Tag: kalburgi

  • ರಾತ್ರಿ ಮನೆಗೆ ನುಗ್ಗಿ ಯುವತಿಯ ಕೈಕಾಲು ಕಟ್ಟಿ ಪಕ್ಕದ್ಮನೆಯಾತನಿಂದ ಪೈಶಾಚಿಕ ಕೃತ್ಯ

    ರಾತ್ರಿ ಮನೆಗೆ ನುಗ್ಗಿ ಯುವತಿಯ ಕೈಕಾಲು ಕಟ್ಟಿ ಪಕ್ಕದ್ಮನೆಯಾತನಿಂದ ಪೈಶಾಚಿಕ ಕೃತ್ಯ

    ಕಲಬುರಗಿ: ಮನೆಗೆ ನುಗ್ಗಿ ಯುವತಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ದೇವಾಪುರ ತಾಂಡದಲ್ಲಿ ನಡೆದಿದೆ.

    19 ವರ್ಷದ ಯುವತಿ ಮೇಲೆ ನೆರೆಮನೆಯ ಆರೋಪಿ ಸುನೀಲ್ ಜಾಧವ್ ಈ ಪೈಶಾಚಿಕ ಕೃತ್ಯ ಎಸಗಿದ್ದಾನೆ. ಸದ್ಯಕ್ಕೆ ಆರೋಪಿ ಸುನೀಲ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ.

    ಸಂತ್ರಸ್ತೆ ಅನಾರೋಗ್ಯ ಪೀಡಿತ ಅಜ್ಜಿಯೊಂದಿಗೆ ವಾಸವಾಗಿದ್ದಳು. ರಾತ್ರಿ ಯುವತಿ ಅಜ್ಜಿಯ ಸೇವೆ ಮಾಡುತ್ತಿದ್ದಾಗ ಆರೋಪಿ ಸುನೀಲ್ ಏಕಾಏಕಿ ಮನೆಗೆ ನುಗ್ಗಿ ಸಂತ್ರಸ್ತೆಯ ಕೈಕಾಲು ಕಟ್ಟಿ ಹಾಕಿದ್ದಾನೆ. ಬಳಿಕ ಯುವತಿಯ ಮೇಲೆ ಆರೋಪಿ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾನೆ.

    ಈ ಘಟನೆಯ ನಂತರ ಯುವತಿಯನ್ನು ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಈ ಕುರಿತು ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪತಿಗೆ Good Night ಮೆಸೇಜ್ ಮಾಡಿ ನೇಣಿಗೆ ಶರಣಾದ ಗೃಹಿಣಿ

    ಪತಿಗೆ Good Night ಮೆಸೇಜ್ ಮಾಡಿ ನೇಣಿಗೆ ಶರಣಾದ ಗೃಹಿಣಿ

    ಕಲಬುರಗಿ: ನೇಣು ಬಿಗಿದುಕೊಂಡು ಅನುಮಾನಸ್ಪದವಾಗಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಸಂಧ್ಯಾರಾಣಿ ಮೃತ ಗೃಹಿಣಿ. ಈಕೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಡೊಣಗಾಂವ್ ಗ್ರಾಮದವರಾಗಿದ್ದು, 2017 ರಲ್ಲಿ ಕಲಬುರಗಿ ಜಿಲ್ಲೆಯ ಕಮಲಾಪುರ ಪಟ್ಟಣದ ವಿನಯ್ ಜೊತೆ ಮದುವೆಯಾಗಿತ್ತು. ಮದುವೆ ಸಂದರ್ಭದಲ್ಲಿ ವರದಕ್ಷಿಣೆಯಾಗಿ ಇಪ್ಪತ್ತು ತೊಲ ಚಿನ್ನ, ಲಕ್ಷಾಂತರ ರೂಪಾಯಿ ಹಣ ನೀಡಿ ಅದ್ಧೂರಿಯಾಗಿ ವಿವಾಹವನ್ನ ಮಾಡಿಕೊಡಲಾಗಿತ್ತು.

    ಬೆಂಗಳೂರಿನ ಕಂಪನಿಯೊಂದರಲ್ಲಿ ಒಳ್ಳೆಯ ಕೆಲಸವಿದೆ ಅಂತ ನಂಬಿಸಿ ಸಂಧ್ಯಾರಾಣಿಯನ್ನ ವರಿಸಿದ್ದನು. ಆದರೆ ಮದುವೆಯ ನಂತರ ಕೆಲವು ದಿನಗಳ ಪತ್ನಿಯೊಂದಿಗೆ ಅನ್ಯೋನ್ಯವಾಗಿದ್ದ ಪತಿ ವಿನಯ್, ಕೆಲವು ದಿನಗಳ ನಂತರ ಬೆಂಗಳೂರಿನಲ್ಲಿನ ಕೆಲಸವನ್ನ ಬಿಟ್ಟು ಕಲಬುರಗಿ ನಗರದ ಜಾಗೃತಿ ಕಾಲೋನಿಯಲ್ಲಿ ಪತ್ನಿ ಮತ್ತು ಕುಟುಂಬಸ್ಥರ ಜೊತೆಗೆ ವಾಸ ಮಾಡುತ್ತಾ ಫೋಟೋ ಡಿಸೈನಿಂಗ್ ಕೆಲಸ ಆರಂಭಿಸಿದ್ದನು.

    ದಿನ ಕಳೆದಂತೆ ವಿನಯ್ ಕುಡಿತದ ಚಟಕ್ಕೆ ಬಿದ್ದು, ಕಂಠಪೂರ್ತಿ ಕುಡಿದು ಬಂದು ಪತ್ನಿ ಸಂಧ್ಯಾಳಿಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಡಲಾರಂಭಿಸಿದ್ದ. ಅಲ್ಲದೇ ಲಕ್ಷಾಂತರ ರೂಪಾಯಿ ಹಣ ಮತ್ತು ಚಿನ್ನ ಕೊಟ್ಟು ಮದುವೆ ಮಾಡಿಕೊಟ್ಟರೂ ಸಹ ಪೋಷಕರ ಜೊತೆಗೂಡಿ ತವರು ಮನೆಯಿಂದ ಮತ್ತಷ್ಟು ವರದಕ್ಷಿಣೆ ತೆಗೆದುಕೊಂಡು ಬಾ ಅಂತ ಹೊಡೆಯುತ್ತಿದ್ದನು. ಆದರೆ ನನ್ನ ಮಗಳು ಇವೆಲ್ಲ ಕಿರುಕುಳ ಸಹಿಸಿಕೊಂಡು ಪತಿಯೇ ಪರದೈವ ಅಂತ ಇದ್ಧಳು. ಆದರೆ ಶನಿವಾರ ರಾತ್ರಿ ನನ್ನ ಮಗಳು ರೂಮಿನಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ತಮ್ಮ ಮಗಳ ಸಾವಿಗೆ ಪತಿಯ ಮನೆಯವರೇ ಕಾರಣ ಅಂತ ಆಕ್ರೋಶ ವ್ಯಕ್ತಪಡಿಸಿದ್ದು, ಅವರೇ ಕೊಲೆ ಮಾಡಿದ್ದಾರೆ ಅಂತ ಆರೋಪಿಸಿದ್ದಾರೆ.

    ಪತಿ ವಿನಯ್ ಎಂಬಿಎ ಪದವೀಧರನಾಗಿದ್ದು, ಪತ್ನಿ ಸಂಧ್ಯಾ ಕೂಡ ಬಿಸಿಎ ಕಂಪ್ಯೂಟರ್ ಸೈನ್ಸ್ ಮಾಡಿದ್ದಳು. ಪತಿಯ ಮನೆಯವರು ಇಷ್ಟೆಲ್ಲ ಕಿರುಕುಳ ಕೊಡುತ್ತಿದ್ದರು ಸಹ ಸಂಧ್ಯಾರಾಣಿ ತನ್ನ ಪೋಷಕರ ಮುಂದೆ ಬಾಯ್ಬಿಟ್ಟಿರಲಿಲ್ಲ. ಕೆಲವು ದಿನಗಳ ಹಿಂದೆ ನೋವು ತಾಳಲಾರದೇ ತಂದೆ ಧನರಾಜ್ ಬಳಿ ಪತಿಯ ಮನೆಯವರ ಚಿತ್ರಹಿಂಸೆಯ ಬಗ್ಗೆ ಹೇಳಿಕೊಂಡಿದ್ದಳು. ಹೀಗಾಗಿ ತಂದೆ ಶನಿವಾರ ಸಂಜೆಯಷ್ಟೆ ಮಗಳ ಮನೆಗೆ ಬಂದು ಅಳಿಯನ ಜೊತೆ ಸಂಧಾನ ಮಾತುಕತೆ ನಡೆಸಿದ್ದಾರೆ.

    ಅಷ್ಟೇ ಅಲ್ಲದೇ ನಿಮಗೆ ಏನು ಬೇಕೋ ಅದನೆಲ್ಲ ಕೊಡುತ್ತೇನೆ ಅಂತ ಹೇಳಿ ನನ್ನ ಮಗಳನ್ನ ಸುಖವಾಗಿ ನೋಡಿಕೊಳ್ಳಿ ಅಂತಾ ಅಂಗಲಾಚಿ ಹೋಗಿದ್ದಾರೆ. ದುರಂತವೆಂದರೇ ತಂದೆ ಬಂದು ಹೋದ ಮಧ್ಯರಾತ್ರಿಯೇ ಸಂಧ್ಯಾರಾಣಿ ನೇಣು ಬಿಗಿದುಕೊಂಡು ಅನುಮಾನಸ್ಪದವಾಗಿ ಮೃತಪಟ್ಟಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದ ಎಮ್ಬಿ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ಸಂಧ್ಯಾರಾಣಿಯ ಶವವನ್ನ ಮರಣೋತ್ತರ ಪರೀಕ್ಷೆಗೆಂದು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾರೆ.

    ಪತ್ನಿಯ ಮನೆಯವರ ಕೊಲೆ ಆರೋಪವನ್ನ ನಿರಾಕರಿಸಿರುವ ಪತಿ ವಿನಯ್, ನಾನಾಗಲಿ ಅಥವಾ ನಮ್ಮ ತಂದೆ ತಾಯಿಯಾಗಲಿ ನನ್ನ ಪತ್ನಿಗೆ ಯಾವುದೇ ಕಿರುಕುಳ ಕೊಡುತ್ತಿರಲಿಲ್ಲ. ಅವಳನ್ನ ಹೂವಿನ ಹಾಗೇ ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದೇವು. ಕಳೆದ ರಾತ್ರಿ ಇಬ್ಬರು ಒಟ್ಟಿಗೆ ಊಟ ಮಾಡಿ ಅವಳು ರೂಮಿಗೆ ಹೋಗಿ ಮಲಗಿಕೊಂಡಿದ್ದಳು. ನಾನು ಹಾಲ್ ನಲ್ಲಿ ಮಲಗಿಕೊಂಡಿದ್ದೆನು. ಇದೇ ವೇಳೆಯಲ್ಲಿ ಆಕೆ ನನಗೆ ವಾಟ್ಸಪ್ ಮೂಲಕ ಬಾಯ್ ಗುಡ್ ನೈಟ್ ಅಂತ ಮೆಸೇಜ್ ಸಹ ಮಾಡಿದ್ದಾಳೆ. ಆದರೆ ಬೆಳಗಾಗೋದ್ರೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದರ ಬಗ್ಗೆ ನಮಗೆ ಏನು ಗೊತ್ತಿಲ್ಲ ಅಂತ ಹೇಳಿದ್ದಾನೆ.

    ಈ ಬಗ್ಗೆ ಎಮ್ಬಿ ನಗರ ಠಾಣೆ ಪೊಲೀಸರು ಪ್ರಕರಣವನ್ನ ದಾಖಲಿಸಿಕೊಂಡಿದ್ದು, ಪತಿ ವಿನಯ್ ನನ್ನ ವಶಕ್ಕೆ ಪಡೆದು ವಿಚಾರಣೆಯನ್ನ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಯಾವ ಕಿಂಗು ಇಲ್ಲ, ಪಿನ್ ಇಲ್ಲ, ಕಿಂಗ್ ಪಿನ್‍ಗಳೇ ಬೇರೆ ಇದ್ದಾರೆ: ಡಿಕೆಶಿ

    ಯಾವ ಕಿಂಗು ಇಲ್ಲ, ಪಿನ್ ಇಲ್ಲ, ಕಿಂಗ್ ಪಿನ್‍ಗಳೇ ಬೇರೆ ಇದ್ದಾರೆ: ಡಿಕೆಶಿ

    ಕಲಬುರಗಿ: ಆಪರೇಷನ್ ಕಮಲದಲ್ಲಿ ಯಾವ ಕಿಂಗು ಇಲ್ಲ, ಪಿನ್ನು ಇಲ್ಲ, ಅವನು ಲೆಕ್ಕಾನು ಇಲ್ಲ ಎಂದು ಜಲಸಂಪನ್ಯೂಲ ಸಚಿವ ಡಿಕೆ.ಶಿವಕುಮಾರ್ ಜಿಲ್ಲೆಯ ಅಫಜಲಪುರ ತಾಲೂಕಿನ ಗಾಣಗಾಪುರದಲ್ಲಿ ಹೇಳಿದ್ದಾರೆ.

    ಶಿವಕುಮಾರ್ ಜಾಮೀನು ಸಿಕ್ಕ ಬೆನ್ನಲ್ಲೆ ಶ್ರೀ ಕ್ಷೇತ್ರ ದತ್ತಾತ್ರೇಯ ದೇವಸ್ಥಾನದ ದರ್ಶನ ಮಾಡಿ ಪಾದ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಯೋಗೀಶ್ವರ್ ಅಲ್ಲದೇ ಇದೀಗ ಹಲವು ಜನ ಮುಂದಾಗಿದ್ದಾರೆ. 20 – 21 ಶಾಸಕರ ಜೊತೆ ಮಾತನಾಡಿ ಆಫರ್ ಕೊಟ್ಟಿದ್ದಾರೆ. ಈ ಬಗ್ಗೆ ಸಿಎಂ ಮತ್ತು ನಮ್ಮ ಪಕ್ಷದ ನಾಯಕರು ಮಾತನಾಡುತ್ತಾರೆ ಎಂದು ಹೇಳಿದ್ದಾರೆ.

    ಆಪರೇಷನ್ ಕಮಲದಲ್ಲಿ ಬಿಜೆಪಿ ಮುಖಂಡ ಯೋಗೀಶ್ವರ್ ಕಿಂಗ್ ಪಿನ್ ಆಗಿದ್ದಾರಾ ಎನ್ನುವ ಪ್ರಶ್ನೆಗೆ ಯಾವ ಕಿಂಗು ಇಲ್ಲ, ಪಿನ್ನು ಇಲ್ಲ, ಅವನು ಲೆಕ್ಕಾನು ಇಲ್ಲ, ಕಿಂಗ್ ಪಿನ್ ಗಳೇ ಬೇರೆ ಇದ್ದಾರೆ. ಶಾಸಕರಿಗೆ ಎಷ್ಟು ಆಮಿಷ ನೀಡಿದ್ದಾರೆ ಎಂಬುದು ನಾನು ಮಾತನಾಡುವುದಿಲ್ಲ. ಗುಪ್ತ ಇಲಾಖೆಯನ್ನು ನೋಡಿಕೊಳ್ಳುವವರು ಮಾತನಾಡುತ್ತಾರೆ ಎಂದು ಉತ್ತರಿಸಿದರು.

    ಬಹಳ ವರ್ಷದಿಂದ ದತ್ತಾತ್ರೇಯ ಪೀಠದ ಬಗ್ಗೆ ಕೇಳಿದ್ದೆ. ಇಲ್ಲಿಗೆ ಬಂದು ದೇವರ ದರ್ಶನ ಮಾಡಬೇಕು ಎಂದು ನನ್ನ ಮನಸ್ಸು ಹೇಳುತ್ತಿತ್ತು. ಎರಡು ಮೂರು ಬಾರಿ ಬರಲು ಸಾಧ್ಯವಾಗದೇ ಮುಂದಕ್ಕೆ ಹೋಗಿತ್ತು. ಇಂದು ಎರಡು ಕಾರ್ಯಕ್ರಮಗಳಿದ್ದವು. ಆದರು ಮೊದಲು ದೇವರ ದರ್ಶನ ಮಾಡಬೇಕು ಎಂದು ಬಂದಿದ್ದೇನೆ. ಇಂದು ದರ್ಶನ ಭಾಗ್ಯ ಸಿಕ್ಕಿದ್ದು ಮನಸ್ಸಿಗೆ ಸಂತೋಷವಾಗಿದೆ ಎಂದು ಹೇಳಿದ್ದಾರೆ.

    ನಮ್ಮ ಶಾಸಕರನ್ನು ಸೆಳೆಯಲು ಬಿಜೆಪಿ ಯತ್ನ ಮಾಡುತ್ತಿದೆ. ಅನಿಲ್ ಚಿಕ್ಕಮಾದುಗೆ ಬಿಜೆಪಿ ಆಫರ್ ನೀಡಿದ್ದು ಸತ್ಯ. ಆಫರ್ ಬಂದಿರುವ ಬಗ್ಗೆ ನಮ್ಮ ಬಳಿ ಶಾಸಕರೇ ಹೇಳಿಕೊಂಡಿದ್ದಾರೆ. ಆದರೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ ಅಂತ ಡಿಕೆಶಿ ಸ್ಪಷ್ಟಪಡಿಸಿದ್ದಾರೆ.

    ನಾನು ಏನೂ ತಪ್ಪು ಮಾಡಿಲ್ಲ. ದೇವರನ್ನ ನಂಬಿರುವ ನನಗೆ ದೇವರೇ ನ್ಯಾಯ ಕೊಡುತ್ತಾನೆ. ನನಗೆ ನೋವು, ಕಷ್ಟ ಕೊಟ್ಟ ಎಲ್ಲರ ಮೇಲೂ ದೇವರ ಅನುಗ್ರಹ ಇರಲಿ ಅಂತ ಪೂಜೆ ಬಳಿಕ ಸಚಿವ ಡಿಕೆ ಶಿವಕುಮಾರ್ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಳ್ಳತನ ನೋಡಿದ್ದಕ್ಕೆ ತಾಯಿ, 5 ತಿಂಗ್ಳ ಕಂದಮ್ಮನ ಬರ್ಬರ ಹತ್ಯೆ – ಆರೋಪಿಗಳ ಬಂಧನ

    ಕಳ್ಳತನ ನೋಡಿದ್ದಕ್ಕೆ ತಾಯಿ, 5 ತಿಂಗ್ಳ ಕಂದಮ್ಮನ ಬರ್ಬರ ಹತ್ಯೆ – ಆರೋಪಿಗಳ ಬಂಧನ

    ಕಲಬುರಗಿ: ಮಾರಕಾಸ್ತ್ರಗಳಿಂದ ತಾಯಿ ಮತ್ತು 5 ತಿಂಗಳ ಮಗುವನ್ನು ಬರ್ಬರವಾಗಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳ ಬಂಧಿಸಲಾಗಿದೆ.

    ಬಂಧಿತ ಆರೋಪಿಗಳನ್ನು ದಿನೇಶ್ ಚೌದರಿ(19) ಮತ್ತು ವಿಕ್ರಮ್ ಚೌದರಿ(20) ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳು ರಾಜಸ್ಥಾನ ಮೂಲದವರು ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಐದು ತಿಂಗ್ಳ ಮಗು, ತಾಯಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ಹತ್ಯೆ!

    ಕಳೆದ ತಿಂಗಳು 25 ರಂದು ಚಿತ್ತಾಪುರ ಪಟ್ಟಣದಲ್ಲಿ ತಾಯಿ ನಿಶಾದೇವಿ (26) ಹಾಗೂ ಐದು ತಿಂಗಳ ಮಗು ರೀಶಿ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಸಂಬಂಧ ಚಿತ್ತಾಪುರ್ ಪೊಲೀಸ್ ತನಿಖೆ ಕೈಗೊಂಡಿದ್ದು, ಇದೀಗ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಕೊಲೆ ಮಾಡಿದ್ದು ಯಾಕೆ?:
    ನಿಶಾದೇವಿ ವಾಸವಿದ್ದ ಕಟ್ಟಡದ ಅಮೃತ್ ಪಾಲ್ ಮನೆಯಲ್ಲಿ ದಿನೇಶ್ ಹಾಗೂ ವಿಕ್ರಮ್ ಕಳ್ಳತನ ಮಾಡಲು ಬಂದಿದ್ದರು. ಅವರು ಕಳ್ಳತನ ಮಾಡುವುದನ್ನ ನಿಶಾದೇವಿ ಗಮನಿಸಿದ್ದಳು. ಕೃತ್ಯ ಬಯಲಾಗುತ್ತೆ ಅಂತಾ ನಿಶಾದೇವಿ ಮನೆಗೆ ನುಗ್ಗಿ ಕತ್ತು ಕೊಯ್ದು ಹತ್ಯೆ ಮಾಡಿ, ನಂತರ ಮಗು ಅಳುವುದನ್ನ ಕಂಡು ಮಗುವನ್ನ ಸಹ ಚಾಕುವಿನಿಂದ ಇರಿದು ಕೊಲೆ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.

    ಎಸ್‍ಪಿ ಎನ್ ಶಶಿಕುಮಾರ್ ನೇತೃತ್ವದಲ್ಲಿ ಕಾರ್ಯಚರಣೆ ಮಾಡಲಾಗಿದೆ. ಸದ್ಯ ಬಂಧಿತರಿಂದ 8,11,900 ರೂ. ನಗದು ಸೇರಿದಂತೆ ಮಾರಕಾಸ್ತ್ರಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಈ ಕುರಿತು ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸಚಿವ ರಾಜ್‍ನಾಥ್ ಸಿಂಗ್ ಸಮ್ಮುಖದಲ್ಲೇ ಅಡ್ಡ ಬಿದ್ದು ಬಿಜೆಪಿ ಅಭ್ಯರ್ಥಿ ಕಣ್ಣೀರು!

    ಸಚಿವ ರಾಜ್‍ನಾಥ್ ಸಿಂಗ್ ಸಮ್ಮುಖದಲ್ಲೇ ಅಡ್ಡ ಬಿದ್ದು ಬಿಜೆಪಿ ಅಭ್ಯರ್ಥಿ ಕಣ್ಣೀರು!

    ಕಲಬುರಗಿ: ನಾನು ಮೂರು ಬಾರಿ ಸೋತಿದ್ದೇನೆ. ಹೀಗಾಗಿ ಈ ಬಾರಿಯಾದ್ರೂ ನನಗೆ ಆಶೀರ್ವಾದ ಮಾಡಿ ಅಂತಾ ಕೇಂದ್ರ ಸಚಿವ ರಾಜ್‍ನಾಥ್ ಸಿಂಗ್ ಸಮ್ಮುಖದಲ್ಲೇ ಸೇಡಂ ಬಿಜೆಪಿ ಅಭ್ಯರ್ಥಿ ರಾಜಕುಮಾರ್ ಪಾಟೀಲ್ ತೆಲ್ಕೂರ್ ಕಣ್ಣೀರು ಹಾಕಿದ್ದಾರೆ.

    ಈ ಘಟನೆ ಕಲಬುರಗಿ ಜಿಲ್ಲೆ ಸೇಡಂ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಮಾತೃಛಾಯ ಶಾಲಾ ಆವರಣದಲ್ಲಿಂದು ಆಯೋಜಿಸಲಾಗಿದ್ದ ಬಿಜೆಪಿ ಬೃಹತ್ ಸಮಾವೇಶದಲ್ಲಿ ಮಾತನಾಡುವಾಗ, ನಾನು ಮೂರು ಬಾರಿ ಕಡಿಮೆ ಅಂತರ ಮತಗಳಿಂದ ಸೋತಿದ್ದೇನೆ. ಈ ಬಾರಿಯಾದರು ನನಗೆ ವಿಧಾನಸಭೆಗೆ ಕಳುಹಿಸಿಕೊಡಿ ಅಂತಾ ರಾಜ್‍ನಾಥ್ ಸಿಂಗ್ ಎದುರೇ ವೇದಿಕೆಯಲ್ಲಿ ಸಾಷ್ಟಾಂಗ ನಮಸ್ಕಾರ ಹಾಕುವ ಮೂಲಕ ಭಾವುಕರಾಗಿ, ನನ್ನ ಗೆಲ್ಲಿಸಿ ಅಂತಾ ಮನವಿ ಮಾಡಿದ್ದಾರೆ.

    ಇನ್ನು ಇದೇ ವೇಳೆ ಸಮಾವೇಶದ ನಂತರ, ಖ್ಯಾತ ಕನ್ನಡ ಚಿತ್ರ ನಟಿ ಶೃತಿ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ಅಭಿಮಾನಿಗಳು, ಕಾರ್ಯಕರ್ತರಲ್ಲದೆ ಕೆಲ ಮಹಿಳಾ ಪೊಲೀಸ್ ಸಿಬ್ಬಂದಿಗಳು ಸಹ ಮುಗಿಬಿದ್ದಿದ್ದರು. ಅಭಿಮಾನಿಗಳ ಆಸೆಗೆ ಬೇಸರಗೊಳ್ಳದೆ ತಾಳ್ಮೆಯಿಂದ ಸೆಲ್ಫಿ ತೆಗೆದುಕೊಂಡು ಕೆಲ ಕಾಲ ಅವರೊಂದಿಗೆ ಶೃತಿ ಬೆರೆತರು.

  • ಸೊಂಟದಿಂದ ಜಾರುತ್ತಿದ್ದ ಪಂಚೆಯನ್ನ ತುಂಬು ವೇದಿಕೆಯಲ್ಲಿಯೇ ಕಟ್ಟಿಕೊಂಡ ಸಿಎಂ: ವಿಡಿಯೋ ವೈರಲ್

    ಸೊಂಟದಿಂದ ಜಾರುತ್ತಿದ್ದ ಪಂಚೆಯನ್ನ ತುಂಬು ವೇದಿಕೆಯಲ್ಲಿಯೇ ಕಟ್ಟಿಕೊಂಡ ಸಿಎಂ: ವಿಡಿಯೋ ವೈರಲ್

    ಕಲಬುರಗಿ: ಸೊಂಟದಿಂದ ಜಾರುತ್ತಿದ್ದ ಪಂಚೆಯನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ವೇದಿಕೆಯಲ್ಲಿಯೇ ಕಟ್ಟಿಕೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಸೋಮವಾರ ಸಂಜೆ ಕಲಬುರಗಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಈ ಘಟನೆ ನಡೆದಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಲಬುರಗಿಯ ವೀರಶೈವ ಕಲ್ಯಾಣ ಮಂಟಪದ ಮುಂಬಾಗದಲ್ಲಿ ನಡೆದ ದಕ್ಷಿಣ ಮತ ಕ್ಷೇತ್ರದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಗೆ ಸಿದ್ದರಾಮಯ್ಯ ಅವರು ಬಂದಿದ್ದರು.

    ಈ ವೇಳೆ ತಡವಾಗಿ ಕಾರ್ಯಕ್ರಮಕ್ಕೆ ಆಗಮಿಸಿದ ಸಿಎಂ ವೇದಿಕೆ ಏರುತ್ತಿರುವಾಗ ಸೊಂಟದಿಂದ ಪಂಚೆ ಕಳಚುತ್ತಿರುವ ಅನುಭವಕ್ಕೆ ಬಂದಿದೆ. ತಕ್ಷಣ ಸಿದ್ದರಾಮಯ್ಯ ತಡವರಿಸಿಕೊಂಡು ಸೊಂಟಕ್ಕೆ ಕೈ ಹಾಕಿ ವೇದಿಕೆಯಲ್ಲೇ ಪಂಚೆ ಕಟ್ಟಿಕೊಂಡಿದ್ದಾರೆ.

    ಕಾರ್ಯಕರ್ತರು ಸಿದ್ದರಾಮಯ್ಯ ಪಂಚೆ ಕಟ್ಟಿಕೊಳ್ಳುತ್ತಿದ್ದಾಗಲೇ ಹಾರ ಹಾಕಿ ಸನ್ಮಾನಿಸಿದ್ದಾರೆ. ಆದರೆ ಸಿದ್ದರಾಮಯ್ಯ ಅವರು ತಮ್ಮ ಪಂಚೆ ಕಟ್ಟಿಕೊಳ್ಳುವುದರಲ್ಲಿ ಮಗ್ನವಾಗಿದ್ದರು.

    https://www.youtube.com/watch?v=Ddpn4PiE4SI

  • ಪ್ರಿಯಾಂಕ್ ಖರ್ಗೆಯನ್ನು ಲುಚ್ಚಾ ಅಂತ ಕರೆದ ಮಾಲೀಕಯ್ಯ ಗುತ್ತೇದಾರ್

    ಪ್ರಿಯಾಂಕ್ ಖರ್ಗೆಯನ್ನು ಲುಚ್ಚಾ ಅಂತ ಕರೆದ ಮಾಲೀಕಯ್ಯ ಗುತ್ತೇದಾರ್

    ಕಲಬುರಗಿ: ಚಿತ್ತಾಪುರದ ಶಾಸಕ ಪ್ರಿಯಾಂಕ್ ಖರ್ಗೆ ಮೊನ್ನೆ ಕಣ್ಣು ಬಿಟ್ಟಿದ್ದಾನೆ. ಆತನನ್ನು ಬಚ್ಚಾ ಅಂತಾ ಕರೆಯಬಾರದು ಅಂತೆ. ಅವನೊಬ್ಬ ಲುಚ್ಚಾ ಅಂತ ಮಾಲೀಕಯ್ಯ ಗುತ್ತೇದಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಚಿತ್ತಾಪುರದಲ್ಲಿ ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡಿದ ಅವರು, ಚಿತ್ತಾಪುರಕ್ಕೆ ಚುನಾವಣೆಯ ಸಂದರ್ಭದಲ್ಲಿ ನಾನು ಮತ್ತೆ ಬರ್ತೀನಿ. ಸಭೆಯಲ್ಲಿದ್ದ ಎಲ್ಲರು ನನ್ನ ನಂಬರ್ ಬರೆದುಕೊಳ್ಳಿ ಅಂತಾ ಹೇಳಿ ಮಾಲೀಕಯ್ಯ ತನ್ನ ಫೋನ್ ನಂಬರ್ ನೀಡಿದ್ದಾರೆ.

    ಬಳಿಕ ನಿಮಗೆ ಯಾರಾದ್ರು ತೊಂದ್ರೆ ಕೊಟ್ಟರೆ ತಕ್ಷಣ ನನಗೆ ಕರೆ ಮಾಡಿ. ಚಿತ್ತಾಪುರದಲ್ಲಿ ಯಾರಿಗೂ ಕೂಡ ಭಯ ಪಡುವಂತಿಲ್ಲ. ಕಾಂಗ್ರೆಸ್ ನಲ್ಲಿ ಏನೇ ಆಗಬೇಕಾದ್ರೂ ಖರ್ಗೆ ಚೇಲಾಗಳಿಗೆ ಆಗಬೇಕು. ಹಾಗಾಗಿಯೇ ಇಂದು ಕಾಂಗ್ರೆಸ್ ಮುಕ್ತ ಮಾಡೋದಕ್ಕೆ ನಾನು ಪಣ ತೊಟ್ಟಿದ್ದೆನೆ. ಚಿತ್ತಾಪುರದ ಶಾಸಕ ಪ್ರಿಯಾಂಕ್ ಖರ್ಗೆ ಮೊನ್ನೆ ಕಣ್ಣು ಬಿಟ್ಟಿದ್ದಾನೆ. ಅವನೊಬ್ಬ ಲುಚ್ಚಾ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕರ್ನಾಟಕದಲ್ಲಿ ಕೌರವ ರೀತಿಯಲ್ಲಿ ಕಾಂಗ್ರೆಸ್ ಪಕ್ಷ ಆಡಳಿತ ಮಾಡ್ತಿದೆ. ಬಿಜೆಪಿಯಲ್ಲಿ ನ್ಯಾಯದ ಬತ್ತಳಿಕೆ ಇದೆ. ಕಾಂಗ್ರೆಸ್ ನಲ್ಲಿ ಭ್ರಷ್ಟಾಚಾರದ ಬತ್ತಳಿಕೆ ಇದೆ. ಕಲಬುರಗಿ ಭಾಗದಲ್ಲಿ ಧರ್ಮಸಿಂಗ್ ಖರ್ಗೆ ಸಂಗ್ಯಾ ಬಾಳ್ಯಾ ಇದ್ದ ಹಾಗೆ. ಒಬ್ಬರಿಗೆ ಮಂತ್ರಿ ಮಾಡಿದ್ರೆ ಮತ್ತೊಬ್ಬರಿಗೆ ಹಾರ್ಟ್ ಅಟ್ಯಾಕ್ ಆಗುತ್ತೆ. ಬಂಗಾರಪ್ಪ ಮುಖ್ಯಮಂತ್ರಿ ಆಗಿದ್ದಾಗ ಖರ್ಗೆ ನಮ್ಮ ಮನೆ ಬಾಗಿಲಿಗೆ ಬಂದಿದ್ದ. ಆಗ ನಮ್ಮ ತಂದೆ ವೆಂಕಯ್ಯ ಕೂಸಯ್ಯ ಗುತ್ತೆದಾರ್ ಬಂಗಾರಪ್ಪನಿಗೆ ಹೇಳಿ ಮಂತ್ರಿ ಸ್ಥಾನ ಕೊಡಿಸಿದ್ದರು. ಈ ಮಾತು ಹೇಳೊ ಪರಿಸ್ಥಿತಿ ಬರ್ತಿರಲಿಲ್ಲ. ಆದ್ರೆ ಖರ್ಗೆ ಮಗ ಬಹಳ ಮುಂದು ಹೋಗಿದ್ದಾನೆ ಅದಕ್ಕೆ ಹೇಳುತ್ತಿದ್ದೇನೆ. ಈ ಮಾತು ಸುಳ್ಳು ಆದ್ರೆ ಬುದ್ಧವಿಹಾರಕ್ಕೆ ಬರಲಿ ಖರ್ಗೆ ಅಲ್ಲೇ ಆಣೆ ಪ್ರಮಾಣ ಮಾಡೋಣ ಅಂತ ಗುತ್ತೇದಾರ್ ಹೇಳಿದ್ದಾರೆ.

    ಕಲಬುರಗಿಯ ಅಫ್ಜಲ್ಪುರ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದ ಗುತ್ತೇದಾರ್ ಇತ್ತೀಚೆಗಷ್ಟೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ.

  • ಒಪ್ಪಿಗೆ ಇಲ್ದೇ ಮದ್ವೆ- ಸುಪ್ರೀಂ ಮೆಟ್ಟಿಲೇರಿದ ರಾಜ್ಯದ ಪ್ರಭಾವಿ ರಾಜಕಾರಣಿಯ ಮಗಳು

    ಒಪ್ಪಿಗೆ ಇಲ್ದೇ ಮದ್ವೆ- ಸುಪ್ರೀಂ ಮೆಟ್ಟಿಲೇರಿದ ರಾಜ್ಯದ ಪ್ರಭಾವಿ ರಾಜಕಾರಣಿಯ ಮಗಳು

    ನವದೆಹಲಿ: ಇವತ್ತು ಸುಪ್ರಿಂ ಕೋರ್ಟ್ ನಲ್ಲಿ ವಿಶೇಷವಾದ ಅರ್ಜಿ ಸಲ್ಲಿಕೆಯಾಗಿದೆ. ಒಪ್ಪಿಗೆ ಇಲ್ಲದೇ ಒತ್ತಾಯ ಪೂರ್ವಕವಾಗಿ ಮದುವೆ ಮಾಡಿಸಿದ್ದನ್ನು ಪ್ರಶ್ನಿಸಿ ರಾಜ್ಯದ ರಾಜಕಾರಣಿಯೊಬ್ಬರ ಮಗಳು ಸುಪ್ರಿಂ ಮೆಟ್ಟಿಲೇರಿದ್ದಾರೆ.

    ರಾಜಕಾರಣಿಯ ಹೆಸರು ಮತ್ತು ಮಗಳ ಹೆಸರನ್ನು ಅರ್ಜಿದಾರರು ಗೌಪ್ಯವಾಗಿಟ್ಟಿದ್ದಾರೆ. ಆದರೆ ಈ ಅರ್ಜಿ ಸಲ್ಲಿಕೆಯಾಗಿರುವುದು ಕಲಬುರಗಿಯಿಂದ ಎಂಬುದು ತಿಳಿದು ಬಂದಿದೆ. ಒತ್ತಾಯ ಪೂರ್ವಕ ಮದುವೆಗಳಿಗೆ ಕಾನೂತ್ಮಕ ರಕ್ಷಣೆ ಬೇಕು ಅಂತಾ ರಾಜಕಾರಣಿ ಮಗಳು ಸುಪ್ರಿಂಕೋರ್ಟ್ ಅರ್ಜಿ ಸಲ್ಲಿಸಿದ್ದು, ಅರ್ಜಿ ವಿಚಾರಣೆಗೆ ಪುರಸ್ಕೃತವಾಗಿದೆ.

    ಇಂದು ವಿಚಾರಣೆ ನಡೆಸಿದ ನ್ಯಾ. ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ, ಮೇ ಐದಕ್ಕೆ ವಿಚಾರಣೆ ನಿಗದಿಪಡಿಸಿದೆ. ಸಂತ್ರಸ್ಥ ಯುವತಿ ಪರ ವಕೀಲೆ ಇಂದಿರಾ ಜೈಸಿಂಗ್ ವಾದ ಆಲಿಸಿದ ಪೀಠ ರಾಜ್ಯ ಹಾಗೂ ಕೇಂದ್ರ ಸರ್ಕಾರ ಯುವತಿಗೆ ರಕ್ಷಣೆ ನೀಡುವಂತೆ ಸೂಚಿಸಿದೆ. ಅಷ್ಟೇ ಅಲ್ಲದೇ ಈಗ ನಡೆದಿರುವ ಮದುವೆ ರದ್ದಾಗಬೇಕು ಎಂದರೆ ಕಲುಬುರಗಿ ಸಿವಿಲ್ ಕೋರ್ಟ್ ಗೆ ಅರ್ಜಿ ಸಲ್ಲಿಸಬಹುದು ಎಂದು ಸಲಹೆ ನೀಡಿದೆ.

  • ಪ್ಲಾಸ್ಟಿಕ್ ಚೀಲದಲ್ಲಿ 2 ದಿನದ ಗಂಡು ಶಿಶು ಪತ್ತೆ

    ಪ್ಲಾಸ್ಟಿಕ್ ಚೀಲದಲ್ಲಿ 2 ದಿನದ ಗಂಡು ಶಿಶು ಪತ್ತೆ

    ಕಲಬುರಗಿ: ನಗರದ ಸಿದ್ಧಿಬಾಷ ದರ್ಗಾದ ಬಳಿ ಪ್ಲಾಸ್ಟಿಕ್ ಚೀಲವೊಂದರಲ್ಲಿ ಎರಡು ದಿನದ ನವಜಾತ ಗಂಡು ಶಿಶು ಪತ್ತೆಯಾಗಿದೆ.

    ಸ್ಥಳೀಯರು ಶಿಶು ಮೃತಪಟ್ಟಿದೆಯೆಂದು ತೆಗೆಯಲು ಹೋದಾಗ, ಜೀವಂತವಾಗಿರುವುದು ಬೆಳಕಿಗೆ ಬಂದಿದೆ. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಂಗಳವಾರ ತಡರಾತ್ರಿ ಮಗುವನ್ನು ಬಿಸಾಕಿದ್ದಾರೆ ಎಂದು ಶಂಕಿಸಲಾಗಿದೆ.

    ಮಾಹಿತಿ ತಿಳಿದ ತಕ್ಷಣವೇ ಪೊಲೀಸರು ಆಂಬುಲೆನ್ಸ್ ಮೂಲಕ ಸ್ಥಳಕ್ಕೆ ಬಂದು ಚಿಕಿತ್ಸೆಗೆಂದು ಶಿಶುವನ್ನು ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯ ಎಳೆಮಗುವನ್ನು ಕ್ಯಾರಿಬ್ಯಾಗ್‍ನಲ್ಲಿ ಕಟ್ಟಿಬಿಸಾಕಿದ ಪಾಪಿ ಪೋಷಕರಿಗೆ ಸ್ಥಳಿಯರು ಹಿಡಿಶಾಪ ಹಾಕಿದ್ದಾರೆ.

    ಈ ಘಟನೆ ಸ್ಟೇಷನ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಅಡುಗೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ

    ಅಡುಗೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ

    ಕಲಬುರಗಿ: ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿರುವ ಘಟನೆ ಜಿಲ್ಲೆಯ ನಗರದ ವಿಠ್ಠಲ್ ನಗರದಲ್ಲಿ ನಡೆದಿದೆ.

    ಶ್ವೇತಾ(29) ಮನೆಯ ಅಡುಗೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಗೃಹಿಣಿ. ಆದರೆ ಶ್ವೇತಾ ಪೋಷಕರು ನಮ್ಮ ಮಗಳದ್ದು ಆತ್ಮಹತ್ಯೆ ಅಲ್ಲ ಕೊಲೆ ಎಂದು ಆರೋಪಿಸುತ್ತಿದ್ದಾರೆ.

    ಶ್ವೇತಾ ಮೂಲತಃ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನವರು. ಇವರಿಗೆ 5 ವರ್ಷಗಳ ಹಿಂದೆ ಅದೇ ಜಿಲ್ಲೆಯ ತೆಕ್ಕಲಕೋಟೆ ಗ್ರಾಮದ ಪ್ರಶಾಂತ್ ಜೊತೆ ವಿವಾಹವಾಗಿತ್ತು. ಪ್ರಶಾಂತ್ ಟು-ವೀಲರ್ ಶೋ ರೂಮ್ ನಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ನಷ್ಟವಾಗಿದ್ದರಿಂದ ನಂತರ ಕಲಬುರಗಿ ನಗರದ ಹೊಂಡಾ ಶೋ ರೂಮ್ ನಲ್ಲಿ ಕೆಲಸ ಮಾಡುತ್ತಿದ್ದರು. ಕೆಲವು ದಿನಗಳಿಂದ ತಾಯಿ ಮನೆಯಲ್ಲಿದ್ದ ಶ್ವೇತಾ ಇತ್ತೀಚೆಗೆ ಕಲಬುರಗಿ ಗೆ ಹೋಗಿದ್ದರು. ಆದರೆ ಇಂದು ಅಡುಗೆ ಮನೆಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

    ಶ್ವೇತಾ ಪೋಷಕರು ಗಂಡ ಮತ್ತು ಆತನ ಕುಟುಂಬದವರು ಹಣಕ್ಕಾಗಿ ಕೊಲೆ ಮಾಡಿದ್ದಾರೆ ಎಂದು ದೂರಿದ್ದಾರೆ. ಈ ಘಟನೆ ಸಂಬಂಧ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.