Tag: kalaburgai

  • ಮತಗಳ್ಳತನ ಮೂಲಕ ನನ್ನ ಸೋಲಿಸಲು ಸಂಚು ಮಾಡಲಾಗಿತ್ತು: ಬಿ.ಆರ್.ಪಾಟೀಲ್

    ಮತಗಳ್ಳತನ ಮೂಲಕ ನನ್ನ ಸೋಲಿಸಲು ಸಂಚು ಮಾಡಲಾಗಿತ್ತು: ಬಿ.ಆರ್.ಪಾಟೀಲ್

    – ನಾಳೆ ಹೈಕಮಾಂಡ್ ಭೇಟಿಗೆ ದೆಹಲಿಗೆ ಹೋಗುತ್ತಿದ್ದೇನೆ ಎಂದ ಶಾಸಕ

    ಕಲಬುರಗಿ: ಆಳಂದ ಕ್ಷೇತ್ರದಲ್ಲಿ 2023ರಲ್ಲಿ ಮತಗಳ್ಳತನದ ಮೂಲಕ ನನ್ನ ಸೋಲಿಸಲು ಸಂಚು ಮಾಡಲಾಗಿತ್ತು ಎಂದು ಶಾಸಕ ಬಿ.ಆರ್.ಪಾಟೀಲ್ (B R Patil) ಗಂಭೀರ ಆರೋಪ ಮಾಡಿದ್ದಾರೆ.

    ಸಿಎಂ ಸಿದ್ದರಾಮಯ್ಯ (Siddaramaiah) ಟ್ವೀಟ್ ವಿಚಾರವಾಗಿ ಕಲಬುರಗಿಯಲ್ಲಿ (Kalaburagi) ಮಾತನಾಡಿದ ಅವರು, ಇದೊಂದು ಬಹಳ ದೊಡ್ಡ ಕಥೆ. ಕಳೆದ ಚುನಾವಣೆಯಲ್ಲಿ ನನ್ನನ್ನು ಸೋಲಿಸುವ ಉದ್ದೇಶದಿಂದ ಮತಗಳ್ಳತನ ನಡೆದಿತ್ತು. ನನ್ನ ಪರವಾಗಿರೋ 6,900 ಮತಗಳನ್ನು ಡಿಲೀಟ್ ಮಾಡಿದ್ದರು. ಈ ವಿಚಾರ ಗೊತ್ತಾಗಿ ನಾನು ಪ್ರಿಯಾಂಕ್ ಖರ್ಗೆ ಸೇರಿ ಚುನಾವಣಾ ಆಯುಕ್ತರನ್ನು ಭೇಟಿ ಮಾಡಿದ್ದೆವು. ಇಬ್ಬರೂ ಸೇರಿ ಪ್ರತಿಭಟನೆ ಮಾಡಿದ ಬಳಿಕ ದೂರು ದಾಖಲಿಸಿಕೊಂಡರು ಎಂದಿದ್ದಾರೆ. ಇದನ್ನೂ ಓದಿ: ಮದ್ದೂರು ಘಟನೆ ನೋಡಿದ್ರೆ ರಾಜ್ಯದಲ್ಲಿ `ಮೊಘಲ್ ಪ್ರೇರಣೆಯ’ ಆಡಳಿತದಂತೆ ಭಾಸವಾಗುತ್ತಿದೆ – ಬಿವೈವಿ ಕಿಡಿ

     ಚುನಾವಣಾ ಆಯೋಗ (Election Commission) ಸಹಕಾರ ನೀಡದ ಹಿನ್ನಲೆ ಆ ಪ್ರಕರಣದ ತನಿಖೆ ಬೇಗ ಮುಗಿಯುತ್ತಿಲ್ಲ. ಈ ಮತಗಳ್ಳತನ ಪ್ರಕರಣ ಕುರಿತು ಕಾಂಗ್ರೆಸ್ ಹೈಕಮಾಂಡ್ ನನ್ನನ್ನು ಬರಲು ಹೇಳಿದೆ. ನನ್ನ ಬಳಿ ಇರೋ ಮಾಹಿತಿ ಪಡೆಯಲು ಹೈಕಮಾಂಡ್ ನನ್ನನ್ನು ಕರೆಸಿಕೊಳ್ಳುತ್ತಿದ್ದು, ನಾಳೆ ಹೈಕಮಾಂಡ್ ಭೇಟಿಗೆ ದೆಹಲಿಗೆ ತೆರಳುತ್ತಿದ್ದೇನೆ. ಅಲ್ಲಿ ಎಲ್ಲಾ ದಾಖಲೆ ಒದಗಿಸುತ್ತೇನೆ. ಅದಾದ ಬಳಿಕ ಹೈಕಮಾಂಡ್ ಸೂಚನೆಯಂತೆ ನಾನು ಮುಂದುವರೆಯುತ್ತೇನೆ ಎಂದು ಹೇಳಿದ್ದಾರೆ.

  • ಲವ್ವರ್ ಜೊತೆ ಸಿಕ್ಕಿಬಿದ್ದ ಪತ್ನಿ – ಸಿಟ್ಟಿಗೆದ್ದ ಪತಿಯಿಂದ ಡಬಲ್ ಮರ್ಡರ್

    ಲವ್ವರ್ ಜೊತೆ ಸಿಕ್ಕಿಬಿದ್ದ ಪತ್ನಿ – ಸಿಟ್ಟಿಗೆದ್ದ ಪತಿಯಿಂದ ಡಬಲ್ ಮರ್ಡರ್

    ಕಲಬುರಗಿ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಪತ್ನಿಯು ಪರ ಪುರುಷನೊಂದಿಗೆ ಒಟ್ಟಿಗೆ ಇದ್ದುದನ್ನು ಕಣ್ಣಾರೆ ಕಂಡ ಪತಿ ಮಾರಕಾಸ್ತ್ರಗಳಿಂದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಕೊಚ್ಚಿ ಕೊಂದಿರುವ ಘಟನೆ ಕಲಬುರಗಿಯ (Kalaburagi) ಆಳಂದ ತಾಲೂಕಿನ ಮಾದನಹಿಪ್ಪರಗಾ (Madanahipparaga) ಗ್ರಾಮದಲ್ಲಿ ನಡೆದಿದೆ.

    ಸೃಷ್ಟಿ(22), ಖಾಜಪ್ಪ(23) ಮೃತರು. ಆರೋಪಿ ಶ್ರೀಮಂತ ಕೊಲೆ ಮಾಡಿ, ಮಾದನಹಿಪ್ಪರಗಾ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಇದನ್ನೂ ಓದಿ: ಹಿಂದೂ ಕಾರ್ಯಕರ್ತನ ಹತ್ಯೆ ಬೆನ್ನಲ್ಲೇ ಮಂಗಳೂರಲ್ಲಿ ಮೂವರಿಗೆ ಚಾಕು ಇರಿತ

    2 ವರ್ಷಗಳ ಹಿಂದೆ ಸೃಷ್ಟಿಯು ಶ್ರೀಮಂತನನ್ನು ಮದುವೆಯಾಗಿದ್ದಳು. ಗುರುವಾರ ಊರಿಗೆ ತೆರಳಿದ್ದ ಶ್ರೀಮಂತ, ರಾತ್ರಿ ಮನೆಗೆ ಹಿಂದಿರುಗಿದ್ದ. ಮನೆಯಲ್ಲಿ ಪತ್ನಿಯು ಅದೇ ಗ್ರಾಮದ ಖಾಜಪ್ಪನ ಜೊತೆ ಇರುವುದನ್ನು ಕಣ್ಣಾರೆ ಕಂಡು ಕೋಪಗೊಂಡ ಶ್ರೀಮಂತ ತಕ್ಷಣ ಮಾರಕಾಸ್ತ್ರಗಳಿಂದ ಇಬ್ಬರನ್ನೂ ಬರ್ಬರವಾಗಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಫಾಜಿಲ್ ಫೋಟೊ ಜೊತೆಗೆ ಸುಹಾಸ್ ಫೋಟೊ ಹಾಕಿ ಟಾರ್ಗೆಟ್ ಫಿಕ್ಸ್ ಮಾಡಿದ್ದ ಹಂತಕರು!

    ಘಟನಾ ಸ್ಥಳಕ್ಕೆ ಮಾದನ ಹಿಪ್ಪರಗಾ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಆರೋಪಿ ಶ್ರೀಮಂತನನ್ನು ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಖರ್ಗೆ ತವರಿನಲ್ಲಿ ಮೋದಿ ದಂಡಯಾತ್ರೆ – 25 ಕ್ಷೇತ್ರದ ಮೇಲೆ ಬಿಜೆಪಿ ಕಣ್ಣು

    ಖರ್ಗೆ ತವರಿನಲ್ಲಿ ಮೋದಿ ದಂಡಯಾತ್ರೆ – 25 ಕ್ಷೇತ್ರದ ಮೇಲೆ ಬಿಜೆಪಿ ಕಣ್ಣು

    ಕಲಬುರಗಿ: ಚುನಾವಣೆಗೆ ಇನ್ನು ಕೇವಲ 8 ದಿನವಷ್ಟೇ ಬಾಕಿಯಿದ್ದು, ಇಂದು ಕಲಬುರಗಿ (Kalaburagi) ಜಿಲ್ಲೆಗೆ ಪ್ರಧಾನಿ ಮೋದಿ (PM Narendra Modi) ಎಂಟ್ರಿ ನೀಡಲಿದ್ದಾರೆ. ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಪ್ರಭಾವ ಇರುವ ಕಲ್ಯಾಣ ಕರ್ನಾಟಕದಲ್ಲಿ ಮೋದಿ ಪ್ರಚಾರದ ಮೂಲಕ ಧೂಳೆಬ್ಬಿಸಲು ಬಿಜೆಪಿ ಪ್ಲಾನ್ ಮಾಡಿದೆ.

    ಕಲಬುರಗಿ ರೋಡ್ ಶೋ ವೇಳೆ ಖರ್ಗೆಗೆ ಮತ್ತೆ ಕೌಂಟರ್ ಕೊಡಲು ಮೋದಿ ಪ್ಲಾನ್ ಮಾಡಿದ್ದು ಮತ್ತೊಮ್ಮೆ ವಿಷಸರ್ಪ ಹೇಳಿಕೆಗೆ ಮೋದಿಯಿಂದ ತಿರುಗೇಟು ನಿರೀಕ್ಷೆ ಇದೆ. ಕಲ್ಯಾಣ ಕರ್ನಾಟಕದಲ್ಲಿ ಗರಿಷ್ಠ ಕ್ಷೇತ್ರಗಳನ್ನು ವಶಕ್ಕೆ ಪಡೆಯಲು ಬಿಜೆಪಿ ಪಣ ತೊಟ್ಟಿದೆ. ಈ ಭಾಗದಲ್ಲಿ ಲಿಂಗಾಯತರ ಪ್ರಾಬಲ್ಯದ ಜತೆಗೆ ಎಸ್‌ಸಿ, ಎಸ್‌ಟಿ ಇತರೇ ಹಿಂದುಳಿದ ವರ್ಗಗಳ ಅಹಿಂದ ಮತಗಳು ನಿರ್ಣಾಯಕವಾಗಲಿದೆ.

     

    ಇಂದು ಕಲಬುರಗಿ ಬಳಿಕ, ಮೇ 6 ರಂದು ಚಿತ್ತಾಪುರಗಳಲ್ಲಿ ಮೋದಿ ಮತಬೇಟೆ ನಡೆಸಲಿದ್ದಾರೆ. ಕಲ್ಯಾಣ ಜಿಲ್ಲೆಗಳ 40 ಕ್ಷೇತ್ರಗಳಲ್ಲಿ ಕಾಂಗ್ರೆಸ್‍ನ 25 ಕೋಟೆಗಳ ವಶಕ್ಕೆ ಬಿಜೆಪಿ ತಂತ್ರ ಹೂಡಿದೆ. ಹಳೇ ಮೈಸೂರು ಬಳಿಕ ಕಲ್ಯಾಣ ಕರ್ನಾಟಕವೇ ನಮೋ ಟಾರ್ಗೆಟ್ ಆಗಿದೆ. ಕಲ್ಯಾಣ ಕರ್ನಾಟಕದ ಹಿನ್ನೆಡೆಯೂ ಬಹುಮತ ತಲುಪಲು ಅಡ್ಡಿಯಾಗಿತ್ತು.ಹೀಗಾಗಿ ಕಲ್ಯಾಣ ಭಾಗದದಲ್ಲಿ ಕಾಂಗ್ರೆಸ್ ಮತ ಬುಟ್ಟಿಗೆ ಮೋದಿ ಕೈಹಾಕಿದ್ದಾರೆ.

    ಪ್ರಸ್ತುತ ಕಲ್ಯಾಣ ಕರ್ನಾಟಕದಲ್ಲಿ 40 ಕ್ಷೇತ್ರಗಳಿದ್ದು ಪ್ರಸ್ತುತ 17 ಬಿಜೆಪಿ ಶಾಸಕರಿದ್ದಾರೆ. ಈ ಬಾರಿ ಕನಿಷ್ಟ 25 ಕ್ಷೇತ್ರಗಳನ್ನು ಗೆಲ್ಲಬೇಕೆಂಬ ಗುರಿಯನ್ನು ಬಿಜೆಪಿ ಹಾಕಿಕೊಂಡಿದೆ. ಇದನ್ನೂ ಓದಿ: ಕೇರಳದಲ್ಲಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಮೇಲೆ ಕಲ್ಲು ತೂರಾಟ


    ಎಲ್ಲಿ ಕಾರ್ಯಕ್ರಮ?
    ಇಂದು ಬೆಳಗ್ಗೆ 11 ಗಂಟೆಗೆ ಚಿತ್ರದುರ್ಗದಲ್ಲಿ ಸಾರ್ವಜನಿಕ ಸಭೆಯಲ್ಲಿ ಮೋದಿ ಭಾಗವಹಿಸಲಿದ್ದು, ಮಧ್ಯಾಹ್ನ 2 ಗಂಟೆಗೆ ಹೊಸಪೇಟೆ, ಸಂಜೆ 4 ಗಂಟೆಗೆ ರಾಯಚೂರಿನ ಸಿಂಧನೂರಿನಲ್ಲಿ ಕಾರ್ಯಕ್ರಮ ನಡೆಯಲಿದೆ. ಸಂಜೆ 6:30ಕ್ಕೆ ಕಲಬುರಗಿಯಲ್ಲಿ ರೋಡ್‌ ಶೋ ನಡೆಯಲಿದೆ.

  • ರಾಜ್ಯದಲ್ಲಿ 308 ಹೊಸ ಪ್ರಕರಣ – 387 ಮಂದಿ ಡಿಸ್ಚಾರ್ಜ್

    ರಾಜ್ಯದಲ್ಲಿ 308 ಹೊಸ ಪ್ರಕರಣ – 387 ಮಂದಿ ಡಿಸ್ಚಾರ್ಜ್

    – ಒಟ್ಟು ಸೋಂಕಿತರ ಸಂಖ್ಯೆ 5,760ಕ್ಕೆ ಏರಿಕೆ
    – ಉಡುಪಿಯಲ್ಲಿ 215 ಮಂದಿ ಡಿಸ್ಚಾರ್ಜ್

    ಬೆಂಗಳೂರು: ಕಲಬುರಗಿ, ಯಾದಗಿರಿ, ಬೀದರ್, ಉಡುಪಿಯಲ್ಲಿ ಕೊರೊನಾ ಸ್ಫೋಟಗೊಂಡಿದೆ. ಇಂದು ಹೊಸದಾಗಿ 308 ಪ್ರಕರಣಗಳ ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 5,760ಕ್ಕೆ ಏರಿಕೆಯಾಗಿದೆ.

    ಒಟ್ಟು 308 ಪ್ರಕರಣಗಳ ಪೈಕಿ 277 ಅಂತರಾಜ್ಯ ಪ್ರಯಾಣಿಕರಾಗಿದ್ದು ದಕ್ಷಿಣ ಕನ್ನಡದಲ್ಲಿ ದುಬೈನಿಂದ ಮರಳಿದ ಯುವಕನಿಗೆ ಸೋಂಕು ಬಂದಿದೆ. ಇಂದು ಒಟ್ಟು 387 ಮಂದಿ ಬಿಡುಗಡೆಯಾಗಿದ್ದು, ಇಲ್ಲಿಯವರೆಗೆ ಒಟ್ಟು 2519 ಮಂದಿ ಬಿಡುಗಡೆಯಾಗಿದ್ದಾರೆ. ಒಟ್ಟು ರಾಜ್ಯದಲ್ಲಿ 3,175 ಸಕ್ರಿಯ ಪ್ರಕರಣಗಳಿವೆ.

    ಎಲ್ಲಿ ಎಷ್ಟು ಜನ ಡಿಸ್ಚಾರ್ಜ್?
    ಈ ಪೈಕಿ ಉಡುಪಿಯಲ್ಲಿ 215 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಕಲಬುರಗಿಯಲ್ಲಿ 47, ರಾಯಚೂರಿನಲ್ಲಿ 29, ವಿಜಯಪುರದಲ್ಲಿ 29, ಯಾದಗಿರಿ 23, ಹಾಸನ 16, ಮಂಡ್ಯ 11, ಧಾರವಾಡ 6, ತುಮಕೂರು 6, ಹಾವೇರಿ 5 ಮಂದಿ ಬಿಡುಗಡೆಯಾಗಿದ್ದಾರೆ.

    ಎಲ್ಲಿ ಎಷ್ಟು ಮಂದಿಗೆ ಸೋಂಕು?
    ಕಲಬರುಗಿ 99, ಯಾದಗಿರಿ 66, ಬೀದರ್ 48, ಉಡುಪಿ 45, ಬೆಂಗಳೂರು ನಗರ 48, ಬಳ್ಳಾರಿ 8, ಗದಗ 6, ಶಿವಮೊಗ್ಗ ಮತ್ತು ಧಾರವಾಡ 4, ಹಾಸನ 3, ದಕ್ಷಿಣ ಕನ್ನಡ 3, ಬಾಗಲಕೋಟೆ 2, ಕೊಪ್ಪಳ ಮತ್ತು ರಾಮನಗರದಲ್ಲಿ ತಲಾ ಒಂದೊಂದು ಪ್ರಕರಣ ಬಂದಿದೆ.

    ರಾಯಚೂರು, ಮಂಡ್ಯ, ಬೆಳಗಾವಿ, ದಾವಣಗೆರೆ, ವಿಜಯಪುರ, ಚಿಕ್ಕಾಬಳ್ಳಾಪುರ, ಮೈಸೂರು, ಉತ್ತರ ಕನ್ನಡ, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಹಾವೇರಿ, ಚಿಕ್ಕಮಗಳೂರು, ಕೊಡಗಿನಲ್ಲಿ ಯಾವುದೇ ಪಾಸಿಟಿವ್ ಪ್ರಕರಣ ಬಂದಿಲ್ಲ.

    ಮೂರು ಮಂದಿ ಸಾವು:
    ಬೆಂಗಳೂರಿನಲ್ಲಿ ಮೂರು ಮಂದಿ ಮೃತಪಟ್ಟಿದ್ದು ಒಟ್ಟು ಸಾವನ್ನಪ್ಪಿದವರ ಸಂಖ್ಯೆ 64ಕ್ಕೆ ಏರಿಕೆಯಾಗಿದೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ 67 ವರ್ಷದ ಪುರುಷ ಸೋಮವಾರ ಮೃತಪಟ್ಟಿದ್ದಾರೆ.

    ಉಸಿರಾಟದ ತೊಂದರೆ, ಜ್ವರ, ನಿಶಕ್ತಿಯಿಂದ ಬಳಲುತ್ತಿದ್ದ ಬೆಂಗಳೂರು ನಗರದ 48 ವರ್ಷದ ಮಹಿಳೆ ಜೂನ್ 4 ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಜೂನ್ 5 ರಂದು ಮೃತಪಟ್ಟಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ 65 ವರ್ಷದ ಬೆಂಗಳೂರಿನ ಮಹಿಳೆ ಜೂನ್ 4 ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಜೂನ್ 5 ರಂದು ಇನ್ನೊಂದು ಆಸ್ಪತ್ರೆಗೆ ಶಿಫ್ಟ್ ಆಗಿದ್ದು ಅಲ್ಲೇ ನಿಧನರಾಗಿದ್ದಾರೆ.

    ಐಸಿಯುನಲ್ಲಿ ಎಷ್ಟು ಜನ?
    ರಾಜ್ಯದಲ್ಲಿ ಒಟ್ಟು 14 ಮಂದಿ ಐಸಿಯುನಲ್ಲಿ ಇದ್ದಾರೆ. ಬೆಂಗಳೂರಿನಲ್ಲಿ 7, ಕಲಬುರಗಿ 4, ಧಾರವಾಡ, ತುಮಕೂರು, ಮಂಡ್ಯದಲ್ಲಿ ತಲಾ ಒಬ್ಬಬ್ಬ ರೋಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  • ಕಲಬುರಗಿಯಲ್ಲಿ ಎಚ್1ಎನ್1ಗೆ ವ್ಯಕ್ತಿ ಬಲಿ – ಸಾರ್ವಜನಿಕರಲ್ಲಿ ಆತಂಕ

    ಕಲಬುರಗಿಯಲ್ಲಿ ಎಚ್1ಎನ್1ಗೆ ವ್ಯಕ್ತಿ ಬಲಿ – ಸಾರ್ವಜನಿಕರಲ್ಲಿ ಆತಂಕ

    ಕಲಬುರಗಿ: ಎಚ್1ಎನ್1ಗೆ ಅಫಜಲಪುರದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಸಾರ್ವಜನಿಕರು ಆತಂಕದಲ್ಲಿದ್ದಾರೆ.

    ಕಳೆದ 15 ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ಅಫಜಲಪುರ ಪಟ್ಟಣ ನಿವಾಸಿ ಲಕ್ಷ್ಮೀಪುತ್ರ ಎಚ್1 ಎನ್1ಗೆ ಬಲಿಯಾಗಿದ್ದಾರೆ. ಮೊದಲು ಜ್ವರ ಕಾಣಿಸಿಕೊಂಡ ವೇಳೆ ಲಕ್ಷ್ಮಿ ಪುತ್ರ ಅವರನ್ನು ಮಹಾರಾಷ್ಟ್ರದ ಸೊಲ್ಲಾಪುರ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಈ ವೇಳೆ ಅವರಿಗೆ ಎಚ್1 ಎನ್1 ಸೋಕು ತಗುಲಿರುವುದು ಖಚಿತವಾಗಿದೆ.

    ಕೆಲ ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಿದರೂ ಯಾವುದೇ ಪ್ರಯೋಜನವಾಗದ ಕಾರಣ ಕಳೆದ ಎರಡು ದಿನಗಳ ಹಿಂದೆ ಹೆಚ್ಚಿನ ಚಿಕಿತ್ಸೆಗಾಗಿ ಹೈದ್ರಾಬಾದ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ರಾತ್ರಿ ಲಕ್ಷ್ಮೀಪುತ್ರ ಸಾವನ್ನಪ್ಪಿದ್ದಾರೆ. ಮೃತ ವ್ಯಕ್ತಿ ಮಹಾರಾಷ್ಟ್ರದ ಸೊಲ್ಲಾಪುರ ಬಬಲಾದ್ ಬಳಿ ಸಣ್ಣ ಉದ್ಯಮಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದನ್ನು ಓದಿ: ಏನಿದು ಎಚ್1ಎನ್1? ಹಂದಿ ಜ್ವರ ಬಂದ ಮೇಲೆ ಏನು ಮಾಡಬೇಕು?

    ಸದ್ಯ ಮೃತ ಲಕ್ಷ್ಮೀಪುತ್ರ ಎಚ್1ಎನ್1 ಗೆ ನಿಂದ ಮೃತಪಟ್ಟಿರುವುದು ಖಚಿತವಾಗುತ್ತಿದಂತೆ ಈ ಭಾಗದ ಜನರಲ್ಲಿ ಆತಂಕ ಹೆಚ್ಚಾಗಿದೆ. ಇಷ್ಟಾದರೂ ಜಿಲ್ಲಾ ಆರೋಗ್ಯ ಇಲಾಖೆ ಈವರೆಗೂ ಯಾವುದೇ ಕ್ರಮಕೈಗೊಂಡಿಲ್ಲ. ಅಲ್ಲದೇ ಸಾರ್ವಜನಿಕರಲ್ಲಿ ಸೋಂಕಿನ ಕುರಿತು ಜಾಗೃತಿ ಮೂಡಿಸುವ ಕಾರ್ಯವನ್ನು ಕೈಗೊಂಡಿಲ್ಲ. ಕೂಡಲೇ ಜನರಿಗೆ ಈ ಕುರಿತೆ ಎಚ್ಚರಿಕೆ ನೀಡಿ ಮಾಹಿತಿ ನೀಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶಾ ಭೇಟಿ ವೇಳೆ ಉತ್ತರಾಧಿ ಮಠದಲ್ಲಿ ವ್ಯಕ್ತಿ ಬಳಿ ರಿವಾಲ್ವರ್ ಪತ್ತೆ!

    ಶಾ ಭೇಟಿ ವೇಳೆ ಉತ್ತರಾಧಿ ಮಠದಲ್ಲಿ ವ್ಯಕ್ತಿ ಬಳಿ ರಿವಾಲ್ವರ್ ಪತ್ತೆ!

    ಕಲಬುರಗಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭೇಟಿ ವೇಳೆ ವ್ಯಕ್ತಿಯೊಬ್ಬರ ಬಳಿ ರಿವಾಲ್ವರ್ ಪತ್ತೆಯಾದ ಹಿನ್ನೆಲೆಯಲ್ಲಿ ಕೆಲ ಕಾಲ ಆತಂಕ ವಾತಾವರಣ ನಿರ್ಮಾಣವಾದ ಘಟನೆ ಉತ್ತರಾಧಿ ಮಠದಲ್ಲಿ ನಡೆದಿದೆ.

    ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಮಳಖೇಡದಲ್ಲಿರುವ ಉತ್ತರಾಧಿ ಮಠಕ್ಕೆ ಅಮಿತ್ ಶಾ ಇಂದು ಬೆಳಗ್ಗೆ ಭೇಟಿ ಕೊಟ್ಟಿದ್ದರು. ಈ ವೇಳೆ ರಿವಾಲ್ವರ್ ಇಟ್ಟುಕೊಂಡು ವ್ಯಕ್ತಿಯೊಬ್ಬರು ಮಠ ಪ್ರವೇಶಿಸಿದ್ದರು.

    ರಿವಾಲ್ವರ್ ಪತ್ತೆಯಾದ ತಕ್ಷಣ ಎನ್‍ಎಸ್‍ಜಿ ಮತ್ತು ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ವಿಚಾರಣೆ ವೇಳೆ ರಿವಾಲ್ವರ್ ಇಟ್ಟುಕೊಂಡ ವ್ಯಕ್ತಿ ಸೇಡಂ ಪಟ್ಟಣದ ಬಿಜೆಪಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ನಿವೃತ್ತ ಪೊಲೀಸ್ ಇನ್ಸ್ ಪೆಕ್ಟರ್ ತುರಾಬ್ ಉಲ್ ಹಕ್(61) ಎನ್ನುವುದು ಗೊತ್ತಾಗಿದೆ.

    ವಿಚಾರಣೆ ವೇಳೆ ತನ್ನ ಬಳಿ ರಿವಾಲ್ವರ್ ಗೆ ಲೈಸೆನ್ಸ್ ಇದೆ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ತುರಾಬ್ ಉಲ್ ಹಕ್ ಅವರ ಮನೆಗೆ ತೆರಳಿ ಲೈಸೆನ್ಸ್ ದಾಖಲೆಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ಎಲ್ಲ ವಿಚಾರಣೆಯ ಪೊಲೀಸರು ಎಚ್ಚರಿಕೆ ನೀಡಿ ತುರಾಬ್ ಉಲ್ ಹಕ್ ಅವರನ್ನು ಬಿಡುಗಡೆ ಮಾಡಿದ್ದಾರೆ.