Tag: kalburgi

  • ಒಂದು ಎಕ್ರೆ ಗಾತ್ರದ ಬೃಹತ್ ಬಲೂನ್ ಪತ್ತೆ

    ಒಂದು ಎಕ್ರೆ ಗಾತ್ರದ ಬೃಹತ್ ಬಲೂನ್ ಪತ್ತೆ

    ಕಲಬುರಗಿ: ಜಿಲ್ಲೆಯ ಚಿಂಚೋಳಿಯ ಹೊಸಳ್ಳಿ (ಎಚ್) ಗ್ರಾಮದ ರೈತರ ಜಮೀನಿನಲ್ಲಿ ಬೃಹತ್ ಆಕಾರದ ನಿಗೂಢ ಬಲೂನ್ ಪತ್ತೆಯಾಗಿದೆ.

    ಎಲ್ಲಿಂದಲ್ಲೋ ಆಗಸದಿಂದ ಹಾರಿ ಬಂದು ರೈತರ ಜಮೀನಿನಲ್ಲಿ ಆವರಿಸಿರುವ ಬೃಹತ್ ಬಲೂನ್ ಸುಮಾರು ಒಂದು ಎಕರೆ ಪ್ರದೇಶದಷ್ಟು ವಿಶಾಲವಾಗಿದೆ. ಈ ಅನಾಮಧೇಯ ಪ್ಲಾಸ್ಟಿಕ್ ಬಲೂನ್ ಕಂಡು ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ವಿಚಾರ ತಿಳಿದು ಸುತ್ತಮುತ್ತಲಿನ ಗ್ರಾಮಸ್ಥರು ಈ ಗ್ರಾಮಕ್ಕೆ ಭೇಟಿ ನೀಡುತ್ತಿದ್ದಾರೆ.

    ಇದರ ಮಾಹಿತಿ ಪಡೆದ ಚಿಂಚೋಳಿ ತಹಶೀಲ್ದಾರ್ ಮತ್ತು ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಲೂನ್ ಬಗ್ಗೆ ಯಾವ ಅಧಿಕಾರಿಗಳಿಗೂ ಸಹ ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಈ ಬಲೂನ್‍ನಲ್ಲಿ ಯಾವುದೇ ಅಕ್ಷರಗಳು ಸಹ ಮುದ್ರಣವಾಗಿಲ್ಲ. ಹೀಗಾಗಿ ಈ ಬಲೂನ್ ಯಾರಿಗೆ ಸೇರಿದ್ದು? ಇಲ್ಲಿಗೆ ಬಂದಿದ್ದು ಹೇಗೆ? ಯಾರಾದರೂ ಬಲೂನ್ ಬಳಸಿ ಸಂಶೋಧನೆ ನಡೆಸುತ್ತಿದ್ದಾರಾ ಎನ್ನುವ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ.

    ಬಲೂನ್ ಮೂಲಕ ಕೆಲವೊಂದು ಕಂಪೆನಿಗಳು ಸಂಶೋಧನೆ ನಡೆಸುತ್ತಿವೆ. ವಿಶೇಷವಾಗಿ ಇಂಟರ್‍ನೆಟ್ ದಿಗ್ಗಜ ಗೂಗಲ್ ‘ಪ್ರೊಜೆಕ್ಟ್ ಲೂನ್’ ಹೆಸರಿನಲ್ಲಿ ಬಲೂನ್ ಮೂಲಕ ಇಂಟರ್‍ನೆಟ್ ನೀಡಲು ಮುಂದಾಗುತ್ತಿದೆ. ನ್ಯೂಜಿಲೆಂಡ್ ನಲ್ಲಿ ಮೊದಲ ಪ್ರಯೋಗ ನಡೆದಿದ್ದು, ಹಲವು ದೇಶಗಳ ಜೊತೆ ಗೂಗಲ್ ಇಂಟರ್‍ನೆಟ್ ಒದಗಿಸಲು ಒಪ್ಪಂದ ಮಾಡಿಕೊಂಡಿದೆ.

    https://youtu.be/HOndhtfIXSY

  • ಕರ್ನಾಟಕದ ಐಎಎಸ್ ಅಧಿಕಾರಿಯ ತಂಗಿ ಅನುಮಾನಾಸ್ಪದ ಸಾವು

    ಕರ್ನಾಟಕದ ಐಎಎಸ್ ಅಧಿಕಾರಿಯ ತಂಗಿ ಅನುಮಾನಾಸ್ಪದ ಸಾವು

    ಕಲಬುರಗಿ: ಕರ್ನಾಟಕ ಐಎಎಸ್ ಕೇಡರ್ ಅಧಿಕಾರಿ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಸಿಇಓ ಹೆಪ್ಸಿಬಾ ರಾಣಿ ಸಹೋದರಿ ಡಾ.ಸೂರ್ಯಕುಮಾರಿ ಅನುಮಾನಾಸ್ಪದವಾಗಿ ಆಂಧ್ರದ ವಿಜಯವಾಡಾದಲ್ಲಿ ಸಾವನಪ್ಪಿದ್ದಾರೆ.

    ಕಳೆದ ಮೂರು ದಿನಗಳ ಹಿಂದೆ ಸೂರ್ಯಕುಮಾರಿ ನಾಪತ್ತೆಯಾಗಿದ್ದು ಇಂದು ಅವರ ಶವ ವಿಜಯವಾಡದ ರೋಶಾ ಕ್ಯಾನಲ್ ನಲ್ಲಿ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

    ಕಳೆದ ಮೂರು ದಿನಗಳ ಹಿಂದೆ ಕೋರ್ಲಪಾಟಿ ಅವರ ಪೋಷಕರು ಟಿಡಿಪಿ ಮಾಜಿ ಶಾಸಕ  ಜಯರಾಜನ್ ಅವರ ಮಗ ವಿದ್ಯಾಸಾಗರ ಕಿಡ್ನಾಪ್ ಮಾಡಿದ್ದಾರೆ  ಅಂತಾ ಆರೋಪಿಸಿದ್ದರು. ಆದರೆ ಸಾವಿಗೂ ಮುನ್ನ ಡಾ.ಸೂರ್ಯಕುಮಾರಿ ತಮ್ಮ ಮೊಬೈಲ್ ನಿಂದ ಶಾಸಕರ ಪುತ್ರ ವಿದ್ಯಾಸಾಗರ ಮೊಬೈಲ್‍ಗೆ “ನಿನ್ನ ಬಿಟ್ಟು ನನಗೆ ಇರಲು ಸಾಧ್ಯವಿಲ್ಲ ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ” ಅಂತಾ ಮೇಸೆಜ್ ಮಾಡಿದ್ದಾರೆ.

    ಸದ್ಯ ಈ ಕುರಿತು ಮಂಚಾವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಕಲಬುರಗಿ: ಮೊರಾರ್ಜಿ ವಸತಿ ನಿಲಯದಲ್ಲಿ ಬಾಲಕಿ ನೇಣಿಗೆ ಶರಣು

    ಕಲಬುರಗಿ: ಮೊರಾರ್ಜಿ ವಸತಿ ನಿಲಯದಲ್ಲಿ ಬಾಲಕಿ ನೇಣಿಗೆ ಶರಣು

    ಕಲಬುರಗಿ: ಮೊರಾರ್ಜಿ ವಸತಿ ನಿಲಯದಲ್ಲಿ ಬಾಲಕಿ ನೇಣಿಗೆ ಶರಣಾದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಜೇವರ್ಗಿ ಪಟ್ಟಣದಲ್ಲಿರುವ ಹಾಸ್ಟೆಲ್ ನಲ್ಲಿ ಈ ಘಟನೆ ಸಂಭವಿಸಿದೆ. ಪ್ರಿಯಾಂಕ(16) ಮೃತಪಟ್ಟ ವಿದ್ಯಾರ್ಥಿನಿ. ಈಕೆ ಜೇವರ್ಗಿ ಪಟ್ಟಣದ ಶಾಂತನಗರ ನಿವಾಸಿ ಎಂದು ತಿಳಿದುಬಂದಿದೆ.

    ವಸತಿ ನಿಲಯದಲ್ಲಿ ಯಾರೂ ಇಲ್ಲದ ವೇಳೆ ಡಬಲ್ ಸ್ಟೆಪ್ ಮಂಚಕ್ಕೆ ವೇಲ್‍ನಿಂದ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

    ಸ್ಥಳಕ್ಕೆ ಜೇವರ್ಗಿ ಪೊಲೀಸರು ದೌಡಾಯಿಸಿದ್ದಾರೆ.

  • ಜಾತ್ರೆಯಲ್ಲಿ ಪಕ್ಕಕ್ಕೆ ಸರಿ ಅಂತ ಹೇಳಿದ್ದಕ್ಕೆ ಒಂದೇ ಕುಟುಂಬದ 7 ಜನರ ಮೇಲೆ ಮಾರಣಾಂತಿಕ ಹಲ್ಲೆ

    ಜಾತ್ರೆಯಲ್ಲಿ ಪಕ್ಕಕ್ಕೆ ಸರಿ ಅಂತ ಹೇಳಿದ್ದಕ್ಕೆ ಒಂದೇ ಕುಟುಂಬದ 7 ಜನರ ಮೇಲೆ ಮಾರಣಾಂತಿಕ ಹಲ್ಲೆ

    ಕಲಬುರಗಿ: ಜಾತ್ರೆಯಲ್ಲಿ ಪಕ್ಕಕ್ಕೆ ಸರಿ ಅಂತ ಹೇಳಿದ್ದಕ್ಕೆ ಒಂದೇ ಕುಟುಂಬದ ಏಳು ಜನರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಕಲಬುರಗಿಯಲ್ಲಿ ನಡೆದಿದೆ.

    ಜಿಲ್ಲೆಯ ಹತಗುಂದ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮಹಾದೇವಪ್ಪ ಕುಟುಂಬದ ಏಳು ಜನ ಹಲ್ಲೆಗೊಳಗಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ರೌಡಿಶೀಟರ್ ರಾಜು ಕಪನೂರ ಮತ್ತು ಅವನ ತಂಡದವರು ಹಲ್ಲೆ ಮಾಡಿದ್ದಾರೆ ಅಂತ ಗಾಯಾಳುಗಳು ಆರೋಪಿಸಿದ್ದಾರೆ.

    ಶುಕ್ರವಾರದಂದು ಗ್ರಾಮದ ಲಕ್ಷ್ಮಿದೇವರ ಜಾತ್ರೆಯ ಸಂದರ್ಭದಲ್ಲಿ ಮಹದೇವಪ್ಪ ಕುಟುಂಬ ಮತ್ತು ಗ್ರಾಮದ ನಾಮದೇವ ಲಂಡನಕರ್ ಕುಟುಂಬದ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಜಗಳ ನಡೆದಿತ್ತು. ಈ ಹಿನ್ನೆಲೆಯಲ್ಲಿ ಇಂದು ಲಂಡನಕರ್ ಕುಟುಂಬದ ಪರವಾಗಿ ಕಲಬುರಗಿ ತಾಲೂಕಿನ ಕಪನೂರು ಗ್ರಾಮದ ನಿವಾಸಿಯಾದ ರೌಡಿಶೀಟರ್ ರಾಜು ಕಪನೂರ್ ಮತ್ತು ಗ್ಯಾಂಗ್ ಬಂದು ರಾಡ್, ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

    ಈ ಬಗ್ಗೆ ಮಾತನಾಡಿದ ರಾಜು, ನಾನು ಜಾತ್ರೆಗೆ ಹೋಗಿದ್ದು ನಿಜ. ಆದ್ರೆ ನಾನು ಹಲ್ಲೆ ಮಾಡಿಲ್ಲ. ನನಗೆ ಆಗದವರು ಈ ರೀತಿಯ ಕುಮ್ಮಕ್ಕು ನೀಡ್ತಿದ್ದಾರೆ ಅಂತ ಹೇಳುತ್ತಿದ್ದಾನೆ.

    ಈ ಬಗ್ಗೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.