Tag: Kalam Pasha

  • ಮೋಹಿನಿಯಾಟ್ಟಂ ನೃತ್ಯಕ್ಕೆ ಅರ್ಧದಲ್ಲೇ ತಡೆ – ಕೇರಳ ಜಡ್ಜ್‌ ಪಾಷಾ ವಿರುದ್ಧ ಖ್ಯಾತ ಕಲಾವಿದೆ ಆಕ್ರೋಶ

    ಮೋಹಿನಿಯಾಟ್ಟಂ ನೃತ್ಯಕ್ಕೆ ಅರ್ಧದಲ್ಲೇ ತಡೆ – ಕೇರಳ ಜಡ್ಜ್‌ ಪಾಷಾ ವಿರುದ್ಧ ಖ್ಯಾತ ಕಲಾವಿದೆ ಆಕ್ರೋಶ

    ತಿರುವನಂತಪುರ : ಖ್ಯಾತ ಮೋಹಿನಿಯಾಟ್ಟಂ ಕಲಾವಿದೆ ಡಾ.ನೀನಾ ಪ್ರಸಾದ್ ಅವರ ಪ್ರದರ್ಶನವನ್ನು ಅರ್ಧಕ್ಕೆ ನಿಲ್ಲಿಸುವ ಮೂಲಕ ಕೇರಳ ಪಾಲಕ್ಕಾಡ್ ಜಿಲ್ಲಾ ನ್ಯಾಯಾಧೀಶ ಕಲಂ ಪಾಷಾ ವಿವಾದ ಸೃಷ್ಟಿಸಿದ್ದಾರೆ.

    ಪಾಲಕ್ಕಾಡ್‌ ಸರ್ಕಾರಿ ಶಾಲೆಯೊಂದರಲ್ಲಿ ಡಾ.ನೀನಾ ಪ್ರಸಾದ್ ಅವರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಶನಿವಾರ ರಾತ್ರಿ 8.30ರ ವೇಳೆಗೆ ಕಾಯಕ್ರಮ ಆರಂಭಗೊಂಡಿತ್ತು.

    ಕಾರ್ಯಕ್ರಮ ಆರಂಭವಾದ ಕೆಲ ಹೊತ್ತಿನಲ್ಲಿಯೇ ಅಲ್ಲಿಗೆ ಬಂದ ಕಮಲ್ ಪಾಷಾ, ಧ್ವನಿವರ್ಧಕದ ಶಬ್ದದಿಂದ ನಿದ್ದೆ ಮಾಡಲು ಆಗುತ್ತಿಲ್ಲ ಎನ್ನುವ ಕಾರಣ ನೀಡಿ ಸಂಘಟಕರಿಗೆ ಕಾರ್ಯಕ್ರಮವನ್ನು ಅರ್ಧಕ್ಕೆ ನಿಲ್ಲಿಸುವಂತೆ ಆಗ್ರಹಿಸಿದ್ದಾರೆ.

    ಸರ್ಕಾರಿ ಮೋಯನ್ ಪ್ರಾಥಮಿಕ ಶಾಲೆಯ ಬಳಿಯಲ್ಲಿಯೇ ಕಾಲಂ ಪಾಷಾ ವಾಸವಿದ್ದು, ಜಡ್ಜ್‌ ಆದೇಶದ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕೃಷ್ಣ ಮತ್ತು ಅರ್ಜುನನ ನಡುವಿನ ಸಂಬಂಧ ಬಿಂಬಿಸುವ ʼಸಖ್ಯಂ’ ಶೀರ್ಷಿಕೆಯ ಒಂದು ಗಂಟೆಯ ಪ್ರದರ್ಶನವನ್ನು ಮಧ್ಯದಲ್ಲಿ ನಿಲ್ಲಿಸಿದ್ದಾರೆ. ಕಾರ್ಯಕ್ರಮ ನಿಲ್ಲಿಸಿ ಅವಮಾನ ಮಾಡಿದ್ದಕ್ಕೆ ಹಿರಿಯ ಕಲಾವಿದೆ ನೀನಾ ಪ್ರಸಾದ್‌ ಮತ್ತು ತಂಡದವರು ವೇದಿಕೆಯ ಮೇಲೆ ಕಣ್ಣೀರಿಟ್ಟು ಕೆಳಗಡೆ ಇಳಿದಿದ್ದಾರೆ. ಇದನ್ನೂ ಓದಿ: ಇದು ಉತ್ತರ ಪ್ರದೇಶ ಅಲ್ಲ, ಬಂಗಾಳ: ಬಿಜೆಪಿಗೆ ಮಮತಾ ತಿರುಗೇಟು

    ಕಾರ್ಯಕ್ರಮವನ್ನು ಅರ್ಧಕ್ಕೆ ನಿಲ್ಲಿಸಿದ್ದಕ್ಕೆ ನೀನಾ ಪ್ರಸಾದ್ ಫೇಸ್ ಬುಕ್‌ನಲ್ಲಿ ಆಕ್ರೋಶ ಹೊರ ಹಾಕಿದ್ದಾರೆ. ಈ ನೃತ್ಯ ಪ್ರದರ್ಶನಕ್ಕೆ ಗಂಟೆಗಟ್ಟಲೇ ತಯಾರಿ ನಡೆಸಿ ಪಾಲಕ್ಕಾಡ್‌ಗೆ ಬಂದಿದ್ದೆವು. ಇದು ನನ್ನ ನೃತ್ಯ ವೃತ್ತಿಜೀವನದ ಕಹಿ ಅನುಭವವಾಗಿದೆ. ಇದು ನ್ಯಾಯಾಂಗ ಅಧಿಕಾರಿಯೊಬ್ಬರ ಉದ್ಧಟತನ ಎಂದು ಸಿಟ್ಟನ್ನು ಪ್ರದರ್ಶಿಸಿದ್ದಾರೆ. ನೀನಾ ಪ್ರಸಾದ್ ಅವರನ್ನು ಬೆಂಬಲಿಸಿದ ಪುರೋಗಮನ ಕಲಾ ಸಾಹಿತ್ಯ ಸಂಘ, ನ್ಯಾಯಾಧೀಶರು ಸಾಂಸ್ಕೃತಿಕ ಅಸಹಿಷ್ಣುತೆ ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿದೆ. ಇದನ್ನೂ ಓದಿ: ಬಾಲಿವುಡ್ ನಲ್ಲಿ ‘ಸ್ವಾತಂತ್ರ್ಯ ವೀರ ಸಾವರ್ಕರ್’ ಸಿನಿಮಾ


    ಕೇಂದ್ರ ವಿದೇಶಾಂಗ ವ್ಯವಹಾರ ಮತ್ತು ಸಂಸದೀಯ ವ್ಯವಹಾರಗಳ ಖಾತೆಯ ರಾಜ್ಯ ಸಚಿವ ವಿ ಮುರುಳೀಧರನ್‌ ಪ್ರತಿಕ್ರಿಯಿಸಿ, ಪಿಣರಾಯಿ ವಿಜಯನ್ ಅವಧಿಯಲ್ಲಿ ಕೇರಳ ತಾಲಿಬಾನೀಕರಣವಾಗುತ್ತಿದೆ ಎನ್ನುವುದಕ್ಕೆ ಸಿಕ್ಕಿದ ಮತ್ತೊಂದು ಉದಾಹರಣೆಯಿದು. ಕಮ್ಯುನಿಸ್ಟ್ ಆಳ್ವಿಕೆಯಲ್ಲಿ ಕಲೆಗೆ ಸ್ವಾತಂತ್ರ್ಯವಿಲ್ಲ. ನೀನಾ ಪ್ರಸಾದ್ ಅವರ ಮೋಹಿನಿಯಾಟ್ಟಂ ಪ್ರದರ್ಶನವನ್ನು ಏಕಾಏಕಿ ನಿಲ್ಲಿಸಿರುವುದು ಕೇರಳಕ್ಕೆ ಮಾಡಿದ ಅವಮಾನ ಎಂದು ಕಿಡಿಕಾರಿದ್ದಾರೆ.

    ಕಳೆದ ವರ್ಷ ಕಲಂ ಪಾಷಾ ಪತ್ನಿಗೆ ತ್ರಿವಳಿ ತಲಾಖ್‌ ನೀಡಿ ಸುದ್ದಿಯಾಗಿದ್ದರು. ತ್ರಿವಳಿ ತಲಾಖ್ ನೀಡಿದ್ದನ್ನು ಪ್ರಶ್ನಿಸಿ ಪತ್ನಿ ಕೇರಳ ಹೈಕೋರ್ಟ್‌ ಮೊರೆ ಹೋಗಿ ಪಾಷಾ ವಿರುದ್ಧ ಕೇಸ್‌ ದಾಖಲಿಸುವಂತೆ ಮನವಿ ಮಾಡಿದ್ದರು. ತಮ್ಮ ಅರ್ಜಿಯಲ್ಲಿ ಪತ್ನಿ, ಪಾಷಾ ಅವರು 2018ರ ಮಾರ್ಚ್‌ 1 ರಂದು ಪತ್ರದ ಮೂಲಕ ತ್ರಿವಳಿ ತಲಾಖ್‌ ನೀಡಿದ್ದಾರೆ ಆರೋಪಿಸಿದ್ದರು. ತ್ರಿವಳಿ ತಲಾಖ್‌ ಒಪ್ಪದ್ದಕ್ಕೆ ಪತಿ ಮತ್ತು ಅವರ ಸಹೋದರ ಬೆದರಿಕೆ ಹಾಕಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದರು. ಪಾಷಾ ಅವರ ಸಹೋದರ ಕೇಮಲ್‌ ಪಾಷಾ ಕೇರಳ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರಾಗಿದ್ದಾರೆ.