Tag: kalisthani

  • ಇದು ಅಸಂಬದ್ಧ, ಪ್ರೇರಿತ- ಕೆನಡಾ ಆರೋಪ ತಿರಸ್ಕರಿಸಿದ ಭಾರತ

    ಇದು ಅಸಂಬದ್ಧ, ಪ್ರೇರಿತ- ಕೆನಡಾ ಆರೋಪ ತಿರಸ್ಕರಿಸಿದ ಭಾರತ

    ನವದೆಹಲಿ: ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ (Hardeep Singh Nijjar) ಹತ್ಯೆಯ ಹಿಂದೆ ಭಾರತ ಕೈವಾಡವಿದೆ ಎಂಬ ಕೆನಡಾ ಆರೋಪವನ್ನು ಭಾರತ ತಿರಸ್ಕಾರ ಮಾಡಿದೆ.

    ಈ ಸಂಬಂಧ ಭಾರತದ ವಿದೇಶಾಂಗ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದ್ದು, ಕೆನಡಾದ ಆರೋಪಗಳು “ಅಸಂಬದ್ಧ ಮತ್ತು ಪ್ರೇರಿತ” ಎಂದು ಬಣ್ಣಿಸಿದೆ. ಇಂತಹ ಆರೋಪಗಳು ನಮ್ಮ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ಧಕ್ಕೆ ತರುತ್ತಿರುವ ಖಲಿಸ್ತಾನಿ ಭಯೋತ್ಪಾದಕರು ಮತ್ತು ಉಗ್ರಗಾಮಿಗಳ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನವಾಗುತ್ತವೆ ಎಂದು ಹೇಳಿದೆ. ಇದನ್ನೂ ಓದಿ: ಉಗ್ರ ನಿಜ್ಜರ್ ಹತ್ಯೆಯ ಹಿಂದೆ ಭಾರತದ ಕೈವಾಡವಿದೆ: ಕೆನಡಾ ಗಂಭೀರ ಆರೋಪ

    ಕೆನಡಾ ಸಂಸತ್ತಿನಲ್ಲಿ ಅಲ್ಲಿನ ಪ್ರಧಾನಿ ನೀಡಿರುವ ಹೇಳಿಕೆಯನ್ನು ನೋಡಿದ್ದೇವೆ. ಹೀಗಾಗಿ ಕೆನಡಾ ಪ್ರಧಾನಿ ಹಾಗೂ ಕೆನಡಾ ವಿದೇಶಾಂಗ ಸಚಿವರು ನೀಡಿರುವ ಹೇಳಿಕೆಯನ್ನು ತಿರಸ್ಕರಿಸುತ್ತಿದ್ದೇವೆ. ಕೆನಡಾದಲ್ಲಿ ಯಾವುದೇ ಹಿಂಸಾಚಾರದಲ್ಲಿ ಭಾರತ ಸರ್ಕಾರವು ಭಾಗಿಯಾಗಿದೆ ಎಂಬ ಆರೋಪಗಳು ಅಸಂಬದ್ಧವಾದದ್ದು. ನಾವು ಕಾನೂನಿನ ಆಳ್ವಿಕೆಗೆ ಬದ್ಧತೆ ಹೊಂದಿರುವ ಪ್ರಜಾಸತ್ತಾತ್ಮಕ ರಾಜಕೀಯ ಹೊಂದಿದ್ದೇವೆಂದು ತಿಳಿಸಿದೆ.\

    ಕೆನಡಾದಲ್ಲಿ ಕೊಲೆ, ಮಾನವ ಕಳ್ಳಸಾಗಣೆ ಮತ್ತು ಸಂಘಟಿತ ಅಪರಾಧ ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿರುವುದು ಹೊಸದೇನಲ್ಲ. ಇದೀಗ ಕೆನಡಾ ಪ್ರಧಾನಿ ನಮ್ಮ ಪ್ರಧಾನಿಯವರ ಮೇಲೆ ಆರೋಪ ಮಾಡಿದ್ದು, ಅವುಗಳನ್ನು ಸಂಪೂರ್ಣವಾಗಿ ತಿರಸ್ಕರಿಸಲಾಗಿದೆ. ನಮ್ಮದು ಪ್ರಜಾಸತ್ತಾತ್ಮಕ ದೇಶವಾಗಿದ್ದು, ಕಾನೂನಿನ ನಿಯಮಕ್ಕೆ ಬಲವಾದ ಬದ್ಧತೆ ಇದೆ ಎಂದಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]