Tag: Kalaburagi Central jail

  • ಸೆಂಟ್ರಲ್‌ ಜೈಲಿನಲ್ಲೇ ಕೈದಿಗಳ ಎಣ್ಣೆ ಪಾರ್ಟಿ – ನಟೋರಿಯಸ್‌ ಕೈದಿಗಳ ವರ್ಗಾವಣೆ ಬೆನ್ನಲ್ಲೇ ವೀಡಿಯೋ ವೈರಲ್‌

    ಸೆಂಟ್ರಲ್‌ ಜೈಲಿನಲ್ಲೇ ಕೈದಿಗಳ ಎಣ್ಣೆ ಪಾರ್ಟಿ – ನಟೋರಿಯಸ್‌ ಕೈದಿಗಳ ವರ್ಗಾವಣೆ ಬೆನ್ನಲ್ಲೇ ವೀಡಿಯೋ ವೈರಲ್‌

    – ರಾಶಿ ರಾಶಿ ಬೀಡಿ, ಸಿಗರೇಟ್‌ ಪ್ಯಾಕ್, ಸ್ಮಾರ್ಟ್‌ಫೋನ್‌ಗಳು ಪತ್ತೆ
    – ಕಲಬುರಗಿ ಜೈಲಿನ ಕರ್ಮಕಾಂಡ ಮತ್ತಷ್ಟು ಬಯಲು

    ಕಲಬುರಗಿ: ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ (Kalaburagi Central Jail) ಕೈದಿಗಳಿಗೆ ರಾಜಾತಿಥ್ಯವೇ ನಡೆಯುತ್ತಿದೆ. ಜೈಲಿನಲ್ಲೇ ಕೈದಿಗಳು ಎಣ್ಣೆ ಪಾರ್ಟಿ ಮಾಡುತ್ತಿರುವ ವೀಡಿಯೋ ವೈರಲ್‌ ಆಗಿದ್ದು, ಜೈಲಿನ ಕರ್ಮಕಾಂಡ ಮತ್ತಷ್ಟು ಬಯಲಾಗಿದೆ.

    ಶಂಕಿತ ಉಗ್ರ ಜುಲ್ಫಿಕರ್, ಶಿವಮೊಗ್ಗ ರೌಡಿಶೀಟರ್ ಬಚ್ಚನ್ ಸೇರಿ ಆರು ನಟೋರಿಯಸ್‌ ಕೈದಿಗಳ ಶಿಫ್ಟ್ ಬೆನ್ನಲ್ಲೇ ಜೈಲಿನಲ್ಲಿನ ಮತ್ತಷ್ಟು ವೀಡಿಯೋ ವೈರಲ್‌ ಆಗಿವೆ. 2 ತಿಂಗಳ ಹಿಂದಿನ ವೀಡಿಯೋ ಇದು ಎನ್ನಲಾಗಿದೆ. ಇದನ್ನೂ ಓದಿ: ಅಪ್ಪ ಬೈಕ್ ಕೊಡಿಸಿಲ್ಲ ಅಂತ ಆತ್ಮಹತ್ಯೆಗೆ ಶರಣಾದ ಯುವಕ!

    ರಾಶಿ ರಾಶಿ ಸ್ಮಾರ್ಟ್‌ಫೋನ್‌ಗಳು, ಬೀಡಿ-ಸಿಗರೇಟ್ ಪ್ಯಾಕೇಟ್‌ಗಳನ್ನ ಒಂದೇಡೆ ಹಾಕಿರುವ ವೀಡಿಯೋ ಕೂಡ ವೈರಲ್‌ ಆಗಿದೆ. ಜೈಲ್ ಅಧೀಕ್ಷಕಿಯನ್ನ ಟಾರ್ಗೆಟ್ ಮಾಡಿಕೊಂಡು ವೀಡಿಯೋ ರಿಲೀಸ್ ಮಾಡಲಾಗಿದೆ. ಜೈಲು ಮುಖ್ಯ ಅಧೀಕ್ಷಕಿಗೆ ಹಣ ನೀಡುವ ಕುರಿತು ಕೈದಿಗಳು ಮಾತುಕತೆ ನಡೆಸಿರುವುದು ಇದರಿಂದ ಬಹಿರಂಗಗೊಂಡಿದೆ.

    ಅ.14 ರಂದು ಜೈಲು ಮುಖ್ಯ ಅಧೀಕ್ಷಕಿಯಾಗಿ ಡಾ.ಅನಿತಾ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಅ.16 ರಿಂದ ಜೈಲಿನಲ್ಲಿ ಕಟ್ಟುನಿಟ್ಟಿನ ನಿಯಮ ಜಾರಿಗೆ ಜೈಲ್ ಸುಪರಿಂಟೆಂಡೆಂಟ್‌ ಮುಂದಾಗಿದ್ದರು. ಇದನ್ನೂ ಓದಿ: ತರಗತಿಗೆ ಪದೇ ಪದೇ ಗೈರು – ಬುದ್ಧಿ ಹೇಳಿದ್ದಕ್ಕೆ ಪ್ರಿನ್ಸಿಪಾಲರ ತಲೆಗೆ ಗುಂಡಿಕ್ಕಿ ಹತ್ಯೆಗೈದ ವಿದ್ಯಾರ್ಥಿ!

    ಅ.16 ದಿನಾಂಕ ಕಾಣುವಂತೆ ‌ದಿನಪತ್ರಿಕೆಯಲ್ಲಿ ದಿನಾಂಕ ತೋರಿಸಿ ಹಣದ ಬಗ್ಗೆ ಮಾತುಕತೆ ನಡೆಸಲಾಗಿದೆ. ಅ.29 ರಂದು ರಾಶಿ ರಾಶಿ ಗುಟ್ಕಾ, ಬೀಡಿ, ಸಿಗರೇಟ್ ಗುಡ್ಡೆ ಹಾಕಿ ವೀಡಿಯೋ ಮಾಡಲಾಗಿದೆ. ಜೈಲಿನ ಅಕ್ರಮಗಳಿಗೆ ಕಡಿವಾಣ ಹಾಕಲು ಮುಂದಾಗಿದ್ದ ಅಧೀಕ್ಷಕಿ ಅನೀತಾರನ್ನ ಟಾರ್ಗೆಟ್‌ ಮಾಡಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗಿದೆ.

    ಅ.16, 17 ರಂದು ಕಾರಗೃಹ ಇಲಾಖೆ ಎಸ್ಪಿ ಯಶೋಧಾ ತನಿಖೆಗೆ ಆಗಮಿಸಿದ್ದರು. ಎರಡೂ ದಿನ ಜೈಲಿನೊಳಗಡೆ ಇದ್ದು ತನಿಖೆ ಮಾಡಿದ್ದರು. ಅ ವೇಳೆ ವೀಡಿಯೋ ಹೇಗಾಯ್ತು ಎನ್ನುವ ಬಗ್ಗೆ ಅನುಮಾನ ಮೂಡಿದೆ.

  • ಕಲಬುರಗಿ ಸೆಂಟ್ರಲ್ ಜೈಲ್ ಅಧೀಕ್ಷಕಿಗೆ ಬೆದರಿಕೆ ಕೇಸ್‌ – 9 ಕೈದಿಗಳ ವಿರುದ್ಧ ಎಫ್‌ಐಆರ್‌

    ಕಲಬುರಗಿ ಸೆಂಟ್ರಲ್ ಜೈಲ್ ಅಧೀಕ್ಷಕಿಗೆ ಬೆದರಿಕೆ ಕೇಸ್‌ – 9 ಕೈದಿಗಳ ವಿರುದ್ಧ ಎಫ್‌ಐಆರ್‌

    ಕಲಬುರಗಿ: ಇಲ್ಲಿನ ಕೇಂದ್ರ ಕಾರಾಗೃಹದ (Kalaburagi Central Jail) ಅಧೀಕ್ಷಕಿ (Jail Superintendent) ಅನಿತಾ ಅವರ ಕಾರನ್ನು ಸ್ಫೋಟಿಸುವುದಾಗಿ ಬೇದರಿಕೆ ಹಾಕಿದ್ದ ಪ್ರಕರಣ ಸಂಬಂಧ ಇಬ್ಬರು ಮಹಿಳೆಯರು ಸೇರಿ 9 ಕೈದಿಗಳ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

    ಮುಸ್ತಫಾ,ನಸೀರ್, ಬಚ್ಚನ್,ಅಲ್ತಾಫ್, ದೇವರಾಜ್, ನಾಗರಾಜ್, ಶ್ರೀಕಾಂತ್ ಸೇರಿ 9 ಕೈದಿಗಳ (Prisoners) ವಿರುದ್ಧ ಅಧೀಕ್ಷಕಿ ಅನಿತಾ ಎಫ್‌ಐಆರ್‌ ದಾಖಲಿಸಿದ್ದಾರೆ. ಜೈಲಿನಲ್ಲಿ ಬೀಡಿ, ಗುಟ್ಕಾ ಸಿಗರೇಟ್ ಬಂದ್ ಮಾಡಿದ್ದಕ್ಕೆ ಅನೀತಾ ವಿರುದ್ಧ ಕೈದಿಗಳು ಪ್ರತಿಭಟನೆ ನಡೆಸಿದ್ದರು. ಆ ಬಳಿಕ ದುಷ್ಕರ್ಮಿಯೊಬ್ಬನಿಂದ ಆಡಿಯೋ ರೂಪದಲ್ಲಿ ಬೆದರಿಕೆ ಸಂದೇಶ ಬಂದಿತ್ತು. ಇದನ್ನ ಜೈಲಿನಲ್ಲಿರುವ ಕೈದಿಗಳೇ ಕಳುಹಿಸಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿತ್ತು. ಇದೀಗ ಈ ಪ್ರಕರಣದ ಹಿಂದೆ 9 ಜನ ಕೈದಿಗಳ ಕೈವಾಡ ಇರುವುದಾಗಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮೋದಿ ಮನೆ ಹೊರಗಿನ ನಾಯಿಯಂತೆ ಚುನಾವಣಾ ಆಯೋಗ ವರ್ತಿಸುತ್ತಿದೆ: ನಾಲಿಗೆ ಹರಿಬಿಟ್ಟ ಕಾಂಗ್ರೆಸ್‌ ಎಂಎಲ್‌ಸಿ

    ಜೈಲಾಧಿಕಾರಿಗಳೇ ಎತ್ತಿಕಟ್ಟಿರುವ ಆರೋಪ:
    ಮತ್ತೊಂದೆಡೆ ಅನಿತಾ ಅವರ ಬ್ಲ್ಯಾಕ್‌ಮೇಲ್ ಪ್ರಕರಣದ ಹಿಂದೆ ಜೈಲಾಧಿಕಾರಿಗಳೇ ಇದ್ದಾರೆ ಅನ್ನೋ ಆರೋಪವೂ ಕೇಳಿಬಂದಿದೆ. ಜೈಲಿನಲ್ಲಿ ಕಠಿಣ ನಿಯಮಗಳನ್ನು ಜಾರಿಗೊಳಿಸಿದ ಹಿನ್ನೆಲೆ ಅನಿತಾ ಅವರ ವಿರುದ್ಧ ಪಿತೂರಿ ನಡೆಸಲಾಗಿದೆ ಅನ್ನೋ ಆರೋಪ ಕೇಳಿಬಂದಿದೆ. ಈ ಬಗ್ಗೆಯೂ ತನಿಖೆ ನಡೆಯುತ್ತಿರುವುದಾಗಿ ಜೈಲಿನ ಉನ್ನತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಕೇಜ್ರಿವಾಲ್‌ ಮೇಲೆ ನಿಗೂಢ ದ್ರವ ಎಸೆತ – ದಾಳಿ ಹಿಂದೆ ಬಿಜೆಪಿ ಕೈವಾಡ ಎಂದು ಆರೋಪ

    ಏನಿದು ಪ್ರಕರಣ?
    ಕಲಬುರಗಿ ಸೆಂಟ್ರಲ್ ಜೈಲಿನ ಅಧೀಕ್ಷಕಿ ಅನಿತಾ ಅವರ ಕಾರನ್ನು ಸ್ಫೋಟಿಸುವುದಾಗಿ ದುಷ್ಕರ್ಮಿಯೊಬ್ಬ ಆಡಿಯೋ ಸಂದೇಶ ಕಳುಹಿಸಿದ್ದ ಪ್ರಕರಣ ಇದೇ ನವೆಂಬರ್‌ 28ರಂದು ಬೆಳಕಿಗೆ ಬಂದಿತ್ತು. ಅನಾಮದೇಯ ವ್ಯಕ್ತಿಯಿಂದ ಕಲಬುರಗಿ ನಗರದ ಪೊಲೀಸ್ ಇನ್ಸೆಪೆಕ್ಟರ್ ಮೊಬೈಲ್‍ಗೆ ಬೆದರಿಕೆ ಸಂದೇಶ ಬಂದಿತ್ತು. ಈ ಮಾಹಿತಿಯನ್ನು ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಇದರಿಂದ ಅಲರ್ಟ್ ಆದ ಅಧಿಕಾರಿಗಳು ಕಾರನ್ನು ಸಿಸಿಟಿವಿ ಇರುವೆಡೆ ಮಾತ್ರ ಪಾರ್ಕ್ ಮಾಡುವಂತೆ ಕಾರು ಚಾಲಕನಿಗೆ ಸೂಚಿಸಿದ್ದರು. ಇದನ್ನೂ ಓದಿ: ಹೈಬ್ರಿಡ್ ಮಾಡೆಲ್‌ನಲ್ಲಿ ಚಾಂಪಿಯನ್ಸ್ ಟ್ರೋಫಿಗೆ ಆಡಲು ಪಾಕಿಸ್ತಾನ ಒಪ್ಪಿಗೆ – ಆದ್ರೆ ಕಂಡೀಷನ್ ಅಪ್ಲೈ

    ಕಳೆದ ಒಂದೂವರೆ ತಿಂಗಳ ಹಿಂದೆಯಷ್ಟೆ ಕಲಬುರಗಿ ಜೈಲಿಗೆ ಅನಿತಾ ಅವರು ವರ್ಗಾವಣೆಯಾಗಿ ಬಂದಿದ್ದರು. ಜೈಲಿನಲ್ಲಿ ಚಾರ್ಜ್ ತೆಗೆದುಕೊಂಡ ದಿನವೆ ಕೈದಿಗಳ ಹೈಫೈ ಲೈಫ್ ಅನಾವರಣ ಆಗಿತ್ತು. ಇದನ್ನು ಗಂಭೀರವಾಗಿ ಅವರು ಪರಿಗಣಿಸಿದ್ದರು. ಇದಾದ ಬಳಿಕ ಕಾರಾಗೃಹ ಇಲಾಖೆ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿತ್ತು. ಜೈಲಿನಲ್ಲಿ ಬೀಡಿ, ಗುಟ್ಕಾ ಸಿಗರೇಟ್ ಬಂದ್ ಮಾಡಿದ್ದರು. ಇದರಿಂದ ಕೆರಳಿದ ಕೈದಿಗಳು ಅನೀತಾ ವಿರುದ್ಧ ಪ್ರತಿಭಟನೆ ಮಾಡಿದ್ದರು. ಇದನ್ನೂ ಓದಿ: ಫೆಂಗಲ್‌ ಅಬ್ಬರ; ಚೆನ್ನೈನ ಎಟಿಎಂ ಬಳಿ ವಿದ್ಯುತ್‌ ಪ್ರವಹಿಸಿ ವ್ಯಕ್ತಿ ಸಾವು – ಪ್ರವಾಹದ ನೀರಿನಲ್ಲಿ ತೇಲಿದ ಶವ

  • ಕಲಬುರಗಿ ಸೆಂಟ್ರಲ್ ಜೈಲ್ ಅಧೀಕ್ಷಕಿ ಕಾರು ಸ್ಫೋಟಿಸುವುದಾಗಿ ಬೆದರಿಕೆ – ದುಷ್ಕರ್ಮಿಯಿಂದ ಆಡಿಯೋ ಸಂದೇಶ

    ಕಲಬುರಗಿ ಸೆಂಟ್ರಲ್ ಜೈಲ್ ಅಧೀಕ್ಷಕಿ ಕಾರು ಸ್ಫೋಟಿಸುವುದಾಗಿ ಬೆದರಿಕೆ – ದುಷ್ಕರ್ಮಿಯಿಂದ ಆಡಿಯೋ ಸಂದೇಶ

    – ಸಿಸಿಟಿವಿ ಇರುವ ಕಡೆ ಮಾತ್ರ ಪಾರ್ಕಿಂಗ್‍ಗೆ ಸೂಚನೆ

    ಕಲಬುರಗಿ: ಇಲ್ಲಿನ ಸೆಂಟ್ರಲ್ ಜೈಲಿನ (Kalaburagi Central Jail) ಅಧೀಕ್ಷಕಿ (Jail Superintendent) ಅನಿತಾ ಅವರ ಕಾರನ್ನು ಸ್ಫೋಟಿಸುವುದಾಗಿ ದುಷ್ಕರ್ಮಿಯೊಬ್ಬ ಆಡಿಯೋ ಸಂದೇಶ ಕಳಿಸಿದ್ದಾನೆ.

    ಅನಾಮದೇಯ ವ್ಯಕ್ತಿಯಿಂದ ಕಲಬುರಗಿ ನಗರದ ಪೊಲೀಸ್ ಇನ್ಸೆಪೆಕ್ಟರ್ ಮೊಬೈಲ್‍ಗೆ ಬೆದರಿಕೆ ಸಂದೇಶ ಬಂದಿದೆ. ಈ ಮಾಹಿತಿಯನ್ನು ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಇದರಿಂದ ಅಲರ್ಟ್ ಆಗಿರುವ ಅಧಿಕಾರಿಗಳು ಕಾರನ್ನು ಸಿಸಿಟಿವಿ ಇರುವೆಡೆ ಮಾತ್ರ ಪಾರ್ಕ್ ಮಾಡುವಂತೆ ಕಾರು ಚಾಲಕನಿಗೆ ಸೂಚಿಸಿದ್ದಾರೆ.

    ಕಳೆದ ಒಂದೂವರೆ ತಿಂಗಳ ಹಿಂದೆಯಷ್ಟೆ ಕಲಬುರಗಿ ಜೈಲಿಗೆ ಅನಿತಾ ಅವರು ವರ್ಗಾವಣೆಯಾಗಿ ಬಂದಿದ್ದರು. ಜೈಲಿನಲ್ಲಿ ಚಾರ್ಜ್ ತೆಗೆದುಕೊಂಡ ದಿನವೆ ಕೈದಿಗಳ ಹೈ ಫೈ ಲೈಫ್ ಅನಾವರಣ ಆಗಿತ್ತು. ಇದನ್ನು ಗಂಭೀರವಾಗಿ ಅವರು ಪರಿಗಣಿಸಿದ್ದರು. ಇದಾದ ಬಳಿಕ ಕಾರಾಗೃಹ ಇಲಾಖೆ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿತ್ತು.

    ಜೈಲಿನಲ್ಲಿ ಬೀಡಿ, ಗುಟ್ಕಾ ಸಿಗರೇಟ್ ಬಂದ್ ಮಾಡಿದ್ದಕ್ಕೆ ಅನೀತಾ ವಿರುದ್ಧ ಕೈದಿಗಳು ಮಂಗಳವಾರ ಪ್ರತಿಭಟನೆ ಮಾಡಿದ್ದರು. ಕಟ್ಟು ನಿಟ್ಟಿನ ರೂಲ್ಸ್ ವಿರುದ್ಧ ಕೇರಳಿದ ಕೈದಿಗಳಿಂದ ಬಂದ ಬೆದರಿಕೆ ಆಡಿಯೋನಾ? ಹತ್ಯೆಗೆ ಸಂಚು ನಡೆದಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ.

  • ಕಲಬುರಗಿ ಜೈಲಿನೊಳಗೆ ಗುಟ್ಕಾ, ಬೀಡಿ, ಪಾನ್ ಮಸಾಲಾ ಸಾಗಣೆ ಯತ್ನ

    ಕಲಬುರಗಿ ಜೈಲಿನೊಳಗೆ ಗುಟ್ಕಾ, ಬೀಡಿ, ಪಾನ್ ಮಸಾಲಾ ಸಾಗಣೆ ಯತ್ನ

    – ನಿಷೇಧಿತ ವಸ್ತುಗಳಿದ್ದ ಚೆಂಡುಗಳು ಪತ್ತೆ

    ಕಲಬುರಗಿ: ಜಿಲ್ಲೆಯ ಸೆಂಟ್ರಲ್ ಜೈಲಿನ ( Kalaburagi Central Jail) ಒಳಗೋಡೆ ಬಳಿ ನಿಷೇಧಿತ ತಂಬಾಕು ವಸ್ತುಗಳು ಪತ್ತೆಯಾಗಿದ್ದು, ಈ ಕುರಿತು ಫರಹತಾಬಾದ್ ( Farhatabad) ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.

    ಜೈಲಿನ ಒಳಭಾಗದ ಗೋಡೆಗಳ ಬಳಿ ಚೆಂಡಿನ ಆಕಾರದ ಪ್ಲಾಸ್ಟಿಕ್ ಚೀಲಗಳಿಂದ ಮಾಡಿದ ಉಂಡೆಗಳು ಪತ್ತೆಯಾಗಿದ್ದು, ಈ ಉಂಡೆಗಳಲ್ಲಿ ತಂಬಾಕು, ಗುಟ್ಕಾ, ಬೀಡಿ, ಪಾನ್ ಮಸಾಲಾ ಸೇರಿದಂತೆ ನಿಷೇಧಿತ ವಸ್ತುಗಳನ್ನು ಇರಿಸಲಾಗಿತ್ತು ಎನ್ನಲಾಗಿದೆ. ಇದನ್ನೂ ಓದಿ: ಮಂಗಳೂರಲ್ಲಿ ರೈಲು ಹಳಿ ತಪ್ಪಿಸಲು ಸಂಚು? – ಹಳಿಗಳ ಮೇಲೆ ಕಲ್ಲುಗಳನ್ನಿಟ್ಟು ದುಷ್ಕರ್ಮಿಗಳು ಪರಾರಿ

    ಜೈಲಿನಲ್ಲಿರುವ ಪರಿಚಿತ ಕೈದಿಗಳಿಗೆ ತಲುಪುವಂತೆ ನಿಷೇಧಿತ ವಸ್ತುಗಳನ್ನು ಒಳಗೊಂಡ ಇಂತಹ ಚೆಂಡುಗಳನ್ನು ಕಿಡಿಗೇಡಿಗಳು ಎಸೆದು ಪರಾರಿಯಾಗುವ ರೂಢಿ ಈ ಹಿಂದಿನಿಂದಲೂ ಚಾಲ್ತಿಯಲ್ಲಿದೆ. ಇದೇ ಮೊದಲ ಬಾರಿಗೆ ಪ್ಲಾಸ್ಟಿಕ್ ಚೀಲಗಳಿಂದ ಮಾಡಿರುವ ಚೆಂಡುಗಳು ಜೈಲು ಸಿಬ್ಬಂದಿ ಕಣ್ಣಿಗೆ ಬಿದ್ದಿದೆ. ಇದನ್ನೂ ಓದಿ: ಚಿತ್ರದುರ್ಗ| ಅಡಿಕೆ ತೋಟದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರು ದುರ್ಮರಣ

    ಜೈಲು ಸಿಬ್ಬಂದಿ ಸಂಗೀತಾ ಸಂಶಯಾಸ್ಪದ ರೀತಿಯಲ್ಲಿ ಕಂಡುಬಂದ ಈ ಚೆಂಡುಗಳನ್ನು ಗಮನಿಸಿದ ಕೂಡಲೆ ಜೈಲಿನ ಅಧೀಕ್ಷಕಿ ಅನಿತಾ ಅವರ ಗಮನಕ್ಕೆ ತಂದಿದ್ದಾರೆ. ನಂತರ ಆ ಚೆಂಡಿನ ಆಕಾರದ ಉಂಡೆಗಳನ್ನು ಬಿಡಿಸಿ ನೋಡಿದಾಗ ಗುಟ್ಕಾ, ಬೀಡಿ ಹಾಗೂ ಪಾನ್ ಮಸಾಲಾ ಸೇರಿದಂತೆ ಇತರ ವಸ್ತುಗಳು ಪತ್ತೆಯಾಗುತ್ತಿದ್ದಂತೆಯೇ ತಕ್ಷಣ ಫರಹತಾಬಾದ್ ಪೊಲೀಸ್ ಠಾಣೆಗೆ ಮಾಹಿತಿ ತಲುಪಿಸಿದ್ದಾರೆ. ಇದನ್ನೂ ಓದಿ: ರಾಜಸ್ತಾನ| ಬಸ್-ರಿಕ್ಷಾ ನಡುವೆ ಭೀಕರ ಅಪಘಾತ; 8 ಮಕ್ಕಳು ಸೇರಿ 12 ಮಂದಿ ಸಾವು

    ಈಗಾಗಲೇ ಮೊಬೈಲ್ ಬಳಕೆ, ಹನಿಟ್ರ‍್ಯಾಪ್ ಹಾಗೂ ಜೈಲು ಸಿಬ್ಬಂದಿ ಮತ್ತು ಕೈದಿಗಳಿಗೆ ಕೆಲವು ಕೈದಿಗಳು ಬ್ಲ್ಯಾಕ್‌ಮೇಲ್ ಮಾಡುತ್ತಿರುವ ವಿದ್ಯಮಾನಗಳು ಇಡೀ ರಾಜ್ಯದ ಗಮನ ಸೆಳೆದ ಬೆನ್ನಲ್ಲಿಯೇ, ಕಾರಾಗೃಹ ಎಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಹಾಗೂ ಅದೇ ಕಚೇರಿಯ ಎಸ್ಪಿ ಯಶೋಧಾ ಕಲಬುರಗಿ ಜೈಲಿಗೆ ದಿಢೀರ್ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ ಜೈಲರ್‌ಗಳಾದ ಶಹನಾಜ್ ನೀಗೆವಾನ್ ಹಾಗೂ ಪರಮಾನಂದ ಅವರನ್ನು ಅಮಾನತುಗೊಳಿಸಲಾಗಿದೆ. ಹಾಗಾಗಿ, ಇದೀಗ ನಿಷೇಧಿತ ವಸ್ತುಗಳನ್ನು ಅಕ್ರಮವಾಗಿ ಜೈಲಿನೊಳಗೆ ಎಸೆಯುವ ಜಾಲದ ಕುರಿತು ಮತ್ತೊಂದು ಸುತ್ತಿನ ತನಿಖೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಗದಗ| ನೀರಿನ ಪೈಪ್‌ಲೈನ್ ದುರಸ್ತಿ ವೇಳೆ ಮಣ್ಣು ಕುಸಿದು ಕಾರ್ಮಿಕ ಸಾವು

  • ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ಹೈಫೈ ಆತಿಥ್ಯ

    ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ಹೈಫೈ ಆತಿಥ್ಯ

    ಕಲಬುರಗಿ: ಇಲ್ಲಿನ ಕೇಂದ್ರ ಕಾರಾಗೃಹದ (Kalaburagi Central Jail) ಕೈದಿಗಳು ಹೈಫೈ ಜೀವನ ನಡೆಸುತ್ತಿರುವ ಹಲವು ಫೋಟೊ ಹಾಗೂ ವಿಡಿಯೋ ತುಣುಕುಗಳು ವೈರಲ್ ಆಗಿವೆ.

    ಇಲ್ಲಿ ಹಣ ಕೊಟ್ಟರೆ ಸ್ಮಾರ್ಟ್ ಫೋನ್, ಗಾಂಜಾ ಸೇರಿದಂತೆ ಕೈದಿಗಳಿಗೆ ರಾಜ್ಯಾತಿಥ್ಯ ಸಿಗುತ್ತಿದೆ ಎಂಬ ಮಾತು ಕೇಳಿ ಬಂದಿದೆ.ಬೇರೆ ಬೇರೆ ಅಪರಾಧ ಪ್ರಕರಣಗಳಲ್ಲಿ ಜೈಲು ಸೇರಿರುವ ಆರೋಪಿಗಳಾದ ವಿಶಾಲ್, ಸಾಗರ್ ಹಾಗೂ ಸೋನು ಎಂಬ ಕೈದಿಗಳ ಹೈಫೈ ಲೈಫ್ ಅನಾವರಣಗೊಂಡಿದೆ. ಇದನ್ನೂ ಓದಿ: ಅಶೋಕ್ ಲಾಜಿಕ್ ಪ್ರಕಾರ ಸಿ.ಟಿ ರವಿ ಭಯೋತ್ಪಾದಕರಾ? – ಪ್ರಿಯಾಂಕ್ ಖರ್ಗೆ ತಿರುಗೇಟು

    ಸ್ಮಾರ್ಟ್ ಫೋನ್ ಬಳಸಿ ಸ್ನೇಹಿತರಿಗೆ ಕೈದಿಗಳ ವಿಡಿಯೋ ಕಾಲ್, ಗಾಂಜಾ ಸೇದುತ್ತಾ ಜೈಲಿನಲ್ಲಿ ಸೆಲ್ಫಿಗೆ ಪೋಸ್ ನೀಡುತ್ತಿರುವ ಕೈದಿಗಳ ವಿಡಿಯೋ ಬಹಿರಂಗವಾಗಿವೆ. ಇದನ್ನೂ ಓದಿ: Secunderabad| ಮುತ್ಯಾಲಮ್ಮ ದೇವಸ್ಥಾನದ ವಿಗ್ರಹ ಧ್ವಂಸ – ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ನಾಯಕರು ಪೊಲೀಸ್ ವಶಕ್ಕೆ

    ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನಗೆ ರಾಜಾತಿಥ್ಯ ಪ್ರಕರಣ ಹಿನ್ನೆಲೆ ದರ್ಶನ್ ಆಪ್ತ ಸಹಾಯಕ ನಾಗರಾಜ್ ಕಲಬುರಗಿ ಜೈಲಿಗೆ ಶಿಫ್ಟ್ ಆಗಿದ್ದು, ನಾಗರಾಜ್‌ಗೆ ಕಲಬುರಗಿ ಕೇಂದ್ರಿಯ ಕಾರಾಗೃಹದಲ್ಲಿ ಹೈಫೈ ರಾಜಾತಿಥ್ಯ ನೀಡಲಾಗುತ್ತಿದೆಯೇ ಎಂಬ ಪ್ರಶ್ನೆ ಮೂಡಿದೆ. ಇದನ್ನೂ ಓದಿ: ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿರುತ್ತಾರೆ ಎಂದು ಖರ್ಗೆ ಅವರಿಂದ ಹೇಳಿಸಿ ನೋಡೋಣ: ಬಿವೈವಿ ಸವಾಲ್