Tag: Kajal Agarwal

  • ಮತ್ತೊಬ್ಬ ತಮಿಳು ಸ್ಟಾರ್ ಜೊತೆ ಸಂಯುಕ್ತಾ ಹೆಗ್ಡೆ ಅಭಿನಯ

    ಮತ್ತೊಬ್ಬ ತಮಿಳು ಸ್ಟಾರ್ ಜೊತೆ ಸಂಯುಕ್ತಾ ಹೆಗ್ಡೆ ಅಭಿನಯ

    ಬೆಂಗಳೂರು: ಕಿರಿಕ್ ಪಾರ್ಟಿ ಚಿತ್ರದ ಮೂಲಕವೇ ನಾಯಕಿಯಾಗಿ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟಿದ್ದ ಸಂಯುಕ್ತಾ ಹೆಗ್ಡೆ ಈಗಾಗಲೇ ತಮಿಳಿನಲ್ಲಿ ಅಭಿನಯಿಸುತ್ತಿದ್ದಾರೆ. ಈಗ ಮತ್ತೊಬ್ಬ ತಮಿಳು ನಟನ ಜೊತೆ ಅಭಿನಯಿಸುವ ಅವಕಾಶ ದೊರೆತಿದೆ.

    ತಮಿಳು ನಟ ಜಯಂ ರವಿ ಜೊತೆ ಈಗ ಸಂಯುಕ್ತಾ ಹೆಗ್ದೆ ಅಭಿನಯಿಸಲಿದ್ದಾರೆ. ಜಯಂ ರವಿ ಅವರು ಅಭಿನಯಿಸುತ್ತಿರುವ ಸಿನಿಮಾ ಕಾಮಿಡಿ ಎಂಟರ್ ಟೈನ್ ಮೆಂಟ್ ಕಥೆಯಾಗಿದ್ದು, ಈ ಸಿನಿಮಾದ ಪಾತ್ರವೊಂದಕ್ಕೆ ಸಂಯುಕ್ತಾ ಹೆಗ್ದೆ ಆಯ್ಕೆಯಾಗಿದ್ದಾರೆ. ಈ ಬಗ್ಗೆ ಸಂಯುಕ್ತಾ ಅವರು ಟ್ವೀಟ್ ಮಾಡುವ ಮೂಲಕ ಸ್ಪಷ್ಟಪಡಿಸಿದ್ದಾರೆ.

    ಜಯಂ ರವಿ ಅವರ ಸಿನಿಮಾಗೆ ಈಗಾಗಲೇ ನಟಿ ಕಾಜಲ್ ಅಗರ್ ವಾಲ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಜಯಂ ರವಿ ಮತ್ತು ಕಾಜಲ್ ಇವರಿಬ್ಬರು ಒಟ್ಟಿಗೆ ಅಭಿನಯಿಸುತ್ತಿರುವ ಮೊದಲು ಸಿನಿಮಾ ಇದಾಗಿದೆ. ಈ ಸಿನಿಮಾದಲ್ಲಿ ಸಂಯುಕ್ತಾ ಕೂಡ ನಾಯಕಿಯಾಗಿ ಅಭಿನಯಿಸಲಿದ್ದಾರೆ. ಈ ಸಿನಿಮಾವನ್ನು ಪ್ರದೀಪ್ ರಂಗನಾಥನ್ ಅವರು ನಿರ್ದೇಶನ ಮಾಡುತ್ತಿದ್ದಾರೆ.

    ಸಂಯುಕ್ತಾ ಅಭಿನಯಿಸುತ್ತಿರುವ ತಮಿಳಿ ಎರಡನೇ ಸಿನಿಮಾವಾಗಿದೆ. ಈಗಾಗಲೇ ನಟ್ಟುದೇವ್ ಜೊತೆ ಸಂಯುಕ್ತಾ ಜೋಡಿಯಾಗಿ `ಪಪ್ಪಿ’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ‘ಪಪ್ಪಿ’ ಚಿತ್ರದಲ್ಲಿ ಕಥೆ ಅದ್ಭುತವಾಗಿರುವ ಕಾರಣದಿಂದ ಈ ಸಿನಿಮಾದಲ್ಲಿ ನಟಿಸಲು ಒಪ್ಪಿರೋದಾಗಿ ಹೇಳಿಕೊಂಡಿದ್ದರು.


    ತಮಿಳಿನಿಂದ ಸಾಲು ಸಾಲು ಅವಕಾಶಗಳು ಬರುತ್ತಿರುವುದರಿಂದ ಸಂಯುಕ್ತಾ ಖುಷಿಯ ಮೂಡಿನಲ್ಲಿದ್ದಾರೆ. ಸದ್ಯಕ್ಕೆ ಪಪ್ಪಿ ಸಿನಿಮಾದ ಶೂಟಿಂಗ್ ನಲ್ಲಿ ಸಂಯುಕ್ತಾ ಹೆಗ್ಡೆ ಬ್ಯುಸಿಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಜಮೀನಿನಲ್ಲಿ ಕಾಜಲ್ ಅಗರ್ವಾಲ್ ಕಟೌಟ್ -ಯಶಸ್ವಿಯಾಯ್ತು ರೈತನ ಪ್ರಯೋಗ

    ಜಮೀನಿನಲ್ಲಿ ಕಾಜಲ್ ಅಗರ್ವಾಲ್ ಕಟೌಟ್ -ಯಶಸ್ವಿಯಾಯ್ತು ರೈತನ ಪ್ರಯೋಗ

    ಹೈದರಾಬಾದ್: ಬೆಳೆ ಹಾಳಾಗುವುದನ್ನು ತಡೆಯಲು ಜಮೀನಿನಲ್ಲಿ ರೈತರೊಬ್ಬರು ಕಾಜಲ್ ಅಗರ್ವಾಲ್  ಕಟೌಟ್ ಹಾಕಿದ್ದು, ಈ ಪ್ರಯೋಗ ಈಗ ಯಶಸ್ವಿಯಾಗಿದೆ.

    ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಕೊಂಡಾರೆಡ್ಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ 30 ವರ್ಷದ ರೈತ ಅನ್ವರ್ ಎರಡು ಎಕರೆ ಕೃಷಿ ಭೂಮಿಯನ್ನು ಹೊಂದಿದ್ದಾರೆ. ಹೆದ್ದಾರಿಯ ಪಕ್ಕದಲ್ಲಿಯೇ ಇರುವ ಜಮೀನಿನಲ್ಲಿ ಶ್ರಮ ಹಾಕಿ ತರಕಾರಿ ಬೆಳೆ ಚೆನ್ನಾಗಿ ಬಂದರೂ ಕೊನೆ ಹಂತದಲ್ಲಿ ಒಣಗಿ ಹೋಗುತ್ತಿತ್ತು.

    ಬೆಳೆ ಒಣಗುತ್ತಿರುವುದು ಯಾಕೆ ಎಂದು ಮನಸ್ಸಿನಲ್ಲೇ ಪ್ರಶ್ನಿಸಿದಾಗ, ರಸ್ತೆಯಲ್ಲಿ ಹೋಗುವ ಮಂದಿ ಪದೇ ಪದೇ ತನ್ನ ಜಮೀನಿನತ್ತ ನೋಡುವುದರಿಂದ ದೃಷ್ಟಿ ತಾಗಿ ಬೆಳೆ ಒಣಗುತ್ತಿದೆ ಎನ್ನುವ ಉತ್ತರ ಅನ್ವರ್ ಅವರಿಗೆ ಸಿಕ್ಕಿದೆ.

    ಈ ಸಮಸ್ಯೆಗೆ ಪರಿಹಾರ ಏನು ಎಂದು ಆಲೋಚಿಸುತ್ತಿದ್ದಾಗ ಅವರಿಗೆ ಕಾಜಲ್ ಅಗರ್ವಾಲ್  ಕಟೌಟ್ ಹಾಕಿದರೆ ಹೇಗೆ ಎನ್ನುವ ಉಪಾಯ ಹೊಳೆದಿದೆ. ಐಡಿಯಾ ಹೊಳೆದಿದ್ದೆ ತಡ ಜಮೀನಿನ ಮಧ್ಯದಲ್ಲಿ ನೆಚ್ಚಿನ ನಟಿ ಕಾಜರ್ ಅಗರ್‍ವಾಲ್ ಕಟೌಟ್ ಹಾಕಿದ್ದಾರೆ. ಮೊದಲೆಲ್ಲ ಬೆಳೆಗಳನ್ನು ನೋಡುತ್ತಿದ್ದ ಜನ ಈಗ ಕಟೌಟ್ ನೋಡುತ್ತಿದ್ದಾರೆ. ಹೀಗಾಗಿ ಈಗ ಜಮೀನಿನ ಮೇಲೆ ಕೆಟ್ಟ ದೃಷ್ಟಿ ಬೀಳದ ಕಾರಣ ಬೆಳೆ ಒಣಗುತ್ತಿಲ್ಲ ಎಂದು ಅನ್ವರ್ ಹೇಳಿದ್ದಾರೆ.

    ಹೊಲದಲ್ಲಿ ಕೆಲ ದಿನಗಳ ಹಿಂದೆ ಕಾಜಲ್ ಅಗರ್ವಾಲ್  ಅವರ ಎರಡು ಕಟೌಟ್ ಗಳನ್ನು ನಿಲ್ಲಿಸಿದ್ದೇನೆ. ಈಗ ಬೆಳೆಯಲ್ಲಿ ಸಾಕಷ್ಟು ವ್ಯತ್ಯಾಸ ಕಾಣುತ್ತಿದ್ದೇನೆ. ಮೊದಲು ಬೆಳೆಗಳು ಒಣಗಿ ಹೋಗುತ್ತಿದ್ದವು. ಇದರಿಂದ ನಾನು ಹಾಕಿದ ಸಾಕಷ್ಟು ಹಣ ಹಾಗೂ ಶ್ರಮ ನಷ್ಟವಾಗುತ್ತಿತ್ತು. ಆದರೆ ಕಾಜಲ್ ಅಗರ್ವಾಲ್  ಕಟೌಟ್ ನಿಲ್ಲಿಸಿದಾಗಿನಿಂದ ಬೆಳೆಗಳು ಚೆನ್ನಾಗಿವೆ ಅಂತಾರೆ ರೈತ ಅನ್ವರ್.

    ಈಗ ಎಲ್ಲರೂ ನನ್ನ ಬೆಳೆಗಳನ್ನು ನೋಡುವುದನ್ನು ಮರೆತು ಕಟೌಟ್ ನೋಡುತ್ತಿದ್ದಾರೆ. ಇದರಿಂದ ಬೆಳೆಗಳಿಗೆ ಯಾವುದೇ ಕೆಟ್ಟ ದೃಷ್ಟಿ ಬೀಳುತ್ತಿಲ್ಲ ಎಂದು ತನ್ನ ಉಪಾಯವನ್ನು ಸಮರ್ಥಿಸಿಕೊಂಡಿದ್ದಾರೆ. ನನ್ನ ಈ ವಿಚಾರವನ್ನು ನೋಡಿ ಮೊದಲು ನಗುತ್ತಿದ್ದವರೆಲ್ಲ ಇಂದು ನನ್ನ ಬೆಳೆಗಳ ಕಡೆಗೆ ನೋಡದೇ ಕಟೌಟ್‍ಗಳನ್ನೇ ನೋಡುತ್ತಿದ್ದಾರೆ ಎಂದಿದ್ದಾರೆ.

    ಯಾಕೆ ಕಾಜಲ್ ಅಗರ್ವಾಲ್  ಕಟೌಟ್ ಹಾಕಿದ್ದು ಎಂದು ಪ್ರಶ್ನಿಸಿದ್ದಕ್ಕೆ, ನಾನು ಕಾಜಲ್ ಅಗರ್ವಾಲ್  ರ ದೊಡ್ಡ ಅಭಿಮಾನಿ ಎನ್ನುವುದು ನನ್ನ ತಂದೆಯವರಿಗೆ ಗೊತ್ತಿತ್ತು. ಹಾಗಾಗಿ ನನ್ನ ತಂದೆಯೇ ಕಾಜಲ್ ಅವರ ಕಟೌಟ್‍ಗಳನ್ನು ಜಮೀನಿನಲ್ಲಿ ಇಡುವಂತೆ ಸಲಹೆ ನೀಡಿದರು ಎಂದು ಅನ್ವರ್ ಉತ್ತರಿಸಿದ್ದಾರೆ.

    ಕೆಲ ತಿಂಗಳ ಹಿಂದೆಯಷ್ಟೇ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಚೆನ್ನಾರೆಡ್ಡಿ ಎಂಬ ರೈತ ತನ್ನ ಜಮೀನಿಲ್ಲಿ ಬೆಳೆದ ಬೆಳೆಗಳಿಗೆ ದೃಷ್ಟಿ ತಾಗದಿರಲಿ ಎಂದು ಸನ್ನಿಲಿಯೋನ್ ರ ಅರೆನಗ್ನ ಕಟೌಟ್ ನ್ನು ಜಮೀನಿನಲ್ಲಿ ನಿಲ್ಲಿಸಿದ್ದರು.

  • ಮಾರಿ-2 ಚಿತ್ರ ಶೂಟಿಂಗ್ ವೇಳೆ ಧನುಷ್‍ಗೆ ಗಾಯ – ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು

    ಮಾರಿ-2 ಚಿತ್ರ ಶೂಟಿಂಗ್ ವೇಳೆ ಧನುಷ್‍ಗೆ ಗಾಯ – ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು

    ಚೆನ್ನೈ: ಮಾರಿ-1 ಚಿತ್ರ ಬಿಡುಗಡೆಗೊಂಡು ಯಶಸ್ವಿಗೊಂಡಿದ್ದು, ಮಾರಿ-2 ತಯಾರಾಗುತ್ತಿರುವ ಹಿನ್ನೆಲೆಯಲ್ಲಿ ಚಿತ್ರದ ಶೂಟಿಂಗ್ ವೇಳೆಯಲ್ಲಿ ಧನುಷ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿತ್ರದ ಚಿತ್ರೀಕರಣಲ್ಲಿ ಧನುಷ್ ಹಾಗೂ ಖಳನಟನಾಗಿ ನಟಿಸುತ್ತಿರುವ ಟೊವಿನೊ ಥಾಮಸ್ ಫೈಟಿಂಗ್ ಸೀನ್ ವೊಂದರಲ್ಲಿ ನಟಿಸುತ್ತಿರುವಾಗ ಈ ಅವಘಡ ಸಂಭವಿಸಿದೆ.

    ಈ ಫೈಟಿಂಗ್ ಸೀನ್ ಚಿತ್ರೀಕರಣದ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಧನುಷ್‍ಗೆ ಎಡಮೊಣಕಾಲಿಗೆ ಗಾಯವಾಗಿದೆ. ಇದರಿಂದ ಚಿತ್ರೀಕರಣ ಸ್ಥಗಿತಗೊಂಡಿದೆ. ಚಿಕಿತ್ಸೆಯ ನಂತರ ಧನುಷ್ ಚೇತರಿಸಿಕೊಂಡಿದ್ದಾರೆಂದು ಚಿತ್ರತಂಡ ಹೇಳಿಕೆ ನೀಡಿದೆ. ಧನುಷ್ ಗಾಯಗೊಂಡ ವಿಷಯ ತಿಳಿದು ರಜನಿಕಾಂತ್ ಕುಟುಂಬದವರು ಆಸ್ಪತ್ರೆಗೆ ಭೇಟಿ ನೀಡಿ ಧನುಷ್‍ಗೆ ಧೈರ್ಯ ತುಂಬಿದ್ದಾರೆ.

    ಈ ಸಮಯದಲ್ಲಿ ರಜನಿಕಾತ್ ಶೂಟಿಂಗ್‍ಗಾಗಿ ಡೆಹ್ರಾಡೂನ್‍ನಲ್ಲಿ ಇದ್ದುದರಿಂದ ಅವರಿಗೆ ಆಸ್ಪತ್ರೆಗೆ ಬರಲು ಸಾಧ್ಯವಾಗಿಲ್ಲ. ಮೊಬೈಲ್ ಮೂಲಕ ಅವರು ಆರೋಗ್ಯದ ಬಗ್ಗೆ ಮಾತನಾಡಿದ್ದಾರಂತೆ.

    ‘ನನ್ನ ನಂಬಿಕೆಯ ಅಭಿಮಾನಿಗಳೇ, ನನಗೆ ಹೆಚ್ಚಿನ ಗಾಯಗಳೇನೂ ಆಗಿಲ್ಲ. ನಾನು ಕ್ಷೇಮವಾಗಿದ್ದೇನೆ. ನಿಮ್ಮೆಲ್ಲರ ಪ್ರಾರ್ಥನೆಗೆ ನಾನು ಆಭಾರಿಯಾಗಿದ್ದೇನೆ. ನಿಮ್ಮನ್ನು ಮತ್ತಷ್ಟು ಪ್ರೀತಿಸುತ್ತೇನೆ’ ಎಂದು ಟ್ವಿಟ್ಟರ್ ಮೂಲಕ ಧನುಷ್ ಹೇಳಿಕೆ ನೀಡಿದ್ದಾರೆ.

    2015ರಲ್ಲಿ ತೆರೆಕಂಡ ಚಿತ್ರ ಮಾರಿ-1. ಬಾಲಾಜಿ ಮೋಹನ್ ಈ ಚಿತ್ರಕಥೆ ಹಾಗೂ ನಿರ್ದೇಶನವನ್ನು ಮಾಡಿದ್ದರು. ಧನುಷ್, ಕಾಜಲ್ ಅಗರ್‍ವಾಲ್, ವಿಜಯ್ ಏಸುದಾಸ್, ರೊಬೊ ಶಂಕರ್ ಮತ್ತಿತರ ಈ ಚಿತ್ರದ ತಾರಾಗಣದಲ್ಲಿದ್ದರು. ಮಾರಿ ಚಿತ್ರದ 2ನೇ ಭಾಗವಾಗಿ ಮಾರಿ-2 ಚಿತ್ರ ತಯಾರಾಗುತ್ತಿದೆ. ಮೊದಲನೇ ಭಾಗದ ನಿರ್ದೇಶಕ ಬಾಲಾಜಿ ಮೋಹನ್‍ರವರೇ ಈ ಚಿತ್ರವನ್ನೂ ನಿರ್ದೇಶಿಸುತ್ತಿದ್ದಾರೆ.

    ಪ್ರೇಮಂ ಚಿತ್ರದ ನಾಯಕಿ ಸಾಯಿಪಲ್ಲವಿ ಈ ಚಿತ್ರದ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕಾಗಿ ಸಾಯಿ ಪಲ್ಲವಿ ಆಟೋರೈಡ್ ಮಾಡಲು ತರಬೇತಿ ಪಡೆದಿದ್ದಾರೆ. ಈ ಚಿತ್ರದಲ್ಲಿ ನಾಯಕಿಗೆ ಎಲ್ಲರನ್ನೂ ಕಿಂಡಲ್ ಮಾಡಿ ಜಾಲಿಯಾಗಿರುವಂತಹ ಕಥಾಪಾತ್ರವಿದೆ. ಚಿತ್ರದಲ್ಲಿ ಶರತ್ ಕುಮಾರ್ ಹಾಗೂ ಅವರ ಮಗಳು ವರಲಕ್ಷ್ಮಿ ಕೂಡ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ. ಧನುಷ್ ಸ್ವಂತದ್ದೇ ಆದ ವಂಡರ್‍ಬಾರ್ ಫಿಲ್ಮ್ ತಯಾರಿಸುತ್ತಿರುವ ಈ ಚಿತ್ರದಲ್ಲಿ ಯುವನ್ ಶಂಕರ್ ರಾಜಾ ಸಂಗೀತ ನೀಡಿದ್ದಾರೆ.

  • ತಮನ್ನಾ, ಕಾಜಲ್ ಅಗರ್ ವಾಲ್ ಸಮ್ಮುಖದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಪರೋಲ್ ಯಾದವ್

    ತಮನ್ನಾ, ಕಾಜಲ್ ಅಗರ್ ವಾಲ್ ಸಮ್ಮುಖದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಪರೋಲ್ ಯಾದವ್

    ಮೈಸೂರು: ಪ್ಯಾರ್ ಗೇ ಆಗ್ಬಿಟೈತೆ ಅನ್ನುತ್ತಲೇ ಪಡ್ಡೆಗಳ ಹೃದಯ ಬಡಿತ ಹೆಚ್ಚಿಸಿದ್ದ ನಟಿ ಪರೋಲ್ ಯಾದವ್ ಇಂದು ತಮ್ಮ 29ನೇ ವರ್ಷದ ಹುಟ್ಟಹಬ್ಬದ ಆಚರಿಸಿಕೊಂಡಿದ್ದಾರೆ. ಮುಂಬೈನಲ್ಲಿ ನೆಲೆಸಿರುವ ಪರೋಲ್ ಯಾದವ್ ಈ ವರ್ಷದ ಬರ್ತಡೆಯನ್ನು ವಿಶೇಷವಾಗಿ ಬಹುಭಾಷಾ ನಟಿಯರಾದ ತಮನ್ನಾ, ಕಾಜಲ್ ಅಗರ್ ವಾಲ್ ಅವರೊಂದಿಗೆ ಆಚರಿಸಿದರು. ಮೂವರು ಬ್ಯೂಟಿಗಳ ಸಮಾಗಮಕ್ಕೆ ವೇದಿಕೆಯಾಗಿದ್ದು `ಬಟರ್ ಫ್ಲೈ’ ಸಿನಿಮಾ.

    ಹೌದು ಕಂಗನಾ ರನೌತ್ ಅಭಿಯನದ ಬಾಲಿವುಡ್ ಚಿತ್ರ ಕ್ವೀನ್ ಈಗ ನಾಲ್ಕು ಭಾಷೆಯಲ್ಲಿ ಏಕಕಾಲಕ್ಕೆ ಸಿದ್ಧವಾಗುತ್ತಿದೆ. `ಬಟರ್ ಫ್ಲೈ’ ಕನ್ನಡದ ಅವತರಣಿಯಾಗಿದ್ದು, ಪರೋಲ್ ಯಾದವ್ ಅಭಿನಯಿಸಿದ್ದಾರೆ. ಚಿತ್ರೀಕರಣದ ನಡುವೆ ಪರೋಲ್ ಯಾದವ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

    ನಟ ರಮೇಶ್ ಅರವಿಂದ್ ನಿರ್ದೇಶನದ ಬಟರ್ ಫ್ಲೈ ಚಿತ್ರದ ಶೂಟಿಂಗ್ ಗಾಗಿ ಪರೋಲ್ ಯಾದವ್ ಕಳೆದ 15 ದಿನಗಳಿಂದಲೂ ಮೈಸೂರಿನಲ್ಲೇ ಠಿಕಾಣಿ ಹೂಡಿದ್ದಾರೆ. ಇದೇ ಚಿತ್ರ ತಮಿಳಿನಲ್ಲಿ ಪ್ಯಾರೀಸ್, ತೆಲುಗಿನಲ್ಲಿ ಕ್ವೀನ್ಸ್ ಒನ್ಸ್ ಎಗೇನ್, ಮಲೆಯಾಳಂನಲ್ಲಿ ಜಾಮ್ ಜಾಮ್ ಹೆಸರಿನಲ್ಲಿ ಏಕಕಾಲಕ್ಕೆ ಚಿತ್ರೀಕರಣವಾಗುತ್ತಿದೆ. ನಾಲ್ಕೂ ಭಾಷೆಗಳಲ್ಲಿ ಚಿತ್ರೀಕರಣ ಮುಕ್ತಾಯದ ಹಂತಕ್ಕೆ ಬಂದಿವೆ. ಈ ಪೈಕಿ ತಮಿಳು, ತೆಲುಗು ಚಿತ್ರಗಳ ಒಂದಷ್ಟು ಸೀಕ್ವೆನ್ಸ್ ಮೈಸೂರಿನಲ್ಲಿ ಶೂಟ್ ಆಗುತ್ತಿವೆ. ಈ ಹಿನ್ನೆಲೆಯಲ್ಲಿ ಕಾಜಲ್, ತಮನ್ನಾ ಮೈಸೂರಿಗೆ ಆಗಮಿಸಿದ್ದರು.

    ಚಿತ್ರೀಕರಣದ ಪ್ರಚಾರದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡು ತಮ್ಮ ಪಾತ್ರಗಳ ಬಗ್ಗೆ ಖುಷಿ ಹಂಚಿಕೊಂಡರು. ಪರೋಲ್ ಯಾದವ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮೂವರು ನಟಿಯರೂ ಮೈಸೂರಿನಲ್ಲಿ ಸಂಧಿಸಿದ್ರು.

     

  • ಕಾಜಲ್ ಅಗರ್ ವಾಲ್ ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ರಮೇಶ್ ಅರವಿಂದ್

    ಕಾಜಲ್ ಅಗರ್ ವಾಲ್ ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ರಮೇಶ್ ಅರವಿಂದ್

    ಬೆಂಗಳೂರು: ಸ್ಯಾಂಡಲ್‍ವುಡ್ ಪ್ರತಿಭಾನ್ವಿತ ನಟ ಕಮ್ ನಿರ್ದೇಶಕ ರಮೇಶ್ ಅರವಿಂದ್ ಟಾಲಿವುಡ್ ಬೆಡಗಿ ಕಾಜಲ್ ಅಗರ್ ವಾಲ್ ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.

    ಬಾಲಿವುಡ್ ನ ಯಶಸ್ವಿ `ಕ್ವೀನ್’ ಸಿನಿಮಾದ ತಮಿಳು ರಿಮೇಕ್ ಚಿತ್ರವನ್ನು ರಮೇಶ್ ನಿರ್ದೇಶಲಿದ್ದು, ಈ ಚಿತ್ರದಲ್ಲಿ ಕಾಜಲ್ ಅಗರ್‍ವಾಲ್ ನಾಯಕಿ ಆಗಿದ್ದಾರೆ.

    ಹಿಂದಿಯಲ್ಲಿ ಕಂಗನಾ ರಣಾವತ್ `ಕ್ವೀನ್’ ಆಗಿ ನಟಿಸಿ ಎಲ್ಲರಿಂದಲೂ ಭೇಷ್ ಅನ್ನಿಸಿಕೊಂಡಿದ್ದರು. ಇದೇ ಚಿತ್ರದ ಮನೋಜ್ಞ ನಟನೆಗಾಗಿ ಕಂಗನಾ ರಾಷ್ಟ್ರ ಪ್ರಶಸ್ತಿಯನ್ನು ಸಹ ಪಡೆದುಕೊಂಡಿದ್ದಾರೆ.

    ತಮಿಳಿನಲ್ಲಿ ಮೂಡಿ ಬರುತ್ತಿರುವ ಸಿನಿಮಾದಲ್ಲಿ ಕ್ವೀನ್ ಆಗಿ ಕಾಜಲ್ ಅಗರ್ ವಾಲ್ ನಟಿಸಲಿದ್ದಾರೆ. ತಮಿಳು ಚಿತ್ರಕ್ಕೆ `ಪ್ಯಾರೀಸ್ ಪ್ಯಾರೀಸ್’ ಎಂದು ಹೆಸರಿಡಲಾಗಿದ್ದು, ಸಿನಿಮಾದ ಫಸ್ಟ್ ಲುಕ್ ನ್ನು ಬಿಡುಗಡೆ ಮಾಡಲಾಗಿದೆ.

    ಇನ್ನೂ ಕನ್ನಡ ಅವತರಣಿಕೆಯಲ್ಲಿ ಪ್ಯಾರೇಗೆ ಆಗ್ಬುಟೈತೆ ಖ್ಯಾತಿಯ ಪರೂಲ್ ಯಾದವ್ ಬಣ್ಣ ಹಚ್ಚಲಿದ್ದಾರೆ. ಕನ್ನಡ ಸಿನಿಮಾಗೆ `ಬಟರ್ ಫ್ಲೈ’ ಎಂಬ ಹೆಸರನ್ನು ಇಡಲಾಗಿದೆ. ಕ್ವೀನ್ ಬಾಲಿವುಡ್ ಚಿತ್ರರಂಗದಲ್ಲಿ ವಿಮರ್ಶಕರಿಂದ ಮತ್ತು ಅಭಿಮಾನಿಗಳಿಂದ ಅಪಾರ ಮೆಚ್ಚುಗೆಯನ್ನು ಪಡೆದುಕೊಂಡಿತ್ತು.

    ಕಥಾ ನಾಯಕಿ ತನ್ನ ಮದುವೆ ಮುರಿದು ಬಿದ್ದ ನಂತರ ಒಬ್ಬಳೆ ಹನಿಮೂನ್ ಗಾಗಿ ವಿದೇಶಕ್ಕೆ ಹೋಗುವ ಕತೆಯನ್ನು ಸಿನಿಮಾ ಹೊಂದಿದೆ. ಈ ವೇಳೆ ಕಥಾ ನಾಯಕಿ ಪಡೆಯುವ ಹೊಸ ಅನುಭವ ಮತ್ತು ಆಕೆಯ ಮದುವೆ ಮುರಿದು ಬಿದ್ದ ನಂತರ ನಾಯಕಿಯಲ್ಲಾಗುವ ಬದಲಾವಣೆಗಳನ್ನು ಸಿನಿಮಾದಲ್ಲಿ ಕಾಣಬಹುದಾಗಿದೆ.