Tag: Kalladka Prabhakar Bhatt

  • RSS ಪಥ ಸಂಚಲನಕ್ಕೆ ಡಿಕೆ ಬ್ರದರ್ಸ್ ಕೂಲ್ ಟಾಂಗ್

    RSS ಪಥ ಸಂಚಲನಕ್ಕೆ ಡಿಕೆ ಬ್ರದರ್ಸ್ ಕೂಲ್ ಟಾಂಗ್

    ಬೆಂಗಳೂರು: ರಾಮನಗರದಲ್ಲಿ ಆರ್.ಎಸ್.ಎಸ್ ಕಾರ್ಯಕರ್ತರ ಪಥ ಸಂಚಲನ ಈಗ ರಾಜಕೀಯ ಗುದ್ದಾಟಕ್ಕೆ ಕಾರಣವಾಗಿದೆ. ಆರ್.ಎಸ್.ಎಸ್. ಪಥ ಸಂಚಲನಕ್ಕೆ ಕನಕಪುರದ ಡಿಕೆ ಬ್ರದರ್ಸ್ ಸೈಲೆಂಟ್ ಆಗಿಯೇ ಬಿಜೆಪಿ ಮತ್ತು ಆರ್.ಎಸ್.ಎಸ್. ಗೆ ತಿರುಗೇಟು ಕೊಟ್ಟು ಸವಾಲ್ ಹಾಕಿದ್ದಾರೆ. ಯಾರೇ ಪಥ ಸಂಚಲನ ಮಾಡಲಿ ನಮ್ಮ ಅಭ್ಯಂತರ ಇಲ್ಲ. ಶಾಂತಿ ಕದಡುವ ಕೆಲಸ ಮಾಡಿದ್ರೆ ಹುಷಾರ್ ಅಂತ ಡಿಕೆ ಬ್ರದರ್ಸ್ ಎಚ್ಚರಿಕೆ ಕೊಟ್ಟಿದ್ದಾರೆ.

    ಬೆಂಗಳೂರಿನಲ್ಲಿ ಮಾತನಾಡಿದ ಸಂಸದ ಡಿಕೆ ಸುರೇಶ್ ಆರ್‍ಎಸ್‍ಎಸ್ ನಾಯಕರಿಗೆ ಎಚ್ಚರಿಕೆ ಕೊಟ್ಟು ಸವಾಲ್ ಹಾಕಿದ್ದಾರೆ. ಆರ್.ಎಸ್.ಎಸ್. ನವರು ಪಥ ಸಂಚಲನ ಮಾಡೋದಕ್ಕೆ ನಮ್ಮ ಅಭ್ಯಂತರ ಇಲ್ಲ. ಆದ್ರೆ ಶಾಂತಿಯುವಾಗಿ ಪಥ ಸಂಚಲನೆ ಮಾಡಬೇಕು. ಶಾಂತಿ ಕದಡುವ ಕೆಲಸ ಮಾಡಿದ್ರೆ ನಾವು ಸುಮ್ಮನೆ ಇರೋದಿಲ್ಲ. ಯಾರೇ ಪಥ ಸಂಚಲನ ಮಾಡಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಂತಿ ಭಂಗ ತರೋ ಕೆಲಸ ಮಾಡಬಾರದು. ಪ್ರಚೋದನಕಾರಿಯಾಗಿ ಮಾತಾಡಿ ಮತವಿಭಜನೆ ಮಾಡೋ ಕೆಲಸ ಮಾಡಬಾರದು. ಹಾಗೇನಾದ್ರು ಮಾಡಿದ್ರೆ ನಾವು ಸಕ್ರಿಯವಾಗಿ ಹೋರಾಟ ಮಾಡ್ತೀವಿ ಅಂತ ಎಚ್ಚರಿಕೆ ಕೊಟ್ಟರು.

    ಇನ್ನು ಕಲ್ಲಡ್ಕ ಪ್ರಭಾಕರ್ ಭಟ್ಟರು ಬಿಜೆಪಿ ನೆಲೆಸಲು ಈ ಪಥ ಸಂಚಲನ ಮಾಡ್ತಿದ್ದಾರಾ ಅನ್ನೋ ಪ್ರಶ್ನೆಗೆ ಉತ್ತರಿಸಿದ ಅವರು, ಕಲ್ಲಡ್ಕ ಪ್ರಭಾಕರ್ ಭಟ್ ಯಾರು ಅಂತಾನೇ ನನಗೆ ಗೊತ್ತಿಲ್ಲ. ತಲೆ ಕೆಟ್ಟವರು ಮೊನ್ನೆ ಯಡಿಯೂರಪ್ಪ ಬಗ್ಗೆ ಏನೋ ಮಾತಾಡಿದ್ರು. ಇನ್ನೊಬ್ಬರ ಬಗ್ಗೆ ಇನ್ನೇನೋ ಹೇಳುತ್ತಾರೆ. ಅವರಿಗೆಲ್ಲ ಯಾರು ಉತ್ತರ ಕೊಡ್ತಾರೆ. ಕಾಲವೇ ಎಲ್ಲದ್ದಕ್ಕೂ ಉತ್ತರ ಕೊಡುತ್ತೆ ಅಂತ ಕಿಡಿಕಾರಿದರು.

    ಇನ್ನು ಮಾಜಿ ಸಚಿವ ಡಿಕೆ ಶಿವಕುಮಾರ್ ಮಾತನಾಡಿ, ಆರ್.ಎಸ್.ಎಸ್ ನವರು ಚೆಡ್ಡಿ ಹಾಕಿಕೊಂಡು ಬೇಕಾದ್ರು ಪಥ ಸಂಚಲನ ಮಾಡಲಿ. ಪ್ಯಾಂಟ್ ಹಾಕಿಕೊಂಡು ಬೇಕಾದ್ರು ಮಾಡಲಿ. ಇಲ್ಲವೆ ಉರುಳು ಸೇವೆ ಬೇಕಾದ್ರು ಮಾಡಲಿ. ನಮ್ಮ ಅಭ್ಯಂತರ ಇಲ್ಲ ಅಂತ ಲೇವಡಿ ಮಾಡಿದರು. ನನ್ನ ತಮ್ಮ ಗೆದ್ದಿರೋದು ಪಾಪ ಬಿಜೆಪಿ ಅವ್ರಿಗೆ ಇಷ್ಟ ಇಲ್ಲ. ಹೇಗಾದ್ರು ಮಾಡಿ ಆತನಿಗೆ ತೊಂದರೆ ಕೊಡಬೇಕು ಅಂತ ಬಿಜೆಪಿ ಅವರು ಆರ್.ಎಸ್‍ಎಸ್. ಮೂಲಕ ಹೀಗೆಲ್ಲ ಮಾಡಿಸುತ್ತಿದ್ದಾರೆ. ಧರ್ಮದ ಹೆಸರಲ್ಲಿ ರಾಜಕೀಯ ಮಾಡ್ತಿದ್ದಾರೆ. ಇದಕ್ಕೆಲ್ಲ ನಾವು ಹೆದರಲ್ಲ. ಇದನ್ನ ಎದರಿಸೋ ಶಕ್ತಿ ನಮಗೆ ಇದೆ ಅಂತ ಕಿಡಿಕಾರಿದರು.

  • ಡಿಕೆಶಿ ಅಡ್ಡ ಕನಕಪುರ ಬೆನ್ನಲ್ಲೇ ಎಚ್‍ಡಿಕೆ ಕೋಟೆ ರಾಮನಗದಲ್ಲಿ ಕೇಸರಿ ಕಹಳೆ

    ಡಿಕೆಶಿ ಅಡ್ಡ ಕನಕಪುರ ಬೆನ್ನಲ್ಲೇ ಎಚ್‍ಡಿಕೆ ಕೋಟೆ ರಾಮನಗದಲ್ಲಿ ಕೇಸರಿ ಕಹಳೆ

    ರಾಮನಗರ: ಕಪಾಲ ಬೆಟ್ಟದ ಯೇಸು ಪ್ರತಿಮೆ ವಿವಾದವನ್ನು ದಾಳವಾಗಿ ಬಳಸಿಕೊಂಡು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಅಡ್ಡ ಕನಕಪುರದಲ್ಲಿ ಕೇಸರಿ ಭಾವುಟಗಳನ್ನು ಹಾರಿಸಿ ಕೇಸರಿ ಮಯವನ್ನಾಗಿ ಮಾಡಲಾಗಿತ್ತು. ಇದೀಗ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಭದ್ರಕೋಟೆ ರಾಮನಗರದಲ್ಲಿ ಕೇಸರಿ ಕಹಳೆ ಮೊಳಗಿಸಲು ಸಿದ್ಧತೆ ನಡೆಸಲಾಗಿದೆ.

    ಆರ್‌ಎಸ್‌ಎಸ್ ಪಥಸಂಚಲನದ ಹೆಸರಿನಲ್ಲಿ ರಾಮನಗರದಲ್ಲಿ ಕೇಸರಿ ಭಾವುಟಗಳನ್ನು ಹಾರಿಸಲು ಮುಂದಾಗಿದೆ. ಇದೇ ಮೊದಲ ಬಾರಿಗೆ ಸಾವಿರಾರರು ಮಂದಿ ಪಥಸಂಚಲನದಲ್ಲಿ ಭಾಗಿಯಾಗುತ್ತಿರುವುದು ಇಂತಹದೊಂದು ಚರ್ಚೆಗೆ ಕಾರಣವಾಗಿದೆ. ಪ್ರಮುಖವಾಗಿ ಆರ್‌ಎಸ್‌ಎಸ್ ದಕ್ಷಿಣ ಮಧ್ಯಕೇಂದ್ರಿಯ ಕಾರ್ಯಕಾರಣಿ ಸದಸ್ಯ ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಬಿಜೆಪಿ ಪ್ರಾಬಲ್ಯ ಇಲ್ಲದಿರುವ ರಾಮನಗರಕ್ಕೆ ಕರೆಸಲಾಗುತ್ತಿದೆ. ಕನಕಪುರದಲ್ಲಿ ಡಿ.ಕೆ.ಶಿವಕುಮರ್ ಅವರ ವಿರುದ್ಧ ನಡೆದ ಪ್ರತಿಭಟನೆಯಲ್ಲಿಯು ಇವರಿಗೆ ನೇತೃತ್ವ ನೀಡಲಾಗಿತ್ತು.

    ಕಳೆದ ಜನವರಿ 13ರಂದು ಕನಕಪುರದಲ್ಲಿ ಕೇಸರಿ ಕಹಳೆ ಮೊಳಗಿಸಿ ತಿಂಗಳು ಕಳೆಯುವ ಮುನ್ನವೇ ಇದೀಗ ರಾಮನಗರದಲ್ಲಿ ಕೇಸರಿ ಕಹಳೆ ಮೊಳಗಿಸಲು ಎರಡನೇ ಬಾರಿಗೆ ಆರ್‌ಎಸ್‌ಎಸ್ ನ ಕಲ್ಲಡ್ಕ ಪ್ರಭಾಕರ್ ಭಟ್ ಜಿಲ್ಲೆಗೆ ಆಗಮಿಸ್ತಿದ್ದಾರೆ. ಅದರಲ್ಲೂ ಬಿಜೆಪಿಗೆ ಅಧಿಕಾರ ಸಿಗದಂತೆ ಮಾಡಿ ಮೈತ್ರಿ ಸರ್ಕಾರದ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಚ್‍ಡಿಕೆ-ಡಿಕೆಶಿ ಇಬ್ಬರನ್ನು ಇದೀಗ ಬಿಜೆಪಿ ಸರ್ಕಾರ ಬಂದ ಬಳಿಕ ಆರ್‌ಎಸ್‌ಎಸ್ ಹಾಗೂ ಬಿಜೆಪಿ ನಾಯಕರು ಟಾರ್ಗೆಟ್ ಮಾಡುತ್ತಿದ್ದರಾ ಎಂಬ ಅನುಮಾನಗಳು ವ್ಯಕ್ತವಾಗಿವೆ.

    ಭಾನುವಾರ ನಡೆಯಲಿರುವ ಪಥಸಂಚಲನದಲ್ಲಿ ಬಿಜೆಪಿಯ ನಾಯಕರಾದ ಸಿಪಿ ಯೋಗೇಶ್ವರ್, ಬಿಜೆಪಿ ವಕ್ತಾರ ಅಶ್ವಥ್ ನಾರಾಯಣ, ಜಿಲ್ಲಾಧ್ಯಕ್ಷ ಎಂ.ರುದ್ರೇಶ್ ಭಾಗವಹಿಸಲಿದ್ದಾರೆ. ಅದಕ್ಕೆ ಪೂರಕವೆಂಬಂತೆ ಈಗಾಗಲೇ ಸಿಪಿವೈ ಗಣವೇಷಧಾರಿಯಾಗಿ ಮಕ್ಕಳ ಜೊತೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಡಿಸಿಎಂ ಅಶ್ವಥ್ ನಾರಾಯಣ್ ಸಹ ಭಾಗವಹಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ. ಇದನ್ನು ಓದಿ: ಮಂತ್ರಿಗಿರಿಗಾಗಿ ಹೊಸ ವೇಷ ಹಾಕಿದ್ರಾ ಸಿ.ಪಿ.ಯೋಗೇಶ್ವರ್?

    ಮೊದಲ ಬಾರಿಗೆ ನಗರದ 2 ಮಾರ್ಗಗಳಲ್ಲಿ ಪಥಸಂಚಲನ ಸಾಗಲಿದೆ. ಸುಮಾರು 5 ಸಾವಿರ ಮಂದಿ ಬಾಗವಹಿಸುವ ನಿರೀಕ್ಷೆಯಿದ್ದು, ಕಲ್ಲಡ್ಕ ಪ್ರಭಾಕರ್ ಭಟ್ ಅವರಿಂದ ಜೂನಿಯರ್ ಕಾಲೇಜು ಮೈದಾನದಲ್ಲಿ ದಿಕ್ಸೂಚಿ ಭಾಷಣ ನಡೆಯಲಿದೆ. ಆರ್.ಎಸ್.ಎಸ್ ಪಥಸಂಚಲನಕ್ಕೆ 5 ಸರ್ಕಲ್ ಇನ್ಸೆ ಪೆಕ್ಟರ್, 7 ಸಬ್ ಇನ್ ಸ್ಪೆಕ್ಟರ್, 22 ಎಎಸ್‍ಐ, 162 ಪೊಲೀಸ್ ಪೇದೆಗಳು, 5 ಡಿಆರ್ ತುಕಡಿಗಳು, 40 ಮಂದಿ ಹೋಂ ಗಾರ್ಡ್ ಗಳು ಪಥಸಂಚಲನದಲ್ಲಿ ನಿಯೋಜನೆಗೊಂಡಿದ್ದಾರೆ.

  • ನುಸುಳುಕೋರರು ಪಾಕಿಸ್ತಾನ, ಬಾಂಗ್ಲಾಕ್ಕೆ ತೊಲಗಿ- ಕಲ್ಲಡ್ಕ ಪ್ರಭಾಕರ ಭಟ್

    ನುಸುಳುಕೋರರು ಪಾಕಿಸ್ತಾನ, ಬಾಂಗ್ಲಾಕ್ಕೆ ತೊಲಗಿ- ಕಲ್ಲಡ್ಕ ಪ್ರಭಾಕರ ಭಟ್

    – ಭಾರತೀಯರಿಗೆ ಸಿಎಎಯಿಂದ ಸಮಸ್ಯೆಯಿಲ್ಲ

    ಉಡುಪಿ: ಪೌರತ್ವ ಕಾನೂನು ಬಂದಿರುವುದು ಪಾಕಿಸ್ತಾನದ ನುಸುಳುಕೋರರ ವಿರುದ್ಧ. ಭಾರತೀಯ ಮುಸಲ್ಮಾನರಿಗೆ ಪೌರತ್ವ ಕಾನೂನಿನಿಂದ ಸಮಸ್ಯೆಯಾಗಲ್ಲ ಎಂದು ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಹೇಳಿದ್ದಾರೆ.

    ಉಡುಪಿಯ ಕಟಪಾಡಿಯಲ್ಲಿ ಪೌರತ್ವ ಕಾಯ್ದೆ ಕುರಿತು ಸಮರ್ಥನಾ ಸಮಾವೇಶದಲ್ಲಿ ಸಾವಿರಾರು ಜನರನ್ನು ಉದ್ದೇಶಿಸಿ ಮಾತಾಡಿದ ಅವರು, ನುಸುಳುಕೋರರಾಗಿ ಬಾಂಗ್ಲಾ, ಅಫ್ಘಾನ್, ಪಾಕ್‍ನಿಂದ ಕೆಲ ಪಾಪಿ ಮುಸಲ್ಮಾನರು ಬಂದಿದ್ದಾರೆ. ದೇಶದ ಅರಾಜಕತೆಗೆ ಅವರೇ ಕಾರಣವಾಗಿದ್ದಾರೆ. ನಾವು ಈಗಾಗಲೇ ದೇಶದ್ರೋಹಿಗಳಿಗೆ ಎಲ್ಲಾ ದಾಖಲೆ ಕೊಟ್ಟಿದ್ದೇವೆ. ಅದನ್ನು ಹಿಂಪಡೆದು ನಮ್ಮಲ್ಲಿ ಹುಟ್ಟಿ, ಸಂಕಷ್ಟದಲ್ಲಿದ್ದವರಿಗೆ ನಾವು ಪೌರತ್ವ ಕೊಡುತ್ತೇವೆ ಹೊರತು, ಇಲ್ಲಿನವರ ಪೌರತ್ವ ಹಿಂಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

    ಸಿಎಎ, ಎನ್.ಆರ್.ಸಿ, ಎನ್.ಪಿ.ಆರ್ ನಿಂದ ಭಾರತೀಯ ಮುಸಲ್ಮಾನರಿಗೆ ಯಾವುದೇ ಸಮಸ್ಯೆ ಇಲ್ಲ. ದಾಖಲೆ ಇಲ್ಲದವರು ಪಾಕ್‍ನಲ್ಲಿ ಜಮೀನು ಖರೀದಿಸಿ ಎಂದು ಸಲಹೆ ನೀಡಿದರು. ಎಲ್ಲರ ಜೊತೆ ಎಲ್ಲರಂತೆ ಬದುಕುವುದಾದರೆ ಬದುಕಿ. ಆಗದಿದ್ದರೆ ನಿಮ್ಮ ನೆಲ ನಿಮಗಿದೆ. ದಾಖಲೆ ಕೇಳುವಾಗ ಹೆಸರು ಹೇಳುವುದಿಲ್ವಾ? ಅಪ್ಪ ಯಾರೆಂದು ನಿಮಗೆ ಗೊತ್ತಿಲ್ವಾ? ಭಾರತ ಅಂದ್ರೆ ಛತ್ರ ಅಲ್ಲ. ಭಾರತ ಪವಿತ್ರ ನೆಲ ಇಲ್ಲಿ ನೆಲೆಸಲು ಪೌರತ್ವ ಬೇಕು ಎಂದು ಗುಡುಗಿದರು.

    ಮಂಗಳೂರು ಗೋಲಿಬಾರ್ ಪ್ರಕರಣದಲ್ಲಿ ಇಬ್ಬರು ಭಯೋತ್ಪಾದಕರು ಪ್ರಾಣ ಕಳೆದುಕೊಂಡರು. ಕಮಿಷನರ್ ಡಾ. ಹರ್ಷಗೆ ಅಭಿನಂದನೆ. ಪರಿಸ್ಥಿತಿ ಕೈಮೀರಿತ್ತು. ಗೋಲಿಬಾರ್ ಮಾಡದಿದ್ದರೆ ದೇಶದಲ್ಲಿ ಮುಸ್ಲಿಂ ಅಟ್ಟಹಾಸ ನಡೆಯುತ್ತಿತ್ತು. ಪೌರತ್ವ ಕಾಯ್ದೆಗೆ ಎಲ್ಲರೂ ಒಳಗಾಗಬೇಕು. ದಾಖಲೆ ಇಲ್ಲದವರು ಹೊರಗೆ ನಡೆಯಿರಿ. ಪಾಕಿಸ್ತಾನ, ಬಾಂಗ್ಲಾ ಮತ್ತಿತರ ದೇಶದಲ್ಲಿ ಐದು ಸೈಟ್ ತೆಗೆದುಕೊಳ್ಳಿ ಎಂದರು.

    ಭಾರತ ಮೃತ್ಯುಂಜಯ ದೇಶ. ಮೋದಿ, ಅಮಿತ್ ಶಾ ರಂತಹ ಜನ ಹುಟ್ಟಿ ಬರುತ್ತಲೇ ಇರುತ್ತಾರೆ. ಭಾರತ ಸೂಪರ್ ಪವರ್ ಆಗೋದು ಬೇಡ. ಭಾರತ ವಿಶ್ವ ಗುರು ಆದರೆ ಸಾಕು. ನಮ್ಮ ಸಂಸ್ಕೃತಿ, ವಿಚಾರ, ಆಚರಣೆಗಳ ಪಾಲನೆಯಿಂದ ತನ್ನಿಂದ ತಾನೇ ಭಾರತ ವಿಶ್ವಗುರು ಆಗುತ್ತದೆ ಎಂದರು. ಹಿಂದೂ, ಮುಸಲ್ಮಾನ, ಕ್ರೈಸ್ತ, ಜೈನ, ಪಾರಸಿ, ಸಿಖ್ ಹೀಗೆ ದೇಶದ ಪ್ರತಿಯೊಬ್ಬ ನೋಂದಣಿ ಮಾಡಲೇಬೇಕು. ದೇಶದ ನುಸುಳುಕೋರರು ಭಾರತದೊಳಗೆ ಉಳಿಯಲು ಸಾಧ್ಯವಿಲ್ಲ ಎಂದು ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.

  • ಕಲ್ಲಡ್ಕ ಪ್ರಭಾಕರ ಭಟ್‍ಗೆ ಪರೋಕ್ಷ ಟಾಂಗ್ ಕೊಟ್ಟ ಮಾಧುಸ್ವಾಮಿ

    ಕಲ್ಲಡ್ಕ ಪ್ರಭಾಕರ ಭಟ್‍ಗೆ ಪರೋಕ್ಷ ಟಾಂಗ್ ಕೊಟ್ಟ ಮಾಧುಸ್ವಾಮಿ

    ಹಾಸನ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಯಾವ ಸಭೆಯಲ್ಲೂ ನಾನು ಕೇವಲ ಮೂರು ವರ್ಷ ಸಿಎಂ ಆಗಿ ನಂತರ ಚುನಾವಣೆಗೆ ಹೋಗುವುದಿಲ್ಲ ಎಂದು ಹೇಳಿಲ್ಲ ಎಂದು ಕಾನೂನು ಸಂಸದೀಯ ಸಚಿವ ಮಾಧುಸ್ವಾಮಿ ಹೇಳಿದ್ದಾರೆ. ಇದನ್ನೂ ಓದಿ: ಯಡಿಯೂರಪ್ಪ ಮುಂದಿನ ಚುನಾವಣೆಗೆ ನಿಲ್ಲಲ್ಲವೆಂದು ಹೇಳಿದ್ದಾರೆ: ಕಲ್ಲಡ್ಕ ಪ್ರಭಾಕರ್ ಭಟ್

    ಸಚಿವ ಮಾಧುಸ್ವಾಮಿ ಇಂದು ಹಾಸನಕ್ಕೆ ಭೇಟಿ ನೀಡಿದ್ದರು. ಈ ವೇಳೆ ಮಾಧ್ಯಮಗಳು ಕಲ್ಲಡ್ಕ ಪ್ರಭಾಕರ ಭಟ್ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ, ಪ್ರಭಾಕರ್ ಭಟ್ ಹೇಳಿಕೆ ಅದು ಅವರ ವೈಯಕ್ತಿಕ. ಆದರೆ ಸಿಎಂ ಬಿಎಸ್‍ವೈ ಯಾವ ಸಭೆಯಲ್ಲೂ ನಾನು ಕೇವಲ ಮೂರು ವರ್ಷ ಸಿಎಂ ಆಗಿ ನಂತರ ನಾನು ಚುನಾವಣೆಗೆ ಹೋಗುವುದಿಲ್ಲ ಎಂದು ಹೇಳಿಲ್ಲ. ಈ ಹಿಂದೆ ಹಲವಾರು ಸಭೆಯಲ್ಲಿ 150 ಸೀಟ್ ಗೆಲ್ಲಿಸಿ ಮತ್ತೆ ರಾಜ್ಯದ ಚುಕ್ಕಾಣಿ ಹಿಡಿಯುತ್ತೇವೆ ಎಂದು ಹೇಳಿದ್ದಾರೆ. ನಾವೆಲ್ಲರೂ ಸಿಎಂ ನಾಯಕತ್ವವನ್ನು ಒಪ್ಪಿಕೊಂಡಿದ್ದೇವೆ ಎಂದರು.

    ಸಚಿವ ಸಂಪುಟ ವಿಸ್ತರಣೆಯನ್ನು ಸಿಎಂ ಯಡಿಯೂರಪ್ಪ ಪ್ರವಾಸದಿಂದ ಬಂದ ನಂತರ ಮಾಡುತ್ತಾರೆ ಎಂದು ತಿಳಿಸಿದರು. ಡಿಸಿಎಂ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಮಾಧುಸ್ವಾಮಿ, ಅಯ್ಯೋ ನಾನು ಅಷ್ಟೊಂದು ಆಳವಾಗಿ ಯೋಚನೆ ಮಾಡಿಲ್ಲ. ಅದು ದೊಡ್ಡವರಿಗೆ ಬಿಟ್ಟ ವಿಚಾರ ಎಂದು ಹೇಳಿದರು.