Tag: kaira advani

  • Don 3: ಕಿಯಾರಾ ಬದಲು ರಣವೀರ್ ಸಿಂಗ್‌ಗೆ ನಾಯಕಿಯಾಗಲಿದ್ದಾರೆ ಶಾರ್ವರಿ

    Don 3: ಕಿಯಾರಾ ಬದಲು ರಣವೀರ್ ಸಿಂಗ್‌ಗೆ ನಾಯಕಿಯಾಗಲಿದ್ದಾರೆ ಶಾರ್ವರಿ

    ಣವೀರ್ ಸಿಂಗ್ (Ranveer Singh) ನಟನೆಯ ಬಹುನಿರೀಕ್ಷಿತ ‘ಡಾನ್ 3’ (Don 3) ಚಿತ್ರಕ್ಕೆ ಕಿಯಾರಾ ಅಡ್ವಾಣಿ (Kiara Advani) ಬದಲು ಶಾರ್ವರಿ ವಾಘ್ ನಾಯಕಿಯಾಗಿದ್ದಾರೆ. ರಣವೀರ್ ಜೊತೆ ಶಾರ್ವರಿ (Sharvari) ರೊಮ್ಯಾನ್ಸ್ ಮಾಡಲಿದ್ದಾರೆ. ಇದನ್ನೂ ಓದಿ:ಕಿಚ್ಚ ಸುದೀಪ್‌ ಅಭಿನಯದ ‘ಬಿಲ್ಲ ರಂಗ ಬಾಷಾ’ ಸಿನಿಮಾ ಶೂಟಿಂಗ್‌ ಶುರು – BRB ಫಸ್ಟ್‌ ಲುಕ್‌ ರಿವೀಲ್‌

    ‘ಡಾನ್ 3’ಗೆ ಈ ಮೊದಲು ಕಿಯಾರಾ ನಾಯಕಿಯಾಗಿದ್ದರು. ಆದರೆ ಅವರು ಪ್ರೆಗ್ನೆಂಟ್ ಆಗಿರೋದ್ರಿಂದ ಈ ಚಿತ್ರವನ್ನು ಕೈಬಿಟ್ಟಿದ್ದರು. ಈ ಹಿನ್ನೆಲೆ ಕಿಯಾರಾ ಜಾಗಕ್ಕೆ ಶಾರ್ವರಿ ವಾಘ್ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಪವರ್‌ಫುಲ್ ರೋಲ್‌ನಲ್ಲಿ ಅವರು ನಟಿಸಲಿದ್ದಾರೆ. ಇದನ್ನೂ ಓದಿ:ಮುಂಬೈ ಬಳಿ 9.85 ಕೋಟಿಗೆ ಭೂಮಿ ಖರೀದಿಸಿದ ಅಳಿಯ ಕೆಎಲ್‌ ರಾಹುಲ್‌, ಮಾವ ಸುನೀಲ್‌ ಶೆಟ್ಟಿ

    ಆಲಿಯಾ ಭಟ್ (Alia Bhatt) ಜೊತೆ ಶಾರ್ವರಿ ನಟಿಸಿರುವ ‘ಆಲ್ಫಾ’ ಸಿನಿಮಾ ಡಿ.25ರಂದು ಈ ವರ್ಷ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾದ ಕೆಲಸದಲ್ಲಿ ಶಾರ್ವರಿ ಬ್ಯುಸಿಯಾಗಿದ್ದಾರೆ. ‘ಆಲ್ಫಾ’ ಚಿತ್ರದ ಜೊತೆ ‘ಡಾನ್ 3’ ಕೂಡ ಮಾಡಲಿದ್ದಾರೆ.

  • ಮುಂದಿನ ವರ್ಷ ಹಸೆಮಣೆ ಏರಲಿದ್ದಾರೆ ಸಿದ್ಧಾರ್ಥ್-ಕಿಯಾರಾ

    ಮುಂದಿನ ವರ್ಷ ಹಸೆಮಣೆ ಏರಲಿದ್ದಾರೆ ಸಿದ್ಧಾರ್ಥ್-ಕಿಯಾರಾ

    ಬಾಲಿವುಡ್‌ನ(Bollywood) `ಶೆರ್ಶಾಹ್’ ಸಿದ್ಧಾರ್ಥ್ ಮಲ್ಹೋತ್ರಾ(Siddarth Malhotra) ಮತ್ತು ಕಿಯಾರಾ (Kaira Advani) ಜೋಡಿ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಬೆಳ್ಳಿಪರದೆಯಲ್ಲಿ ರಂಜಿಸಿದ್ದ ಈ ಜೋಡಿ, ಇದೀಗ ನಿಜ ಜೀವನದಲ್ಲೂ ಹಸೆಮಣೆ ಏರಲು ಸಜ್ಜಾಗಿದ್ದಾರೆ. ʻಗಟ್ಟಿಮೇಳʼ ಮೊಳಗಿಸಲು ತೆರೆ ಹಿಂದೆ ಭರ್ಜರಿ ತಯಾರಿ ನಡೆಯುತ್ತಿದೆ.

    ಆನ್‌ಸ್ಕ್ರೀನ್‌ನ ರೊಮ್ಯಾಂಟಿಕ್ ಜೋಡಿ ಸಿದ್ಧಾರ್ಥ್ ಮತ್ತು ಕಿಯಾರಾ ಮತ್ತೆ ಸುದ್ದಿಯಲ್ಲಿದ್ದಾರೆ. ಸಾಕಷ್ಟು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದ ಜೋಡಿ ಇದೀಗ ತಮ್ಮ ಮದುವೆಯ ಬಗ್ಗೆ ಸುಳಿವು ಕೊಟ್ಟಿದ್ದಾರೆ. ಕಾಫಿ ವಿತ್ ಕರಣ್(Coffe With Karan) ಶೋನಲ್ಲಿ ತಾವು ಮದುವೆಗೆ ರೆಡಿಯಿದ್ದೇನೆ ಎಂದು ಕಿಯಾರಾ ರಿವೀಲ್ ಮಾಡಿದ್ದಾರೆ.

    ಬಿಟೌನ್‌ನಲ್ಲಿ ಸದ್ಯ ಹಾಟ್ ಟಾಪಿಕ್ ಆಗಿರುವ ವಿಚಾರ ಅಂದ್ರೆ ಸಿದ್ದಾಥ್, ಕಿಯಾರಾ ಮದುವೆಯ ವಿಚಾರ. ಇಷ್ಟು ದಿನ ಇಬ್ಬರೂ ಡೇಟಿಂಗ್‌ನಲ್ಲಿದ್ದಾರೆ ಎಂಬ ಸುದ್ದಿ ಇತ್ತು. ಈ ಬೆನ್ನಲ್ಲೇ ಮದುವೆ ವಿಷ್ಯ ಸದ್ದು ಮಾಡುತ್ತಿದೆ. ಮುಂದಿನ ವರ್ಷ ಏಪ್ರಿಲ್‌ನಲ್ಲಿ ಶೆರ್ಶಾಹ್ ಜೋಡಿ, ಗುರುಹಿರಿಯರ ಸಮ್ಮುಖದಲ್ಲಿ ಹಸೆಮಣೆ ಏರಲಿದ್ದಾರಂತೆ. ದೆಹಲಿಯಲ್ಲಿ ಸಿಂಪಲ್ ಮದುವೆಯ ಬಳಿಕ ಚಿತ್ರರಂಗದ ಸ್ನೇಹಿತರಿಗೆ ಅದ್ದೂರಿ ಆರತಕ್ಷತೆ ಇಟ್ಟುಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದನ್ನೂ ಓದಿ:ಬಾಲಿವುಡ್ ಬದುಕಿಸಿದ ಶಾರುಖ್ ಖಾನ್ ಚಿತ್ರ: 100 ಕೋಟಿ ರೂಪಾಯಿಗೆ ಸೇಲ್

    ಇದಕ್ಕೆ ಪೂರಕವಾಗಿ ಇತ್ತೀಚೆಗೆ ನಡೆದ ʻಕಾಫಿ ವಿತ್ ಕರಣ್ʼ ಕಾರ್ಯಕ್ರಮದಲ್ಲಿ ಕಿಯಾರಾ ಮದುವೆಗೆ(Wedding) ರೆಡಿಯಿದ್ದೇನೆ ಎಂದು ಸುಳಿವು ನೀಡಿದ್ದರು. ಹಾಗಾಗಿ ಬಿಟೌನ್‌ನಲ್ಲಿ ಸಿದ್ಧಾರ್ಥ್, ಕಿಯಾರಾ ಶಾದಿ ಸುದ್ದಿ ಸಖತ್ ಸದ್ದು ಮಾಡುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಕಿಯಾರಾಗೆ ಸಿದ್ಧಾರ್ಥ್ ಮಲ್ಹೋತ್ರಾ ಕ್ಲಾಸ್: ಅಷ್ಟಕ್ಕೂ ಆಗಿದ್ದೇನು?

    ಕಿಯಾರಾಗೆ ಸಿದ್ಧಾರ್ಥ್ ಮಲ್ಹೋತ್ರಾ ಕ್ಲಾಸ್: ಅಷ್ಟಕ್ಕೂ ಆಗಿದ್ದೇನು?

    ಬಾಲಿವುಡ್ ಬ್ಯೂಟಿ ಕಿಯಾರಾ ಅಡ್ವಾಣಿ `ಭೂಲ್ ಭುಲಯ್ಯ’ ಸಕ್ಸಸ್ ಖುಷಿಯಲ್ಲಿದ್ದಾರೆ. ಸಿನಿಮಾ ವಿಚಾರದ ಜೊತೆ ವಯಕ್ತಿಕ ವಿಚಾರವಾಗಿಯೂ ಕಿಯಾರಾ ಸುದ್ದಿಯಲ್ಲಿದ್ದಾರೆ. ಕಿಯಾರಾ ಮತ್ತು ಸಿದ್ಧಾರ್ಥ್ ಕುರಿತು ಹೊಸ ವಿಚಾರ ಇದೀಗ ಸೌಂಡ್ ಮಾಡುತ್ತಿದೆ.

    ಬಿಟೌನ್‌ನಲ್ಲಿ ಸಿದ್ಧಾಥ್ ಮತ್ತು ಕಿಯಾರಾ ಲವ್ವಿ ಡವ್ವಿ ಬಗ್ಗೆ ಸಾಕಷ್ಟು ವಿಚಾರಗಳು ಈಗಾಗಲೇ ಹರಿದಾಡುತ್ತಾ ಇದೆ. ಬ್ರೇಕಪ್ ಮಾಡಿಕೊಂಡಿದ್ದ ಈ ಜೋಡಿ ಮತ್ತೆ ಒಂದಾಗಿದ್ದಾರೆ ಅನ್ನೋ ಸುದ್ದಿ ಕೂಡ ಇದೆ. ಈ ಬೆನ್ನಲ್ಲೇ ಕಿಯಾರಾಗೆ ಸಿದ್ಧಾರ್ಥ್ ಬೈತಾರಂತೆ ಅನ್ನೋ ವಿಚಾರವನ್ನ ನಿರ್ದೇಶಕ ಕಮಾಲ್ ಆರ್ ಖಾನ್ ಹೇಳಿದ್ದಾರೆ. ಇದನ್ನೂ ಓದಿ: ಜೂನ್ 3ಕ್ಕೆ ತೆರೆಮೇಲೆ ಸಂದೀಪ್ ಉನ್ನಿಕೃಷ್ಣನ್ ಜೀವನಚರಿತ್ರೆ

    ಈಗ ಕಿಯಾರಾ ಮತ್ತು ಸಿದ್ಧಾರ್ಥ್ ಬಗ್ಗೆ ಮಾತನಾಡಿರುವ ನಿರ್ದೇಶಕ ಕಮಾಲ್ ಖಾನ್ ಸದಾ ವಿವಾದಗಳಿಂದ ಸುದ್ದಿ ಆಗುತ್ತಾರೆ. ಬೇರೆ ನಟ, ನಟಿಯರ ಬಗ್ಗೆ ಮಾತನಾಡಿ ಕಾಲೆಳೆಯುವ ಕೆಲಸ ಮಾಡುತ್ತಾರೆ. ಅಂತೆಯೇ ಈಗ ಕಮಾಲ್ ಆರ್ ಖಾನ್ ಈಗ ಕಿಯಾರಾ ತನ್ನ ಬಗ್ಗೆ ಮಾಡಿದ್ದ ಟ್ವೀಟ್ ಡಿಲೀಟ್ ಮಾಡಲು ಕಾರಣ ಸಿದ್ಧಾರ್ಥ್ ಮಲ್ಹೋತ್ರ ಎಂದಿದ್ದಾರೆ. ಕಮಾಲ್ ಖಾನ್ ತಮ್ಮ ಜೀವನ ಚರಿತ್ರೆಯ ಪುಸ್ತಕವನ್ನು ಬಿಡುಗಡೆಗೊಳಿಸಿದ್ದಾರೆ. ಅಮಿತಾಬ್ ಬಚ್ಚನ್ ಈ ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ. ಹಾಗಾಗಿ ಕಮಾಲ್ ಖಾನ್‌ಗೆ ಶುಭಕೋರಿ ಕಿಯಾರಾ ಟ್ವೀಟ್ ಮಾಡಿದ್ದರು. ಆದರೆ 10 ನಿಮಿಷದಲ್ಲಿ ಈ ಟ್ವೀಟ್ ಡಿಲೀಟ್ ಮಾಡಿದ್ದಾರೆ.

    ಕಿಯಾರಾ ಟ್ವೀಟ್ ಡಿಲೀಟ್ ಮಾಡಲು ಕಾರಣ ಏನು ಎಂದು ನಾನು ಕೇಳಿದೆ. ಆಗ ಕಿಯಾರಾ, ಸಿದ್‌ಗೆ ಕೋಪ ಬಂದಿದೆ. ಇದನ್ನು ಡಿಲೀಟ್ ಮಾಡಲು ಸಿದ್ಧಾರ್ಥ್ ಮಲ್ಹೋತ್ರಾ ಹೇಳಿದ್ದಾರೆ. ಈ ಮೂಲಕ ಕಿಯಾರಾಗೆ ಸಿದ್ಧಾರ್ಥ್ ಮಲ್ಹೋತ್ರಾ ಬೈಯುತ್ತಾರೆ ಎಂಬ ವಿಚಾರವನ್ನ ಕಮಲ್ ಖಾನ್ ತಿಳಿಸಿದ್ದಾರೆ. ಇದೀಗ ಸೋಷಿಯಲ್ ಮೀಡಿಯಾ ತುಂಬೆಲ್ಲಾ ಈ ಸುದ್ದಿಯೇ ಜೋರಾಗಿದೆ.

  • ಮುನಿಸು ಮರೆತು ಮತ್ತೆ ಒಂದಾದ್ರು ಕಿಯಾರಾ- ಸಿದ್ಧಾರ್ಥ್ ಮಲ್ಹೋತ್ರಾ

    ಮುನಿಸು ಮರೆತು ಮತ್ತೆ ಒಂದಾದ್ರು ಕಿಯಾರಾ- ಸಿದ್ಧಾರ್ಥ್ ಮಲ್ಹೋತ್ರಾ

    ಬಾಲಿವುಡ್ ಕ್ಯೂಟ್ ಕಪಲ್ ಕಿಯಾರಾ ಮತ್ತು ಸಿದ್ಧಾರ್ಥ್ ಬೇರೆಯಾಗಿದ್ದಾರೆ ಎಂದುಕೊಂಡಿದ್ದ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಮುನಿಸು ಮರೆತು ಮತ್ತೆ ಈ ಜೋಡಿ ಒಂದಾಗಿದ್ದಾರೆ. ಅದಕ್ಕೆ ಪೂರಕವಾಗಿ ಕಿಯಾರಾ ಸಿನಿಮಾ ರಿಲೀಸ್‌ಗೆ ಬಂದು ಚಿತ್ರ ನೋಡಿ ಚಿತ್ರತಂಡಕ್ಕೆ ಸಿದ್ಧಾರ್ಥ್ ಸಾಥ್ ನೀಡಿದ್ದಾರೆ.

    ಶೇರ್‌ಷಾ ಜೋಡಿ ಮತ್ತೆ ಒಂದಾಗಿದ್ದಾರೆ. ಕಿಯಾರಾ ಮತ್ತು ಕಾರ್ತಿಕ್ ಆರ್ಯನ್ ನಟನೆಯ `ಭೂಲ್ ಭುಲಯ್ಯ’ ಚಿತ್ರದ ಶೋಗೆ ಸಿದ್ಧಾರ್ಥ್ ಮಲ್ಹೋತ್ರಾ ಬಂದು ಚಿತ್ರ ನೋಡಿ ಸಿನಿಮಾ ತಂಡಕ್ಕೆ ಶುಭಹಾರೈಸಿದ್ದಾರೆ. ಕಿಯಾರಾ ಮತ್ತು ಕಾರ್ತಿಕ್ ಚಿತ್ರ ನೋಡಿ ಇಷ್ಟಪಟ್ಟಿದ್ದಾರೆ.

    `ಭೂಲ್ ಭುಲಯ್ಯ’ ಚಿತ್ರದ ಶೋ ಬರುವಂತೆ ಕಿಯಾರಾ ಸಿದ್ಧಾರ್ಥ್ ಅವರನ್ನು ಕರೆಯಲಾಗಿತ್ತು. ಕಿಯಾರಾ ಮನವಿಯಂತೆ ಚಿತ್ರ ನೋಡಿ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ. ಈ ವೇಳೆ ಸಿದ್ಧಾರ್ಥ್ , ಕಿಯಾರಾ ಅವರನ್ನು ತಬ್ಬಿ ಚಿತ್ರದ ಕುರಿತು ಪ್ರಶಂಸಿದ್ದಾರೆ. ಈ ಮೂಲಕ ನಮ್ಮ ಇಬ್ಬರ ನಡುವೆ ಎಲ್ಲವೂ ಸರಿಯಾಗಿದೆ ಎಂಬುದನ್ನು ಈ ಜೋಡಿ ತೋರಿಸಿ ಕೊಟ್ಟಿದ್ದಾರೆ. ಇದನ್ನೂ ಓದಿ: ನಂದಮೂರಿ ಬಾಲಕೃಷ್ಣ ಸಿನಿಮಾದಲ್ಲಿ `ಕಿಸ್’ ಬ್ಯೂಟಿ ಶ್ರೀಲೀಲಾ

    ಒಬ್ಬರ ಸಿನಿಮಾಗೆ ಇನ್ನೊಬ್ಬರು ಸಾಥ್ ಕೊಡ್ತಿರೋದು ಜೊತೆಗೆ ಕಿಯಾರಾ ಚಿತ್ರದ ಸಕ್ಸಸ್ ಖುಷಿಯಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಬಾಗಿಯಾಗಿರೋದನ್ನ ನೋಡಿ ಫ್ಯಾನ್ಸ್ ಕೂಡ ಥ್ರಿಲ್ ಆಗಿದ್ದಾರೆ.

  • ಬಾಲಿವುಡ್‌ನಲ್ಲಿ ಮತ್ತೊಂದು ಬ್ರೇಕಪ್ ಕಹಾನಿ; ಸಿದ್ಧಾರ್ಥ್-ಕಿಯಾರಾ ದೂರಾ ದೂರ..!

    ಬಾಲಿವುಡ್‌ನಲ್ಲಿ ಮತ್ತೊಂದು ಬ್ರೇಕಪ್ ಕಹಾನಿ; ಸಿದ್ಧಾರ್ಥ್-ಕಿಯಾರಾ ದೂರಾ ದೂರ..!

    ಬಿಟೌನ್ ಅಡ್ಡಾದಲ್ಲಿ ಬ್ರೇಕಪ್ ಸ್ಟೋರಿಗಳಿಗೇನು ಬರವಿಲ್ಲ. ಅದೆಷ್ಟೋ ಬ್ರೇಕಪ್ ಕಹಾನಿಯನ್ನ ಚಿತ್ರರಂಗ ನೋಡಿದೆ. ಈಗ ಬಾಲಿವುಡ್ ಗಲ್ಲಿಯಲ್ಲಿ ಮತ್ತೊಂದು ಬ್ರೇಕಪ್ ವಿಚಾರ ಭಾರೀ ಸುದ್ದಿ ಮಾಡ್ತಿದೆ. ಬಾಲಿವುಡ್‌ ಕ್ಯೂಟ್‌ ಕಪಲ್‌ ಕಿಯಾರಾ ಮತ್ತು ಸಿದ್ಧಾರ್ಥ್‌ ಲವ್‌ಸ್ಟೋರಿಗೆ ಮತ್ತು ಇದೀಗ ಬ್ರೇಕ್ ಬಿದ್ದಿದೆ.

    ಒಂದೊಳ್ಳೆ ಸ್ನೇಹ ಪರಿಚಯವಾಗಿ, ಆ ಪರಿಚಯ ಪ್ರೀತಿಗೆ ತಿರುಗಿ ನಂತರ ವಿದೇಶದವರೆಗೂ ಕೈ ಕೈ ಹಿಡಿದು ಹೋಗುವ ಮಟ್ಟಿಗೆ ಪ್ರೇಂಡ್‌ಶಿಪ್ ಇತ್ತು. ಈಗ ಇದೆಲ್ಲದಕ್ಕೂ ಬ್ರೇಕ್‌ ಬಿದ್ದಿದೆ. ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್‌ ಲವ್‌ ಕಹಾನಿ ಅಂತ್ಯವಾಗಿದೆ. ಈಗ ʻಶೇರ್ಷಾʼ ಪ್ರೇಮಿಗಳು ನಾನು ಒಂದು ನೀನು ಒಂದು ತೀರಾ ಅಂತಿದ್ದಾರಂತೆ.

    ಬಾಲಿವುಡ್‌ನ ಕ್ಯೂಟ್ ಕಪಲ್ ಆಗಿದ್ದ ಸಿದ್ಧಾರ್ಥ್ ಮತ್ತು ಕಿಯಾರಾ ಬಿಟೌನ್ ಹಲವು ಪಾರ್ಟಿಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ತಿದ್ದರು. ಕ್ಯಾಮೆರಾ ಕಣ್ಣಿಗೂ ಒಟ್ಟಿಗೆ ಕಾಣಿಸಿಕೊಂಡಿದ್ದರು ಬಳಿಕ ಎಲ್ಲಿಯೂ ಕೂಡ ತಮ್ಮ ಪ್ರೀತಿಯ ಬಗ್ಗೆ ಅಧಿಕೃತವಾಗಿ ಹೇಳಿಕೊಂಡಿರಲಿಲ್ಲ. ಈಗ ಈ ಜೋಡಿ ಭೇಟಿಯಾಗೋದಕ್ಕೂ ಫುಲ್ ಸ್ಟಾಪ್ ಇಟ್ಟಿದೆ. ಯಾವುದರ ಸಹವಾಸವೇ ಬೇಡ ಅಂತಾ ಸಿನಿಮಾಗಳತ್ತ ಬ್ಯುಸಿಯಾಗಿದ್ದಾರೆ. ಆದರೆ ಬ್ರೇಕಪ್‌ಗೆ ಅಸಲಿ ಕಾರಣವೇನು ಎಂಬುದು ತಿಳಿದು ಬಂದಿಲ್ಲ. ಇದನ್ನೂ ಓದಿ: ಶೂಟಿಂಗ್ ವೇಳೆ ಅವಘಡ, ನಟ ಧನ್ವೀರ್ ಗೌಡ ಕೈಗೆ ಪೆಟ್ಟು

     

    View this post on Instagram

     

    A post shared by KIARA (@kiaraaliaadvani)

    `ಶೇರ್ಷಾ’ ಚಿತ್ರದಲ್ಲಿ ಕಿಯಾರಾ ಮತ್ತು ಸಿದ್ಧಾರ್ಥ್ ಇವರಿಬ್ಬರ ಕೆಮಿಸ್ಟ್ರಿ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದರು. ಇವರಿಬ್ಬರು ರಿಯಲ್ ಲೈಫ್‌ನಲ್ಲೂ ಜತೆಯಾದ್ರೆ ಅದೆಷ್ಟು ಚೆನ್ನಾಗಿರುತ್ತೆ ಅಂತಾ ಲೆಕ್ಕಚಾರ ಹಾಕಿದ್ರು. ಇದೀಗ ಅಭಿಮಾನಿಗಳ ಆಸೆಗೆ ತಣ್ಣೀರು ಎರಚಿದಂತೆ ಆಗಿದೆ. ಒಟ್ಟಾರೆ ನೆಚ್ಚಿನ ಜೋಡಿಯ ಬ್ರೇಕಪ್ ಕಥೆ ಕೇಳಿ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಈ ಜೋಡಿ ಮತ್ತೆ ಒಂದಾಗಲಿ ಅಂತಾ ಹಾರೈಸುತ್ತಿದ್ದಾರೆ.