Tag: kalburgi

  • ಎರಡೂವರೆ ತಿಂಗ್ಳ ಮಗಳನ್ನು ಎದೆಗೆ ಅವುಚಿಕೊಂಡು ಬೆಂಕಿ ಹಚ್ಚಿಕೊಂಡ ತಂದೆ

    ಎರಡೂವರೆ ತಿಂಗ್ಳ ಮಗಳನ್ನು ಎದೆಗೆ ಅವುಚಿಕೊಂಡು ಬೆಂಕಿ ಹಚ್ಚಿಕೊಂಡ ತಂದೆ

    ಕಲಬುರಗಿ: ಎರಡೂವರೆ ತಿಂಗಳು ಹೆಣ್ಣು ಮಗು ಸಮೇತ ತಂದೆಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ಗಾಣಗಾಪುರ ಗ್ರಾಮದಲ್ಲಿ ನಡೆದಿದೆ.

    ಶರಣು ಕವಲಗಿ(35) ತನ್ನ ಎರಡುವರೆ ತಿಂಗಳ ಮಗು ರುತ್ವಿ ಯನ್ನು ಎದೆಗೆ ಅವುಚಿಕೊಂಡು ನಂತರ ಸಿಮೆ ಎಣ್ಣೆ ಸುರಿದುಕೊಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನು. ಮೂಲತ ಕಲಬುರಗಿ ತಾಲೂಕಿನ ಇಟಗಾ ಗ್ರಾಮದ ನಿವಾಸಿಯಾದ ಶರಣು, ತನ್ನ ಪತ್ನಿಯ ತವರು ಮನೆಯಾದ ಗಾಣಗಪೂರ ಗ್ರಾಮಕ್ಕೆ ಇಂದು ಮುಂಜಾನೆ ಹೋಗಿದ್ದನು.

    ಹೆರಿಗೆಯಾದ ನಂತರ ತವರು ಮನೆಯಲ್ಲಿದ್ದ ಪತ್ನಿ ಜೊತೆ ಆಗಾಗ ಜಗಳವಾಡಿದ್ದನು. ಇಂದು ಕೂಡಾ ಪತ್ನಿ ಜೊತೆ ಜಗಳವಾಡಿದ್ದರಿಂದ ಪತ್ನಿ ಪೊಲೀಸ್ ಠಾಣೆಗೆ ಹೋಗುವುದಾಗಿ ಹೇಳಿದ್ದಾರೆ. ಅಷ್ಟರಲ್ಲೇ ಜೋಳಿಗೆಯಲ್ಲಿದ್ದ ಮಗುವನ್ನು ತಗೆದುಕೊಂಡು ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡು ಮಗು ಸಮೇತ ಬೆಂಕಿ ಹಚ್ಚಿಕೊಂಡಿದ್ದಾನೆ. ಕೋಣೆಯ ಬಾಗಿಲು ಹಾಕಿಕೊಂಡು ಬೆಂಕಿ ಹಚ್ಚಿಕೊಂಡಿದ್ದರಿಂದ ಬಾಗಿಲು ಮುರಿದು ಒಳ ಹೋಗುವಷ್ಟರಲ್ಲಿ ಬೆಂಕಿಯಿಂದ ತಂದೆ ಮಗಳು ಸುಟ್ಟು ಕರಕಲಾಗಿದ್ದರು.

    ಶರಣು ಕುಡಿದ ಮತ್ತಿನಲ್ಲಿ ಪತ್ನಿ ಜೊತೆ ಜಗಳವಾಡಿಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ಪತ್ನಿ ಜೊತೆ ಆಗಾಗ ಜಗಳವಾಡಿಕೊಳ್ಳುತ್ತಿದ್ದನು. ಅಷ್ಟೇ ಅಲ್ಲದೇ ಪತ್ನಿಗೆ ಕಿರುಕುಳ ಕೊಡುತ್ತಿದ್ದನು ಎಂದು ತಿಳಿದು ಬಂದಿದೆ. ಈ ಘಟನೆ ಸಂಬಂಧ ಗಾಣಗಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕರ್ಪೂರವಿಟ್ಟು ಹತ್ತಕ್ಕೂ ಅಧಿಕ ಕಾರುಗಳಿಗೆ ಬೆಂಕಿ ಹಚ್ಚಿದ್ದ ಸೈಕೋ ಡಾಕ್ಟರ್ ಬಂಧನ

    ಕರ್ಪೂರವಿಟ್ಟು ಹತ್ತಕ್ಕೂ ಅಧಿಕ ಕಾರುಗಳಿಗೆ ಬೆಂಕಿ ಹಚ್ಚಿದ್ದ ಸೈಕೋ ಡಾಕ್ಟರ್ ಬಂಧನ

    ಬೆಳಗಾವಿ: ನಗರ ಎಪಿಎಂಸಿ ಠಾಣೆ ಪೊಲೀಸರು ಕಾರ್ಯಚರಣೆ ನಡೆಸಿ ಹಲವು ದಿನಗಳಿಂದ ಕಲಬುರಗಿ ನಗರದ ವಿವಿಧ ಪ್ರದೇಶದಲ್ಲಿ ಕಾರುಗಳಿಗೆ ಬೆಂಕಿ ಹಚ್ಚುತ್ತಿದ್ದ ದುಷ್ಕರ್ಮಿಯನ್ನು ಬಂಧಿಸಿದ್ದಾರೆ.

    ಕಲಬುರಗಿ ನಗರದ ನಿವಾಸಿ ಆಗಿರುವ ಡಾ. ಅಮಿತ್ ಗಾಯಾಕವಾಡ್ ಬಂಧನವಾದ ವ್ಯಕ್ತಿಯಾಗಿದ್ದು, ಆರೋಪಿ ಅಮಿತ್ ಬೆಳಗಾವಿಯ ಬಿಐಂಎಸ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯನಾಗಿ ಸೇವೆ ಸಲ್ಲಿಸುತ್ತಿದ್ದ.

    ಕಳೆದ ಒಂದು ವಾರದಿಂದ ನಗರದಲ್ಲಿ ಕಾರಿನ ಮೇಲೆ ಕರ್ಪೂರವಿಟ್ಟು ಹತ್ತಕ್ಕೂ ಅಧಿಕ ಕಾರುಗಳಿಗೆ ಬೆಂಕಿ ಹಚ್ಚಿದ್ದ. ಘಟನೆಯನ್ನು ಗಂಭೀರವಾಗಿ ಪರಿಣಿಸಿದ ಪೊಲೀಸರು ಆರೋಪಿಯ ಪತ್ತೆ ಕಾರ್ಯಾಚರಣೆ ನಡೆಸಿದ್ದರು. ಆದರೂ ನಗರದಿಂದ ತಪ್ಪಿಸಿಕೊಂಡು ಹೋಗಿದ್ದ ಅಮಿತ್‍ನನ್ನು ಕಲಬುರಗಿ ಪೊಲೀಸರ ಮಾಹಿತಿ ಮೇರೆಗೆ ಬೆಳಗಾವಿ ನಗರದಲ್ಲಿ ಬಂಧಿಸಿದ್ದಾರೆ.

    ಸಿಕ್ಕಿಬಿದ್ದಿದ್ದು ಹೇಗೆ: ಕಲಬುರಗಿ ನಗರದ ಖುಬಾ ಪ್ಲಾಟ್ ನಲ್ಲಿ ಕಾರ್ ಗೆ ಬೆಂಕಿ ಹಚ್ಚುವ ಸಂರ್ಭದಲ್ಲಿ ಕಾರ್ ಮಾಲೀಕರು ಆರೋಪಿಯನ್ನು ಗಮನಿಸಿದ್ದರು. ಈ ವೇಳೆ ಆರೋಪಿ ಹೆಲ್ಮೆಟ್ ಧರಿಸಿದ್ದ ಇದರಿಂದ ಅನುಮಾನಗೊಂಡ ಅವರು ಆತನನ್ನು ಪ್ರಶ್ನಿಸಿದ್ದರು. ಇದಕ್ಕೆ ಉತ್ತರ ವಾಗಿ ಆರೋಪಿ ನಾನು ಮನೆಯ ಮಾಲೀಕರಾದ ಡಿಸೋಜಾ ಅವರನ್ನು ಭೇಟಿ ಮಾಡಲು ಬಂದಿದೆ ಎಂದು ತಿಳಿಸಿದ್ದ. ಆದರೆ ಡಿಸೋಜಾ ಅವರು ಮೃತಪಟ್ಟು ಹಲವು ದಿನಗಳಾಗಿದ್ದವು. ನಂತರ ಆರೋಪಿ ಮುಖದ ಮೇಲಿನ ಹೆಲ್ಮೆಟ್ ತೆಗಿಸಿ ಪ್ರಶ್ನಿಸಿದ್ದರು. ಆದರೆ ಈ ವೇಳೆ ಅವರಿಗೆ ಬೇರೆ ಮಾಹಿತಿ ನೀಡಿ ಆರೋಪಿ ಅಲ್ಲಿಂದ ಎಸ್ಕೆಪ್ ಆಗಿದ್ದ. ಈ ಘಟನೆ ಕುರಿತು ಕಾರ್ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದರು.

    ಈ ಮಾಹಿತಿಯ ಬೆನ್ನಟ್ಟಿದ್ದ ಪೊಲೀಸರಿಗೆ ಬೆಳಗಾವಿ ನಗರದ ವಿವೇಂತಾ ಆರ್ಪಾಟ್ ಮೆಂಟ್ ನಲ್ಲಿ ಇಂತಹದೇ ಘಟನೆಯಲ್ಲಿ ವ್ಯಕ್ತಿಯೊಬ್ಬರು ಸಿಕ್ಕಿ ಬಿದ್ದಿರುವ ಮಾಹಿತಿ ಲಭಿಸಿಸುತ್ತದೆ. ಬಂಧಿತ ಆರೋಪಿಯ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಿದ ಸಂದರ್ಭದಲ್ಲಿ ಅಮಿತ್ ಬೆಳಗಾವಿಯ ಸದಾಶಿವ ನಗರದಲ್ಲಿ ವಾಸಿಸುತ್ತಿದ್ದು, ಆತನ ಮನೆಯಲ್ಲಿ ಕೃತ್ಯಕ್ಕೆ ಬಳಸಿದ ಎಲ್ಲಾ ವಸ್ತುಗಳು ಪತ್ತೆಯಾಗಿದೆ. ಪ್ರಸ್ತುತ ಆರೋಪಿ ಅಮಿತ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ.

    ಇದಕ್ಕೂ ಮುನ್ನ ಆರೋಪಿ ಕಲಬುರಗಿ ನಗರದ ಸೇಡಂ ರಸ್ತೆಯ ಜಯನಗರದ ಬಳಿ 2, ಬನಶಂಕರಿ ಕಾಲೋನಿ ಬಳಿ 1, ವಿಶ್ವೇಶರಯ್ಯ ಕಾಲೋನಿಯ ಬಳಿ 1, ಯುನೈಟೆಡ್ ಆಸ್ಪತ್ರೆ ಬಳಿ 1, ಲಾಲಗೇರಿ ಕ್ರಾಸ್ ಬಳಿ 1 ಕಾರು ಸೇರಿದಂತೆ ಎಂಟಕ್ಕೂ ಅಧಿಕ ಕಾರುಗಳಿಗೆ ಬೆಂಕಿ ಹಚ್ಚಿದ್ದ. ಅಲ್ಲದೇ ಈ ಘಟನೆಯ ಮರುದಿನವೇ ಆರೋಪಿ ಮತ್ತೆ ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ನಗರದ ಖೂಬಾ ಪ್ಲಾಟ್ ನಲ್ಲಿ ಹುಂಡೈ ಕಂಪೆನಿ ಕಾರ್ ಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದ.

    ಪದೇ ಪದೇ ಕಾರುಗಳಿಗೆ ಬೆಂಕಿ ಹಚ್ಚುವ ಪ್ರಕರಣಗಳಿಂದ ಕಂಗಲಾಗಿದ್ದ ಕಲಬುರಗಿ ನಗರದ ಕಾರು ಮಾಲೀಕರು, ತಮ್ಮ ಕಾರುಗಳ ರಕ್ಷಣೆಗಾಗಿ ಮನೆ ಬಿಟ್ಟು ಕಾರಿನಲ್ಲಿ ಮಲಗುವ ಪರಿಸ್ಥಿತಿ ನಿರ್ಮಾಣವಾಗಿತ್ತು.

    ಅರೋಪಿಯ ಪತ್ತೆಗಾಗಿ ಜಿಲ್ಲೆಯ ಎ ಡಿವಿಷನ್ ಡಿಎಸ್‍ಎಸ್ಪಿ ಲೊಕೇಶ್ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿತ್ತು. ಅಲ್ಲದೇ ಆರೋಪಿ ಕಾರಿಗೆ ಬೆಂಕಿ ಹಚ್ಚಿ ಸ್ಥಳದಿಂದ ಪರಾರಿಯಾಗುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು. ಈ ದೃಶ್ಯಗಳ ವಿಡಿಯೋವನ್ನು ಬಿಡುಗಡೆ ಮಾಡಿದ್ದ ಪೊಲೀಸರು ಆರೋಪಿಯ ಪತ್ತೆಗೆ ಸಾರ್ವಜನಿಕರ ಸಹಕಾರವನ್ನು ಕೋರಿದ್ದರು.

    https://www.youtube.com/watch?v=PWHq6BC0Dho

  • ಇಬ್ಬರು ಮಕ್ಕಳನ್ನು ಬಾವಿಗೆ ಹಾಕಿ ತಾನೂ ನೇಣು ಹಾಕಿಕೊಂಡ ತಂದೆ

    ಇಬ್ಬರು ಮಕ್ಕಳನ್ನು ಬಾವಿಗೆ ಹಾಕಿ ತಾನೂ ನೇಣು ಹಾಕಿಕೊಂಡ ತಂದೆ

    ಕಲಬುರಗಿ: ಇಬ್ಬರು ಮಕ್ಕಳನ್ನು ಬಾವಿಗೆ ಹಾಕಿ ನಂತರ ತಂದೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಚಿಂಚೋಳಿ ತಾಲೂಕಿನ ಹುಡದಳ್ಳಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.

    ಹುಡದಳ್ಳಿ ಗ್ರಾಮದ ರಂಗಯ್ಯ ತನ್ನ ಇಬ್ಬರು ಮಕ್ಕಳಾದ 5 ವರ್ಷದ ಶಿವಕುಮಾರ್ ಮತ್ತು 2 ವರ್ಷದ ಶ್ರೀಕಾಂತನನ್ನು ಬಾವಿಗೆ ಹಾಕಿ ಸಾಯಿಸಿದ್ದಾನೆ. ನಂತರ ಬಾವಿಯ ಪಕ್ಕದಲ್ಲಿನ ಮರಕ್ಕೆ ಹಗ್ಗದಿಂದ ನೇಣು ಹಾಕಿಕೊಂಡು ರಂಗಯ್ಯ ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ರಂಗಯ್ಯ ಕುಡಿತದ ದಾಸನಾಗಿದ್ದು, ಮಾನಸಿಕವಾಗಿ ಅಸ್ವಸ್ಥವಾಗಿದ್ದ. ಇದರಿಂದ ಪ್ರತಿದಿನ ಹೆಂಡತಿ ಜೊತೆ ಜಗಳವಾಡುತ್ತಿದ್ದ. ಅದೇ ರೀತಿ ಬುಧವಾರ ಕೂಡ ಪತ್ನಿ ಜೊತೆ ಜಗಳವಾಡಿಕೊಂಡು ಎರಡು ಮಕ್ಕಳನ್ನು ಕರೆದುಕೊಂಡು ಹೋಗಿದ್ದಾನೆ. ಮಕ್ಕಳನ್ನು ಕರೆದುಕೊಂಡು ಹೋಗುತ್ತಿರುವುದನ್ನು ಗ್ರಾಮಸ್ಥರು ಗಮನಿಸಿದ್ದಾರೆ. ಸಂಜೆವರೆಗೂ ರಂಗಯ್ಯ ಹಾಗೂ ಮಕ್ಕಳು ಮನೆಗೆ ಹಿಂದಿರುಗದ ಕಾರಣ ಗ್ರಾಮಸ್ಥರೇ ಹುಡುಕಿಕೊಂಡು ಹೋಗಿದ್ದಾರೆ. ಆಗ ಮಕ್ಕಳು ಬಾವಿಯಲ್ಲಿ ಬಿದ್ದಿರುವುದು ಪತ್ತೆಯಾಗಿದೆ. ಬಳಿಕ ಅಲ್ಲೆ ಪಕ್ಕದಲ್ಲಿದ್ದ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ರಂಗಯ್ಯ ಪತ್ತೆಯಾಗಿದ್ದಾನೆ.

    ಈ ಕುರಿತು ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಸುಲೆಪೇಟ್ ಪೊಲೀಸರು ಬಂದು ದೂರು ದಾಖಲಿಸಿಕೊಂಡಿದ್ದಾರೆ.

  • ಸರ್ಕಾರಿ ಬಸ್, ಬೈಕ್ ನಡುವೆ ಡಿಕ್ಕಿ- ಸ್ಥಳದಲ್ಲೇ ಸವಾರರಿಬ್ಬರು ಸಾವು

    ಸರ್ಕಾರಿ ಬಸ್, ಬೈಕ್ ನಡುವೆ ಡಿಕ್ಕಿ- ಸ್ಥಳದಲ್ಲೇ ಸವಾರರಿಬ್ಬರು ಸಾವು

    ಕಲಬುರಗಿ: ಸರ್ಕಾರಿ ಬಸ್ ಮತ್ತು ಬೈಕ್ ನಡುವೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸೇಡಂ ತಾಲೂಕಿನ ಕೋಡ್ಲಾ ಗ್ರಾಮದ ಬಳಿ ಇಂದು ಮುಂಜಾನೆ ನಡೆದಿದೆ.

    ಕೋಡ್ಲಾ ಗ್ರಾಮದ ಸಿದ್ದಪ ಕುಂಬಾರ(17) ಮತ್ತು ಅಂಬರೀಷ್ ಗುತ್ತೇದಾರ್(24) ಮೃತ ದುರ್ದೈವಿಗಳು. ಬೈಕ್ ಸವಾರರು ಹೆಲ್ಮೆಟ್ ಧರಿಸದೇ ಇರುವ ಪರಿಣಾಮ ಅಪಘಾತ ಸಂಭವಿಸಿದಾಗ ತಲೆಗೆ ಗಂಭೀರವಾದ ಪೆಟ್ಟು ಬಿದ್ದಿದ್ದು, ತೀರ್ವ ರಕ್ತಸ್ರಾವದಿಂದಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಇಂದು ಮುಂಜಾನೆ ಸಿದ್ದಪ ಕುಂಬಾರ ಮತ್ತು ಅಂಬರೀಶ್ ಒಟ್ಟಿಗೆ ಕೋಡ್ಲಾಯಿಂದ ಕಲಬುರಗಿಗೆ ಹೋಗುತ್ತಿದ್ದರು. ಸಾರಿಗೆ ಬಸ್ ಕಲಬುರಗಿಯಿಂದ ಸೇಡಂ ಕಡೆಗೆ ಬರುತ್ತಿತ್ತು. ಈ ಸಂದರ್ಭದಲ್ಲಿ ಬೈಕ್ ಸವಾರರು ಹೆಲ್ಮೆಟ್ ಧರಿಸದೇ ವೇಗವಾಗಿ ಬೈಕ್ ಓಡಿಸುಕೊಂಡು ಬರುತ್ತಿದ್ದರು. ಸವಾರನ ನಿಯಂತ್ರಣ ತಪ್ಪಿ ವೇಗವಾಗಿ ಸಾರಿಗೆ ಬಸ್‍ಗೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿ ಹೊಡೆದ ಪರಿಣಾಮ ಇಬ್ಬರಿಗೂ ತಲೆಗೆ ಗಂಭೀರವಾಗಿ ಪೆಟ್ಟಾಗಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

    ಈ ಸಂಬಂಧ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.

  • ಪ್ರಾಂಶುಪಾಲ ಅತ್ಯಾಚಾರಕ್ಕೆ ಯತ್ನ- ಸಹಾಯಕ್ಕಾಗಿ ವಾರ್ಡನ್ ಬಳಿ ಹೋದ್ರೆ ನಮಗಿಬ್ಬರಿಗೂ ಸಹಕರಿಸು ಅಂದ

    ಪ್ರಾಂಶುಪಾಲ ಅತ್ಯಾಚಾರಕ್ಕೆ ಯತ್ನ- ಸಹಾಯಕ್ಕಾಗಿ ವಾರ್ಡನ್ ಬಳಿ ಹೋದ್ರೆ ನಮಗಿಬ್ಬರಿಗೂ ಸಹಕರಿಸು ಅಂದ

    ಕಲಬುರಗಿ: ಶಾಲೆಯಲ್ಲಿ ತಮ್ಮ ಜೊತೆ ಕೆಲಸ ಮಾಡುತ್ತಿದ್ದ ಮಹಿಳೆಗೆ ಪ್ರಾಂಶುಪಾಲನೊಬ್ಬ ಲೈಂಗಿಕ ಕಿರುಕುಳ ನೀಡಿರುವ ಘಟನೆ ಅಫಜಲಪುರ್ ತಾಲೂಕಿನ ಕರ್ಜಗಿ ಗ್ರಾಮದಲ್ಲಿ ನಡೆದಿದೆ.

    ಮೋರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಸೈಫನ್ ವಿರುದ್ಧ ಈ ಅತ್ಯಾಚಾರ ಆರೋಪ ಕೇಳಿಬಂದಿದೆ. ತಮ್ಮದೇ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ತನ್ನೊಂದಿಗೆ ಸಹಕರಿಸುವಂತೆ ಕಿರುಕುಳ ಕೊಟ್ಟಿದ್ದಲ್ಲದೇ ಆಕೆಯನ್ನ ಕೆಲಸದಿಂದ ತೆಗೆದುಹಾಕಿದ್ದಾನೆ.

    ಕಳೆದ 3 ತಿಂಗಳ ಹಿಂದೆ ಶಾಲೆ ಬಿಟ್ಟ ಮೇಲೆ ಕೊಠಡಿಯಲ್ಲಿ ಯಾರು ಇರಲಿಲ್ಲ. ಈ ವೇಳೆ ಮಹಿಳಾ ಸಿಬ್ಬಂದಿ ಮೇಲೆ ಸೈಫನ್ ಅತ್ಯಾಚಾರ ಮಾಡಲು ಯತ್ನಿಸಿದ್ದಾನೆ. ಮಹಿಳೆ ಆತನಿಂದ ಹೇಗೋ ತಪ್ಪಿಸಿಕೊಂಡು ಬಂದು ವಾರ್ಡನ್ ಜಗನ್ನಾಥ ಬಳಿ ಹೇಳಿದ್ದಾರೆ. ಈ ವೇಳೆ ವಾರ್ಡನ್ ಕೂಡಾ ನೀನು ಇನ್ನು ಟೆಂಪರರಿಯಾಗಿ ಇದ್ದೀಯಾ ಹೀಗಾಗಿ ನಮ್ಮಿಬ್ಬರೊಂದಿಗೂ  ಸಹಕರಿಸು ನಿನಗೆ ಕೆಲಸ ಪರ್ಮನೆಂಟ್ ಮಾಡ್ತೀವಿ ಎಂದು ಹೇಳಿದ್ದಾನೆ. ಇದಕ್ಕೆ ಮಹಿಳೆ ಒಪ್ಪದಿದ್ದಾಗ ಅವರನ್ನು ಕೆಲಸದಿಂದ ತೆಗೆದು ಹಾಕಿದ್ದಾನೆ.

    ಮಹಿಳೆ ಪ್ರಾಂಶುಪಾಲನ ಕಿರುಕುಳದಿಂದ ನೊಂದು ವಿಷ ಸೇವಿಸಿ ಆತ್ಮಹತ್ಯೆಗೂ ಯತ್ನಿಸಿದ್ದರು. ಆದರೆ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ.

    ಇನ್ನು ಈ ಘಟನೆಯ ಬಗ್ಗೆ ಪೊಲೀಸರಿಗೆ ದೂರು ನೀಡಲು ಹೋದರೆ ನಿಮ್ಮ ಬಲಿ ಬಲವಾದ ಸಾಕ್ಷಿ ಇಲ್ಲ ಎಂದು ನಿರಾಕರಿಸಿದ್ದಾರೆ. ಆದರೆ ನೊಂದ ಮಹಿಳೆ ಇದೀಗ ನ್ಯಾಯ ಬೇಕು ಎಂದು ಆಗ್ರಹಿಸುತ್ತಿದ್ದಾರೆ.

  • ಹೆಣ್ಣು ಮಗು ಹುಟ್ಟಿದ್ರೂ ಗಂಡು ಮಗು ನೀಡಿ ವೈದ್ಯರ ಎಡವಟ್ಟು- ಈಗ ಹೆಣ್ಣು ಮಗು ಕೊಟ್ರೆ ಪೋಷಕರ ನಿರಾಕರಣೆ!

    ಹೆಣ್ಣು ಮಗು ಹುಟ್ಟಿದ್ರೂ ಗಂಡು ಮಗು ನೀಡಿ ವೈದ್ಯರ ಎಡವಟ್ಟು- ಈಗ ಹೆಣ್ಣು ಮಗು ಕೊಟ್ರೆ ಪೋಷಕರ ನಿರಾಕರಣೆ!

    ಕಲಬುರಗಿ: ಹೆಣ್ಣು ಮಗು ಹುಟ್ಟಿದರೂ ನಿಮಗೆ ಗಂಡು ಮಗು ಹುಟ್ಟಿದೆ ಎಂದು ವೈದ್ಯರು ದಂಪತಿಗೆ ಹೇಳಿ ಎಡವಟ್ಟು ಮಾಡಿಕೊಂಡಿರುವ ಘಟನೆ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

    ಜೇವರ್ಗಿ ತಾಲೂಕಿನ ಕೋಣಶಿರಸಗಿ ಗ್ರಾಮದ ನಿವಾಸಿ ನಂದಮ್ಮ ಅವರನ್ನು ಎರಡು ದಿನಗಳ ಹಿಂದೆ ಹೆರಿಗೆಗೆಂದು ಕುಟುಂಬಸ್ಥರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಗುರುವಾರ ರಾತ್ರಿ ನಂದಮ್ಮಗೆ ಹೆರಿಗೆಯಾಗಿದೆ. ಇದೇ ಸಂದರ್ಭದಲ್ಲಿ ಬೇರೊಬ್ಬ ಗರ್ಭಿಣಿಗೂ ಮಗು ಹುಟ್ಟಿದೆ. ವೈದ್ಯರು ಎರಡು ಮಗುವನ್ನು ಐಸಿಯುನಲ್ಲಿ ಇಟ್ಟಿದ್ದಾರೆ.

    ಹೆರಿಗೆಯಾದ ಬಳಿಕ ನಂದಮ್ಮ ಕುಟುಂಬಸ್ಥರು ಮಗು ತೋರಿಸುವಂತೆ ಕೇಳಿದ್ದಾರೆ. ಆದರೆ ಆಸ್ಪತ್ರೆ ಸಿಬ್ಬಂದಿ ಗಂಡು ಮಗು ತಂದು ಕೊಟ್ಟಿದ್ದಾರೆ. ನಂತರ 15 ನಿಮಿಷ ಬಿಟ್ಟು ಬಂದು ಮಗು ನಿಮ್ಮದಲ್ಲ ಟೋಕನ್ ನಂಬರ್ ಬದಲಾಗಿದೆ ಎಂದು ತಿಳಿಸಿದ್ದಾರೆ. ಕುಟುಂಬಸ್ಥರು ತಕ್ಷಣ ನೀವು ಸುಳ್ಳು ಹೇಳುತ್ತಿದ್ದೀರಿ ನಮಗೆ ಗಂಡು ಮಗು ಜನಿಸಿರುವುದು ಎಂದು ಆಕ್ರೋಶಗೊಂಡು ಆಸ್ಪತ್ರೆಯ ಸಿಬ್ಬಂದಿ ಜೊತೆ ಜಗಳವಾಡಿದ್ದಾರೆ. ಇಬ್ಬರ ನಡುವೆ ಕೆಲ ಸಮಯ ವಾಗ್ವಾದ ನಡೆದಿದೆ.

    ವೈದ್ಯರು ಬಂದು ಒಂದೇ ಸಮಯಕ್ಕೆ ಎರಡು ಹೆರಿಗೆಯಾಗಿದ್ದರಿಂದ ಗೊಂದಲವಾಗಿದೆ. ಈಗ ವೈದ್ಯಕೀಯ ಪರೀಕ್ಷೆ ನಡೆಸುತ್ತೇವೆ. ಜೊತೆಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಗೊಂದಲ ಬಗೆಹರಿಸುವುದಾಗಿ ಹೇಳಿದ್ದಾರೆ. ಇದಕ್ಕೆ ಕುಟುಂಬಸ್ಥರು ಕೂಡ ಸಮ್ಮತಿಸಿದ್ದರು. ವೈದ್ಯರು ಪರೀಕ್ಷೆ ಮಾಡಿ ನಿಮಗೆ ಹೆಣ್ಣು ಮಗು ಜನಿಸಿರುವುದು ಎಂದು ಪೋಷಕರಿಗೆ ತಂದು ಕೊಟ್ಟಿದ್ದಾರೆ. ಆದರೆ ಪೋಷಕರು ನಮಗೆ ಹೆಣ್ಣು-ಗಂಡು ಎಂದು ಭೇದವಿಲ್ಲ ನಮ್ಮ ಮಗು ಯಾವುದು ಎಂದು ನಿರೂಪಿಸಿ ಎಂದು ಕೇಳಿಕೊಂಡಿದ್ದಾರೆ. ಸದ್ಯಕ್ಕೆ ಎರಡು ಮಕ್ಕಳನ್ನು ಚಿಕಿತ್ಸೆಗಾಗಿ ಐಸಿಯುನಲ್ಲಿ ಇಟ್ಟಿದ್ದಾರೆ.

  • ಬಿಎಸ್‍ವೈ ತೇರದಾಳದಿಂದ ನಿಲ್ತಾರಾ? ಅಲ್ಲೇ ಸ್ಪರ್ಧಿಸಲು ಕಾರಣ ಏನು? ಲಿಂಗಾಯತರು ಎಷ್ಟಿದ್ದಾರೆ?

    ಬಿಎಸ್‍ವೈ ತೇರದಾಳದಿಂದ ನಿಲ್ತಾರಾ? ಅಲ್ಲೇ ಸ್ಪರ್ಧಿಸಲು ಕಾರಣ ಏನು? ಲಿಂಗಾಯತರು ಎಷ್ಟಿದ್ದಾರೆ?

    ಕಲಬುರಗಿ: ಬಿಜೆಪಿ ಅಧ್ಯಕ್ಷ ಬಿಎಸ್ ಯಡಿಯೂರಪ್ಪಗೆ ಹೆದರಿ ಕ್ಷೇತ್ರ ಬದಲಾವಣೆ ಮಾಡೋ ಪ್ರಶ್ನೆಯೇ ಇಲ್ಲ. ತೇರದಾಳ ಕ್ಷೇತ್ರದಿಂದ ಬಿಎಸ್‍ವೈ ಸ್ಪರ್ಧಿಸಿದರೆ ನಾನು ಎದುರಿಸಲು ಸಿದ್ಧನಿದ್ದೇನೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಉಮಾಶ್ರೀ ತಿಳಿಸಿದ್ದಾರೆ.

    ತೇರದಾಳ ಕ್ಷೇತ್ರಕ್ಕೆ ಯಾರೇ ಬಂದು ಸ್ಪರ್ಧಿಸಿದರೂ, ನಾನು ಮಾತ್ರ ಈ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ. ಜೀವನದಲ್ಲಿ ಸೋಲು ಗೆಲುವು ಇದ್ದಾಗೆ ರಾಜಕೀಯದಲ್ಲೂ ಸೋಲು ಗೆಲುವು ಸಹಜ, ಸೋಲಲಿ ಗೆಲ್ಲಲಿ ಈ ಕ್ಷೇತ್ರದಲ್ಲೇ ಇರುತ್ತೇನೆ. ಈ ಉಮಾಶ್ರೀ ಯಾರಿಗೂ ಹೆದರೋ ಪ್ರಶ್ನೆಯೇ ಇಲ್ಲ ಎಂದು ಹೇಳುವ ಮೂಲಕ ಬಿಎಸ್‍ವೈ ಗೆ ಉಮಾಶ್ರೀ ಟಾಂಗ್ ಕೊಟ್ಟರು.

    ತೇರದಾಳವೇ ಯಾಕೆ?
    ತೇರದಾಳ ಕ್ಷೇತ್ರವನ್ನು ಯಡಿಯೂರಪ್ಪ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ. ಲಿಂಗಾಯತರ ಪ್ರಾಬಲ್ಯ ಇಲ್ಲದಿದ್ದರೂ, ನೇಕಾರ ಮತದಾರರೇ ಹೆಚ್ಚಾಗಿರುವ ಈ ಕ್ಷೇತ್ರದಿಂದ ಸ್ಪರ್ಧಿಸಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗುತ್ತಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಲ್ಪ ಮತದಿಂದ ಸೋತಿದ್ದಕ್ಕೆ ಕಾರಣ ಕೆಜೆಪಿ ಸ್ಪರ್ಧೆ ಅನ್ನೋದು ಬಿಜೆಪಿಯ ಲೆಕ್ಕಾಚಾರವಾಗಿದೆ.

    ವಿಧಾನಸಭಾ ಚುನಾವಣೆ ಮತಗಳಿಕೆಯಲ್ಲಿ ಕಾಂಗ್ರೆಸ್ 70,189 ಮತಗಳನ್ನು ಪಡೆದರೆ, ಬಿಜೆಪಿ 67,590 ಮತಗಳನ್ನ, ಕೆಜೆಪಿ 5,558 ಮತಗಳನ್ನ ಪಡೆದುಕೊಂಡಿದ್ದವು. ಈ ಚುನಾವಣೆಯಲ್ಲಿ ಕಾಂಗ್ರೆಸ್ 2,599 ಮತಗಳ ಅಂತರದಿಂದ ಗೆಲವು ಸಾದಿಸಿತ್ತು.

    ಲೋಕಸಭಾ ಚುನಾವಣೆ ಮತಗಳಿಕೆಯಲ್ಲಿ ಬಿಜೆಪಿ 90,154 ಮತಗಳನ್ನು ಪಡೆದಿದ್ದರೆ ಕಾಂಗ್ರೆಸ್ 55,295, ಪಕ್ಷೇತರ 2,189 ಮತಗಳನ್ನು ಪಡೆದುಕೊಂಡಿದ್ದವು. ಈ ಚುನಾವಣೆಯಲ್ಲಿ ಬಿಜೆಪಿ 34, 859 ಮತಗಳ ಅಂತರದಿಂದ ಭಾರಿ ಗೆಲವು ಸಾಧಿಸಿತ್ತು.

    ಯಾರು ಎಷ್ಟಿದ್ದಾರೆ?
    ಈ ಕ್ಷೇತ್ರವು ಸುಮಾರು ಒಟ್ಟು 3 ಲಕ್ಷ ಜನಸಂಖ್ಯೆಯನ್ನು ಹೊಂದಿದ್ದು, ಅದರಲ್ಲಿ ಸುಮಾರು 2 ಲಕ್ಷದ 20 ಸಾವಿರ ಮತದಾರರನ್ನು ಹೊಂದಿದೆ. ಇವರಲ್ಲಿ ನೇಕಾರರು 84 ರಿಂದ 90 ಸಾವಿರ, ಪಂಚಮಸಾಲಿ 35 ಸಾವಿರ, ಪರಿಶಿಷ್ಟರು 30 ಸಾವಿರ, ಕುರುಬರು 18 ಸಾವಿರ, ಮುಸ್ಲಿಮರು 10 ರಿಂದ 15 ಸಾವಿರ, ಬಣಜಿಗರು 10 ರಿಂದ 12 ಸಾವಿರ, ಜೈನರು 12 ಸಾವಿರ, ಗಾಣಿಗರು 8 ರಿಂದ 10 ಸಾವಿರ, ಮಾಳಿ ಸೇರಿದಂತೆ ಇತರೆ ಸಮುದಾಯದವರು 20 ರಿಂದ 25 ಸಾವಿರ ಇದ್ದಾರೆ.

    2013ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ತೊರೆದು ಬಿಎಸ್ ಯಡಿಯೂರಪ್ಪ ಕೆಜೆಪಿ ಕಟ್ಟಿದ್ದರು. ಹೀಗಾಗಿ ಉತ್ತರ ಕರ್ನಾಟಕದಲ್ಲಿ ಲಿಂಗಾಯತರೇ ಹೆಚ್ಚಾಗಿರುವ ಕ್ಷೇತ್ರಗಳಲ್ಲಿ ಬಿಜೆಪಿ ಕಡಿಮೆ ಅಂತರದಲ್ಲಿ ಸೋತಿತ್ತು. ಈ ಕಾರಣಕ್ಕೆ ಉತ್ತರ ಕರ್ನಾಟಕದಲ್ಲಿ ಪಕ್ಷ ಸಂಘಟನೆ ಮತ್ತು ಲಿಂಗಾಯತ ಮತಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಹೈಕಮಾಂಡ್ ಬಿಎಸ್‍ವೈ ಅವರನ್ನು ಈ ಭಾಗದಲ್ಲಿ ನಿಲ್ಲಿಸಲು ಮುಂದಾಗುತ್ತಿದೆ ಎಂದು ಹೇಳಲಾಗುತ್ತಿದೆ.

  • ಒಂದೇ ವಾರದಲ್ಲಿ 3 ನಿಗೂಢ ಸಾವು – ಅನಾರೋಗ್ಯಕ್ಕೊಳಗಾದವ್ರಿಗೆ ಬರೆ ಎಳೆಯುತ್ತಿರೋ ಗ್ರಾಮಸ್ಥರು

    ಒಂದೇ ವಾರದಲ್ಲಿ 3 ನಿಗೂಢ ಸಾವು – ಅನಾರೋಗ್ಯಕ್ಕೊಳಗಾದವ್ರಿಗೆ ಬರೆ ಎಳೆಯುತ್ತಿರೋ ಗ್ರಾಮಸ್ಥರು

    ಕಲಬುರಗಿ: ಜಿಲ್ಲೆಯ ಚಿಂಚೋಳಿ ತಾಲೂಕಿನ ಪಸ್ತಾಪುರ ಗ್ರಾಮದ ಜನ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದು, ಒಂದೇ ವಾರದಲ್ಲಿ ಮೂವರು ನಿಗೂಢವಾಗಿ ಸಾವನ್ನಪಿರುವ ಘಟನೆ ನಡೆದಿದೆ.

    ಅಲ್ಲದೇ ಗ್ರಾಮದ ಇತರೆ 8 ಜನರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಗ್ರಾಮದಲ್ಲಿ ಅತಂಕದ ವಾತಾವರಣ ನಿರ್ಮಾಣವಾಗಿದೆ. ಈ ಎಲ್ಲಾ ಸಾವುಗಳಿಗೂ ಗ್ರಾಮದ ಜನರ ಮೇಲೆ ಭಾನಾಮತಿಯ ಪ್ರಯೋಗವಾಗಿರುವುದೇ ಕಾರಣ ಎಂದು ನಂಬಿರುವ ಗ್ರಾಮಸ್ಥರು ಅನಾರೋಗ್ಯಕ್ಕೆ ಒಳಗಾದವರ ದೇಹದ ಮೇಲೆ `ಕುರುಪಿ’ ಮತ್ತು `ಬೀಡಿ’ಯಿಂದ ಬರೆ ಎಳೆಯುತ್ತಿದ್ದಾರೆ.

    ಈ ವಿಷಯ ತಿಳಿದ ಚಿಂಚೋಳಿ ಶಾಸಕ ಡಾ.ಉಮೇಶ ಜಾಧವ ಗ್ರಾಮಕ್ಕೆ ಭೇಟಿ ನೀಡಿದ್ದು, ಅವರೇ ಖುದ್ದು ಆರೋಗ್ಯ ತಪಾಸಣೆ ನಡೆಸಿದ್ದಾರೆ. ಅಲ್ಲದೇ ಗ್ರಾಮದಲ್ಲಿ ಆರೋಗ್ಯ ತಪಾಸಣೆ ನಡೆಸುವಂತೆ ವೈದ್ಯಧಿಕಾರಿಗಳಿಗೆ ಸೂಚಿಸಿದ್ದಾರೆ.

  • ಹಂತಕರ ಮುಂದಿನ ಟಾರ್ಗೆಟ್ ನಾನು, ನಂತ್ರ ಭಗವಾನ್: ನಿಡುಮಾಮಿಡಿ ಶ್ರೀ

    ಹಂತಕರ ಮುಂದಿನ ಟಾರ್ಗೆಟ್ ನಾನು, ನಂತ್ರ ಭಗವಾನ್: ನಿಡುಮಾಮಿಡಿ ಶ್ರೀ

    ಬೆಂಗಳೂರು: ಹಂತಕರು ಒಟ್ಟು ಐವರು ವಿಚಾರವಂತರ ಹತ್ಯೆಯ ಗುರಿ ಇಟ್ಟುಕೊಂಡಿದ್ದು, ಅದರಲ್ಲಿ ಕಲ್ಬುರ್ಗಿ ಹಾಗೂ ಗೌರಿ ಹತ್ಯೆ ಆಗಿದೆ. ಈಗ ಅವರ ಮುಂದಿನ ಹಿಟ್ ಲಿಸ್ಟ್‍ನಲ್ಲಿ ನಾನು ಇರಬಹುದು ಮುಂದೆ ಭಗವಾನ್ ಇರಬಹುದು ಎಂದು ನಿಡುಮಾಮಿಡಿ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ ಹೇಳಿದ್ದಾರೆ.

    ಖಾಸಗಿ ಹೋಟೆಲ್ ನಲ್ಲಿ ಗೌರಿ ಲಂಕೇಶ್ ಅವರಿಗೆ ಪರಿಯಾರ್ ಪ್ರಶಸ್ತಿ ಸಮಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗೌರಿ ಹತ್ಯೆಯನ್ನು ಸಂಭ್ರಮಿಸುವವರನ್ನು ನೋಡಿದಾಗಲೇ ಹಂತಕರು ಯಾರು ಅನ್ನೋದು ತಿಳಿಯುತ್ತದೆ. ಕಲ್ಬುರ್ಗಿ ಅವರದ್ದು ಧಾರ್ಮಿಕ ಹತ್ಯೆ ಹಾಗೂ ಗೌರಿ ಅವರದ್ದು ರಾಜಕೀಯ ಹತ್ಯೆ. ಮುಂದೆ ನನ್ನನ್ನೇ ಟಾರ್ಗೆಟ್ ಮಾಡಲಾಗಿದೆ ಅನ್ನೋದು ನನಗೆ ಗೊತ್ತಿದೆ. ನನಗೆ ಸಾಕಷ್ಟು ಜನ ಹೇಳಿದ್ದಾರೆ ಎಂದು ಸ್ವಾಮೀಜಿ ತಿಳಿಸಿದರು.

    ಅನಂತಮೂರ್ತಿಯವರ ಪುಸ್ತಕದ ಒಂದು ಮಾತನ್ನು ಕಲ್ಬುರ್ಗಿ ಅವರು ಸಭೆಯಲ್ಲಿ ಉಲ್ಲೇಖ ಮಾಡಿದ್ದರು. ಅದೇ ಅವರ ಹತ್ಯೆಗೆ ಕಾರಣವಾಯಿತು. ಕಲ್ಬುರ್ಗಿ ಮತ್ತು ಗೌರಿಯ ಹಂತಕರು ಹಿಂದು ಭಯೋತ್ಪಾದಕರಾಗಿದ್ದಾರೆ. ರಾಘವೇಶ್ವರ ಶ್ರೀ ವಿರುದ್ಧ ತನಿಖೆ ನಡೆಯುತ್ತಿದೆ ಹಾಗೂ ಎಲ್ಲಾ ಆಯಾಮದಿಂದಲೂ ತನಿಖೆ ನಡೆಯುತ್ತಿದೆ. ಅಷ್ಟಕ್ಕೆ ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸೋದು ಸರಿಯಿಲ್ಲ ಎಂದು ನಿಡುಮಾಮಿಡಿ ಸ್ವಾಮೀಜಿ ಹೇಳಿದರು.

    ವಿಚಾರವಾದಿಗಳ ವೇದಿಕೆಯಲ್ಲಿ ಗೌರಿ ಹಂತಕರನ್ನು ಹಿಡಿಯಲು ರಾಜ್ಯ ಸರ್ಕಾರಕ್ಕೆ ಡೆಡ್‍ಲೈನ್ ಕೊಟ್ಟು ಮುಂದಿನ ವಿಜಯದಶಮಿಯೊಳಗೆ ಹಂತಕರನ್ನು ಹಿಡಿಯಬೇಕೆಂದು ಆಗ್ರಹಿಸಿದೆ. ಹಂತಕರನ್ನು ಹಿಡಿಯದೆ ಇದ್ದರೆ ರಾಜ್ಯ ಸರ್ಕಾರ ತನ್ನ ವೈಫಲ್ಯವನ್ನು ಒಪ್ಪಿಕೊಂಡು ರಾಜ್ಯ ಜನರ ಮುಂದೆ ಕ್ಷಮೆ ಯಾಚಿಸಬೇಕು ಎಂದು ಸ್ವಾಮೀಜಿ ತಿಳಿಸಿದರು.

    ಗೌರಿ ಮತ್ತು ಕಲ್ಬುರ್ಗಿ ಹಂತಕರು ಯಾರು ಎನ್ನುವುದಕ್ಕೆ ನಿಡುಮಾಮಿಡಿ ಶ್ರೀ ಪ್ರಣವಾನಂದ ಸ್ವಾಮೀಜಿ ಕಡೆ ಬೊಟ್ಟು ಮಾಡಿದ್ದಾರೆ. ಕಲ್ಬುರ್ಗಿ ಹತ್ಯೆಗೆ ಹದಿನೈದು ದಿನದ ಮುಂಚೆ ಪ್ರಣವಾನಂದ ಸ್ವಾಮೀಜಿ ಸುದ್ದಿಗೋಷ್ಟಿ ಕರೆದು ಐದು ಜನರ ಪ್ರಾಣ ತೆಗೆಯುತ್ತೇನೆ ಎಂದಿದ್ದರು. ಈಗ ಇಬ್ಬರ ಕೊಲೆಯಾಗಿದೆ. ಮುಂದೆ ನಾನು ಮತ್ತು ಭಗವಾನ್ ಲಿಸ್ಟ್ ನಲ್ಲಿದ್ದೇವೆ ಎಂದು ಸ್ವಾಮಿಜಿ ಹೇಳಿದರು.

    ಪ್ರಣವಾನಂದ ಕೊಲೆಯ ಪ್ರಾಯೋಜಕರು ಅವರನ್ನು ವಿಚಾರಣೆ ಮಾಡಿದರೆ ಹಂತಕರು ಗೊತ್ತಾಗಲಿದ್ದಾರೆ. ಐವರು ವಿಚಾರವಾದಿಗಳನ್ನು ಹತ್ಯೆ ಮಾಡೋದಾಗಿ ಹೇಳಿದರೂ ಯಾಕೆ ಸರ್ಕಾರ ಕ್ರಮ ಕೈಗೊಂಡಿಲ್ಲ ಆಗಲೇ ಎಲ್ಲರ ಲಿಸ್ಟ್ ರೆಡಿಯಾಗಿದೆ ಹಂತಕರು ಕರ್ನಾಟಕದವರು. ಆದರೆ ಬಾಡಿಗೆ ಕೊಲೆಗಾರರನ್ನು ತಂದಿರಬಹುದು. ಗೌರಿ ಹತ್ಯೆಗೆ ನ್ಯಾಯ ಸಿಗಲಿದೆ ಅನ್ನೋ ನಂಬಿಕೆ ನನಗಿಲ್ಲ ಎಂದರು.

    ವರ್ಷಕ್ಕೊಂದು ವಿಚಾರವಾದಿಗಳು ಸಾಯುತ್ತಾರೆ. ಇಂದು ಗೌರಿ ನಾಳೆ ನಾನು ನಾಡಿದ್ದು ಭಗವಾನ್ ಅದರಾಚೆ ಅಗ್ನಿ ಶ್ರೀಧರ್. ಬಿಜೆಪಿಗೆ ಮೋದಿ ಸರ್ಕಾರಕ್ಕೆ ಹಿಂಸೆ ಅನಿವಾರ್ಯ. ಹಿಂಸೆಯ ಮೂಲಕವೇ ರಾಜಕೀಯ ಪ್ರಾಬಲ್ಯ ಸ್ಥಾಪಿಸಲು ಹೊರಟಿದ್ದಾರೆ. ಹಿಂದುತ್ವದ ಬಗ್ಗೆ ಮಾತಾನಾಡಿದವರನ್ನು ಬಿಡಲ್ಲ ಅವರನ್ನು ಕೊಲ್ಲುತ್ತೇವೆ ಅನ್ನೋ ಸಂದೇಶವನ್ನು ಇವರಿಬ್ಬರನ್ನು ಹತ್ಯೆ ಮಾಡುವುದರ ಮೂಲಕ ನೀಡಿದ್ದಾರೆ ಎಂದು ಆರೋಪಿಸಿದರು.

    ಭಾರತದಲ್ಲಿ ವಧಾ ಸಂಸ್ಕೃತಿ ವಿಜೃಂಭಿಸುತ್ತಿದೆ. ಸನಾತನ ಧರ್ಮ ಪುನಶ್ಚೇತನಗೊಂಡಾಗೆಲ್ಲ ವಧಾ ಸಂಸ್ಕೃತಿ ಹತ್ಯೆ ಮಾಡುವ ಸಂಸ್ಕೃತಿ ಬರುತ್ತದೆ. ಹಿಂದೆ “ಭಟ್ಟ” ಅನ್ನೋ ಹೆಸರಿನ ವ್ಯಕ್ತಿಯಿಂದ ಬೆದರಿಕೆ ಬಂದಿತ್ತು. ಈ ಬಗ್ಗೆ ಮಠದಿಂದ ಠಾಣೆಗೂ ದೂರು ಕೊಡಲಾಗಿದೆ ಹಾಗೂ ಹಿಂದುತ್ವದ ಬಗ್ಗೆ ಮಾತಾನಾಡೋ ನಿನ್ನನ್ನು ಉಳಿಸಲ್ಲ, ಖಾವಿ ಕಳಚಿ ಓಡಿಸುತ್ತೇವೆ ಅಂತಾ ಬೆದರಿಕೆ ಹಾಕಿದ್ದಾರೆ. ಮಠಕ್ಕೆ ಬನ್ನಿ ಮಾತಾನಾಡೋಣ ಅಂತಾ ಹೇಳಿದೆ ಆದರೆ ಯಾರು ಬಂದಿಲ್ಲ. ಕೆಲದಿನದ ಹಿಂದೆ ನಡೆದ ಘಟನೆ ಇದು ಈ ಬಗ್ಗೆ ದೂರು ನೀಡಲಾಗಿದೆ ತನಿಖೆ ಪ್ರಗತಿಯಲ್ಲಿದೆ ಎಂದು ಹೇಳಿದರು.

    ಸರ್ಕಾರಿ ಕಚೇರಿ, ಶಿಕ್ಷಣ ಸಂಸ್ಥೆ, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಎಲ್ಲಾ ಧರ್ಮದ ದೇವರ ಭಾವಚಿತ್ರ ತೆಗೆಯಬೇಕು. ಕಚೇರಿಗಳಲ್ಲಿ ಧಾರ್ಮಿಕ ಆಚರಣೆ ಸಂಪ್ರದಾಯಗಳನ್ನು ಅನುಸರಿಸೋದನ್ನು ನಿಷೇಧಿಸಬೇಕೆಂದು ಸರ್ಕಾರಕ್ಕೆ ವಿಚಾರವಾದಿಗಳ ವೇದಿಕೆ ಒತ್ತಾಯ ಮಾಡಿದೆ.

  • ಸೊನ್ನ ಬ್ಯಾರೇಜ್ ನಿಂದ 1.43 ಸಾವಿರ ಕ್ಯೂಸೆಕ್ ನೀರು ಭೀಮಾ ನದಿಗೆ ಬಿಡುಗಡೆ

    ಸೊನ್ನ ಬ್ಯಾರೇಜ್ ನಿಂದ 1.43 ಸಾವಿರ ಕ್ಯೂಸೆಕ್ ನೀರು ಭೀಮಾ ನದಿಗೆ ಬಿಡುಗಡೆ

    ಕಲಬುರಗಿ: ಜಿಲ್ಲೆಯ ಜೇವರ್ಗಿ ತಾಲೂಕಿನ ಸೊನ್ನ ಬ್ಯಾರೇಜ್ ನಿಂದ ಭೀಮಾ ನದಿಗೆ 1 ಲಕ್ಷದ 43 ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ. ಪರಿಣಾಮ ಜೇವರ್ಗಿಯ ಮಂದೇವಾಲ ಮತ್ತು ಅಫಜಲಪುರದ ಚೌಡಾಪುರ ರಸ್ತೆ ಸಂಚಾರ ಸಂಪೂರ್ಣ ಕಡಿತವಾಗಿದೆ.

    ಜಲಾಶಯದ ಒಳಹರಿವು 1,43,700 ಕ್ಯೂಸೆಕ್ ಇದ್ದರೆ ಹೊರಹರಿವು 1,43,700 ಕ್ಯೂಸೆಕ್ ಇದೆ. ಜಲಾಶಯದ ನೀರಿನ ಮಟ್ಟ 406 ಮೀ. ಇದೆ. ನದಿಯ ಅಕ್ಕ-ಪಕ್ಕದ ಜಮೀನುಗಳಿಗೆ ಅಪಾರ ಪ್ರಮಾಣದ ನೀರು ಹೋಗಿ ಕಬ್ಬು ಸೇರಿದಂತೆ ಇತರೆ ಬೆಳೆಗಳು ನದಿಯಲ್ಲಿ ಕೊಚ್ಚಿ ಹೋಗಿವೆ. ಜಮೀನುಗಳಿಗೆ ನುಗ್ಗುತ್ತಿರುವ ಭೀಮಾನದಿ ಪ್ರವಾಹದ ನೀರು ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಹಾಗಾಗಿ ರೈತರಲ್ಲಿ ಆತಂಕ ಮೂಡಿಸಿದೆ.

    ಕ್ಯೂಸೆಕ್ ಟಿಎಂಸಿ ಎಂದರೆ ಎಷ್ಟು?
    ಕ್ಯೂಸೆಕ್ ಎಂಬುದು cubic foot per second ಹೃಸ್ವರೂಪ. ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯೂಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.