Tag: kajjaya

  • ಮೋಸ್ಟ್ ಫೇವರೇಟ್ ಸಿಹಿ ತಿಂಡಿ ಕಜ್ಜಾಯ ಮಾಡಿ

    ಮೋಸ್ಟ್ ಫೇವರೇಟ್ ಸಿಹಿ ತಿಂಡಿ ಕಜ್ಜಾಯ ಮಾಡಿ

    ಕ್ಷಿಣ ಭಾರತದ ಜನಪ್ರಿಯ ಸಿಹಿ ತಿಂಡಿಗಳಲ್ಲಿ ಕಜ್ಜಾಯ. ಇದನ್ನು ಜನರು ತಿನ್ನಲು ಎಷ್ಟ ಇಷ್ಟಪಡುವತ್ತಾರೋ ಅಷ್ಟೇ ಮಾಡಲು ಕಷ್ಟ ಪಡುತ್ತಾರೆ. ಏಕೆಂದರೆ ಕಜ್ಜಾಯದ ಪಾಕವಿಧಾನ ಅಷ್ಟು ಸುಲಭವಾಗಿಲ್ಲ. ಆದರೆ ಅಡುಗೆ ಪ್ರಿಯರಿಗೆ ಕಜ್ಜಾಯ ಮಾಡುವುದು ಎಂದರೆ ಹಬ್ಬ. ನೀವು ಒಮ್ಮೆ ಟ್ರೈ ಮಾಡಿ. ಈ ಪಾಕವನ್ನು 2 ತಿಂಗಳ ಕಾಲ ಇಟ್ಟುಕೊಳ್ಳಬಹುದು.

    ಬೇಕಾಗಿರುವ ಪದಾರ್ಥಗಳು:
    * ಅಕ್ಕಿ – 1 ಕಪ್
    * ಬಿಳಿ ಎಳ್ಳು – 1 ಟೀಸ್ಪೂನ್
    * ಗಸಗಸೆ -1 ಟೀಸ್ಪೂನ್
    * ಬೆಲ್ಲ – 2 ಅಚ್ಚು
    * ನೀರು – ¼ ಕಪ್
    * ಏಲಕ್ಕಿ ಪುಡಿ – ¼ ಟೀಸ್ಪೂನ್
    * ಕರಿ ಮೆಣಸು ಪುಡಿ – ¼ ಟೀಸ್ಪೂನ್
    * ತುಪ್ಪ, ಆಳವಾಗಿ ಹುರಿಯಲು

    ಮಾಡುವ ವಿಧಾನ:
    * ಮೊದಲನೆಯದಾಗಿ, 1 ಕಪ್ ಅಕ್ಕಿಯನ್ನು 4 ಗಂಟೆಗಳ ಕಾಲ ನೆನೆಸಿ. ನಂತರ ನೀರನ್ನು ಪೂರ್ತಿಯಾಗಿ ತೆಗೆದು, ಒಣ ಬಟ್ಟೆಯ ಮೇಲೆ ಹರಡಿ. 30 ನಿಮಿಷಗಳ ಕಾಲ ಒಣಗಿಸಲು ಬಿಡಿ.
    * ಅಕ್ಕಿ ಇನ್ನೂ ತೇವವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ, ಸಂಪೂರ್ಣವಾಗಿ ಒಣಗಲು ಬಿಡಬೇಡಿ.
    * ಈಗ ಅಕ್ಕಿಯನ್ನು ಮಿಕ್ಸಿಗೆ ವರ್ಗಾಯಿಸಿ ಪುಡಿ ಮಾಡಿಕೊಳ್ಳಿ. ಅಕ್ಕಿ ಹಿಟ್ಟನ್ನು ಜರಡಿಯಾಡಿ.
    * ತವಾವನ್ನು ಬಿಸಿ ಮಾಡಿಕೊಂಡು ಅದಕ್ಕೆ ಎಳ್ಳು ಮತ್ತು 1 ಟೀಸ್ಪೂನ್ ಗಸಗಸೆ ರೋಸ್ಟ್ ಮಾಡಿ. ಪರಿಮಳ ಬರುವವರೆಗೆ ಹುರಿಯಿರಿ. ನಂತರ ಪಕ್ಕಕ್ಕೆ ಇರಿಸಿ.

    * ನಂತರ, ದೊಡ್ಡ ಪಾತ್ರೆಗೆ ನೀರು ಬೆರೆಸಿ ಬೆಲ್ಲವನ್ನು ಹಾಕಿ. ಬೆಲ್ಲ ಕರಗುವ ತನಕ ಚೆನ್ನಾಗಿ ಬೇಯಿಸಿ. ಬೆಲ್ಲದ ಸಿರಪ್ ಅನ್ನು ಕಡಿಮೆ ಉರಿಯಲ್ಲಿ 5 ನಿಮಿಷಗಳ ಕಾಲ ಕುದಿಸಿ.
    * ಬೆಲ್ಲದ ಸಿರಪ್‍ಗೆ ಅಕ್ಕಿ ಹಿಟ್ಟನ್ನು ಗಂಟಾಗದಂತೆ ಮಿಶ್ರಣ ಮಾಡಿ. ಹುರಿದ ಗಸಗಸೆ ಮತ್ತು ಎಳ್ಳು ಕೂಡ ಸೇರಿಸಿ.
    * ಇದಲ್ಲದೆ ¼ ಟೀಸ್ಪೂನ್ ಏಲಕ್ಕಿ ಪುಡಿ ಮತ್ತು ಳಿ ಟೀಸ್ಪೂನ್ ಕರಿ ಮೆಣಸಿನ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಎಲ್ಲವನ್ನೂ ಚೆನ್ನಾಗಿ ಸಂಯೋಜಿಸಲಾಗಿದೆಯಾ ಎಂದು ಖಚಿತಪಡಿಸಿಕೊಳ್ಳಿ.
    * ಮಿಶ್ರಣವನ್ನು ಗಾಜಿನ ಬಟ್ಟಲಿಗೆ ವರ್ಗಾಯಿಸಿ. ಈ ಮಿಶ್ರಣ ಒಣಗದಂತೆ ನೊಡಿಕೊಳ್ಳುವುದಕ್ಕೆ ಎಣ್ಣೆ ಅಥವಾ ತುಪ್ಪದೊಂದಿಗೆ ಮಿಕ್ಸ್ ಮಾಡಿ 12 ಗಂಟೆ ಕಾಲ ಮುಚ್ಚಿಡಿ.

    ಫ್ರೈ ಮಾಡುವುದು ಹೇಗೆ?
    * 12 ಗಂಟೆಗಳ ನಂತರ, ಮೃದುವಾದ ಹಿಟ್ಟಿಗೆ ಬಾಳೆಹಣ್ಣನ್ನು ಬೆರೆಸಿ ಒಂದು ಟೇಬಲ್‍ಸ್ಪೂನ್ ಅಕ್ಕಿ ಹಿಟ್ಟನ್ನು ಸೇರಿಸಿ ಮೃದುವಾದ ಹಿಟ್ಟನ್ನು ತಯಾರಿಸಿ.
    * ಮಿಶ್ರಣವನ್ನು ಉದ್ದಿನ ವಡ್ಡೆಯಂತೆ ಒತ್ತಿ ಚಪ್ಪಟೆ ಮಾಡಿ
    * ರಸವನ್ನು ಬೇರ್ಪಡಿಸದೆ ನಿಧಾನವಾಗಿ ತೆಗೆಯಿರಿ.
    * ಈ ಮಿಶ್ರಣವನ್ನು ಮಧ್ಯಮ ಉರಿಯಲ್ಲಿ ಎರಡೂ ಬದಿಗಳಲ್ಲಿ ಡೀಪ್ ಫ್ರೈ ಮಾಡಿ.

    ಗಾಳಿಯಾಡದ ಡಬ್ಬದಲ್ಲಿ ಕಜ್ಜಾಯವನ್ನು ಸಂಗ್ರಹಿಸುವುದರಿಂದ ಈ ಮಿಶ್ರಣವನ್ನು 2 ವಾರಗಳ ಕಾಲ ಇಟ್ಟುಕೊಳ್ಳಬಹುದು.

  • ದೀಪಾವಳಿ ಸ್ಪೆಷಲ್ ಕಳಪೆ ಕಜ್ಜಾಯ ಪಬ್ಲಿಕ್ ಟಿವಿ ಸ್ಟಿಂಗ್‍ನಲ್ಲಿ ಬಯಲು

    ದೀಪಾವಳಿ ಸ್ಪೆಷಲ್ ಕಳಪೆ ಕಜ್ಜಾಯ ಪಬ್ಲಿಕ್ ಟಿವಿ ಸ್ಟಿಂಗ್‍ನಲ್ಲಿ ಬಯಲು

    ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿ ಎಲ್ಲೆಡೆ ಹೊಸ ಸಡಗರ ತುಂಬಿಸಿದೆ. ಒಂದೆಡೆ ಪಟಾಕಿ ಕೊಳ್ಳುವವರೇ ಮುಗ್ಗಿಬಿದ್ದಿದ್ರೆ, ಮತ್ತೊಂದೆಡೆ ಸಿಹಿ ತಿನಿಸುಗಳು ಅದ್ರಲ್ಲೂ ಕಜ್ಜಾಯ ಖರೀದಿಯತ್ತ ಮತ್ತಷ್ಟು ಜನ ಬ್ಯುಸಿಯಾಗಿದ್ದಾರೆ.

    ದೀಪ ಹಚ್ಚುವ ಹಬ್ಬ ದೀಪಾವಳಿ ಕಾರ್ತಿಕ ಮಾಸದಲ್ಲೂ ಅದ್ಧೂರಿಯಾಗಿ ಆಚರಿಸುವ ಹಬ್ಬವಾಗಿದೆ. ಈ ಹಬ್ಬದಲ್ಲಿ ಮಿಸ್ ಮಾಡದೇ ಕಜ್ಜಾಯದ ರುಚಿ ನೋಡುತ್ತಾರೆ. ಹಾಗಾದ್ರೆ ಸಮಯ ಇಲ್ಲ ಅಂತ ಅಂಗಡಿಗಳಲ್ಲಿ ಕಜ್ಜಾಯ ಖರೀದಿ ಮಾಡುವವರು ಅದನ್ನು ತಯಾರಿ ಮಾಡುವ ವಿಧಾನವನ್ನು ಒಮ್ಮೆ ನೋಡಲೇಬೇಕಿದೆ.

    ಬೆಂಗಳೂರಿನ ಮಾಗಡಿರಸ್ತೆಯಲ್ಲಿರುವ ನೇತಾಜಿ ರಸ್ತೆಯ ಮನೆ ಮನೆಗಳಲ್ಲೂ ಕಜ್ಜಾಯ ಮಾಡುತ್ತಾರೆ. ಆದರೆ ಅವರು ಅಲ್ಲೇ ತಟ್ಟಿ, ಅಲ್ಲೇ ಬೇಯಿಸುತ್ತಾರೆ. ಕಜ್ಜಾಯದ ಪಾಕವನ್ನ ದಾಟಿಯೇ ಹೋಗುತ್ತಾರೆ. ಈ ವೇಳೆ ಕಾಲಿನ ಕಸ ಬಿದ್ದರೂ ಅಚ್ಚರಿ ಇಲ್ಲ. ಒಂದು ಬೌಲ್‍ಲ್ಲಿ ನೀರು ಇಟ್ಟು ಕೈ ಉಜ್ಜುತ್ತಾರೆ, ಅಡುಗೆ ಮಾಡುತ್ತಾರೆ. ಹೀಗೆ ನಿಮ್ಮ ಸಿಹಿಯಾದ ಕಜ್ಜಾಯ ಸಿದ್ಧವಾಗುತ್ತದೆ. ಇದನ್ನೂ ಓದಿ: ಹಬ್ಬಕ್ಕೆ ಮನೆಯಲ್ಲೇ ಮಾಡಿ ತಿನ್ನಿ  ಬಿಸಿಬಿಸಿ ಸಿಹಿ ಕಜ್ಜಾಯ 

    ವ್ಯಾಪಾರಿ – 48 ರೂ. ರೇಟು ಇದು, ನಮ್ ರೇಟು 30 ರೂ ನೀವು 2 ರೂ. ಗೆ ಮಾರಬೇಕು
    ಪ್ರತಿನಿಧಿ – ನೋಡು ಬಾವಾ, ಎಷ್ಟಕ್ಕೆ ಮಾರಬೇಕು
    ವ್ಯಾಪಾರಿ – ಒಂದ್ ಪೀಸು 2 ರೂಪಾಯಿ.. 48 ರೂ. ಗೆ ಐಟಂ ಇರುತ್ತೆ. ನಿಮಗೆ 18 ರೂ. ಸಿಗುತ್ತದೆ
    ಪ್ರತಿನಿಧಿ – 2,4,6,8 ಪೀಸು ಓ 24 ಪೀಸ್ ಇರುತ್ತದೆ
    ವ್ಯಾಪಾರಿ – ಫುಲ್ ನೀವೇ ಮಾರುತ್ತೀರಾ..?
    ಪ್ರತಿನಿಧಿ – ಒಂದ್ ಸಲ ಫೋಟೋ ಹಾಕಿದ್ರೆ ನೋಡ್ತಾರೇನೋ

    ಕಜ್ಜಾಯ ಕುಟ್ಟಿದ ಅಕ್ಕಿ ಹಿಟ್ಟಿನಿಂದ ತಯಾರು ಮಾಡುವುದು ಎಂದು ಅಂದುಕೊಂಡಿದ್ದೀರಾ. ಇಲ್ಲ ಅದೆಲ್ಲ ಬೇರೆ ಬಳಸುತ್ತಾರೆ ಅನ್ನೊ ಸತ್ಯವನ್ನ ಸ್ವತಃ ಅವೆನ್ಯೂ ರಸ್ತೆಯ ವ್ಯಾಪಾರಿಯೇ ಬಿಚ್ಚಿಟ್ಟಿದ್ದಾರೆ.

    ಪ್ರತಿನಿಧಿ – ನೋಡಿ ಮೇಡಂ
    ವ್ಯಾಪಾರಿ – ಕಡಿಮೆ ಕೊಡ್ತಾರೆ ಅಂದ್ರೆ ಕ್ವಾಲಿಟಿ ಇರಲ್ಲ
    ಪ್ರತಿನಿಧಿ – ಹು
    ವ್ಯಾಪಾರಿ – ಕಜ್ಜಾಯ ಮಾಡಲು ಅಕ್ಕಿ ಕುಟ್ಟಿ ಮಾಡ್ಬೇಕು, ಆದ್ರೆ, ಮೈದಾ ಮಿಕ್ಸ್ ಮಾಡ್ತಾರೆ, ನೀವ್ ರೇಟು ಕಡಿಮೆ ಕೇಳ್ತಿರಾ ಅದರ ಬಂಡವಾಳ ಮಾತ್ರ ನಿಮಗೆ ಗೊತ್ತಾಗಲ್ಲ
    ಪ್ರತಿನಿಧಿ – ಎಷ್ಟು ದಿನ ಇಟ್ಟು ಬೇಕಾದ್ರೂ ಮಾರಬಹುದಲ್ವ
    ವ್ಯಾಪಾರಿ – ಒಂದ್ ತಿಂಗಳು ಬೇಕಾದರೂ ಇಡಿ, ಆಮೇಲೂ ಇರುತ್ತೆ

    ಅಂಗಡಿ:
    ಪ್ರತಿನಿಧಿ – ಎಷ್ಟು
    ವ್ಯಾಪಾರಿ – 800 ರೂ. ಆಗುತ್ತೆ
    ಪ್ರತಿನಿಧಿ – ಹೋಲ್‍ಸೆಲ್ ಬೇಕು
    ವ್ಯಾಪಾರಿ – ನೋಡಿ 800 ರೂ. ಆಗುತ್ತೆ ಮೇಡಂ
    ಪ್ರತಿನಿಧಿ – ಜಾಸ್ತಿ ಎಣ್ಣೆ ಎಣ್ಣೆ ತರಹ ಆಗಿದೆ
    ವ್ಯಾಪಾರಿ – ಇಲ್ಲ ಮೇಡಂ ಅದು ಪ್ಲಾಸ್ಟಿಕ್‍ಗೆ ಬಿಟ್ಟಿದೆ ಅಷ್ಟೇ
    ಪ್ರತಿನಿಧಿ – ಮೈದಾ, ಗೀದಾ ಎಲ್ಲ ಬಳಸಲ್ವ
    ವ್ಯಾಪಾರಿ – ಇಲ್ಲ ಮೇಡಂ ಒಂದ್ ಪೀಸ್ ಕೊಡ್ತಿನಿ ತಿಂದು ನೋಡಿ ಇದು ವ್ಯಾಪಾರ ಸಮಾಧಾನವಿದ್ರೆ ಮಾತ್ರ ತಗೊಳ್ಳಿ
    ಪ್ರತಿನಿಧಿ – ಲಾಸ್ಟ್ ಎಷ್ಟು ಸರ್ ಇದು
    ವ್ಯಾಪಾರಿ – 8 ರೂ. ಕಡಿಮೆ ಇರಲ್ಲ, ಕ್ವಾಲಿಟಿ ಚೆನ್ನಾಗಿದೆ..

    ಪ್ರತಿನಿಧಿ – ಇದು ಕಡಿಮೆನಾ ಸರ್
    ವ್ಯಾಪಾರಿ – ಇದು ಬೇಕಾದ್ರೆ 6 ರೂ. ಕೊಡ್ತಿನಿ
    ಪ್ರತಿನಿಧಿ – ಯಾಕೆ
    ವ್ಯಾಪಾರಿ – ಇದಕ್ಕೆ ಎಳ್ಳು, ಗಸಗಸೆ ಹಾಕಿರ್ತಾರೆ ಅದಕ್ಕೆ ಜಾಸ್ತಿ

    ಕೆ.ಆರ್ ಮಾರುಕಟ್ಟೆಯಲ್ಲಿ ಟ್ರೆಂಡ್ ಗೆ ತಕ್ಕ ಹಾಗೇ ವ್ಯಾಪಾರ ಮಾಡುತ್ತಾರೆ. ಮಾರುಕಟ್ಟೆ ಮುಂಭಾಗ ತಮಿಳುನಾಡಿನಿಂದ ಕಜ್ಜಾಯ ತಂದು ಮಾರುತ್ತಾ ಇದ್ದಾರಂತೆ. ಅಲ್ಲಿಗೆ ರಸ್ತೆಯ ಸುತ್ತಲಿನ ಧೂಳು, ತಮಿಳುನಾಡಿನಿಂದ ಬೆಂಗಳೂರು ಬರುವಾಗ ಕಜ್ಜಾಯ ಅಧೋಗತಿ.

    ಫುಟ್ ಪಾತ್:
    ಪ್ರತಿನಿಧಿ – ಎಷ್ಟಿದು
    ವ್ಯಾಪಾರಿ – ಒಂದಕ್ಕೆ 5 ರೂ.
    ಪ್ರತಿನಿಧಿ – ಎಲ್ಲಿ ಮಾಡೋದು
    ವ್ಯಾಪಾರಿ – ಊರಲ್ಲಿ ತಮಿಳುನಾಡಲೇ

    ಪ್ರತಿನಿಧಿ – ಸ್ವಲ್ಪ ಜಾಸ್ತಿ ಬೇಕು
    ವ್ಯಾಪಾರಿ – ಹೋಲ್‍ಸೆಲ್ ಅಂಗಡಿಗೆ ಬೇಕು
    ಪ್ರತಿನಿಧಿ – ಜಾಸ್ತಿ ತಗೊಂಡ್ರು ಕಡಿಮೆ ಕೊಡಲ್ವ
    ವ್ಯಾಪಾರಿ – ಇಲ್ಲ ಆಗಲ್ಲ

    ಈ ಸಿಹಿ ತಿನ್ನಿಸುಗಳನ್ನ ತಿಂದ್ರೆ ಸ್ವಚ್ಛತೆ ಅಭಾವದಿಂದ ಆರೊಗ್ಯದಲ್ಲಿ ಬಹಳಷ್ಟು ಏರುಪೇರಾಗಲಿದೆ.. ಈ ಪ್ರಕಾರ ವಾಂತಿ – ಬೇಧಿ, ಜ್ವರ ಹೀಗೆ ಹಲವು ಸಮಸ್ಯೆಗಳು ಕಾಡಲಿದೆ. ಒಟ್ಟಿನಲ್ಲಿ ಮನೆಯಲ್ಲಿ ಸಿಹಿ ತಿನ್ನಿಸು ಕಜ್ಜಾಯ ಮಾಡುವ ತ್ರಾಸು ತಪ್ಪಿಸಿಕೊಂಡರೆ ಹೀಗೆ ತಯಾರು ಮಾಡಿರುವುದನ್ನು ತಿನ್ನಬೇಕಾಗುತ್ತದೆ.

  • ಹಬ್ಬಕ್ಕೆ ಬಿಸಿಬಿಸಿ ಸಿಹಿ ಕಜ್ಜಾಯ ಮಾಡೋ ವಿಧಾನ

    ಹಬ್ಬಕ್ಕೆ ಬಿಸಿಬಿಸಿ ಸಿಹಿ ಕಜ್ಜಾಯ ಮಾಡೋ ವಿಧಾನ

    ನಾಳೆಯಿಂದ ದೀಪಾವಳಿ ಹಬ್ಬ ಆಚರಿಸಲಾಗುತ್ತದೆ. ಹೀಗಾಗಿ ಮನೆಯಲ್ಲಿ ಹಬ್ಬವನ್ನು ಯಾವ ರೀತಿ ಆಚರಣೆ ಮಾಡಬೇಕು ಎಂಬುದರ ಜೊತೆ ಯಾವ ಸಿಹಿತಿನಿಸು ಮಾಡುವುದು ಎಂದು ಸಾಮಾನ್ಯವಾಗಿ ಹೆಂಗಸರು ತಲೆಕೆಡಿಸಿಕೊಂಡಿರುತ್ತಾರೆ. ಅವರಿಗಾಗಿ ಇಲ್ಲಿ ಸುಲಭ ಹಾಗೂ ಅತೀ ಬೇಗನೆ ಬಿಸಿ ಬಿಸಿ ಸಿಹಿ ಕಜ್ಜಾಯ ಮಾಡುವ ವಿಧಾನವನ್ನು ತಿಳಿಸಲಾಗಿದೆ.

    ಬೇಕಾಗುವ ಸಾಮಾಗ್ರಿಗಳು:
    1. ಅಕ್ಕಿ – ಒಂದೂವರೆ ಕಪ್
    2. ಬೆಲ್ಲ – 1 ಕಪ್
    3. ಎಳ್ಳು – 2 ಚಮಚ
    4. ಗಸಗಸೆ – 1 ಚಮಚ
    5. ಏಲಕ್ಕಿ – 2 ಚಮಚ
    6. ಎಣ್ಣೆ – ಕರಿಯಲು

    ಮಾಡುವ ವಿಧಾನ
    * ಮೊದಲು ಅಕ್ಕಿಯನ್ನು ಎರಡು ಗಂಟೆ ನೀರಿನಲ್ಲಿ ನೆನೆಸಿಡಿ.
    * ನಂತರ ನೀರು ಬಸಿದು ಅಕ್ಕಿ ತೆಗೆದು ಒಣಗಿಸಿ, ಒಣಗಿದ ಅಕ್ಕಿಯನ್ನು ಪುಡಿ ಮಾಡಿಕೊಳ್ಳಿ.
    * ಈಗ ಒಲೆ ಮೇಲೆ ಬಾಣಲೆ ಇಟ್ಟು, ಅರ್ಧ ಕಪ್ ನೀರು ಮತ್ತು ಬೆಲ್ಲ ಹಾಕಿ, ಪಾಕ ಬರುವವರೆಗೂ ಕುದಿಸಿ.
    * ನಂತರ ಒಲೆ ಉರಿಯನ್ನು ಕಡಿಮೆ ಮಾಡಿ, ಅದಕ್ಕೆ ಅಕ್ಕಿ ಪುಡಿ, ಎಳ್ಳು, ಗಸಗಸೆ, ಏಲಕ್ಕಿ ಮಿಕ್ಸ್ ಮಾಡಿ.
    * ಗಂಟು ಬಾರದ ರೀತಿಯಲ್ಲಿ ಸ್ವಲ್ಪ ಗಟ್ಟಿಯಾಗುವರೆಗೂ ಮಿಕ್ಸ್ ಮಾಡಿ, ನಂತರ ಒಲೆಯಿಂದ ಕೆಳಗಿಳಿಸಿ.


    * ಈಗ ಕರಿಯಲು ಎಣ್ಣೆ ಬಿಸಿಗಿಡಿ.
    * ಸಿದ್ಧ ಮಾಡಿದ ಹಿಟ್ಟನ್ನು ಸ್ವಲ್ಪ ತೆಗೆದು ಒಂದು ಪ್ಲೇಟ್ ನಲ್ಲಿ ಸಣ್ಣದಾಗಿ ಒಬ್ಬಟ್ಟಿನ ರೀತಿಯಲ್ಲಿ ತಟ್ಟಿಕೊಳ್ಳಿ.
    * ಈಗ ತಟ್ಟಿದ ಹಿಟ್ಟನ್ನು ಕಾದ ಎಣ್ಣೆಗೆ ಹಾಕಿ ಕಂದು ಬಣ್ಣ ಬರುವವರೆಗೂ ಕರಿದರೆ, ಬಿಸಿಬಿಸಿ ಕಜ್ಜಾಯ ತಯಾರಾಗುತ್ತದೆ.

  • ಕುದಿಯುತ್ತಿರುವ ಎಣ್ಣೆಯಿಂದ ಕಜ್ಜಾಯವನ್ನ ಬರಿಗೈಯಲ್ಲಿ ತೆಗೆದ ಅರ್ಚಕ!

    ಕುದಿಯುತ್ತಿರುವ ಎಣ್ಣೆಯಿಂದ ಕಜ್ಜಾಯವನ್ನ ಬರಿಗೈಯಲ್ಲಿ ತೆಗೆದ ಅರ್ಚಕ!

    ಚಾಮರಾಜನಗರ: ಅರ್ಚಕರೊಬ್ಬರು ಕುದಿಯುತ್ತಿರುವ ಎಣ್ಣೆಯಲ್ಲಿ ಬೇಯುತ್ತಿರುವ ಕಜ್ಜಾಯವನ್ನು ಬರಿಗೈಯಲ್ಲಿ ತೆಗೆದಿದ್ದಾರೆ.

    ಈ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲ ತಾಲೂಕಿನ ಲೊಕ್ಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಅರ್ಚಕ ಕುದಿಯುತ್ತಿರುವ ಎಣ್ಣೆಯಲ್ಲಿ ಬೇಯುತ್ತಿರುವ ಕಜ್ಜಾಯವನ್ನು ಬರಿಗೈಯಲ್ಲಿ ತೆಗೆದು ಪ್ರಸಾದ ಎಂದು ಹೇಳಿ ಭಕ್ತರಿಗೆ ನೀಡುತ್ತಾರೆ.

    ಪ್ರತಿ ವರ್ಷ ಕಾರ್ತಿಕ ಮಾಸದ ಕೊನೆಯ ಸೋಮವಾರದಂದು ಈ ಆಚರಣೆ ನಡೆಯುತ್ತಿದ್ದು, ಇಂದು ಮುಂಜಾನೆ ಕೂಡ ನಡೆದಿದೆ.

    ಸಿದ್ದಪ್ಪಾಜಿಯ ಈ ಆಚರಣೆಯನ್ನು ಎಲ್ಲಾ ಧರ್ಮದವರು ಸೇರಿ ಆಚರಿಸುತ್ತಾರೆ. ಕಂಡಾಯ ಹೊತ್ತ ಅರ್ಚಕನಿಂದ ನಡೆದಿದ್ದು, ಇದನ್ನು ವೀಕ್ಷಿಸಲು ಸಾವಿರಾರು ಭಕ್ತರು ಆಗಮಿಸುತ್ತಾರೆ. ಸಿದ್ದಪ್ಪಾಜಿ ಮೆರವಣಿಗೆ ರಾತ್ರಿ ಇಡೀ ಗ್ರಾಮದಲ್ಲಿ ನಡೆಯಲಿದೆ.

  • ಕಜ್ಜಾಯ ಮಾಡೋಕೆ ಇಲ್ಲಿದೆ ಸಿಂಪಲ್ ವಿಧಾನ

    ಕಜ್ಜಾಯ ಮಾಡೋಕೆ ಇಲ್ಲಿದೆ ಸಿಂಪಲ್ ವಿಧಾನ

    ಕಜ್ಜಾಯ ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಆದ್ರೆ ಅದನ್ನ ಮಾಡೋಕೆ ಮಾತ್ರ ಕಷ್ಟ, ಮಾಡಿದ್ರೂ ಸರಿಯಾಗಿ ಪಾಕ ಬರಬೇಕು ಅಂತೆಲ್ಲಾ ಯೋಚಿಸ್ತಿದ್ರಾ? ಹಾಗಿದ್ರೆ ಇಲ್ಲಿದೆ ನೋಡಿ ಕಜ್ಜಾಯ ಮಾಡೋಕೆ ಸಿಂಪಲ್ ವಿಧಾನ

    ಬೇಕಾಗುವ ಸಾಮಾಗ್ರಿಗಳು:
    * ಅಕ್ಕಿ – ಒಂದುವರೆ ಕಪ್
    * ಬೆಲ್ಲ- 1 ಕಪ್
    * ತುಪ್ಪ ಅಥವಾ ಎಣ್ಣೆ- 4-5 ಚಮಚ
    * ಎಳ್ಳು- 2 ಚಮಚ
    * ಗಸಗಸೆ- 1 ಚಮಚ
    * ಏಲಕ್ಕಿ- 2 ಚಮಚ
    * ಎಣ್ಣೆ- ಕರಿಯಲು

    ಮಾಡುವ ವಿಧಾನ:
    * ಅಕ್ಕಿಯನ್ನು 2 ಗಂಟೆ ನೀರಿನಲ್ಲಿ ನೆನೆಸಿಡಿ.
    * ನಂತರ ನೀರು ಬಸಿದು ಅಕ್ಕಿ ತೆಗೆದು ಒಣಗಿಸಿಕೊಳ್ಳಿ.
    * ಒಣಗಿದ ಅಕ್ಕಿಯನ್ನು ಪುಡಿ ಮಾಡಿಕೊಂಡು, ಅದನ್ನು ಜಲಾರಿ ಮಾಡಿ ಗಂಟು, ಕಸವನ್ನು ತೆಗೆಯಿರಿ.
    * ಒಲೆ ಮೇಲೆ ಬಾಣಲೆ ಇಟ್ಟು ಅರ್ಧ ಕಪ್ ನೀರು ಮತ್ತು ಬೆಲ್ಲ ಹಾಕಿ.
    * ಬೆಲ್ಲ ನಜ್ಜುಗುಜ್ಜು ಮಾಡಿ ಪಾಕ ಬರುವವರೆಗೂ ಕುದಿಸಿ.
    * ಒಲೆಯ ಉರಿ ಕಡಿಮೆ ಮಾಡಿ ಪುಡಿ ಮಾಡಿದ ಅಕ್ಕಿಯನ್ನು ಹಾಕಿ.
    * ಎಳ್ಳು, ಗಸಗಸೆ, ಏಲಕ್ಕಿ ಹಾಕಿ ಮಿಕ್ಸ್ ಮಾಡಿ.
    * ಗಂಟು ಬಾರದ ರೀತಿಯಲ್ಲಿ ಸ್ಪಲ್ವ ಗಟ್ಟಿಯಾಗುವರೆಗೂ ಮಿಕ್ಸ್ ಮಾಡಿ, ಒಲೆಯಿಂದ ಕೆಳಗಿಳಿಸಿ.
    * ನಂತರ ಬೇರೆ ಬಾಣಲಿಗೆ ಎಣ್ಣೆ ಹಾಕಿ ಕಾಯಲು ಇಡಿ.
    * ಸಿದ್ದ ಮಾಡಿದ ಹಿಟ್ಟನ್ನು ಸ್ವಲ್ಪ ತೆಗೆದು ಒಂದು ಪ್ಲೇಟ್‍ನಲ್ಲಿ ಸಣ್ಣದಾಗಿ ಒಬ್ಬಟ್ಟಿನ ರೀತಿಯಲ್ಲಿ ತಟ್ಟಿಕೊಳ್ಳಿ.
    * ನಂತರ ಅದನ್ನು ಕಾದ ಎಣ್ಣೆಗೆ ಹಾಕಿ ಕಂದು ಬಣ್ಣ ಬರುವವರೆಗೂ ಕರಿಯಿರಿ.

    (ಗಮನಿಸಿ: ಬೇಕಾದಲ್ಲಿ ಅಕ್ಕಿ ಹಿಟ್ಟಿನೊಂದಿಗೆ ಚುಕ್ಕಿಬಾಳೇಹಣ್ಣನ್ನು ಕಲಸಿಕೊಳ್ಳಬಹುದು)