Tag: Kalavida Organisation

  • ಯಾರದ್ದೋ ಸಕ್ಸಸ್ ನೋಡಿ ಸಿನಿಮಾ ಫೀಲ್ಡ್‌ಗೆ ಧುಮುಕಬೇಡಿ: ಕಿಚ್ಚ ಸುದೀಪ್

    ಯಾರದ್ದೋ ಸಕ್ಸಸ್ ನೋಡಿ ಸಿನಿಮಾ ಫೀಲ್ಡ್‌ಗೆ ಧುಮುಕಬೇಡಿ: ಕಿಚ್ಚ ಸುದೀಪ್

    ಬೆಂಗಳೂರು: ಯಾರದ್ದೋ ಸಕ್ಸಸ್‍ನ ನೋಡಿ ಸಿನಿಮಾ ಫೀಲ್ಡ್‌ಗೆ ಧುಮುಕಬೇಡಿ. ನಿಮ್ಮೊಳಗೆ ಫ್ಯಾಷನ್ ಎನ್ನುವುದು ಇದ್ದರೆ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು ಎಂದು ನಟ ಕಿಚ್ಚ ಸುದೀಪ್ ಹೇಳಿದ್ದಾರೆ.

    ನಗರದಲ್ಲಿ ಯತೀರಾಜ್ ಸಾರಥ್ಯದ ಕಲಾವಿದ ಫಿಲಂ ಅಕಾಡೆಮಿಯನ್ನು ಉದ್ಘಾಟಿಸಿ ಬಳಿಕ ಮಾತನಾಡಿದ ಅವರು, ನೀವು ನಿಮ್ಮನ್ನು ಪ್ರೀತಿಸುವುದನ್ನು ಮೊದಲು ಕಲಿಯಿರಿ. ಮೊದಲು ನೀವು ನಿಮ್ಮ ಬಗ್ಗೆ ಯೋಚನೆ ಮಾಡಿ ಬಳಿಕ ಬೇರೆಯವರ ಬಗ್ಗೆ ಯೊಚನೆ ಮಾಡಿ ಎಂದು ಹೇಳುತ್ತಾ ‘ಕಲಾವಿದ ಫಿಲಂ ಆಕಾಡೆಮಿ’ ಯಿಂದ ಒಳ್ಳೊಳ್ಳೆ ಪ್ರತಿಭೆಗಳು ಹೊರಬರಲಿ ಎಂದು ಇದೇ ವೇಳೆ ಹಾರೈಸಿದ್ದಾರೆ.

    ಸಂಸ್ಥೆಯಿಂದ ಒಬ್ಬ ನಟನಾಗಲು ಸಾಧ್ಯವಿಲ್ಲ. ಆದರೆ ಸಂಸ್ಥೆ ಮೂಲಕ ಅವನು ತನ್ನನ್ನು ತಾನು ಕಂಡುಕೊಳ್ಳಬಹುದು. ಯಾರಾದರೂ ನಟನೆ ಮಾಡಬೇಕೆಂದರೆ ಕೆಲವರು ಅದೃಷ್ಟವಂತರಿದ್ದಾರೆ. ಸಿನಿಮಾವೊಂದು ಬ್ಯೂಟಿಫುಲ್ ಪ್ರೊಫೆಷನ್. ಫಿಲಂ ಅಕಾಡೆಮಿಗಳಿಂದ ನಿಮ್ಮ ಕನಸುಗಳು ಈಡೇರುತ್ತೋ ಇಲ್ಲವೋ, ಆದರೆ ನಿಮ್ಮೊಳಗೆ ಹುದುಗಿರುವ ಕಲೆ ಜೊತೆಗೆ ನಿಮ್ಮನ್ನು ನೀವು ಕಂಡುಕೊಳ್ಳುವುದಕ್ಕೆ ಒಂದೊಳ್ಳೆ ಫ್ಲಾಟ್‍ಫಾರ್ಮ್ ಎಂದು ಸುದೀಪ್ ಹೇಳಿದ್ರು.

    ಮಾಯಬಜಾರ್ ಎಂಥವರನ್ನು ಕೂಡ ಕೈಬೀಸಿ ಕರೆಯುತ್ತದೆ. ಆದರೆ ಬಣ್ಣದ ಜಗತ್ತಿಗೆ ಲಗ್ಗೆ ಇಡುವ ಮೊದಲು ಒಂದಿಷ್ಟು ತಯಾರಿ ಬೇಕಾಗುತ್ತದೆ. ನಟ-ನಟಿ, ನಿರ್ದೇಶಕ-ನಿರ್ದೇಶಕಿ ಹೀಗೆ ಕಲೆಯಲ್ಲಿ ಯಾವುದೇ ವೃತ್ತಿಯನ್ನು ಆಯ್ಕೆ ಮಾಡಿಕೊಂಡರೂ ಪೂರ್ವ ತಯಾರಿ ಅತ್ಯಗತ್ಯ. ಇಂತಹವರಿಗೆ ತರಬೇತಿ ನೀಡಲೆಂದು ಸಾಕಷ್ಟು ಕಲಾ ಕೇಂದ್ರಗಳಿವೆ. ಸದ್ಯ ಈ ಸಾಲಿಗೆ ಯತೀರಾಜ್ ಸಾರಥ್ಯದ ಕಲಾವಿದ ಫಿಲಂ ಅಕಾಡೆಮಿ ಸೇರಿದೆ.

    ಕಾರ್ಯಕ್ರಮದಲ್ಲಿ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಚಿನ್ನೇಗೌಡ್ರು, ನಿರ್ಮಾಪಕ ಹಾಗೂ ವಿತರಕ ಜಾಕ್‍ಮಂಜು ಉಪಸ್ಥಿತರಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv