ತಮಿಳುನಾಡಿನ ಡೆಂಕಣಿಕೋಟೆಯಲ್ಲಿ ‘ಕಲ್ಕಿ’ ಥೀಮ್‌ನಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಲಾಗಿದೆ. ಇದೀಗ ಪ್ರಭಾಸ್ (Prabhas) ನಟನೆಯ ‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾದ ಲೋಕವನ್ನು ಮರುಸೃಷ್ಟಿಸಲಾಗಿದೆ. ‘ಕಲ್ಕಿ’ ಇಲ್ಲಿ ಗಣಪತಿ ಅವತಾರವೆತ್ತಿದ್ದಾರೆ.
ಬಾಹುಬಲಿ, ಕೆಜಿಎಫ್, ಕಾಂತಾರ ಬಳಿಕ ‘ಕಲ್ಕಿ’ ಸಿನಿಮಾ ಸೆಟ್ ನಿರ್ಮಾಣ ಮಾಡಲಾಗಿದೆ. 30 ಲಕ್ಷ ರೂ. ವೆಚ್ಚದಲ್ಲಿ ಅದ್ಧೂರಿಯಾಗಿ ಸೆಟ್ ನಿರ್ಮಿಸಿದ್ದಾರೆ. 2 ತಿಂಗಳಿಂದ ಇದಕ್ಕಾಗಿಯೇ ಸಿದ್ಧತೆ ಮಾಡಲಾಗಿದೆ. ಸೆಟ್‌ಗೆ ಎಂಟ್ರಿಯಾಗುತ್ತಿದ್ದಂತೆ ಪಿಲ್ಲರ್‌ಗಳು, ಬುಜ್ಜಿ ಕಾರು, ಕಾಂಪ್ಲೆಕ್ಸ್, ಯಾಸ್ಕೀನ್ ಪಾತ್ರ ಇಲ್ಲಿ ಹೈಲೆಟ್ಸ್ ಆಗಿವೆ. ಕಲ್ಕಿ ಅವತಾರದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ. ಇದನ್ನೂ ಓದಿ:ರೇಣುಕಾಸ್ವಾಮಿ ಕೊಲೆಯಾಗಿ ಇಂದಿಗೆ 3 ತಿಂಗಳು – ಪ್ರಕರಣ ಭೇದಿಸಿದ ಪೊಲೀಸರಿಗೆ ಹಿರಿಯ ಅಧಿಕಾರಿಗಳ ಮೆಚ್ಚುಗೆ
ಆರ್ಟ್ ಡೈರೆಕ್ಟರ್ ಚಿತ್ತಾ ಜಿನೇಂದ್ರ ಅವರು ‘ಕಲ್ಕಿ’ ಸೆಟ್ ನಿರ್ಮಾಣ ಮಾಡಿ ಸೈ ಎನಿಸಿಕೊಂಡಿದ್ದಾರೆ. ಬೆಂಗಳೂರು, ತಮಿಳುನಾಡು, ಆಂಧ್ರಪ್ರದೇಶ ಭಾಗದಿಂದ ಭಕ್ತರು ಆಗಮಿಸುತ್ತಿದ್ದಾರೆ. ಇನ್ನೂ ‘ಕಲ್ಕಿ’ ಸೆಟ್‌ಗೆ ಪ್ರಭಾಸ್ ಸಿನಿಮಾತಂಡ ಮೆಚ್ಚುಗೆ ಸೂಚಿಸಿದೆ.
ವೈಜ್ಞಾನಿಕ ಮತ್ತು ಕಾಲ್ಪನಿಕ ಸಮ್ಮಿಶ್ರಣದ ದೃಶ್ಯಕಾವ್ಯ ‘ಕಲ್ಕಿ 2898 AD’ (Kalki) ಚಿತ್ರದ ಬಹು ನಿರೀಕ್ಷಿತ ಬಿಡುಗಡೆಯ ಟ್ರೈಲರ್ ಅಂತಿಮವಾಗಿ ಅನಾವರಣಗೊಂಡಿದೆ. ಮೊದಲ ನೋಟವು ಭಾರತೀಯ ಪುರಾಣಗಳಲ್ಲಿ ಬೇರೂರಿರುವ ಅಸಾಧಾರಣ ‘ಕಲ್ಕಿ 2898 AD’ ಸಿನಿಮೀಯ ಬ್ರಹ್ಮಾಂಡವನ್ನು ಪ್ರೇಕ್ಷಕರಿಗೆ ಪರಿಚಯಿಸಿದರೆ, ಇದೀಗ ಬಿಡುಗಡೆ ಆಗಿರುವ ಟ್ರೇಲರ್ ಚಿತ್ರದೊಳಗಿನ ಇನ್ನಷ್ಟ ಆಳವನ್ನು ನೋಡುಗನಿಗೆ ಪರಿಚಯಿಸಿದೆ. ಇದು ಮಹಾಕಾವ್ಯದ ಇನ್ನೊಂದು ಹಂತದ ಬಗ್ಗೆ ಸುಳಿವು ನೀಡುತ್ತದೆ.
ಟ್ರೇಲರ್‌ನಲ್ಲಿ ಒಂದಕ್ಕಿಂತ ಒಂದು ಮೀರಿಸುವ ಪಾತ್ರಗಳೇ ಹೈಲೈಟ್. ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ‘ಅಶ್ವತ್ಥಾಮ’ ಆಗಿ ಧೈರ್ಯಶಾಲಿ ಸಾಹಸಗಳನ್ನು ಪ್ರದರ್ಶಿಸುತ್ತಾರೆ. ಉಳಗನಾಯಗನ್ ಕಮಲ್ ಹಾಸನ್ ಗುರುತಿಸಲಾಗದ ಇನ್ನೂ ಮಾರಣಾಂತಿಕ ಅವತಾರದಲ್ಲಿ ‘ಯಾಸ್ಕಿನ್’ ಆಗಿ ಕಾಣಿಸಿಕೊಂಡಿದ್ದಾರೆ. ಪ್ರಭಾಸ್ ಭೈರವನಾಗಿ, ದೀಪಿಕಾ ಪಡುಕೋಣೆ ‘ಸುಮತಿ’ ಪಾತ್ರದಲ್ಲಿ ಎದುರಾಗಿದ್ದಾರೆ. ದಿಶಾ ಪಟಾನಿ ‘ರಾಕ್ಸಿ’ ಖಡಕ್ ಆಗಿಯೇ ಮಿಂಚು ಹರಿಸಿದ್ದಾರೆ.
ಕಲ್ಕಿ 2898 AD ಚಿತ್ರದ ಟ್ರೇಲರ್‌ನಲ್ಲಿ ಬಗೆಬಗೆ ವಿಭಿನ್ನ ಪ್ರಪಂಚಗಳನ್ನು ಕಾಣಬಹುದು. ಒಂದು ಕಾಶಿ, ಅದರ ಉಳಿವಿಗಾಗಿ ಹೋರಾಡುತ್ತಿರುವ, ಕೊನೆಯದಾಗಿ ಉಳಿದ ನಗರವೆಂದು ಬಿಂಬಿಸಲಾಗಿದೆ. ದೃಶ್ಯವೈಭವವೇ ಇಡೀ ಟ್ರೇಲರ್‌ನ ಜೀವಾಳ. ಊಹೆಗೂ ನಿಲುಕದ ಒಂದಷ್ಟು ಅಚ್ಚರಿಗೆ ದೂಡುವ ದೃಶ್ಯಗಳೇ ಇಲ್ಲಿನ ಹೈಲೈಟ್. ಅತ್ಯುತ್ತಮ ಹಿನ್ನೆಲೆ ಸ್ಕೋರ್, ಹೈ ಕ್ಲಾಸ್ VFX ಮತ್ತು ರೋಮಾಂಚನಗೊಳಿಸುವ ದೃಶ್ಯಗಳೊಂದಿಗೆ, ಈ ಸಿನಿಮಾ ಮೂಡಿಬಂದಿದೆ. ತೆಲುಗು, ಹಿಂದಿ, ತಮಿಳು, ಮಲಯಾಳಂ, ಕನ್ನಡ ಮತ್ತು ಇಂಗ್ಲಿಷ್ ಸೇರಿದಂತೆ ಬಹು ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ.
‘ಕಲ್ಕಿ 2898 AD’ ಚಿತ್ರದಲ್ಲಿ ನಿರ್ದೇಶಕ ನಾಗ್ ಅಶ್ವಿನ್ ಅವರ ದೂರದೃಷ್ಟಿಯ ವಿಧಾನವು ಭಾರತೀಯ ಸಿನಿಮಾವನ್ನು ಅದರ ನೆಲದ ದೃಶ್ಯಗಳು ಮತ್ತು ಕಥೆ ಹೇಳುವ ಮೂಲಕ ಮರುವ್ಯಾಖ್ಯಾನಿಸುವ ಭರವಸೆ ನೀಡುತ್ತದೆ. ‘ಕಲ್ಕಿ 2898 AD’ ನಿಜವಾದ ಪ್ಯಾನ್-ಇಂಡಿಯನ್ ಸಿನಿಮಾ ಎನಿಸಿಕೊಂಡಿದೆ. ತಾರಾಗಣದಲ್ಲಿ ಅಮಿತಾಬ್ ಬಚ್ಚನ್, ಕಮಲ್ ಹಾಸನ್, ಪ್ರಭಾಸ್, ದೀಪಿಕಾ ಪಡುಕೋಣೆ ಮತ್ತು ದಿಶಾ ಪಟಾನಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ನಾಗ್ ಅಶ್ವಿನ್ ನಿರ್ದೇಶಿಸಿದ್ದಾರೆ ಮತ್ತು ವೈಜಯಂತಿ ಮೂವೀಸ್ ಬಂಡವಾಳ ಹೂಡಿದೆ. ಈ ಬಹುಭಾಷಾ, ಪುರಾಣ- ಪ್ರೇರಿತ ವೈಜ್ಞಾನಿಕ ಕಥೆಯುಳ್ಳ ಸಿನಿಮಾ, ಜೂನ್ 27ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.
ಪ್ರಭಾಸ್ (Prabhas), ಅಮಿತಾಭ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ ಮತ್ತು ದಿಶಾ ಪಟಾನಿ ನಟಿಸಿರುವ ‘ಕಲ್ಕಿ 2898 AD’ (Kalki) ಚಿತ್ರದ ಟ್ರೈಲರ್ ಬಿಡುಗಡೆಯ ಬಳಿಕ ಇದೀಗ ಇದೇ ಚಿತ್ರದ ಭೈರವ ಆಂಥಮ್ ಬಿಡುಗಡೆಯಾಗಿದೆ. ವೈಜಯಂತಿ ಮೂವೀಸ್ ಯೂಟ್ಯೂಬ್ ಚಾನಲ್‌ನಲ್ಲಿ ಹಾಡು ರಿಲೀಸ್ ಆಗಿದೆ. ನಟ ಪ್ರಭಾಸ್ ಅವರು ನಟಿಸಿರುವ ಈ ಚಿತ್ರದ ಹಾಡಿಗೆ ಮೊದಲ ಸಲ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಧ್ವನಿ ನೀಡಿದ್ದಾರೆ. ಸಂತೋಷ್ ನಾರಾಯಣನ್ ಈ ಹಾಡಿಗೆ ಸಂಗೀತ ನೀಡಿದ್ದಾರೆ.
ಪಕ್ಕಾ ಮಾಸ್ ಅವತಾರದಲ್ಲಿ ನಟ ಪ್ರಭಾಸ್ ಈ ಹಾಡಿನಲ್ಲಿ ಎದುರಾಗಿದ್ದಾರೆ. ತಲೆಗೆ ಟರ್ಬನ್ ಧರಿಸಿ ಮತ್ತು ಪಂಚೆಯಲ್ಲಿ ಮಿಂಚಿದ್ದಾರೆ. ಈಗಾಗಲೇ ಟ್ರೇಲರ್ ಮೂಲಕ ಎಲ್ಲರ ಗಮನ ಸೆಳೆದ ಈ ಸಿನಿಮಾ, ಇದೀಗ ಭೈರವ ಆಂಥಮ್ ಮೂಲಕ ಕಿಕ್ ಹೆಚ್ಚಿಸುತ್ತಿದೆ. ತೆಲುಗು ಮಾತ್ರವಲ್ಲದೆ ಹಿಂದಿ, ತಮಿಳು, ಮಲಯಾಳಂ, ಕನ್ನಡ ಮತ್ತು ಇಂಗ್ಲಿಷ್ ಸೇರಿದಂತೆ ಬಹು ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ.
ಈ ವರ್ಷದ ಅತೀ ನಿರೀಕ್ಷಿತ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಕಲ್ಕಿ 2898 AD’ ಚಿತ್ರದಲ್ಲಿ ಅಮಿತಾಭ್ ಬಚ್ಚನ್, ಕಮಲ್ ಹಾಸನ್, ಪ್ರಭಾಸ್, ದೀಪಿಕಾ ಪಡುಕೋಣೆ, ದಿಶಾ ಪಠಾಣಿ ಮುಂತಾದವರು ನಟಿಸಿದ್ದಾರೆ. ವೈಜಯಂತಿ ಮೂವೀಸ್ ಬ್ಯಾನರ್ನಡಿ ಅಶ್ವಿನಿ ದತ್ ನಿರ್ಮಿಸಿರುವ ಈ ಚಿತ್ರವನ್ನು ನಾಗ್ ಅಶ್ವಿನ್ ನಿರ್ದೇಶನ ಮಾಡಿದ್ದಾರೆ. ‘ಕಲ್ಕಿ 2898 AD’ ಚಿತ್ರವು ಜಗತ್ತಿನಾದ್ಯಂತ ಜೂನ್ 27ರಂದು ಬಿಡುಗಡೆ ಆಗಲಿದೆ.
ಬುಜ್ಜಿ ಅಂಡ್ ಭೈರವ ಸಿರೀಸ್ ಮೂಲಕ ಗಮನ ಸೆಳೆದ ಕಲ್ಕಿ 2898 AD (Kalki) ಸಿನಿಮಾ ಇದೀಗ ಟ್ರೇಲರ್ ಆಗಮನದ ಸುದ್ದಿ ನೀಡಿದೆ. ಈಗಾಗಲೇ ಸಿನಿಮಾಪ್ರೇಮಿಗಳ ಗಮನ ಸೆಳೆದ ಈ ಸಿನಿಮಾ, ಒಂದಾದ ಮೇಲೊಂದು ಅಪ್‌ಡೇಟ್ ನೀಡುತ್ತ ನೋಡುಗನನ್ನು ಸೆಳೆಯುತ್ತಿದೆ. ಇದೀಗ ಟ್ರೈಲರ್ (Trailer) ಕಣ್ತುಂಬಿಕೊಳ್ಳಲು ದಿನಾಂಕ ನಿಗದಿ ಮಾಡಿದೆ ಚಿತ್ರತಂಡ.
ಕೇವಲ ತೆಲುಗು ಪ್ರೇಕ್ಷಕರು ಮಾತ್ರವಲ್ಲದೆ, ಇಡೀ ದೇಶ, ಪ್ರಭಾಸ್ ನಟನೆಯ ಕಲ್ಕಿ 2898 AD ಸಿನಿಮಾಕ್ಕಾಗಿ ಕಾಯುತ್ತಿದೆ. ಒಂದಾದ ನಂತರ ಬಂದು ವಿಶೇಷತೆಗಳನ್ನು ಈ ಸಿನಿಮಾ ಪ್ರೇಕ್ಷಕರ ಮಡಿಲಿಗೆ ಕಾಯುತ್ತಲೇ ಬಂದಿರುವ ಕಲ್ಕಿ ಸಿನಿಮಾ ತಾರಾಗಣದ ವಿಚಾರದಲ್ಲೂ ಕುತೂಹಲ ಮೂಡಿಸಿದೆ. ಅದರಂತೆ ಟ್ರೈಲರ್ ಮೂಲಕ ಮತ್ತಷ್ಟು ರೋಚಕತೆ ಉಕ್ಕಿಸಲು ಚಿತ್ರತಂಡ ಸಜ್ಜಾಗಿದೆ. ಜೂನ್ 10ರಂದು ಬಹುಭಾಷೆಗಳಲ್ಲಿ ಕಲ್ಕಿ ಚಿತ್ರದ ಟ್ರೈಲರ್ ಬಿಡುಗಡೆ ಆಗಲಿದೆ.
ಅಮಿತಾಭ್ ಬಚ್ಚನ್, ಕಮಲ್ ಹಾಸನ್, ಪ್ರಭಾಸ್ (Prabhas), ದೀಪಿಕಾ ಪಡುಕೋಣೆ ಮತ್ತು ದಿಶಾ ಪಟಾನಿ ನಟಿಸಿರುವ ಕಲ್ಕಿ 2898 AD ಸಿನಿಮಾದ ಟ್ರೇಲರ್ ಜೂನ್ 10ರಂದು ನೋಡುಗರ ಎದುರು ತರಲು ನಿರ್ಮಾಣ ಸಂಸ್ಥೆ ಸಿದ್ಧವಾಗಿದೆ. ಈಗಾಗಲೇ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆ ಆಗಿರುವ ಬಿ&ಬಿ ಬುಜ್ಜಿ ಮತ್ತು ಭೈರವ ಸಿರೀಸ್ ಮೂಲಕ ಇನ್ನಷ್ಟು ಕ್ಯೂರಿಯಾಸಿಟಿ ಮೂಡಿಸಿದ ನಿರ್ದೇಶಕ ನಾಗ್ ಅಶ್ವಿನ್, ಇದೀಗ ಟ್ರೇಲರ್‌ನಲ್ಲೇನಿರಲಿದೆ ಎಂಬುದನ್ನು ತೋರಿಸಲು ಆಗಮಿಸುತ್ತಿದ್ದಾರೆ.
ಟ್ರೈಲರ್ ಬಿಡುಗಡೆಯ ದಿನಾಂಕವನ್ನು ಹೊಸ ಪೋಸ್ಟರ್‌ನೊಂದಿಗೆ ಚಿತ್ರನಿರ್ಮಾಣ ಸಂಸ್ಥೆ ಘೋಷಿಸಿದೆ. ಪರ್ವತದ ಶಿಖರದ ಮೇಲೆ ನಿಂತ ಭಂಗಿಯಲ್ಲಿ ಭೈರವ ಸೂಪರ್ ಹೀರೋ ರೀತಿಯಲ್ಲಿ ಕಂಡಿದ್ದಾನ್. ಅಂದಹಾಗೆ ವೈಜಯಂತಿ ಮೂವೀಸ್ ಬ್ಯಾನರ್ನಡಿ ಅಶ್ವಿನಿ ದತ್ ನಿರ್ಮಿಸಿರುವ ಈ ಚಿತ್ರವನ್ನು ನಾಗ್ ಅಶ್ವಿನ್ ನಿರ್ದೇಶನ ಮಾಡಿದ್ದಾರೆ. ‘ಕಲ್ಕಿ 2898 AD’ ಚಿತ್ರವು ಜಗತ್ತಿನಾದ್ಯಂತ ಜೂನ್ 27ರಂದು ತೆಲುಗು, ತಮಿಳು, ಕನ್ನಡ, ಮಲಯಾಳಂ, ಹಿಂದಿ ಸೇರಿ ಇನ್ನೂ ಹಲವು ಭಾಷೆಗಳಲಿ ಈ ಸಿನಿಮಾ ಬಿಡುಗಡೆ ಆಗಲಿದೆ.
ಪ್ರಭಾಸ್ ನಟನೆಯ ಕಲ್ಕಿ (Kalki) ಸಿನಿಮಾದಲ್ಲಿ ಕಥಾನಾಯಕನ ಜೊತೆ ರೋಬೊ ರೀತಿಯ ಕಲ್ಕಿ ವಾಹನವಿದೆ. ಇದೊಂದು ರೀತಿಯಲ್ಲಿ ವಿಚಿತ್ರ ವಾಹನ. ಕಾರಿನ ರೀತಿಯಲ್ಲಿ ಅದು ಕಂಡರೆ, ಅದಕ್ಕೆ ಮೂರೇ ಮೂರು ಚಕ್ರ. ಆ ಚಕ್ರ ಕೂಡ ಸಾಮಾನ್ಯವಾಗಿಲ್ಲ. ಒಬ್ಬರೇ ಒಬ್ಬರು ಕುಳಿತುಕೊಳ್ಳಬಹುದಾದ ಬುಜ್ಜಿ ವಾಹನವು ವಿಶೇಷ ರೀತಿಯಲ್ಲಿ ವಿನ್ಯಾಸ ಮಾಡಲಾಗಿದೆ. ಈ ವಾಹನಕ್ಕೆ ಬರೋಬ್ಬರಿ ಏಳು ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ.
ಇದೊಂದು ಮ್ಯಾನ್‍್ಮೇಡ್ ವಿಶೇಷ ಕಾರು ಆಗಿದ್ದು, ಮಹೇಂದ್ರ ಕಂಪೆನಿಯು ಈ ವಿಶೇಷ ವಾಹನದ ವಿನ್ಯಾಸ ಮಾಡಲಾಗಿದೆ. ಈ ವಾಹನವನ್ನು ಓಡಿಸೋದು ಅಷ್ಟು ಸುಲಭವಲ್ಲ ಎನ್ನಲಾಗುತ್ತಿದೆ. ಆದರೂ, ಪ್ರಭಾಸ್, ನಾಗಚೈತನ್ಯ ಸೇರಿದಂತೆ ಹಲವು ಕಲಾವಿದರು ಈ ಬುಜ್ಜಿ ಸವಾರಿ ಮಾಡಿದ್ದಾರೆ. ಅಲ್ಲದೇ, ಈ ಕಾರನ್ನು ಸಿನಿಮಾದ ಬಳಕೆಗೂ ತೆಗೆದುಕೊಂಡು ಹೋಗಲಾಗುತ್ತಿದೆ.
ಬುಜ್ಜಿ ಚಿಕ್ಕ ಸ್ವರೂಪದ ಕಾರುಗಳನ್ನು ರೆಡಿ ಮಾಡಿಸಿ, ಕಲಾವಿದರ ಮಕ್ಕಳಿಗೆ ಉಡುಗೊರೆಯಾಗಿ ನೀಡುತ್ತಿದ್ದಾರೆ ಪ್ರಭಾಸ್. ರಾಮ್ ಚರಣ್ ಅವರ ಪುತ್ರಿಗೆ ಚಿಕ್ಕದೊಂದು ಕಾರು ಮತ್ತು ಸಂದೇಶದ ಕಾರ್ಡ್ ನೀಡಿದ್ದಾರೆ. ಈ ವಿವರವನ್ನು ರಾಮ್ ಚರಣ್ ಪತ್ನಿ ಉಪಾಸನಾ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಾಕಿ ಪೋಸ್ಟ್ ಮಾಡಿದ್ದಾರೆ.
‘ಕಲ್ಕಿ’ ಸಿನಿಮಾದಲ್ಲಿ ಬುಜ್ಜಿಗೆ ಸಾಕಷ್ಟು ಮಹತ್ವವನ್ನು ನೀಡಲಾಗಿದೆಯಂತೆ. ಬುಜ್ಜಿಗಾಗಿಯೇ ಸಿನಿಮಾ ತಂಡ ಮೊನ್ನೆಯಷ್ಟೇ ವಿಶೇಷ ಕಾರ್ಯಕ್ರವನ್ನೂ ಆಯೋಜನೆ ಮಾಡಿತ್ತು. ಆ ಬುಜ್ಜಿಗೆ ಧ್ವನಿದಾನ ಮಾಡಿದ್ದಾರಂತೆ ನಟಿ ಕೀರ್ತಿ ಸುರೇಶ್ (Keerthi Suresh). ಬುಜ್ಜಿ ಕೂಡ ಪಾತ್ರದಂತೆ ಚಿತ್ರದುದ್ದಕ್ಕೂ ಇರಲಿದೆಯಂತೆ.
2024 ರ ಭಾರತೀಯ ಮಹಾಕಾವ್ಯ ವೈಜ್ಞಾನಿಕ ಕಾಲ್ಪನಿಕ ಸಾಹಸ ಚಲನಚಿತ್ರ ಹಾಗೂ ‘ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್’ ಪ್ರಭಾಸ್ ಅಭಿನಯದ ‘ಕಲ್ಕಿ 2898 AD’ (Kalki) ಬಿಡುಗಡೆಗೂ ಪೂರ್ವದಲ್ಲೇ ಸಾಕಷ್ಟು ಕುತೂಹಲ ಮೂಡಿಸಿರುವ ಚಿತ್ರ. ಈವರೆಗೂ ಯಾರು ಮಾಡಿರದ ವಿನೂತನ ಪ್ರಯೋಗಕ್ಕೆ ಈ ಚಿತ್ರತಂಡ ಮುಂದಾಗಿದೆ. ಪ್ರಭಾಸ್ (Prabhas) ಈ ಚಿತ್ರದಲ್ಲಿ ಭೈರವನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಭೈರವನ ನಂಬಿಕಸ್ಥ ಗೆಳೆಯನಾಗಿ ಬುಜ್ಜಿ(ವಿಶೇಷ ಕಾರ್)ಪಾತ್ರವಿದೆ. ಈ ಎರಡು ಪಾತ್ರಗಳನಿಟ್ಟುಕೊಂಡು ಚಿತ್ರತಂಡ “B&B” ಎಂಬ ಹದಿನೈದು ಹದಿನೈದು ನಿಮಿಷಗಳ ಎರಡು ಅನಿಮೇಷನ್ ಸಿರೀಸ್ ಬಿಡುಗಡೆ ಮಾಡಿದೆ.
ದೇಶದ ಪ್ರಮುಖ ನಗರಗಳ ಚಿತ್ರಮಂದಿರಗಳಲ್ಲಿ ಈ ಅನಿಮೇಷನ್ ಸಿರೀಸ್ ಏಕಕಾಲಕ್ಕೆ ಬಿಡುಗಡೆಯಾಗಿದೆ. ಈ ಎರಡು ಭಾಗಗಳು ಮೇ 31 ರಿಂದ ಅಮೇಜಾನ್ ಪ್ರೈಮ್ ನಲ್ಲಿ ನೋಡಲು ಲಭ್ಯವಿದೆ. ಈ ಅನಿಮೇಷನ್ ಸೀರಿಸ್ ನಲ್ಲಿರುವ ಭೈರವ ಹಾಗೂ ಬುಜ್ಜಿಯ ಜುಗಲ್ ಬಂದಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಇದು ಚಿತ್ರದ ಪ್ರಚಾರಕಷ್ಟೇ ಮಾಡಿರುವ ಅನಿಮೇಷನ್ ಸಿರೀಸ್. ಚಿತ್ರದ ಕಥೆಯೆ ಬೇರೆ. ಇದೇ ಬೇರೆ ಎಂದು ನಿರ್ದೇಶಕ ನಾಗ್ ಅಶ್ವಿನ್ ತಿಳಿಸಿದ್ದಾರೆ.
ಕಳೆದ ಅರ್ಧ ಶತಕದಿಂದ ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಿಸಿರುವ ವೈಜಯಂತಿ ಮೂವೀಸ್ ಸಂಸ್ಥೆ ಈ ಚಿತ್ರವನ್ನು ನಿರ್ಮಿಸಿದ್ದು, ಹೆಸರಾಂತ ಕೆ.ವಿ.ಎನ್ ಪ್ರೊಡಕ್ಷನ್ಸ್ ಈ ಚಿತ್ರದ ವಿತರಣೆ ಮಾಡುತ್ತಿದೆ. ಬೆಂಗಳೂರಿನಲ್ಲೂ “ಕಲ್ಕಿ 2898 AD” ಚಿತ್ರದ ಅನಿಮೇಷನ್ ಸಿರೀಸ್ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕೆ.ವಿ.ಎನ್ ಪ್ರೊಡಕ್ಷನ್ ನ ಸುಪ್ರೀತ್ ಅವರು ಈ ಅನಿಮೇಷನ್ ಸಿರೀಸ್ ಬೆಂಗಳೂರು, ಮುಂಬೈ, ದೆಹಲಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡಲಾಗಿದೆ. ಎರಡು ಭಾಗಗಳಲ್ಲಿ ಇಂಗ್ಲೀಷ್ ಹಾಗೂ ತೆಲುಗು ಭಾಷೆಗಳಲ್ಲಿ ಮೂಡಿಬಂದಿರುವ ಈ ಅನಿಮೇಷನ್ ಸಿರೀಸ್ ಅನ್ನು ಅಮೇಜಾನ್ ಪ್ರೈಮ್ ನಲ್ಲಿ ವೀಕ್ಷಿಸಬಹುದು ಎಂದರು.
ಈ ವರ್ಷದ ಬಹು ನಿರೀಕ್ಷಿತ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಕಲ್ಕಿ 2898 AD’ ಚಿತ್ರದಲ್ಲಿ ಅಮಿತಾಭ್ ಬಚ್ಚನ್, ಕಮಲ್ ಹಾಸನ್, ಪ್ರಭಾಸ್, ದೀಪಿಕಾ ಪಡುಕೋಣೆ, ದಿಶಾ ಪಠಾಣಿ ಮುಂತಾದವರು ನಟಿಸಿದ್ದಾರೆ. ‘ಕಲ್ಕಿ 2898 AD’ ಚಿತ್ರವು ಜಗತ್ತಿನಾದ್ಯಂತ ಜೂನ್ 27ರಂದು ಬಿಡುಗಡೆ ಆಗಲಿದೆ.
ಪ್ರಭಾಸ್ ನಟನೆಯ ‘ಕಲ್ಕಿ’ ಸಿನಿಮಾದಲ್ಲಿ ಬುಜ್ಜಿಗೆ ಸಾಕಷ್ಟು ಮಹತ್ವವನ್ನು ನೀಡಲಾಗಿದೆ. ಬುಜ್ಜಿಗಾಗಿಯೇ ಮೊನ್ನೆಯಷ್ಟೇ ವಿಶೇಷ ಕಾರ್ಯಕ್ರವನ್ನೂ ಆಯೋಜನೆ ಮಾಡಿತ್ತು ಚಿತ್ರತಂಡ. ಈಗ ಆ ಬುಜ್ಜಿಗೆ ಧ್ವನಿದಾನ ಮಾಡಿದ್ದಾರಂತೆ ನಟಿ ಕೀರ್ತಿ ಸುರೇಶ್ (Keerthi Suresh). ಬುಜ್ಜಿ ಕೂಡ ಪಾತ್ರದಂತೆ ಚಿತ್ರದುದ್ದಕ್ಕೂ ಇರಲಿದೆಯಂತೆ.
ಟಾಲಿವುಡ್ ಮಾತ್ರವಲ್ಲದೆ, ಇಡೀ ಭಾರತ ಕಲ್ಕಿ (Kalki) 2898 AD ಸಿನಿಮಾಕ್ಕಾಗಿ ಕಾಯುತ್ತಿದೆ. ಒಂದಾದ ನಂತರ ಬಂದು ವಿಶೇಷತೆಗಳನ್ನು ಈ ಸಿನಿಮಾ ಪ್ರೇಕ್ಷಕರ ಮಡಿಲಿಗೆ ಕಾಯುತ್ತಲೇ ಬರುತ್ತಿದೆ. ಈಗ ಇದೇ ಸಿನಿಮಾದಿಂದ ಮತ್ತೊಂದು ವಿಶೇಷವನ್ನು ಅನಾವರಣಗೊಳಿಸಿದೆ ಚಿತ್ರತಂಡ. ಹೌದು, ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಪ್ರಭಾಸ್ (Prabhas,) ಅಭಿನಯದ ಕಲ್ಕಿ 2898 AD ಬಿಡುಗಡೆಗೆ ಹೆಚ್ಚು ದಿನಗಳು ಉಳಿದಿಲ್ಲ. ಹೀಗಿರುವಾಗಲೇ ಇದೇ ಕಲ್ಕಿ ಚಿತ್ರದ ಐದನೇ ಸೂಪರ್ ಸ್ಟಾರ್ ಯಾರು ಎಂಬುದನ್ನು ಕಿರು ವಿಡಿಯೋ ಮೂಲಕ ಅನಾವರಣ ಮಾಡಿದೆ ಚಿತ್ರತಂಡ.
ಆ ಐದನೇ ಸೂಪರ್‌ಸ್ಟಾರ್ ಬೇರಾರು ಅಲ್ಲ, ಬುಜ್ಜಿ ಹೆಸರಿನ ಆಪ್ತ ಸ್ನೇಹಿತ. ಅಂದರೆ, ಬುಜ್ಜಿಯನ್ನು ಭವಿಷ್ಯದ ವಾಹನ ಎಂದೇ ಚಿತ್ರತಂಡ ಹೇಳಿಕೊಂಡು, ಅದರ ಕಿರು ಝಲಕ್‌ಅನ್ನು ಮೇ 22ರಂದು ಅನಾವರಣ ಮಾಡಿದೆ. ನಿರ್ದೇಶಕ ನಾಗ್ ಅಶ್ವಿನ್, ನಿರ್ಮಾಪಕರಾದ ಸಿ. ಅಶ್ವಿನಿ ದತ್, ಸ್ವಪ್ನಾ ದತ್ ಚಲಸಾನಿ, ಪ್ರಿಯಾಂಕಾ ದತ್ ಚಲಸಾನಿ ಸೇರಿ ಸುಮಾರು ಇಪ್ಪತ್ತು ಸಾವಿರ ಪ್ರೇಕ್ಷಕರು ಮತ್ತು ಮಾಧ್ಯಮದವರ ಸಮ್ಮುಖದಲ್ಲಿ ಹೈದರಾಬಾದ್‌ನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಬುಜ್ಜಿಯನ್ನು ಪರಿಚಯಿಸಿದ್ದಾರೆ.
ಬುಜ್ಜಿ ಹೆಸರಿನ ಈ ಆಪ್ತ ಗೆಳೆಯ ಚಿತ್ರದ ನಾಯಕ ಭೈರವನ ಅತ್ಯಂತ ನಂಬಿಕಸ್ಥ ಗೆಳೆಯ. ಈ ಗೆಳೆಯನ ಕುರಿತು ವೈಜಯಂತಿ ನೆಟ್‍ವರ್ಕ್ ಯೂಟ್ಯೂಬ್ ಚಾನಲ್‍ನಲ್ಲಿ ಹೊಸ ವೀಡಿಯೋ ರಿಲೀಸ್ ಮಾಡಿದೆ. ವಿಡಿಯೋದಲ್ಲಿ ಬುಜ್ಜಿ ಹೇಗೆಲ್ಲ ಕೆಲಸ ಮಾಡುತ್ತೆ, ಭವಿಷ್ಯದ ಆಪ್ತ ಸ್ನೇಹಿತ ಎಂದು ಏಕೆ ಕರೆಯಲಾಗುತ್ತದೆ ಎಂಬುದು ಗೋಚರವಾಗುತ್ತದೆ.
ಈ ವರ್ಷದ ಅತೀ ನಿರೀಕ್ಷಿತ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಕಲ್ಕಿ 2898 AD’ ಚಿತ್ರದಲ್ಲಿ ಅಮಿತಾಭ್ ಬಚ್ಚನ್, ಕಮಲ್ ಹಾಸನ್, ಪ್ರಭಾಸ್, ದೀಪಿಕಾ ಪಡುಕೋಣೆ, ದಿಶಾ ಪಠಾಣಿ ಮುಂತಾದವರು ನಟಿಸಿದ್ದಾರೆ. ವೈಜಯಂತಿ ಮೂವೀಸ್ ಬ್ಯಾನರ್ನಡಿ ಅಶ್ವಿನಿ ದತ್ ನಿರ್ಮಿಸಿರುವ ಈ ಚಿತ್ರವನ್ನು ನಾಗ್ ಅಶ್ವಿನ್ ನಿರ್ದೇಶನ ಮಾಡಿದ್ದಾರೆ. ‘ಕಲ್ಕಿ 2898 AD’ ಚಿತ್ರವು ಜಗತ್ತಿನಾದ್ಯಂತ ಜೂನ್ 27ರಂದು ಬಿಡುಗಡೆ ಆಗಲಿದೆ.
ಟಾಲಿವುಡ್ ಮಾತ್ರವಲ್ಲದೆ, ಇಡೀ ಭಾರತ ಕಲ್ಕಿ (Kalki) 2898 AD ಸಿನಿಮಾಕ್ಕಾಗಿ ಕಾಯುತ್ತಿದೆ. ಒಂದಾದ ನಂತರ ಬಂದು ವಿಶೇಷತೆಗಳನ್ನು ಈ ಸಿನಿಮಾ ಪ್ರೇಕ್ಷಕರ ಮಡಿಲಿಗೆ ಕಾಯುತ್ತಲೇ ಬರುತ್ತಿದೆ. ಈಗ ಇದೇ ಸಿನಿಮಾದಿಂದ ಮತ್ತೊಂದು ವಿಶೇಷವನ್ನು ಅನಾವರಣಗೊಳಿಸಿದೆ ಚಿತ್ರತಂಡ. ಹೌದು, ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಪ್ರಭಾಸ್ (Prabhas,) ಅಭಿನಯದ ಕಲ್ಕಿ 2898 AD ಬಿಡುಗಡೆಗೆ ಹೆಚ್ಚು ದಿನಗಳು ಉಳಿದಿಲ್ಲ. ಹೀಗಿರುವಾಗಲೇ ಇದೇ ಕಲ್ಕಿ ಚಿತ್ರದ ಐದನೇ ಸೂಪರ್ ಸ್ಟಾರ್ ಯಾರು ಎಂಬುದನ್ನು ಕಿರು ವಿಡಿಯೋ ಮೂಲಕ ಅನಾವರಣ ಮಾಡಿದೆ ಚಿತ್ರತಂಡ.
ಆ ಐದನೇ ಸೂಪರ್‌ಸ್ಟಾರ್ ಬೇರಾರು ಅಲ್ಲ, ಬುಜ್ಜಿ ಹೆಸರಿನ ಆಪ್ತ ಸ್ನೇಹಿತ. ಅಂದರೆ, ಬುಜ್ಜಿಯನ್ನು ಭವಿಷ್ಯದ ವಾಹನ ಎಂದೇ ಚಿತ್ರತಂಡ ಹೇಳಿಕೊಂಡು, ಅದರ ಕಿರು ಝಲಕ್‌ಅನ್ನು ಮೇ 22ರಂದು ಅನಾವರಣ ಮಾಡಿದೆ. ನಿರ್ದೇಶಕ ನಾಗ್ ಅಶ್ವಿನ್, ನಿರ್ಮಾಪಕರಾದ ಸಿ. ಅಶ್ವಿನಿ ದತ್, ಸ್ವಪ್ನಾ ದತ್ ಚಲಸಾನಿ, ಪ್ರಿಯಾಂಕಾ ದತ್ ಚಲಸಾನಿ ಸೇರಿ ಸುಮಾರು ಇಪ್ಪತ್ತು ಸಾವಿರ ಪ್ರೇಕ್ಷಕರು ಮತ್ತು ಮಾಧ್ಯಮದವರ ಸಮ್ಮುಖದಲ್ಲಿ ಹೈದರಾಬಾದ್‌ನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಬುಜ್ಜಿಯನ್ನು ಪರಿಚಯಿಸಿದ್ದಾರೆ.
ಬುಜ್ಜಿ ಹೆಸರಿನ ಈ ಆಪ್ತ ಗೆಳೆಯ ಚಿತ್ರದ ನಾಯಕ ಭೈರವನ ಅತ್ಯಂತ ನಂಬಿಕಸ್ಥ ಗೆಳೆಯ. ಈ ಗೆಳೆಯನ ಕುರಿತು ವೈಜಯಂತಿ ನೆಟ್‍ವರ್ಕ್ ಯೂಟ್ಯೂಬ್ ಚಾನಲ್‍ನಲ್ಲಿ ಹೊಸ ವೀಡಿಯೋ ರಿಲೀಸ್ ಮಾಡಿದೆ. ವಿಡಿಯೋದಲ್ಲಿ ಬುಜ್ಜಿ ಹೇಗೆಲ್ಲ ಕೆಲಸ ಮಾಡುತ್ತೆ, ಭವಿಷ್ಯದ ಆಪ್ತ ಸ್ನೇಹಿತ ಎಂದು ಏಕೆ ಕರೆಯಲಾಗುತ್ತದೆ ಎಂಬುದು ಗೋಚರವಾಗುತ್ತದೆ.
ಈ ವರ್ಷದ ಅತೀ ನಿರೀಕ್ಷಿತ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಕಲ್ಕಿ 2898 AD’ ಚಿತ್ರದಲ್ಲಿ ಅಮಿತಾಭ್ ಬಚ್ಚನ್, ಕಮಲ್ ಹಾಸನ್, ಪ್ರಭಾಸ್, ದೀಪಿಕಾ ಪಡುಕೋಣೆ, ದಿಶಾ ಪಠಾಣಿ ಮುಂತಾದವರು ನಟಿಸಿದ್ದಾರೆ. ವೈಜಯಂತಿ ಮೂವೀಸ್ ಬ್ಯಾನರ್ನಡಿ ಅಶ್ವಿನಿ ದತ್ ನಿರ್ಮಿಸಿರುವ ಈ ಚಿತ್ರವನ್ನು ನಾಗ್ ಅಶ್ವಿನ್ ನಿರ್ದೇಶನ ಮಾಡಿದ್ದಾರೆ. ‘ಕಲ್ಕಿ 2898 AD’ ಚಿತ್ರವು ಜಗತ್ತಿನಾದ್ಯಂತ ಜೂನ್ 27ರಂದು ಬಿಡುಗಡೆ ಆಗಲಿದೆ.
‘ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್’ ಪ್ರಭಾಸ್ ಅಭಿನಯದ ‘ಕಲ್ಕಿ 2898 AD’ (Kalki) ಬಿಡುಗಡೆಗೆ ಇನ್ನು ಕೇವಲ ಎರಡು ತಿಂಗಳಷ್ಟೇ ಬಾಕಿ ಇದೆ. ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಬೆಟ್ಟದಷ್ಟು ನಿರೀಕ್ಷೆ ಮತ್ತು ಕುತೂಹಲವಿದೆ. ಈಗ ಚಿತ್ರದ ಐದನೇ ಸೂಪರ್ ಸ್ಟಾರ್ ಅನ್ನು ಇದೇ ಮೇ 22ರಂದು ಅನಾವರಣಗೊಳಿಸುವುದಾಗಿ ಚಿತ್ರತಂಡ ಘೋಷಿಸಿದ್ದು, ಆ ನಿರೀಕ್ಷೆ ಮತ್ತು ಕುತೂಹಲ ಹೆಚ್ಚಾಗಿದೆ.
ಈ ಐದನೇ ಸೂಪರ್ ಸ್ಟಾರ್ ಯಾರು? ಈ ರಹಸ್ಯವನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಹೆಸರು ಬುಜ್ಜಿ ಮತ್ತು ಈತ ನಾಯಕ ಭೈರವನ ಅತ್ಯಂತ ನಂಬಿಕಸ್ಥ ಗೆಳೆಯನಂತೆ. ಈ ಗೆಳೆಯನ ಕುರಿತು ಯೂಟ್ಯೂಬ್‍ನ ವೈಜಯಂತಿ ನೆಟ್‍ವರ್ಕ್ ಚಾನಲ್‍ನಲ್ಲಿ ಹೊಸ ವೀಡಿಯೋ ಬಿಡುಗಡೆ ಮಾಡಲಾಗಿದೆ. ‘From Skratch: Building A Superstar’ ಹೆಸರಿನ ಈ ವೀಡಿಯೋದಲ್ಲಿ ಬುಜ್ಜಿಯ ಕುರಿತು ಪರಿಚಯ ಮಾಡಿಕೊಡಲಾಗಿದೆ. 2020ರ ಜೂನ್‍ನಲ್ಲಿ ಅಂಥದ್ದೊಂದು ಪಾತ್ರದ ಸೃಷ್ಠಿ ಹೇಗಾಯಿತು ಎಂದು ಪ್ರಾರಂಭವಾಗುವುದರಿಂದ, ಅಂತಿಮವಾಗಿ ಅದು ಹೇಗೆ ರೂಪುಗೊಂಡಿತು ಎಂಬುದನ್ನು ಈ ವೀಡಿಯೋದಲ್ಲಿ ತೋರಿಸಲಾಗಿದೆ. ಭೈರವನ ಅಚ್ಚುಮೆಚ್ಚಿನ ಗೆಳೆಯನ ಕುರಿತು ಸಾಕಷ್ಟು ಬಿಲ್ಡಪ್ ನೀಡಲಾಗಿದ್ದು, ಈ ಐದನೇ ಸೂಪರ್ ಸ್ಟಾರ್ ಯಾರಿರಬಹುದು ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮನೆಮಾಡಿದೆ. ಬುಜ್ಜಿ ಯಾರು ಎಂಬ ಪ್ರಶ್ನೆಗೆ, ಎರಡು ನಿಮಿಷ 22 ಸೆಕೆಂಡ್‍ನ ಈ ವೀಡಿಯೋದಲ್ಲಿ ಚಿತ್ರಕ್ಕೆ ದುಡಿದ ಹಲವು ತಂತ್ರಜ್ಞರು ಉತ್ತರ ನೀಡುವ ಪ್ರಯತ್ನ ಮಾಡಿದ್ದಾರೆ. ಇಷ್ಟಕ್ಕೂ ಬುಜ್ಜಿ ಯಾರು? ಉತ್ತರಕ್ಕಾಗಿ ಮೇ 22ರವರೆಗೂ ಕಾಯಬೇಕು.
ಕೆಲವು ದಿನಗಳ ಹಿಂದಷ್ಟೇ ಚಿತ್ರದಲ್ಲಿನ ಅಮಿತಾಭ್ ಬಚ್ಚನ್ ಅವರ ಪಾತ್ರವನ್ನು ಅನಾವರಣಗೊಳಿಸಲಾಗಿತ್ತು. ಅಶ್ವತ್ಥಾಮನಾಗಿ ಅಮಿತಾಭ್ ನಟಿಸಿದ್ದು, ಅವರ ಪಾತ್ರ ಹೇಗಿರಬಹುದು ಎಂದು ಪ್ರೇಕ್ಷಕರು ತುದಿಗಾಲಲ್ಲಿ ಕಾಯುವಂತಾಗಿದೆ. ಅವರ ಪಾತ್ರ ಪರಿಚಯಿಸುವ ಟೀಸರ್ ತೆಲುಗು, ತಮಿಳು, ಕನ್ನಡ, ಹಿಂದಿ, ಮಲಯಾಳಂ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿದೆ.
ಈ ವರ್ಷದ ಅತೀ ನಿರೀಕ್ಷಿತ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಕಲ್ಕಿ 2898 AD’ ಚಿತ್ರದಲ್ಲಿ ಅಮಿತಾಭ್ ಬಚ್ಚನ್, ಕಮಲ್ ಹಾಸನ್, ಪ್ರಭಾಸ್, ದೀಪಿಕಾ ಪಡುಕೋಣೆ, ದಿಶಾ ಪಠಾಣಿ ಮುಂತಾದವರು ನಟಿಸಿದ್ದಾರೆ. ವೈಜಯಂತಿ ಮೂವೀಸ್ ಬ್ಯಾನರ್ನಡಿ ಅಶ್ವಿನಿ ದತ್ ನಿರ್ಮಿಸಿರುವ ಈ ಚಿತ್ರವನ್ನು ನಾಗ್ ಅಶ್ವಿನ್ ನಿರ್ದೇಶನ ಮಾಡಿದ್ದಾರೆ. ‘ಕಲ್ಕಿ 2898 AD’ ಚಿತ್ರವು ಜಗತ್ತಿನಾದ್ಯಂತ ಜೂನ್ 27ರಂದು ಬಿಡುಗಡೆ ಆಗಲಿದೆ.
ಪ್ರಭಾಸ್ ನಟನೆಯ ಕಲ್ಕಿ ಸಿನಿಮಾದ ರಿಲೀಸ್ (Release) ಡೇಟ್ ಅಧಿಕೃತವಾಗಿ ಘೋಷಣೆಯಾಗಿದೆ. ಇದೇ ಜೂನ್ 27ರಂದು ವಿಶ್ವದಾದ್ಯಂತ ಸಿನಿಮಾ ರಿಲೀಸ್ ಮಾಡುವುದಾಗಿ ಚಿತ್ರತಂಡ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದೆ. ಈ ಬೆನ್ನಲ್ಲೇ ಕರ್ನಾಟಕದಲ್ಲಿ ಈ ಸಿನಿಮಾವನ್ನು ವಿತರಿಸಲು (Distribution) ಕೆವಿಎನ್ ಸಂಸ್ಥೆ ಮುಂದಾಗಿದೆ. ಮತ್ತೊಂದು ಖುಷಿ ಸಂಗತಿ ಅಂದರೆ, ಭಾರತದ ಭಾಷೆಗಳಿಗೆ ಅಷ್ಟೇ ಅಲ್ಲ, ಇಂಗ್ಲಿಷ್ ಗೂ ಈ ಸಿನಿಮಾ ಡಬ್ ಆಗಿ ಹಾಲಿವುಡ್ (Hollywood) ನಲ್ಲೂ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಈ ಸಿನಿಮಾ ಒಂದಿಲ್ಲೊಂದು ಕಾರಣದಿಂದಾಗಿ ಸುದ್ದಿ ಆಗುತ್ತಲೇ ಇದೆ. ಈ ಬಾರಿ ಕಲಾವಿದರಿಗೆ ನೀಡಿರುವ ಸಂಭಾವನೆಯಿಂದಾಗಿ (Remuneration) ಸಖತ್ ಸದ್ದು ಮಾಡುತ್ತಿದೆ. ಮೂಲಗಳ ಪ್ರಕಾರ ಕಲಾವಿದರಿಗಾಗಿಯೇ ಒಟ್ಟು 250 ಕೋಟಿ ರೂಪಾಯಿಗೂ ಅಧಿಕ ಖರ್ಚು ಮಾಡಿದ್ದಾರಂತೆ ನಿರ್ಮಾಪಕರು. ಅದರಲ್ಲಿ ಅತೀ ಹೆಚ್ಚು ಸಂಭಾವನೆ ಪಡೆದಿರೋದು ಚಿತ್ರ ನಾಯಕ ಪ್ರಭಾಸ್.
ಪ್ರಭಾಸ್ (Prabhas) ಈ ಸಿನಿಮಾಗಾಗಿ ಬರೋಬ್ಬರಿ 150 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರಂತೆ. ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್ ಮತ್ತು ಕಮಲ್ ಹಾಸನ್ ತಲಾ 20 ಕೋಟಿ ರೂಪಾಯಿ ಸಂಭಾವನೆ ಜೇಬಿಗಿಳಿಸಿಕೊಂಡಿದ್ದಾರೆ. ನಾಯಕಿ ದಿಶಾ ಪಟಾಣಿ 5 ಕೋಟಿ ರೂಪಾಯಿಗೆ ತೃಪ್ತಿ ಪಟ್ಟಿದ್ದಾರೆ. ಲಕ್ಷದಲ್ಲಿ ಸಂಭಾವನೆ ಪಡೆಯುವ ಅನೇಕ ನಟರೂ ಈ ಸಿನಿಮಾದಲ್ಲಿ ಇದ್ದಾರೆ.
ನಾಗ್ ಅಶ್ವಿನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಲ್ಕಿ (Kalki 2898 AD) ಸಿನಿಮಾ, ಈಗಾಗಲೇ ಶೂಟಿಂಗ್‌ನಲ್ಲಿ ಬಿಜಿಯಾಗಿದೆ. ಈ ನಡುವೆ ಈಗ ಸೋಷಿಯಲ್ ಮೀಡಿಯಾದಲ್ಲಿ ಈ ಸಿನಿಮಾ ಟ್ರೆಂಡಿಂಗ್‌ನಲ್ಲಿಯೂ ಮುಂದುವರಿದಿದೆ. ಅದಕ್ಕೆ ಕಾರಣ ರಿಲೀಸ್ ಆದ ಅಮಿತಾಭ್ ಬಚ್ಚನ್ ಅವರ ಹೊಸ ಲುಕ್.