನು ಮುಂದುವರೆಸುತ್ತಿದೆ ಎಂದು ಅಗ್ನಿಶಾಮಕ ಹಾಗೂ ರಕ್ಷಣಾ ಸೇವೆಗಳ ಡಿಜಿಪಿ ಅಭಾಷ್ ಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: ಕೇರಳದಲ್ಲಿ ರೈಲಿಗೆ ಬೆಂಕಿ ಹಚ್ಚಿ ಮೂವರ ಹತ್ಯೆ ಪ್ರಕರಣ – ಪರಾರಿಯಾಗಿದ್ದ ಆರೋಪಿ ಅರೆಸ್ಟ್

    ಘಟನಾ ಸ್ಥಳಕ್ಕೆ ಭೇಟಿ ನೀಡಿದ ತಮಿಳುನಾಡು ಗ್ರಾಮೀಣ ಕೈಗಾರಿಕಾ ಸಚಿವ ಟಿ.ಎಂ.ಅನ್ಬರಸನ್, ಇದು ತುಂಬಲಾರದ ನಷ್ಟವಾಗಿದ್ದು ವಿಧಿ ವಿಧಾನಗಳ ಬಗ್ಗೆ ಮೊದಲೇ ಪೊಲೀಸರಿಗೆ ತಿಳಿಸಿದ್ದರೆ ಈ ಅನಾಹುತವನ್ನು ತಪ್ಪಿಸಬಹುದಾಗಿತ್ತು ಎಂದು ಸಂತಾಪ ಸೂಚಿಸಿದರು. ಇದನ್ನೂ ಓದಿ: ಭಾರತದಲ್ಲಿ ಮುಸ್ಲಿಮರನ್ನ ಟಾರ್ಗೆಟ್‌ ಮಾಡಿ ಹಿಂಸಾಚಾರ – ಇಸ್ಲಾಮಿಕ್‌ ರಾಷ್ಟ್ರಗಳ ಆರೋಪಕ್ಕೆ ಭಾರತ ಕಿಡಿ 

    ಮೃತಪಟ್ಟ ಐವರೂ 18ರಿಂದ 23 ವರ್ಷದ ಯುವಕರಾಗಿದ್ದು, ಮೃತರ ಕುಟುಂಬಗಳಿಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ (M.K.Stalin) ತಲಾ 2 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ. ಇದನ್ನೂ ಓದಿ: 10ನೇ ತರಗತಿಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ – ಬಿಜೆಪಿಯ ಬಂಡಿ ಸಂಜಯ್ ಕುಮಾರ್ ಬಂಧನ

  • 400 ವರ್ಷಗಳ ಹಿಂದಿನ ಕಲ್ಯಾಣಿಯ ಸ್ವಚ್ಛತೆಗೆ ಮುಂದಾದ ನ್ಯಾಯಾಧೀಶರು

    400 ವರ್ಷಗಳ ಹಿಂದಿನ ಕಲ್ಯಾಣಿಯ ಸ್ವಚ್ಛತೆಗೆ ಮುಂದಾದ ನ್ಯಾಯಾಧೀಶರು

    ಬೆಂಗಳೂರು: ನಗರಗಳ ಅಭಿವೃದ್ಧಿಯ ಹೆಸರಿನಲ್ಲಿ ಅದೆಷ್ಟೋ ಪುರಾತನ ಕಟ್ಟಡಗಳು, ಕೆರೆಗಳು, ಕಲ್ಯಾಣಿಗಳು ಮಣ್ಣಲ್ಲಿ ಮಣ್ಣಾಗಿ ಇತಿಹಾಸಗಳೇ ಮುಚ್ಚಿ ಹೋಗಿವೆ. ಅಳಿವಿನಂಚಿನ ಕಲ್ಯಾಣಿಯನ್ನು ಕಂಡ ನ್ಯಾಯಾಧೀಶರು ತಮ್ಮ ತಂಡವನ್ನು ಕಟ್ಟಿಕೊಂಡು ಸ್ವಚ್ಛತೆಗೆ ಮುಂದಾಗಿ ಮತ್ತೆ ಪುನರ್ಜಿವ ನೀಡಿದ್ದಾರೆ.

    ಬೆಂಗಳೂರು ಹೊರವಲಯದ ಆನೇಕಲ್‍ನ ಸಿಡಿಹೊಸಕೋಟೆ ರಸ್ತೆಯಲ್ಲಿರುವು ಪುಷ್ಕರಾಣಿ ಕಲ್ಯಾಣಿಯಲ್ಲಿ ಬೆಳೆದಿರುವ ಗಿಡಗಳನ್ನು ಕಿತ್ತು ಸ್ವಚ್ಛತೆಗೆ ಮುಂದಾಗಿದ್ದಾರೆ. ಈ ಪುಷ್ಕರಾಣಿ ಕಲ್ಯಾಣಿಗೆ ಸುಮಾರು 400 ವರ್ಷಗಳ ಇತಿಹಾಸವಿದ್ದು, ಆನೇಕಲ್ ತಾಲೂಕಿಗೆ ಪ್ರಸಿದ್ಧಿಯಾಗಿತ್ತು. ಪಾಳೇಗಾರರು ಆಳ್ವಿಕೆ ಮಾಡುವ ಕಾಲದಲ್ಲಿ ಆನೇಕಲ್ ನ ದೊಡ್ಡಕೆರೆ ಹಾಗೂ ಈ ಕಲ್ಯಾಣಿಯನ್ನು ನಿರ್ಮಿಸಿದ್ದರು. ಕಲ್ಯಾಣಿಯಲ್ಲಿ ಜನ ನೀರು ಕುಡಿಯುವುದು ಬಟ್ಟೆ ತೊಳೆಯುವುದು ಹಾಗೂ ಜನ ಈಜಲು ಬಳಸುತ್ತಿದ್ದರು.

    ಕಳೆದ 20 ವರ್ಷಗಳಿಂದ ಈ ಕಲ್ಯಾಣಿಯಲ್ಲಿ ಮಣ್ಣು ತುಂಬಿಕೊಂಡು ನೀರು ಸಹ ಇಂಗಿ ಹೋಗಿದ್ದು ಆಳಿವಿನಂಚಿಗೆ ತಲುಪಿತ್ತು. ಇದನ್ನು ಕಂಡ ಆನೇಕಲ್ ನ ನ್ಯಾಯಾಧೀಶರು ತಂಡ ಕಲ್ಯಾಣಿಯನ್ನು ಸ್ವಚ್ಛಗೊಳಿಸಲು ಮುಂದಾಗಿದೆ. ಇಂದು ಮಣ್ಣನ್ನು ತೆಗೆಯುತ್ತಿದ್ದು, ಇನ್ನೆರಡು ವಾರಗಳಲ್ಲಿ ಸಂಪೂರ್ಣವಾಗಿ ಸ್ವಚ್ಛಗೊಳ್ಳಲಿದೆ.

    ಆನೇಕಲ್ ನ ಜೆಎಂಎಪ್ಸಿ ನ್ಯಾಯಾಲಯದ ನ್ಯಾಯಾಧೀಶರಾದ ಗೋಕುಲ್ ಮತ್ತು ಪ್ರಶಾಂತ್ ಆನೇಕಲ್ ನಿಂದ ಸಿಡಿಹೊಸಕೋಟೆಯ ರಸ್ತೆಯಲ್ಲಿ ವಾಯುವಿಹರಕೆಂದು ಹೋಗುವ ವೇಳೆ ಈ ಕಲ್ಯಾಣಿಯನ್ನು ಕಂಡಿದ್ದಾರೆ. ನಂತರ ಆನೇಕಲ್ ನ ವಕೀಲರ ಸಂಘ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ವತಿಯಿಂದ ಈ ಪುಷ್ಕರಾಣಿ ಕಲ್ಯಾಣಿಯ ಸ್ವಚ್ಛತೆಯನ್ನು ಪ್ರತಿ ಭಾನುವಾರ ಮಾಡಲು ಮುಂದಾಗಿದ್ದಾರೆ.

    ಕಲ್ಯಾಣಿ ಇನ್ನೊಂದು ವಾರಗಳಲ್ಲಿ ಕೊನೆಯ ಹಂತಕ್ಕೆ ಬರಲಿದೆ. ಈ ಸ್ವಚ್ಛತೆಯ ಕೆಲಸದಲ್ಲಿ ನ್ಯಾಯಾಲಯದಲ್ಲಿನ ಎಲ್ಲ ಸಿಬ್ಬಂದಿ ವಕೀಲರು ಭಾಗವಹಿಸಿದ್ದು, ಸ್ಕೌಟ್ ಅಂಡ್ ಗೈಡ್ಸ್ ಹಾಗೂ ಶಾಲಾ ಮಕ್ಕಳು ನ್ಯಾಯಾಧೀಶರೊಂದಿಗೆ ಯಾವುದೇ ಬೇಧವಿಲ್ಲದೆ ಖುಷಿಯಿಂದ ಕೆಲಸ ಮಾಡುತ್ತಿದ್ದಾರೆ. ನ್ಯಾಯಾಧೀಶರು ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ.

  • ಮಹಾಮಳೆಗೆ ಭರ್ತಿಯಾದ ಬರದನಾಡಿನ ಕಲ್ಯಾಣಿಗಳಲ್ಲಿ ವಿಷಜಲ

    ಮಹಾಮಳೆಗೆ ಭರ್ತಿಯಾದ ಬರದನಾಡಿನ ಕಲ್ಯಾಣಿಗಳಲ್ಲಿ ವಿಷಜಲ

    ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗವೊಂದು ಶಾಶ್ವತ ಬರದನಾಡು. ಅಲ್ಲಿ ಸತತ ಆರು ವರ್ಷಗಳಿಂದ ಮಳೆ ಇಲ್ಲದೆ ಐತಿಹಾಸಿಕ ಹಿನ್ನೆಲೆಯ ಕಲ್ಯಾಣಿಗಳೆಲ್ಲ ಬತ್ತಿ ಹೋಗಿದ್ದವು. ಹೀಗಾಗಿ ಜನರಿಗೆ ಹನಿ ನೀರಿಗೂ ಹಾಹಾಕಾರ ಶುರುವಾಗಿತ್ತು. ಆದರೆ ಕಳೆದ ಆರು ತಿಂಗಳಿಂದೀಚೆಗೆ ಸುರಿದ ಮಹಾಮಳೆಗೆ ಚಿತ್ರದುರ್ಗದಲ್ಲಿನ ನೀರಿನ ಮೂಲಗಳೆಲ್ಲಾ ಭರ್ತಿಯಾಗಿವೆ. ಆದರೆ ಕಲ್ಯಾಣಿಗಳಲ್ಲಿ ಬಹಳ ದಿನಗಳಿಂದ ಒಂದೆಡೆಯೇ ನಿಂತಿರುವ ನೀರು ವಿಷ ಜಲವಾಗಿ ಮಾರ್ಪಟ್ಟು, ಜನರಲ್ಲಿ ಸಾಂಕ್ರಾಮಿಕ ರೋಗಗಳ ಭೀತಿಯನ್ನು ಹುಟ್ಟಿಸಿದೆ.

    ಕಳೆದ ಆರು ವರ್ಷಗಳಿಂದ ಮಳೆ ಇಲ್ಲದಿದ್ದರಿಂದ ಹನಿ ನೀರಿಲ್ಲದಂತೆ ಬತ್ತಿ ಬರಿದಾಗಿದ್ದ ಐತಿಹಾಸಿಕ ಹಿನ್ನೆಲೆಯ ಕಲ್ಯಾಣಿಗಳೆಲ್ಲಾ ಇತ್ತೀಚೆಗೆ ಸುರಿದ ಮಹಾಮಳೆಯಿಂದ ಭರ್ತಿಯಾಗಿ ಮೈದುಂಬಿವೆ. ಹೀಗಾಗಿ ಬತ್ತಿಹೋದ ಕೊಳವೆ ಬಾವಿಗಳ ಅಂತರ್ಜಲವನ್ನು ಈ ಕಲ್ಯಾಣಿಗಳು ಹೆಚ್ಚಿಸುತ್ತವೆ ಎಂಬ ಖುಷಿ ಜನರಲ್ಲಿತ್ತು. ಆದರೆ ನಗರಸಭೆ ಅಧಿಕಾರಿಗಳು ಕಲ್ಯಾಣಿಗಳನ್ನು ಸರಿಯಾದ ಸಮಯದಲ್ಲಿ ಸ್ವಚ್ಛಗೊಳಿಸಿ ನಿರ್ವಹಣೆ ಮಾಡದೇ ನಿರ್ಲಕ್ಷ್ಯ ತೊರಿರೋ ಪರಿಣಾಮ, ಒಂದೇ ಕಡೆ ಹಲವು ತಿಂಗಳುಗಳಿಂದ ಬಳಕೆಯಾಗದೆ ಕಲ್ಯಾಣಿಗಳಲ್ಲಿ ನಿಂತಿರುವ ನೀರು ಸಂಪೂರ್ಣ ಕಲುಷಿತವಾಗಿದೆ.

    ನೀರಿನ ಬಣ್ಣ ಬದಲಾಗಿ, ಹಚ್ಚ ಹಸಿರಿನ ರೀತಿಯಲ್ಲಿ ಪಾಚಿ ಕಟ್ಟಿದೆ. ಅಲ್ಲದೇ ಕಲ್ಯಾಣಿಗಳಲ್ಲಿ ಕ್ರಿಮಿಕೀಟಗಳು ಸಂಗ್ರಹವಾಗಿದ್ದೂ, ಘನತ್ಯಾಜ್ಯ ಹಾಗೂ ಕಸ ಕಡ್ಡಿಗಳೆಲ್ಲ ತುಂಬಿ ದುರ್ನಾತ ಬೀರುತ್ತಾ ವಿಷಜಲವಾಗಿ ಮಾರ್ಪಟ್ಟಿದೆ. ಈ ಕಲುಷಿತ ವಿಷಜಲವು ಅಂತರ್ಜಲದ ಮೂಲಕ ನಾಗರೀಕರ ಮನೆಗಳ ಕೊಳವೆ ಬಾವಿಗೆ ಸೇರಿ, ವಿವಿಧ ಸಾಂಕ್ರಾಮಿಕ ರೋಗಗಳನ್ನು ಹುಟ್ಟುಹಾಕುವ ಭೀತಿ ದುರ್ಗದ ಜನರಲ್ಲಿ ಕಾಡುತ್ತಿದೆ. ಹೀಗಾಗಿ ಅಧಿಕಾರಿಗಳ ನಿರ್ಲಕ್ಷ್ಯ ಗಮನಿಸಿದ ಜಲತಜ್ಞರು ಕಿಡಿಕಾರುತ್ತಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ನಗರಸಭೆ ಪೌರಾಯುಕ್ತ ಹನುಮಂತರಾಜು, ನಾವು ಪ್ರತೀ ತಿಂಗಳು ಎರಡನೇ ಮತ್ತು ನಾಲ್ಕನೇ ಶನಿವಾರದಂದು ಕಲ್ಯಾಣಿಗಳ ಸ್ವಚ್ಛತಾ ಕಾರ್ಯವನ್ನು ಮಾಡುತ್ತಿದ್ದೆವು. ಆದರೆ ಇತ್ತೀಚೆಗೆ ಕೆಲಸದ ಒತ್ತಡದಿಂದ ಕಲ್ಯಾಣಿಗಳ ಸ್ವಚ್ಛತೆಯತ್ತ ಗಮನಹರಿಸಿಲ್ಲ ಎಂದು ನೆಪ ಹೇಳ್ತಾರೆ. ಅಲ್ಲದೆ ಅವರ ತಪ್ಪನ್ನು ಮುಚ್ಚಿಕೊಳ್ಳಲು, ನಾಗರೀಕರು ನಿರುಪಯುಕ್ತ ದೇವರ ಪೂಜೆ ಸಾಮಾನುಗಳನ್ನು ಎಸೆದು, ಕಲ್ಯಾಣಿಗಳನ್ನು ಮಲೀನಗೊಳಿಸುತ್ತಾರೆ ಎಂದು ಜನರ ಮೇಲೆಯೇ ಆರೋಪ ಮಾಡುತ್ತಿದ್ದಾರೆ. ನಗರದಲ್ಲಿರೋ ಸುಮಾರು ಹತ್ತು ಕಲ್ಯಾಣಿಗಳು ಭರ್ತಿಯಾಗಿವೆ. ಆದರೆ ಕಲುಷಿತ ನೀರಿನಿಂದಾಗಿ ಕಲ್ಯಾಣಿಗಳಲ್ಲಿನ ನೀರು ವಿಷಜಲವಾಗಿದೆ. ಹೀಗಾಗಿ ಜನರ ಬಳಕೆಗೆ ಕಲ್ಯಾಣಿ ನೀರು ಬಾರದೇ ಸಾಂಕ್ರಾಮಿಕ ರೋಗಗಳ ಉತ್ಪಾದನಾ ಘಟಕಗಳಾಗಿವೆ.

  • ಪಾಳೇಗಾರರ ಅವಧಿಯಲ್ಲಿ ನಿರ್ಮಿಸಿದ್ದ ಐತಿಹಾಸಿಕ ಕಲ್ಯಾಣಿ ಪುನಶ್ಚೇತನ

    ಪಾಳೇಗಾರರ ಅವಧಿಯಲ್ಲಿ ನಿರ್ಮಿಸಿದ್ದ ಐತಿಹಾಸಿಕ ಕಲ್ಯಾಣಿ ಪುನಶ್ಚೇತನ

    ಬೆಂಗಳೂರು: ಪಾಳೇಗಾರರ ಆಡಳಿತ ಅವಧಿಯಲ್ಲಿ ನಿರ್ಮಿಸಿದ್ದ ಇತಿಹಾಸ ಪ್ರಸಿದ್ಧ ಕಲ್ಯಾಣಿಯೊಂದು ಗಿಡಗಂಟೆಗಳು ಬೆಳೆದುಕೊಂಡು ಸಂಪೂರ್ಣ ಕಲ್ಯಾಣಿಯು ಕಾಣದಂತೆ ಅವನತಿಯ ಅಂಚಿಗೆ ತಲುಪಿತ್ತು. ಇದೀಗ ಆ ಕಲ್ಯಾಣಿಗೆ ನ್ಯಾಯಾಧೀಶರ ತಂಡ, ವಕೀಲರ ತಂಡ, ಪೊಲೀಸ್ ಸಿಬ್ಬಂದಿ ಹಾಗೂ ಕಾಲೇಜು ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ಸ್ವಚ್ಛತೆ ಕಾರ್ಯ ಮಾಡಿ ಪುನಶ್ಚೇತನ ಮಾಡುವ ಮೂಲಕ ಕಲ್ಯಾಣಿಗೆ ಹೊಸ ರೂಪವನ್ನು ಕೊಟ್ಟಿದ್ದಾರೆ.

    ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಸುರಗಜಕ್ಕನಹಳ್ಳಿ ಪಂಚಾಯ್ತಿ ವ್ಯಾಪ್ತಿಯ ಸಿಡಿಹೊಸಕೋಟೆ ಬಳಿಯಿರುವ ಪುರಾತನ ಕಾಲದ ದೊರೆಸಾನಿ ಕಲ್ಯಾಣಿಯೂ ಅವನತಿಯ ಅಂಚಿಗೆ ತಲುಪಿ ಕಲ್ಯಾಣಿ ಇನ್ನು ಮುಂದಿನ ಪೀಳಿಗೆಗೆ ಕೇವಲ ನೆನಪು ಮಾತ್ರ ಎಂದುಕೊಂಡಿದ್ದರು. ಈ ಬಗ್ಗೆ ಸರ್ಕಾರವಾಗಲಿ, ಪುರಾತತ್ವ ಇಲಾಖೆಯಾಗಲಿ, ಸಂಬಂಧಪಟ್ಟ ಸ್ಥಳೀಯ ಅಧಿಕಾರಿಗಳಾಗಲಿ ಗಮನ ಹರಿಸದೆ ಕಲ್ಯಾಣಿಯನ್ನು ಉಳಿಸಿಕೊಂಡು ಹೋಗುವಲ್ಲಿ ವಿಫಲವಾಗಿದ್ದರು. ಕಲ್ಯಾಣಿಯೂ ಸಂಪೂರ್ಣ ಗಿಡಗಂಟೆಗಳಿಂದ ತುಂಬಿಕೊಂಡು ವಿಷ ಜಂತುಗಳ ಆವಾಸಸ್ಥಾನವಾಗಿತ್ತು. ಅಲ್ಲಿ ಕಲ್ಯಾಣಿ ಇತ್ತ ಎನ್ನುವಂತಹ ಪ್ರಶ್ನೆ ಮೂಡುವಂತೆ ಮಾಡಿತ್ತು.

    ಕಲ್ಯಾಣಿಯ ಅವನತಿಯ ಅಂಚಿನಲ್ಲಿರುವ ಬಗ್ಗೆ ಸಮಾಜಿಕ ಜಾಲತಾಣ ಸೇರಿದಂತೆ ಇತಿಹಾಸ ತಜ್ಞರು ಸಹ ಈ ಬಗ್ಗೆ ಗಮನ ಹರಿಸಬೇಕೆಂದು ಮಾಹಿತಿ ಹಂಚಿಕೊಂಡಿದ್ದರು. ಈ ವಿಷಯವನ್ನು ಸೂಕ್ಷ್ಮವಾಗಿ ಪರಿಗಣಿಸಿದ ನ್ಯಾಯಾಧೀಶರ ತಂಡ, ವಕೀಲರ ತಂಡ, ಆನೇಕಲ್ ಪೊಲೀಸ್ ಸಿಬ್ಬಂದಿ ಹಾಗೂ ಅಕ್ಷರ ಕಾಲೇಜು ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ಇಡೀ ದಿನ ಕಲ್ಯಾಣಿಯಲ್ಲಿ ಬೆಳೆದುಕೊಂಡಿದ್ದ ಗಿಡಗಂಟೆಗಳನ್ನು ತೆಗೆದು ಸ್ವಚ್ಛಗೊಳಿಸಿದ್ದಾರೆ. ಈ ಮೂಲಕ ಸ್ವಚ್ಚತಾ ಕಾರ್ಯ ನಡೆಸಿ ಕಲ್ಯಾಣಿಗೆ ಹೊಸ ರೂಪವನ್ನು ಕೊಟ್ಟಿರುವುದಕ್ಕೆ ಇಡೀ ಆನೇಕಲ್ ತಾಲೂಕಿನ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಈಗ ನಾವು ಕಲ್ಯಾಣಿಯನ್ನು ಸ್ವಚ್ಛಗೊಳಿಸಿದೇವೆ. ಆದರೆ ಕಲ್ಯಾಣಿಗೆ ಇದ್ದ ಕಲ್ಲಿನ ಮೆಟ್ಟಿಲುಗಳು ಸಡಿಲಗೊಂಡು ಕುಸಿದಿದ್ದು ಅವುಗಳನ್ನು ಸರಿಪಡಿಸಬೇಕು ಹಾಗೆ ಮುಂದಿನ ದಿನಗಳಲ್ಲಿ ಕಲ್ಯಾಣಿಯಲ್ಲಿ ನೀರು ನಿಲ್ಲುವಂತೆ ಮಾಡಿ ಪುರಾತನ ಇತಿಹಾಸ ಸಾರುವ ಕಲ್ಯಾಣಿಯನ್ನು ಉಳಿಸಿಕೊಂಡು ಹೋಗಬೇಕೆಂದು ಸಂಬಂಧಪಟ್ಟ ಇಲಾಖೆ ಹಾಗೂ ಸರ್ಕಾರ ಈ ಬಗ್ಗೆ ಗಮನಹರಿಸಬೇಕೆಂದು ಸ್ವಚ್ಛತಾ ಕಾರ್ಯ ಮಾಡಿದವರು ಒತ್ತಾಯಿಸಿದರು.

  • ಕಲ್ಯಾಣಿ ಸ್ವಚ್ಛಗೊಳಿಸಲು ಕೈಜೋಡಿಸಿದ ಕೃಷಿ ಸಚಿವ – 40ಕ್ಕೂ ಹೆಚ್ಚು ಪುರಾತನ ಕಲ್ಯಾಣಿ ಕ್ಲೀನ್

    ಕಲ್ಯಾಣಿ ಸ್ವಚ್ಛಗೊಳಿಸಲು ಕೈಜೋಡಿಸಿದ ಕೃಷಿ ಸಚಿವ – 40ಕ್ಕೂ ಹೆಚ್ಚು ಪುರಾತನ ಕಲ್ಯಾಣಿ ಕ್ಲೀನ್

    ಚಿಕ್ಕಬಳ್ಳಾಪುರ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಲ್ಯಾಣಿ ಸ್ವಚ್ಛತಾ ಕಾರ್ಯಕ್ಕೆ ಕೃಷಿ ಸಚಿವ ಶಿವಶಂಕರರೆಡ್ಡಿ ಕೈಜೋಡಿಸಿ ಎಲ್ಲರ ಗಮನ ಸೆಳೆದಿದ್ದಾರೆ.

    ಚಿಕ್ಕಬಳ್ಳಾಪುರ ನಗರದ ವಾಪಸಂದ್ರ ಬಳಿ ಪಾಳುಬಿದ್ದು ಗಿಡಗಂಟೆ, ಕಲ್ಲು, ಮುಳ್ಳುಗಳಿಂದ ಕೂಡಿದ್ದ ಕಲ್ಯಾಣಿಯನ್ನ ಸ್ವಚ್ಛಗೊಳಿಸಲಾಯಿತು. ಈ ಸ್ವಚ್ಚತಾ ಕಾರ್ಯದಲ್ಲಿ ಭಾಗವಹಿಸಿದ್ದ ಸಚಿವ ಶಿವಶಂಕರರೆಡ್ಡಿ, ತಾವೇ ಸ್ವತಃ ಎಲ್ಲರ ಜೊತೆಗೂಡಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಂಡರು. ಇದನ್ನೂ ಓದಿ:ಸಸಿ ನೆಟ್ಟು ರಂಜಾನ್ ಆಚರಿಸಿದ ರಾಯಚೂರಿನ ಜನತೆ

    ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ಸಂಪ್ರದಾಯಿಕವಾಗಿ ನಿರ್ಮಾಣಗೊಂಡ ಪುರಾತನ ಕಾಲದ ಹಲವು ಕಲ್ಯಾಣಿಗಳು ನಿರ್ಲಕ್ಷ್ಯದಿಂದ ಪಾಳುಬಿದ್ದಿದೆ. ಹಿಂದೆ ಈ ಕಲ್ಯಾಣಿಗಳನ್ನು ಜನರಿಗೆ ನೀರು ಪೂರೈಸಲು ನಿರ್ಮಿಸಲಾಗಿತ್ತು. ದುಸ್ಥಿತಿಯಲ್ಲಿರುವ ಕಲ್ಯಾಣಿಗಳನ್ನು ಜಿಲ್ಲಾಡಳಿತ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಗಮನಿಸಿ ಅದನ್ನು ಸ್ವಚ್ಛಗೊಳಿಸಿ ಮತ್ತೆ ಕಲ್ಯಾಣಿಗಳಿಗೆ ಪುನರ್ಜೀವ  ನೀಡಲು ಮುಂದಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ:ವಿಶ್ವಪರಿಸರ ದಿನ- ಸಾವಿರ ಸಸಿಗಳನ್ನು ನೆಟ್ಟು ಶತಾಯುಷಿಯ ಸ್ಮರಣೆ

    ಕಲ್ಯಾಣಿ ಸ್ವಚ್ಛತಾ ಕಾರ್ಯಕ್ರಮ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ನೇತೃತ್ವದಲ್ಲಿ ಜಿಲ್ಲೆಯ ವಿವಿಧೆಡೆ ಆಯೋಜಿಸಲಾಗಿದೆ. ಈಗಾಗಲೇ 40 ಕ್ಕೂ ಹೆಚ್ಚು ಪುರಾತನ ಕಲ್ಯಾಣಿಗಳ ಸ್ವಚ್ಛತೆ ನಡೆಸಲಾಗಿದ್ದು, ಜಿಲ್ಲಾಧಿಕಾರಿಗಳ ಕಾರ್ಯಕ್ಕೆ ಸಚಿವರು ಅಭಿನಂದನೆ ತಿಳಿಸಿದ್ದಾರೆ. ಹಾಗೆಯೇ ಈ ಕಾರ್ಯಕ್ಕೆ ಸಾರ್ವಜನಿಕರು ಕೂಡ ಬೆಂಬಲ ನೀಡಿ ಸ್ವಚ್ಛತಾ ಕೆಲಸದಲ್ಲಿ ತೊಡಗಿದ್ದಾರೆ.

  • ಸಿದ್ದರಬೆಟ್ಟದಲ್ಲಿ ಬಾಲಕನನ್ನ ರಕ್ಷಿಸಲು ಹೋದ ನಾಲ್ವರು ನೀರು ಪಾಲು

    ಸಿದ್ದರಬೆಟ್ಟದಲ್ಲಿ ಬಾಲಕನನ್ನ ರಕ್ಷಿಸಲು ಹೋದ ನಾಲ್ವರು ನೀರು ಪಾಲು

    ಬೆಂಗಳೂರು: ಕಲ್ಯಾಣಿಗೆ ಬಿದ್ದ ಬಾಲಕನನ್ನು ರಕ್ಷಿಸಲು ಹೋಗಿ ಬಾಲಕ ಸೇರಿದಂತೆ ಐವರು ಮೃತಪಟ್ಟಿರುವ ದಾರುಣ ಘಟನೆ ಬೆಂಗಳೂರು ಹೊರವಲಯದ ದಾಬಸ್‍ಪೇಟೆ ಬಳಿ ನಡೆದಿದೆ.

    ನೆಲಮಂಗಲ ತಾಲೂಕಿನ ಡಾಬಸ್ ಪೇಟೆ ಸಮೀಪವಿರುವ ಸಿದ್ದರಬೆಟ್ಟದ ಮೇಲಿನ ಕಲ್ಯಾಣಿಯಲ್ಲಿ ಈ ದುರ್ಘಟನೆ ನಡೆದಿದೆ. ಮುನೀರ್ ಖಾನ್(49), ಯಾರಬ್ (21), ರೇಷ್ಮಾ (22), ಮಾಬೀನ್ ರಾಜ್ (21) ಮತ್ತು ಉಸ್ಮಾನ್ (14) ಮೃತ ದುರ್ದೈವಿಗಳು. ಮೃತರು ಬೆಂಗಳೂರಿನ ಕೆಂಗೇರಿಯಿಂದ ಸಿದ್ದರಬೆಟ್ಟಕ್ಕೆ ಪೂಜೆಗೆ ಆಗಮಿಸಿದ್ದರು ಎಂದು ತಿಳಿದು ಬಂದಿದೆ.

    ಈ ಸಿದ್ದರಬೆಟ್ಟ ಹಿಂದೂ ಮತ್ತು ಮುಸ್ಲಿಂ ಐಕ್ಯತೆಯಾಗಿದ್ದು, ಎರಡು ಸಮುದಾಯದವರು ಬಂದು ಇಲ್ಲಿ ಪೂಜೆ ಸಲ್ಲಿಸುತ್ತಾರೆ. ಒಂದೇ ಕುಟುಂಬದವರು ಸಿದ್ದರಬೆಟ್ಟದ ಮೇಲಿನ ಕಲ್ಯಾಣಿಯಲ್ಲಿ ಪೂಜೆ ಮಾಡುವಾಗ ಉಸ್ಮಾನ್ ಕಾಲುಜಾರಿ ನೀರಿಗೆ ಬಿದ್ದಿದ್ದಾನೆ.

    ಬಾಲಕನನ್ನು ರಕ್ಷಿಸಲು ಒಬ್ಬರಂತೆ ಒಬ್ಬರು ಹೋಗಿ ಐವರು ಕಲ್ಯಾಣಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಕೆಲವು ದಿನಗಳಿಂದ ಮಳೆಯಾಗಿದ್ದರಿಂದ ಕಲ್ಯಾಣಿ ಸುತ್ತ ಪಾಚಿಯಾಗಿತ್ತು. ಹೀಗಾಗಿ ಬಾಲಕನನ್ನು ರಕ್ಷಿಸಲು ಹೋದವರು ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ ಎಂದು ಅಲ್ಲಿನ ಸ್ಥಳಿಯರು ಹೇಳಿದ್ದಾರೆ.

    ಮಾಹಿತಿ ತಿಳಿದು ಸ್ಥಳಕ್ಕೆ ಡಾಬಸ್ ಪೇಟೆ ಪೊಲೀಸರು ದೌಡಾಯಿಸಿ ಶವಗಳಿಗಾಗಿ ಹುಡುಕಾಟ ಮಾಡುತ್ತಿದ್ದಾರೆ. ಸದ್ಯಕ್ಕೆ ಐವರಲ್ಲಿ ಮೂವರ ಮೃತದೇಹ ಪತ್ತೆಯಾಗಿದ್ದು, ಉಳಿದ ಮೃತದೇಹಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

  • ಮೇಲುಕೋಟೆ ಕಲ್ಯಾಣಿಯಲ್ಲಿ ಹೆಚ್ಚುತ್ತಿರುವ ಮೃತರ ಸಂಖ್ಯೆ- ಇಂದು ಓರ್ವನ ಶವ ಪತ್ತೆ

    ಮೇಲುಕೋಟೆ ಕಲ್ಯಾಣಿಯಲ್ಲಿ ಹೆಚ್ಚುತ್ತಿರುವ ಮೃತರ ಸಂಖ್ಯೆ- ಇಂದು ಓರ್ವನ ಶವ ಪತ್ತೆ

    ಮಂಡ್ಯ: ವಿಶ್ವವಿಖ್ಯಾತ ಮೇಲುಕೋಟೆ ಕಲ್ಯಾಣಿಯಲ್ಲಿ ಮುಳುಗಿ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಇಂದು ಕೂಡ ಕಲ್ಯಾಣಿಯಲ್ಲಿ ಓರ್ವನ ಶವ ಪತ್ತೆಯಾಗಿದೆ.

    ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿದ್ದು, ಪ್ರತಿ ನಿತ್ಯ ಸಾವಿರಾರು ಜನ ಭಕ್ತರು ಇಲ್ಲಿಗೆ ಬಂದು ಕಲ್ಯಾಣಿಯಲ್ಲಿ ಪುಣ್ಯಸ್ನಾನ ಮಾಡುವುದು, ಕೈ-ಕಾಲು ಮುಖ ತೊಳೆಯುವುದು ಮಾಡುತ್ತಾರೆ.

    ಮೇಲುಕೋಟೆಯ ಸಂಸ್ಕೃತಿ ಸಂಶೋಧನಾಲಯದಲ್ಲಿ ನೌಕರನಾಗಿ ಕೆಲಸ ಮಾಡುತ್ತಿದ್ದ ರಮೇಶ್ ಎಂಬ ವ್ಯಕ್ತಿ ಭಾನುವಾರ ಸಂಜೆ ಪಂಚ ಕಲ್ಯಾಣಿಯಲ್ಲಿ ಕೈ-ಕಾಲು ಮುಖ ತೊಳೆಯಲು ಹೋಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಇಂದು ಅವರ ಶವ ಪತ್ತೆಯಾಗಿದೆ.

    ಕಲ್ಯಾಣಿಯ ಸುತ್ತ ಕಟ್ಟಿರುವ ಪಾಚಿಯಿಂದ ಕಾಲು ಜಾರಿ ಬಿದ್ದಿರುವ ಶಂಕೆ ವ್ಯಕ್ತವಾಗುತ್ತಿದೆ. ಕಲ್ಯಾಣಿಯಲ್ಲಿ ಮುಳುಗಿ ಮೃತಪಡುತ್ತಿರುವ ಪ್ರಕರಣಗಳು ಪದೇ ಪದೇ ಮರುಕಳಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಕಲ್ಯಾಣಿಯ ಸುತ್ತ ಸುರಕ್ಷಾ ಕ್ರಮ ಕೈಗೊಳ್ಳಬೇಕೆಂದು ಭಕ್ತರು ಆಗ್ರಹಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚಾಮುಂಡಿ ಬೆಟ್ಟದಲ್ಲಿ ಪುರಾತನ ಕಲ್ಯಾಣಿ ಪತ್ತೆ

    ಚಾಮುಂಡಿ ಬೆಟ್ಟದಲ್ಲಿ ಪುರಾತನ ಕಲ್ಯಾಣಿ ಪತ್ತೆ

    ಮೈಸೂರು: ಜಿಲ್ಲೆಯ ಚಾಮುಂಡಿ ಬೆಟ್ಟದಲ್ಲಿ ಪುರಾತನ ಕಲ್ಯಾಣಿಯೊಂದು ಪತ್ತೆಯಾಗಿದೆ.

    ಚಾಮುಂಡೇಶ್ವರಿ ದೇವಾಲಯದ ಹೊರ ಆವರಣದಲ್ಲಿ ಕಲ್ಯಾಣಿ ಪತ್ತೆಯಾಗಿದ್ದು, ಈ ಕಲ್ಯಾಣಿಯಲ್ಲಿ ಸುಮಾರು 15 ರಿಂದ 20 ಅಡಿ ಅಗಲದ 5 ಮೆಟ್ಟಿಲುಗಳನ್ನೊಳಗೊಂಡಿದೆ. ಸ್ಥಳೀಯರು ಕಾಮಗಾರಿ ನಡೆಸುವ ವೇಳೆ ಈ ಕಲ್ಯಾಣಿ ಪತ್ತೆಯಾಗಿದೆ.

    ಚಾಮುಂಡೇಶ್ವರಿ ದೇವಾಲಯದ ಹೊರ ಆವರಣದಲ್ಲಿ ಸ್ಥಳೀಯರು ಕಾಮಗಾರಿ ಕೆಲಸವನ್ನು ಮಾಡುತ್ತಿದ್ದರು. ಆಗ ಅವರಿಗೆ ಕಲ್ಯಾಣಿ ಮೆಟ್ಟಿಲು ಕಂಡು ಬಂದಿದೆ. ಬಳಿಕ ಸಂಪೂರ್ಣವಾಗಿ ಅದರಲ್ಲಿ ಹೂಳು , ಮಣ್ಣು ತೆಗೆದು ಶೂಚಿಗೊಳಿಸಿದ್ದಾರೆ. ಆಗ ಐದು ಮೆಟ್ಟಿಲುಗಳು ಇರುವ ಕಲ್ಯಾಣಿ ಪತ್ತೆಯಾಗಿದೆ. ತಕ್ಷಣ ಈ ಬಗ್ಗೆ ದೇವಾಲಯಕ್ಕೆ ತಿಳಿಸಿದ್ದಾರೆ. ಪುರಾತನ ಕಲ್ಯಾಣಿ ಪತ್ತೆಯಾದ ಬಗ್ಗೆ ತಿಳಿದು ಜನರು, ಭಕ್ತರು ಕಲ್ಯಾಣಿಯನ್ನು ನೋಡಲು ಮುಗಿಬೀಳುತ್ತಿದ್ದಾರೆ.

    ಅಷ್ಟೇ ಅಲ್ಲದೇ ಕಲ್ಯಾಣಿ ಪತ್ತೆಯ ಬಗ್ಗೆ ಪುರಾತತ್ವ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಇಲಾಖೆ ಅಧಿಕಾರಿಗಳು ಬಂದು ಕಲ್ಯಾಣಿಯ ಪರಿಶೀಲನೆಯಲ್ಲಿ ತೊಡಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv