ಅಮರಾವತಿ: ಆಂಧ್ರಪ್ರದೇಶದ (Adhra Pradesh) ಕಾಕಿನಾಡ (Kakinada) ಜಿಲ್ಲೆಯಲ್ಲಿ ಗುರುವಾರ ದೀಪಾವಳಿ ಆಚರಣೆ ವೇಳೆ ಎರಡು ಗುಂಪುಗಳ ನಡುವಿನ ಘರ್ಷಣೆಯಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಹಳೇ ದ್ವೇಷಕ್ಕೆ ಹತ್ಯೆ ಮಾಡಿರುವುದಾಗಿ ತಿಳಿದುಬಂದಿದೆ. ಹತ್ಯೆಗೊಳಾದವರು ಈ ಹಿಂದೆ ಆರೋಪಿಗಳ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ್ದರು. ಇದರಿಂದ ಸೇಡಿಗಾಗಿ ಕಾದಿದ್ದ ಆರೋಪಿಗಳು ದೀಪಾವಳಿ ಸಂದರ್ಭದಲ್ಲಿ ಘರ್ಷಣೆಗಿಳಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ:ಸಕ್ಕರೆ ನಾಡಿಗೂ ಕಾಲಿಟ್ಟ ವಕ್ಫ್ ವಿವಾದ – ಮಂಡ್ಯದಲ್ಲಿ ದೇವಸ್ಥಾನವೇ ವಕ್ಫ್ ಆಸ್ತಿ
ಘಟನೆ ಕುರಿತು ಮಾತನಾಡಿರುವ ಹಿರಿಯ ಪೊಲೀಸ್ ಅಧಿಕಾರಿ ರಾಮಕೃಷ್ಣ ರಾವ್, ನಾವು ಘಟನೆಯನ್ನು ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದ್ದೇವೆ. ಪ್ರಾಥಮಿಕ ಸಾಕ್ಷ್ಯಗಳು ಕುಟುಂಬಗಳ ನಡುವೆ ಹಿಂದಿನ ದ್ವೇಷ ಕಾರಣ ಎಂದು ತಿಳಿಸುತ್ತದೆ. ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ:ಕನ್ನಡ, ಕನ್ನಡಿಗರನ್ನು ನಿಂದಿಸುವವರ ವಿರುದ್ಧ ಕಠಿಣ ಕ್ರಮ – ಸಿಎಂ ಎಚ್ಚರಿಕೆ
ಅಮರಾವತಿ: ಆಟೋ ರಿಕ್ಷಾಗೆ (Auto Rickshaw) ಖಾಸಗಿ ಬಸ್ (Bus) ಡಿಕ್ಕಿ ಹೊಡೆದ ಪರಿಣಾಮ 6 ಮಹಿಳೆಯರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿರುವ ಘಟನೆ ಆಂಧ್ರಪ್ರದೇಶದ (Andhra Pradesh) ಕಾಕಿನಾಡ (Kakinada) ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ತಲ್ಲರೇವು ಮಂಡಲದ ಸೀತಾರಾಮಪುರಂ ಬಳಿ ರಾಷ್ಟ್ರೀಯ ಹೆದ್ದಾರಿ 216ರಲ್ಲಿ ಅಪಘಾತ (Accident) ಸಂಭವಿಸಿದ್ದು, 6 ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರು ಹಾಗೂ ಗಾಯಾಳುಗಳು ಯಾನಂನ ನೀಲಪಲ್ಲಿಯವರಾಗಿದ್ದು, ಸೀಗಡಿ ಘಟಕದ ಉದ್ಯೋಗಿಗಳಾಗಿದ್ದರು. ಕೆಲಸ ಮುಗಿಸಿ ಮನೆಗೆ ತೆರಳುವ ವೇಳೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ರಿಯಾದ್ನಿಂದ ಹೈದರಾಬಾದ್ಗೆ ಅಕ್ರಮ ಚಿನ್ನ ಸಾಗಾಟ – 67 ಲಕ್ಷ ರೂ. ಮೌಲ್ಯದ ಚಿನ್ನ ವಶ
ನಾಲ್ವರು ಗಾಯಾಳುಗಳನ್ನು ಕಾಕಿನಾಡ ಸರ್ಕಾರಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಅಲ್ಲದೇ ಅಪಘಾತ ಹೇಗೆ ಸಂಭವಿಸಿತು ಎಂಬುದರ ಬಗ್ಗೆ ಪತ್ತೆ ಹಚ್ಚುತ್ತೇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಒಂದು ಧಾರ್ಮಿಕ ಪೋಸ್ಟ್ಗೆ ನಡೀತು ಭಾರೀ ಘರ್ಷಣೆ – 1 ಸಾವು, 8 ಮಂದಿಗೆ ಗಾಯ