Tag: Kaiga Nuclear Plant

  • Karwar| ಕೈಗಾ ನ್ಯೂಕ್ಲಿಯರ್ ಪ್ಲಾಂಟ್‌ನಲ್ಲಿ ಗುಂಡು ಹಾರಿಸಿಕೊಂಡು ರಕ್ಷಣಾ ಸಿಬ್ಬಂದಿ ಆತ್ಮಹತ್ಯೆ

    Karwar| ಕೈಗಾ ನ್ಯೂಕ್ಲಿಯರ್ ಪ್ಲಾಂಟ್‌ನಲ್ಲಿ ಗುಂಡು ಹಾರಿಸಿಕೊಂಡು ರಕ್ಷಣಾ ಸಿಬ್ಬಂದಿ ಆತ್ಮಹತ್ಯೆ

    ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯ ಕಾರವಾರ (Karwar) ತಾಲೂಕಿನ ಕೈಗಾ ನ್ಯೂಕ್ಲಿಯರ್ ಪ್ಲಾಂಟ್‌ನಲ್ಲಿ (Kaiga Nuclear Plant) ಸಿಐಎಸ್‌ಎಫ್ ರಕ್ಷಣಾ ಸಿಬ್ಬಂದಿ ಪಿಸ್ತೂಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಬಿಹಾರದ ಅರವಿಂದ್ ಆತ್ಮಹತ್ಯೆ ಮಾಡಿಕೊಂಡ ಸಿಐಎಸ್‌ಎಫ್ (CISF) ಸಿಬ್ಬಂದಿ. ಪ್ರಾಥಮಿಕ ಮಾಹಿತಿಯಂತೆ ಖಾಸಗಿ ಕಾರಣದಿಂದಲೋ ಅಥವಾ ಅಧಿಕಾರಿಗಳ ಒತ್ತಡದ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಇದನ್ನೂ ಓದಿ: ಉತ್ತರಾಖಂಡ್ ಹೋಟೆಲ್‌ನಲ್ಲಿ ಕತ್ತು ಸೀಳಿ ಜಾದವ್‌ಪುರ ವಿವಿ ಪ್ರೊಫೆಸರ್ ಹತ್ಯೆ

    ಘಟನೆ ಸಂಬಂಧ ಮಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ. ಇದನ್ನೂ ಓದಿ: ಇಸ್ರೇಲ್‌ ಮೇಲೆ 150 ರಾಕೆಟ್‌ಗಳ ಸುರಿಮಳೆ – ಹಿಜ್ಬುಲ್ಲಾ ಭೀಕರ ದಾಳಿಗೆ ಹಲವೆಡೆ ಹಾನಿ!

  • ಕೈಗಾ ಯೋಜನೆ ವಿಸ್ತರಣೆಗೆ ಪೇಜಾವರ ಶ್ರೀಗಳ ವಿರೋಧ

    ಕೈಗಾ ಯೋಜನೆ ವಿಸ್ತರಣೆಗೆ ಪೇಜಾವರ ಶ್ರೀಗಳ ವಿರೋಧ

    ಕಾರವಾರ: ಕೈಗಾ ಅಣುವಿದ್ಯುತ್ ಸ್ಥಾವರ ಯೋಜನೆ ವಿಸ್ತರಣೆಯನ್ನು ಪೇಜಾವರ ಶ್ರೀಗಳು ವಿರೋಧಿಸಿದ್ದು, ಯೋಜನೆ ವಿಸ್ತರಣೆಯಾಗದಂತೆ ಎಲ್ಲರೂ ಕೈ ಜೋಡಿಸಬೇಕು ಎಂದು ಕರೆಕೊಟ್ಟಿದ್ದಾರೆ.

    ಉತ್ತರಕನ್ನಡ ಜಿಲ್ಲೆಯ ಕಾರವಾರದ ಮಲ್ಲಾಪುರದಲ್ಲಿ ನಡೆದ ಜನಜಾಗೃತಿ ಸಮಾವೇಶದಲ್ಲಿ ಶ್ರೀಗಳು ಈ ಹೇಳಿಕೆ ಕೊಟ್ಟಿದ್ದಾರೆ. ದೇಶದ ನೆಲ, ಜಲ, ವಾಯು, ಆಕಾಶ ಪ್ರಕೃತಿ ಸಂಪತ್ತನ್ನ ನಾವು ಉಳಿಸಬೇಕು. ಪ್ರಕೃತಿ ಸಂಪತ್ತು ವ್ಯಯವಾಗಬಾರದು, ನಷ್ಟವಾಗಬಾರದು. ಕೃಷ್ಣ ಎಲ್ಲವನ್ನ ರಕ್ಷಣೆ ಮಾಡಲಿಕ್ಕೆ ಹಿಂದೆ ಮಾರ್ಗದರ್ಶನ ನೀಡಿದ್ದನು. ಆದರೆ ಕೈಗಾ ಅಣುವಿದ್ಯುತ್ ಸ್ಥಾವರದಿಂದ ಪರಿಸರಕ್ಕೆ ಹಾನಿಯಾಗುತ್ತಿದೆ. ಹೀಗಾಗಿ ಈ ಯೋಜನೆಯ ವಿಸ್ತರಣೆ ಆಗಬಾರದು ಎಂದು ಹೇಳಿದರು. ಇದನ್ನೂ ಓದಿ:ವಿರೋಧ ನಡುವೆಯೇ ಹೊಸ ಕೈಗಾ ಅಣುಸ್ಥಾವರ ನಿರ್ಮಾಣಕ್ಕೆ ಚಾಲನೆ!

    ಕೈಗಾ ಅಣುವಿದ್ಯುತ್ ಸ್ಥಾವರದ ಆರಂಭದಲ್ಲಿಯೇ ನಾವು ವಿರೋಧ ಮಾಡಿದ್ದೇವು. ಕೈಗಾದ ಪರಿಣಾಮಗಳನ್ನು ನಾವು ನೋಡುತ್ತಿದ್ದೇವೆ. ಅದರ ಸುತ್ತಮುತ್ತಲ ಜನರ ಮೇಲೆ ಕೈಗಾದ ರೆಡಿಯೇಷನ್‍ಗಳು ಎಷ್ಟರ ಮಟ್ಟಿಗೆ ದುಷ್ಪರಿಣಾಮಗಳನ್ನು ಬೀರಿದೆ ಎನ್ನುವುದನ್ನು ನಾವು ನೋಡಿದ್ದೇವೆ. ಹೀಗಾಗಿ ಕೈಗಾ ಯೋಜನೆ ವಿಸ್ತರಣೆಯಾಗದಂತೆ ಎಲ್ಲರೂ ಕೈ ಜೋಡಿಸಬೇಕು. ಎಲ್ಲಾ ಸಂಘ ಸಂಸ್ಥೆ ಜೊತೆ ಸೇರಿ ಈ ಸಂಬಂಧ ಪ್ರಧಾನಮಂತ್ರಿಯನ್ನು ಭೇಟಿ ಮಾಡಿ, ಮಾತನಾಡುವ ಬಗ್ಗೆ ತೀರ್ಮಾನಿಸುತ್ತೇವೆ ಎಂದು ತಿಳಿಸಿದರು.

  • ವಿರೋಧ ನಡುವೆಯೇ ಹೊಸ ಕೈಗಾ ಅಣುಸ್ಥಾವರ ನಿರ್ಮಾಣಕ್ಕೆ ಚಾಲನೆ!

    ವಿರೋಧ ನಡುವೆಯೇ ಹೊಸ ಕೈಗಾ ಅಣುಸ್ಥಾವರ ನಿರ್ಮಾಣಕ್ಕೆ ಚಾಲನೆ!

    – ಕೈಗಾ 5, 6ನೇ ಘಟಕಕ್ಕೆ ಪರಿಸರ ಇಲಾಖೆ ಅಸ್ತು

    ಕಾರವಾರ: ಹಲವು ವಿರೋಧದ ನಡುವೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕೈಗಾದಲ್ಲಿ 5, 6ನೇ ಘಟಕ ನಿರ್ಮಾಣಕ್ಕೆ ಪರಿಸರ ಮಂತ್ರಾಲಯ ಅನುಮಾತಿ ನೀಡಿದೆ. ಕೆಲವು ತಿಂಗಳ ಹಿಂದೆ ಪರಿಸರವಾದಿಗಳು ಹೊಸ ಘಟಕ ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ವಿರೋಧದ ನಡುವೆಯೂ ಪರಿಸರ ಮಂತ್ರಾಲಯದಿಂದ ಪರವಾನಿಗೆ ದೊರೆತಿರುವುದರಿಂದ 5, 6ನೇ ಘಟಕ ನಿರ್ಮಾಣಕ್ಕೆ ಇದ್ದ ದೊಡ್ಡ ಅಡೆ ತಡೆ ನಿವಾರಣೆಯಾಗಿದೆ.

    ಹೇಗಿರಲಿದೆ ಹೊಸ ಘಟಕ!
    ಕೈಗಾ 5 ಮತ್ತು 6ನೇ ಘಟಕವನ್ನು 21 ಸಾವಿರ ಕೋಟಿಯಲ್ಲಿ ನಿರ್ಮಾಣ ಮಾಡಲು ಈಗಾಗಲೇ ವಿದ್ಯುತ್ ನಿಗಮ ತೀರ್ಮಾನಿಸಿದೆ. 2ನೇ ರಿಯಾಕ್ಟರ್ ಮೂಲಕ 700ಮೆ. ವ್ಯಾಟ್ ವಿದ್ಯುತ್ ಉತ್ಪಾದನೆಯ ಉದ್ದೇಶವನ್ನು ಹೊಂದಿದ್ದು, 2026 ರ ವೇಳೆಗೆ ಉದ್ದೇಶಿತ ಯೋಜನೆ ಮುಕ್ತಾಯವಾಗಲಿದೆ.

    ಹೆಚ್ಚುವರಿ ಘಟಕ ನಿರ್ಮಾಣ ಮಾಡುವ ಕಾರಣ 789 ಖಾಯಂ ನೌಕರ ಅಗತ್ಯವಿದ್ದು, ಘಟಕ ನಿರ್ಮಾಣ ಮಾಡಲು 54.09 ಹೆಕ್ಟೇರ್ ಅರಣ್ಯ ಭೂಮಿ ಬಳಕೆ ಮಾಡಲಾಗುತ್ತಿದೆ. ಈ ಪ್ರದೇಶದಲ್ಲಿ ಇರುವ 8,700 ಮರಗಳನ್ನು ತೆರವುಗೊಳಿಸಲಾಗುತ್ತಿದೆ. ಇದಕ್ಕೆ ಪರ್ಯಾಯವಾಗಿ ಚಾಮರಾಜನಗರ, ಮಂಡ್ಯ ಜಿಲ್ಲೆಯಲ್ಲಿ 732 ಹೆಕ್ಟೇರ್ ಪರ್ಯಾಯ ಅರಣ್ಯ ಬೆಳಸಲು ಸೂಚನೆ ನೀಡಲಾಗಿದೆ.

    ಲಾಭವೇನು?
    ಪರಿಸರ ಹಾನಿ ಇಲ್ಲದೇ ವಿದ್ಯುತ್ ಉತ್ಪಾದನೆ ಮಾಡುವ ಭರವಸೆಯನ್ನು ನೀಡಿರುವ ಆಡಳಿತ ಮಂಡಳಿ ಸ್ಥಳೀಯರಿಗೆ ಉದ್ಯೋಗ, ಪ್ರದೇಶಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಹೊಸ ನಿಯಮದಂತೆ 700ಮೆ.ವ್ಯಾ. ಕರ್ನಾಟಕಕ್ಕೆ ನೀಡುವ ಭರವಸೆ ನೀಡಿದೆ. ಉದ್ದೇಶಿತ 5, 6ನೇ ಘಟಕದಲ್ಲಿ 789 ಜನರಿಗೆ ಖಾಯಂ ಉದ್ಯೋಗ ಹಾಗೂ 4 ಸಾವಿರ ಜನರಿಗೆ ಗುತ್ತಿಗೆ ಆಧಾರದಲ್ಲಿ ಉದ್ಯೋಗ ಲಭಿಸಲಿದ್ದು, ಪರೋಕ್ಷವಾಗಿ ಸ್ಥಳೀಯ ಜನರಿಗೆ ಉದ್ಯೋಗ ಸೃಷ್ಟಿಯಾಗಲಿದೆ.

    ಪ್ರಸ್ತಾವನೆಯಲ್ಲಿ ಏನಿತ್ತು?
    ಕಳೆದ 24 ರಂದು ದೆಹಲಿಯಲ್ಲಿ ಪರಿಸರ ಪರಿಣಾಮಗಳ ಅಧ್ಯಾಯನ ಸಮಿತಿ ಸಭೆಯಲ್ಲಿ ಘಟಕ ನಿರ್ಮಾಣಗಳ ಪ್ರಸ್ತಾಪನೆಯನ್ನು ಪರಿಶೀಲಿಸಿ ಚರ್ಚೆ ನಡೆಸಲಾಗಿತ್ತು. 2018ರ ಸೆ.9 ರಂದು ವನ್ಯಜೀವಿ ವನ್ಯಜೀವಿ ವಿಭಾಗದಿಂದ ಅನುಮತಿ ದೊರೆತಿದೆ. ಸ್ಥಾವರದ ಎರಡರಿಂದ ಮೂರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಜನ ವಸತಿ ಇದ್ದರೂ ಇಲ್ಲಿ ವಿಕೀರ್ಣದ ಮಟ್ಟ ಉಳಿದೆಡೆಗಿಂತ ಕಡಿಮೆ ಮಟ್ಟ ಹಾಗೂ ಉಳಿದೆಡೆ ನೈಸರ್ಗಿಕ ವಿಕೀರ್ಣಕ್ಕಿಂತ ಕಡಿಮೆ ಮಟ್ಟದಲ್ಲಿದೆ ಎಂದು ಯೋಜನಾ ವರದಿಯಲ್ಲಿ ಸಲ್ಲಿಸಲಾಗಿತ್ತು.

    ಘಟಕ ನಿರ್ಮಾಣಕ್ಕೆ ಅಗತ್ಯವಾದ 54.09 ಹೆಕ್ಟೇರ್ ಭೂಮಿ ಈಗಾಗಲೇ ನಿಗಮದ ಸ್ವಾದೀನದಲ್ಲಿದೆ. ಹೆಚ್ಚುವರಿ ಭೂಮಿ ಸ್ವಾದೀನ ಪಡಿಸಿಕೊಳ್ಳುವ ಅಗತ್ಯವಿಲ್ಲ. ಈ ಘಟಕದ ಉದ್ಯೋಗಿಗಳಿಗಾಗಿ ಮಲ್ಲಾಪುರ, ಮಿರ್ಜೆಯಲ್ಲಿ ಟೌನ್ ಶಿಪ್ ನಿರ್ಮಾಣ ಮಾಡಲಾಗುತ್ತಿದೆ. ನಿಗಮದ ಬಳಿ 95.09 ಹೆಕ್ಟೇರ್ ಭೂಮಿ ನಿಗಮದ ಬಳಿ ಇದೆ. 51.38 ಹೆಕ್ಟೇರ್ ಭೂಮಿಯಲ್ಲಿ ಈಗಾಗಲೇ ನಾಲ್ಕು ಘಟಕಕ್ಕೆ ಬಳಕೆಯಾಗಿದೆ, ಉಳಿದ 44.53 ಹೆಕ್ಟೇರ್ ಭೂಮಿಯಲ್ಲಿ ಟೌನ್ ಶಿಪ್ ನಿರ್ಮಾಣ ಮಾಡುವುದಾಗಿ ನಿಗಮ ಹೇಳಿದೆ.

    ಶಾಸಕರ ಬೆಂಬಲ!: ಕೈಗಾ ಅಣು ಸ್ಥಾವರದ ಪರದಿಯು ಕಾರವಾರ, ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ ಸೇರುತ್ತದೆ. ಹೀಗಾಗಿ ಇಲ್ಲಿನ ಶಾಸಕರ ಅಭಿಪ್ರಾಯ ಕೂಡ ಮುಖ್ಯವಾಗಿದ್ದು, ಯಲ್ಲಾಪುರ ಶಾಸಕರಾದ ಶಿವರಾಮ್ ಹೆಬ್ಬಾರ್, ಕಾರವಾರದ ಶಾಸಕರಾದ ರೂಪಾಲಿನಾಯ್ಕ ಅವರು ಯೋಜನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ನೀಡಬೇಕು ಎಂಬ ಪ್ರಸ್ತಾಪವನ್ನು ನಿಗಮದ ಮುಂದಿಟ್ಟಿದ್ದಾರೆ.

    ಸ್ಥಳೀಯರ ವಿರೋಧ!: ಕೈಗಾದ 5, 6ನೇ ಘಟಕದ ಪ್ರಸ್ತಾಪ ಆಗುತ್ತಿದ್ದಂತೆ ಕಳೆದ ವರ್ಷ ಡಿಸೆಂಬರ್ ನಲ್ಲಿ ಸ್ಥಳೀಯರು ಹಾಗೂ ಪರಿಸರವಾದಿಗಳು ಅಹವಾಲು ಸಭೆಯಲ್ಲಿ ವಿರೋಧ ವ್ಯಕ್ತಪಡಿಸಿದ್ದರು. ವಿಕೀರ್ಣದಿಂದ ಜನರಿಗೆ ಕ್ಯಾನ್ಸರ್ ಹೆಚ್ಚಾಗುವ ಕುರಿತು ವರದಿಯ ಪ್ರಸ್ತಾಪ ಸಹ ಮಾಡಲಾಗಿತ್ತು.