Tag: kalaburagi city corporation

  • ಕಲಬುರಗಿ ಪಾಲಿಕೆ ಉಪ ಆಯುಕ್ತ RP ಜಾಧವ ಮನೆ, ಫಾರ್ಮ್ ಹೌಸ್ ಮೇಲೆ `ಲೋಕಾ’ ದಾಳಿ

    ಕಲಬುರಗಿ ಪಾಲಿಕೆ ಉಪ ಆಯುಕ್ತ RP ಜಾಧವ ಮನೆ, ಫಾರ್ಮ್ ಹೌಸ್ ಮೇಲೆ `ಲೋಕಾ’ ದಾಳಿ

    ಕಲಬುರಗಿ: ಇಲ್ಲಿನ ಕಲಬುರಗಿ ಮಹಾನಗರ ಪಾಲಿಕೆಯ ಉಪ ಆಯುಕ್ತ (ಅಭಿವೃದ್ಧಿ) ಆರ್.ಪಿ ಜಾಧವ ಅವರ ಮನೆ, ಫಾರ್ಮ್ ಹೌಸ್ ಮೇಲೆ ಲೋಕಾಯುಕ್ತ ಪೊಲೀಸರು ಮಂಗಳವಾರ ದಾಳಿ ಮಾಡಿದ್ದಾರೆ.

    ಆ‌ರ್.ಪಿ ಜಾಧವ ಅವರು ಕಳೆದ ಕೆಲವು ವರ್ಷಗಳಿಂದ ಪಾಲಿಕೆಯಲ್ಲಿ ಉಪ ಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

    ಮಂಗಳವಾರ ಬೆಳಿಗ್ಗೆ ಲೋಕಾಯುಕ್ತ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಕೆ ಉಮೇಶ ನೇತೃತ್ವದಲ್ಲಿ ಮೂರು ತಂಡಗಳಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ನಗರದ ಎನ್‌ಜಿಒ ಕಾಲೊನಿಯ ಮನೆ, ಫರಹತಾಬಾದ್ ಸಮೀಪದ ಫಾರ್ಮ್ ಹೌಸ್ ಮೇಲೆ ದಾಳಿ ಮಾಡಿ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.

    ದಾಳಿಯ ವೇಳೆ ಮನೆಯಲ್ಲಿ 30 ತೊಲೆ ಬಂಗಾರ, ಬೆಳ್ಳಿ, ಕಾರು, ಬೈಕ್‌ಗಳು ಪತ್ತೆಯಾಗಿವೆ. ಶೋಧ ಕಾರ್ಯ ಮುಂದುವರೆದಿದೆ. ಪಾಲಿಕೆಯ ಕಚೇರಿ ಮೇಲೂ ದಾಳಿ. ಕಾರ್ಯ ಶೋಧನೆ ನಡಿತಾ ಇದೆ.

  • ಕಲಬುರಗಿ ಪಾಲಿಕೆ ಮೇಯರ್-ಉಪಮೇಯರ್ ಚುನಾವಣೆ ಮುಂದೂಡಿಕೆ

    ಕಲಬುರಗಿ ಪಾಲಿಕೆ ಮೇಯರ್-ಉಪಮೇಯರ್ ಚುನಾವಣೆ ಮುಂದೂಡಿಕೆ

    ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆಗೆ ಇದೇ ತಿಂಗಳು 20ರಂದು ನಡೆಯಬೇಕಾಗಿದ್ದ ಮೇಯರ್ ಚುನಾವಣೆಯನ್ನು ಮುಂದೂಡಿ ಪ್ರಾದೇಶಿಕ ಆಯುಕ್ತರು ಆದೇಶ ಹೊರಡಿಸಿದ್ದಾರೆ.

    ನವೆಂಬರ್ 20ರಂದು ಕಲಬುರಗಿ ಪಾಲಿಕೆಯ 23ನೇ ಮೇಯರ್, ಉಪ ಮೇಯರ್ ಹಾಗೂ ವಿವಿಧ ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಡೆಯಬೇಕಾಗಿತ್ತು. ಆದರೆ ಭಾರತ ಚುನಾವಣಾ ಆಯೋಗದ ಅಧಿಸೂಚನೆ ಅನ್ವಯ ರಾಜ್ಯದಲ್ಲಿ ಅವಧಿ ಮುಕ್ತಾಯಗೊಂಡಿರುವ ಹಾಗೂ ವಿವಿಧ ಕಾರಣಗಳಿಂದ ತೆರವಾಗಿರುವ ವಿಧಾನ ಪರಿಷತ್ ಸದಸ್ಯ ಸ್ಥಾನಗಳಿಗೆ ಚುನಾವಣೆ ಅಧಿಸೂಚನೆ ಹೊರಡಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಪಾಲಿಕೆಯ ಮೇಯರ್ ಚುನಾವಣೆಯನ್ನು ಮುಂದೂಡಿದೆ. ಇದನ್ನೂ ಓದಿ: ಪುನೀತ್‌ ಅಭಿಮಾನಿಗಳಿಗೆ ಅಶ್ವಿನಿ ಭಾವನಾತ್ಮಕ ಪತ್ರ

    ಒಟ್ಟು 55 ವಾರ್ಡ್‍ಗಳಿಗೆ ಚುನಾವಣೆ ನಡೆದಿತ್ತು. ಬಿಜೆಪಿ 24, ಕಾಂಗ್ರೆಸ್ 27 ಮತ್ತು ಜೆಡಿಎಸ್ 4 ಸದಸ್ಯರನ್ನು ಒಳಗೊಂಡಿದೆ. ಕಲಬುರಗಿ ಮೇಯರ್ ಸ್ಥಾನ ಅಲಂಕರಿಸಲು ಜೆಡಿಎಸ್ ಬೆಂಬಲವೇ ನಿರ್ಣಾಯಕ. ಇದನ್ನೂ ಓದಿ: ʼಅಪ್ಪುʼಗೆ ನನ್ನ ದೃಷ್ಟಿಯೇ ತಾಗಿತೇನೊ ಅನಿಸುತ್ತೆ: ತಮ್ಮನ ನೆನೆದು ಶಿವಣ್ಣ ಕಣ್ಣೀರು

  • ಕಲಬುರಗಿ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ ಡೇಟ್‌ ಫಿಕ್ಸ್‌- ಯಾವ ವರ್ಗಕ್ಕೆ ಸ್ಥಾನ ಮೀಸಲು?

    ಕಲಬುರಗಿ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ ಡೇಟ್‌ ಫಿಕ್ಸ್‌- ಯಾವ ವರ್ಗಕ್ಕೆ ಸ್ಥಾನ ಮೀಸಲು?

    ಕಲಬುರಗಿ: ಮಹಾನಗರ ಪಾಲಿಕೆಯ ಮೇಯರ್‌, ಉಪಮೇಯರ್‌ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ನ.20ರಂದು ಚುನಾವಣೆ ನಡೆಯಲಿದೆ.

    ಅಂದು ನಗರದ ಟೌನ್‍ಹಾಲ್ ಸಭಾಂಗಣದಲ್ಲಿ ಚುನಾವಣೆ ನಡೆಯಲಿದೆ. ಮೇಯರ್ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಮೇಯರ್ ಸ್ಥಾನ ಹಿಂದುಳಿದ ಪ್ರವರ್ಗ (ಬಿ)ಕ್ಕೆ ಮೀಸಲಾಗಿದೆ. ಇದೇ ಸಂದರ್ಭದಲ್ಲಿ ಪಾಲಿಕೆ ಸ್ಥಾಯಿ ಸಮಿತಿಗಳಿಗೂ ಚುನಾವಣೆ ನಡೆಯಲಿದೆ. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ರೌಡಿ ಶೀಟರ್ ಮನೆಗಳ ಮೇಲೆ ಪೊಲೀಸರ ದಾಳಿ

    ಒಟ್ಟು 55 ವಾರ್ಡ್‍ಗಳಿಗೆ ಚುನಾವಣೆ ನಡೆದಿತ್ತು. ಬಿಜೆಪಿ 24, ಕಾಂಗ್ರೆಸ್ 27 ಮತ್ತು ಜೆಡಿಎಸ್ 4 ಸದಸ್ಯರನ್ನು ಒಳಗೊಂಡಿದೆ. ಕಲಬುರಗಿ ಮೇಯರ್ ಸ್ಥಾನ ಅಲಂಕರಿಸಲು ಜೆಡಿಎಸ್ ಬೆಂಬಲವೇ ನಿರ್ಣಾಯಕ. ಹೀಗಾಗಿ ಜೆಡಿಎಸ್‌ ನಡೆ ಕುತೂಹಲ ಮೂಡಿಸಿದೆ. ಇದನ್ನೂ ಓದಿ: ಜಮ್ಮು & ಕಾಶ್ಮೀರ: ಜಾಕ್ ಸ್ಲಿಪ್ ಆಗಿ ಗಾಯಗೊಂಡು ಕೋಮಾದಲ್ಲಿದ್ದ ಕಾಫಿನಾಡಿನ ಯೋಧ ಸಾವು

  • ಕಲಬುರಗಿ ಪಾಲಿಕೆ ಗದ್ದುಗೆ ಹಿಡಿಯಲು ಏನು ತಂತ್ರಗಾರಿಕೆ ಮಾಡ್ಬೇಕೋ ಮಾಡ್ತೇವೆ: ಜೋಶಿ

    ಕಲಬುರಗಿ ಪಾಲಿಕೆ ಗದ್ದುಗೆ ಹಿಡಿಯಲು ಏನು ತಂತ್ರಗಾರಿಕೆ ಮಾಡ್ಬೇಕೋ ಮಾಡ್ತೇವೆ: ಜೋಶಿ

    ಧಾರವಾಡ: ಕಲಬುರಗಿ ಪಾಲಿಕೆ ಗದ್ದುಗೆ ಏರುವ ವಿಚಾರವಾಗಿ ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿದ್ದು, ಎಲ್ಲಿ ಬಹುಮತ ಇರಲ್ಲ ಅಲ್ಲಿ ಗುದ್ದಾಟ ಇದ್ದೇ ಇರುತ್ತೆ ಎಂದಿದ್ದಾರೆ.

    ಈ ಗುದ್ದಾಟದಲ್ಲಿ ಬಿಜೆಪಿ ಅಧಿಕಾರ ಹಿಡಿಯಲು ಏನು ಮಾಡಬೇಕೋ ಎಲ್ಲ ತಂತ್ರಗಾರಿಕೆಯನ್ನ ಅದಕ್ಕೆ ಬೇಕಾದ ಕಾರ್ಯ ಚಟುವಟಿಕೆಗಳನ್ನ ನಮ್ಮ ಪಕ್ಷದ ಅಧ್ಯಕ್ಷರು ಹಾಗೂ ಸಿಎಂ ಮಾಡ್ತಾರೆ ಎಂದರು. ಅಲ್ಲಿ ಯಾರ ಜೊತೆ ಯಾರು ದೊಸ್ತಿ ಆಗುತ್ತೆ ಎನ್ನುವುದು ಹೇಳಲು ಅಧಿಕೃತ ವ್ಯಕ್ತಿ ನಾನಲ್ಲ, ಆದರೆ ರಾಜಕಾರಣದಲ್ಲಿ ಯಾರು ಮಿತ್ರರಲ್ಲ, ಯಾರೂ ಶತ್ರು ಅಲ್ಲ ಎಂದರು.

    ಹುಬ್ಬಳ್ಳಿ-ಧಾರವಾಡ ಪಾಲಿಕೆಯಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿರುವ ಜೋಶಿ, ಯಾರನ್ನ ಮೇಯರ್ ಮಾಡಬೇಕು ಎಂದು ಗೆಜೆಟ್ ನೋಟಿಫಿಕೆಷನ್ ಆಗಬೇಕು, ಚುನಾವಣೆ ಪ್ರಕ್ರಿಯೆ ಆಗಬೇಕು, ಮಾಡುವುದಕ್ಕಿಂತ ಮೊದಲು ನಿಮ್ಮನ್ನ ಹೇಳಿ ಮಾಡುತ್ತೆವೆ ಎಂದು ಹೇಳಿದರು. ಇದನ್ನೂ ಓದಿ: ಕಲಬುರಗಿ ಪಾಲಿಕೆಯಲ್ಲಿ ಜೆಡಿಎಸ್‍ಗೆ ಮೇಯರ್ ಗಿರಿ..?