Tag: Kajal Aggarwal

  • ವಿಭಿನ್ನವಾಗಿ ರಕ್ಷಾ ಬಂಧನ ಆಚರಿಸಿದ ಸೆಲೆಬ್ರಿಟಿಗಳು

    ವಿಭಿನ್ನವಾಗಿ ರಕ್ಷಾ ಬಂಧನ ಆಚರಿಸಿದ ಸೆಲೆಬ್ರಿಟಿಗಳು

    ಬೆಂಗಳೂರು: ಅಣ್ಣ-ತಂಗಿಯರ ಬಾಂಧವ್ಯ ಬೆಸೆಯುವ ಹಬ್ಬ ರಕ್ಷಾ ಬಂಧನ ಸಹೋದರ-ಸಹೋದರಿಯ ಪ್ರೀತಿಯ ಪ್ರತೀಕವೇ ರಕ್ಷಾ ಬಂಧನ ಹಬ್ಬದ ವಿಶೇಷ. ರಕ್ಷಾ ಬಂಧನ ಹಬ್ಬದ ಸಂದರ್ಭದಲ್ಲಿ ಸಹೋದರಿಯರು ತನ್ನ ಸಹೋದರರಿಗೆ ಪ್ರೀತಿಯ ಶ್ರೀರಕ್ಷೆಯನ್ನು ಕಟ್ಟುವುದು ಸಂಪ್ರದಾಯವಾಗಿದೆ. ಆದರೆ ರಕ್ಷಾ ಬಂಧನ ಹಬ್ಬವನ್ನು ಕೆಲ ತಾರೆಯರು ವಿಶಿಷ್ಟವಾಗಿ ಆಚರಿಸಿದ್ದಾರೆ.

    ರಕ್ಷಾ ಬಂಧನ ಹಬ್ಬದ ಪ್ರಯುಕ್ತ ನಟಿ ಸುಧಾರಾಣಿ ಪುತ್ರಿ ನಿಧಿ ತಮ್ಮ ಮುದ್ದಿನ ಶ್ವಾನಗಳಿಗೆ ಆರತಿ ಮಾಡಿ, ತಿಲಕ ಇಟ್ಟು, ರಾಖಿ ಕಟ್ಟಿದ್ದಾರೆ. ಈ ವೀಡಿಯೋವನ್ನು ನಟಿ ಸುಧಾರಾಣಿ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋವನ್ನು ನೋಡಿದ ನೆಟ್ಟಿಗರು ವಾವ್ ಕ್ಯೂಟ್ ಎಂದು ಕಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ:  ಕೆಜಿಎಫ್‍ನಲ್ಲಿ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡರೂ ಅದು ದೊಡ್ಡದೇ – ವಸಿಷ್ಠ ಸಿಂಹ

     

    View this post on Instagram

     

    A post shared by Sudharani (@sudharanigovardhan)

    ತಮ್ಮ ಸಹೋದರಿಯಿಂದ ರಾಖಿ ಕಟ್ಟಿಸಿಕೊಂಡು ನಟಿ ತಾಪ್ಸಿ ಪಣ್ಣು ರಕ್ಷಾ ಬಂಧನ ಹಬ್ಬವನ್ನು ಆಚರಿಸಿದ್ದಾರೆ. ರಕ್ಷಕರಿಗೆ ಲಿಂಗ ಮುಖ್ಯವಲ್ಲ. ಹ್ಯಾಪಿ ರಕ್ಷಾ ಬಂಧನ. ನಾನು ಹಿರಿಯ ಸಹೋದರಿಯಾದ್ದರಿಂದ ನನಗೆ ರಾಖಿ ಕಟ್ಟುವಂತೆ ನಾನು ಬಲವಂತ ಮಾಡುತ್ತೇನೆ ಎಂದು ಇನ್‍ಸ್ಟಾಗ್ರಾಮ್‍ನಲ್ಲಿ ತಾಪ್ಸಿ ಪಣ್ಣು ಬರೆದುಕೊಂಡಿದ್ದಾರೆ. ಜೊತೆಗೆ ತಮ್ಮ ಸಹೋದರಿ ಶಗುನ್ ಪಣ್ಣು ಜೊತೆಗಿನ ಫೋಟೋವನ್ನೂ ಇನ್‍ಸ್ಟಾಗ್ರಾಮ್‍ನಲ್ಲಿ ತಾಪ್ಸಿ ಪಣ್ಣು ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by Taapsee Pannu (@taapsee)

    ನಮ್ಮ ಪ್ರೀತಿ, ರಕ್ಷಣೆ ಹಾಗೂ ಒಡನಾಟದ ಬಂಧನ ಹೀಗೇ ಸಾಗಲಿ ಎಂದು ನಟಿ ಕಾಜಲ್ ಅಗರ್‍ವಾಲ್ ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡು ರಕ್ಷಾ ಬಂಧನದ ಶುಭಾಶಯಗಳನ್ನು ಸಹೋದರಿ ನಿಶಾ ಅಗರ್‍ವಾಲ್‍ಗೆ ತಿಳಿಸಿದ್ದಾರೆ. ನಿಶಾ ಅಗರ್‍ವಾಲ್ ಜೊತೆಗಿರುವ ಫೋಟೋವನ್ನೂ ಸೋಶಿಯಲ್ ಮೀಡಿಯಾದಲ್ಲಿ ಕಾಜಲ್ ಅಗರ್‍ವಾಲ್ ಹಂಚಿಕೊಂಡಿದ್ದಾರೆ.

    ಅಣ್ಣ-ತಂಗಿಯರ ಬಾಂಧವ್ಯದ ಹಬ್ಬವನ್ನು ಅಕ್ಕ-ತಂಗಿಯರೂ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ನೆಟ್ಟಿಗರು ಸಿನಿಮಾ ತಾರೆಯರು ವಿಭಿನ್ನವಾಗಿ ರಕ್ಷಾ ಬಂಧನವನ್ನು ಆಚರಿಸಿರುವುದನ್ನು ಕಂಡು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಶೀಘ್ರದಲ್ಲೇ ಉದ್ಯಮಿ ಜೊತೆ ನಟಿ ಕಾಜಲ್ ಅಗರ್‌ವಾಲ್‌ ಮದುವೆ?

    ಶೀಘ್ರದಲ್ಲೇ ಉದ್ಯಮಿ ಜೊತೆ ನಟಿ ಕಾಜಲ್ ಅಗರ್‌ವಾಲ್‌ ಮದುವೆ?

    ಹೈದರಾಬಾದ್: ಬಹುಭಾಷಾ ನಟಿ ಕಾಜಲ್ ಅಗರ್‌ವಾಲ್‌ ಶೀಘ್ರದಲ್ಲೇ ಉದ್ಯಮಿ ಜೊತೆ ಮದುವೆ ಆಗಲಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ.

    ಇತ್ತೀಚೆಗೆ ಕಾಜಲ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ನಿರೂಪಕಿ ಲಕ್ಷ್ಮಿ ಮಂಚು, ಕಾಜಲ್ ಅವರಿಗೆ ಮದುವೆಯಾವಾಗ ಎಂದು ಪ್ರಶ್ನಿಸಿದ್ದಾರೆ. ಆಗ ಕಾಜಲ್, ನಾನು ಶೀಘ್ರದಲ್ಲೇ ಮದುವೆಯಾಗಲು ನಿರ್ಧರಿಸಿದ್ದೇನೆ ಎಂದಿದ್ದಾರೆ. ಆದರೆ ಮದುವೆಯಾಗುವ ವ್ಯಕ್ತಿ ಯಾರೆಂಬುದನ್ನು ಕಾಜಲ್ ರಿವೀಲ್ ಮಾಡಲಿಲ್ಲ.

    ಇದಾದ ಬಳಿಕ ಲಕ್ಷ್ಮಿ, ನಟಿ ಕಾಜಲ್ ಅವರಿಗೆ ತಮ್ಮ ಪತಿ ಹೇಗಿರಬೇಕೆಂದು ಪ್ರಶ್ನಿಸಿದ್ದಾರೆ. ಆಗ ಅವರು ಸಾಕಷ್ಟು ವಿಷಯಗಳಿದೆ. ಆದರೆ ಮುಖ್ಯವಾಗಿ ಅವರು ತುಂಬಾ ಕಾಳಜಿ ತೋರಿಸಬೇಕು ಹಾಗೂ ಆಧ್ಯಾತ್ಮಿಕನಾಗಿರಬೇಕು ಎಂದು ಕಾಜಲ್ ತಿಳಿಸಿದ್ದಾರೆ.

    ಈ ಮೊದಲು ಬೇರೆ ಸಂದರ್ಶನದಲ್ಲಿ ಕಾಜಲ್, “ನಾನು ಚಿತ್ರರಂಗದವರನ್ನು ಮದುವೆಯಾಗುವುದಿಲ್ಲ. ಚಿತ್ರರಂಗದಲ್ಲಿ ಇರದ ವ್ಯಕ್ತಿ ಜೊತೆ ಡೇಟ್ ಮಾಡುತ್ತೇನೆ” ಎಂದು ಹೇಳಿದ್ದರು. ಸದ್ಯ ಈಗ ಕಾಜಲ್ ಉದ್ಯಮಿಯೊಬ್ಬರನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

    ವೆಬ್‌ಸೈಟ್‌ವೊಂದರ ಪ್ರಕಾರ, ಇದು ಅರೆಂಜ್ ಮ್ಯಾರೇಜ್ ಆಗಿದ್ದು, ಕಾಜಲ್ ಪೋಷಕರೇ ಹುಡುಗನನ್ನು ಹುಡುಕಿದ್ದಾರೆ ಎನ್ನಲಾಗಿದೆ. ಆದರೆ ಮದುವೆಗೆ ಸಂಬಂಧಿಸಿದಂತೆ ಕಾಜಲ್ ಅವರು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ ಎಂದು ಹೇಳಲಾಗುತ್ತಿದೆ.

    ಸದ್ಯ ನಟ ಕಮಲ್ ಹಾಸನ್ ನಟಿಸುತ್ತಿರುವ ‘ಇಂಡಿಯನ್-2’ ಚಿತ್ರದಲ್ಲಿ ಕಾಜಲ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರವನ್ನು ಶಂಕರ್ ನಿರ್ದೇಶಿಸುತ್ತಿದ್ದಾರೆ.

  • ಪ್ರಭಾಸ್ ಜೊತೆ ಮದ್ವೆಯಾಗುವ ಆಸೆ: ಕಾಜಲ್ ಅಗರ್ವಾಲ್

    ಪ್ರಭಾಸ್ ಜೊತೆ ಮದ್ವೆಯಾಗುವ ಆಸೆ: ಕಾಜಲ್ ಅಗರ್ವಾಲ್

    ಹೈದರಾಬಾದ್: ಟಾಲಿವುಡ್ ಮಗಧೀರನ ಚೆಲುವೆ ಕಾಜಲ್ ಅಗರ್ವಾಲ್ ಶೀಘ್ರದಲ್ಲಿಯೇ ಮದುವೆ ಮಾಡಿಕೊಳ್ಳುವ ಚಿಂತನೆಯಲ್ಲಿದ್ದಾರೆ.

    ಹೌದು, ಇತ್ತೀಚೆಗೆ ಖಾಸಗಿ ವಾಹಿನಿಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕಾಜಲ್, ಮದುವೆ ಬಗ್ಗೆ ಪ್ಲಾನ್ ಮಾಡಿಕೊಳ್ಳುತ್ತಿದ್ದೇನೆ. ಹುಡುಗ ಹೀಗೆಯೇ ಇರಬೇಕೆಂಬ ಕೆಲ ಕನಸುಗಳ್ನು ಕಂಡಿದ್ದೇನೆ ಎಂದು ತಿಳಿಸಿದ್ದಾರೆ. ಇದೇ ವೇಳೆ ರ್ಯಾಪಿಡ್ ರೌಂಡ್‍ನಲ್ಲಿ ಯಾರನ್ನ ಮದ್ವೆ ಆಗ್ತೀರಿ, ಯಾರನ್ನ ಲವ್ ಮಾಡ್ತೀರಾ ಮತ್ತು ಯಾರನ್ನ ಕೊಲ್ಲುತ್ತೀರಿ ಎಂದು ಕೇಳಲಾಗಿತ್ತು. ಇದನ್ನೂ ಓದಿ: ನಟಿ ಕಾಜಲ್‍ಗಾಗಿ 60 ಲಕ್ಷ ರೂ. ಕಳೆದುಕೊಂಡ ಅಭಿಮಾನಿ

    ರಾಮ್ ಚರಣ್ ಅವರನ್ನು ಕೊಲ್ಲುತ್ತೇನೆ, ಜೂ.ಎನ್‍ಟಿಆರ್ ಜೊತೆ ಹುಕಪ್ ಮಾಡಿಕೊಳ್ಳುತ್ತೇನೆ. ಕೊನೆಗೆ ಬಾಹುಬಲಿ ಪ್ರಭಾಸ್ ಅವರನ್ನು ಮದುವೆಯಾಗಲು ಇಷ್ಟಪಡುತ್ತೇನೆ ಎಂದು ಉತ್ತರಿಸಿದ್ದಾರೆ. ಇದೇ ವೇಳೆ ನಿಜ ಜೀವನದ ಸಂಗಾತಿಯ ಗುಣಲಕ್ಷಣಗಳನ್ನು ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ: ಕಾಜಲ್ ಅಗರ್ವಾಲ್ ಹೃದಯದಲ್ಲಿ ಕ್ರಿಕೆಟಿಗ

    ನನ್ನನ್ನು ಕಾಳಜಿಯಿಂದ ನೋಡಿಕೊಳ್ಳಬೇಕು ಮತ್ತು ಸೌಮ್ಯವಾಗಿರಬೇಕು. ನಾನು ಹೆಚ್ಚು ಆಧ್ಯಾತ್ಮಕವಾಗಿದ್ದು, ಯಾವಾಗಲೂ ಶಿವನ ಮೂರ್ತಿಯನ್ನು ಜೊತೆಯಲ್ಲಿ ಇಟ್ಟುಕೊಳ್ಳುತ್ತೇನೆ. ಶೂಟಿಂಗ್ ಗಾಗಿ ಮನೆಯಿಂದ ಹೊರ ಹೋದಾಗಲೂ ಶಿವನ ಚಿಕ್ಕ ಮೂರ್ತಿ ನನ್ನ ಬಳಿಯಲ್ಲಿರುತ್ತದೆ. ಹಾಗಾಗಿ ಹುಡುಗ ಸಹ ಸ್ವಲ್ಪ ಆಧ್ಯಾತ್ಮಿಕವಾಗಿರಬೇಕು ಎಂಬುವುದು ನನ್ನ ಆಸೆ ಎಂದು ಕಾಜಲ್ ಹೇಳಿದ್ದಾರೆ. ಇದನ್ನೂ ಓದಿ: ವೇದಿಕೆ ಮೇಲೆ ಬಲವಂತವಾಗಿ ಕಾಜಲ್‍ಗೆ ಕಿಸ್ ಕೊಟ್ಟ ಸಹನಟ: ವಿಡಿಯೋ ವೈರಲ್

    34 ವರ್ಷದ ಕಾಜಲ್ ಆಗರ್ವಾಲ್ ಇದೂವರೆಗೂ ತೆಲಗು, ಹಿಂದಿ ಸೇರಿದಂತೆ 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಐದು ಬಾರಿ ಉತ್ತಮ ನಟಿಯಾಗಿ ಸೈಮಾ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ರಮೇಶ್ ಅರವಿಂದ್ ನಿರ್ದೇಶನದ ಪ್ಯಾರಿಸ್ ಪ್ಯಾರಿಸ್ ಸಿನಿಮಾದಲ್ಲಿ ಕಾಜಲ್ ನಟಿಸಿದ್ದು, ಚಿತ್ರ ಪೋಸ್ಟ್ ಪ್ರೊಡೆಕ್ಷನ್ ಹಂತದಲ್ಲಿದೆ. ಇದನ್ನೂ ಓದಿ: ಜಮೀನಿನಲ್ಲಿ ಕಾಜಲ್ ಅಗರ್ವಾಲ್ ಕಟೌಟ್ -ಯಶಸ್ವಿಯಾಯ್ತು ರೈತನ ಪ್ರಯೋಗ

  • ಮೊದಲ ಬಾರಿಗೆ ತಾಜ್‍ಮಹಲ್ ನೋಡಿ ಮಂತ್ರಮುಗ್ಧಳಾಗಿದ್ದೇನೆ: ಕಾಜಲ್

    ಮೊದಲ ಬಾರಿಗೆ ತಾಜ್‍ಮಹಲ್ ನೋಡಿ ಮಂತ್ರಮುಗ್ಧಳಾಗಿದ್ದೇನೆ: ಕಾಜಲ್

    ನವದೆಹಲಿ: ಟಾಲಿವುಡ್ ನಟಿ ಕಾಜಲ್ ಅಗರ್ ವಾಲ್ ಅವರು ಮೊದಲ ಬಾರಿ ತಾಜ್‍ಮಹಲ್ ಭೇಟಿ ನೀಡಿ ಖುಷಿಯಿಂದ ಕುಣಿದಾಡಿದ್ದಾರೆ.

    ನಟಿ ಕಾಜಲ್ ತಮ್ಮ ಕುಟುಂಬಸ್ಥರ ಜೊತೆ ತಾಜ್‍ಮಹಲ್‍ಗೆ ಭೇಟಿ ನೀಡಿದ್ದಾರೆ. ಈ ವೇಳೆ ಅವರು ವಿವಿಧ ರೀತಿಯಲ್ಲಿ ಕ್ಯಾಮೆರಾಗೆ ಪೋಸ್ ಕೊಟ್ಟು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಸದ್ಯ ಈ ಫೋಟೋಗಳನ್ನು ಕಾಜಲ್ ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

    ನಾನು ಇದೇ ಮೊದಲ ಬಾರಿಗೆ ತಾಜ್‍ಮಹಲ್ ನೋಡಿದ್ದು, ಅದರ ಸೌಂದರ್ಯ ಕಂಡು ನಾನು ಮಂತ್ರಮುಗ್ಧಳಾಗಿದ್ದೇನೆ ಹಾಗೂ ಅದರ ಭವ್ಯತೆಯಿಂದ ನಾನು ಪುಳಕಿತಳಾಗಿದ್ದೇನೆ. ನನ್ನ ಜೀವನದಲ್ಲಿ ತಾಜ್‍ಮಹಲ್ ಸೌಂದರ್ಯದ ಬಗ್ಗೆ ತುಂಬಾ ಕೇಳಿದ್ದೇನೆ. ಆದರೆ ನಾನು ಇದುವರೆಗೂ ನೋಡಿರಲಿಲ್ಲ. ಈಗ ಅದರ ವಾಸ್ತುಶಿಲ್ಪ, ಭವ್ಯತೆ, ಸೌಂದರ್ಯವನ್ನು ನೋಡಿ ಇತಿಹಾಸದ ದಿನಗಳಿಗೆ ಹೋಗಿದ್ದೆ. ನನಗೆ ತುಂಬಾ ಸಂತೋಷವಾಗಿದೆ. ಅದನ್ನು ಹೇಳಲು ಸಾಧ್ಯವಾಗುತ್ತಿಲ್ಲ ಎಂದು ಬರೆದುಕೊಂಡಿದ್ದಾರೆ.

     

    View this post on Instagram

     

    #popsandme

    A post shared by Kajal Aggarwal (@kajalaggarwalofficial) on

    ಇನ್‍ಸ್ಟಾಗ್ರಾಂನಲ್ಲಿ ಕಾಜಲ್ ಅಗರ್ ವಾಲ್ ಅವರು ಯಾವಾಗಲೂ ಸಕ್ರಿಯರಾಗಿರುತ್ತಾರೆ. ಅವರು ಫೋಟೋಶೂಟ್ ಮಾಡಿಸಿದ ಫೋಟೋಗಳನ್ನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಸದ್ಯ ಈಗ ಅವರು ತಾಜ್‍ಮಹಲ್ ಭೇಟಿ ನೀಡಿದ ಫೋಟೋವನ್ನು ಹಂಚಿಕೊಂಡಿದ್ದು, ಅಭಿಮಾನಿಗಳು ಕ್ಯೂಟ್, ಸುಂದರವಾಗಿ ಕಾಣಿಸುತ್ತಿದ್ದೀರಾ, ಪ್ರೀತಿಯನ್ನು ಪ್ರತಿನಿಧಿಸುವ ಜಾಗಕ್ಕೆ ತೆರಳಿದ್ದೀರಾ ಎಂದರೆ ಏನೋ ವಿಷಯ ಇದೆ ಎಂದು ಕಮೆಂಟ್ ಮಾಡುತ್ತಿದ್ದಾರೆ.

     

    View this post on Instagram

     

    Witnessing this #symboloflove made me reflect upon this topic, taking this opportunity to share my thoughts : In a culture where we tend to place romantic love on a pedestal, we can easily overlook the dynamic ways to experience love. There’s the depth of close friendships, the sense of belonging in a community, the intensity of an artistic practice, a connection to our work, or any experience that provides companionship, support, self-discovery, and even the feelings of both elation and misery. But this isn’t the common narrative, so for many single people – me included – we can mistakenly think we’re not good enough, or feel incomplete without this one, specific type of love. After many years spent berating my own single status, I could see how carelessly narrow my own view of love had been and how short-sighted it is to view romantic love as a prerequisite to a happy life. For many, being single is not about a lack of options for love, but a choice – a choice to apply a broader definition to love, and see the value in all its forms. (Also, Your happiness depends wholly on you, share that joy and completeness with your partner instead of thrusting the responsibility solely upon them) #enjoyingthesymboloflove #withpeopleilove #myvillage ????

    A post shared by Kajal Aggarwal (@kajalaggarwalofficial) on

    2004ರಲ್ಲಿ ‘ಕ್ಯೂ ಹೋ ಗಯಾ ನಾ’ ಚಿತ್ರದ ಮೂಲಕ ಕಾಜಲ್ ಬಾಲಿವುಡ್‍ಗೆ ಎಂಟ್ರಿ ಕೊಟ್ಟಿದ್ದರು. ಆದರೆ ಅವರು ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಸಾಕಷ್ಟು ಸಿನಿಮಾಗಳನ್ನು ಮಾಡಿ ಖ್ಯಾತರಾಗಿದ್ದರು. ಇದಾದ ಬಳಿಕ ಕಾಜಲ್ ಮತ್ತೆ ‘ಸಿಂಗಂ’, ‘ಸ್ಪೆಷಲ್ 26’ ಹಾಗೂ ‘ದೋ ಲಫ್ಜೋನ್ ಕಿ ಕಹಾನಿ’ ಚಿತ್ರದಲ್ಲಿ ನಟಿಸಿದ್ದಾರೆ.

  • ನಾಳೆ ಬೆಂಗ್ಳೂರಿಗೆ ಆಗಮಿಸಲಿದ್ದಾರೆ ಕಾಲಿವುಡ್ ನಟಿ ಕಾಜಲ್ ಅಗರ್ವಾಲ್

    ನಾಳೆ ಬೆಂಗ್ಳೂರಿಗೆ ಆಗಮಿಸಲಿದ್ದಾರೆ ಕಾಲಿವುಡ್ ನಟಿ ಕಾಜಲ್ ಅಗರ್ವಾಲ್

    ಬೆಂಗಳೂರು: ಟಾಲಿವುಡ್ ಮತ್ತು ಕಾಲಿವುಡ್ ನ ಬಹುಬೇಡಿಕೆಯ ನಟಿ ಕಾಜಲ್ ಅಗರ್ವಾಲ್ ಶನಿವಾರ ಸಿಲಿಕಾನ್ ಸಿಟಿಗೆ ಆಗಮಿಸಲಿದ್ದಾರೆ

    ಇತ್ತೀಚೆಗೆ ಕಾಜಲ್ ಸ್ಯಾಂಡಲ್ ವುಡ್ ನಲ್ಲಿ ಅಭಿನಯಿಸುತ್ತಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ನಟ ಯಶ್ ಅಭಿನಯದ ಕೆಜಿಎಫ್ ಸಿನಿಮಾದಲ್ಲಿ ಐಟಂ ಹಾಡಿಗೆ ನೃತ್ಯ ಮಾಡುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ ಇವರ ಬದಲು ನಟಿ ತಮನ್ನಾ ಭಾಟಿಯಾ ಅವರು ಆಯ್ಕೆಯಾಗಿದ್ದು, ಶೂಟಿಂಗ್ ಕೂಡ ಮುಗಿಸಿದ್ದಾರೆ.

    ಆದ್ರೆ ಈಗ ನಟಿ ಕಾಜಲ್ ಅವರು ಯಾವುದೇ ಸಿನಿಮಾದಲ್ಲಿ ಅಭಿನಯಿಸಲು ಬೆಂಗಳೂರಿಗೆ ಬರುತ್ತಿಲ್ಲ. ರಾಜಾಜಿನಗರದಲ್ಲಿರುವ ಮಳಿಗೆಯೊಂದರ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬರುತ್ತಿದ್ದಾರೆ. ಈ ಬಗ್ಗೆ ಸ್ವತಃ ಅವರೆ ಬೆಂಗಳೂರಿಗೆ ಬರುವುದಾಗಿ ಹೇಳಿ ಫೇಸ್ ಬುಕ್ ನಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.

    ಈ ಹಿಂದೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ `ಚಕ್ರವ್ಯೂಹ’ ಸಿನಿಮಾದಲ್ಲಿ `ಅರೇ.. ಅರೇ..ಅರೇ.. ಏನಾಯ್ತು’ ಹಾಡಿಗೆ ಇವರ ದನಿ ನೀಡಿದ್ದರು. ಇತ್ತೀಚೆಗೆ ನಟಿ ಪಾರೊಲ್ ಯಾದವ್ ಅವರ ಹುಟ್ಟುಹಬ್ಬದ ಆಚರಣೆಯಲ್ಲಿ ರಮೇಶ್ ಅರವಿಂದ್ ಜೊತೆ ನಟಿ ತಮನ್ನಾ ಭಾಟಿಯಾ ಮತ್ತು ಕಾಜಲ್ ಒಟ್ಟಾಗಿ ಕಾಣಿಸಿಕೊಂಡಿದ್ದರು.

    ಸದ್ಯಕ್ಕೆ ರಮೇಶ್ ಅರವಿಂದ ಅವರು ತಮಿಳಿನ `ಕ್ವೀನ್’ ಸಿನಿಮಾವನ್ನು ರಿಮೇಕ್ ಮಾಡುತ್ತಿದ್ದಾರೆ. ಈ ಸಿನಿಮಾಗೆ `ಪ್ಯಾರಿಸ್ ಪ್ಯಾರಿಸ್’ ಎಂದು ಹೆಸರಿಡಲಾಗಿದ್ದು, ಈ ಸಿನಿಮಾದಲ್ಲಿ ನಟಿ ಕಾಜಲ್ ಅಭಿನಯಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews