Tag: kallesh

  • ಕಳಂಕಿತ ಅಧಿಕಾರಿ ನಂಬಿ ಕೆಟ್ರಾ ಸಿಎಂ – ಅಸ್ತಿತ್ವ ಉಳಿಸಿಕೊಳ್ಳಲು ಇಡಿ ವಿರುದ್ಧ ದೂರು?

    ಕಳಂಕಿತ ಅಧಿಕಾರಿ ನಂಬಿ ಕೆಟ್ರಾ ಸಿಎಂ – ಅಸ್ತಿತ್ವ ಉಳಿಸಿಕೊಳ್ಳಲು ಇಡಿ ವಿರುದ್ಧ ದೂರು?

    ಬೆಂಗಳೂರು: ಜಾರಿ ನಿರ್ದೇಶನಾಲಯ (ED) ವಿರುದ್ಧ ದೂರು ನೀಡಿದ್ದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಹಿಂದಿನ ಹೆಚ್ಚುವರಿ ನಿರ್ದೇಶಕ ಕಲ್ಲೇಶ್‌ (Kallesh) ಭಾರೀ ಅಕ್ರಮ ಎಸಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

    ಹೌದು. ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ (Karnataka Maharshi Valmiki Scheduled Tribe Development Corporation Ltd) ಅಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah), ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಹಾಗೂ ಸಚಿವರ ಹೆಸರು ಹೇಳುವಂತೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಒತ್ತಡ ಹೇರಿದ್ದಾರೆ  ಎಂದು ಆರೋಪಿಸಿ  ಅಧಿಕಾರಿ ಕಲ್ಲೇಶ್ ದೂರು ನೀಡಿದ್ದರು. ಇದನ್ನೂ ಓದಿ: ಕೆಆರ್‌ಎಸ್ ಜಲಾಶಯ ಸಂಪೂರ್ಣ ಭರ್ತಿ – ಕಾವೇರಿ ಕೊಳ್ಳದ ಜನರಿಗೆ ಪ್ರವಾಹದ ಆತಂಕ

     
    ಈ ದೂರನ್ನೇ ಆಧಾರವಾಗಿಟ್ಟುಕೊಂಡು ಮಂಗಳವಾರ ಸಿಎಂ-ಡಿಸಿಎಂ ಪ್ರತಿಭಟನೆ ಮಾಡಿದ್ದರು. ಆದರೆ ಈ ದೂರು ಕೊಟ್ಟ ಅಧಿಕಾರಿ ಕಲ್ಲೇಶ್‌ರನ್ನು ಭ್ರಷ್ಟಾಚಾರ ಆರೋಪದ ಮೇಲೆ ಈ ಹಿಂದೆ ಸಿದ್ದರಾಮಯ್ಯ ಅಮಾನತುಗೊಳಿಸಿದ್ದರು.

    ಪಬ್ಲಿಕ್ ಟಿವಿಗೆ ಸಿಕ್ಕಿರುವ ದಾಖಲೆಗಳ ಪ್ರಕಾರ ಜೂನ್ 22ರಂದು ನಿಗಮದ ಮಾಜಿ ಎಂಡಿ ಕಲ್ಲೇಶ್‌ರನ್ನು ಸಿದ್ದರಾಮಯ್ಯ ಅಮಾನತುಗೊಳಿಸಿದ್ದರು. ಅಮಾನತುಗೊಂಡ ಅಧಿಕಾರಿ ಕಲ್ಲೇಶ್ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಈಗ ಇಡಿ ಅಧಿಕಾರಿಗಳ ವಿರುದ್ಧ ದೂರು ಕೊಟ್ಟಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

    ಕಲ್ಲೇಶ್ ವಿರುದ್ಧ ಇರುವ ಆರೋಪಗಳೇನು?
    ಎಸ್‌ಸಿ/ಎಸ್‌ಟಿ ನಿಗಮಕ್ಕೆ ಬರಬೇಕಿದ್ದ ಬಡ್ಡಿ ಹಣದ ವಿಷಯ ಮರೆಮಾಚಿ 60 ಲಕ್ಷದ 83 ಸಾವಿರ ಬಡ್ಡಿ ಹಣಕ್ಕೆ ಸೂಕ್ತ ದಾಖಲೆ ನೀಡಿಲ್ಲ. ವಿದ್ಯಾರ್ಥಿ ನಿಲಯದ ಅಗತ್ಯ ಸಾಮಾಗ್ರಿಗಳ ಬೇಡಿಕೆ ಇಲ್ಲದೇ ಇದ್ದರೂ ಖರೀದಿ. ಸಾಮಾಗ್ರಿಗಳ ಖರೀದಿ ಟೆಂಡರ್‌ನಲ್ಲಿ ಲೋಪ.

    ಎಸ್‌ಸಿ/ಎಸ್‌ಟಿ ಹಣ ಸಮರ್ಪಕವಾಗಿ ಬಳಕೆ ಮಾಡದೇ ಇರುವುದು. ಎಸ್‌ಎಸ್‌ಎಲ್‌ಸಿ (SSLC) ಮಕ್ಕಳಿಗೆ ಗುಣಾತ್ಮಕ ತರಬೇತಿ ನೀಡಿಲ್ಲ. 75% ಗಿಂತ ಕಡಿಮೆ ಫಲಿತಾಂಶ ಬಂದ ವಸತಿ ಶಾಲೆ ಬಗ್ಗೆ ನಿಗಾವಹಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: ಶಕ್ತಿ ಯೋಜನೆ ಅಡಿ ಸರ್ಕಾರದಿಂದ ಸಾರಿಗೆ ಇಲಾಖೆಗೆ 1,413 ಕೋಟಿ ರೂ. ಬಾಕಿ – ರಾಮಲಿಂಗಾರೆಡ್ಡಿ

     

  • ಸಂಪಾದನೆ ಬದಿಗಿಟ್ಟು ಬಡವರು, ವಯಸ್ಕರಿಗೆ ಉಚಿತ ಚಿಕಿತ್ಸೆ ನೀಡ್ತಿದ್ದಾರೆ ಗದಗ್‍ನ ಡಾ.ಕಲ್ಲೇಶ್

    ಸಂಪಾದನೆ ಬದಿಗಿಟ್ಟು ಬಡವರು, ವಯಸ್ಕರಿಗೆ ಉಚಿತ ಚಿಕಿತ್ಸೆ ನೀಡ್ತಿದ್ದಾರೆ ಗದಗ್‍ನ ಡಾ.ಕಲ್ಲೇಶ್

    ಗದಗ್: ಈ ಕಾಲದಲ್ಲಿ ವೈದ್ಯರು ಅಂದ್ರೆ ಬಹುತೇಕರಲ್ಲಿ ಹಣ ಮಾಡೋದೇ ಕಾಯಕ ಅಂತಾರೆ. ಆದ್ರೆ, ಇವತ್ತಿನ ನಮ್ಮ ಪಬ್ಲಿಕ್ ಹೀರೋ ಡಾ. ಕಲ್ಲೇಶ್ ಅವರು ಸಮಾಜ ಸೇವೆಯಲ್ಲಿ ನಿರತರಾಗಿದ್ದಾರೆ.

    ನಗರದ ನಿವಾಸಿ ಡಾಕ್ಟರ್ ಕಲ್ಲೇಶ್ ಮೂರಶಿಳ್ಳಿನ ಸಿಟಿಯಲ್ಲಿ ಕೈ ತುಂಬ ಸಂಪಾದನೆ ಮಾಡೋದು ಬಿಟ್ಟು ಹಳ್ಳಿಯ ಬಡಜನರ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ. ಗದಗ ತಾಲೂಕಿನ ಮಲ್ಲಸಮುದ್ರ ಗ್ರಾಮದಲ್ಲಿ ಬಡವರ ಅನುಕೂಲಕ್ಕಾಗಿ ಆಸ್ಪತ್ರೆ ತೆರೆದಿದ್ದು, ರೋಗಿಗಳಿಂದ 10 ರಿಂದ 30 ರೂಪಾಯಿ ಮಾತ್ರ ತೆಗೆದುಕೊಳ್ತಾರೆ. ತುಂಬಾ ಬಡವರು, ವಯಸ್ಕರು ಬಂದ್ರೆ ನಯಾ ಪೈಸೆ ಪಡೆಯಲ್ಲ. ಹೀಗೆ, 22 ವರ್ಷಗಳಿಂದ ಸೇವೆ ಸಾಗಿದೆ.

    ವೈದ್ಯರಾಗಿ ಮಾತ್ರವಲ್ಲ, ಪರಿಸರ ಪ್ರೇಮಿಯಾಗಿ, ಶಿಕ್ಷಣ ಪ್ರೇಮಿಯಾಗಿ, ಯೋಗಪಟುವಾಗಿ ಸಮಾಜ ಸೇವಕರಾಗಿ ಶ್ರಮಿಸುತ್ತಿದ್ದಾರೆ. ಬಡ ಕುಟುಂಬದಿಂದ ಬಂದವನಾಗಿರೋ ನನಗೆ ಬಡವರ ಕಷ್ಟ ಗೊತ್ತಿದೆ. ಅದಕ್ಕಾಗಿ ನನ್ನಿಂದ ಆಗೋ ಕೆಲಸವನ್ನ ಮಾಡ್ತಿದ್ದೇನೆ ಅಂತ ಡಾಕ್ಟರ್ ಕಲ್ಲೇಶ್ ಹೇಳ್ತಾರೆ.

    ಹಳ್ಳಿಗಳ ಸುಧಾರಣೆ, ಕುಡಿಯುವ ನೀರು, ಮೂಲಭೂತ ಸೌಲಭ್ಯಗಳು, ದೇವಸ್ಥಾನ, ಮಠ, ಮಸೀದಿ, ಮಂದಿರ ಅಭಿವೃದ್ಧಿಗೆ ಪ್ರತಿ ವರ್ಷ ಲಕ್ಷಾಂತರ ನೀಡುತ್ತಿದ್ದಾರೆ. ಪರಿಸರ ಕಾಳಜಿ, ಸಾಮಾಜಿಕ ಕಾರ್ಯಗಳ ಬಗ್ಗೆ ಅನೇಕ ಕಥೆ, ಕಾದಂಬರಿ ಬರೆದಿದ್ದಾರೆ. ಪ್ರತಿಷ್ಠೆಯ ಈ ದಿನಮಾನದಲ್ಲೂ ಗದಗ್‍ನಿಂದ ಮಲ್ಲಸಮುದ್ರ ಗ್ರಾಮಕ್ಕೆ ನಿತ್ಯ 8 ರಿಂದ 10 ಕಿಲೋಮೀಟರ್ ಸೈಕಲ್ ತುಳಿದು ಬರುತ್ತಾರೆ ಅಂತ ಸ್ಥಳೀಯರಾದ ಶಿವಪ್ಪ ತಿಳಿಸಿದ್ದಾರೆ.

    ಪತ್ನಿ ಸಹ ವೈದ್ಯರಾಗಿದ್ದು, ಆಸ್ಪತ್ರೆ ಕೆಲಸದ ನಂತರ ಜೊತೆಗೆ ಸ್ವಂತ ಜುವೇಲರಿ ಶಾಪ್ ಅನ್ನ ಇಬ್ಬರೂ ನಿರ್ವಹಿಸ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=TTCkvOSxBz4