Tag: kalmata swamiji

  • ಪ್ರಶ್ನೆ ಪತ್ರಿಕೆ ಲೀಕ್ ನಲ್ಲಿ ಸ್ವಾಮೀಜಿಯ ಕೈವಾಡ

    ಪ್ರಶ್ನೆ ಪತ್ರಿಕೆ ಲೀಕ್ ನಲ್ಲಿ ಸ್ವಾಮೀಜಿಯ ಕೈವಾಡ

    ಬೆಂಗಳೂರು: ಇತ್ತೀಚೆಗಷ್ಟೇ ಪೊಲೀಸ್ ಪೇದೆ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಲೀಕ್ ಆಗಿದ್ದು ಎಲ್ಲರಿಗೂ ಗೊತ್ತಿದೆ. ಈ ಬಗ್ಗೆ ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು ಲೀಕ್ ಮಾಡಿದ್ದ ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಸ್ವಾಮೀಜಿಯೊಬ್ಬರ ಹೆಸರು ಹೊರಬಂದಿದ್ದು, ಸ್ಫೋಟಕ ಮಾಹಿತಿ ಬಯಲಾಗಿದೆ.

    ಕಲ್ಮಠ ಸ್ವಾಮಿಯ ಹೆಸರು ಕೇಳಿ ಬಂದಿದೆ. ಪ್ರಶ್ನೆ ಪತ್ರಿಕೆ ಲೀಕ್ ಮಾಡುವುದರಲ್ಲಿ ಎಕ್ಸ್ ಪರ್ಟ್ ಆಗಿರುವ ಶಿವಕುಮಾರ ಸ್ವಾಮೀಜಿಯನ್ನು ಸಿಸಿಬಿ ವಿಚಾರಣೆಯನ್ನು ಮಾಡುತ್ತಿದ್ದು, ಸಾಕಷ್ಟು ಅಂಶಗಳು ಬೆಳಕಿಗೆ ಬರುತ್ತಿವೆ. ಕಲ್ಮಠ ಸ್ವಾಮಿ ಪ್ರಶ್ನೆ ಪತ್ರಿಕೆ ಲೀಕ್ ಮಾಡಿ ಅಭ್ಯರ್ಥಿಗಳಿಗೆ ಟ್ರೈನಿಂಗ್ ಕೊಡುತ್ತಿದ್ದ ಎಂದು ಗೊತ್ತಾಗಿದೆ.

    6 ಲಕ್ಷ ಕೊಟ್ಟವರಿಗೆ ನೂರು ಪ್ರಶ್ನೆ ಉಚಿತ ಎಂದು ಹೇಳುತ್ತಾ 15 ಕೋಟಿ ಹಣ ವಸೂಲಿ ಮಾಡಿ ಅಭ್ಯರ್ಥಿಗಳಿಗೆ ಶಿವಕುಮಾರ್ ಟ್ರೈನಿಂಗ್ ಕೊಡುತ್ತಿದ್ದನು. ಈತ ಪ್ರಶ್ನೆ ಪತ್ರಿಕೆಯ ಮುಖ್ಯ ಪೇಜ್‍ನ್ನೇ ಕದಿಯುತ್ತಿದ್ದನು. ಬಳಿಕ ಜನರಿಲ್ಲದ ರೆಸಾರ್ಟ್ ಒಂದರಲ್ಲಿ ಟ್ರೈನಿಂಗ್ ಕೊಡುತ್ತಿದ್ದನು ಎಂದು ತಿಳಿದು ಬಂದಿದೆ.

    ಪೊಲೀಸ್ ಪೇದೆ ಪ್ರಶ್ನೆ ಪತ್ರಿಕೆ ಲೀಕ್ ಪ್ರಕರಣದ ಹಿಂದೆ ಶಾಸಕ ಸ್ಥಾನದ ಆಕಾಂಕ್ಷಿಯಾಗಿದ್ದ ಬಿಜೆಪಿ ಮುಖಂಡನ ನಂಟು ಇದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಬಸವರಾಜ್ ಅಲಿಯಾಸ್ ಬಸವ ಪ್ರಶ್ನೆ ಪತ್ರಿಕೆ ಲೀಕ್ ಮಾಡಿದವನಾಗಿದ್ದು, 110 ಜನ ಹುಡುಗರು, 10 ಜನ ಹುಡುಗಿಯರು ಕೂಡ ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಈ ಹಿಂದೆ ರಾಸಲೀಲೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಕಲ್ಮಠ ಸ್ವಾಮಿ ಈಗ ಮತ್ತೆ ಪ್ರಶ್ನೆ ಪತ್ರಿಕೆಯ ಉರುಳು ಸಿಕ್ಕಿಬಿದ್ದಿದೆ. ಪ್ರಶ್ನೆ ಪತ್ರಿಕೆಯ ಲೀಕ್ ದಂಧೆ ಗೊತ್ತಿದ್ದೇ ಸ್ವಾಮಿಜಿ ಜಾಗವನ್ನು ಬಿಟ್ಟುಕೊಟ್ಟಿದ್ರಾ.? ಅಥವಾ ಹಣವನ್ನು ಪಡೆದುಕೊಂಡಿದ್ರಾ ಅನ್ನೋ ಅನುಮಾನವನ್ನೂ ಕೂಡ ಪೊಲೀಸರು ವ್ಯಕ್ತಪಡಿಸುತ್ತಿದ್ದಾರೆ. ಪೊಲೀಸರು 7 ದಿನಗಳ ಕಾಲ ಲೀಕ್ ಕಿಂಗ್‍ಪಿನ್ ಶಿವಕುಮಾರಸ್ವಾಮಿಯನ್ನು ಕಸ್ಟಡಿಗೆ ಪಡೆದುಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಂಚವೇರಿದ ಕಲ್ಮಠ ಸ್ವಾಮೀಜಿಯಿಂದ ಜೀವಬೆದರಿಕೆ – ಪ್ರತಿಭಟನೆ ಮಾಡದಂತೆ ಕೋಟಿ-ಕೋಟಿ ಆಮಿಷ

    ಮಂಚವೇರಿದ ಕಲ್ಮಠ ಸ್ವಾಮೀಜಿಯಿಂದ ಜೀವಬೆದರಿಕೆ – ಪ್ರತಿಭಟನೆ ಮಾಡದಂತೆ ಕೋಟಿ-ಕೋಟಿ ಆಮಿಷ

    ಕೊಪ್ಪಳ: ಕಲ್ಮಠ ಸ್ವಾಮಿ ಕಾಮ ಪುರಾಣ ಬಯಲಿಗೆಳೆದ ಕಾರು ಚಾಲಕನಿಗೆ ಜೀವಬೆದರಿಕೆ ಹಾಕಿರೋ ಪ್ರಕರಣ ಕೊಪ್ಪಳದಲ್ಲಿ ಬೆಳಕಿಗೆ ಬಂದಿದೆ.

    ಸ್ವಾಮೀಜಿ ಆಪ್ತರಾದ ಶರಣಪ್ಪ ಹುನಗುಂದ, ಶರಣಪ್ಪ ಹೊಸೂರು, ನಾಗರಾಜ್, ಶಿವಾನಂದ ಹಾಗೂ ಗುರುಪಾದಯ್ಯ ಕಾರು ಚಾಲಕ ಮಲ್ಲಯ್ಯಸ್ವಾಮಿ ಮನೆಗೆ ನುಗ್ಗಿ ಕಲ್ಮಠ ಸ್ವಾಮೀಜಿ ವಿರುದ್ಧ ಕೊಟ್ಟಿರೋ ದೂರು ಹಿಂತೆಗೆದುಕೊಳ್ಳುವಂತೆ ಜೀವಬೆದರಿಕೆ ಹಾಕಿದ್ದು ಅಲ್ಲದೇ ಅವಾಚ್ಯ ಪದದಿಂದ ಬೈದು ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: ಲೈಂಗಿಕ ಹಗರಣ ಹೊರಬಿದ್ದ ನಂತರ ಎಸ್ಕೇಪ್ ಆಗಿದ್ದ ಕಲ್ಮಠ ಸ್ವಾಮೀಜಿ ಮಠಕ್ಕೆ ವಾಪಸ್

    ಈ ಕುರಿತು ಮಲ್ಲಯ್ಯಸ್ವಾಮಿ ಗಂಗಾವತಿ ನಗರಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 143,147,323, 504, 506, ಹಾಗೂ 149 ರಡಿ ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

    ಇನ್ನೊಂದೆಡೆ ಸ್ವಾಮೀಜಿ ವಿರುದ್ಧ ಪ್ರತಿಭಟನೆ ಮಾಡ್ತಿರೋ ಹೋರಾಟಗಾರರಿಗೆ ಹಣದ ಆಮೀಷವೊಡ್ಡುತ್ತಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ. ವೀರಶೈವ ಲಿಂಗಾಯತ ಸಮಾಜದ ಮುಖಂಡ ಮಹಾಬಳೇಶ ಹಾಸಿನಾಳರಿಗೆ ಹಣದ ಆಮೀಷವೊಡ್ಡಿದ್ದಾರೆ ಅಂತ ಬಹಿರಂಗಪಡಿಸಿದ್ದಾರೆ. ಜನವರಿ 22ರಂದು ಕೊಟ್ಟೂರಸ್ವಾಮಿ ಪೀಠದಿಂದ ಕೆಳಗಿಳಿಯಬೇಕೆಂದು ಮಠಕ್ಕೆ ಮುತ್ತಿಗೆ ಹಾಕಲಾಗೋದು ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಕಲ್ಮಠದ ಕೊಟ್ಟೂರು ಸ್ವಾಮಿಯ ಕಾಮಪುರಾಣ ಬಯಲು- ಟೀಚರ್, ಅಡುಗೆ ಮಹಿಳೆ, ಲೈಬ್ರೇರಿಯನ್ ಯಾರನ್ನೂ ಬಿಟ್ಟಿಲ್ಲ ಈ ಸ್ವಾಮಿ

    https://www.youtube.com/watch?v=uUJHzuz-RDE

    https://www.youtube.com/watch?v=-l8QW35t_fA