Tag: kaliswamy

  • ಮಸಿ ಬಳಿದವರ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ: ಕಾಳಿಸ್ವಾಮಿ

    ಮಸಿ ಬಳಿದವರ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ: ಕಾಳಿಸ್ವಾಮಿ

    ಬೆಂಗಳೂರು: ನಾನು ಕುವೆಂಪು ವಿರುದ್ಧ ಆಗಲಿ ಕೆಂಪೇಗೌಡರ ವಿರುದ್ಧ ಆಗಲಿ ಯಾವತ್ತೂ ಮಾತಾಡಿಲ್ಲ. ಒಂದು ವೇಳೆ ಮಾತಾಡಿದ್ದೇ ಆದರೆ ಸಾಬೀತುಪಡಿಸಲಿ ಎಂದು ಕಾಳಿ ಸ್ವಾಮಿ ಸವಾಲೆಸೆದಿದ್ದಾರೆ.

    ಮುಖಕ್ಕೆ ಮಸಿ ಬಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಮಸಿ ಬಳಿದವರ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ. ಅನಾಮಧೇಯ ವ್ಯಕ್ತಿಗಳು ಸಂಘಟನೆ ಹೆಸರು ಹೇಳಿಕೊಂಡು ಕ್ಷುಲ್ಲಕ ಕಾರಣಕ್ಕೆ ಮಸಿ ಬಳಿದಿದ್ದಾರೆ ಎಂದರು. ಇದನ್ನೂ ಓದಿ: ಪೂಜೆ ಮುಗಿಸಿ ಬರುತ್ತಿದ್ದ ಕಾಳಿ ಸ್ವಾಮಿ ಮುಖಕ್ಕೆ ಮಸಿ

    ನಾನು ಕುವೆಂಪು ವಿರುದ್ಧ ಆಗಲಿ ಕೆಂಪೇಗೌಡರ ವಿರುದ್ಧ ಆಗಲಿ ಯಾವತ್ತು ಮಾತಾಡಿಲ್ಲ. ಮಾತಾಡಿದ್ದೇನೆ ಅನ್ನೋದಾದ್ರೆ ಸಾಬೀತು ಪಡಿಸಲಿ. ಕ್ಷುಲ್ಲಕ್ಕ ಕಾರಣಕ್ಕೆ ಬೇಕಂತಲೆ ಗಲಾಟೆ ಮಾಡಿದ್ದ ಹಾಗೇ ಕಾಣಿಸ್ತಾ ಇದೆ. ಹಾಗಾಗಿ ಮಸಿ ಬಳಿದವರ ವಿರುದ್ಧ ಕಾಳಿಕಾ ಸೇನೆ ಕಾರ್ಯದರ್ಶಿ ದೂರು ನೀಡಲಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಬೇಲ್‌ನಲ್ಲಿರುವ ಶಾಸಕರ ಪುತ್ರ ನನ್ನ ಪ್ರಾಮಾಣಿಕತೆ ಪ್ರಶ್ನಿಸುತ್ತಿದ್ದಾರೆ: ನಲಪಾಡ್‌ಗೆ ರಮ್ಯಾ ತಿರುಗೇಟು

    ಏನಿದು ಘಟನೆ..?
    ದೇವಾಲಯದಲ್ಲಿ ಪೂಜೆ ಮುಗಿಸಿ ಹೊರಬರುತ್ತಿದ್ದ ಕಾಳಿ ಸ್ವಾಮಿಗೆ ಗುಂಪೊಂದು ಏಕಾಏಕಿ ಮಸಿ ಬಳಿದಿರುವ ಘಟನೆ ನಡೆದಿತ್ತು. ಕಾಳಿಕಾ ಸೇನೆಯ ವತಿಯಿಂದ ಮಲ್ಲೇಶ್ವರಂನ ಗಂಗಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಆಯೋಜಿಸಲಾಗಿತ್ತು. ಪೂಜೆ ಮುಗಿಸಿ ಕಾಳಿ ಸ್ವಾಮಿ ಹೊರಬರುತ್ತಿದ್ದರು. ಈ ವೇಳೆ ಅವರಿಗೆ ಎದುರಾದ ಗುಂಪೊಂದು ಏಕಾಏಕಿ ಮಸಿ ಬಳಿದಿದೆ.

    ಕಾಳಿ ಸ್ವಾಮಿ ಸ್ಪಷ್ಟನೆ ಏನು?
    ಗಂಗಮ್ಮ ದೇವಾಲಯದಲ್ಲಿ ಪೂಜೆ ಇತ್ತು. ಪೂಜೆ ಬಹಳ ಚೆನ್ನಾಗಿ ಆಯ್ತು, ನನಗೆ ಬಹಳ ಖುಷಿಯೂ ಆಯ್ತು. ಪೂಜೆ ಮುಗಿಸಿ ಹೊರ ಬರುವ ವೇಳೆ ಕೆಲವರು ಬಂದು, `ನೀವು ಕುವೆಂಪು ಅವರನ್ನು ಮತ್ತು ಕನ್ನಡಪಡೆಗಳನ್ನು ನಿಂದಿಸಿದ್ದೀರಾ’ ಎಂದು ನನ್ನ ಬಳಿ ಜಗಳ ತೆಗೆದರು. ನಂತರ ಮುಖಕ್ಕೆ ಕಪ್ಪು ಮಸಿ ಬಳಿದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದರು.