Tag: Kajal Agarwal

  • ಹೊಸ ಫೋಟೋಶೂಟ್‌ನಲ್ಲಿ ಮಿಂಚಿದ ಮಗಧೀರನ ಬೆಡಗಿ ಕಾಜಲ್

    ಹೊಸ ಫೋಟೋಶೂಟ್‌ನಲ್ಲಿ ಮಿಂಚಿದ ಮಗಧೀರನ ಬೆಡಗಿ ಕಾಜಲ್

    ಸೌತ್ ನಟಿ ಕಾಜಲ್ ಅಗರ್‌ವಾಲ್ (Kajal Aggarwal) ಮದುವೆಯಾಗಿ ಮಗುಯಾದ್ಮೇಲೂ ಅವರ ಚಾರ್ಮ್ ಕಳೆದುಕೊಂಡಿಲ್ಲ. ಇದೀಗ ಬೋಲ್ಡ್ ಫೋಟೋಶೂಟ್‌ನಿಂದ ನಟಿ ಕಾಜಲ್ ಮಿಂಚಿದ್ದಾರೆ.

    2020ರಲ್ಲಿ ಉದ್ಯಮಿ ಗೌತಮ್ ಅವರನ್ನು ಕಾಜಲ್ ಮದುವೆಯಾದರು. ಇದೀಗ ಈ ದಂಪತಿಗೆ `ನೀಲ್’ (Neel) ಎಂಬ ಮುದ್ದಾದ ಗಂಡು ಮಗುವಿದೆ. ಆಗಾಗ ನಯಾ ಫೋಟೋಶೂಟ್‌ನಿಂದ ಸದ್ದು ಮಾಡುವ ಕಾಜಲ್ ಇದೀಗ ಹೊಸ ಫೋಟೋಶೂಟ್‌ನಲ್ಲಿ ಗಮನ ಸೆಳೆದಿದ್ದಾರೆ. ಇದನ್ನೂ ಓದಿ: ಡಾಲಿ ಸಿನಿಮಾಗೆ ವಿಶ್ ಮಾಡಿ, ತೆಲುಗು ಚಿತ್ರ ನೋಡುತ್ತೇನೆ ಎಂದ ರಶ್ಮಿಕಾ ಮಂದಣ್ಣ

    ಹಸಿರು ಮತ್ತು ಕಪ್ಪು ಮಿಶ್ರಿತ ಬಣ್ಣದ ಡ್ರೆಸ್‌ನಲ್ಲಿ ಕಾಜಲ್ ಅಗರ್‌ವಾಲ್ ಕಂಗೊಳಿದ್ದಾರೆ. ಬೋಲ್ಡ್ ಆಗಿ ಕ್ಯಾಮೆರಾ ಕಣ್ಣಿಗೆ ನಟಿ ಪೋಸ್ ಕೊಟ್ಟಿದ್ದಾರೆ. ಸದ್ಯ ಈ ಚೆಂದದ ಫೋಟೋಶೂಟ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

    ಮದುವೆ (Wedding) ನಂತರ ಕಾಜಲ್ ಮತ್ತೆ ಬಾಲಯ್ಯ (Balayya) ಅವರ 108ನೇ ಸಿನಿಮಾಗೆ ನಾಯಕಿಯಾಗುವ ಮೂಲಕ ಕಂಬ್ಯಾಕ್ ಮಾಡಿದ್ದಾರೆ. ಬಾಲಯ್ಯಗೆ ಜೋಡಿಯಾಗಲು 4 ಕೋಟಿ ರೂ. ಜಾರ್ಜ್ ಮಾಡಿದ್ದಾರೆ.

  • `ಬಾಹುಬಲಿ’ ಸೀನ್ ರೀಕ್ರಿಯೇಟ್ ಮಾಡಿದ ಕಾಜಲ್ ಅಗರ್‌ವಾಲ್

    `ಬಾಹುಬಲಿ’ ಸೀನ್ ರೀಕ್ರಿಯೇಟ್ ಮಾಡಿದ ಕಾಜಲ್ ಅಗರ್‌ವಾಲ್

    ಕ್ಷಿಣ ಭಾರತದ ನಟಿ ಕಾಜಲ್ ಅಗರ್‌ವಾಲ್ ಸದ್ಯ ತಾಯ್ತನದ ಖುಷಿಯಲ್ಲಿದ್ದಾರೆ. ಪುಟ್ಟ ಕಂದಮ್ಮ ನೀಲ್ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುವ ಕಾಜಲ್ ಇದೀಗ ಬಾಹುಬಲಿ ಚಿತ್ರದ ದೃಶ್ಯವೊಂದನ್ನ ರೀಕ್ರಿಯೆಟ್ ಮಾಡಿದ್ದಾರೆ.

    ದಕ್ಷಿಣದ ಸಿನಿಮಾಗಳ ಮೂಲಕ ಸಂಚಲನ ಮೂಡಿಸಿದ ಬ್ಯೂಟಿ ಕ್ವೀನ್ ಕಾಜಲ್ ಅಗರ್‌ವಾಲ್ ಸದ್ಯ ಚಿತ್ರರಂಗದಿಂದ ದೂರವಿದ್ದಾರೆ. ಸಂಸಾರ, ಮಗನ ಪೋಷಣೆಯಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಸದ್ಯ ರಾಜಮೌಳಿ ನಿರ್ದೇಶನದ `ಬಾಹುಬಲಿ’ ಚಿತ್ರದ ದೃಶ್ಯವೊಂದನ್ನ ಕಾಜಲ್ ರೀಕ್ರಿಯೇಟ್ ಮಾಡಿ, ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಇದನ್ನೂ ಓದಿ:`ರಾಕಿ ಭಾಯ್’ ಮನೆಯಲ್ಲಿ ರಾಖಿ ಹಬ್ಬದ ಸಂಭ್ರಮ

    ಚಿತ್ರದಲ್ಲಿ ಕಟ್ಟಪ್ಪನ ತಲೆಯ ಮೇಲೆ ಮಗು ಕಾಲು ಇಡುವ ದೃಶ್ಯ ಇದೆ. ಅದನ್ನು ಕಾಜಲ್ ಅಗರ್‌ವಾಲ್ ಅವರು ಮರು ಸೃಷ್ಟಿ ಮಾಡಿದ್ದಾರೆ. ಕಾಜಲ್ ಕೂಡ ತನ್ನ ತಲೆಯ ಮೇಲೆ ಮಗುವಿನ ಪಾದವಿಟ್ಟು ರಾಜಮೌಳಿಗೆ ನಮ್ಮಿಬ್ಬರಿಂದಲೂ ಸಮರ್ಪಣೆ ಎಂದು ಹೇಳಿದ್ದಾರೆ. ಈ ಮುದ್ದಾದ ಫೋಟೋ ನೋಡಿ ಫ್ಯಾನ್ಸ್ ದಿಲ್ ಖುಷ್ ಆಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಗನೊಂದಿಗೆ ಗೋವಾ ಟ್ರಿಪ್ ಮೊದಲ ಫೋಟೋ ಹಂಚಿಕೊಂಡ ಕಾಜಲ್ ಅಗರ್‌ವಾಲ್

    ಮಗನೊಂದಿಗೆ ಗೋವಾ ಟ್ರಿಪ್ ಮೊದಲ ಫೋಟೋ ಹಂಚಿಕೊಂಡ ಕಾಜಲ್ ಅಗರ್‌ವಾಲ್

    ಕ್ಷಿಣ ಭಾರತದ ಖ್ಯಾತ ನಟಿ ಕಾಜಲ್ ಅಗರ್‌ವಾಲ್ ಸದ್ಯ ಮೊದಲ ಮಗುವಿನ ಆಗಮನದ ಖುಷಿಯಲ್ಲಿದ್ದಾರೆ. ಕಾಜಲ್ ದಂಪತಿ ಮಗ ನೀಲ್‌ನನ್ನು ಕರೆದುಕೊಂಡು ಗೋವಾ ಟ್ರಿಪ್‌ಗೆ ಹಾರಿದ್ದಾರೆ. ಈ ಕುರಿತು ವಿಶೇಷ ಫೋಟೋವೊಂದನ್ನ ನಟಿ ಹಂಚಿಕೊಂಡಿದ್ದಾರೆ.

    ಸೌತ್ ಸಿನಿರಂಗದ ಸಾಕಷ್ಟು ಸಿನಿಮಾಗಳ ಮೂಲಕ ಮೋಡಿ ಮಾಡಿರುವ ನಟಿ ಕಾಜಲ್ ಮೊದಲ ಆಗಮನದ ಖುಷಿಯಲ್ಲಿದ್ದಾರೆ. ಮಗ ನೀಲ್ ಪೋಷಣೆಯಲ್ಲಿ ಖುಷಿ ಕಾಣುತ್ತಿದ್ದಾರೆ. ಮಗ ನೀಲ್ ಮೊದಲ ಹಾಲಿಡೇ ಕುರಿತು ಮಾಡಿರುವ ಪೋಸ್ಟ್ ನೆಟ್ಟಿಗರ ಗಮನ ಸೆಳೆಯುತ್ತಿದೆ. ಗೋವಾ ಬೀಚ್‌ನಲ್ಲಿ ಹಾಲಿಡೇ ಏಂಜಾಯ್ ಮಾಡುತ್ತಿರುವ ಕಾಲಿನ ಫೋಟೋ ಶೇರ್ ಮಾಡಿ, ನೀಲ್ ಮೊದಲ ಹಾಲಿಡೇ ಟ್ರಿಪ್ ಎಂದು ಕಾಜಲ್ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಮಹಾಲಕ್ಷ್ಮಿ ಲೇಔಟ್ 55ನೇ ವಾರ್ಡ್‍ಗೆ ಅಪ್ಪು ಹೆಸರಿಟ್ಟಿರೋದು ಸಂತೋಷ ತಂದಿದೆ: ಸಿಎಂ

    ಕಾಜಲ್ ಮತ್ತು ಉದ್ಯಮಿ ಗೌತಮ್ ಪ್ರೀತಿಗೆ ಸಾಕ್ಷಿಯಾಗಿರುವ ನೀಲ್‌ನನ್ನು ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ. ಮುದ್ದು ಮಗನ ಲಾಲನೆಯಲ್ಲಿ ಬ್ಯುಸಿಯಿರುವ ನಟಿ ಸದ್ಯದಲ್ಲೇ ಬಣ್ಣದ ಲೋಕಕ್ಕೆ ಕಂಬ್ಯಾಕ್ ಆಗಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅಮ್ಮಂದಿರ ದಿನದ ವಿಶೇಷ: ತನ್ನ ಪುಟ್ಟ ರಾಜಕುಮಾರನಿಗಾಗಿ ಭಾವನಾತ್ಮಕ ಸಾಲು ಬರೆದ ಕಾಜಲ್

    ಅಮ್ಮಂದಿರ ದಿನದ ವಿಶೇಷ: ತನ್ನ ಪುಟ್ಟ ರಾಜಕುಮಾರನಿಗಾಗಿ ಭಾವನಾತ್ಮಕ ಸಾಲು ಬರೆದ ಕಾಜಲ್

    ಟಾಲಿವುಡ್ ಕ್ವೀನ್ ಕಾಜಲ್ ಅಗರ್ವಾಲ್ ಇತ್ತೀಚೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದು, ತನ್ನ ಮುದ್ದು ಕಂದಮ್ಮನ ಜೊತೆ ಹೃದಯಸ್ಪರ್ಶಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸೆಲೆಬ್ರಿಟಿಗಳ ಮಕ್ಕಳು ಹುಟ್ಟುವಾಗಲೇ ಸೆಲೆಬ್ರಿಟಿಗಳಾಗಿ ಹುಟ್ಟುತ್ತಾರೆ. ಅದರಂತೆ ಕಾಜಲ್ ಮಗನ ಮುದ್ದು ಮುಖ ನೋಡಬೇಕು ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಆದರೆ ಕಾಜಲ್ ಮಗನ ಜೊತೆ ಆಟವಾಡುವ ಫೋಟೋ ಶೇರ್ ಮಾಡಿದ್ರೂ, ಮುಖವನ್ನು ಮಾತ್ರ ಹ್ಯಾಡ್ ಮಾಡುತ್ತಿದ್ದರು. ಆದರೆ ಇಂದು ‘ಅಮ್ಮಂದಿರ ದಿನ’ವಾಗಿದ್ದರಿಂದ ತಮ್ಮ ಮುದ್ದು ಕಂದಮ್ಮನ ಫೋಟೋ ಜೊತೆಗೆ ಭಾವನ್ಮಾಕ ಸಾಲು ಬರೆದು ಪೋಸ್ಟ್ ಮಾಡಿದ್ದಾರೆ.

    ಕಾಜಲ್ ತನ್ನ ಮಗನಿಗೆ ನೀಲ್ ಎಂದು ಹೆಸರಿಟ್ಟಿದ್ದು, ತನ್ನ ಚಿಕ್ಕ ರಾಜಕುಮಾರನಿಗೆ ಮುದ್ದಾದ ಪತ್ರವನ್ನು ಬರೆದಿದ್ದಾರೆ. ಫೋಟೋವನ್ನು ಇನ್‍ಸ್ಟಾದಲ್ಲಿ ಶೇರ್ ಮಾಡಿದ ಕಾಜಲ್, ನನ್ನ ಪ್ರೀತಿಯ ನೀಲ್, ನೀನು ನನಗೆ ಯಾವಾಗಲೂ ಎಷ್ಟು ಅಮೂಲ್ಯವಾದವನು ಎಂದು ತಿಳಿಯಬೇಕೆಂದು ನಾನು ಬಯಸುತ್ತೇನೆ. ನಾನು ನಿನ್ನನ್ನು ನನ್ನ ತೋಳುಗಳಲ್ಲಿ ಹಿಡಿದಿಟ್ಟುಕೊಂಡೆ. ನಿನ್ನ ಪುಟ್ಟ ಕೈಯನ್ನು ನಾನು ಹಿಡಿದುಕೊಂಡಾಗ ನಿನ್ನ ಬೆಚ್ಚಗಿನ ಉಸಿರನ್ನು ನಾನು ಅನುಭವಿಸಿದೆ. ನಿನ್ನ ಸುಂದರವಾದ ಕಣ್ಣುಗಳನ್ನು ನೋಡಿದ ಕ್ಷಣ, ನಾನು ಶಾಶ್ವತವಾಗಿ ನಿನ್ನನ್ನು ಪ್ರೀತಿಸುತ್ತಿದ್ದೇನೆ. ಇದನ್ನೂ ಓದಿ: ಪೂಲ್‌ನಲ್ಲಿ ಪತಿಯ ಜೊತೆ ಹಾಟ್ ಆಗಿ ಕಾಣಿಸಿಕೊಂಡ ಕತ್ರಿನಾ ಕೈಫ್ 

    ನೀನು ನನ್ನ ಮೊದಲ ಮಗು. ಮುಂಬರುವ ವರ್ಷಗಳಲ್ಲಿ, ನಾನು ನಿನಗೆ ಕಲಿಸಲು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ. ಆದರೆ ನೀನು ಈಗಾಗಲೇ ನನಗೆ ಸಾಕಷ್ಟು ಪ್ರಮಾಣದಲ್ಲಿ ಕಲಿಸಿದ್ದೀಯಾ. ತಾಯಿಯಾಗುವುದು ಏನು ಎಂದು ನೀನು ನನಗೆ ಕಲಿಸಿದ್ದೀಯ. ನೀನು ನನಗೆ ನಿಸ್ವಾರ್ಥವಾಗಿರಲು, ಶುದ್ಧ ಪ್ರೀತಿ ಎಲ್ಲವನ್ನು ಕಲಿಸಿದ್ದೀಯ ಎಂದು ಭಾವನ್ಮಾಕ ಸಾಲುಗಳನ್ನು ಬರೆದು ಪೋಸ್ಟ್ ಮಾಡಿದ್ದಾರೆ.

    ಈ ಸಾಲುಗಳನ್ನು ನೋಡಿದ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ತಾಯಂದಿರ ದಿನ ವಿಶ್ ಮಾಡಿದ್ದು, ಕ್ಯೂಟ್ ಎಂದು ಕಾಮೆಂಟ್ ಮಾಡಿದ್ದಾರೆ. ಈ ಹಿಂದೆ ಕಾಜಲ್ ತನ್ನ ಪತಿ ಗೌತಮ್ ಬಗ್ಗೆಯೂ ಭಾವನ್ಮಾಕ ಸಾಲುಗಳನ್ನು ಬರೆದು ಪೊಸ್ಟ್ ಮಾಡಿದ್ದರು. ಗೌತಮ್ ಹೇಗೆ ತನ್ನನ್ನು ನೋಡಿಕೊಳ್ಳುತ್ತಾರೆ. ಅವರು ನನಗೆ ಗೌರವವನ್ನು ಕೊಡುತ್ತಾರೆ ಎಂಬುದನ್ನು ಬರೆದುಕೊಂಡಿದ್ದರು. ಇದನ್ನೂ ಓದಿ: ಗಂಡು ಮಗುವಿಗೆ ಜನ್ಮ ನೀಡಿದ ಕಾಜಲ್ ಅಗರ್ವಾಲ್

  • ʼಆಚಾರ್ಯ’ ಸಿನಿಮಾದಲ್ಲಿ ಕಾಜಲ್ ಇಲ್ಲ: ಶಾಕಿಂಗ್ ನ್ಯೂಸ್ ಕೊಟ್ಟ ನಿರ್ದೇಶಕ ಕೊರಟಾಲ ಶಿವ

    ʼಆಚಾರ್ಯ’ ಸಿನಿಮಾದಲ್ಲಿ ಕಾಜಲ್ ಇಲ್ಲ: ಶಾಕಿಂಗ್ ನ್ಯೂಸ್ ಕೊಟ್ಟ ನಿರ್ದೇಶಕ ಕೊರಟಾಲ ಶಿವ

    ಟಾಲಿವುಡ್ ಬ್ಯೂಟಿ ಕಾಜಲ್ ಅಗರ್ವಾಲ್ ಅವರು ಚಿರಂಜೀವಿ ಮತ್ತು ರಾಮ್ ಚರಣ್ ಅಭಿನಯದ ‘ಆಚಾರ್ಯ’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದರು. ಆದರೆ ಈ ಕುರಿತು ಕಾಜಲ್ ಅಪ್ಡೇಟ್‌ಗಳು ಮಾತ್ರ ಬರುತ್ತಿರಲಿಲ್ಲ. ಅಭಿಮಾನಿಗಳಲ್ಲಿ ಕಾಜಲ್ ಈ ಸಿನಿಮಾದಲ್ಲಿ ಇರುವ ಬಗ್ಗೆ ಅನುಮಾನ ಮೂಡಿತ್ತು. ಆದರೆ ‘ಆಚಾರ್ಯ’ ಸಿನಿಮಾ ನಿರ್ದೇಶಕ ಕೊರಟಾಲ ಶಿವ ಈ ಕುರಿತು ಸ್ಪಷ್ಟನೆ ಕೊಟ್ಟಿದ್ದಾರೆ.

    ‘ಆಚಾರ್ಯ’ ಸಿನಿಮಾದಲ್ಲಿ ಚಿರಂಜೀವಿಗೆ ನಾಯಕಿಯಾಗಿ ಕಾಜಲ್ ನಟಿಸುತ್ತಾರೆ ಎಂಬ ಚಿತ್ರತಂಡವೇ ಅಧಿಕೃತವಾಗಿ ಫೋಷಿಸಿತ್ತು. ಆದರೆ ಕಾಜಲ್ ಗರ್ಭಿಣಿಯಾದ ಬಳಿಕ ಸಿನಿಮಾ ಶೂಟಿಂಗ್ ಬಂದಿಲ್ಲ. ಈ ಹಿನ್ನೆಲೆ ಚಿತ್ರತಂಡ ಕಾಜಲ್ ಅವರು ಶೂಟ್ ಮಾಡಿದ್ದ ಕೆಲವು ದೃಶ್ಯಗಳನ್ನು ಸಿನಿಮಾದಿಂದ ಎಡಿಟ್ ಮಾಡಲಾಗಿದೆ ಎಂದು ಕೊರಟಾಲ ಶಿವ ಖಚಿತಪಡಿಸಿದ್ದಾರೆ. ಇದನ್ನೂ ಓದಿ: ಪ್ರೆಗ್ನೆನ್ಸಿಯಲ್ಲೂ ಫಿಟ್‍ನೆಸ್ ಇರಬೇಕು ಎಂದು ವೀಡಿಯೋ ಮಾಡಿದ ನಟಿ ಪ್ರಣಿತಾ

    Acharya' First Look: Chiranjeevi looks intense as the messiah for Dharmasthali | Telugu Movie News - Times of India

    ಸುದ್ದಿಗೋಷ್ಠಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಜಲ್ ಮೊದಲ ಶೆಡ್ಯೂಲ್ ಮುಗಿದ ನಂತರ, ಅವರು ಮತ್ತೆ ಶೂಟಿಂಗ್ ಬರುವುದು ಕಷ್ಟವಾಗುತ್ತಿತ್ತು. ಈ ಕುರಿತು ನಾನು ಮೆಗಾಸ್ಟಾರ್ ಅವರ ಜೊತೆ ಈ ಕುರಿತು ಚರ್ಚೆ ಮಾಡಿದ್ದೆ. ಆಗ ಅವರು ನೀವು ಏನು ಬೇಕಾದರೂ ನಿರ್ಧಾರ ತೆಗೆದುಕೊಳ್ಳಿ ಎಂದರು. ನಂತರ ನಾನು ಕಾಜಲ್ ಅವರಿಗೆ ಈ ಕುರಿತು ವಿವರಿಸಿದೆ. ಇದಕ್ಕೆ ಅವರು ನಗುತ್ತಲೇ ಪ್ರತಿಕ್ರಿಯಿಸಿದರು. ನಿಮ್ಮ ಪಾತ್ರವನ್ನು ಎಡಿಟ್ ಮಾಡಿರುವ ಕುರಿತು ನಾನು ವಿವರಿಸಿದೆ ಅದಕ್ಕೆ ಅವರು ಸಂಪೂರ್ಣವಾಗಿ ಸಮ್ಮತಿ ಸೂಚಿಸಿದರು ಎಂದು ವಿವರಿಸಿದ್ದಾರೆ.

    ‘ಆಚಾರ್ಯ’ ಸಿನಿಮಾದಲ್ಲಿ ಕಾಜಲ್‌ನ ಪಾತ್ರವನ್ನು ಸಂಪೂರ್ಣವಾಗಿ ಕತ್ತರಿಸಲಾಗಿದೆ. ಪೂಜಾ ಹೆಗ್ಡೆ ಅವರು ನೀಲಾಂಬರಿಯಾಗಿ ನಟಿಸಿದ್ದಾರೆ, ರಾಮ್ ಚರಣ್ ಅವರ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆಚಾರ್ಯ ಸಿನಿಮಾದಲ್ಲಿ ಚಿರಂಜೀವಿ ಅವರಿಗೆ ನಾಯಕಿ ಇಲ್ಲ ಎಂದು ಸ್ಪಷ್ಟಪಡಿಸಿದರು.

    ಈ ಸಿನಿಮಾದ ಟ್ರೇಲರ್ ಸಹ ರಿಲೀಸ್ ಆಗಿದ್ದು, ಇದರಲ್ಲಿಯೂ ಕಾಜಲ್ ಇಲ್ಲದೇ ಇರುವುದು ಅಭಿಮಾನಿಗಳಲ್ಲಿ ಪ್ರಶ್ನೆ ಮೂಡಿತ್ತು. ಟ್ರೇಲರ್ ಬಿಡುಗಡೆಯ ವೇಳೆಯೂ ಸಹ ಕಾಜಲ್ ಬಗ್ಗೆ ಯಾರು ಪ್ರಸ್ತಾಪಿಸಲಿಲ್ಲ. ‘ಆಚಾರ್ಯ’ ಸಿನಿಮಾ ಟ್ರೇಲರ್ ಏಪ್ರಿಲ್ 12 ರಂದು ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ಚಿರಂಜೀವಿ ಮತ್ತು ರಾಮ್ ಚರಣ್ ಅವರು ದೇವಾಲಯದ ನಿಧಿಗಳು ಮತ್ತು ದೇಣಿಗೆಗಳ ದುರುಪಯೋಗ ಮಾಡಿಕೊಳ್ಳುವ ದತ್ತಿ ಇಲಾಖೆಯ ವಿರುದ್ಧ ಹೋರಾಡುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ವಿಜಯ್ ಸೇತುಪತಿ ಒಲಿಯುವುದು ನಯನತಾರಾಗಾ ಅಥವಾ ಸಮಂತಗಾ?: ಹೆಚ್ಚಿದ ಕುತೂಹಲ

    ಕಾಜಲ್ ಅಗರ್ವಾಲ್ ಇತ್ತೀಚೆಗಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ ಕಾರಣ ತಾಯ್ತನವನ್ನು ಆನಂದಿಸುತ್ತಿದ್ದಾರೆ. ಈ ನಟಿ ತನ್ನ ಪತಿ ಗೌತಮ್ ಕಿಚ್ಲು ಜೊತೆಗೆ ಮಗುವಿನೊಂದಿಗೆ ಆನಂದವಾಗಿ ಇದ್ದಾರೆ.

  • ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರಾ ಟಾಲಿವುಡ್ ನಟಿ – ಕಾಜಲ್ ಫೋಟೋ ಹೇಳ್ತೀರೋದೇನು?

    ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರಾ ಟಾಲಿವುಡ್ ನಟಿ – ಕಾಜಲ್ ಫೋಟೋ ಹೇಳ್ತೀರೋದೇನು?

    ಹೈದರಾಬಾದ್: ಟಾಲಿವುಡ್ ಕ್ಯೂಟ್ ನಟಿ ಕಾಜಲ್ ಅಗರ್ವಾಲ್ ಹಾಗೂ ಗೌತಮ್ ಕಿಚ್ಲು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ.

    ಇತ್ತೀಚೆಗಷ್ಟೇ ಕಾಜಲ್ ಫೋಟೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ಫೋಟೋದಲ್ಲಿ ಕಾಜಲ್ ಬೇಬಿ ಬಂಪ್ ಎದ್ದು ಕಾಣಿಸುವಂತಿದೆ. ಆದರೆ ಈ ಬಗ್ಗೆ ಕಾಜಲ್ ಆಗಲಿ, ಗೌತಮ್ ಆಗಲಿ ಎಲ್ಲೂ ಅಧಿಕೃತವಾಗಿ ಘೋಷಿಸಿಲ್ಲ. ಇದನ್ನೂ ಓದಿ: ಕನ್ನಡಕ್ಕಾಗಿ ಪ್ರಾಣ ಕೊಡೋಕು ಸಿದ್ಧ: ಶಿವಣ್ಣ ಖಡಕ್‌ ಮಾತು

    2020ರ ಅಕ್ಟೋಬರ್ 30ರಂದು ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಾಜಲ್ ಅಗರ್ವಾಲ್ ಮತ್ತು ಗೌತಮ್ ಕಿಚ್ಲು ದಕ್ಷಿಣ ಭಾರತದ ಕ್ಯೂಟ್ ಜೋಡಿಗಳಲ್ಲಿ ಒಬ್ಬರು. ಇತ್ತೀಚೆಗೆ ದಂಪತಿಗಳು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಗಾಳಿಸುದ್ದಿ ಟಾಲಿವುಡ್ ಅಂಗಳದಲ್ಲಿ ಸಖತ್ ಸದ್ದು ಮಾಡುತ್ತಿದೆ. ತೆಲುಗಿನ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದ ಕಾಜಲ್ ಮದುವೆಯ ನಂತರ ಚಿತ್ರರಂಗದಿಂದ ಸದ್ಯ ಬ್ರೇಕ್ ಪಡೆದುಕೊಂಡಿದ್ದಾರೆ.

    ಡಿಸೆಂಬರ್ 19ರಂದು ಕಾಜಲ್ ಅಗರ್ವಾಲ್ ತನ್ನ ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹೋಗಿದ್ದ ಒಂದೆರಡು ಫೋಟೋಗಳನ್ನು ಹಂಚಿಕೊಂಡಿದ್ದರು. ಈ ಫೋಟೋಗಳಲ್ಲಿ ಕಾಜಲ್ ಟೈಟ್ ಫಿಟ್ ಡ್ರೆಸ್ ಧರಿಸಿದ್ದರು. ಇದರಲ್ಲಿ ಕಾಜಲ್ ಬೇಬಿ ಬಂಪ್ ಎದ್ದು ಕಾಣುತ್ತಿದ್ದು, ಎಲ್ಲರ ಗಮನ ಸೆಳೆದಿದೆ.  ಇದನ್ನೂ ಓದಿ: ‘ಬನಾರಸ್’ ಫಸ್ಟ್ ಲುಕ್ ಮೋಷನ್ ಪೋಸ್ಟರ್‌ಗೆ ಚಿತ್ರರಸಿಕರಿಂದ ಬಹುಪರಾಕ್

    ಪ್ರವಾಸದಲ್ಲಿ ಕಾಜಲ್ ತಮ್ಮ ಗರ್ಲ್ಸ್ ಗ್ಯಾಂಗ್ ಹಾಗೂ ಅವರ ಮಕ್ಕಳೊಂದಿಗೆ ಅದ್ಭುತವಾದಂತಹ ಸಮಯ ಕಳೆದಿದ್ದು, ಕಾಜಲ್ ಮತ್ತು ಗೌತಮ್ ಕಿಚ್ಲು ಶೀಘ್ರದಲ್ಲೇ ಅಭಿಮಾನಿಗಳ ಮುಂದೆ ಈ ಸಿಹಿ ಸುದ್ದಿಯನ್ನು ರಿವೀಲ್ ಮಾಡುತ್ತಾರಾ ಎಂದು ಕಾದು ನೋಡಬೇಕಾಗಿದೆ.

  • ಗೆಳೆಯನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಾಜಲ್ ಅಗರ್ವಾಲ್

    ಗೆಳೆಯನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಾಜಲ್ ಅಗರ್ವಾಲ್

    ಮುಂಬೈ: ಟಾಲಿವುಡ್ ಚೆಲುವೆ ಕಾಜಲ್ ಅಗರ್ವಾಲ್ ಇಂದು ಗೆಳೆಯ ಗೌತಮ್ ಕಿಟ್ಜು ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

    ವರ ಗೌತಮ್ ಶೇರ್ವಾನಿ, ರುಮಾಲು ಸುತ್ತಿ ಮಿಂಚಿದ್ರೆ ವಧು ಕಾಜಲ್ ಡಿಸೈನರ್ ಲೆಹೆಂಗಾ ಧರಿಸಿ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದರು. ಮುಂಬೈನ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್ ನಲ್ಲಿ ಮದುವೆ ನಡೆದಿದ್ದು, ಎರಡೂ ಕುಟುಂಬಗಳ ಆಪ್ತರು ಮಾತ್ರ ಭಾಗಿಯಾಗಿದ್ದರು.

    ಕೊರೊನಾ ವೈರಸ್ ಹಿನ್ನೆಲೆ ಮದುವೆಗೆ ಹೆಚ್ಚಿನ ಜನರನ್ನು ಆಹ್ವಾನಿಸಿರಲಿಲ್ಲ. ಕೇವಲ ಕುಟುಂಬಸ್ಥರು ಮತ್ತು ಅತ್ಯಾಪ್ತರು ಸ್ಟಾರ್ ಜೋಡಿಯ ಮದುವೆಗೆ ಸಾಕ್ಷಿಯಾದರು. ಕಳೆದ ಎರಡು ದಿನಗಳಿಂದ ಕಾಜಲ್ ಸೋಶಿಯಲ್ ಮೀಡಿಯಾದಲ್ಲಿ ಮದುವೆ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು.

  • ಅಕ್ಟೋಬರ್ 30ಕ್ಕೆ ಕಾಜಲ್ ಅಗರ್ವಾಲ್ ಮದ್ವೆ

    ಅಕ್ಟೋಬರ್ 30ಕ್ಕೆ ಕಾಜಲ್ ಅಗರ್ವಾಲ್ ಮದ್ವೆ

    ಹೈದರಾಬಾದ್: ನಟಿ ಕಾಜಲ್ ಅಗರ್ವಾಲ್ ಇದೇ ಅಕ್ಟೋಬರ್ 30ರಂದು ಸಾಂಸಾರಿಕ ಜೀವನಕ್ಕೆ ಕಾಲಿಡಲಿದ್ದಾರೆ. ಇನ್‍ಸ್ಟಾಗ್ರಾಂನಲ್ಲಿ ಮದ್ವೆಯ ಮಾಹಿತಿಯನ್ನ ಕಾಜಲ್ ಹಂಚಿಕೊಂಡಿದ್ದಾರೆ.

    ನಾನು ಇದೇ ಅಕ್ಟೋಬರ್ 30ರಂದು ಗೌತಮ್ ಕಿಚ್ಲು ಅವರನ್ನು ಮುಂಬೈನಲ್ಲಿ ಮದುವೆ ಆಗುತ್ತಿದ್ದೇನೆ. ಮದುವೆಗೆ ಕೇವಲ ಕುಟುಂಬಸ್ಥರು ಮತ್ತು ಆಪ್ತರನ್ನ ಮಾತ್ರ ಆಹ್ವಾನಿಸಲಾಗಿದೆ. ಹೊಸ ಜೀವನಕ್ಕೆ ಕಾಲಿಡಲು ನಾನು ಥ್ರಿಲ್ ಆಗಿದ್ದೇನೆ. ಇಷ್ಟು ದಿನ ನೀವು ತೋರಿಸಿದ ಅನಿಯಮಿತ ಪ್ರೀತಿಗೆ ಅಭಾರಿಯಾಗಿದ್ದು, ನಿಮ್ಮೆಲ್ಲರ ಆಶೀರ್ವಾದ ನಮ್ಮ ಮೇಲಿರಲಿ. ಹೊಸ ಬದುಕಿಗೆ ಎಂಟ್ರಿ ಕೊಡಲು ಉತ್ಸುಕಳಾಗಿದ್ದೇನೆ. ಮುಂದೆಯೂ ನಾನು ಸಿನಿಮಾಗಳಲ್ಲಿ ನಟಿಸುವ ಮೂಲಕ ನಿಮ್ಮನನ್ನ ರಂಜಿಸುತ್ತೇನೆ. ನಿಮ್ಮ ಪ್ರೀತಿ, ಬೆಂಬಲಕ್ಕೆ ಧನ್ಯವಾದಗಳು ಎಂದು ಕಾಜಲ್ ಬರೆದುಕೊಂಡಿದ್ದಾರೆ.

    https://www.instagram.com/p/CF_boUwHquE/

    ಯಾರು ಈ ಗೌತಮ್?
    ಕಾಜಲ್ ಅಗರ್ವಾಲ್ ಮದುವೆ ಆಗುತ್ತಿರುವ ಗೌತಮ್ ಕಿಚ್ಲು , ಡಿಸರ್ನ್ ಲಿವಿಂಗ್ ಸಂಸ್ಥೆಯ ಸ್ಥಾಪಕರು. ಇನ್ನು ಗೌತಮ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ತಾವು ಓರ್ವ ಇಂಟಿರೀಯರ್ ಡಿಸೈನರ್, ಡಿಸರ್ನ್ ಲಿವಿಂಗ್ ಸ್ಥಾಪಕ ಎಂದು ಹೇಳಿಕೊಂಡಿದ್ದಾರೆ.

    https://www.instagram.com/p/CF9irvQHIbL/

    ಸೋಮವಾರ ಕಾಜಲ್ ಅಗರ್ವಾಲ್ ಹಾರ್ಟ್ ಸಿಂಬಾಲ್ ಹಾಕಿ ಮದುವೆ ಸುಳಿವು ನೀಡಿದ್ದರು. ಇಂದು ಅಧಿಕೃತವಾಗಿ ಮದುವೆಯ ವಿಚಾರವನ್ನ ಕಾಜಲ್ ಅಭಿಮಾನಿಗಳ ಜೊತೆ ಶೇರ್ ಮಾಡಿಕೊಂಡಿದ್ದು, ಫ್ಯಾನ್ಸ್ ಸೇರಿದಂತೆ ಚಿತ್ರರಂಗದ ಗಣ್ಯರು ಶುಭಾಶಯ ತಿಳಿಸುತ್ತಿದ್ದಾರೆ.

  • ನಟಿ ಕಾಜಲ್‍ಗಾಗಿ 60 ಲಕ್ಷ ರೂ. ಕಳೆದುಕೊಂಡ ಅಭಿಮಾನಿ

    ನಟಿ ಕಾಜಲ್‍ಗಾಗಿ 60 ಲಕ್ಷ ರೂ. ಕಳೆದುಕೊಂಡ ಅಭಿಮಾನಿ

    ಹೈದರಾಬಾದ್: ಟಾಲಿವುಡ್ ನಟಿ ಕಾಜಲ್ ಅಗರ್‌ವಾಲ್ ಅವರನ್ನು ಭೇಟಿ ಮಾಡಲು ಅಭಿಮಾನಿಯೊಬ್ಬ ಬರೋಬ್ಬರಿ 60 ಲಕ್ಷ ರೂ. ಕಳೆದುಕೊಂಡಿದ್ದಾನೆ.

    ತಮಿಳುನಾಡಿನ ರಾಮನಾಥಪುರಂ ನಿವಾಸಿಯಾಗಿರುವ ಅಭಿಮಾನಿ ಕಾಜಲ್ ಅಗರ್‌ವಾಲ್ ನ ಅಪ್ಪಟ ಅಭಿಮಾನಿ. ಕಾಜಲ್ ಅವರನ್ನು ಜೀವನದಲ್ಲಿ ಒಮ್ಮೆಯಾದರೂ ಭೇಟಿ ಆಗಬೇಕು ಎಂದುಕೊಂಡಿದ್ದನು. ಈ ವೇಳೆ ಇನ್‍ಸ್ಟಾಗ್ರಾಂ ಪೇಜ್ ಒಂದು ಕಾಜಲ್ ಅಗರ್‌ವಾಲ್ ಅವರನ್ನು ಭೇಟಿಯಾಗುವ ಅವಕಾಶವನ್ನು ನೀಡಿತ್ತು. ಇದನ್ನು ನೋಡಿದ ಅಭಿಮಾನಿ ವೆಬ್‍ಪೇಜ್ ಆಡ್ಮಿನ್‍ನನ್ನು ಸಂಪರ್ಕಿಸಿ ಕಾಜಲ್‍ರನ್ನು ಭೇಟಿ ಮಾಡಿಸಿ ಎಂದು ಕೇಳಿಕೊಂಡಿದ್ದನು.

    ವೆಬ್‍ಪೇಜ್ ಆಡ್ಮಿನ್ ಮೊದಲು ಅಭಿಮಾನಿಯ ಬಳಿ 50 ಸಾವಿರ ರೂ. ತೆಗೆದುಕೊಂಡಿದ್ದಾನೆ. ಅಲ್ಲದೆ ಅಭಿಮಾನಿಯ ಫೋಟೋ ಹಾಗೂ ವೈಯಕ್ತಿಕ ಮಾಹಿತಿಯನ್ನು ಕೇಳಿದ್ದಾನೆ. ಕಾಜಲ್‍ರನ್ನು ಭೇಟಿ ಮಾಡುವ ಖುಷಿಯಲ್ಲಿ ಅಭಿಮಾನಿ ಯೋಚಿಸದೇ ಎಲ್ಲ ವಿವರವನ್ನು ಆಡ್ಮಿನ್ ಬಳಿ ಹಂಚಿಕೊಂಡಿದ್ದಾನೆ. ಈ ವೆಬ್‍ಪೇಜ್ ಕ್ರಿಮಿನಲ್ ಗ್ಯಾಂಗ್ ನಡೆಸುತ್ತಿದ್ದು, ಕಾಜಲ್ ಅಭಿಮಾನಿಯನ್ನು ಯಾಮಾರಿಸಿದೆ.

    ಅಭಿಮಾನಿ ಆಗರ್ಭ ಶ್ರೀಮಂತ ಕುಟುಂಬಕ್ಕೆ ಸೇರಿದ್ದಾನೆ ಎನ್ನುವುದು ಗೊತ್ತಾದ ಬಳಿಕ ಈ ಗ್ಯಾಂಗ್ ಸದಸ್ಯರು ಪ್ರತಿದಿನ ಆತನಿಂದ ಹಣ ವಸೂಲಿ ಮಾಡುತ್ತಿದ್ದರು. ಹಣ ಪಡೆದ ನಂತರ ಕಾಜಲ್ ಭೇಟಿ ಬಗ್ಗೆ ಮಾತನಾಡದೇ ಇದ್ದಾಗ ಅಭಿಮಾನಿಗೆ ಅನುಮಾನ ಬಂದಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡುತ್ತೇನೆ ಎಂದು ಅಭಿಮಾನಿ ಗ್ಯಾಂಗ್‍ಗೆ ಬೆದರಿಕೆ ಹಾಕಿದ್ದಾನೆ. ಅಭಿಮಾನಿ ಬೆದರಿಕೆ ಹಾಕಿದ್ದಕ್ಕೆ ಗ್ಯಾಂಗ್ ಸದಸ್ಯರು ಆತನ ವೈಯಕ್ತಿಕ ಫೋಟೋವನ್ನು ಮಾರ್ಫ್ ಮಾಡಿ ವೈಯಕ್ತಿಕ ಮಾಹಿತಿಯನ್ನು ಲೀಕ್ ಮಾಡುತ್ತೇವೆ ಎಂದು ಹೆದರಿಸಿ 60 ಲಕ್ಷ ರೂ. ಕಸಿದುಕೊಂಡಿದ್ದಾರೆ.

    ಅಭಿಮಾನಿ 60 ಲಕ್ಷ ರೂ. ಕಳೆದುಕೊಂಡ ಮೇಲೆ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾನೆ.

  • ವೇದಿಕೆ ಮೇಲೆ ಬಲವಂತವಾಗಿ ಕಾಜಲ್‍ಗೆ ಕಿಸ್ ಕೊಟ್ಟ ಸಹನಟ: ವಿಡಿಯೋ ವೈರಲ್

    ವೇದಿಕೆ ಮೇಲೆ ಬಲವಂತವಾಗಿ ಕಾಜಲ್‍ಗೆ ಕಿಸ್ ಕೊಟ್ಟ ಸಹನಟ: ವಿಡಿಯೋ ವೈರಲ್

    ಹೈದರಾಬಾದ್: ಕಾರ್ಯಕ್ರಮವೊಂದರಲ್ಲಿ ನಟಿ ಕಾಜಲ್ ಅಗರ್ವಾಲ್ ಅವರನ್ನು ಸಹನಟ ಕಿಸ್ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಮಂಗಳವಾರ ಹೈದರಾಬಾದ್‍ನಲ್ಲಿ ‘ಕವಚಂ’ ಚಿತ್ರದ ಟೀಸರ್ ಲಾಂಚ್ ಕಾರ್ಯಕ್ರಮ ನಡೆಯಿತು. ಈ ಚಿತ್ರವನ್ನು ಶ್ರೀನಿವಾಸ್ ಮಾಮಿಲ ನಿರ್ದೇಶನವಿದ್ದು, ಬೆಲ್ಲಂಕೊಂಡ ಶ್ರೀನಿವಾಸ್ ಹಾಗೂ ಮೀಹಿರಿನ್ ಪಿರ್ಜಾದಾ ಚಿತ್ರದಲ್ಲಿ ನಟಿಸಿದ್ದಾರೆ.

    ಈ ಕಾರ್ಯಕ್ರಮದಲ್ಲಿ ಚಿತ್ರತಂಡ ಎಲ್ಲರೂ ಸೇರಿದ್ದಾಗ ಕಾಜಲ್ ನಿರ್ದೇಶಕ ಶ್ರೀನಿವಾಸ್ ಹಾಗೂ ಬೆಲ್ಲಂಕೊಂಡ ಶ್ರೀನಿವಾಸ್ ಹಾಗೂ ಮೀಹಿರಿನ್ ಪಿರ್ಜಾದಾ ಅವರಿಗೆ ಉದ್ದೇಶಿಸಿ ಧನ್ಯವಾದ ತಿಳಿಸಿದರು. ಇದೇ ವೇಳೆ ಕಾಜಲ್ ತಮ್ಮ ಸಹನಟ ಚೋಟಾ ಕೆ. ನಾಯ್ಡು ಬಗ್ಗೆ ಕೂಡ ಮಾತನಾಡಿದರು.

    ಕಾಜಲ್ ಚೋಟಾ ನಾಯ್ಡು ಬಗ್ಗೆ ಮಾತನಾಡಿದಾಗ ಅವರು ಬಂದು ಕಾಜಲ್‍ಗೆ ಬಲವಂತವಾಗಿ ಕಿಸ್ ನೀಡಿದರು. ಚೋಟಾ ನಾಯ್ಡು ಕಿಸ್ ಮಾಡಿದಾಗ ಕಾಜಲ್ ಒಂದು ಕ್ಷಣ ಬೆಚ್ಚಿಬಿದ್ದು ಏನೂ ಮಾತನಾಡಬೇಕು ಎಂದು ಮರೆತು ಹೋದರು.

    ಕಾಜಲ್‍ಗೆ ಕಿಸ್ ಕೊಟ್ಟ ನಂತರ ಮಾತನಾಡಿದ ಚೋಟಾ ನಾಯ್ಡು, “ನೀವು ಮೀಹಿರಿನ್‍ಗೆ ಕಿಸ್ ಕೊಟ್ಟೆ. ನೀವು ಇದನ್ನು ಮಾಡಲು ಆಗುವುದಿಲ್ಲ ಎಂದು ತಮನ್ ಹೇಳಿದರು. ನಾನು ಯಾಕೆ ಇದು ಮಾಡಬಾರದು ಎಂದು ನಿಮಗೆ ಕಿಸ್ ಮಾಡಿದೆ” ಎಂದು ಹೇಳಿದರು.

    ಸದ್ಯ ಚೋಟಾ ನಾಯ್ಡು ಕಿಸ್ ಮಾಡಿದ್ದನ್ನು ಕಾಜಲ್ ನಿರ್ಲಕ್ಷಿಸಿ, “ಪರವಾಗಿಲ್ಲ ಚೋಟು. ನೀವು ನನ್ನ ಕುಟುಂಬದ ಸದಸ್ಯರಿದ್ದಂತೆ” ಎಂದು ಹೇಳಿ ಸುಮ್ಮನೆ ನಕ್ಕು ಬಿಟ್ಟರು. ಸದ್ಯ ಚೋಟಾ ನಾಯ್ಡು ನಟಿ ಕಾಜಲ್ ಅವರನ್ನು ಕಿಸ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

     

    View this post on Instagram

     

    @kajalaggarwal.offl ♥️

    A post shared by KAJAL AGGARWAL ♥️ (@kajalaggarwal.offl) on

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews