Tag: Kailash Gahlot

  • ಆಪ್‌ಗೆ ರಾಜೀನಾಮೆ ನೀಡಿದ್ದ ಕೈಲಾಶ್ ಗಹ್ಲೋಟ್ ಬಿಜೆಪಿಗೆ ಸೇರ್ಪಡೆ

    ಆಪ್‌ಗೆ ರಾಜೀನಾಮೆ ನೀಡಿದ್ದ ಕೈಲಾಶ್ ಗಹ್ಲೋಟ್ ಬಿಜೆಪಿಗೆ ಸೇರ್ಪಡೆ

    ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಮಹತ್ವದ ಬೆಳವಣಿಗೆ ನಡೆದಿದಿದ್ದು ಆಮ್‌ ಆದ್ಮಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದ ಕೈಲಾಶ್ ಗಹ್ಲೋಟ್ (Kailash Gahlot) ಬಿಜೆಪಿ ಸೇರಿದ್ದಾರೆ.

    ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್, ಜಯ್ ಪಾಂಡಾ, ದುಷ್ಯಂತ್ ಗೌತಮ್, ಹರ್ಷ್ ಮಲ್ಹೋತ್ರಾ ಮತ್ತು ಇತರ ಬಿಜೆಪಿ ನಾಯಕರ ಸಮ್ಮುಖದಲ್ಲಿ ಅವರು ಬಿಜೆಪಿಗೆ ಸೇರ್ಪಡೆಯಾದರು. ಸೇರ್ಪಡೆ ಬಳಿಕ ಮಾತನಾಡಿದ ಅವರು, ಎಎಪಿಯ ಹೇಳಿಕೆಯನ್ನು ತಳ್ಳಿಹಾಕಿದ ಗಹ್ಲೋಟ್ ಅವರು ಒತ್ತಡದ ಅಡಿಯಲ್ಲಿ ತೊರೆದರು, ತಮ್ಮ ನಿರ್ಧಾರ ರಾತ್ರೋರಾತ್ರಿ ಮಾಡಿದಲ್ಲ ಎಂದು ಸ್ಪಷ್ಟಪಡಿಸಿದರು. ಪಕ್ಷವು ಅದರ ಮೂಲ ಮೌಲ್ಯಗಳು ಮತ್ತು ನೈತಿಕತೆಯಿಂದ ದೂರ ಸರಿದಿದೆ ಹೀಗಾಗಿ ರಾಜೀನಾಮೆ ನೀಡಬೇಕಾಯಿತು ಎಂದು ಹೇಳಿದರು.

    ಯಾವುದೇ ಬಾಹ್ಯ ಒತ್ತಡದಿಂದ ನಾನು ಬಿಜೆಪಿಗೆ ಸೇರಲಿಲ್ಲ, ಎಎಪಿ ತನ್ನ ಸಿದ್ಧಾಂತವನ್ನು ರಾಜಿ ಮಾಡಿಕೊಂಡಿದ್ದರಿಂದ ನಾನು ರಾಜೀನಾಮೆ ನೀಡಬೇಕಾಯಿತು‌. ನಾನು ಆರಂಭದಲ್ಲಿ ಸಾಮಾನ್ಯ ಜನರಿಗೆ ಸೇವೆ ಸಲ್ಲಿಸಲು ಎಎಪಿಗೆ ಸೇರಿದೆ, ಆದರೆ ಈಗ, ಪಕ್ಷವು ಅದರ ಮೂಲ ಧ್ಯೇಯದಿಂದ ಸಂಪರ್ಕ ಕಡಿತಗೊಂಡಿದೆ, ಅದರ ನಾಯಕರು ‘ಆಮ್’ (ಸಾಮಾನ್ಯ) ನಿಂದ ‘ಖಾಸ್’ (ಗಣ್ಯರು) ಗೆ ಬದಲಾಗುತ್ತಿದ್ದಾರೆ, ”ಎಂದು ಹೇಳಿದರು.

    ಭಾನುವಾರ ದೆಹಲಿಯ (Delhi) ಸಾರಿಗೆ ಸಚಿವ ಕೈಲಾಶ್ ಗಹ್ಲೋಟ್ ಅವರು ಆಮ್ ಆದ್ಮಿ ಪಕ್ಷಕ್ಕೆ (AAP) ರಾಜೀನಾಮೆ ನೀಡಿದ್ದರು. ರಾಜೀನಾಮೆ ಪತ್ರದಲ್ಲಿ ಚುನಾವಣೆ ವೇಳೆ ನೀಡಿದ್ದ ಭರವಸೆಗಳನ್ನು ಈಡೇರಿಸದ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು.

    ಸಾರಿಗೆ ಆಡಳಿತ ಸುಧಾರಣೆ, ಐಟಿ, ಗೃಹ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆಗಳನ್ನು ಹೊಂದಿದ್ದ ಕೈಲಾಶ್ ಗಹ್ಲೋಟ್ ಅವರು ತಮ್ಮ ರಾಜೀನಾಮೆಯನ್ನು ದೆಹಲಿಯ ಸರ್ಕಾರದ ಮಂತ್ರಿ ಮಂಡಳಿಗೆ ಸಲ್ಲಿಸಿದ್ದರು.

    ದೆಹಲಿಯ ಜನರಿಗೆ ನೀಡಿದ ಪ್ರಮುಖ ಭರವಸೆಗಳನ್ನು ಈಡೇರಿಸಲು ಪಕ್ಷದ ಅಸಮರ್ಥತೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯಮುನಾ ನದಿಯನ್ನು ಶುಚಿಗೊಳಿಸುವಲ್ಲಿ ವಿಫಲವಾಗಿದೆ.  ಅರವಿಂದ್ ಕೇಜ್ರಿವಾಲ್ ಅವರ ಹೊಸ ಅಧಿಕೃತ ಬಂಗಲೆಯ ಶೀಶ್‌ ಮಹಲ್‌ ವಿಚಾರದಲ್ಲಿ ಹಲವಾರು ಮುಜುಗರದ ಅಂಶಗಳಿವೆ. ಇದು ಸಾಮಾನ್ಯ ಜನರ ಪಕ್ಷವೇ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಇದಕ್ಕೆ ಏನು ಉತ್ತರಿಸುವುದು ಎಂದು ಅವರು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದರು.

    ಕೈಲಾಶ್ ಗೆಹ್ಲೋಟ್ ಬಿಜೆಪಿ ಸೇರ್ಪಡೆ ಬಗ್ಗೆ ಮಾತನಾಡಿದ ಆಪ್ ರಾಷ್ಟ್ರೀಯ ಸಂಚಾಲು ಅರವಿಂದ್ ಕೇಜ್ರಿವಾಲ್ ಅವರು, ಗಹ್ಲೋಟ್ ಅವರು ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸ್ವತಂತ್ರರು, ಅವರು ಯಾವುದೇ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಹೇಳಿದರು.

     

  • ಚುನಾವಣೆ ಹೊತ್ತಿನಲ್ಲಿ ಶಾಕ್‌- ಆಪ್‌ಗೆ ಸಚಿವ ಕೈಲಾಶ್‌ ಗಹ್ಲೋಟ್‌ ರಾಜೀನಾಮೆ

    ಚುನಾವಣೆ ಹೊತ್ತಿನಲ್ಲಿ ಶಾಕ್‌- ಆಪ್‌ಗೆ ಸಚಿವ ಕೈಲಾಶ್‌ ಗಹ್ಲೋಟ್‌ ರಾಜೀನಾಮೆ

    – ಇಡಿ, ಸಿಬಿಐ ಒತ್ತಡಕ್ಕೆ ರಾಜೀನಾಮೆ – ಆಪ್‌

    ನವದೆಹಲಿ: ದೆಹಲಿಯ (Delhi) ಸಾರಿಗೆ ಸಚಿವ ಕೈಲಾಶ್ ಗಹ್ಲೋಟ್ (Kailash Gahlot) ಅವರು ಆಮ್ ಆದ್ಮಿ ಪಕ್ಷಕ್ಕೆ (AAP) ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಪತ್ರದಲ್ಲಿ ಚುನಾವಣೆ ವೇಳೆ ನೀಡಿದ್ದ ಭರವಸೆಗಳನ್ನು ಈಡೇರಿಸದ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಸಾರಿಗೆ ಆಡಳಿತ ಸುಧಾರಣೆ, ಐಟಿ, ಗೃಹ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆಗಳನ್ನು ಹೊಂದಿದ್ದ ಕೈಲಾಶ್ ಗಹ್ಲೋಟ್ ಅವರು ತಮ್ಮ ರಾಜೀನಾಮೆಯನ್ನು ದೆಹಲಿಯ ಸರ್ಕಾರದ ಮಂತ್ರಿ ಮಂಡಳಿಗೆ ಸಲ್ಲಿಸಿದ್ದಾರೆ.

    ಮುಖ್ಯಮಂತ್ರಿ ಅತಿಶಿ, ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ಗಹ್ಲೋಟ್, ದೆಹಲಿಯ ಜನರಿಗೆ ನೀಡಿದ ಪ್ರಮುಖ ಭರವಸೆಗಳನ್ನು ಈಡೇರಿಸಲು ಪಕ್ಷದ ಅಸಮರ್ಥತೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯಮುನಾ ನದಿಯನ್ನು ಶುಚಿಗೊಳಿಸುವಲ್ಲಿ ವಿಫಲವಾಗಿರುವುದನ್ನು ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಅರವಿಂದ್ ಕೇಜ್ರಿವಾಲ್ ಅವರ ಹೊಸ ಅಧಿಕೃತ ಬಂಗಲೆಯ ಶೀಶ್‌ ಮಹಲ್‌ ವಿಚಾರದಲ್ಲಿ ಹಲವಾರು ಮುಜುಗರದ ಅಂಶಗಳಿವೆ. ಇದು ಸಾಮಾನ್ಯ ಜನರ ಪಕ್ಷವೇ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಇದಕ್ಕೆ ಏನು ಉತ್ತರಿಸುವುದು ಎಂದು ಅವರು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ದೆಹಲಿ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವಿನ ನಿರಂತರ ಜಗಳ ನಗರದ ಪ್ರಗತಿಗೆ ಅಡ್ಡಿಯಾಗಿದೆ. ದೆಹಲಿ ಸರ್ಕಾರವು ಕೇಂದ್ರದೊಂದಿಗೆ ಹೋರಾಡಲು ಹೆಚ್ಚಿನ ಸಮಯವನ್ನು ಕಳೆದರೆ, ದೆಹಲಿಯ ನಿಜವಾದ ಪ್ರಗತಿ ಸಾಧ್ಯವಿಲ್ಲ ಎಂಬುದು ಈಗ ಸ್ಪಷ್ಟವಾಗಿದೆ. ಇದೆಲ್ಲ ಕಾರಣದಿಂದ ಪಕ್ಷದಿಂದ ದೂರ ಉಳಿಯುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ಪತ್ರದಲ್ಲಿ ಬರೆದಿದ್ದಾರೆ.

    ಈ ಬಗ್ಗೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಆಪ್‌, ಬಿಜೆಪಿ (BJP) ತನ್ನ ಷಡ್ಯಂತ್ರ, ಕೀಳುಮಟ್ಟದ ರಾಜಕಾರಣದಲ್ಲಿ ಯಶಸ್ವಿಯಾಗಿದೆ. ಬಿಜೆಪಿಯ ಒತ್ತಡಕ್ಕೆ ಒಳಗಾದ ಜಾರಿ ನಿರ್ದೇಶನಾಲಯ (ಇಡಿ)ಯಿಂದ ವಿಚಾರಣೆಗೆ ಒಳಗಾದ ಗಹ್ಲೋಟ್ ಅವರನ್ನು ಸಿಬಿಐ ಸೇರಿದಂತೆ ಕೇಂದ್ರೀಯ ಏಜೆನ್ಸಿಗಳು ಗುರಿಯಾಗಿಸುತ್ತಿವೆ ಎಂದು ಆರೋಪಿಸಿದೆ.

    ಫೆಬ್ರವರಿಯಲ್ಲಿ ನಡೆಯಲಿರುವ ದೆಹಲಿ ಚುನಾವಣೆಗೆ ಮುಂಚಿತವಾಗಿ ಗಹ್ಲೋಟ್ ಅವರ ರಾಜೀನಾಮೆಯು ಆಮ್ ಆದ್ಮಿ ಪಕ್ಷಕ್ಕೆ ಗಮನಾರ್ಹ ಹಿನ್ನಡೆಯಾಗಿದೆ.

  • ಕೇಜ್ರಿವಾಲ್‌ ಬಂಧನ ಬೆನ್ನಲ್ಲೇ ಮತ್ತೊಬ್ಬ ದೆಹಲಿ ಸಚಿವರಿಗೆ ಇ.ಡಿ ಸಮನ್ಸ್‌

    ಕೇಜ್ರಿವಾಲ್‌ ಬಂಧನ ಬೆನ್ನಲ್ಲೇ ಮತ್ತೊಬ್ಬ ದೆಹಲಿ ಸಚಿವರಿಗೆ ಇ.ಡಿ ಸಮನ್ಸ್‌

    ನವದೆಹಲಿ: ದೆಹಲಿ ಮದ್ಯ ನೀತಿ ಹಗರಣ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಬಂಧನಕ್ಕೊಳಗಾಗಿದ್ದಾರೆ. ಅವರ ಬೆನ್ನಲ್ಲೇ ದೆಹಲಿ ಸಚಿವ ಕೈಲಾಶ್‌ ಗೆಹ್ಲೋಟ್‌ಗೆ (Kailash Gahlot) ಇ.ಡಿ ಸಮನ್ಸ್‌ ನೀಡಿದೆ.

    ಎಎಪಿ ನಾಯಕ ಗೆಹ್ಲೋಟ್‌ ಅವರು ದೆಹಲಿ ಸರ್ಕಾರದಲ್ಲಿ ಗೃಹ, ಸಾರಿಗೆ ಮತ್ತು ಕಾನೂನು ಸಚಿವರಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಕರೆದಿದೆ. ಇದನ್ನೂ ಓದಿ: ರಾಹುಲ್‌ ಗಾಂಧಿ ವಿರುದ್ಧ ಕಣಕ್ಕಿಳಿದಿರೋ ಬಿಜೆಪಿ ಅಭ್ಯರ್ಥಿ ಮೇಲೆ 242 ಕ್ರಿಮಿನಲ್‌ ಕೇಸ್‌

    ಇ.ಡಿ ಸಮನ್ಸ್‌ ಬರುತ್ತಿದ್ದಂತೆ ಗೆಹ್ಲೋಟ್ ಅವರು ಈಗಾಗಲೇ ತನಿಖಾ ಸಂಸ್ಥೆಯ ಕಚೇರಿಯನ್ನು ತಲುಪಿದ್ದಾರೆ. ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿದ ಕೆಲವೇ ದಿನಗಳಲ್ಲಿ ಸಮನ್ಸ್ ಬಂದಿದೆ.

    ಈ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಕೈಲಾಶ್ ಗಹ್ಲೋಟ್ ಅವರನ್ನು ಕೇಳಲಾಗಿತ್ತು. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗುವುದು ಎಂದು ಇಡಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮುಲಾಯಂ ಸರ್ಕಾರದಿಂದ ರಕ್ಷಣೆ – ಅನ್ಸಾರಿಯನ್ನು ಬಂಧಿಸಿದ್ದಕ್ಕೆ ಡಿಎಸ್‌ಪಿಗೆ ರಾಜೀನಾಮೆ ಶಿಕ್ಷೆ!

    ಮದ್ಯ ನೀತಿ ಹಗರಣದಲ್ಲಿ 600 ಕೋಟಿಗೂ ಹೆಚ್ಚು ಹಣವನ್ನು ಲಂಚವಾಗಿ ಪಡೆಯಲಾಗಿದೆ. ಆ ಹಣವನ್ನು ಗೋವಾ ಮತ್ತು ಪಂಜಾಬ್‌ ಚುನಾವಣಾ ಪ್ರಚಾರಕ್ಕಾಗಿ ಬಳಸಲಾಗಿದೆ ಎಂದು ಇ.ಡಿ ತಿಳಿಸಿದೆ.

    ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಆಮ್ ಆದ್ಮಿ ಪಕ್ಷದ ಮೂವರು ಪ್ರಮುಖರನ್ನು ಬಂಧಿಸಲಾಗಿದೆ. ಎಎಪಿ ಸಂಸದ ಸಂಜಯ್ ಸಿಂಗ್ ಮತ್ತು ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬಂಧನಕ್ಕೆ ಒಳಗಾಗಿದ್ದಾರೆ.

  • ಕೇಂದ್ರ ಗೃಹ ಇಲಾಖೆಯೊಂದಿಗಿನ ಸಂಘರ್ಷದ ಬಳಿಕ ದೆಹಲಿ ಬಜೆಟ್ ಮಂಡಿಸಿದ ಆಮ್ ಆದ್ಮಿ

    ಕೇಂದ್ರ ಗೃಹ ಇಲಾಖೆಯೊಂದಿಗಿನ ಸಂಘರ್ಷದ ಬಳಿಕ ದೆಹಲಿ ಬಜೆಟ್ ಮಂಡಿಸಿದ ಆಮ್ ಆದ್ಮಿ

    ನವದೆಹಲಿ : ಕೇಂದ್ರ ಗೃಹ ಇಲಾಖೆಯೊಂದಿಗೆ ಸಂಘರ್ಷದ ಎರಡು ದಿನಗಳ ಬಳಿಕ ದೆಹಲಿಯ (Delhi) ಹಣಕಾಸು ಸಚಿವ ಕೈಲಾಶ್ ಗಹ್ಲೋಟ್ (Kailash Gahlot) ಇಂದು 78,800 ಕೋಟಿ ರೂಪಾಯಿಗಳ ಬಜೆಟ್ (Budget) ಮಂಡಿಸಿದರು. ದೆಹಲಿಯನ್ನು ಸ್ವಚ್ಛ, ಸುಂದರ ಮತ್ತು ಆಧುನಿಕವಾಗಿಸಲು 21,000 ರೂಪಾಯಿಗಳನ್ನು ವ್ಯಯಿಸಲಾಗುವುದು ಎಂದು ಗಹ್ಲೋಟ್ ಹೇಳಿದ್ದಾರೆ.

    ಇತ್ತೀಚೆಗೆ ಉದ್ಘಾಟನೆಗೊಂಡ ಆಶ್ರಮ್ ಮೇಲ್ಸೇತುವೆ ಸೇರಿದಂತೆ ಸರ್ಕಾರದ ಮೂಲಸೌಕರ್ಯ ಯೋಜನೆಗಳನ್ನು ಶ್ಲಾಘಿಸಿದ ಹಣಕಾಸು ಸಚಿವರು ನಗರದಲ್ಲಿ ಸುಗಮ ಸಂಚಾರವನ್ನು ಖಚಿತಪಡಿಸಿದರು. ಯಮುನಾ ನದಿಯ ಶುದ್ಧೀಕರಣವು ಆದ್ಯತೆಯಾಗಿದೆ ಮತ್ತು ದೆಹಲಿಯ ಮೂರು ಮುಖ್ಯ ಭೂಕುಸಿತಗಳನ್ನು ತೆರವುಗೊಳಿಸಲು ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್‌ಯೊಂದಿಗೆ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಹೇಳಿದರು.

    ಇದರ ಜೊತೆಗೆ ರಸ್ತೆ ಜಾಲದ 1,400 ಕಿ.ಮೀಗಳ ಉನ್ನತೀಕರಣ ಮತ್ತು ಸುಂದರೀಕರಣ, ದೆಹಲಿಯ ವಿವಿಧ ಭಾಗಗಳಲ್ಲಿ 26 ಹೊಸ ಮೇಲ್ಸೇತುವೆ/ ಅಂಡರ್‌ಪಾಸ್/ ಸೇತುವೆ ಯೋಜನೆಗಳ ನಿರ್ಮಾಣ, 3 ವಿಶಿಷ್ಟ ಡಬಲ್ ಡೆಕ್ಕರ್ ಫ್ಲೈಓವರ್‌ಗಳ ನಿರ್ಮಾಣ, 1,600 ಹೊಸ ಶೂನ್ಯ-ಹೊರಸೂಸುವಿಕೆ ಎಲೆಕ್ಟ್ರಿಕ್ ಬಸ್‌ಗಳ ಇಂಡಕ್ಷನ್, ದೆಹಲಿಯ 57 ಅಸ್ತಿತ್ವದಲ್ಲಿರುವ ಬಸ್ ಡಿಪೋಗಳ ವಿದ್ಯುದ್ಧೀಕರಣ, 3 ವಿಶ್ವ ದರ್ಜೆಯ ಅಂತರ-ರಾಜ್ಯ ಬಸ್ ಟರ್ಮಿನಲ್‌ಗಳ ನಿರ್ಮಾಣ ಮಾಡಲಾಗುವುದು ಎಂದರು‌.

    ಮನೀಶ್ ಸಿಸೋಡಿಯಾ (Manish Sisodia) ಅವರು ಬಜೆಟ್ ಮಂಡಿಸಿದ್ದರೆ ನನಗೆ ಹೆಚ್ಚು ಸಂತೋಷವಾಗುತ್ತಿತ್ತು. ಅವರು ನನ್ನ ಹಿರಿಯ ಸಹೋದರ. ಮನೀಶ್ ಸಿಸೋಡಿಯಾ ಅವರಿಗೆ ಪ್ರಪಂಚದದ ಎಲ್ಲಾ ಮಕ್ಕಳ ಹಾರೈಕೆ ಇರುತ್ತದೆ. ಇದು ದೆಹಲಿ ಸರ್ಕಾರದ 9ನೇ ಮತ್ತು ನನ್ನ ಮೊದಲ ಬಜೆಟ್ ಎಂದು ಕೈಲಾಶ್ ಗಹ್ಲೋಟ್ ಹೇಳಿದರು. ಇದನ್ನೂ ಓದಿ: ಸಂಸದರಾಗಲು ಹೊರಟಿದ್ದ ಸಿದ್ದರಾಮಯ್ಯ ಸಿಎಂ ಆಗಿದ್ದು ಹೇಗೆ?

    2023-24ರ ಆರ್ಥಿಕ ವರ್ಷದ ದೆಹಲಿಯ ಬಜೆಟ್ ಮಂಗಳವಾರ ಮಂಡನೆಯಾಗಬೇಕಿತ್ತು. ಆದರೆ ಕೇಂದ್ರ ಗೃಹ ಸಚಿವಾಲಯ ಮೂಲಸೌಕರ್ಯ ಮತ್ತು ಜಾಹೀರಾತುಗಳಿಗೆ ಹಣ ಹಂಚಿಕೆಗೆ ಆಕ್ಷೇಪ ವ್ಯಕ್ತಪಡಿಸಿತು. ಬಜೆಟ್‌ಗೆ ತಡೆ ನೀಡಿ ದೆಹಲಿ ಸರ್ಕಾರದಿಂದ ಸ್ಪಷ್ಟನೆ ಕೇಳಿತ್ತು. ಈ ಸ್ಪಷ್ಟನೆ ಬಳಿಕ ಬಜೆಟ್ ಮಂಡನೆಗೆ ಅವಕಾಶ ನೀಡಿತ್ತು. ಇದನ್ನೂ ಓದಿ: H3N2 ಇನ್‌ಫ್ಲುಯೆಂಜಾ ಭೀತಿ ಮಧ್ಯೆ ಹೆಚ್ಚುತ್ತಿದೆ ಕೋವಿಡ್ ಸೋಂಕಿತರ ಸಂಖ್ಯೆ

  • E-ಸೈಕಲ್ ಖರೀದಿಗೆ ಬಂಪರ್ ಆಫರ್ ಕೊಟ್ಟ ದೆಹಲಿ ಸರ್ಕಾರ : ಯಾರಿಗೆ ಸಿಗುತ್ತೆ?

    E-ಸೈಕಲ್ ಖರೀದಿಗೆ ಬಂಪರ್ ಆಫರ್ ಕೊಟ್ಟ ದೆಹಲಿ ಸರ್ಕಾರ : ಯಾರಿಗೆ ಸಿಗುತ್ತೆ?

    ನವದೆಹಲಿ: ದೇಶದಲ್ಲೀಗ ಎಲೆಕ್ಟ್ರಿಕ್‌ ವಾಹನಗಳ (ವಿದ್ಯುತ್ ಚಾಲಿತ ವಾಹನ) ಭರಾಟೆಯೇ ಜೋರಾಗಿದೆ. ಮುಂದಿನ ಕೆಲವೇ ದಿನಗಳಲ್ಲಿ ಭಾರತವು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿ ಜಗತ್ತಿನಲ್ಲೇ ನಂಬರ್ 1 ಸ್ಥಾನಕ್ಕೇರಲಿದೆ ಎಂಬುದು ಸರ್ಕಾರದ ಅಭಿಪ್ರಾಯವಾಗಿದೆ. ಇದರ ಮಧ್ಯೆ, ಹೊಸ ತಂತ್ರಜ್ಞಾನಗನ್ನು ಪರಿಚಯಿಸುವ ಎಲೆಕ್ಟ್ರಿಕ್‌ ಸೈಕಲ್‌ಗಳೂ ರಸ್ತೆಗಳಿಗೆ ಇಳಿಯುತ್ತಿವೆ.

    E CYCLES

    ಹೌದು… ಎಲೆಕ್ಟ್ರಿಕ್‌ ಸೈಕಲ್‌ಗಳ ಬಗ್ಗೆ ಆಸಕ್ತಿಯೂ ಹೆಚ್ಚಾಗುತ್ತಿದೆ. ಪ್ರತಿಷ್ಟಿತ ಕಂಪೆನಿಗಳೂ ಗ್ರಾಹಕರ ಅಭಿರುಚಿಗೆ ತಕ್ಕಂತೆ ಸೈಕಲ್‌ಗಳನ್ನು ಸಿದ್ಧಪಡಿಸಿ ಮಾರುಕಟ್ಟೆಗೆ ಬಿಡುತ್ತಿವೆ. ಒಮ್ಮೆ ಚಾರ್ಜ್ ಮಾಡಿದರೆ 100 ಕಿ.ಮೀ. ವರೆಗೂ ಓಡಿಸಬಹುದಾದ ಸೈಕಲ್‌ಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ. ಪರಿಸರ ಸ್ನೇಹಿ ವಾತಾವರಣ ನಿರ್ಮಾಣ ಮಾಡಬೇಕೆಂಬ ಉದ್ದೇಶದಿಂದ ಸರ್ಕಾರಗಳೂ ಇದನ್ನು ಪ್ರೋತ್ಸಾಹಿಸುತ್ತಿವೆ. ಇದನ್ನೂ ಓದಿ: ಸ್ಪೇಸ್‌ ಎಕ್ಸ್‌ ರಾಕೆಟ್‌ ಮೂಲಕ ಕಾಫಿನಾಡು ಯುವಕನ ಶಕುಂತಲಾ ಉಪಗ್ರಹ ಉಡಾವಣೆ

    ಹಾಗೆಯೇ ದೆಹಲಿಯಲ್ಲಿ E-ಸೈಕಲ್ (ಎಲೆಕ್ಟ್ರಿಕ್‌ ಬೈಸಿಕಲ್) ಖರೀದಿಸುವ ಮೊದಲ 10,000 ಜನರಿಗೆ ದೆಹಲಿ ಸರ್ಕಾರ ತಲಾ 5,500 ರೂ. ಸಹಾಯಧನ ನೀಡಲು ಮುಂದಾಗಿದೆ. ಅದರಲ್ಲಿ ಮೊದಲ 1 ಸಾವಿರ ಖರೀದಿದಾರರಿಗೆ 2 ಸಾವಿರ ಹೆಚ್ಚುವರಿ ಸಹಾಯಧನ ನೀಡಲಾಗುವುದು ಎಂದು ದೆಹಲಿ ಸಾರಿಗೆ ಸಚಿವ ಕೈಲಾಶ್ ಗಹ್ಲೋಟ್ ಹೇಳಿದ್ದಾರೆ.

    ವಾಣಿಜ್ಯ ಬಳಕೆಗಾಗಿ ಕಾರ್ಗೋ ಇ-ಸೈಕಲ್ ಹಾಗೂ ಇ-ಕಾರ್ಟ್‌ಗಳ ಖರೀದಿಗೆ ಸರ್ಕಾರವು ಸಹಾಯಧನ ನೀಡುತ್ತದೆ. ಮೊದಲ 5 ಸಾವಿರ ಕಾರ್ಗೋ ಇ-ಸೈಕಲ್‌ಗಳ ಖರೀದಿದಾರರಿಗೆ ತಲಾ 15,000 ಸಾವಿರ ಸಹಾಯಧನ ಇರಲಿದ್ದು, ದೆಹಲಿಯ ನಿವಾಸಿಗಳು ಮಾತ್ರ ಈ ಸಹಾಯಧನ ಯೋಜನೆಗೆ ಅರ್ಹರಾಗಿರುತ್ತಾರೆ ಎಂದು ಗಹ್ಲೋಟ್ ತಿಳಿಸಿದ್ದಾರೆ. ಇದನ್ನೂ ಓದಿ: ವಿಎಲ್‍ಸಿ ಮೀಡಿಯಾ ಪ್ಲೇಯರ್ ಬಳಸಿ ಚೀನಾ ಸೈಬರ್ ದಾಳಿ  

    ಪ್ರಸ್ತುತ ನಗರದ ರಸ್ತೆಗಳಲ್ಲಿ 45,900 ಎಲೆಕ್ಟ್ರಿಕ್‌ ವಾಹನಗಳು ಸಂಚರಿಸುತ್ತಿದ್ದು, ಈ ಪೈಕಿ ಶೇ.36 ರಷ್ಟು ದ್ವಿಚಕ್ರ ವಾಹನಗಳಿವೆ. ಈ ನಡುವೆ ದೆಹಲಿಯಲ್ಲಿ ಒಟ್ಟು ನೋಂದಾಯಿತ ವಾಹನಗಳಲ್ಲಿ ಎಲೆಕ್ಟ್ರಿಕ್‌ ವಾಹನಗಳ ಪ್ರಮಾಣವು ಶೇ.12ರ ಗಡಿಯನ್ನು ದಾಟಿದೆ ಎಂದು ಮಾಹಿತಿ ನೀಡಿದ್ದಾರೆ.