Tag: Kailash Yatra

  • ಕೈಲಾಸಕ್ಕೆ ಹೋಗುತ್ತಿದ್ದ 40 ಯಾತ್ರಾರ್ಥಿಗಳ ರಕ್ಷಣೆ

    ಕೈಲಾಸಕ್ಕೆ ಹೋಗುತ್ತಿದ್ದ 40 ಯಾತ್ರಾರ್ಥಿಗಳ ರಕ್ಷಣೆ

    ಡೆಹ್ರಾಡೂನ್: ಕೈಲಾಸ ಮಾನಸ ಸರೋವರ ರಸ್ತೆ ಬಂದ್ ಆಗಿದ್ದರಿಂದ, ಬುಂದಿ ಗ್ರಾಮದಲ್ಲಿ ಸಿಲುಕಿದ್ದ 40 ಯಾತ್ರಾರ್ಥಿಗಳನ್ನು ಉತ್ತರಖಂಡ ಸರ್ಕಾರ ಭಾನುವಾರ ರಕ್ಷಿಸಿದೆ.

    ಕೈಲಾಸ ಯಾತ್ರೆಯ ಮಾರ್ಗದಲ್ಲಿ ದೊಡ್ಡ ಬಂಡೆಗಳು ಬಿದ್ದಿರುವುದರಿಂದ ರಸ್ತೆಯನ್ನು ಮುಚ್ಚಲಾಗಿತ್ತು. ಈ ಹಿನ್ನೆಲೆಯಲ್ಲಿ ಕೈಲಾಸ ಯಾತ್ರೆಗೆಂದು ಹೋಗಿದ್ದ 40 ಯಾತ್ರಾರ್ಥಿಗಳನ್ನು ಹೆಲಿಕಾಪ್ಟರ್ ಬಳಸಿ ಧಾರ್ಚುಲಾಗೆ ಕರೆತರಲಾಯಿತು. ಎಲ್ಲಾ ಯಾತ್ರಾರ್ಥಿಗಳನ್ನು 8 ಹೆಲಿಕಾಪ್ಟರ್‌ ಮೂಲಕ ಸುರಕ್ಷಿತವಾಗಿ ಕರೆದೊಯ್ಯಲಾಗಿದೆ.

    ಉತ್ತರಾಖಂಡದಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವು ಪ್ರದೇಶಗಳಲ್ಲಿ ಭೂಕುಸಿತ ಉಂಟಾಗಿದೆ. ಬಿಗಿ ಭದ್ರತೆಯ ನಡುವೆ ರಾಜ್ಯದಲ್ಲಿ ಕನ್ವರ್ ಯಾತ್ರೆ ಆರಂಭವಾಗಿದೆ. ಮನೆ ಮುಂದೆ ನಿಲ್ಲಿಸಿದ್ದ ಶಾಸಕರ ಕಾರನ್ನೇ ಎಗರಿಸಿ ಖತರ್ನಾಕ್ ಕಳ್ಳರು

    ಯಾತ್ರಾರ್ಥಿಗಳಿಗೆ ಕೈಲಾಸ ಪರ್ವತ ತೆರಳಲು ಎರಡು ಮಾರ್ಗಗಳಿದೆ. ಅದರಲ್ಲಿ ಒಂದು ಉತ್ತರಾಖಂಡದ ಲಿಪುಲೇಖ್ ಪಾಸ್ ಹಾಗೂ ಇನ್ನೊಂದು ಸಿಕ್ಕಿಂನ ನಾಥು ಲಾ ಪಾಸ್ ಆಗಿದೆ. ಗಡಿಯೊಳಗೆ ಬಂದ ಪಾಕಿಸ್ತಾನದ ಡ್ರೋನ್ ಓಡಿಸಿದ ಭದ್ರತಾ ಪಡೆ

    Live Tv
    [brid partner=56869869 player=32851 video=960834 autoplay=true]

  • ಹುಬ್ಬಳ್ಳಿಯಲ್ಲಿ ಹೊತ್ತ ಹರಕೆ ತೀರಿಸಲು ‘ರಾಗಾ’ ಕೈಲಾಸ ಯಾತ್ರೆ

    ಹುಬ್ಬಳ್ಳಿಯಲ್ಲಿ ಹೊತ್ತ ಹರಕೆ ತೀರಿಸಲು ‘ರಾಗಾ’ ಕೈಲಾಸ ಯಾತ್ರೆ

    ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆ ವೇಳೆ ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಾನಸ ಸರೋವರ ಮತ್ತು ಕೈಲಾಸ ಯಾತ್ರೆ ಕೈಗೊಳ್ಳುತ್ತೇನೆ ಎಂಬ ಹರಕೆಯನ್ನು ಹೊತ್ತಿದ್ದರು. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 1ರಂದು ರಾಹುಲ್ ಗಾಂಧಿ ಮಾನಸ ಸರೋವರಕ್ಕೆ ತೆರಳಲಿದ್ದಾರೆ.

    ಆಗಸ್ಟ್ 31ರ ರಾತ್ರಿ ಮಾನಸ ಸರೋವರಕ್ಕೆ ತೆರಳಲಿದ್ದು, ಸೆಪ್ಟೆಂಬರ್ 1ರಂದು ಕ್ಷೇತ್ರಗಳಿಗೆ ರಾಹುಲ್ ಗಾಂಧಿ ಭೇಟಿ ನೀಡಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಗುಜರಾತ್ ವಿಧಾನಸಭಾ ಚುನಾವಣೆ ಸಮಯದಿಂದ ರಾಹುಲ್ ಗಾಂಧಿ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಇದೇ ರೀತಿ ಕರ್ನಾಟಕದಲ್ಲಿಯೂ ಪ್ರಸಿದ್ಧ ಹಲವು ಪುಣ್ಯ ಕ್ಷೇತ್ರಗಳಿಗೂ ಭೇಟಿ ನೀಡಿದ್ದರು.

    ಏನಿದು ಹರಕೆ?
    ಕರ್ನಾಟಕ ವಿಧಾನಸಭೆ ಚುನಾವಣಾ ಪ್ರಚಾರದ ನಿಮಿತ್ತ ರಾಹುಲ್ ಗಾಂಧಿ ವಿಶೇಷ ವಿಮಾನದಲ್ಲಿ ನವ ದೆಹಲಿಯಿಂದ ಹುಬ್ಬಳ್ಳಿಗೆ ಹೊರಟ್ಟಿದ್ದರು. ಆದ್ರೆ ಹುಬ್ಬಳ್ಳಿಯಲ್ಲಿ ಲ್ಯಾಂಡಿಂಗ್ ವೇಳೆ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

    ಅಂದು ವಿಮಾನ ಹಠಾತ್ತನೇ 8 ಸಾವಿರ ಅಡಿಗೆ ಕುಸಿದಾಗ ಎಲ್ಲವು ಮುಗಿಯಿತು ಅಂತಾ ಅಂದುಕೊಂಡಿದ್ರಂತೆ. ವಿಮಾನ ಸರಿಯಾಗಿ ಲ್ಯಾಂಡ್ ಆದ್ರೆ ಕರ್ನಾಟಕ ಚುನಾವಣೆ ಬಳಿಕ ಕೈಲಾಸ ಮತ್ತು ಮಾನಸ ಸರೋವರಕ್ಕೆ ಭೇಟಿ ನೀಡುತ್ತೇನೆ ಹರಕೆ ಹೊತ್ತಿಕೊಂಡಿದ್ದೇನೆ ಎಂದು ರಾಹುಲ್ ಗಾಂಧಿ ಚುನಾವಣಾ ಪ್ರಚಾರದಲ್ಲಿ ಹೇಳಿಕೊಂಡಿದ್ದರು. ಈ ಸಂಬಂಧ ರಾಹುಲ್ ಗಾಂಧಿ ಹರಕೆ ತೀರಿಸಲು ಹೊರಟ್ಟಿದ್ದಾರೆ ಎನ್ನಲಾಗುತ್ತಿದೆ.

    ಕೈಲಾಸ ಪರ್ವತ ಯಾತ್ರೆಗೆ ನೊಂದಣಿ ಮಾಡಿಸಲು ಫೆಬ್ರವರಿ 20ಕ್ಕೆ ಪ್ರಾರಂಭವಾಗಿ ಮಾರ್ಚ್ 20ಕ್ಕೆ ಮುಕ್ತಾಯವಾಗಿದೆ. ಅಲ್ಲದೇ ಜೂನ್ 8ರಂದು ಯಾತ್ರೆ ಪ್ರಾರಂಭವಾಗಿ ಸೆಪ್ಟೆಂಬರ್ 8 ರವರೆಗೆ ನಡೆಯುತ್ತದೆ. ಅಲ್ಲದೇ ಮೌಂಟ್ ಅಬು ಪರ್ವತವನ್ನು ಹಿಂದೂ, ಮುಸ್ಲಿಂ, ಬೊನ್(ಟಿಬೆಟ್‍ನ ಧರ್ಮ) ಹಾಗೂ ಜೈನ್ ನಾಲ್ಕೂ ಧರ್ಮಗಳಲ್ಲಿ ಪವಿತ್ರ ಕ್ಷೇತ್ರ ಎನ್ನುವ ಭಾವನೆಯಿದೆ.

    ಕರ್ನಾಟಕ ಚುನಾವಣೆ ಪ್ರಚಾರದ ವೇಳೆಯಲ್ಲಿ ರಾಹುಲ್ ಗಾಂಧಿ ತಾವು ಕೈಲಾಸ ಯಾತ್ರೆ ಕೈಗೊಳ್ಳುತ್ತೇನೆ ಅಂತಾ ಹೇಳಿದ್ದರು. ಅಂದು ಬಿಜೆಪಿ ನಾಯಕ ಚಂದ್ರಶೇಖರ್, ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ರಾಹುಲ್ ಗಾಂಧಿ ಗಿಮಿಕ್ ಮಾಡ್ತಿದ್ದಾರೆ ಅಂತಾ ಟೀಕಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv