Tag: Kalyana Karnataka

  • ಕಲ್ಯಾಣ ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಬಳ್ಳಾರಿಯಲ್ಲಿ ಸ್ಥಾಪನೆಯಾಗುತ್ತಿದೆ ತಾಯಿ ಎದೆಹಾಲಿನ ಬ್ಯಾಂಕ್

    ಕಲ್ಯಾಣ ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಬಳ್ಳಾರಿಯಲ್ಲಿ ಸ್ಥಾಪನೆಯಾಗುತ್ತಿದೆ ತಾಯಿ ಎದೆಹಾಲಿನ ಬ್ಯಾಂಕ್

    – ಅವಧಿಪೂರ್ವ ಜನನ, ಅಪೌಷ್ಟಿಕತೆ ಹಾಗೂ ಕಡಿಮೆ ತೂಕದ ಮಕ್ಕಳಿಗೆ ಅನುಕೂಲ
    – 75 ಲಕ್ಷ ರೂ. ಅನುದಾನದಲ್ಲಿ ನಿರ್ಮಾಣಗೊಳ್ಳುತ್ತಿದೆ ಅಮೃತಧಾರೆ

    ಬಳ್ಳಾರಿ: ಅವಧಿ ಪೂರ್ವ ಹೆರಿಗೆ, ಕಡಿಮೆ ತೂಕ ಹಾಗೂ ಆನಾರೋಗ್ಯ ಪೀಡಿತ ಶಿಶುಗಳಿಗೆ ಎದುರಾಗುವ ತಾಯಿಯ ಎದೆಹಾಲಿನ (Breast Milk) ಕೊರತೆ ನೀಗಿಸಲು ಅಮೃತಧಾರೆ (Amruthadhare) ಹೆಸರಿನಡಿ ಕಲ್ಯಾಣ ಕರ್ನಾಟಕ (Kalyana Karnataka) ಭಾಗದಲ್ಲಿ ಮೊಟ್ಟ ಮೊದಲ ಬಾರಿ ಬಳ್ಳಾರಿ (Ballari) ವೈದ್ಯಕೀಯ ಮಹಾ ವಿದ್ಯಾಲಯ ಹಾಗೂ ಸಂಶೋಧನಾ ಕೇಂದ್ರದಲ್ಲಿ ಹಾಲಿನ ಬ್ಯಾಂಕ್‌ ಸ್ಥಾಪಿಸಲು ಭರದ ಸಿದ್ಧತೆ ನಡೆದಿದೆ.

    ಬಳ್ಳಾರಿ ವಿಮ್ಸ್‌ನಲ್ಲಿ ನಿತ್ಯ 25-30 ಹೆರಿಗೆಗಳಾಗುತ್ತಿದ್ದು, ತಾಯಿ ಮತ್ತು ಮಕ್ಕಳಿಗೆ ಪ್ರತ್ಯೇಕ ಚಿಕಿತ್ಸಾ ಸೌಲಭ್ಯ ನೀಡಲಾಗುತ್ತಿದೆ. ಹಲವು ಸೌಲಭ್ಯಗಳ ಮಧ್ಯೆ ಕಡಿಮೆ ತೂಕ, ಅವಧಿ ಪೂರ್ವ ಹಾಗೂ ಅನಾರೋಗ್ಯ ಶಿಶುಗಳ ಜನನ ಸಾಮಾನ್ಯವಾಗಿದೆ. ಇಂಥ ಮಕ್ಕಳು ತಾಯಿಯ ಎದೆಹಾಲಿನ ಕೊರತೆ ಎದುರಿಸುವುದನ್ನು ತಡೆಯುವ ದೂರದೃಷ್ಟಿಯಿಂದ ಹಾಲಿನ ಬ್ಯಾಂಕ್ ಸ್ಥಾಪನೆಗೆ ಯೋಜಿಸಲಾಗಿದೆ. ಇದನ್ನೂ ಓದಿ: ಪರಿಶೀಲನೆ ವೇಳೆ 802 ಬಾಟಲಿ ಮದ್ಯ ನಾಪತ್ತೆ ಅಧಿಕಾರಿಗಳ ಬಳಿ ಇಲಿಗಳು ಕುಡಿದಿವೆ ಎಂದ ವ್ಯಾಪಾರಿಗಳು!

    ಬಳ್ಳಾರಿ ಮಹಾನಗರ ಪಾಲಿಕೆಯಿಂದ 25 ಲಕ್ಷ ರೂ. ಹಾಗೂ ಜಿಲ್ಲಾಡಳಿತದ 50 ಲಕ್ಷ ರೂ. ಸೇರಿ ಒಟ್ಟು 75 ಲಕ್ಷ ರೂ. ಅನುದಾನದಲ್ಲಿ ಹಾಲಿನ ಬ್ಯಾಂಕ್‌ (Breast Milk Bank) ನಿರ್ಮಾಣ ಕೈಗೊಂಡಿದ್ದು ಕಾಮಗಾರಿ ಅಂತಿಮ ಹಂತದಲ್ಲಿದೆ. ಈ ಬ್ಯಾಂಕ್ ಒಟ್ಟು 510 ಬಾಟಲ್‌ಗಳಲ್ಲಿ ಹಾಲು ಸಂಗ್ರಹ ಸಾಮರ್ಥ್ಯ ಹೊಂದಿದೆ.

    ಕಲ್ಯಾಣ ಕರ್ನಾಟಕದಲ್ಲೇ ಹೆಚ್ಚು ಅಪೌಷ್ಟಿಕತೆ, ಅವಧಿ ಪೂರ್ವ ಹೆರಿಗೆ, ಕಡಿಮೆ ತೂಕ ಹಾಗೂ ಅನಾರೋಗ್ಯ ಪೀಡಿತ ಮಕ್ಕಳ ಜನನ ಸೇರಿ ಇತರ ಕಾರಣಗಳಿಂದ ಈ ಭಾಗದ ಜಿಲ್ಲೆಗಳ ಮಕ್ಕಳಲ್ಲಿ ಅಪೌಷ್ಟಿಕತೆ ತೀವ್ರವಾಗಿ ಕಾಡುತ್ತದೆ. ಹೆರಿಗೆ ಸಂದರ್ಭದಲ್ಲಿ ಮಕ್ಕಳಿಗೆ ಎದುರಾಗುವ ತಾಯಿ ಹಾಲಿನ ಕೊರತೆ ನೀಗಿಸಲು ರಾಜ್ಯದಲ್ಲಿರುವ ಬೆರಳೆಣಿಕೆಯಷ್ಟು ಹಾಲಿನ ಬ್ಯಾಂಕ್‌ ಗಳಿಗೆ ತೆರಳಲಾಗದ ಪಾಲಕರು ಹಸುವಿನ ಹಾಲು, ಗಂಜಿಯ ಮೊರೆ ಹೋಗುವುದು ಸಾಮಾನ್ಯವಾಗಿದೆ. ಇದನ್ನೂ ಓದಿ: ಒಂದು ಬೈಕ್ ಐದು ಕಾರುಗಳ ನಡುವೆ ಭೀಕರ ಸರಣಿ ಅಪಘಾತ ಪಾರಾದ ಸವಾರ

    ತಾಯಿ ಹಾಲಿನ ದಾನಕ್ಕೂ ಅವಕಾಶ
    ಹಾಲುಣಿಸುವ ಮಹಿಳೆಯರು ತಮ್ಮ ಹೆಚ್ಚುವರಿ ಹಾಲನ್ನು ದಾನ ಮಾಡಲು ಸಿದ್ಧರಿದ್ದರೆ ಈ ಬ್ಯಾಂಕ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಜನಿಸಿದ ಮಗು ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದರೆ ಅಥವಾ ಅಸುನೀಗಿದರೆ ಅಂತಹ ತಾಯಿ ಹಾಲನ್ನು ದಾನ ಮಾಡಬಹುದಾಗಿದೆ. ಹೀಗೆ ಸಂಗ್ರಹಿಸಿದ ಹಾಲನ್ನು ಸುರಕ್ಷಿತವಾಗಿ ಇರಿಸಲು ವಿಮ್ಸ್‌ನಲ್ಲಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

  • ಬರಿದಾದ ತುಂಗಭದ್ರಾ; ಕಲ್ಯಾಣ ಕರ್ನಾಟಕ, ಆಂಧ್ರ-ತೆಲಂಗಾಣದ ಜಿಲ್ಲೆಗಳಿಗೆ ನೀರಿನ ಅಭಾವ ಸಾಧ್ಯತೆ

    ಬರಿದಾದ ತುಂಗಭದ್ರಾ; ಕಲ್ಯಾಣ ಕರ್ನಾಟಕ, ಆಂಧ್ರ-ತೆಲಂಗಾಣದ ಜಿಲ್ಲೆಗಳಿಗೆ ನೀರಿನ ಅಭಾವ ಸಾಧ್ಯತೆ

    ಬಳ್ಳಾರಿ: ಮೂರು ರಾಜ್ಯ 8 ಜಿಲ್ಲೆಗಳ ಜೀವನಾಡಿ ತುಂಗಭದ್ರಾ ಜಲಾಶಯ (Tungabhadra Reservoir) ಬತ್ತಿ ಬರಿದಾಗಿದ್ದು ಜಲಾಶಯದ ವ್ಯಾಪ್ತಿಯ ರೈತರಿಗೆ ಇದೀಗ ಆತಂಕ ಶುರುವಾಗಿದೆ.

    105 ಟಿಎಂಸಿ ಸಾಮರ್ಥ್ಯದ ತುಂಗಭದ್ರಾ ಜಲಾಶಯದಲ್ಲೀಗ ಕೇವಲ 5 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದೆ. 3 ಟಿಎಂಸಿ ಡೆಡ್ ಸ್ಟೋರೇಜ್ ಇರೋ ಜಲಾಶಯದಲ್ಲೀಗ ಕೇವಲ 2 ಟಿಎಂಸಿ ನೀರು ಮಾತ್ರ ಹೆಚ್ಚುವರಿ ಇದ್ದು, ಆ 2 ಟಿಎಂಸಿ ನೀರಿನಲ್ಲಿಯೇ ಇನ್ನೊಂದು ತಿಂಗಳು ಕುಡಿಯುವ ನೀರು ಪೂರೈಕೆ ಮಾಡಬೇಕಾದ ಅನಿವಾರ್ಯತೆ ಇದೆ. ಇದನ್ನೂ ಓದಿ: ಮನೆ ಮಾಲೀಕನ ಪತ್ನಿಯನ್ನೇ ಲವ್ ಮಾಡಿ ಮದುವೆಯಾಗಿದ್ದ ವ್ಯಕ್ತಿಯ ಬರ್ಬರ ಹತ್ಯೆ!

    ಕಲ್ಯಾಣ ಕರ್ನಾಟಕದ ಜಿಲ್ಲೆಗಳಾದ ವಿಜಯನಗರ, ಬಳ್ಳಾರಿ, ಕೊಪ್ಪಳ, ರಾಯಚೂರು ನಾಲ್ಕು ಜಿಲ್ಲೆಗಳು ಸೇರಿದಂತೆ ಆಂಧ್ರ ಹಾಗೂ ತೆಲಂಗಾಣ ರಾಜ್ಯದ ಒಟ್ಟು 8 ಜಿಲ್ಲೆಗಳಿಗೆ ಇದೇ ಜಲಾಶಯದ ನೀರು ಅನಿವಾರ್ಯ. ಆದರೆ ನಿರೀಕ್ಷೆಯಂತೆ ಮಳೆ ಆಗದೇ ಕಲ್ಯಾಣ ಕರ್ನಾಟಕದ ನಾಲ್ಕೂ ಜಿಲ್ಲೆಗಳು ಸೇರಿದಂತೆ 8 ಜಿಲ್ಲೆಗಳಿಗೆ ನೀರಿನ ಹಾಹಾಕಾರ ಶುರುವಾಗೋದು ಗ್ಯಾರಂಟಿ ಎನ್ನಲಾಗಿದೆ. ಹೀಗಾಗಿ ಇರುವ ನೀರನ್ನ ಮ್ಯಾನೇಜ್ ಮಾಡಿ ಬಳಕೆ ಮಾಡೋದೇ ಟಿಬಿ ಬೋರ್ಡ್‌ಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.‌ ಇದನ್ನೂ ಓದಿ: ಉಗ್ರರ ದಾಳಿ ಬಳಿಕ ಕಾಶ್ಮೀರಕ್ಕೆ ಭೇಟಿ ನೀಡಿದ ಅತುಲ್ ಕುಲಕರ್ಣಿ

  • ರಣ ಬಿಸಿಲು – ಕಿತ್ತೂರು, ಕಲ್ಯಾಣ ಕರ್ನಾಟಕದ 8 ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿ ಸಮಯ ಬದಲಾವಣೆ

    ರಣ ಬಿಸಿಲು – ಕಿತ್ತೂರು, ಕಲ್ಯಾಣ ಕರ್ನಾಟಕದ 8 ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿ ಸಮಯ ಬದಲಾವಣೆ

    – ಬೆಳಗ್ಗೆ 8ರಿಂದ ಮಧ್ಯಾಹ್ನ 1:30ರ ತನಕ ಕೆಲಸ

    ಬೆಂಗಳೂರು: ಬಿಸಿಲಿನ ತಾಪಮಾನದ ಕಾರಣಕ್ಕಾಗಿ ಕಿತ್ತೂರು (Kittur) ಕರ್ನಾಟಕದ ಎರಡು ಜಿಲ್ಲೆಗಳು, ಕಲ್ಯಾಣ ಕರ್ನಾಟಕದ (Kalyana Karnataka) 6 ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿ (Govt Office) ಕೆಲಸದ ಸಮಯ ಬದಲಾವಣೆ ಮಾಡಲಾಗಿದೆ.

    ಕಲಬುರಗಿ ವಿಭಾಗದ 6 ಜಿಲ್ಲೆಗಳು, ಬೆಳಗಾವಿ ವಿಭಾಗದ ಎರಡು ಜಿಲ್ಲೆಗಳಲ್ಲಿ ಸರ್ಕಾರಿ ಕೆಲಸದ ಸಮಯ ಬದಲಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಬೆಳಗ್ಗೆ 8ರಿಂದ ಮಧ್ಯಾಹ್ನ 1:30ರ ತನಕ ಸರ್ಕಾರಿ ಕಚೇರಿಗಳ ಕೆಲಸದ ಸಮಯ ನಿಗದಿ ಮಾಡಿದ್ದು, ಏಪ್ರಿಲ್, ಮೇ ತಿಂಗಳ ಅಂತ್ಯದ ತನಕವೂ ಸರ್ಕಾರಿ ಕಚೇರಿ ಸಮಯ ಬದಲಾವಣೆ ಜಾರಿಯಲ್ಲಿ ಇರಲಿದೆ. ಇದನ್ನೂ ಓದಿ: ನಾಳೆ ಹೈಕಮಾಂಡ್ ಮುಂದೆ ವರದಿ ಕೊಡಲಿರುವ ಸಿಎಂ ಸಿದ್ದರಾಮಯ್ಯ: ರಾಜಣ್ಣ ಹನಿಟ್ರ್ಯಾಪ್ ಕೇಸ್‌ಗೆ ಎಳ್ಳುನೀರು?

    ಕಲಬುರಗಿ, ಬೀದರ್, ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು, ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿ ಸಮಯ ಬದಲಾವಣೆ ಆಗಲಿದೆ. ರಾಜ್ಯ ಸರ್ಕಾರಿ ನೌಕರರ ಸಂಘದ ಮನವಿ ಮೇರೆಗೆ ಸರ್ಕಾರದ ಆದೇಶ ಹೊರಬಿದ್ದಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ| ಶ್ರೀನಿವಾಸ ಸಾಗರ ಜಲಾಶಯದಲ್ಲಿ ಮುಳುಗಿ ಮೂವರು ದುರ್ಮರಣ

    8 ಜಿಲ್ಲೆಗಳಲ್ಲಿ ಸರ್ಕಾರಿ ನೌಕರರು ಬದಲಾದ ಸಮಯದಲ್ಲಿ ತಮ್ಮ ಕರ್ತವ್ಯವನ್ನು ಎಂದಿನಂತೆ ಯಾವುದೇ ಲೋಪ/ಅಡೆತಡೆಯಿಲ್ಲದೆ ಕರ್ತವ್ಯ ನಿರ್ವಹಿಸತಕ್ಕದ್ದು. ಸಾರ್ವಜನಿಕರಿಗೆ ಯಾವುದೇ ರೀತಿ ಅನಾನುಕೂಲ ಆಗದಂತೆ ಮತ್ತು ಜಿಲ್ಲಾಧಿಕಾರಿಗಳು/ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ತುರ್ತು ಸಂದರ್ಭದಲ್ಲಿ ಯಾವುದೇ ಕಾರ್ಯವನ್ನು ನಿರ್ವಹಿಸಲು ನಿರ್ದೇಶಿಸಿದಲ್ಲಿ ಕರ್ತವ್ಯ ನಿರ್ವಹಿಸತಕ್ಕದ್ದು ಎಂಬ ಷರತ್ತನ್ನು ಸಹ ಹಾಕಲಾಗಿದೆ. ಇದನ್ನೂ ಓದಿ: ಗದಗ| ಬೀದಿ ನಾಯಿಗಳ ದಾಳಿ – ಮಹಿಳೆಗೆ ಗಂಭೀರ ಗಾಯ

  • ಕಲಬುರಗಿಯಲ್ಲಿ ದಶಕದ ಬಳಿಕ ಸಚಿವ ಸಂಪುಟ ಸಭೆ- 11,770 ಕೋಟಿ ರೂ. ಅನುದಾನಕ್ಕೆ ಸಂಪುಟ ಅಸ್ತು

    ಕಲಬುರಗಿಯಲ್ಲಿ ದಶಕದ ಬಳಿಕ ಸಚಿವ ಸಂಪುಟ ಸಭೆ- 11,770 ಕೋಟಿ ರೂ. ಅನುದಾನಕ್ಕೆ ಸಂಪುಟ ಅಸ್ತು

    ಕಲಬುರಗಿ: ಕಲ್ಯಾಣ ಕರ್ನಾಟಕದ (Kalyana Karnataka) ಉತ್ಸವದ ದಿನದಂದೇ ಆ ಭಾಗಕ್ಕೆ ಕಾಂಗ್ರೆಸ್ (Congress) ಸರ್ಕಾರ ಬಿಗ್ ಗಿಫ್ಟ್ ನೀಡಿದೆ. ಕಲಬುರಗಿಯಲ್ಲಿ (Kalaburagi) ದಶಕದ ಬಳಿಕ ಸಂಪುಟ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ (CM Siddaramaiah) ಹಲವು ಮಹತ್ವದ ನಿರ್ಣಯಗಳನ್ನು ಕೈಗೊಂಡಿದ್ದಾರೆ.

    ಇಂದು ಚರ್ಚೆಯಾದ ಒಟ್ಟು 56 ವಿಷಯಗಳ ಪೈಕಿ 46 ಕಲ್ಯಾಣ ಕರ್ನಾಟಕಕ್ಕೆ ಸಂಬಂಧಪಟ್ಟಿವೆ. ಸುಮಾರು 12,692 ಕೋಟಿ ಪೈಕಿ ಈ ಭಾಗಕ್ಕೆ 11,770 ಕೋಟಿ ಅನುದಾನ ನೀಡಲಾಗಿದೆ. ಬೀದರ್ ಹಾಗು ರಾಯಚೂರು ಪಟ್ಟಣಗಳನ್ನ ಮಹಾನಗರ ಪಾಲಿಕೆಗಳನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಕಲ್ಯಾಣ ಕರ್ನಾಟಕದ ಪ್ರತ್ಯೇಕ ಸಚಿವಾಲಯಕ್ಕೆ ಅನುಮೋದನೆ ಕೊಡಲಾಗಿದೆ. ಇದನ್ನೂ ಓದಿ: ಲೆಬನಾನ್‌ನಲ್ಲಿ ಹಿಜ್ಬುಲ್ಲಾ ಸದಸ್ಯರ ಮೇಲೆ ದಾಳಿ, ಸಾವಿರಾರು ಪೇಜರ್‌ ಸ್ಫೋಟ – 8 ಸಾವು, 2 ಸಾವಿರಕ್ಕೂ ಹೆಚ್ಚು ಮಂದಿ ಗಂಭೀರ ಗಾಯ

    ಬೀದರ್-ಕಲಬುರಗಿ ಜನವಸತಿ ಪ್ರದೇಶದ ಕುಡಿಯುವ ನೀರಿಗಾಗಿ 7200 ಕೋಟಿ ವೆಚ್ಚ ಮಾಡಲು ಸಂಪುಟ ಅನುಮತಿ ನೀಡಿದೆ. ಇದರಲ್ಲಿ ಕೇಂದ್ರ ಸರ್ಕಾರ ಅರ್ಧ ಪಾಲನ್ನು ಭರಿಸಲಿದೆ. ಅನುಭವ ಮಂಟಪದಿಂದ ಅಂಜನಾದ್ರಿ ಬೆಟ್ಟದವರೆಗೆ ಇರುವ ಪ್ರವಾಸೋದ್ಯಮ ಸ್ಮಾರಕ ಉಳಿಸಿ ಅಭಿವೃದ್ಧಿ ಮಾಡಲು ಸಂಪುಟ ಒಪ್ಪಿಗೆ ನೀಡಿದೆ. ತುಂಬಿದ ತುಂಗಭದ್ರಾ ಜಲಾಶಯಕ್ಕೆ ಸೆಪ್ಟೆಂಬರ್ 22ರಂದು ಸಿಎಂ ಬಾಗೀನ ಅರ್ಪಿಸಲಿದ್ದಾರೆ. ಅದೇ ದಿನ, ಡ್ಯಾಂ ನಲ್ಲಿ ನೀರುಳಿಯುವಂತೆ ಮಾಡಿದ ತಂತ್ರಜ್ಞರನ್ನು ಸಮ್ಮಾನಿಸಲಿದ್ದಾರೆ. ಇದನ್ನೂ ಓದಿ: ಮುತಾಲಿಕ್‌ನ ನಾನು ಕೇರ್ ಮಾಡಲ್ಲಾ, ಅವನಿಗೆ ಬೆಂಕಿ ಹಚ್ಚೋದು ಬಿಟ್ಟರೆ ಬೇರೇನು ಗೊತ್ತಿಲ್ಲ: ಪ್ರಸಾದ್ ಅಬ್ಬಯ್ಯ

    ಈ ಬಗ್ಗೆ ಸಿಎಂ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗ ಅಭಿವೃದ್ಧಿಯಾಗದ ಹೊರತು ರಾಜ್ಯದ ಅಭಿವೃಧ್ಧಿ ಅಸಾಧ್ಯ. ಇಲ್ಲಿನ ಜನರ ತಲಾದಾಯ ವೃದ್ಧಿ ಜೊತೆಗೆ ಶಿಕ್ಷಣ, ಆರೋಗ್ಯ, ಮೂಲಸೌಕರ್ಯ ಸುಧಾರಣೆ ಸೇರಿದಂತೆ ಸರ್ವಾಂಗೀಣ ಅಭಿವೃದ್ಧಿ ನಮ್ಮ ಗುರಿಯಾಗಿದ್ದು, ದೇಶದ ಏಕತೆ ಮತ್ತು ಸಮಗ್ರತೆ ಕಾಪಾಡಲು ಬದ್ಧರಾಗಿ ದೃಢಸಂಕಲ್ಪ ಮಾಡುವುದರ ಮೂಲಕ ನವ ಭಾರತ ಮತ್ತು ನವ ಕರ್ನಾಟಕ ನಿರ್ಮಿಸೋಣ ಎಂದರು. ಇದನ್ನೂ ಓದಿ: ಮುತಾಲಿಕ್‌ನ ನಾನು ಕೇರ್ ಮಾಡಲ್ಲಾ, ಅವನಿಗೆ ಬೆಂಕಿ ಹಚ್ಚೋದು ಬಿಟ್ಟರೆ ಬೇರೇನು ಗೊತ್ತಿಲ್ಲ: ಪ್ರಸಾದ್ ಅಬ್ಬಯ್ಯ

    ಮೆಗಾ ಟೆಕ್ಸ್ಟೈಲ್, ಸ್ಮಾರ್ಟ್ ಸಿಟಿ:
    ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕಲಬುರಗಿ ತಾಲೂಕಿನ ನದಿಸಿನ್ನೂರ-ಹೊನ್ನಕಿರಣಗಿ ಬಳಿ 1,000 ಎಕರೆ ಪ್ರದೇಶದಲ್ಲಿ ಪಿ.ಪಿ.ಪಿ. ಮಾದರಿಯಲ್ಲಿ ಮೆಗಾ ಟೆಕ್ಸಟೈಲ್ ಪಾರ್ಕ್ಗನ್ನು ಸ್ಥಾಪಿಸಲಾಗುತ್ತಿದೆ. ಈ ಯೋಜನೆಗೆ ಪೂರಕವಾದ ಮೂಲ ಸೌಕರ್ಯಕ್ಕಾಗಿ 50 ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಗುತ್ತಿದ್ದು, ಇದರಿಂದ 1 ಲಕ್ಷ ಜನರಿಗೆ ನೇರ ಹಾಗೂ 2 ಲಕ್ಷ ಜನರಿಗೆ ಪರೋಕ್ಷ ಉದ್ಯೋಗ ಸೃಷ್ಟಿಯಾಗಲಿದೆ. ರಾಜ್ಯ ಸರ್ಕಾರದಿಂದಲೇ ಸುಮಾರು 1,685 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕಲಬುರಗಿ ನಗರವನ್ನು ಸ್ಮಾರ್ಟ್ ಸಿಟಿಯನ್ನಾಗಿ ಅಭಿವೃದ್ಧಿಪಡಿಸಲು ಯೋಚಿಸಲಾಗುತ್ತಿದೆ ಎಂದು ಹೇಳಿದರು.

    ಏಮ್ಸ್‌ಗೆ ಅಗತ್ಯ ನೆರವು:
    ರಾಯಚೂರಿನಲ್ಲಿ ಏಮ್ಸ್ ಸಂಸ್ಥೆಯನ್ನು ಸ್ಥಾಪಿಸಲು ನಮ್ಮ ಸರ್ಕಾರವು ಅಗತ್ಯವಿರುವ ಎಲ್ಲ ನೆರವನ್ನು ಒದಗಿಸಲು ಸಿದ್ಧವಿದೆ. ಕೇಂದ್ರ ಸರ್ಕಾರವು ಕೂಡಲೆ ಏಮ್ಸ್ ಸಂಸ್ಥೆ ಪ್ರಾರಂಭಿಸಲು ಕ್ರಮ ವಹಿಸಬೇಕೆಂದು ಒತ್ತಾಯಿಸಿ, ರಾಜ್ಯದಲ್ಲಿ ಈಗಾಗಲೇ ನಾಲ್ಕು ಜಿಲ್ಲೆಗಳಲ್ಲಿ ಹ್ಯೂಮನ್ ಮಿಲ್ಕ್ ಬ್ಯಾಂಕ್ ಘಟಕಗಳನ್ನು ಸ್ಥಾಪಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಹೊಸ ಘಟಕಗಳನ್ನು ಸ್ಥಾಪಿಸಲಾಗುವುದು ಎಂದು ನುಡಿದರು. ಇದನ್ನೂ ಓದಿ: ಬ್ರಿಟಿಷರಂತೆ ಕಾಂಗ್ರೆಸ್‌ – ಸಿಜೆಐ ನಿವಾಸದಲ್ಲಿ ಗಣೇಶ ಪೂಜೆಗೆ ಹೋಗಿದ್ದನ್ನು ಟೀಕಿಸಿದವರಿಗೆ ಮೋದಿ ತಿರುಗೇಟು

    ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳ ವ್ಯಾಪ್ತಿಯ 18 ಹೊಸ ತಾಲೂಕುಗಳಲ್ಲಿ ಕಂದಾಯ ಇಲಾಖೆ ಮತ್ತು ಮಂಡಳಿಯ ಸಹಭಾಗಿತ್ವದಲ್ಲಿ ತಾಲ್ಲೂಕು ಆಡಳಿತ ಭವನಗಳನ್ನು (ಮಿನಿ ವಿಧಾನ ಸೌಧ) ನಿರ್ಮಾಣ ಮಾಡಲು ಮಂಡಳಿಯಿಂದ 130 ಕೋಟಿ ರೂ.ವೆಚ್ಚ ಮಾಡಲಾಗುತ್ತಿದೆ. ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಚಿಕ್ಕಲಪರ್ವಿ ಹತ್ತಿರ ತುಂಗಭದ್ರಾ ನದಿಗೆ ಅಡ್ಡಲಾಗಿ ಬ್ರಿಡ್ಜ್ ಕಂ ಬ್ಯಾರೇಜ್ 397 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲು ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಪಬ್ಲಿಕ್ ಟಿವಿ ಸಂಸ್ಥೆ ವಿರುದ್ಧ ಇಲ್ಲಸಲ್ಲದ ಆರೋಪಕ್ಕೆ ಕಾನೂನು ಕ್ರಮ

  • ಕಲ್ಯಾಣ ಕರ್ನಾಟಕ ಉತ್ಸವವನ್ನು ಜನೋತ್ಸವವನ್ನಾಗಿ ಆಚರಿಸಿ: ಪ್ರಿಯಾಂಕ್‌ ಖರ್ಗೆ

    ಕಲ್ಯಾಣ ಕರ್ನಾಟಕ ಉತ್ಸವವನ್ನು ಜನೋತ್ಸವವನ್ನಾಗಿ ಆಚರಿಸಿ: ಪ್ರಿಯಾಂಕ್‌ ಖರ್ಗೆ

    ಬೆಂಗಳೂರು: ಸೆ.17 ರಂದು ಕಲ್ಯಾಣ ಕರ್ನಾಟಕ (Kalyana Karnataka) ಉತ್ಸವವನ್ನು ಜನೋತ್ಸವವನ್ನಾಗಿ ಆಚರಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ (Priyank Kharge) ಹೇಳಿದರು.

    ಬೆಂಗಳೂರಿನ ವಿಕಾಸಸೌಧದಲ್ಲಿ ಸಚಿವರು, ಜನಪ್ರತಿನಿಧಿಗಳೊಂದಿಗೆ ಕಲಬುರಗಿ ಜಿಲ್ಲಾಡಳಿತ ಹಾಗೂ ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿಯ ಅಧಿಕಾರಿಗಳೊಂದಿಗೆ ನಡೆಸಿದ ವೀಡಿಯೋ ಸಭೆಯಲ್ಲಿ ಮಾತನಾಡಿದ ಸಚಿವರು ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಕಾರಣವಾದ 371 ಜೆ ಅಸ್ಥಿತ್ವಕ್ಕೆ ಬಂದು ಹತ್ತು ವರ್ಷಗಳು ಸಂದ ಸಂದರ್ಭದಲ್ಲಿ ದಶಮಾನೋತ್ಸವವನ್ನು ಆಚರಿಸುತ್ತಿರುವುದರಿಂದ ಈ ಬಾರಿಯ ಉತ್ಸವವನ್ನು ಅರ್ಥಗರ್ಭಿತವಾಗಿ ಆಚರಿಸಲು ಕಾರ್ಯಕ್ರಮಗಳನ್ನು ರೂಪಿಸುವಂತೆಯೂ ಹೇಳಿದರು. ಇದನ್ನೂ ಓದಿ: ಬಿಲ್‌ ಬಂದ 30 ದಿನದೊಳಗೆ ಶುಲ್ಕ ಪಾವತಿಸದಿದ್ದಲ್ಲಿ, ಗ್ರಾಹಕರ ವಿದ್ಯುತ್‌ ಸಂಪರ್ಕ ಕಡಿತ: ಬೆಸ್ಕಾಂ

    ಸೆ.17 ರಂದು ಮುಖ್ಯಮಂತ್ರಿಗಳು ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದ ಸಚಿವರು, ಸ್ಥಳೀಯ ಪಾರಂಪರಿಕ ಜಾನಪದ ಕಲೆಗಳೊಂದಿಗೆ ಕರ್ನಾಟಕದ ವೈವಿಧ್ಯಮಯ ಜಾನಪದ ಕಲೆಗಳನ್ನು ಒಟ್ಟುಗೂಡಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಾದರ ಪಡಿಸಲು ಅಧಿಕಾರಿಗಳಿಗೆ ಸೂಚಿಸಿದರು.

    ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಅಜಯ್‌ಸಿಂಗ್‌ ಮಾತನಾಡಿ, 371 ಜೆ ಅಸ್ಥಿತ್ವಕ್ಕೆ ಬಂದು ಹತ್ತು ವರ್ಷಗಳು ಪೂರ್ಣಗೊಂಡಿದೆ. ಒಂದು ದಶಕದ ಅವಧಿಯಲ್ಲಿ ಈ ಪ್ರದೇಶದಲ್ಲಿ ಅಭಿವೃದ್ಧಿ ಕಾಣುತ್ತಿದ್ದೇವೆ. ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಇದಕ್ಕೆ ಪ್ರಮುಖ ಕಾರಣಕರ್ತರಾಗಿದ್ದು, ಅವರನ್ನು ಉತ್ಸವದ ಸಂದರ್ಭದಲ್ಲಿ ಅದ್ದೂರಿಯಾಗಿ ಸನ್ಮಾನ ಮಾಡಬೇಕೆಂದು ಹೇಳಿದರು. ಇದನ್ನೂ ಓದಿ: ಸಚಿವರ ಜೊತೆ ಕಂಪನಿಯ ನಿಯೋಗದ ಭೇಟಿ; ವಿಜಯಪುರ ಜಿಲ್ಲೆಯಲ್ಲಿ ಕೆನಡಾದ ವಿಟೆರಾದಿಂದ 250 ಕೋಟಿ ಹೂಡಿಕೆ: ಎಂ.ಬಿ.ಪಾಟೀಲ್

    ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌, ಲೋಕಸಭಾ ಸದಸ್ಯ ರಾಧಾಕೃಷ್ಣ ದೊಡ್ಡಮನಿ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಿ.ಆರ್.ಪಾಟೀಲ್‌, ಶಾಸಕರಾದ ಎಂ.ವೈ.ಪಾಟೀಲ್, ಜಗದೇವ ಗುತ್ತೇದಾರ್‌, ಅಲ್ಲಮಪ್ರಭು ಪಾಟೀಲ್‌, ತಿಪ್ಪಣ್ಣಪ್ಪ ಕಮಕನೂರ್‌, ಖನಿಜಾ ಫಾತಿಮಾ ಭಾಗವಹಿಸಿದ್ದರು. ಕಲಬುರಗಿ ಪ್ರಾದೇಶಿಕ ಆಯುಕ್ತ ಕೃಷ್ಣ ಭಾಜವೇಯಿ, ಜಿಲ್ಲಾಧಿಕಾರಿ ಫೌಜಿಯಾ ತನರನುಮ್‌, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಭಂವರ್‌ ಸಿಂಗ್‌, ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಸಭೆಯಲ್ಲಿ ಪಾಲ್ಗೊಂಡಿದ್ದರು.

  • ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಧ್ವಜಾರೋಹಣಕ್ಕೆ ಯತ್ನ – ಹಲವರ ಬಂಧನ

    ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಧ್ವಜಾರೋಹಣಕ್ಕೆ ಯತ್ನ – ಹಲವರ ಬಂಧನ

    ಕಲಬುರಗಿ: ಕಲ್ಯಾಣ ಕರ್ನಾಟಕ (Kalyana Karnataka) ಪ್ರದೇಶದ ವಿಶೇಷ ಮೀಸಲಾತಿ-371 ಕಲಂ ಜೆ ಸಂಪೂರ್ಣ ಅನುಷ್ಠಾನಕ್ಕೆ ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ಹೋರಾಟ ಸಮಿತಿಯು ನಗರದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಲ್ಲಿ ಪ್ರತ್ಯೇಕ ರಾಜ್ಯದ ಧ್ವಜಾರೋಹಣಕ್ಕೆ ಯತ್ನಿಸಿದ ಘಟನೆ ನಡೆದಿದೆ.

    ಕಲ್ಯಾಣ ಕರ್ನಾಟಕ ಪ್ರತ್ಯೇಕ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್.ಪಾಟೀಲ್ ನರಿಬೋಳ ನೇತೃತ್ವದಲ್ಲಿ ಪ್ರತ್ಯೇಕ ರಾಜ್ಯದ ಧ್ವಜಾರೋಹಣಕ್ಕೆ ಯತ್ನಿಸಿದ 20ಕ್ಕೂ ಅಧಿಕ ಹೋರಾಟಗಾರರನ್ನು ಪೋಲಿಸರು ಬಂಧಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕ ಆಧುನಿಕ ಉದ್ಯಮದ ತೊಟ್ಟಿಲು – ರಾಜ್ಯೋತ್ಸವಕ್ಕೆ ಶುಭಕೋರಿದ ಮೋದಿ, ಸಿಎಂ

    ಈ ವೇಳೆ ಮಾತನಾಡಿದ ಸಮಿತಿ ಅಧ್ಯಕ್ಷ ನರಿಬೋಳ, ಕಲ್ಯಾಣ ಕರ್ನಾಟಕ ಪ್ರದೇಶದ ಅಧಿಕಾರಿಗಳಿಗೆ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ. ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಅನೂಕೂಲವಾಗಬೇಕಿದ್ದ ಹಲವಾರು ಯೋಜನೆಗಳು ಧಾರವಾಡ ಹಾಗೂ ಇತರೇ ಕಡೆ ಸ್ಥಳಾಂತರ ಆಗುತ್ತಿವೆ. ಈ ಭಾಗದ ಅಭಿವೃದ್ಧಿ ಬಗ್ಗೆ ಹೇಳೋರು ಕೇಳೋರು ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ನಮ್ಮ ಪ್ರದೇಶದ ಪ್ರತಿಭಾವಂತರಿಗೆ ನಿರಂತರ ಅನ್ಯಾಯವಾಗುತ್ತಿದೆ. ಕಾವೇರಿ ವಿಚಾರದಲ್ಲಿ ತೋರುವ ಕಾಳಜಿ ಮತ್ತು ಆಸಕ್ತಿ ನಮ್ಮ ಭೀಮಾ ಮತ್ತು ಕ್ರಷ್ಣೆಗೆ ಏಕಿಲ್ಲ ಎಂದು ಪ್ರಶ್ನಿಸಿದ ಅವರು, 371 ಕಲಂ ಜೆ ಕೋಶವನ್ನು ಕಲಬುರಗಿಯಲ್ಲಿ ಸ್ಥಾಪಿಸದೇ ಬೆಂಗಳೂರಿನಲ್ಲಿಟ್ಟಿದ್ದಾರೆ ಎಂದರು. ಇದನ್ನೂ ಓದಿ: ಮಕ್ಕಳಿಗೆ ಕನ್ನಡ ಭಾಷೆಯಲ್ಲೇ ಪರೀಕ್ಷೆ ಮಾಡುವಂತೆ ಪ್ರಧಾನಿಗೆ ಪತ್ರ ಬರೀತಿನಿ: ಸಿಎಂ

    ಕ.ಕ. ಪ್ರದೇಶದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಮಾಡಿಲ್ಲ. ಪ್ರದೇಶದಲ್ಲಿ ಬರಗಾಲ ಬಿದ್ದು ರೈತರು ಕಷ್ಟದಲ್ಲಿದ್ದರು ಸಹ ತಿರುಗಿ ನೋಡದ ಸರ್ಕಾರಗಳು, ಇಷ್ಟೆಲ್ಲ ಅನ್ಯಾಯವಾಗುತ್ತಿದ್ದರೂ ಸುಮ್ಮನೆ ಕೂತಿರುವುದರಲ್ಲಿ ಅರ್ಥವಿಲ್ಲ ಎಂದು ವಾಗ್ದಾಳಿ ನಡೆಸಿದರು.

    ಈ ಸಂದರ್ಭದಲ್ಲಿ ಕುಮಾರ ಜನವಾರ್, ಉದಯಕುಮಾರ ಜೇವರ್ಗಿ, ಲಕ್ಷ್ಮಿಕಾಂತ ಸ್ವಾದಿ, ನಾಗರಾಜ ಬಾಳಿ, ರವಿ ಹುಗಾರ, ಡಾ.ರಾಜಶೇಖರ ಬಂಡೆ, ಗೌತಮ ಒಂಟಿ, ಸುಮಾ ಪಾಟೀಲ, ಶಮಿನಾ ಬೇಗಂ, ಮಹಾದೇವಿ ಹೆಳವಾರ, ಸಂತೋಷ ಪಾಟೀಲ, ಸುನೀಲ್ ಸಿರ್ಖೆ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೀದರ್‌ ಬನ್ನಳ್ಳಿಗೆ ಹಂಪಿಯ ಪುರಾತತ್ವ ಸರ್ವೇಕ್ಷಣಾಧಿಕಾರಿ, ಶಾಸಕ ಬೆಲ್ದಾಳೆ ಭೇಟಿ

    ಬೀದರ್‌ ಬನ್ನಳ್ಳಿಗೆ ಹಂಪಿಯ ಪುರಾತತ್ವ ಸರ್ವೇಕ್ಷಣಾಧಿಕಾರಿ, ಶಾಸಕ ಬೆಲ್ದಾಳೆ ಭೇಟಿ

    ಬೀದರ್: ಚಿಟಗುಪ್ಪ ತಾಲೂಕಿನ ಬನ್ನಳ್ಳಿ ಗ್ರಾಮದ (Bannalli Village) ಪುರಾತನ ಮಂದಿರಕ್ಕೆ ಹಂಪಿಯ (Hampi) ರಾಜ್ಯ ಪುರಾತತ್ವ ಸರ್ವೇಕ್ಷಣ ಇಲಾಖೆಯ (Department of Archaeology) ಅಧಿಕ್ಷಕ ಡಾ. ನಿಹಿಲ್‌ ದಾಸ್‌, ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ (Dr Shailendra Beldale) ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಕಲ್ಯಾಣ ಕರ್ನಾಟಕ (Kalyana Karnataka) ಭಾಗಗಳಲ್ಲಿ ತುಂಬಾ ಸ್ಮಾರಕಗಳು ಇವೆ. ತಾಲೂಕಿನ ಬನ್ನಳ್ಳಿ ಗ್ರಾಮದ ರಾಮಲಿಂಗೇಶ್ವರ ಮಂದಿರವೂ ಕೂಡಾ ಸಾವಿರಾರು ವರ್ಷಗಳ ಪುರಾತನ ಮಂದಿರವಾಗಿದೆ. ಅದರ ಸಂರಕ್ಷಣೆ ಮತ್ತು ಜೀರ್ಣೋದ್ಧಾರಕ್ಕಾಗಿ ಕ್ಷೇತ್ರದ ಶಾಸಕರು ಆಸಕ್ತಿ ತೋರಿಸಿ ನಮಗೆ ಇಲ್ಲಿಗೆ ಭೇಟಿ ನೀಡುವಂತೆ ಹಲವು ಬಾರಿ ಮನವಿ ಮಾಡಿದ್ದರು. ಅವರು ಕೂಡಾ ಸ್ಮಾರಕದ ಸಂರಕ್ಷಣೆಗೆ ಸಹಕಾರ ನೀಡುತ್ತೇನೆ ಎಂದಿದ್ದಾರೆ. ಈ ಸಂಬಂಧ ನಮ್ಮ ತಂಡ ಕಾರ್ಯಪ್ರವೃತ್ತವಾಗಿದೆ ಎಂದು ಡಾ. ನಿಹಿಲ್ ದಾಸ್‌ ಹೇಳಿದರು.  ಇದನ್ನೂ ಓದಿ: ಸಾಲು ಸಾಲು ರಜೆ – ಬಸ್ ಟಿಕೆಟ್ ದರ ದುಪ್ಪಟ್ಟು!

    ಚಿಟಗುಪ್ಪ ತಾಲ್ಲೂಕಿನ ಬನ್ನಳ್ಳಿ ಗ್ರಾಮದ ರಾಮಲಿಂಗೇಶ್ವರ ಗ್ರಾಮದಲ್ಲಿನ ಶಿಲ್ಪಕಲೆಯ ದೇಗುಲದ ಸಮಗ್ರ ಪ್ರಗತಿಗೆ ಸೂಕ್ತ ಕ್ರಮ ಕೈಗೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ನಮ್ಮ ಪುರಾತತ್ವ ಇಲಾಖೆ ವತಿಯಿಂದ ಈ ದೇಗುಲದ ಕುರಿತು ಸಮಗ್ರವಾಗಿ ತಜ್ಞರಿಂದ ಸಂಶೋಧನೆ ನಡೆಸಲಾಗುವುದು. ಇಲ್ಲಿ ಹಳೆಗನ್ನಡ ಲಿಪಿಗಳು ಹಲವು ಸುಂದರ ಶಿಲಾಮೂರ್ತಿಗಳು ಕಂಡು ಬಂದಿದ್ದು, ಈ ಮಂದಿರ ಯಾರಿಂದ ನಿರ್ಮಿಸಲಾಯಿತು? ಮಂದಿರ ನಿರ್ಮಿಸಿದ ಶಿಲ್ಪಾಚಾರ್ಯರು ಯಾರು ಹೀಗೆ ನಾನಾ ವಿಧಗಳಿಂದ ನಮ್ಮ ತಂಡ ಸಂಶೋಧನೆ ನಡೆಸಿ ಇತಿಹಾಸವನ್ನು ಬೆಳಕಿಗೆ ತರಲು ಪ್ರಯತ್ನ ಮಾಡುತ್ತೇವೆ ಎಂದರು.

    ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಮಾತನಾಡಿ, ಬೀದರ್‌ ದಕ್ಷಿಣ ಕ್ಷೇತ್ರದ ಏಕೈಕ ಪುರಾತನ ಶಿಲ್ಪಕಲಾ ದೇಗುಲ ಇದಾಗಿದ್ದು ಪುರಾತತ್ವ ಇಲಾಖೆಯ ಮೂಲಕ ಆಗಬೇಕಾದ ಪ್ರಗತಿ ಕಾರ್ಯಗಳು ಕೈಗೊಂಡು ಪ್ರವಾಸೋದ್ಯಮ ಕ್ಷೇತ್ರಕ್ಕೆ ಉತ್ತೇಜನ ನೀಡಬೇಕು ಎಂದು ಹೇಳಿದರು.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Mood Of Karnataka – ಕಲ್ಯಾಣ ಕರ್ನಾಟಕದಲ್ಲಿ ಈ ಬಾರಿ ಜಯ ಯಾರಿಗೆ?

    Mood Of Karnataka – ಕಲ್ಯಾಣ ಕರ್ನಾಟಕದಲ್ಲಿ ಈ ಬಾರಿ ಜಯ ಯಾರಿಗೆ?

    ಲ್ಯಾಣ ಕರ್ನಾಟಕದಲ್ಲಿ ಈ ಬಾರಿ ಬಿಜೆಪಿಗೆ ಹಿನ್ನಡೆಯಾಗುವ ಸಾಧ್ಯತೆಯಿದೆ. ಕಾಂಗ್ರೆಸ್‌ ಹೆಚ್ಚಿನ ಸ್ಥಾನಗಳನ್ನು ಪಡೆದರೆ ಜೆಡಿಎಸ್‌ 1 ಕ್ಷೇತ್ರವನ್ನು ಕಳೆದುಕೊಳ್ಳಲಿದೆ. ಮೂಡ್‌ ಆಫ್‌ ಕರ್ನಾಟಕದ ಪ್ರಕಾರ ಕಾಂಗ್ರೆಸ್‌ 25 ಕ್ಷೇತ್ರಗಳನ್ನು ಗೆದ್ದರೆ ಬಿಜೆಪಿ 12, ಜೆಡಿಎಸ್‌ 3, ಇತರೆ ಒಂದು ಸ್ಥಾನವನ್ನು ಗೆಲ್ಲುವ ಸಾಧ್ಯತೆಯಿದೆ.

    ಕಲ್ಯಾಣ ಕರ್ನಾಟಕ ಒಟ್ಟು ಕ್ಷೇತ್ರಗಳು 41
    ಆವರಣ ಒಳಗಡೆ ನೀಡಿರುವುದು 2018ರ ಸ್ಥಾನಗಳು
    ಬೀದರ್‌ ಒಟ್ಟು ಕ್ಷೇತ್ರಗಳು 6
    ಬಿಜೆಪಿ – 3(1)
    ಕಾಂಗ್ರೆಸ್‌ – 2(4)
    ಜೆಡಿಎಸ್‌- 1(1)
    ಇದನ್ನೂ ಓದಿ: Mood Of Karnataka – ಹಳೆ ಮೈಸೂರು ಭಾಗದಲ್ಲಿ ಯಾರಿಗೆ ವಿಜಯ?

    ಕಲಬುರಗಿ ಒಟ್ಟು ಕ್ಷೇತ್ರಗಳು 9
    ಬಿಜೆಪಿ – 3(4)
    ಕಾಂಗ್ರೆಸ್‌ – 6(5)
    ಜೆಡಿಎಸ್‌- 0(0) ಇದನ್ನೂ ಓದಿ: ಕರ್ನಾಟಕ ಮತ ಕುರುಕ್ಷೇತ್ರದಲ್ಲಿ ಗೆಲ್ಲೋದ್ಯಾರು? – ಪಬ್ಲಿಕ್‌ ಸರ್ವೆ ಚಾಪ್ಟರ್‌ 1- ಸಮೀಕ್ಷೆಗಳಿಗೆ ಜನ ನೀಡಿದ ಉತ್ತರ ಏನು?

    ರಾಯಚೂರು ಒಟ್ಟು ಕ್ಷೇತ್ರಗಳು 7
    ಬಿಜೆಪಿ – 0(2)
    ಕಾಂಗ್ರೆಸ್‌ – 5(3)
    ಜೆಡಿಎಸ್‌ – 2(2)

    ಯಾದಗಿರಿ ಒಟ್ಟು ಕ್ಷೇತ್ರಗಳು 4
    ಬಿಜೆಪಿ – 1(2)
    ಕಾಂಗ್ರೆಸ್‌ – 3(1)
    ಜೆಡಿಎಸ್‌- 0(1)

    ಬಳ್ಳಾರಿ ಒಟ್ಟು ಕ್ಷೇತ್ರಗಳು 5
    ಬಿಜೆಪಿ – 1(2)
    ಕಾಂಗ್ರೆಸ್‌ – 4(3)
    ಜೆಡಿಎಸ್‌ – 0(0)

    ವಿಜಯನಗರ ಒಟ್ಟು ಕ್ಷೇತ್ರಗಳು 5
    ಬಿಜೆಪಿ – 3(2)
    ಕಾಂಗ್ರೆಸ್‌ – 2(3)
    ಜೆಡಿಎಸ್‌ -0(0)

    ಕೊಪ್ಪಳ ಒಟ್ಟು ಕ್ಷೇತ್ರಗಳು 5
    ಬಿಜೆಪಿ – 1(3)
    ಕಾಂಗ್ರೆಸ್‌ – 3(2)
    ಜೆಡಿಎಸ್‌ – 0(0)
    ಇತರೆ – 1 (ಜನಾರ್ದನ ರೆಡ್ಡಿ)

    ಕಲ್ಯಾಣ ಕರ್ನಾಟಕ ಒಟ್ಟು ಕ್ಷೇತ್ರಗಳು 41
    ಬಿಜೆಪಿ – 12 (16)
    ಕಾಂಗ್ರೆಸ್‌ – 25(21)
    ಜೆಡಿಎಸ್‌ – 3(4)
    ಇತರೆ – 1(0)

  • ಕಲ್ಯಾಣ ಕರ್ನಾಟಕ ಪ್ರತ್ಯೇಕ ಧ್ವಜಾರೋಹಣಕ್ಕೆ ಯತ್ನ – 20ಕ್ಕೂ ಅಧಿಕ ಹೋರಾಟಗಾರರು ಪೊಲೀಸರ ವಶಕ್ಕೆ

    ಕಲ್ಯಾಣ ಕರ್ನಾಟಕ ಪ್ರತ್ಯೇಕ ಧ್ವಜಾರೋಹಣಕ್ಕೆ ಯತ್ನ – 20ಕ್ಕೂ ಅಧಿಕ ಹೋರಾಟಗಾರರು ಪೊಲೀಸರ ವಶಕ್ಕೆ

    ಕಲಬುರಗಿ: ತೆಲಂಗಾಣ(Telangana) ಮಾದರಿಯಲ್ಲಿ ಕಲ್ಯಾಣ ಕರ್ನಾಟಕ(Kalyana Karnataka) ಪ್ರದೇಶಕ್ಕೆ ಪ್ರತ್ಯೇಕ ರಾಜ್ಯ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿಯೂ ಪ್ರತ್ಯೇಕ ಧ್ವಜಾರೋಹಣ ಮಾಡಲು ಯತ್ನಿಸಿದ ಘಟನೆ ಮಂಗಳವಾರ ನಡೆದಿದೆ.

    ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಪ್ರತ್ಯೇಕ ರಾಜ್ಯ ಧ್ವಜಾರೋಹಣಕ್ಕೆ ಮುಂದಾದ ಹಲವು ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದರು. ಮಾಜಿ ಸಚಿವ ದಿ. ಉಮೇಶ ಕತ್ತಿ ಹಾಗೂ ವೈಜನಾಥ ಪಾಟೀಲ್‌ರ ಭಾವಚಿತ್ರ ಮತ್ತು ಪ್ರತ್ಯೇಕ ರಾಜ್ಯದ ಧ್ವಜ ಹಿಡಿದು ಎಂ‌.ಎಸ್ ಪಾಟೀಲ್ ನರಿಬೋಳ ನೇತೃತ್ವದಲ್ಲಿ ನೂರಾರು ಜನ ಸೇರಿ ಹೋರಾಟ ನಡೆಸಿದರು.

    ನಗರದ ಕೋರ್ಟ್ ಮಾರ್ಗವಾಗಿ ಪಟೇಲ್ ವೃತ್ತಕ್ಕೆ ಧ್ವಜಾರೋಹಣ ಮಾಡಲು ಬರುವಾಗ ಮಾರ್ಗಮದ್ಯೆ ಅಡ್ಡಗಟ್ಟಿದ ಪೊಲೀಸರು ಎಲ್ಲರನ್ನು ವಶಕ್ಕೆ ಪಡೆದರು.

    ನಂತರ ಮಾತನಾಡಿದ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್.ಪಾಟೀಲ ನರಿಬೊಳ, ಕರ್ನಾಟಕ ಸಮಗ್ರ ಅಭಿವೃದ್ಧಿಗಾಗಿ 371 ಜೆ ಜಾರಿಯಾಗಿದ್ದರೂ ರಾಜಕೀಯ ಇಚ್ಛಾಶಕ್ತಿ ಕೊರತೆಯಾಗಿದೆ. ರಾಜ್ಯ ಸರ್ಕಾರದ ಮಲತಾಯಿ ಧೋರಣೆಯಿಂದ ಈ ಭಾಗದ ಪ್ರತಿಯೊಂದು ಕ್ಷೇತ್ರಕ್ಕೂ ಅನ್ಯಾಯ ಮುಂದುವರೆದಿದೆ. ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಮೀಸಲಿಟ್ಟ ಹಣ ಪಕ್ಕದ ಜಿಲ್ಲೆಗಳಿಗೆ ಬಳಕೆ ಮಾಡಲಾಗುತ್ತಿದೆ ಎಂದು ದೂರಿದರು. ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಕೇಸ್ – ನಾಲ್ವರು ಆರೋಪಿಗಳ ಸುಳಿವು ನೀಡಿದವರಿಗೆ ಭಾರೀ ಬಹುಮಾನ ಘೋಷಣೆ

    ಈ ಭಾಗವನ್ನು ಉದ್ಯೋಗ ನೇಮಕಾತಿ, ಮೀಸಲಾತಿ, ಮುಂಬಡ್ತಿ ವಿಷಯದಲ್ಲಿ ಕಡೆಗಣನೆ ಮಾಡಲಾಗುತ್ತಿದೆ. ರಾಜ್ಯೋತ್ಸವ ಪ್ರಶಸ್ತಿ ಪ್ರದಾನದಲ್ಲಿಯೂ ಈ ಭಾಗಕ್ಕೆ ಅನ್ಯಾಯವಾಗಿದೆ. ಪದೆ ಪದೇ ಈ ಭಾಗಕ್ಕೆ ರಾಜ್ಯ ಸರ್ಕಾರ ದ್ರೋಹ ಬಗೆಯುತ್ತಿದೆ. ನಮ್ಮ ಭಾಗದ ಸಮಗ್ರ ಅಭಿವೃದ್ಧಿಗಾಗಿ ತೆಲಂಗಾಣ ಮಾದರಿಯಲ್ಲಿ ಪ್ರತ್ಯೇಕ ರಾಜ್ಯ ನೀಡಬೇಕೆದು ಆಗ್ರಹಿಸಿದರು.

    ಈ ರಸ್ತೆಯಲ್ಲಿ ಹೋರಾಟಕ್ಕಿಳಿದಿದ್ದೇವೆ. ಮುಂಬರುವ ವಿಧಾನಸಬಾ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕದ ಕ್ಷೇತ್ರಗಳಲ್ಲಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಅಭಿವೃದ್ಧಿಗೆ ಮತ ನೀಡಿ ಎಂದು ಜನತೆಯ ಬಳಿ ತೆರಳುತ್ತೇವೆ. ಮತದಾರರು ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸವನ್ನು ನಾವು ಹೊಂದಿದ್ದೇವೆ  ಎಂದರು.

    ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷರಾದ ಶ್ರವಣಕುಮಾರ ಡಿ ನಾಯಕ, ಚಂದ್ರಶೇಖರ ಹೀರೆಮಠ ಹುಲ್ಲುರ ಶರಣಗೌಡ ಪೊಲೀಸ್‌ ಪಾಟೀಲ ನರಿಬೋಳ, ತಾತಾಗೌಡ ಪಾಟೀಲ ಲಕ್ಮೀಕಾಂತ ಸ್ವಾದಿ, ನಂದಕುಮಾರ ನಾಯಕ, ಸಿದ್ದಣ್ಣ ನೀರಲಕೋಡ, ಶಿವಾನಿ, ಲತಾ ಮಹಾದೇವಿ ಸೇರಿದಂತೆ ಹಲವಾರು ಹೋರಾಟಗಾರರು ಭಾಗವಹಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಕಲ್ಯಾಣ ಕರ್ನಾಟಕ ಪ್ರತ್ಯೇಕ ಧ್ವಜಾರೋಹಣಕ್ಕೆ ಯತ್ನ – ನೂರಾರು ಜನರು ಪೊಲೀಸ್ ವಶಕ್ಕೆ

    ಕಲ್ಯಾಣ ಕರ್ನಾಟಕ ಪ್ರತ್ಯೇಕ ಧ್ವಜಾರೋಹಣಕ್ಕೆ ಯತ್ನ – ನೂರಾರು ಜನರು ಪೊಲೀಸ್ ವಶಕ್ಕೆ

    ಕಲಬುರಗಿ: ತೆಲಂಗಾಣ ಮಾದರಿಯಲ್ಲಿ ಪ್ರತ್ಯೇಕ ರಾಜ್ಯ ನಿರ್ಮಾಣ ಮಾಡಬೇಕೆಂದು ಕಲ್ಯಾಣ ಕರ್ನಾಟಕ (Kalyana Karnataka) ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಪ್ರತ್ಯೇಕ ಧ್ವಜಾರೋಹಣ (Flag) ಮಾಡಲು ಯತ್ನಿಸಿದೆ.

    ಕಲಬುರಗಿಯ (Kalaburagi) ಸರ್ಧಾರ್‌ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಪ್ರತ್ಯೇಕ ರಾಜ್ಯ ಧ್ವಜಾರೋಹಣಕ್ಕೆ ಮುಂದಾದ ನೂರಾರು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಾಜಿ ಸಚಿವ ದಿ. ಉಮೇಶ ಕತ್ತಿ ಹಾಗೂ ವೈಜನಾಥ ಪಾಟೀಲ್‌ರ ಭಾವಚಿತ್ರ ಮತ್ತು ಪ್ರತ್ಯೇಕ ರಾಜ್ಯದ ಧ್ವಜ ಹಿಡಿದು ಎಂ‌.ಎಸ್.ಪಾಟೀಲ್ ನರಿಬೋಳ ನೇತೃತ್ವದಲ್ಲಿ ನೂರಾರು ಜನ ಸೇರಿ ಹೋರಾಟ ನಡೆಸಿದ್ದರು.‌ ಕೋರ್ಟ್ ಮಾರ್ಗವಾಗಿ ಪಟೇಲ್ ವೃತ್ತಕ್ಕೆ ಧ್ವಜಾರೋಹಣ ಮಾಡಲು ಬರುವಾಗ ಮಾರ್ಗ ಮಧ್ಯೆ ಅಡ್ಡಗಟ್ಟಿದ ಪೊಲೀಸರು ಎಲ್ಲರನ್ನು ವಶಕ್ಕೆ ಪಡೆದರು. ಇದನ್ನೂ ಓದಿ: ಗಡಿಜಿಲ್ಲೆಯಲ್ಲಿ ಮಧ್ಯರಾತ್ರಿ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆ

    ಕಲ್ಯಾಣ ಕರ್ನಾಟಕ ಸಮಗ್ರ ಅಭಿವೃದ್ಧಿಗಾಗಿ 371 ಜೆ ವಿದೇಯಕ ಜಾರಿಗೊಳಿಸಿದ್ದರೂ ರಾಜಕೀಯ ಇಚ್ಛಾಶಕ್ತಿ ಕೊರತೆ, ರಾಜ್ಯ ಸರ್ಕಾರದ ಮಲತಾಯಿ ಧೋರಣೆಯಿಂದ ಈ ಭಾಗದ ಪ್ರತಿಯೊಂದು ಕ್ಷೇತ್ರಕ್ಕೂ ಅನ್ಯಾಯ ಮುಂದುವರಿದಿದೆ. ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಮೀಸಲಿಟ್ಟ ಹಣ ಪಕ್ಕದ ಜಿಲ್ಲೆಗಳಿಗೆ ಬಳಕೆ ಮಾಡಲಾಗ್ತಿದೆ ಎಂದು ಹೋರಾಟಗಾರರು ಆರೋಪಿಸಿದ್ದಾರೆ.

    ಉದ್ಯೊಗ ನೇಮಕಾತಿ, ಮೀಸಲಾತಿ, ಮುಂಬಡ್ತಿ ವಿಷಯದಲ್ಲಿ ಕಡೆಗಣನೆ ಮಾಡಲಾಗುತ್ತಿದೆ. ರಾಜ್ಯೋತ್ಸವ ಪ್ರಶಸ್ತಿ ಪ್ರದಾನದಲ್ಲಿಯೂ ಈ ಭಾಗಕ್ಕೆ ಅನ್ಯಾಯವಾಗಿದೆ. ಪದೇಪದೆ ಈ ಭಾಗಕ್ಕೆ ರಾಜ್ಯ ಸರ್ಕಾರ ದ್ರೋಹ ಬಗೆಯುತ್ತಿದೆ. ನಮ್ಮ ಭಾಗದ ಸಮಗ್ರ ಅಭಿವೃದ್ಧಿಗಾಗಿ ತೆಲಂಗಾಣ ಮಾದರಿಯಲ್ಲಿ ಪ್ರತ್ಯೇಕ ರಾಜ್ಯ ನೀಡಬೇಕೆಂದು ಹೋರಾಟಗಾರರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ‘ಕರ್ನಾಟಕ ರತ್ನ’ ಪ್ರಶಸ್ತಿ ಪಡೆದ 9ನೇ ರತ್ನ ಪುನೀತ್ ರಾಜ್ ಕುಮಾರ್

    Live Tv
    [brid partner=56869869 player=32851 video=960834 autoplay=true]