Tag: Kajal

  • ಲಂಡನ್‌ಗೆ ಹಾರಿದ ಅಜಯ್ ದೇವಗನ್ ಪುತ್ರಿ- ಬಾಯ್ ಫ್ರೆಂಡ್ ಜೊತೆ ಭರ್ಜರಿ ಪಾರ್ಟಿ

    ಲಂಡನ್‌ಗೆ ಹಾರಿದ ಅಜಯ್ ದೇವಗನ್ ಪುತ್ರಿ- ಬಾಯ್ ಫ್ರೆಂಡ್ ಜೊತೆ ಭರ್ಜರಿ ಪಾರ್ಟಿ

    ಬಾಲಿವುಡ್ ನಟ ಅಜಯ್ ದೇವಗನ್ (Ajay Devagun)- ಕಾಜೋಲ್ (Kajal) ಮಗಳು ನಿಸಾ ದೇವಗನ್ (Nysa) ಸದಾ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಪಾರ್ಟಿ, ಫ್ರೆಂಡ್ಸ್, ಟ್ರಿಪ್ ಅಂತ ಓಡಾಡುವ ನಿಸಾ ಸದ್ಯ ಲಂಡನ್‌ನಲ್ಲಿದ್ದಾರೆ. ತನ್ನ ಬಾಯ್ ಫ್ರೆಂಡ್ ಜೊತೆ ನಿಸಾ ಲಂಡನ್ (London) ಹಾರಿದ್ದು, ಅಲ್ಲಿ ಮೋಜು ಮಸ್ತಿ ಮಾಡ್ತಿದ್ದಾರೆ. ಫ್ರೆಂಡ್ಸ್ ಜೊತೆ ಪಾರ್ಟಿ ಮಾಡಿರುವ ಸ್ಟಾರ್ ಕಿಡ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

    ಫೇಮಸ್ ಸ್ಟಾರ್ ಕಿಡ್‌ಗಳಲ್ಲಿ ನಿಸಾ ಕೂಡ ಒಬ್ಬರಾಗಿದ್ದು, ಅನೇಕ ಬಾರಿ ಬಾಡಿ ಶೇಮಿಂಗ್, ಮೇಕಪ್ ವಿಚಾರವಾಗಿ ಸಖತ್ ಟ್ರೋಲ್ ಆಗಿದ್ದಾರೆ. ಇದೀಗ ಲಂಡನ್‌ನಲ್ಲಿರುವ ನಿಸಾ ಬಾಯ್ ಫ್ರೆಂಡ್ ಜೊತೆಗಿನ ಫೋಟೋ ವೈರಲ್ ಆಗಿದೆ. ನಿಸಾ ಅವರ ಸ್ನೇಹಿತ ಅರ್ಹಾನ್ ಅವತ್ರಮಣಿ ಅವರು ಸಿನಿಮಾರಂಗದಲ್ಲಿ ಇಲ್ಲ. ಆದರೂ ಸ್ಟಾರ್ ಕಿಡ್‌ಗಳ ಜೊತೆ ಸಿಕ್ಕಾಪಟ್ಟೆ ಕ್ಲೋಸ್ ಆಗಿದ್ದಾರೆ. ಫ್ಯಾಷನ್ ಕ್ರೇಸ್ ಅರ್ಹಾನ್- ನಿಸಾ ಇಬ್ಬರೂ ಸಿಕ್ಕಾಪಟ್ಟೆ ಕ್ಲೋಸ್ ಆಗಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇದನ್ನೂ ಓದಿ:ಬಾಲಯ್ಯ ಸಿನಿಮಾದಲ್ಲಿ ಸೊಂಟ ಬಳುಕಿಸಲು 5 ಕೋಟಿ ಕೇಳಿದ್ರಾ? ತಮನ್ನಾ ಸ್ಪಷ್ಟನೆ

    ಅಂದಹಾಗೆ ಇಬ್ಬರ ಫೋಟೋಗಳನ್ನು ಸ್ವತಃ ಅರ್ಹಾನ್ ಅವರೇ ಶೇರ್ ಮಾಡಿದ್ದಾರೆ. ಲಂಡನ್ ಕ್ಲಬ್‌ನಲ್ಲಿ ಪಾರ್ಟಿ ಮಾಡಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಬಾಲಿವುಡ್‌ನ ಸ್ಟಾರ್ ಕಿಡ್ಸ್ ಸಾಮಾನ್ಯವಾಗಿ ಅಲ್ಲೇ ಪಾರ್ಟಿ ಮಾಡುತ್ತಾರೆ. ಇದೀಗ ನಿಸಾ ಕೂಡ ಅಲ್ಲೇ ಪಾರ್ಟಿ ಮಾಡಿದ್ದಾರೆ. ಎಂಜಾಯ್ ಮಾಡುತ್ತಿದ್ದಾರೆ. ನಿಸಾ ಫೋಟೋಗಳಿಗೆ ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದಾರೆ. ಫೋಟೋಗಳು ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿವೆ.

    ಅಜಯ್ ದೇವಗನ್ ದಂಪತಿ ಪುತ್ರಿ ನಿಸಾ ಸಿನಿಮಾರಂಗಕ್ಕೆ ನಾಯಕಿಯಾಗಿ ಎಂಟ್ರಿ ಕೊಡುತ್ತಾರೆ ಎಂದು ಹೇಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮಗಳ ಬಾಲಿವುಡ್ ಎಂಟ್ರಿ ಬಗ್ಗೆ ಅಜಯ್- ಕಾಜಲ್ ಜೋಡಿ ಗುಡ್ ನ್ಯೂಸ್ ಕೊಡುತ್ತಾರಾ ಎಂದು ಕಾದುನೋಡಬೇಕಿದೆ.

  • ಕಾಜಲ್ ಜೊತೆ ಶಾರುಖ್ ಖಾನ್ ಮತ್ತೆ ರೊಮ್ಯಾನ್ಸ್

    ಕಾಜಲ್ ಜೊತೆ ಶಾರುಖ್ ಖಾನ್ ಮತ್ತೆ ರೊಮ್ಯಾನ್ಸ್

    ಬಾಲಿವುಡ್‌ನ ಬೆಸ್ಟ್ ಆನ್ ಸ್ಕ್ರೀನ್‌ ಕಪಲ್ ಅಂದ್ರೆ ಶಾರುಖ್ ಖಾನ್ ಮತ್ತು ಕಾಜಲ್, ಸಾಕಷ್ಟು ಚಿತ್ರಗಳ ಮೂಲಕ ಮೋಡಿ ಮಾಡಿರೋ ಈ ಜೋಡಿ ಮತ್ತೆ ತೆರೆಯ ಮೇಲೆ ಒಂದಾಗಲು ಸಜ್ಜಾಗಿದ್ದಾರೆ. ಪವರ್‌ಫುಲ್ ಪಾತ್ರದ ಮೂಲಕ ಕಮಾಲ್ ಮಾಡಲು ಬರುತ್ತಿದ್ದಾರೆ.

    `ಕುಚ್ ಕುಚ್ ಹೋತಾ ಹೈ’, `ಕಭಿ ಖುಷಿ ಕಭಿ ಗಮ್’, `ದಿಲ್‌ವಾಲೆ’, `ಬಾಜಿಗಾರ್’ ಚಿತ್ರಗಳ ಮೂಲಕ ಅಭಿಮಾನಿಗಳಲ್ಲಿ ಕ್ರೇಜ್ ಹುಟ್ಟು ಹಾಕಿರೋ ಶಾರುಖ್ ಖಾನ್ ಮತ್ತು ಕಾಜಲ್ ಜೋಡಿ ಮತ್ತೆ ಬೆಳ್ಳಿ ಪರದೆಯಲ್ಲಿ ರೊಮ್ಯಾನ್ಸ್ ಮಾಡಲು ರೆಡಿಯಾಗಿದ್ದಾರೆ.

    ನಿರ್ಮಾಪಕ ಕರಣ್ ಜೋಹರ್ `ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ನಟಿ ಆಲಿಯಾ ಭಟ್ ಮತ್ತು ರಣ್‌ವೀರ್ ಸಿಂಗ್ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಇವರ ಪ್ರೇಮ ಕಹಾನಿಯನ್ನೇ ಭಿನ್ನವಾಗಿ ತೋರಿಸಲು ಹೊರಟಿದ್ದಾರೆ ಕರಣ್ ಜೋಹರ್. ಇದೀಗ ಚಿತ್ರದ ಮತ್ತೊಂದು ವಿಶೇಷ ಅಂದ್ರೆ ಬಿಟೌನ್ ಜೋಡಿ ಹಕ್ಕಿಗಳಾಗಿ ಫೇಮ್ ಗಿಟ್ಟಿಸಿಕೊಂಡಿದ್ದ ಶಾರುಖ್ ಮತ್ತು ಕಾಜಲ್ ಈ ಚಿತ್ರದಲ್ಲಿ ಸ್ಪೆಷಲ್ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಇದನ್ನೂ ಓದಿ: ರವಿವರ್ಮನ ಕಲ್ಪನೆಯ ಸುಂದರಿಯರಂತೆ ಪತ್ನಿಯ ಫೋಟೋ ಶೂಟ್ ಮಾಡಿಸಿದ ಜನಾರ್ದನ ರೆಡ್ಡಿ

    `ಗಲ್ಲಿ ಭಾಯ್’ ಚಿತ್ರದಲ್ಲಿ ಕಮಾಲ್ ಮಾಡಿದ್ದ ಜೋಡಿ ಆಲಿಯಾ ಮತ್ತು ರಣ್‌ವೀರ್ ಸಿಂಗ್ ಜೋಡಿ ಮತ್ತೆ `ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ಗಾಗಿ ಒಂದಾಗಿದ್ದಾರೆ. ಈ ಜೋಡಿಗೆ ಬಾಲಿವುಡ್ ರೊಮ್ಯಾಂಟಿಕ್ ಜೋಡಿ ಶಾರುಖ್ ಮತ್ತು ಕಾಜಲ್ ಸಾಥ್ ಕೊಡಲಿದ್ದಾರೆ. ಈ ಗುಡ್ ನ್ಯೂಸ್ ನಂತರ ಚಿತ್ರದ ಮೇಲಿನ ನಿರೀಕ್ಷೆ ಡಬಲ್ ಆಗಿದೆ. ರಿಲೀಸ್ ಆದಮೇಲೆ ಯಾವ ರೀತಿ ಕಮಾಲ್ ಮಾಡಬಹುದು ಅಂತಾ ಕಾದು ನೋಡಬೇಕಿದೆ.

  • ಪಾರುಲ್ ಯಾದವ್ ಈಗ ಪಾರ್ವತಿ!

    ಪಾರುಲ್ ಯಾದವ್ ಈಗ ಪಾರ್ವತಿ!

    ಬೆಂಗಳೂರು: ಪ್ಯಾರ್ ಗೆ ಆಗ್ಬಿಟೈತೆ ಅಂತ ಹಾಡುತ್ತಲೇ ಕನ್ನಡ ಚಿತ್ರ ಪ್ರೇಕ್ಷಕರ ಮನಸಿಗೆ ಲಗ್ಗೆಯಿಟ್ಟಿದ್ದವರು ಪಾರೂಲ್ ಯಾದವ್. ಪರಭಾಷಾ ನಟಿಯಾದರೂ ಕನ್ನಡಿಗರಿಗೆ ಹತ್ತಿರವಾಗಿದ್ದ ಅವರು ಆ ನಂತರವೂ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಈಗೊಂದಷ್ಟು ಕಾಲದಿಂದ ಕಣ್ಮರೆಯಾದಂತಿದ್ದ ಪಾರುಲ್ ಈಗ ಪಾರ್ವತಿಯ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬರೋ ಖುಷಿಯಲ್ಲಿದ್ದಾರೆ.

    ರಮೇಶ್ ಅರವಿಂದ್ ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲದಲ್ಲಿಯೇ ನಿರ್ದೇಶನ ಮಾಡುತ್ತಿರೋ ಚಿತ್ರ ಬಟರ್ ಫ್ಲೈ. ಈ ಮೂರೂ ಭಾಷೆಗಳಲ್ಲಿ ಆಯಾ ಭಾಷೆಯ ನಟಿಯರು ಮುಖ್ಯ ಪಾತ್ರ ಮಾಡುತ್ತಿದ್ದಾರೆ. ಕನ್ನಡದಲ್ಲಿ ಕಂಗನಾ ಪಾತ್ರವನ್ನು ಪಾರುಲ್ ಯಾದವ್ ನಿರ್ವಹಿಸುತ್ತಿದ್ದಾರೆ. ಈ ಬಗ್ಗೆ ಖುದ್ದು ಅವರೇ ಸಾಮಾಜಿಕ ಜಾಲತಾಣಗಳ ಮೂಲಕ ವಿಚಾರ ಹಂಚಿಕೊಂಡಿದ್ದಾರೆ. ತಾನು ಪಾರ್ವತಿಯಾಗಿ ಕನ್ನಡದ ಪ್ರೇಕ್ಷಕರ ಮುಂದೆ ಬರಲು ಅಣಿಯಾಗಿರೋದರ ಬಗ್ಗೆ ಖುಷಿಯಿಂದಲೇ ಹೇಳಿಕೊಂಡಿರೋ ಪಾರುಲ್, ಪಾರ್ವತಿಯಾಗಿ ತಮ್ಮ ಲುಕ್ಕು ಹೇಗಿದೆ ಎಂಬುದಕ್ಕೆ ಒಂದು ಭಾವಚಿತ್ರವನ್ನೂ ಜಾಹೀರು ಮಾಡಿದ್ದಾರೆ.

    ತಮಿಳಿನಲ್ಲಿ ಈ ಪಾತ್ರವನ್ನು ಕಾಜಲ್ ನಿರ್ವಹಿಸಿದ್ದಾರೆ. ತೆಲುಗಿನಲ್ಲಿ ಈ ಪಾತ್ರ ಮಿಲ್ಕಿ ಬ್ಯೂಟಿ ತಮನ್ನಾ ಪಾಲಾಗಿದೆ. ಕನ್ನಡದಲ್ಲಿ ಪಾರುಲ್ ಪಾರ್ವತಿಯಾಗಿ ಈ ಪಾತ್ರಕ್ಕೆ ಜೀವ ತುಂಬಿದ್ದಾರೆ. ಈ ಚಿತ್ರದಲ್ಲಿ ಕೇವಲ ನಾಯಕಿ ಮಾತ್ರವಲ್ಲದೇ ಪಾರುಲ್ ನಿರ್ಮಾಪಕಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಈ ಮೂಲಕವೇ ಕನ್ನಡದಲ್ಲಿ ತನ್ನ ಮತ್ತೊಂದು ಇನ್ನಿಂಗ್ಸ್ ಭರ್ಜರಿಯಾಗಿ ಶುರುವಾಗೋ ನಿರೀಕ್ಷೆ ಪಾರುಲ್ ಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv