Tag: kali swami

  • ಕಾಳಿ ಸ್ವಾಮಿ ವಿರುದ್ಧ ಕಾನೂನು ಕ್ರಮ: ಎಡಿಜಿಪಿ ಅಲೋಕ್‌ ಕುಮಾರ್‌

    ಕಾಳಿ ಸ್ವಾಮಿ ವಿರುದ್ಧ ಕಾನೂನು ಕ್ರಮ: ಎಡಿಜಿಪಿ ಅಲೋಕ್‌ ಕುಮಾರ್‌

    ಬೆಂಗಳೂರು: ಪ್ರಚೋದನಕಾರಿ ಭಾಷಣ ಮಾಡಿರುವ ಹಿನ್ನೆಲೆಯಲ್ಲಿ ಕಾಳಿ ಸ್ವಾಮಿ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗಿದೆ ಎಂದು ಎಡಿಜಿಪಿ ಅಲೋಕ್‌ ಕುಮಾರ್‌ ತಿಳಿಸಿದ್ದಾರೆ.

    ಈ ಕುರಿತು ಟ್ವೀಟ್‌ ಮಾಡಿರುವ ಅವರು, ಕೆಲವರು ಸಾಮಾಜಿಕ ಮಾಧ್ಯಮದಲ್ಲಿ ಕಾನೂನು ಸುವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಪ್ರಚೋದನಕಾರಿ ವಿಷಯಗಳನ್ನು ಪೋಸ್ಟ್ ಮಾಡುತ್ತಿರುವುದನ್ನು ಗಮನಿಸಲಾಗಿದೆ. ನಾವು ಅಂತಹ ಪೋಸ್ಟ್‌ಗಳನ್ನು ಪರಿಶೀಲಿಸುತ್ತಿದ್ದೇವೆ. ಅಲ್ಲದೇ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳುತ್ತೇವೆ. ಪ್ರಚೋದನಕಾರಿ ಭಾಷಣ ಮಾಡಿದ ಕಾಳಿ ಸ್ವಾಮಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಎಡಿಜಿಪಿ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಉಡುಪಿಯ ನಿರ್ಜನ ಪ್ರದೇಶದಲ್ಲಿ ಅಪರಿಚಿತ ಇಯಾನ್ ಕಾರ್ ಪತ್ತೆ 

    ಕಾಳಿ ಸ್ವಾಮಿಗೆ ಕಾನೂನು ಕಂಟಕ ಎದುರಾಗಿದೆ. ಹಿಂದೂಗಳ ಒಂದು ತಲೆಗೆ ಮುಸ್ಲಿಮರ 10 ತಲೆ ತೆಗೀಬೇಕು ಅಂತಾ ಟೌನ್‌ಹಾಲ್‌ನಲ್ಲಿ ಕಾಳಿ ಸ್ವಾಮಿ ಹೇಳಿಕೆ ನೀಡಿದ್ದರು. ಇದಲ್ಲದೆ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಪ್ರಚೋದನಕಾರಿ ಹೇಳಿಕೆ, ಬರಹ ಪೋಸ್ಟ್‌ ಮಾಡಿದ್ದರು. ಅಂತಹವರ ಮೇಲೂ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ.

    ಇಂತಹ ಪ್ರಚೋದನಕಾರಿ ಹೇಳಿಕೆಗಳಿರುವ ಪೋಸ್ಟ್‌ಗಳನ್ನು ಪೊಲೀಸರು ಪಟ್ಟಿ ಮಾಡಿದ್ದಾರೆ. ಈಚೆಗೆ ಬಿಜೆಪಿ ಮುಖಂಡ ಪ್ರವೀಣ್‌ ಕೊಲೆ ಹಿನ್ನೆಲೆ ಸೋಷಿಯಲ್‌ ಮೀಡಿಯಾದಲ್ಲಿ ಪ್ರಚೋದನಕಾರಿ ಪೋಸ್ಟ್‌ ಹಾಕಿದ್ದವರ ಮೇಲೂ ಪೊಲೀಸರು ಕಣ್ಣಿಟ್ಟಿದ್ದಾರೆ. ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಹತ್ಯೆ ಹಿಂದೆ PFI ಕೈವಾಡ ಶಂಕೆ ವ್ಯಕ್ತಪಡಿಸಿದ ಕೇಂದ್ರ ಸಚಿವೆ ಶೋಭಾ

    Live Tv
    [brid partner=56869869 player=32851 video=960834 autoplay=true]

  • ಹೆಚ್.ಡಿ ಕುಮಾರಸ್ವಾಮಿಗೆ ಕಾಳಿ ಸ್ವಾಮೀಜಿ ಧನ್ಯವಾದ

    ಹೆಚ್.ಡಿ ಕುಮಾರಸ್ವಾಮಿಗೆ ಕಾಳಿ ಸ್ವಾಮೀಜಿ ಧನ್ಯವಾದ

    ನೆಲಮಂಗಲ: ಮುಸ್ಲಿಮರು ರಚನೆ ಮಾಡಿದ ವಿಗ್ರಹಕ್ಕೆ ಹಿಂದೂಗಳು ಪೂಜೆ ಎಂಬ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆ ಹಿನ್ನೆಲೆ ಇಂದು ನೆಲಮಂಗಲದಲ್ಲಿ ಕಾಳಿ ಶ್ರೀ ಋಷಿಕುಮಾರ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.

    ನಮಗೆ ತಿಳಿಯದ ವಿಷಯವನ್ನು ಮಾಜಿ ಸಿಎಂ ತಿಳಿಸಿಕೊಟ್ಟಿದ್ದಾರೆ. ವಿಗ್ರಹ ಆರಾಧನೆ ಮಾಡುವ ಕ್ರಮ ಮುಸ್ಲಿಮರಲ್ಲಿ ಇಲ್ಲ. ಹಿಂದೂ ಸಂಸ್ಕೃತಿಯಲ್ಲಿ ಆಗಮ ಪರಂಪರೆ ಇದೆ. ಆದರೆ ಮುಸ್ಲಿಮರಲ್ಲಿ ಎಲ್ಲಿದೆ..? ಮೂರ್ತಿ ಕೆತ್ತುವ ವರ್ಗವೇ ಹಿಂದೂಗಳಲ್ಲಿ ಇದೆ. ಮಹಮ್ಮದೀಯರು ವಿಗ್ರಹ ಕೆತ್ತನೆ ಮಾಡಿರುವುದು ನಿಜವೇ..?. ಮಹಮ್ಮದೀಯರಿಂದ ವಿಗ್ರಹ ಖರೀದಿ ಮಾಡಿದ್ದರೆ ಎಚ್ಚರಿಕೆಯಿಂದ ಇರಿ, ಮಹಮ್ಮದೀಯರು ಕೆತ್ತನೆ ಮಾಡಿದ ವಿಗ್ರಹಗಳನ್ನು ಪ್ರತಿಷ್ಠಾಪಿಸಿದ್ದರೆ, ಊರಿಗೆ ಕೇಡು ಸಂಭವಿಸುತ್ತದೆ ಎಂದರು.

    ಒಂದು ವೇಳೆ ಮಹಮ್ಮದೀಯರ ಕೆತ್ತನೆ ಮಾಡಿದ ವಿಗ್ರಹ ಇದ್ದರೆ ಅದನ್ನು ಬಳಸಬಾರದು. ಶ್ರೀರಂಗಪಟ್ಟಣದಲ್ಲಿ ವಿಗ್ರಹ ಕೆತ್ತನೆ ಬಗ್ಗೆ ಮಾಹಿತಿ ನೀಡಿದ್ದು ಸ್ವಾಗತಾರ್ಹ. ಇಂತಹ ಮಾಹಿತಿ ನಮಗೆ ಅವಶ್ಯಕತೆ ಇದೆ ಅದನ್ನು ಮಾಜಿ ಸಿಎಂ ತಿಳಿಸಿಕೊಟ್ಟಿರುವುದು ಸ್ವಾಗತಾರ್ಹ ಪರೋಕ್ಷವಾಗಿ ನಮಗೆ ಸಹಕಾರ ನೀಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ವ್ಲಾಡಿಮಿರ್‌ ಪುಟಿನ್ ಪುತ್ರಿಯರನ್ನೂ ಟಾರ್ಗೆಟ್‌ ಮಾಡ್ತಿದೆ ಅಮೆರಿಕ- ಯಾಕೆ ಗೊತ್ತಾ?

    ನಮ್ಮ ದೇವಾಲಯದ ಮುಂದೆ ಕುಂಕುಮ ಹಚ್ಚಿಕೊಳ್ಳದವರು ಮಾರಾಟ ಮಾಡುತ್ತಾರೆ. ಮಾರಾಟ ಮಾಡುವುದೇ ಬೇರೆ, ಪೂಜಾ ವಿಧಾನವೇ ಬೇರೆ, ಯಾರು ಮಹಮ್ಮದೀಯರು ಕೆತ್ತನೆ ಮಾಡಿದ ವಿಗ್ರಹ ಬಳಸಬಾರದು. ಒಂದು ವೇಳೆ ಬಳಸಿದರೂ ಋತ್ವಿಕರ ಕೈಯಲ್ಲಿ ಮತ್ತೆ ಪರಿಶೀಲಿಸಿ ಎಂದು ಕಾಳಿಸ್ವಾಮಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.