Tag: kalima

  • ಅಸ್ಸಾಂ ಪ್ರೊಫೆಸರ್ ದೇಬಶೀಶ್ ಭಟ್ಟಾಚಾರ್ಯ ಜೀವ ಉಳಿಸಿದ ಕಲಿಮಾ

    ಅಸ್ಸಾಂ ಪ್ರೊಫೆಸರ್ ದೇಬಶೀಶ್ ಭಟ್ಟಾಚಾರ್ಯ ಜೀವ ಉಳಿಸಿದ ಕಲಿಮಾ

    – ಪಕ್ಕದಲ್ಲಿದ್ದ ವ್ಯಕ್ತಿಯ ಹಣೆಗೆ ಗುಂಡಿಕ್ಕಿ ಕೊಂದರು

    ಶ್ರೀನಗರ: ಕಲಿಮಾ (Kalima) ಪಠಿಸುವಂತೆ ನಟಿಸುವ ಮೂಲಕ ಅಸ್ಸಾಂ ವಿಶ್ವವಿದ್ಯಾಲಯದ ಅಸೋಸಿಯೇಟ್ ಪ್ರೊಫೆಸರ್ ದೇಬಶೀಶ್ ಭಟ್ಟಾಚಾರ್ಯ ಅವರು ಉಗ್ರರಿಂದ (Terrorist) ತನ್ನ ಜೀವ ಉಳಿಸಿ ಪಾರಾಗಿದ್ದಾರೆ.

    ಮಾಧ್ಯಮದ ಜೊತೆ ಮಾತನಾಡಿದ ಅವರು, ನಾನು ನನ್ನ ಕುಟುಂಬದೊಂದಿಗೆ ಮರದ ಕೆಳಗೆ ಮಲಗಿದ್ದಾಗ ಇದ್ದಕ್ಕಿದ್ದಂತೆ ನನ್ನ ಸುತ್ತಲೂ ಇದ್ದ ಕೆಲವರು ಏನೋ ಪಠಿಸುತ್ತಿದ್ದರು.

    ಜನರು ಏನೋ ಪಠಿಸುವುದನ್ನು ನೋಡಿ ನಾನು ಪಠಿಸಲು ಆರಂಭಿಸಿದೆ.ಈ ವೇಳೆ ನಮ್ಮ ಕಡೆಗೆ ನಡೆದುಕೊಂಡು ಬಂದ ಉಗ್ರ ನನ್ನ ಪಕ್ಕದಲ್ಲಿ ಮಲಗಿದ್ದ ವ್ಯಕ್ತಿಯ ತಲೆಗೆ ಗುಂಡು ಹಾರಿಸಿದ.

    ಗುಂಡು ಹಾರಿಸಿದ ಬಳಿಕ ಆ ಉಗ್ರ ನನ್ನನ್ನು ನೋಡಿ, ‘ಕ್ಯಾ ಕರ್ ರಹೇ ಹೋ?’ ಎಂದು ಕೇಳಿದ. ನಾನು ಕಲಿಮಾವನ್ನು ಇನ್ನೂ ಜೋರಾಗಿ ಪಠಿಸಿದೆ. ಏನೋ ಕಾರಣಕ್ಕೆ ನನ್ನನ್ನು ನೋಡಿ ಆತ ದೂರ ಹೋದ ಎಂದು ವಿವರಿಸಿದರು. ಇದನ್ನೂ ಓದಿ:ಸೌದಿಯಿಂದ ಬರೋವಾಗ ಪಾಕ್ ವಾಯುಸೀಮೆ ಬಳಸದೇ ದೆಹಲಿಗೆ ಬಂದ ಮೋದಿ

     

    ಉಗ್ರ ಬೇರೆ ಕಡೆ ಹೋಗುತ್ತಿದ್ದಂತೆ ನಾನು ಪತ್ನಿ ಮತ್ತು ಮಗನೊಂದಿಗೆ ಆ ಸ್ಥಳದಿಂದ ಓಡಿ ಹೋದೆವು. ಬೆಟ್ಟ ಹತ್ತಿದೆವು, ಬೇಲಿಯನ್ನು ದಾಟಿದೆವು ಮತ್ತು ದಾರಿಯಲ್ಲಿ ಕುದುರೆಗಳ ಗೊರಸಿನ ಗುರುತುಗಳನ್ನು ಅನುಸರಿಸಿ ಸುಮಾರು ಎರಡು ಗಂಟೆಗಳ ಕಾಲ ನಡೆಯುತ್ತಲೇ ಇದ್ದೆವು. ಕೊನೆಗೆ ನಾವು ಕುದುರೆಯೊಂದಿಗೆ ಸವಾರನನ್ನು ನೋಡಿದೆವು. ಆತನ ಸಹಕಾರದಿಂದ ಕೊನೆಗೆ ಹೋಟೆಲ್‌ಗೆ ಮರಳುವಲ್ಲಿ ಯಶಸ್ವಿಯಾದೆವು.

    ನಾನು ಇನ್ನೂ ಜೀವಂತವಾಗಿದ್ದೇನೆ ಎಂದು ನಂಬಲು ನನಗೆ  ಈಗಲೂ ಸಾಧ್ಯವಾಗುತ್ತಿಲ್ಲ ಎಂದು ದೇಬಶೀಶ್ ಭಟ್ಟಾಚಾರ್ಯ ಹೇಳಿದರು. ಇದನ್ನೂ ಓದಿ: ಬಾಲಾಕೋಟ್‌ ಏರ್‌ಸ್ಟ್ರೈಕ್‌ನಂತೆ ದಾಳಿ ಭೀತಿ – ಗಡಿಗೆ ವಿಮಾನಗಳನ್ನು ಸಾಗಿಸುತ್ತಿದೆ ಪಾಕ್‌

    ಜಮ್ಮು ಕಾಶ್ಮೀರದಲ್ಲಿ (Jammu Kashmir) ಮತ್ತೆ ಉಗ್ರರು ಬಾಲಬಿಚ್ಚಿ ಹಿಂದೂಗಳ ನರಮೇಧ ಮಾಡಿದ್ದಾರೆ. ದಕ್ಷಿಣ ಕಾಶ್ಮೀರದ ಪ್ರವಾಸಿ ತಾಣ ಪಹಲ್ಗಾಮ್ (Pahalgam) ಕಣಿವೆಯಲ್ಲಿ ಹಿಂದೂಗಳನ್ನೇ (Hindu) ಗುರಿಯಾಗಿಸಿ ಕಲಿಮಾ (Kalima) ಹೇಳಲು ಬಾರದಕ್ಕೆ ತಲೆಗೆ ಗುಂಡಿಟ್ಟಿದ್ದಾರೆ. ‌

    ಉಗ್ರರು ತನ್ನ ತಂದೆಯನ್ನು ಹೇಗೆ ಹತ್ಯೆ ಮಾಡಿದ್ದಾರೆ ಎಂಬುದನ್ನು ತಿಳಿಸಿದ ಅಸಾವರಿ, ಗುಂಡಿನ ದಾಳಿ ಆಗುತ್ತಿದ್ದಂತೆ ನಾವು ಟೆಂಟ್‌ ಒಳಗೆ ಹೋಗಿ ಅಡಗಿ ಕುಳಿತೆವು. ಟೆಂಟ್‌ ಬಳಿ ಬಂದ ಉಗ್ರ ತಂದೆಯನ್ನು ಹೊರಗೆ ಬರುವಂತೆ ಕರೆದ. ಟೆಂಟ್‌ನಿಂದ ಹೊರ ಬಂದ ತಂದೆಯ ಬಳಿ ಕಲಿಮಾ(ಇಸ್ಲಾಮಿಕ್‌ ಶ್ಲೋಕ) ಹೇಳುವಂತೆ ಸೂಚಿಸಿದ. ತಂದೆ ನನಗೆ ತಿಳಿದಿಲ್ಲ ಎಂದು ಹೇಳಿದ ಕೂಡಲೇ ಕಿವಿ, ತಲೆ, ಬೆನ್ನಿಗೆ ಮೂರು ಗುಂಡು ಹಾರಿಸಿ ಹತ್ಯೆ ಮಾಡಿದರು ಎಂದು ವಿವರಿಸಿದರು.

    ಕಲಿಮಾ ಅಂದ್ರೆ ಏನು?
    ಕಲಿಮಾ ಅಥವಾ ಶಹದಾ ಅನ್ನೋದು ನಂಬಿಕೆಯ ಇಸ್ಲಾಮಿಕ್ (Islamic) ಘೋಷಣೆ. ಇದು ಇಸ್ಲಾಂ ನಂಬಿಕೆಯ ಐದು ಸ್ತಂಭಗಳಲ್ಲಿ ಒಂದೆಂದು ನಂಬುತ್ತಾರೆ. ಇದನ್ನು ಪ್ರಾಮಾಣಿಕವಾಗಿ ಪಠಿಸಿದವರು ಮುಸ್ಲಿಂ ಅನುಯಾಯಿಗಳಾಗುತ್ತಾರೆ, ಅವರು ಇಸ್ಲಾಂ ಧರ್ಮದ ಮಡಿಲಿಗೆ ಬರುತ್ತಾರೆ ಅನ್ನೋದು ನಂಬಿಕೆ. ಆದ್ದರಿಂದಲೇ ಪ್ರವಾಸಿಗರಿಗೆ ಗುಂಡು ಹಾರಿಸುವುದಕ್ಕೂ ಮುನ್ನ ಕಲಿಮಾ ಪಠಿಸುವಂತೆ ಒತ್ತಾಯಿಸಿದ್ದಾರೆ.

  • ಕಲಿಮಾ ಹೇಳದ್ದಕ್ಕೆ ತಂದೆಯ ತಲೆಗೆ ಗುಂಡೇಟು – ಕಣ್ಣೀರಿಟ್ಟ ಪುತ್ರಿ

    ಕಲಿಮಾ ಹೇಳದ್ದಕ್ಕೆ ತಂದೆಯ ತಲೆಗೆ ಗುಂಡೇಟು – ಕಣ್ಣೀರಿಟ್ಟ ಪುತ್ರಿ

    ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ (Jammu Kashmir) ಮತ್ತೆ ಉಗ್ರರು ಬಾಲಬಿಚ್ಚಿ ಹಿಂದೂಗಳ ನರಮೇಧ ಮಾಡಿದ್ದಾರೆ. ದಕ್ಷಿಣ ಕಾಶ್ಮೀರದ ಪ್ರವಾಸಿ ತಾಣ ಪಹಲ್ಗಾಮ್ (Pahalgam) ಕಣಿವೆಯಲ್ಲಿ ಹಿಂದೂಗಳನ್ನೇ (Hindu) ಗುರಿಯಾಗಿಸಿ ಕಲಿಮಾ (Kalima) ಹೇಳಲು ಬಾರದಕ್ಕೆ ತಲೆಗೆ ಗುಂಡಿಟ್ಟಿದ್ದಾರೆ.

    ಪುಣೆಯ ಸಂತೋಷ್‌ ಜಗದಾಳೆ(54) ಉಗ್ರರ ಕೃತ್ಯಕ್ಕೆ ಬಲಿಯಾಗಿದ್ದಾರೆ. ಉಗ್ರರು ತನ್ನ ತಂದೆಯನ್ನು ಹೇಗೆ ಹತ್ಯೆ ಮಾಡಿದ್ದರು ಎಂಬುದನ್ನು ಪುತ್ರಿ ಅಸಾವರಿ ಮಾಧ್ಯಮಕ್ಕೆ ತಿಳಿಸಿದ್ದಾರೆ. ಇದನ್ನೂ ಓದಿ: ʻನಿನ್ನನ್ನು ಕೊಲ್ಲುವುದಿಲ್ಲ, ಹೋಗಿ ಮೋದಿಗೆ ಇದನ್ನ ಹೇಳುʼ – ಶಿವಮೊಗ್ಗದ ಉದ್ಯಮಿ ಪತ್ನಿಗೆ ಉಗ್ರ ಹೇಳಿದ ಮಾತು

     

    ಗುಂಡಿನ ದಾಳಿ ಆಗುತ್ತಿದ್ದಂತೆ ನಾವು ಟೆಂಟ್‌ ಒಳಗೆ ಹೋಗಿ ಅಡಗಿ ಕುಳಿತಿವು. ಟೆಂಟ್‌ ಬಳಿ ಬಂದ ಉಗ್ರ ತಂದೆಯನ್ನು ಹೊರಗೆ ಬರುವಂತೆ ಕರೆದ. ಟೆಂಟ್‌ನಿಂದ ಹೊರ ಬಂದ ತಂದೆಯ ಬಳಿ ಕಲಿಮಾ(ಇಸ್ಲಾಮಿಕ್‌ ಶ್ಲೋಕ) ಹೇಳುವಂತೆ ಸೂಚಿಸಿದರು. ತಂದೆ ನನಗೆ ತಿಳಿದಿಲ್ಲ ಎಂದು ಹೇಳಿದ ಕೂಡಲೇ ಕಿವಿ, ತಲೆ, ಬೆನ್ನಿಗೆ ಮೂರು ಗುಂಡು ಹಾರಿಸಿ ಹತ್ಯೆ ಮಾಡಿದರು ಎಂದು ವಿವರಿಸಿದರು.

    ಉಗ್ರರು ನನ್ನ ಪತಿಯ ಬಳಿ ನಿನ್ನ ಧರ್ಮ ಯಾವುದು ಎಂದು ಕೇಳಿದರು. ಮುಸ್ಲಿಮ್‌ ಅಲ್ಲ ಎಂದು ಹೇಳಿದ ಕೂಡಲೇ ಗುಂಡಿನ ದಾಳಿ ನಡೆಸಿದರು ಎಂದು ಮಹಿಳೆಯೊಬ್ಬರು ಅಳುತ್ತಲೇ ಘಟನೆಯನ್ನು ವಿವರಿಸಿದರು.

     

    ಹಿಂದೂಗಳನ್ನೇ ಟಾರ್ಗೆಟ್ ಮಾಡಿದ್ದ ಉಗ್ರರು 26 ಪ್ರವಾಸಿಗರನ್ನು ಕೊಂದು ರಕ್ತದ ಕೋಡಿ ಹರಿಸಿದ್ದಾರೆ. ಇಬ್ಬರು ವಿದೇಶಿಗರು ಸೇರಿದಂತೆ ರಾಶಿ ರಾಶಿ ಹೆಣಗಳನ್ನು ಟಾರ್ಪಲ್‌ನಲ್ಲಿ ಮುಚ್ಚಲಾಗಿದೆ. ಪ್ರವಾಸದ ಖುಷಿಯಲ್ಲಿದ್ದ ಪ್ರವಾಸಿಗರ ಬಳಿ ಏಕಾಏಕಿ ನುಗ್ಗಿರುವ ಲಷ್ಕರ್‌ನ ಅಂಗ ಉಗ್ರ ಸಂಘಟನೆ ಟಿಆರ್‌ಎಫ್ ಟೆರರಿಸ್ಟ್ಗಳು ಗುಂಡಿನ ದಾಳಿ ಮಾಡಿದ್ದಾರೆ. ಅದರಲ್ಲೂ, ಪುರುಷರನ್ನೇ ಟಾರ್ಗೆಟ್ ಮಾಡಿ ನರಮೇಧ ಮಾಡಿದ್ದಾರೆ.

  • ಗುಂಡು ಹಾರಿಸುವ ಮುನ್ನ ಪುರುಷರಿಗೆ ಇಸ್ಲಾಂನ ʻಕಲಿಮಾʼ ಪಠಿಸುವಂತೆ ಬೆದರಿಸಿದ್ದ ಉಗ್ರರು!

    ಗುಂಡು ಹಾರಿಸುವ ಮುನ್ನ ಪುರುಷರಿಗೆ ಇಸ್ಲಾಂನ ʻಕಲಿಮಾʼ ಪಠಿಸುವಂತೆ ಬೆದರಿಸಿದ್ದ ಉಗ್ರರು!

    ಶ್ರೀನಗರ: ಲಷ್ಕರ್‌ ಶಾಖೆಯ ಟಿಆರ್‌ಎಫ್‌ (TRF) ಭಯೋತ್ಪಾದಕ ಗುಂಪು ಪ್ರವಾಸಿಗರ ಮೇಲೆ ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ 30 ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಸೇನಾ ಸಮವಸ್ತ್ರ ಧರಿಸಿ ಬಂದ ಉಗ್ರರು ಮಾತನಾಡಿರುವ ನೆಪದಲ್ಲಿ ಬಂದು ಗುಂಡು ಹಾರಿಸಿದ್ದಾರೆ.

    ಮೊದಲು ನೀವು ಮುಸಲ್ಮಾನರಾ? (Muslims) ಎಂದು ಕೇಳಿದ ಉಗ್ರರು, ಗುಂಡು ಹಾರಿಸುವುದಕ್ಕೂ ಮುನ್ನ ಪುರುಷರಿಗೆ ಇಸ್ಲಾಂನ ʻಕಲಿಮಾʼ (Kalima) ಪಠಿಸುವಂತೆ ಬೆದರಿಸಿದ್ದಾರೆ ಎಂದು ವರದಿಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಬೇಲ್ಪುರಿ ತಿನ್ನುವಾಗ ನೀನು ಮುಸಲ್ಮಾನನಾ ಅಂತ ಕೇಳಿ ಗುಂಡು ಹಾರಿಸಿದ ಉಗ್ರ – ದಾಳಿ ಭೀಕರತೆ ಬಿಚ್ಚಿಟ್ಟ ಪ್ರತ್ಯಕ್ಷದರ್ಶಿ

    ʻಕಲಿಮಾʼ ಅಥವಾ ಶಹದಾ ಅಂದ್ರೆ ಏನು?
    ಕಲಿಮಾ ಅಥವಾ ಶಹದಾ ಅನ್ನೋದು ನಂಬಿಕೆಯ ಇಸ್ಲಾಮಿಕ್ (Islamic) ಘೋಷಣೆ. ಇದು ಇಸ್ಲಾಂ ನಂಬಿಕೆಯ ಐದು ಸ್ತಂಭಗಳಲ್ಲಿ ಒಂದೆಂದು ನಂಬುತ್ತಾರೆ. ಅರೇಬಿಕ್‌ನಲ್ಲಿ ‘ಅಶ್ಹದು ಆನ್ ಲಾ ಇಲಾಹ ಇಲ್ಲಲ್ಲಾಹ್, ವ ಅಶ್ಹದು ಅನ್ನ ಮುಹಮ್ಮದುರ್ ರಸುಲುಲ್ಲಾಹ್’ ಎಂದು ಬಣ್ಣಿಸುತ್ತಾರೆ. ಇದನ್ನು ಪ್ರಾಮಾಣಿಕವಾಗಿ ಪಠಿಸಿದವರು ಮುಸ್ಲಿಂ ಅನುಯಾಯಿಗಳಾಗುತ್ತಾರೆ, ಅವರು ಇಸ್ಲಾಂ ಧರ್ಮದ ಮಡಿಲಿಗೆ ಬರುತ್ತಾರೆ ಅನ್ನೋದು ನಂಬಿಕೆ. ಆದ್ದರಿಂದಲೇ ಪ್ರವಾಸಿಗರಿಗೆ ಗುಂಡು ಹಾರಿಸುವುದಕ್ಕೂ ಮುನ್ನ ಕಲಿಮಾ ಪಠಿಸುವಂತೆ ಒತ್ತಾಯಿಸಿದ್ದಾರೆ ಎಂದು ಹೇಳಲಾಗಿದೆ.  ಇದನ್ನೂ ಓದಿ: ಕಾಶ್ಮೀರದಲ್ಲಿ ಉಗ್ರರ ಗುಂಡಿಗೆ ಬಲಿಯಾದ ಕನ್ನಡಿಗ ಮಂಜುನಾಥ್‌ ರಾವ್‌ ಯಾರು?

    ಸೂಕ್ತ ಕ್ರಮಕ್ಕೆ ಅಮಿತ್‌ ಶಾಗೆ ಸೂಚಿಸಿದ ಮೋದಿ:
    ಭಯೋತ್ಪಾದಕ ದಾಳಿಯ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ಸೌದಿ ಅರೇಬಿಯಾದಿಂದಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಈ ಹಿನ್ನೆಲೆ ಅಮಿತ್ ಶಾ ತುರ್ತು ಸಭೆ ಕರೆದಿದ್ದಾರೆ. ಸಭೆಯಲ್ಲಿ ಐಬಿ ಗೃಹ ಕಾರ್ಯದರ್ಶಿ ಮತ್ತು ಗೃಹ ಸಚಿವಾಲಯದ ಇತರ ಅಧಿಕಾರಿಗಳು ಉಪಸ್ಥಿತರಿದ್ದರು. ಜಮ್ಮು ಮತ್ತು ಕಾಶ್ಮೀರ ಡಿಜಿಪಿ ಈ ಸಭೆಯಲ್ಲಿ ವರ್ಚುವಲ್ ಆಗಿ ಭಾಗವಹಿಸಿದ್ದಾರೆ.  ಇದನ್ನೂ ಓದಿ: ಕಾಶ್ಮೀರದಲ್ಲಿ ಉಗ್ರರ ಪೈಶಾಚಿಕ ಕೃತ್ಯ | ಸೌದಿಯಿಂದಲೇ ಮೋದಿ ಕರೆ, ಸ್ಥಳಕ್ಕೆ ಹೊರಟ ಅಮಿತ್‌ ಶಾ

    ಸದ್ಯ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸಹ ದಾಳಿಯನ್ನು ಖಂಡಿಸಿದ್ದು, ಪ್ರವಾಸಿಗರ ಮೇಲೆ ದಾಳಿ ನಡೆಸುವುದು ಅತ್ಯಂತ ಹೇಯ ಕೃತ್ಯ ಎಂದು ಎಂದು ಕಿಡಿ ಕಾರಿದ್ದಾರೆ. ಈ ನಡುವೆ ಭಯೋತ್ಪಾದಕರನ್ನು ಹಿಡಿಯಲು ಭದ್ರತಾ ಪಡೆಗಳು ಶೋಧ ಕಾರ್ಯ ಆರಂಭಿಸಿವೆ.  ಇದನ್ನೂ ಓದಿ: ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ – ಶಿವಮೊಗ್ಗದ ಉದ್ಯಮಿ ಸಾವು, 12 ಮಂದಿಗೆ ಗಾಯ

  • ಶಾಲೆಯಲ್ಲಿ ಮುಸ್ಲಿಮ್‌ ಪ್ರಾರ್ಥನೆ – ಆವರಣಕ್ಕೆ ಗಂಗಾಜಲ ಸಿಂಪಡಿಸಿದ ಬಿಜೆಪಿ ಕಾರ್ಯಕರ್ತರು

    ಶಾಲೆಯಲ್ಲಿ ಮುಸ್ಲಿಮ್‌ ಪ್ರಾರ್ಥನೆ – ಆವರಣಕ್ಕೆ ಗಂಗಾಜಲ ಸಿಂಪಡಿಸಿದ ಬಿಜೆಪಿ ಕಾರ್ಯಕರ್ತರು

    ಲಕ್ನೋ: ಮುಸ್ಲಿಮರ ಪ್ರಾರ್ಥನೆಯನ್ನು (ಕಲಿಮಾ) ಪಠಿಸುವ ಸಂಬಂಧ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಉತ್ತರ ಪ್ರದೇಶದ ಆಡಳಿತಾರೂಢ ಬಿಜೆಪಿ ನಾಯಕರು ಗಂಗಾ ಜಲ ಬಳಸಿ ಶಾಲೆ ಆವರಣವನ್ನು ಶುದ್ಧೀಕರಿಸಿದ ಘಟನೆ ನಡೆದಿದೆ.

    ಪ್ರತಿಭಟನೆಗೆ ಸಂಬಂಧಿಸಿದಂತೆ ವರದಿ ಸಲ್ಲಿಸುವಂತೆ ಕಾನ್ಪುರದ ಜಿಲ್ಲಾ ಮ್ಯಾಜಿಸ್ಟ್ರೇಟ್ ವಿಶಾಕ್ ಜಿ ಅಯ್ಯರ್ ಅವರು ಶಿಕ್ಷಣ ಇಲಾಖೆಗೆ ಸೂಚಿಸಿದ್ದಾರೆ. ಶಾಲೆ ಹಾಗೂ ಶಿಕ್ಷಕರು, ಪಾಲಕರು, ವಿದ್ಯಾರ್ಥಿಗಳನ್ನು ಭೇಟಿ ಮಾಡಿ ವರದಿ ಸಲ್ಲಿಸುವಂತೆ ಅಧಿಕಾರಿಗೆ ತಿಳಿಸಲಾಗಿದೆ. ಇದನ್ನೂ ಓದಿ: ಹರ್ ಹರ್ ಶಂಭು ಹಾಡಿಗೆ ಅಪಸ್ವರ – ಮುಸ್ಲಿಮಳಾಗಿ ಆ ಹಾಡನ್ನು ಹಾಡಬಾರದು ಎಂದ ದಿಯೋಬಂದ್

    ವಿದ್ಯಾರ್ಥಿಗಳು ಕಳೆದ 12-13 ವರ್ಷಗಳಿಂದ ಹಿಂದೂ, ಸಿಖ್, ಕ್ರಿಶ್ಚಿಯನ್ ಮತ್ತು ಮುಸ್ಲಿಂ ಪ್ರಾರ್ಥನೆಗಳನ್ನು ಪಠಿಸುವ ಪರಿಪಾಠವಿತ್ತು. ಅದನ್ನು ಶಾಲೆಯ ಪ್ರಾಂಶುಪಾಲರಾದ ಸುಮಿತ್ ಮಖಿಜಾ ಅವರು ನಿರ್ವಹಿಸಿಕೊಂಡು ಬಂದಿದ್ದಾರೆ. ಈ ಕುರಿತು ಈಗಾಗಲೇ ಒಮ್ಮೆ ಅವರೊಂದಿಗೆ ಮಾತನಾಡಿದ್ದೇವೆ. ಆದರೆ ಮತ್ತೊಮ್ಮೆ ಸಂಪರ್ಕಿಸಿದಾಗ, ಮಾಹಿತಿ ನೀಡಲು ಅವರು ಲಭ್ಯವಾಗುತ್ತಿಲ್ಲ ಸಹಾಯಕ ಪೊಲೀಸ್ ಕಮಿಷನರ್ ನಿಶಾಂಕ್ ವರ್ಮಾ ತಿಳಿಸಿದ್ದಾರೆ.

    ಶಾಲೆಯಲ್ಲಿ ಎಲ್ಲಾ ಧರ್ಮಗಳ ಪ್ರಾರ್ಥನೆಗೆ ಆರಂಭದಲ್ಲಿ ಯಾರೂ ವಿರೋಧ ವ್ಯಕ್ತಪಡಿಸಿರಲಿಲ್ಲ. ಆದರೆ ಇತ್ತೀಚೆಗೆ ಪೋಷಕರೊಬ್ಬರು ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ಇದಾದ ಬಳಿಕ ಶಾಲೆಯು ಎಲ್ಲಾ ಧರ್ಮಗಳ ಪ್ರಾರ್ಥನೆಗಳನ್ನು ಕೈಬಿಡಲು ನಿರ್ಧರಿಸಿತು. ರಾಷ್ಟ್ರಗೀತೆ ಹಾಡುವುದನ್ನು ಮಾತ್ರ ಕಡ್ಡಾಯಗೊಳಿಸಲಾಗಿದೆ ಎಂದು ಶಾಲಾ ಪ್ರಾಂಶುಪಾಲರು ತಿಳಿಸಿರುವುದಾಗಿ ಪೊಲೀಸ್‌ ಅಧಿಕಾರಿ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ನಾಲ್ವರು ಸಂಸದರ ಅಮಾನತು ಹಿಂಪಡೆದ ಸ್ಪೀಕರ್

    ವಿವಾದ ಏನು?
    ಕಾನ್ಪುರ ಶಾಲೆಯಲ್ಲಿ ಸರ್ವಧರ್ಮಗಳ ಪ್ರಾರ್ಥನೆಯನ್ನು ಹಾಡಿಸಲಾಗುತ್ತಿತ್ತು. ಈ ಪ್ರಾರ್ಥನೆಯನ್ನು ಗಾಯತ್ರಿ ಮಂತ್ರದೊಂದಿಗೆ ಆರಂಭಿಸಲಾಗುತ್ತಿತ್ತು. ಆದರೆ ಮುಸ್ಲಿಮರ ಪ್ರಾರ್ಥನೆಗೆ ವಿಶ್ವ ಹಿಂದೂ ಪರಿಷತ್‌ನವರು ವಿರೋಧ ವ್ಯಕ್ತಪಡಿಸಿದ್ದರು. ವಿವಾದದ ಬಳಿಕ ಇದನ್ನು ನಿಲ್ಲಿಸಲಾಗಿತ್ತು.

    ಪ್ರಾರ್ಥನೆಗೆ ಸಂಬಂಧಿಸಿದಂತೆ ಶಾಲೆ ಸಮವಸ್ತ್ರ ಧರಿಸಿದ್ದ ವಿದ್ಯಾರ್ಥಿನಿಯನ್ನು ಆಕೆಯ ಪೋಷಕರು ಪ್ರಶ್ನಿಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಈ ವೀಡಿಯೋವನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರಿಗೂ ಟ್ಯಾಗ್‌ ಮಾಡಿ ವೈರಲ್‌ ಮಾಡಲಾಗಿತ್ತು.

    ಸ್ಥಳೀಯ ಬಿಜೆಪಿ ಮುಖಂಡರಾದ ಮಹೇಂದ್ರ ಶುಕ್ಲಾ ಮತ್ತು ಧೀರಜ್ ಸಾಹು ಶಾಲೆಗೆ ಭೇಟಿ ನೀಡಿ ಆಡಳಿತ ಮಂಡಳಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು. ಶಾಲೆಯ ಆವರಣವನ್ನು ಗಂಗಾಜಲದಿಂದ ಶುದ್ಧೀಕರಿಸಲಾಗಿದೆ. ಆಡಳಿತ ಮಂಡಳಿಯವರು ವಿದ್ಯಾರ್ಥಿಗಳನ್ನು ಕಲಿಮಾ (ಮುಸ್ಲಿಂ ಪ್ರಾರ್ಥನೆ) ಪಠಿಸುವಂತೆ ಮಾಡುವುದು ಹೇಗೆ? ಇದು ಸಮರ್ಥನೀಯವಲ್ಲ ಎಂದು ಶುಕ್ಲಾ ಆಕ್ಷೇಪ ವ್ಯಕ್ತಪಡಿಸಿದ್ದರು.

    Live Tv
    [brid partner=56869869 player=32851 video=960834 autoplay=true]