Tag: Kajal Aggarwal

  • Ramayana: ‘ರಾವಣ’ ಯಶ್ ಪತ್ನಿಯಾಗಿ ಕಾಜಲ್ ಅಗರ್ವಾಲ್?

    Ramayana: ‘ರಾವಣ’ ಯಶ್ ಪತ್ನಿಯಾಗಿ ಕಾಜಲ್ ಅಗರ್ವಾಲ್?

    ರಾಕಿಂಗ್ ಸ್ಟಾರ್ ಯಶ್ (Yash) ಅವರು ‘ಟಾಕ್ಸಿಕ್’ ಸಿನಿಮಾ ಕೆಲಸದ ನಡುವೆ ‘ರಾಮಾಯಣ’ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಇದೀಗ ಅವರ ‘ರಾಮಾಯಣ’ (Ramayana) ಸಿನಿಮಾ ಬಗ್ಗೆ ಇಂಟ್ರೆಸ್ಟಿಂಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ಯಶ್ ಜೊತೆ ಖ್ಯಾತ ನಟಿ ಕಾಜಲ್ ಅಗರ್ವಾಲ್ ಕೂಡ ನಟಿಸುತ್ತಾರೆ ಎನ್ನಲಾದ ಸುದ್ದಿಯೊಂದು ಹರಿದಾಡುತ್ತಿದೆ. ಇದನ್ನೂ ಓದಿ:ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಯಜಮಾನ’ ಸೀರಿಯಲ್ ಖ್ಯಾತಿಯ ಗಜೇಂದ್ರ

    ‘ರಾಮಾಯಣ’ದಲ್ಲಿ ರಾಮನಾಗಿ ರಣಬೀರ್ ಕಪೂರ್ (Ranbir Kapoor), ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ (Sai Pallavi) ನಟಿಸುತ್ತಿದ್ದಾರೆ. ರಾಮನ ಮುಂದೆ ರಾವಣನಾಗಿ ಯಶ್ ಘರ್ಜಿಸಲಿದ್ದಾರೆ. ಸದ್ಯದ ಹಾಟ್ ಟಾಪಿಕ್ ಏನಪ್ಪಾ ಅಂದ್ರೆ, ರಾವಣ ಯಶ್‌ಗೆ ಮಡದಿಯಾಗಿ ಕಾಜಲ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಮಂಡೋದರಿ ಪಾತ್ರದಲ್ಲಿ ‘ಮಗಧೀರ’ ಬೆಡಗಿ ನಟಿಸಲಿದ್ದಾರೆ ಎಂದು ಹೇಳಲಾಗ್ತಿದೆ. ಇದನ್ನೂ ಓದಿ: 10 ಲಕ್ಷದ ಡೈಮಂಡ್ ರಿಂಗ್, 9 ಲಕ್ಷ ಮೌಲ್ಯದ ವಾಚ್- ‘ಭಜರಂಗಿ’ ನಟಿ ಬ್ಯಾಗ್ ಕದ್ದ ಆರೋಪಿ ಅರೆಸ್ಟ್

    ಮೂಲಗಳ ಪ್ರಕಾರ, ಈಗಾಗಲೇ ಕಾಜಲ್ ಮಂಡೋದರಿ ಪಾತ್ರಕ್ಕೆ ಲುಕ್ ಟೆಸ್ಟ್ ಕೊಟ್ಟಿದ್ದು, ಚಿತ್ರೀಕರಣಕ್ಕೂ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಚಿತ್ರತಂಡವೇ ಖಾತ್ರಿಪಡಿಸಬೇಕಿದೆ. ಅದೇನೇ ಇರಲಿ ಈ ಸುದ್ದಿ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

    ‘ರಾಮಾಯಣ’ (Ramayana) ಸಿನಿಮಾವನ್ನು ಎರಡು ಭಾಗಗಳಲ್ಲಿ ತರೋದಾಗಿ ಈಗಾಗಲೇ ಚಿತ್ರತಂಡ ತಿಳಿಸಿದೆ. 2026ರಲ್ಲಿ ಸಿನಿಮಾ ರಿಲೀಸ್ ಆಗಲಿದೆ.

  • ಕಲರ್‌ಫುಲ್ ಹೋಳಿ ಸಾಂಗ್‌ನಲ್ಲಿ ಸಲ್ಮಾನ್ ಖಾನ್ ಜೊತೆ ರಶ್ಮಿಕಾ ಡ್ಯಾನ್ಸ್

    ಕಲರ್‌ಫುಲ್ ಹೋಳಿ ಸಾಂಗ್‌ನಲ್ಲಿ ಸಲ್ಮಾನ್ ಖಾನ್ ಜೊತೆ ರಶ್ಮಿಕಾ ಡ್ಯಾನ್ಸ್

    ಲ್ಮಾನ್ ಖಾನ್ (Salman Khan) ಹಾಗೂ ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ಬಹುನಿರೀಕ್ಷಿತ ‘ಸಿಕಂದರ್’ (Sikandar) ಚಿತ್ರ ರಿಲೀಸ್ ಸಜ್ಜಾಗಿದೆ. ಈ ಹಿನ್ನೆಲೆ ಸಿನಿಮಾದ ಕಲರ್‌ಫುಲ್ ಸಾಂಗ್‌ವೊಂದನ್ನು ಚಿತ್ರತಂಡ ರಿಲೀಸ್ ಮಾಡಿದೆ. ಹೋಳಿ ಹಬ್ಬದ ಕುರಿತಾದ ಹಾಡಿನಲ್ಲಿ ಸಲ್ಮಾನ್ ಜೊತೆ ‘ಪುಷ್ಪ 2’ (Pushpa 2) ಬೆಡಗಿ ರಶ್ಮಿಕಾ ಮಸ್ತ್ ಆಗಿ ಹೆಜ್ಜೆ ಹಾಕಿದ್ದಾರೆ.

    ‘ಬಂಬಂ ಬೋಲೆ’ ಎಂಬ ಹೋಳಿ ಹಬ್ಬದ ಕಲರ್‌ಫುಲ್ ಸಾಂಗ್ ರಿಲೀಸ್ ಆಗಿದೆ. ಸಲ್ಮಾನ್ ಮತ್ತು ರಶ್ಮಿಕಾ ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಈ ಸಾಂಗ್‌ನಲ್ಲಿ ಕಾಜಲ್ ಅಗರ್‌ವಾಲ್ (Kajal Aggarwal) ಲುಕ್ ಕೂಡ ಅನಾವರಣ ಆಗಿದೆ. ಸಾಂಪ್ರದಾಯಿಕ ಲುಕ್‌ನಲ್ಲಿ ನಟಿ ಕಾಣಿಸಿಕೊಂಡಿದ್ದಾರೆ. ಈ ಬೆನ್ನಲ್ಲೇ ಕಾಜಲ್ ಪಾತ್ರದ ಬಗ್ಗೆ ಚರ್ಚೆ ಶುರುವಾಗಿದೆ. ಸಲ್ಮಾನ್‌ಗೆ ರಶ್ಮಿಕಾ ಒಬ್ಬಳೇ ನಾಯಕಿನಾ? ಅಥವಾ ಕಾಜಲ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರಾ? ಎಂದೆಲ್ಲಾ ಫ್ಯಾನ್ಸ್ ಸಿನಿಮಾದ ಬಗ್ಗೆ ಕುತೂಹಲ ವ್ಯಕ್ತಪಡಿಸಿದ್ದಾರೆ.

    ಈ ಚಿತ್ರವನ್ನು ಎ.ಆರ್ ಮುರುಗದಾಸ್ ನಿರ್ದೇಶನ ಮಾಡಿದ್ದಾರೆ. ಸಾಜಿದ್ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ. ಇನ್ನೂ ‘ಸಿಕಂದರ್’ ಚಿತ್ರದ ಟೀಸರ್, ಸಾಂಗ್ಸ್ ಎಲ್ಲವೂ ಫ್ಯಾನ್ಸ್‌ಗೆ ಮೆಚ್ಚುಗೆ ಆಗಿದೆ. ಈ ವರ್ಷ ಈದ್ ಹಬ್ಬದಂದು ಸಿನಿಮಾ ರಿಲೀಸ್‌ಗೆ ತಂಡ ಪ್ಲ್ಯಾನ್ ಮಾಡಿದೆ. ಇದನ್ನೂ ಓದಿ:ದರ್ಶನ್ ಯಾವತ್ತಿದ್ರೂ ನನ್ನ ಮಗ: ತಾಯಿ, ಮಗನ ಸಂಬಂಧದಲ್ಲಿ ವಿವಾದ ಸೃಷ್ಟಿಸಬೇಡಿ ಎಂದ ಸುಮಲತಾ

    ಇನ್ನೂ ಮೊದಲ ಬಾರಿಗೆ ಸಲ್ಮಾನ್ ಜೊತೆ ರಶ್ಮಿಕಾ ನಟಿಸಿರೋ ಕಾರಣ ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಬೆಟ್ಟದಷ್ಟು ನಿರೀಕ್ಷೆಯಿದೆ. ಇತ್ತೀಚಿಗೆ ರಶ್ಮಿಕಾ ನಟಿಸಿದ ಬ್ಯಾಕ್ ಟು ಬ್ಯಾಕ್ 3 ಸಿನಿಮಾಗಳು ಸೂಪರ್ ಸಕ್ಸಸ್ ಕಂಡಿದೆ. ಹಾಗಾಗಿ ‘ಸಿಕಂದರ್’ ಭವಿಷ್ಯ ಎನಾಗುತ್ತೆ ಎಂದು ಕಾಯಬೇಕಿದೆ.

  • ಕ್ರಿಪ್ಟೋಕರೆನ್ಸಿ ವಂಚನೆ ಕೇಸ್‌ – ಸ್ಟಾರ್‌ ನಟಿಯರಾದ ತಮನ್ನಾ, ಕಾಜಲ್‌ ಅಗರ್ವಾಲ್‌ಗೆ ಸಂಕಷ್ಟ

    ಕ್ರಿಪ್ಟೋಕರೆನ್ಸಿ ವಂಚನೆ ಕೇಸ್‌ – ಸ್ಟಾರ್‌ ನಟಿಯರಾದ ತಮನ್ನಾ, ಕಾಜಲ್‌ ಅಗರ್ವಾಲ್‌ಗೆ ಸಂಕಷ್ಟ

    ನವದೆಹಲಿ: ಕ್ರಿಪ್ಟೋಕರೆನ್ಸಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟಾರ್‌ ನಟಿಯರಾದ ತಮನ್ನಾ ಭಾಟಿಯಾ (Tamannaah Bhatia) ಹಾಗೂ ಕಾಜಲ್‌ ಅಗರ್ವಾಲ್‌ (Kajal Aggarwal) ಅವರನ್ನು ವಿಚಾರಣೆ ನಡೆಸಲು ಪುದುಚೇರಿ ಪೊಲೀಸರು ನಿರ್ಧರಿಸಿರುವುದಾಗಿ ವರದಿಯಾಗಿದೆ.

    ಬಹುಭಾಷೆಗಳಲ್ಲಿ ಸ್ಟಾರ್‌ ತಾರೆಯರಾಗಿರುವ ತಮನ್ನಾ ಭಾಟಿಯಾ ಹಾಗೂ ಕಾಜಲ್‌ ಅಗರ್ವಾಲ್‌ ಇಬ್ಬರನ್ನು ವಿಚಾರಣೆ ನಡೆಸಲು ಪೊಲೀಸರು(Puducherry police) ನಿರ್ಧರಿಸಿದ್ದಾರೆ. ಕೊಯಮತ್ತೂರು ಮೂಲದ ಕ್ರಿಪ್ಟೋಕರೆನ್ಸಿ ಕಂಪನಿ ಹೆಚ್ಚಿನ ಲಾಭದ ಭರವಸೆ ನೀಡಿ ಜನರನ್ನು ವಂಚಿಸಲಾಗುತ್ತಿದೆ ಎಂದು ಪೊಲೀಸರಿಗೆ ದೂರು ಬಂದಿತ್ತು. ನಿವೃತ್ತ ಸರ್ಕಾರಿ ಉದ್ಯೋಗಿ ಅಶೋಕ್‌ ಎಂಬವರು ಪೊಲೀಸರಿಗೆ ದೂರು ನೀಡಿದ್ದರು. ಲಾಭ ಗಳಿಸುವ ಭರವಸೆ ನೀಡಿದ 10 ಜನರಿಂದ 2.40 ಕೋಟಿ ರೂ.ಗಳನ್ನು ಕಂಪನಿ ಸಂಗ್ರಹಿಸಿದೆ ಎಂದು ಆರೋಪಿಸಿದ್ದರು. ಈ ಕಂಪನಿಯ ಕಾರ್ಯಕ್ರಮಗಳಲ್ಲಿ ತಮನ್ನಾ, ಕಾಜಲ್‌ ಅಗರ್ವಾಲ್‌ ಭಾಗವಹಿಸಿದ್ದ ಕಾರಣಕ್ಕೆ ಅವರ ವಿರುದ್ಧವೂ ದೂರು ದಾಖಲಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: 5 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ದೈಹಿಕ ಹಲ್ಲೆ ನಡೆಸಿ ವಿಕೃತಿ – ಅಪ್ರಾಪ್ತೆ ಜನನಾಂಗಕ್ಕೆ 28 ಹೊಲಿಗೆ

    ಕ್ರಿಪ್ಟೋಕರೆನ್ಸಿ (Cyptocurrency) ಕಂಪನಿಯು 2020-22ರ ಅವಧಿಯಲ್ಲಿ ಕೊಯಮತ್ತೂರಿನಲ್ಲಿ ತನ್ನ ಮುಖ್ಯ ಶಾಖೆ ತೆರೆಯಿತು. ಉದ್ಘಾಟನಾ ಸಮಾರಂಭದಲ್ಲಿ ಸ್ಟಾರ್ ನಾಯಕಿ ತಮನ್ನಾ ಭಾಗವಹಿಸಿದ್ದರು. ಮಹಾಬಲಿಪುರಂನ ಸ್ಟಾರ್ ಹೋಟೆಲ್‌ನಲ್ಲಿ ನಡೆದ ಕಂಪನಿಯ ಕಾರ್ಯಕ್ರಮದಲ್ಲಿ ಮತ್ತೊಬ್ಬ ಸ್ಟಾರ್ ನಾಯಕಿ ಕಾಜಲ್ ಅಗರ್ವಾಲ್ ಪಾಲ್ಗೊಂಡಿದ್ದರು. ಅದಾದ ನಂತರ ಮುಂಬೈನಲ್ಲಿ ಒಂದು ದೊಡ್ಡ ಪಾರ್ಟಿಯನ್ನು ಆಯೋಜಿಸಿ ಸಾವಿರಾರು ಜನರಿಂದ ಹಣವನ್ನು ಸಂಗ್ರಹಿಸಿದರು. ಇದನ್ನೂ ಓದಿ: ಸಿನಿಮಾ ಶೂಟಿಂಗ್‌ಗೆ ಸಜ್ಜಾದ ನಟ ದರ್ಶನ್ – ಅವಕಾಶ ಕೋರಿ ಮುಂದಿನ ವಾರ ಕೋರ್ಟ್ ಮೊರೆ

    ಜನರನ್ನು ಲಾಭದ ಹೆಸರಿನಲ್ಲಿ ವಂಚಿಸಿದ ಆರೋಪದ ಮೇಲೆ ಪೊಲೀಸರು ಈಗಾಗಲೇ ನಿತೀಶ್ ಜೈನ್ (36) ಮತ್ತು ಅರವಿಂದ್ ಕುಮಾರ್ (40) ಅವರನ್ನು ಬಂಧಿಸಿದ್ದಾರೆ. ಈಗ, ಪ್ರಕರಣದ ತನಿಖೆಯ ಭಾಗವಾಗಿ ಪುದುಚೇರಿ ಪೊಲೀಸರು ತಮನ್ನಾ ಮತ್ತು ಕಾಜಲ್ ಅಗರ್ವಾಲ್ ಅವರನ್ನು ವಿಚಾರಣೆ ಮಾಡಲು ನಿರ್ಧರಿಸಿದ್ದಾರೆ. ಇದನ್ನೂ ಓದಿ: ಮತ್ತೆರಡು ವಿಧೇಯಕ ವಾಪಸ್ – ರಾಜ್ಯಪಾಲರು vs ರಾಜ್ಯ ಸರ್ಕಾರದ ನಡುವೆ ಮುಂದುವರಿದ ಜಟಾಪಟಿ

  • ದೇವಿ ಗೆಟಪ್‌ನಲ್ಲಿ ಕಾಜಲ್- ‘ಕಣ್ಣಪ್ಪ’ ಚಿತ್ರದ ಫಸ್ಟ್ ಲುಕ್ ಔಟ್

    ದೇವಿ ಗೆಟಪ್‌ನಲ್ಲಿ ಕಾಜಲ್- ‘ಕಣ್ಣಪ್ಪ’ ಚಿತ್ರದ ಫಸ್ಟ್ ಲುಕ್ ಔಟ್

    ಸೌತ್ ಬ್ಯೂಟಿ ಕಾಜಲ್ ಅಗರ್ವಾಲ್ (Kajal Aggarwal) ಅವರು ‘ಕಣ್ಣಪ್ಪ’ (Kannappa) ಸಿನಿಮಾದಲ್ಲಿ ಪಾರ್ವತಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಈ ಚಿತ್ರದಲ್ಲಿ ದೇವಿ ಅವತಾರದಲ್ಲಿ ನಟಿ ಕಾಣಿಸಿಕೊಂಡಿರುವ ಫಸ್ಟ್ ಲುಕ್ ರಿವೀಲ್ ಆಗಿದೆ. ಇದನ್ನೂ ಓದಿ:ಮಾತು ತೊದಲಿದೆ, ಕೈ ನಡುಗುತ್ತಿದೆ: ವಿಶಾಲ್ ಸ್ಥಿತಿ ನೋಡಿ ಫ್ಯಾನ್ಸ್ ಶಾಕ್

    ಡೈರೆಕ್ಟರ್ ಮುಕೇಶ್ ಕುಮಾರ್ ಸಿಂಗ್ ನಿರ್ದೇಶನದ ‘ಕಣ್ಣಪ್ಪ’ ಸಿನಿಮಾದಲ್ಲಿ ವಿಷ್ಣು ಮಂಚು ಲೀಡ್ ರೋಲ್‌ನಲ್ಲಿ ನಟಿಸಿದ್ದಾರೆ. ಪ್ರಭಾಸ್ ಜೊತೆ ಕಾಜಲ್ ನಟಿಸಿದ್ದಾರೆ. ಪಾರ್ವತಿ ದೇವಿಯಾಗಿ ನಟಿ ಬಣ್ಣ ಹಚ್ಚಿದ್ದಾರೆ. ಚಿತ್ರದಲ್ಲಿನ ನಟಿಯ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಪೋಸ್ಟರ್‌ನಲ್ಲಿ ಬಿಳಿ ಬಣ್ಣದ ಉಡುಗೆಯಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ನಟಿಯ ಲುಕ್ ನೋಡಿದ್ರೆ ದೈವಿಕ ಕಳೆ ಎದ್ದು ಕಾಣುತ್ತಿದೆ. ಅವರೇ ಈ ಪಾತ್ರಕ್ಕೆ ಸೂಕ್ತ ಎಂದೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ.

    ಇನ್ನೂ ‘ಕಣ್ಣಪ್ಪ’ ಚಿತ್ರವನ್ನು ಮೋಹನ್ ಬಾಬು ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ಮೋಹನ್ ಲಾಲ್, ಪ್ರಭಾಸ್ ಸೇರಿದಂತೆ ಅನೇಕರು ನಟಿಸಿದ್ದಾರೆ. ವಿಶೇಷ ಅಂದ್ರೆ ಈ ಚಿತ್ರದ ಮೂಲಕ ಬಾಲಿವುಡ್ ನಟ ಅಕ್ಷಯ್ ಕುಮಾರ್ ತೆಲುಗಿಗೆ ಎಂಟ್ರಿ ಕೊಟ್ಟಿದ್ದಾರೆ. ಈ ಚಿತ್ರ ಏಪ್ರಿಲ್‌ನಲ್ಲಿ ಬಿಡುಗಡೆಯಾಗಲಿದೆ.

    ಇನ್ನೂ ನಟಿಯ ಬಳಿ ಹಲವು ಸಿನಿಮಾಗಳಿವೆ. ಅದರಲ್ಲಿ ಸಲ್ಮಾನ್‌ ಖಾನ್‌ ನಟನೆಯ ‘ಸಿಖಂದರ್‌’ ಸಿನಿಮಾದಲ್ಲಿ ಕಾಜಲ್‌ ಪವರ್‌ಫುಲ್‌ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ರಶ್ಮಿಕಾ ಮಂದಣ್ಣ ಈ ಸಿನಿಮಾದ ನಾಯಕಿಯಾಗಿದ್ದಾರೆ. 2025ರ ಈದ್‌ ಹಬ್ಬದಂದು ರಿಲೀಸ್‌ ಆಗಲಿದೆ.

  • ಸಲ್ಮಾನ್, ರಶ್ಮಿಕಾ ನಟನೆಯ ‘ಸಿಖಂದರ್’ ಚಿತ್ರತಂಡ ಸೇರಿಕೊಂಡ ಕಾಜಲ್ ಅಗರ್ವಾಲ್

    ಸಲ್ಮಾನ್, ರಶ್ಮಿಕಾ ನಟನೆಯ ‘ಸಿಖಂದರ್’ ಚಿತ್ರತಂಡ ಸೇರಿಕೊಂಡ ಕಾಜಲ್ ಅಗರ್ವಾಲ್

    ಲ್ಮಾನ್ ಖಾನ್, ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ಬಹುನಿರೀಕ್ಷಿತ ‘ಸಿಖಂದರ್’ (Sikandar) ಸಿನಿಮಾಗೆ ಸೌತ್ ಸ್ಟಾರ್ ನಟಿ ಕಾಜಲ್ ಅಗರ್ವಾಲ್ (Kajal Aggarwal) ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ಬಾಲಿವುಡ್‌ನ ಬಿಗ್ ಆಫರ್‌ವೊಂದನ್ನು ನಟಿ ಬಾಚಿಕೊಂಡಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

    ಈಗಾಗಲೇ ‘ಸಿಖಂದರ್’ ಸಿನಿಮಾದ ಶೂಟಿಂಗ್ ಭರದಿಂದ ನಡೆಯುತ್ತಿದೆ. ಸಲ್ಮಾನ್ ಖಾನ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ರಶ್ಮಿಕಾ ನಂತರ ಮತ್ತೋರ್ವ ನಟಿ ಕಾಜಲ್ ಚಿತ್ರಕ್ಕೆ ಸಾಥ್ ನೀಡುತ್ತಿದ್ದಾರೆ. ಅವರು ‘ಸಿಖಂದರ್’ ಸಲ್ಮಾನ್ (Salman Khan) ಜೊತೆ ಪ್ರಮುಖ ಪಾತ್ರದಲ್ಲಿ ‘ಮಗಧೀರ’ ನಟಿ ಕಾಣಿಸಿಕೊಳ್ತಿದ್ದಾರೆ ಎನ್ನಲಾಗಿದೆ. ಆದರೆ ನಟಿಯ ಎಂಟ್ರಿಯ ಹಾಗೂ ಆ ಪಾತ್ರದ ಕುರಿತು ಚಿತ್ರತಂಡ ಅಧಿಕೃತವಾಗಿ ತಿಳಿಸುವವರೆಗೂ ಕಾಯಬೇಕಿದೆ.

    ಕಾಜಲ್ ಎಂಟ್ರಿಯ ಬಗ್ಗೆ ಗುಸು ಗುಸು ಶುರುವಾಗ್ತಿದ್ದಂತೆ ಸಿನಿಮಾ ಕುರಿತು ಫ್ಯಾನ್ಸ್‌ಗೆ ನಿರೀಕ್ಷೆ ಹೆಚ್ಚಾಗಿದೆ. ಸಲ್ಮಾನ್, ರಶ್ಮಿಕಾ, ಕಾಜಲ್ ಈ ಮೂವರನ್ನು ತೆರೆಯ ಮೇಲೆ ಕಣ್ತುಂಬಿಕೊಳ್ಳೋಕೆ ಫ್ಯಾನ್ಸ್ ಕಾಯ್ತಿದ್ದಾರೆ. ಇದನ್ನೂ ಓದಿ:‘ಕಾಂತ’ ಚಿತ್ರಕ್ಕಾಗಿ ಕೈಜೋಡಿಸಿದ ರಾಣಾ ದಗ್ಗುಬಾಟಿ, ದುಲ್ಕರ್ ಸಲ್ಮಾನ್

    ಇನ್ನೂ ಈ ಚಿತ್ರವನ್ನು ಸ್ಟಾರ್ ಡೈರೆಕ್ಟರ್ ಎ.ಆರ್ ಮುರಗದಾಸ್ ನಿರ್ದೇಶನ ಮಾಡ್ತಿದ್ದಾರೆ. ಚಿತ್ರದಲ್ಲಿ ಪ್ರತೀಕ್ ಬಬ್ಬರ್, ಸತ್ಯರಾಜ್ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. ಮುಂದಿನ ವರ್ಷ ಸಿನಿಮಾ ರಿಲೀಸ್ ಆಗಲಿದೆ.

  • ಚುನಾವಣೆಯಲ್ಲಿ ಗೆದ್ದ ಬಾಲಯ್ಯಗೆ ಕಾಜಲ್ ವಿಶ್

    ಚುನಾವಣೆಯಲ್ಲಿ ಗೆದ್ದ ಬಾಲಯ್ಯಗೆ ಕಾಜಲ್ ವಿಶ್

    ಟಾಲಿವುಡ್ ನಟ ನಂದಮೂರಿ ಬಾಲಕೃಷ್ಣ (Nandamuri Balakrishna) ಅವರು 3ನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಟಿಡಿಪಿ ಅಭ್ಯರ್ಥಿಯಾಗಿ ಹಿಂದೂಪುರ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಬಾಲಯ್ಯ ಅವರು ವೈಎಸ್‌ಆರ್‌ಸಿಯ ದೀಪಿಕಾ ವಿರುದ್ಧ 31,602 ಅಂತರಗಳಿಂದ ಗೆದ್ದಿದ್ದಾರೆ. ಬಾಲಯ್ಯ ಗೆಲುವಿಗೆ ತೆಲುಗಿನ ಸ್ಟಾರ್ಸ್ ಅಭಿನಂದನೆ ತಿಳಿಸಿದ್ದಾರೆ. ಈಗ ಚುನಾವಣೆಯಲ್ಲಿ ಗೆದ್ದ ಬಾಲಯ್ಯಗೆ ಕಾಜಲ್ ಅಗರ್ವಾಲ್ (Kajal Aggarwal)‌ ಕೂಡ ವಿಶ್ ಮಾಡಿದ್ದಾರೆ. ಇದನ್ನೂ ಓದಿ: ಸುದೀಪ್‌ಗೂ ಮುನ್ನ ಶಿವಣ್ಣಗೆ ‘ಸಪ್ತಸಾಗರದಾಚೆ ಎಲ್ಲೋ’ ನಿರ್ದೇಶಕ ಆ್ಯಕ್ಷನ್ ಕಟ್

    ಬಾಲಯ್ಯ ಅವರೇ ನಿಮ್ಮ ಅಮೋಘ ಯಶಸ್ಸಿಗೆ ಧನ್ಯವಾದಗಳು. ನಿಮ್ಮ ಪರಿಶ್ರಮ, ಬದ್ಧತೆ, ದೂರದೃಷ್ಟಿಯ ಕಾರಣದಿಂದಾಗಿ ನಿಮಗೆ ಜನರಿಂದ ಈ ಪರಿ ಪ್ರೀತಿ ಸಿಕ್ಕಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಕಾಜಲ್ ಶುಭಕೋರಿದ್ದಾರೆ. ನಟಿಯ ಪೋಸ್ಟ್‌ಗೆ ಬಾಲಯ್ಯ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ರೆ, ಇನ್ನೂ ಕೆಲವರು ಕಟುವಾಗಿ ಟೀಕೆ ಮಾಡಿದ್ದಾರೆ.

    ಇತ್ತೀಚೆಗೆ ಬಾಲಯ್ಯ ಅವರು ಭಾರೀ ಸುದ್ದಿಯಲ್ಲಿದ್ದಾರೆ. ಸಿನಿಮಾ ಸಮಾರಂಭವೊಂದರಲ್ಲಿ ನಟಿ ಅಂಜಲಿರನ್ನು ಬಾಲಯ್ಯ ತಳ್ಳಿದ್ದರು. ಈ ವಿಚಾರಕ್ಕೆ ಬಾಲಯ್ಯಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಆದರೆ ಅಂಜಲಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಸಿನಿಮಾ ಕಾರ್ಯಕ್ರಮಕ್ಕೆ ಬಂದು ಬೆಂಬಲ ನೀಡಿದಕ್ಕೆ ಥ್ಯಾಂಕ್ಯೂ ಹೇಳಿ ವಿವಾದಕ್ಕೆ ತೆರೆ ಎಳೆದಿದ್ದರು.

  • ಮದುವೆಯಾದ ನಾಯಕಿಯರಿಗೆ ದಕ್ಷಿಣಕ್ಕಿಂತ ಬಾಲಿವುಡ್ ಬೆಸ್ಟ್ ಎಂದ ಕಾಜಲ್

    ಮದುವೆಯಾದ ನಾಯಕಿಯರಿಗೆ ದಕ್ಷಿಣಕ್ಕಿಂತ ಬಾಲಿವುಡ್ ಬೆಸ್ಟ್ ಎಂದ ಕಾಜಲ್

    ‘ಮಗಧೀರ’ ನಟಿ ಕಾಜಲ್ ಅಗರ್ವಾಲ್ (Kajal Aggarwal) ಮದುವೆ, ತಾಯ್ತನದ ಬಳಿಕ ಚಿತ್ರರಂಗದಲ್ಲಿ ಮತ್ತಷ್ಟು ಆ್ಯಕ್ಟೀವ್ ಆಗಿದ್ದಾರೆ. ಇದೀಗ ಅವರಿಗೆ ಮಹಿಳಾ ಪ್ರಧಾನ ಸಿನಿಮಾಗಳ ಆಫರ್‌ಗಳು ಅರಸಿ ಬರುತ್ತಿವೆ. ಇದೀಗ ಸಂದರ್ಶನವೊಂದರಲ್ಲಿ ಮದುವೆಯಾದ (Marraige) ನಟಿಯರಿಗೆ ದಕ್ಷಿಣ ಚಿತ್ರರಂಗಕ್ಕಿಂತ ಬಾಲಿವುಡ್ ಬೆಸ್ಟ್ ಎಂದು ನಟಿ ಬಣ್ಣಿಸಿದ್ದಾರೆ.

    2 ವರ್ಷಗಳ ಹಿಂದೆ ಉದ್ಯಮಿ ಗೌತಮ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ, ಬಳಿಕ ಚೊಚ್ಚಲ ಮಗುವನ್ನು ಕೂಡ ಬರಮಾಡಿಕೊಂಡರು. ಇದೀಗ ಮತ್ತೆ ಚಿತ್ರರಂಗಕ್ಕೆ ಕಮ್ ಬ್ಯಾಕ್ ಆಗಿರುವ ನಟಿಗೆ ರೊಮ್ಯಾಂಟಿಕ್ ಸಿನಿಮಾಗಳು ಸಿಗುತ್ತಿಲ್ಲವಂತೆ. ಬರೀ ಮಹಿಳಾ ಪ್ರಧಾನ, ಪತ್ತೆಧಾರಿ ಕಥೆಗಳು ಅವರನ್ನು ಅರಸಿ ಬರುತ್ತಿವೆಯಂತೆ. ಹಾಗಾಗಿ ಈ ಬಗ್ಗೆ ನಟಿ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ:ಫ್ಯಾನ್ಸ್‌ಗೆ ಸಿಹಿಸುದ್ದಿ ಕೊಟ್ಟ ‘ಅರಸು’ ನಟಿ- ತೆಲುಗಿಗೆ ಮೀರಾ ಜಾಸ್ಮಿನ್ ಕಮ್‌‌ ಬ್ಯಾಕ್

    ಮದುವೆಯ ಬಳಿಕ ದೀಪಿಕಾ ಪಡುಕೋಣೆ (Deepika Padukone) ‘ಫೈಟರ್’ ಸಿನಿಮಾದಲ್ಲಿ ಆ್ಯಕ್ಷನ್ ಕಮ್ ರೊಮ್ಯಾಂಟಿಕ್ ಸಿನಿಮಾ ಮಾಡಿದರು. ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾದಲ್ಲಿ ರಣವೀರ್ ಜೊತೆ ಹಾಟ್ ಆಗಿ ಆಲಿಯಾ (Alia Bhatt) ಕಾಣಿಸಿಕೊಂಡರು. ಆದರೆ ದಕ್ಷಿಣ ಸಿನಿಮಾದಲ್ಲಿ ಈ ರೀತಿ ಇಲ್ಲ. ರೊಮ್ಯಾಂಟಿಕ್ ಸಿನಿಮಾಗಳಿಂದ ಮದುವೆಯಾದ ನಟಿಯರನ್ನು ಹೊರಗಿಡುತ್ತಾರೆ. ಈ ವಿಚಾರದಲ್ಲಿ ದಕ್ಷಿಣಕ್ಕಿಂತ ಬಾಲಿವುಡ್ ಬೆಸ್ಟ್ ಆಗಿದೆ. ಈ ಮನಸ್ಥಿತಿ ಎಲ್ಲಾ ಚಿತ್ರರಂಗದಲ್ಲೂ ಬದಲಾಗಬೇಕು ಎಂದು ಕಾಜಲ್ ಮಾತನಾಡಿದ್ದಾರೆ.

    ಅಂದಹಾಗೆ, ಕಮಲ್ ಹಾಸನ್ ಜೊತೆ ‘ಇಂಡಿಯನ್ 2’ ಸಿನಿಮಾ, ಬಾಲಿವುಡ್‌ನ ‘ಉಮಾ’ ಎಂಬ ಸಿನಿಮಾದಲ್ಲಿ ಕಾಜಲ್ ನಟಿಸಿದ್ದಾರೆ.

  • ‘ಕಣ್ಣಪ್ಪ’ ಚಿತ್ರಕ್ಕೆ ಕಾಜಲ್ ಭರ್ಜರಿ ಎಂಟ್ರಿ

    ‘ಕಣ್ಣಪ್ಪ’ ಚಿತ್ರಕ್ಕೆ ಕಾಜಲ್ ಭರ್ಜರಿ ಎಂಟ್ರಿ

    ಪಾತ್ರವರ್ಗದ ವಿಚಾರವಾಗಿಯೇ ಸಾಕಷ್ಟು ಸದ್ದು ಮಾಡುತ್ತಿದೆ ತೆಲುಗಿನ ಕಣ್ಣಪ್ಪ (Kannappa) ಸಿನಿಮಾ. ಆಗೊಬ್ಬರು ಈಗೊಬ್ಬರು ಈ ಚಿತ್ರದ ತಾರಾಬಳಗ ಸೇರಿಕೊಳ್ಳುತ್ತಲೇ ಇದ್ದಾರೆ. ಇದೀಗ ಮತ್ತೋರ್ವ ಸ್ಟಾರ್‌ ಈ ತಂಡ ಸೇರಿಕೊಂಡಿದ್ದಾರೆ. ಅದು ಬೇರಾರು ಅಲ್ಲ, ನಟಿ ಕಾಜಲ್‌ ಅಗರ್‌ವಾಲ್ (Kajal Aggarwal). ವಿಷ್ಣು ಮಂಚು ಮತ್ತು ಕಾಜಲ್ ಅಗರ್ವಾಲ್ ಈ ಹಿಂದೆ ತೆಲುಗಿನ ಮೊಸಗಲ್ಲು ಚಿತ್ರದಲ್ಲಿ ಸಹೋದರ ಮತ್ತು ಸಹೋದರಿಯಾಗಿ ಕಾಣಿಸಿಕೊಂಡಿದ್ದರು. ಇದೀಗ ವಿಷ್ಣು ಮಂಚು ಅವರ ಬಹುನಿರೀಕ್ಷಿತ ಪ್ರಾಜೆಕ್ಟ್‌ ಕಣ್ಣಪ್ಪ ಚಿತ್ರಕ್ಕೂ ಆಗಮಿಸುವ ಮೂಲಕ ಎರಡನೇ ಸಲ ಒಂದಾಗುತ್ತಿದ್ದಾರೆ.

    ಹಾಗಾದರೆ, ಕಾಜಲ್‌ ಅಗರ್‌ವಾಲ್‌ ಪಾತ್ರವೇನು? ಸದ್ಯಕ್ಕೆ ಆ ಬಗ್ಗೆ ಚಿತ್ರತಂಡ ರಿವೀಲ್‌ ಮಾಡಿಲ್ಲ. ಬದಲಿಗೆ ವಿಶೇಷವಾದ ಪಾತ್ರವೊಂದರಲ್ಲಿ ಕಾಜಲ್‌ ನಟಿಸುವ ಮೂಲಕ ಕಣ್ಣಪ್ಪ ಸಿನಿಮಾದ ಭಾಗವಾಗಲಿದ್ದಾರೆ. ನೂರಾರು ಕೋಟಿ ಬಜೆಟ್‌ನಲ್ಲಿ ದೊಡ್ಡ ಕ್ಯಾನ್ವಾಸ್‌ನೊಂದಿಗೆ ಮೂಡಿಬರುತ್ತಿರುವ ಈ ಸಿನಿಮಾದ ಶೂಟಿಂಗ್‌ ಸಹ ಅಷ್ಟೇ ಬಿರುಸಾಗಿಯೇ ನಡೆಯುತ್ತಿದೆ.

    ಈ ಚಿತ್ರದಲ್ಲಿ ಮೋಹನ್ ಬಾಬು, ಪ್ರಭಾಸ್, ಅಕ್ಷಯ್ ಕುಮಾರ್, ಮೋಹನ್ ಲಾಲ್ ಮತ್ತು ಶರತ್‌ಕುಮಾರ್ ಸೇರಿ ಬಹು ತಾರಾಗಣವೇ ಇದೆ. ಇತ್ತೀಚೆಗಷ್ಟೇ ಬಾಲಿವುಡ್‌ ನಟ ಅಕ್ಷಯ್ ಕುಮಾರ್ ಸಹ ಈ ಚಿತ್ರದ ಮೂಲಕ ಸೌತ್‌ ಕಡೆಗೆ ವಾಲಿದ್ದಾರೆ. ತಮ್ಮ ಭಾಗದ ಚಿತ್ರೀಕರಣವನ್ನೂ  ಪೂರ್ಣಗೊಳಿಸಿದ್ದಾರೆ. ಪ್ರಭಾಸ್ ಸಹ ಕೆಲವು ದಿನಗಳ ಹಿಂದೆ ಕಣ್ಣಪ್ಪ ತಂಡವನ್ನು ಸೇರಿಕೊಂಡರು. ಈಗ ಕಾಜಲ್‌ ಅಗರ್‌ವಾಲ್‌ ಸರದಿ.

    ಮೋಹನ್ ಬಾಬು ನಿರ್ಮಿಸುತ್ತಿರುವ ಕಣ್ಣಪ್ಪ ಚಿತ್ರವನ್ನು ಮುಖೇಶ್ ಕುಮಾರ್ ಸಿಂಗ್ ನಿರ್ದೇಶನ ಮಾಡುತ್ತಿದ್ದಾರೆ. ತೆಲುಗು ಮಾತ್ರವಲ್ಲದೆ, ತಮಿಳು, ಕನ್ನಡ, ಮಲಯಾಳಂ, ಹಿಂದಿ ಸೇರಿ ಇನ್ನೂ ಹಲವು ಭಾರತೀಯ ಭಾಷೆಗಳಿಗೂ ಈ ಚಿತ್ರ ಡಬ್‌ ಆಗಿ ರಿಲೀಸ್‌ ಆಗಲಿದೆ. ಅದೇ ರೀತಿ ಚಿತ್ರೀಕರಣದ ಮುಕ್ತಾಯದ ಹಂತಕ್ಕೂ ಬಂದು ನಿಂತಿರುವ ಈ ಸಿನಿಮಾ ಇನ್ನೇನು ಶೀಘ್ರದಲ್ಲಿ ಬಿಡುಗಡೆ ದಿನಾಂಕವೂ ಘೋಷಣೆ ಆಗಲಿದೆ.

  • ಜ್ಯೂ.ಎನ್‌ಟಿಆರ್ ನಟನೆಯ ‘ದೇವರ’ ಚಿತ್ರದಲ್ಲಿ ಮಗಧೀರ ಬೆಡಗಿ ಕಾಜಲ್

    ಜ್ಯೂ.ಎನ್‌ಟಿಆರ್ ನಟನೆಯ ‘ದೇವರ’ ಚಿತ್ರದಲ್ಲಿ ಮಗಧೀರ ಬೆಡಗಿ ಕಾಜಲ್

    ‘ಮಗಧೀರ’ ಬ್ಯೂಟಿ ಕಾಜಲ್ ಅಗರ್ವಾಲ್ (Kajal Aggarwal) ಮದುವೆಯಾಗಿ ಮಗು ಆದ್ಮೇಲೆ ಕೂಡ ನಟನೆಯಲ್ಲಿ ಸಕ್ರಿಯರಾಗಿದ್ದಾರೆ. ತಮ್ಮ ಚಾರ್ಮ್ ಅನ್ನು ನಟಿ ಉಳಿಸಿಕೊಂಡಿದ್ದಾರೆ. ಸದ್ಯ ನಟಿಯ ಬಗ್ಗೆ ಕ್ರೇಜಿ ಅಪ್‌ಡೇಟ್‌ವೊಂದು ಸಿಕ್ಕಿದೆ. ಸ್ಟಾರ್ ನಟ ಜ್ಯೂ.ಎನ್‌ಟಿಆರ್ ನಟನೆಯ ದೇವರ ಚಿತ್ರಕ್ಕೆ ಕಾಜಲ್ ಕೈಜೋಡಿಸಿದ್ದಾರೆ. ಇದನ್ನೂ ಓದಿ:ಇಂದು ಡಾ.ರಾಜ್‌ಕುಮಾರ್ 95ನೇ ವರ್ಷದ ಹುಟ್ಟುಹಬ್ಬ

    ಇತ್ತೀಚೆಗೆ ಪೂಜಾ ಹೆಗ್ಡೆ ಸಿನಿಮಾದಲ್ಲಿ ಸ್ಪೆಷಲ್ ಸಾಂಗ್‌ನಲ್ಲಿ ಕುಣಿಯುತ್ತಾರೆ ಎನ್ನಲಾಗಿತ್ತು. ಪೂಜಾ ಒಬ್ಬರೇ ಅಲ್ಲ ಅವರ ಜೊತೆ ಕಾಜಲ್ ಕೂಡ ಸೊಂಟ ಬಳುಕಿಸಲಿದ್ದಾರೆ ಎಂಬ ಲೇಟೆಸ್ಟ್ ಅಪ್‌ಡೇಟ್‌ವೊಂದು ಸಿಕ್ಕಿದೆ. ಇಬ್ಬರೂ ಕೂಡ ಜ್ಯೂ.ಎನ್‌ಟಿಆರ್ ಜೊತೆ ಹೆಜ್ಜೆ ಹಾಕಲಿದ್ದಾರೆ.

    ‘ದೇವರ’ ಸಿನಿಮಾದಲ್ಲಿ ಪೂಜಾ ಹೆಗ್ಡೆ ಮತ್ತು ಕಾಜಲ್ ಡ್ಯಾನ್ಸ್‌ಗೆ ಮಾತ್ರ ಸೀಮಿತನಾ? ಅಥವಾ ನಟನೆಗೂ ಅವಕಾಶವಿದ್ಯಾ ಎಂಬುದು ಖಾತ್ರಿಯಾಗಿಲ್ಲ. ಜ್ಯೂ.ಎನ್‌ಟಿಆರ್‌ ಜೊತೆಗೆ ಈ ಹಿಂದೆ ಕೂಡ ನಾಯಕಿಯಾಗಿ ಕಾಜಲ್‌ ನಟಿಸಿದ್ದಾರೆ. ಆ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಗೆದ್ದು ಬೀಗಿತ್ತು.

    ಇನ್ನೂ ಈ ಹಿಂದೆ ಕೂಡ ಚಿರಂಜೀವಿ, ರಾಮ್ ಚರಣ್ ನಟನೆಯ ‘ಆಚಾರ್ಯ’ (Acharya) ಚಿತ್ರದಲ್ಲಿ ಪೂಜಾ ಹೆಗ್ಡೆ (Pooja Hegde) ಮತ್ತು ಕಾಜಲ್ ಜೊತೆಯಾಗಿ ನಟಿಸಿದ್ದರು. ಇಬ್ಬರಿಗೂ ಉತ್ತಮ ಒಡನಾಟವಿದೆ. ಹಾಗಾಗಿ ಮತ್ತೆ ಈ ಕಾಂಬಿನೇಷನ್ ರಿಪೀಟ್ ಆದರೆ ಚೆನ್ನಾಗಿರುತ್ತೆ ಎಂಬುದು ಪ್ರೇಕ್ಷಕರ ಅಭಿಪ್ರಾಯ. ಮುಂದಿನ ದಿನಗಳಲ್ಲಿ ಚಿತ್ರತಂಡದಿಂದ ಈ ಕುರಿತು ಸಿಹಿಸುದ್ದಿ ಸಿಗುತ್ತಾ? ಕಾಯಬೇಕಿದೆ.

  • ಕಾಜಲ್‌ ನಟನೆಯ ‌’ಸತ್ಯಭಾಮಾ’ ಚಿತ್ರದ ಬಗ್ಗೆ ಫ್ಯಾನ್ಸ್‌ಗೆ ಬಿಗ್‌ ಅಪ್‌ಡೇಟ್

    ಕಾಜಲ್‌ ನಟನೆಯ ‌’ಸತ್ಯಭಾಮಾ’ ಚಿತ್ರದ ಬಗ್ಗೆ ಫ್ಯಾನ್ಸ್‌ಗೆ ಬಿಗ್‌ ಅಪ್‌ಡೇಟ್

    ‘ಮಗಧೀರ’ನ (Magadheera) ಬೆಡಗಿ ಕಾಜಲ್ ಅಗರ್ವಾಲ್ (Kajal Aggarwal) ಮದುವೆಯಾಗಿ ಮಗು ಆದ್ಮೇಲೆಯೂ ತಮ್ಮ ಚಾರ್ಮ್ ಉಳಿಸಿಕೊಂಡಿದ್ದಾರೆ. ಸತ್ಯಭಾಮಾ ಆಗಿ ಗನ್ ಹಿಡಿದು ಮಾಸ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಕಾಜಲ್ ದರ್ಶನ ಯಾವಾಗ ಎಂದು ಎದುರು ನೋಡುತ್ತಿದ್ದ ಫ್ಯಾನ್ಸ್‌ಗೆ ಬಿಗ್ ಅಪ್‌ಡೇಟ್ ಸಿಕ್ಕಿದೆ.

    ಎಂದೂ ನಟಿಸಿದ ಪಾತ್ರದಲ್ಲಿ ಕಾಜಲ್ ಕಾಣಿಸಿಕೊಂಡಿದ್ದಾರೆ. ಶಿಸ್ತಿನ ಪೊಲೀಸ್ ಅಧಿಕಾರಿಯಾಗಿ ನಟಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಟೀಸರ್‌ಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಈ ಬೆನ್ನಲ್ಲೇ ರಿಲೀಸ್ ಬಗ್ಗೆ ಚಿತ್ರತಂಡ ಮಾಹಿತಿ ನೀಡಿದೆ. ಮುಂದಿನ ತಿಂಗಳು 17ಕ್ಕೆ ಸತ್ಯಭಾಮಾ ಸಿನಿಮಾ ರಿಲೀಸ್ ಆಗಲಿದೆ.

     

    View this post on Instagram

     

    A post shared by Aurum Arts Official (@aurumartsoffl)

    ಈ ಚಿತ್ರದ ಮೂಲಕ ‘ಕ್ವೀನ್ ಆಫ್ ಮಾಸಸ್’ ಎಂದು ಚಿತ್ರತಂಡ ಬಿರುದು ನೀಡಿದ್ದಾರೆ. ಸದ್ಯ ಕಾಜಲ್ ಹೊಸ ಅವತಾರ ನೋಡಲು ಅಭಿಮಾನಿಗಳು ಕಾತರದಿಂದ ಎದುರು ನೋಡ್ತಿದ್ದಾರೆ. ಇದನ್ನೂ ಓದಿ:ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ನಟಿ ಆರುಷಿ ಶರ್ಮಾ

    ಸತ್ಯಭಾಮಾ (Satyabhama) ಸಿನಿಮಾದ ಜೊತೆ ‘ಇಂಡಿಯನ್ 2’ ಚಿತ್ರದಲ್ಲಿ ಕೂಡ ಕಾಜಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.