Tag: Kagodu thimmappa

  • ಮಗಳು ಬಿಜೆಪಿ ಸೇರಿದ್ದು ಎದೆಗೆ ಚೂರಿ ಇರಿದಂತಾಗಿದೆ – ಕಾಗೋಡು ತಿಮ್ಮಪ್ಪ

    ಮಗಳು ಬಿಜೆಪಿ ಸೇರಿದ್ದು ಎದೆಗೆ ಚೂರಿ ಇರಿದಂತಾಗಿದೆ – ಕಾಗೋಡು ತಿಮ್ಮಪ್ಪ

    ಶಿವಮೊಗ್ಗ: ಮಗಳು ಬಿಜೆಪಿ (BJP) ಸೇರಿದ್ದು ನನ್ನ ಎದೆಗೆ ಚೂರಿ ಇರಿದಂತಾಗಿದೆ. ಆಕೆ ಈ ರೀತಿ ಮಾಡುತ್ತಾಳೆ ಎಂದು ನಾನು ಕನಸಿನಲ್ಲಿಯೂ ಆಲೋಚನೆ ಮಾಡಿರಲಿಲ್ಲ. ಮಗಳು ಈ ರೀತಿ ಇದ್ದಾಳೆ ಎನ್ನುವುದು ನನ್ನ ದೌರ್ಭಾಗ್ಯ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ (Kagodu Thimmappa) ಹೇಳಿದ್ದಾರೆ.

    ಸಾಗರದಲ್ಲಿ (Sagara) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಪುತ್ರಿ ಡಾ.ರಾಜನಂದಿನಿ (Dr.Rajanandini) ಬಿಜೆಪಿ ಸೇರ್ಪಡೆ ವಿಚಾರವಾಗಿ ಬೇಸರ ವ್ಯಕ್ತಪಡಿಸಿದರು. ಈ ಸುದ್ದಿ ನನಗೆ ಈಗಷ್ಟೇ ಗೊತ್ತಾಗಿದೆ. ಈ ರೀತಿ ಮಾಡುತ್ತಾರೆ ಎಂದು ನಾನು ಕನಸಿನಲ್ಲಿಯೂ ಆಲೋಚಿಸಿರಲಿಲ್ಲ. ನಾನು ರಾಜಕಾರಣದಲ್ಲಿ (Politics) ಸ್ಥಿರತೆ ಮತ್ತು ಬದ್ಧತೆ ಉಳಿಸಿಕೊಂಡು ಬಂದವನು. ನಾವು ಅದನ್ನೇ ಅನುಸರಿಸಿಕೊಂಡು ಕಾರ್ಯರೂಪಕ್ಕೆ ತರುತ್ತಿದ್ದೇವೆ. ಆ ಸಂತೋಷ ಮತ್ತು ನೆಮ್ಮದಿ ನಮಗಿದೆ ಎಂದರು. ಇದನ್ನೂ ಓದಿ: ವರುಣಾದಲ್ಲಿ ಬಿಗ್‌ ಫೈಟ್‌: ಸಿದ್ದು v/s ಸೋಮಣ್ಣ – ಯಾರ ಕೈ ಹಿಡೀತಾರೆ ವರುಣಾ ಮತದಾರ? 

    ಏನೇ ಆದರೂ ನಾನು ಕಾಂಗ್ರೆಸ್ (Congress) ಬಿಟ್ಟು ಹೋಗುವುದಿಲ್ಲ. ಕಾಂಗ್ರೆಸ್ ಪರವಾಗಿ ನಿಲ್ಲುತ್ತೇನೆ ಹಾಗೂ ಅದರ ಪರವಾಗಿ ಕೆಲಸ ಮಾಡುತ್ತೇನೆ. ಮಗಳಿಗೆ ಯಾರೋ ಹಿಂದಿನಿಂದ ಈ ರೀತಿ ಮಾಡಿಸಿದ್ದಾರೆ. ಅದು ಹಾಲಪ್ಪ ಇರಬಹುದು. ಅವಳನ್ನು ಸಂಪರ್ಕಿಸಿ ಮನವೊಲಿಸುವ ಪ್ರಯತ್ನ ಮಾಡುತ್ತೇನೆ. ಅವಳು ತನ್ನ ಬಳಿ ಯಾವುದೇ ಬೇಸರ ಹೇಳಿಕೊಂಡಿಲ್ಲ. ನಾನು ಅವಳನ್ನು ಖರ್ಗೆ (Mallikarjun Kharge) ಹತ್ತಿರ ಕರೆದುಕೊಂಡು ಹೋಗಿದ್ದೆ. ಅವಕಾಶ ಇದ್ದರೆ ನೋಡೋಣ ಎಂದಿದ್ದರು. ಕಾಂಗ್ರೆಸ್‌ನಲ್ಲಿಯೇ ಇದ್ದು ರಾಜಕೀಯವಾಗಿ ಬೆಳೆಯಬಹುದಾಗಿತ್ತು. ನನ್ನ ಹತ್ತಿರ ಯಾವುದನ್ನೂ ಹೇಳಿಕೊಂಡಿಲ್ಲ ಎಂದು ಹೇಳಿದರು. ಇದನ್ನೂ ಓದಿ: ನನಗೆ ಟಿಕೆಟ್ ಮಿಸ್ ಆಗಿದ್ರಿಂದ ಇಲ್ಲಿವರೆಗೆ ಬೆಂಬಲಿಗರು ಊಟನೂ ಮಾಡಿಲ್ಲ: ದೊಡ್ಡಪ್ಪಗೌಡ ನರಿಬೋಳ್

  • ರಾಜ್ಯ ಕಾಂಗ್ರೆಸ್‌ನಲ್ಲಿ ಎರಡೆರಡು 90+ ಟೆನ್ಶನ್ ಬಲು ಜೋರು

    ರಾಜ್ಯ ಕಾಂಗ್ರೆಸ್‌ನಲ್ಲಿ ಎರಡೆರಡು 90+ ಟೆನ್ಶನ್ ಬಲು ಜೋರು

    ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ (Congress) 90 ವರ್ಷ ತುಂಬಿದ ಇಬ್ಬರು ಹಿರಿಯ ನಾಯಕರು ಟಿಕೆಟ್‌ಗಾಗಿ ಪಟ್ಟು ಹಿಡಿದು ಕುಳಿತಿದ್ದು, ಕೈ ಪಾಳಯಕ್ಕೆ ತಲೆ ನೋವಾಗಿದೆ ಎನ್ನಲಾಗಿದೆ. ಎಷ್ಟೇ ಪ್ರಯತ್ನಿಸಿದರೂ ಮನವೊಲಿಕೆ ಆಗುತ್ತಿಲ್ಲ ಏನು ಮಾಡುವುದು ಎಂಬ ಸಂಕಷ್ಟ ಕೈ ನಾಯಕರಿಗೆ ಎದುರಾಗಿದೆ ಎನ್ನಲಾಗುತ್ತಿದೆ.

    90 ವರ್ಷ ಮೀರಿದ ಇಬ್ಬರು ನಾಯಕರು ಈಗಲೂ ತಮಗೆ ಟಿಕೆಟ್ ಬೇಕು ಎಂದು ಪಟ್ಟು ಹಿಡಿದು ಕುಳಿತಿದ್ದಾರೆ ಎನ್ನಲಾಗಿದೆ. 90 ವರ್ಷ ದಾಟಿರುವ ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ (Kagodu Thimmappa) ಹಾಗೂ ಶಾಮನೂರು ಶಿವಶಂಕರಪ್ಪ (Shamanur Shivashankarappa). ಒಬ್ಬರದು ನನಗೆ ಇಲ್ಲಾ ನನ್ನ ಮಗಳಿಗೆ ಟಿಕೆಟ್ ಬೇಕು ಎಂಬ ಡಿಮ್ಯಾಂಡ್. ಮಗಳಿಗೆ ಕೊಡದಿದ್ದರೆ ನನಗೆ ಹೊರತು ಬೇರೆಯವರಿಗೆ ಟಿಕೆಟ್ ಕೊಡಬಾರದು. ಇದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಪಟ್ಟಾಗಿದ್ದು, ಹಿರಿಯ ನಾಯಕನ ಪಟ್ಟಿಗೆ ಕೈ ನಾಯಕರೇ ತಲೆ ಕೆಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಸಿಲಿಂಡರ್ ಬ್ಲಾಸ್ಟ್- ಗುಡಿಸಲು ಬೆಂಕಿಗಾಹುತಿ, ಮಗಳ ಚಿಕಿತ್ಸೆಗೆ ತೆಗೆದಿಟ್ಟ ಹಣವೂ ಭಸ್ಮ

    ಇನ್ನೊಂದು ಕಡೆ ನನ್ನ ಕುಟುಂಬದಲ್ಲಿ ಬೇರೆಯವರಿಗೆ ಕೊಟ್ಟರು ನಾನು ಒಪ್ಪಲ್ಲ. ಟಿಕೆಟ್ ನನಗೆ ಕೊಡಬೇಕು ಎಂಬ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಹಿರಿಯರಾದ ಶಾಮನೂರು ಶಿವಶಂಕರಪ್ಪ ಈ ಬಾರಿಯೂ ತಮಗೆ ಟಿಕೆಟ್ ಬೇಕು ಎಂದು ಪಟ್ಟು ಹಿಡಿದು ಕುಳಿತಿದ್ದಾರೆ ಎನ್ನಲಾಗಿದೆ. ಇಬ್ಬರು 90+ ನಾಯಕರ ಮನವೊಲಿಸುವಲ್ಲಿ ಕೈ ನಾಯಕರು ವಿಫಲರಾಗಿದ್ದಾರೆ ಎನ್ನಲಾಗಿದೆ. ಇಬ್ಬರೂ 90+ ನಾಯಕರ ಟಿಕೆಟ್ ಡಿಮ್ಯಾಂಡ್ ಅವರನ್ನು ಮನವೊಲಿಕೆ ಸಾಧ್ಯವಾಗದಿರುವುದು ಕಾಂಗ್ರೆಸ್ ಪಾಲಿಗೆ ದೊಡ್ಡ ತಲೆ ಬಿಸಿಯಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಮೋದಿ ಆಗಮನ ಹಿನ್ನೆಲೆ ವೈಮನಸ್ಸು ಮರೆತು ಒಂದಾದ ಬಿಜೆಪಿ ನಾಯಕರು

  • ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಪುತ್ರಿಗೆ ಕೊಲೆ ಬೆದರಿಕೆ

    ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಪುತ್ರಿಗೆ ಕೊಲೆ ಬೆದರಿಕೆ

    ಶಿವಮೊಗ್ಗ: ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಪುತ್ರಿ ಡಾ. ರಾಜನಂದಿನಿ ಅವರಿಗೆ ವ್ಯಕ್ತಿಯೋರ್ವ ಕೊಲೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ.

    ಕಾಗೋಡು ತಿಮ್ಮಪ್ಪ ಫೌಂಡೇಷನ್ ವತಿಯಿಂದ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಹಲವೆಡೆಗಳಲ್ಲಿ ಆರೋಗ್ಯ ಶಿಬಿರ ನಡೆಸಲಾಗುತ್ತಿದೆ. ಈ ಆರೋಗ್ಯ ಶಿಬಿರವನ್ನು ಮಂಗಳವಾರ ಸಾಗರ ತಾಲೂಕಿನ ತ್ಯಾಗರ್ತಿ ಗ್ರಾಮದಲ್ಲಿ ಏರ್ಪಡಿಸಲಾಗಿತ್ತು. ಇದನ್ನೂ ಓದಿ: ಪಿಎಸ್‍ಐ ಅಕ್ರಮದಲ್ಲಿ ಅಶ್ವತ್ಥ ನಾರಾಯಣ್ ಶಾಮೀಲು: ಸಿದ್ದು ಆರೋಪ

    ಆರೋಗ್ಯ ಶಿಬಿರ ಮುಗಿಸಿ ಸಾಗರಕ್ಕೆ ವಾಪಸ್ ಆಗುವಾಗ ರಾಜನಂದಿನಿ ಅವರ ಕಾರನ್ನು ಮಂಜು ಎಂಬಾತ ರಸ್ತೆ ಮಧ್ಯೆದಲ್ಲಿ ಅಡ್ಡ ಹಾಕಿದ್ದಾನೆ. ಈ ವೇಳೆ ಕಾರಿನ ಚಾಲಕ ಪ್ರಕಾಶ್ ಕಾರನ್ನು ನಿಲ್ಲಿಸಿದ್ದಾನೆ. ಕಾರಿನಲ್ಲಿ ಪರಾರಿಯಾರಿದ್ದಾರೆ. ರಾಜನಂದಿನಿ ಅವರು ಇಲ್ವಾ, ಇತ್ತೀಚೆಗೆ ಅವರದ್ದು ಬಹಳ ಆಗಿದೆ. ಹೀಗೆ ಮುಂದುವರಿದರೆ ಅವರನ್ನು ಮುಗಿಸುತ್ತೇನೆ ಎಂದು ಬೆದರಿಕೆಯೊಡ್ಡಿದ್ದಾನೆ. ಇದನ್ನೂ ಓದಿ: ‘ಆರ್‌ಎಸ್‌ಎಸ್’ ದೇಶದ ಶ್ರೀಮಂತ ಎನ್‍ಜಿಓ, ಅದಕ್ಕೆ ಹಣ ಎಲ್ಲಿಂದ ಬರುತ್ತೆ?: ಬಿ.ಕೆ ಹರಿಪ್ರಸಾದ್

    ಆದರೆ ಈ ವೇಳೆ ಕಾರಿನಲ್ಲಿ ರಾಜನಂದಿನಿ ಇರಲಿಲ್ಲ. ಅವರು ತಮ್ಮ ಕಾರು ಬಿಟ್ಟು ಬೇರೊಂದು ಕಾರಿನಲ್ಲಿ ಪ್ರಯಾಣ ಬೆಳೆಸಿದ್ದರು. ಆದರೆ ಆರೋಪಿ ಮಂಜು, ಚಾಲಕ ಪ್ರಕಾಶ್ ನ ಸಮ್ಮುಖದಲ್ಲಿ ಬೆದರಿಕೆ ಹಾಕಿದ್ದಾನೆ. ನಿಮ್ಮ ಮೇಡಂಗೆ ಈ ಬಗ್ಗೆ ಹೋಗಿ ಹೇಳು ಎಂದಿದ್ದಾನೆ. ಘಟನೆ ಸಂಬಂಧ ಚಾಲಕ ಪ್ರಕಾಶ್ ಆರು ಜನರ ವಿರುದ್ಧ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಕೊರೊನಾ ತಡೆಗಟ್ಟಲು ಸರ್ಕಾರ ಕೈಗೊಂಡ ಕ್ರಮ ತೃಪ್ತಿದಾಯಕವಾಗಿಲ್ಲ- ಕಾಗೋಡು ತಿಮ್ಮಪ್ಪ

    ಕೊರೊನಾ ತಡೆಗಟ್ಟಲು ಸರ್ಕಾರ ಕೈಗೊಂಡ ಕ್ರಮ ತೃಪ್ತಿದಾಯಕವಾಗಿಲ್ಲ- ಕಾಗೋಡು ತಿಮ್ಮಪ್ಪ

    – ಮನೆ ಮನೆಗೆ ತೆರಳಿ ಲಸಿಕೆ ಹಾಕುವಂತೆ ಆಗ್ರಹ

    ಶಿವಮೊಗ್ಗ: ಕೊರೊನಾ ತಡೆಗಟ್ಟಲು ಸರ್ಕಾರ ಕೈಗೊಂಡ ಕ್ರಮಗಳು ತೃಪ್ತಿದಾಯಕವಾಗಿಲ್ಲ. ಸರ್ಕಾರ ಜನರ ಕಷ್ಟಗಳಿಗೆ ಸರಿಯಾಗಿ ಸ್ಪಂದಿಸಿಲ್ಲ. ರಾಜ್ಯವನ್ನು ಕೊರೊನಾ ಮುಕ್ತವಾಗಿಸುವ ನಿಟ್ಟಿನಲ್ಲಿ ಮನೆ ಮನೆಗೆ ತೆರಳಿ ಲಸಿಕೆ ಹಾಕುವ ಕೆಲಸ ಸರ್ಕಾರದಿಂದ ಆಗಬೇಕು ಎಂದು ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಆಗ್ರಹಿಸಿದ್ದಾರೆ.

    ಜಿಲ್ಲೆಯ ಸಾಗರ ತಾಲೂಕಿನ ತ್ಯಾಗರ್ತಿಯಲ್ಲಿ ಬಡವರಿಗೆ ಅಹಾರದ ಕಿಟ್ ವಿತರಿಸಿ ಮಾತನಾಡಿದ ಕಾಗೋಡು ತಿಮ್ಮಪ್ಪ ಅವರು, ಸಂಕಷ್ಟದ ಸಮಯದಲ್ಲಿ ಬಡವರಿಗೆ ಸಹಾಯ ಮಾಡುವುದು ಉತ್ತಮ ಕೆಲಸ ಇದನ್ನು ಕಾಂಗ್ರೆಸ್ ಪಕ್ಷದ ಸ್ಥಳೀಯ ಕಾರ್ಯಕರ್ತರು ಮಾಡುತ್ತಿದ್ದಾರೆ. ರಾಜ್ಯ ಸರ್ಕಾರದ ಯೋಜನೆ ಜನರಿಗೆ ತಲುಪುತ್ತಿಲ್ಲ. ಕೊರೊನಾ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಟೀಕೆ ಮಾಡಿದರು. ಇದನ್ನೂ ಓದಿ: ಪ್ರಿಯತಮೆಯ ಕೊಲೆಗೈದು ಸಹೋದರನ ಸಹಾಯದಿಂದ ಹೂತು ಹಾಕಿದ!

    ಕಷ್ಟಕಾಲದಲ್ಲಿ ರಾಜ್ಯದ ಬಡವರಿಗೆ ನ್ಯಾಯ ದೊರಕುತ್ತಿಲ್ಲ. ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಬಡವರ ಕಷ್ಟವನ್ನು ನೋಡಬೇಕು ಇದನ್ನು ಹೊರತು ಪಡಿಸಿ ಪಕ್ಷ, ರಾಜಕೀಯ ಮಾಡಬಾರದು ಎಂದು ಕಿವಿಮಾತು ನೀಡಿದರು. ಈ ವೇಳೆ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾಕುಮಾರಿ, ತಾ.ಪಂ. ಮಾಜಿ ಸದಸ್ಯ ಸೋಮಶೇಖರ್, ಗ್ರಾ.ಪಂ ಸದಸ್ಯ ಗಿರೀಶ್, ಪರಶುರಾಮ, ಮತ್ತಿತರರು ಉಪಸ್ಥಿತರಿದ್ದರು.

  • ನಮ್ಮ ದೇಶದಲ್ಲಿ ಹೋರಾಟ ಇಲ್ಲದೇ ಬದಲಾವಣೆ ಸಾಧ್ಯವಿಲ್ಲ: ಕಾಗೋಡು ತಿಮ್ಮಪ್ಪ

    ನಮ್ಮ ದೇಶದಲ್ಲಿ ಹೋರಾಟ ಇಲ್ಲದೇ ಬದಲಾವಣೆ ಸಾಧ್ಯವಿಲ್ಲ: ಕಾಗೋಡು ತಿಮ್ಮಪ್ಪ

    – ರೈತರು ಹೋರಾಟ ನಿಲ್ಲಿಸಬಾರದು

    ಶಿವಮೊಗ್ಗ : ನಮ್ಮ ದೇಶದಲ್ಲಿ ಏನಾದರೂ ಹೊಸ ಬದಲಾವಣೆ ಆಗಬೇಕು ಅಂದರೆ ಅದು ಹೋರಾಟದಿಂದ ಮಾತ್ರ. ಹೋರಾಟವಿಲ್ಲದೇ ಬದಲಾವಣೆ ಸಾಧ್ಯವಿಲ್ಲ. ಹೀಗಾಗಿ ರೈತರು ಹೋರಾಟವನ್ನು ನಿಲ್ಲಿಸಬಾರದು ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಕರೆ ನೀಡಿದ್ದಾರೆ.

    ದೆಹಲಿಯ ಟ್ರ್ಯಾಕ್ಟ ರ್ ಪೆರೇಡ್ ಬೆಂಬಲಿಸಿ, ಶಿವಮೊಗ್ಗದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾದ ವತಿಯಿಂದ ನಡೆದ ರೈತರ ರಾಜ್ಯೋತ್ಸವ ಪೆರೃಡ್ ನಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲೆ ಹೋರಾಟದ ನೆಲವಾಗಿದೆ. ದೆಹಲಿಯಲ್ಲಿ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಸೇರಿದಂತೆ ಅನೇಕ ರಾಜ್ಯದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ಹೋರಾಟವನ್ನು ಬೆಂಬಲಿಸಿ ನೀವೆಲ್ಲಾ ಒಂದು ವರ್ಷವಾದರೂ ಸಹ ಹೋರಾಟ ನಡೆಸಬೇಕಾಗುತ್ತದೆ ಎಂದರು.

    ಹೊಸ ಹೋರಾಟಕ್ಕೆ ನಾಂದಿ: ಹೋರಾಟವಿಲ್ಲದೆ ನಮ್ಮ ದೇಶದಲ್ಲಿ ಬದಲಾವಣೆ ಮಾಡಲು ಸಾಧ್ಯವಿಲ್ಲ. ನಿಮ್ಮ ಹೋರಾಟ ಈಗ ಪ್ರಾರಂಭವಾಗಿದೆ. ಇದನ್ನು ಮುಂದುವರಿಸಬೇಕಿದೆ. ನಿಮ್ಮ ಹೋರಾಟದಿಂದ ಹೊಸ ಹೋರಾಟಕ್ಕೆ ನಾಂದಿಯಾಗಬೇಕು. ಸಮಾಜದಲ್ಲಿ ಏರುಪೇರು ಹೋಗಲಾಡಿಸಬೇಕು. ಹೋರಾಟದ ಕೀ ಅನ್ನು ಕೈಯಲ್ಲಿ ಹಿಡಿದು ಹೋಗಬೇಕಿದೆ. ಹಿಂದೆ ನಾವು ಉಳುವವನೆ ಭೂ ಒಡೆಯ ಎಂದು ಹೋರಾಟ ಮಾಡಿ ಗೆಲುವು ಕಂಡಿದ್ದೇವೆ. ಮುಂದಿನ ದಿನಗಳಲ್ಲಿ ನಿಮ್ಮ ಹೋರಾಟಕ್ಕೆ ಯಶಸ್ಸು ಲಭ್ಯವಾಗುತ್ತದೆ. ಹೋರಾಟದಿಂದ ಹಿಂದಕ್ಕೆ ಹೋಗಬಾರದು. ನಿಮ್ಮ ಹೋರಾಟದಿಂದ ಕೇವಲ ನಿಮಗೆ ಮಾತ್ರ ಅಲ್ಲ, ಎಲ್ಲರಿಗೂ ಅನುಕೂಲವಾಗುತ್ತದೆ. ಎಂದರು.

    ಈ ವೇಳೆ ಸಂಯುಕ್ತ ಕಿಸಾನ್ ಮೋರ್ಚಾದ ಕೆ.ಟಿ.ಗಂಗಾಧರ್, ಹೋರಾಟಗಾರ ಶ್ರೀಪಾಲ್, ಬಂಡಾಯ ಸಾಹಿತಿ ಸಿದ್ದನಗೌಡ ಪಾಟೀಲ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸುಂದರೇಶ್, ಯೋಗೀಶ್, ನಾಗರಾಜ್, ದಲಿತ ಸಂಘಟನೆಯ ಗುರುಮೂರ್ತಿ ಸೇರಿದಂತೆ ಅನೇಕ ರೈತರು ಭಾಗಿಯಾಗಿದ್ದರು.

  • ವಿಧಾನಸಭೆ ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪಗೆ ಕೊರೊನಾ ಪಾಸಿಟಿವ್

    ವಿಧಾನಸಭೆ ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪಗೆ ಕೊರೊನಾ ಪಾಸಿಟಿವ್

    ಶಿವಮೊಗ್ಗ: ವಿಧಾನಸಭೆ ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಕೊರೊನಾ ಸೋಂಕು ದೃಢವಾಗಿದೆ.

    ಕಾಗೋಡು ತಿಮ್ಮಪ್ಪ ಅವರಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಪಾಸಣೆ ಮಾಡಲಾಗಿತ್ತು. ಸಾಗರದ ಸರ್ಕಾರಿ ಆಸ್ಪತ್ರೆಯಲ್ಲಿ ಕಾಗೋಡು ಅವರು ರ‍್ಯಾಪಿಡ್ ಡೆಸ್ಟ್ ಮಾಡಿಸಿಕೊಂಡಿದ್ದಾರೆ. ರ‍್ಯಾಪಿಡ್ ಟೆಸ್ಟ್ ನಲ್ಲಿ ಕೊರೊನಾ ಸೋಂಕು ದೃಢವಾಗಿದೆ.

    ಕೂಡಲೇ ಅವರನ್ನು ಸಾಗರದಿಂದ ಬೆಂಗಳೂರಿಗೆ ಕರೆದುಕೊಂಡು ಬರಲಾಗಿದೆ. ಸದ್ಯಕ್ಕೆ ಕಾಗೋಡು ತಿಮ್ಮಪ್ಪ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ತಿಮ್ಮಪ್ಪ ಅವರಿಗೆ ಕೊರೊನಾ ದೃಢವಾಗಿರುವ ಬಗ್ಗೆ ತಿಳಿದ ಯು.ಟಿ.ಖಾದರ್ ಟ್ವೀಟ್ ಮಾಡುವ ಮೂಲಕ ಬೇಗ ಗುಣಮುಖರಾಗಿ ಬರುವಂತೆ ಹಾರೈಸಿದ್ದಾರೆ. “ನಮ್ಮ ಪ್ರೀತಿಯ ಹಿರಿಯ ಕಾಂಗ್ರೆಸ್ ನಾಯಕ ಕಾಗೋಡು ತಿಮ್ಮಪ್ಪ ಅವರಿಗೆ ಕೋವಿಡ್ ಪಾಸಿಟಿವ್ ದೃಢವಾಗಿದೆ. ಅವರು ಶೀಘ್ರದಲ್ಲೇ ಚೇತರಿಸಿಕೊಳ್ಳಬೇಕು” ಎಂದು ಖಾದರ್ ಹಾರೈಸಿದ್ದಾರೆ.

  • ಕಾಗೋಡು ತಿಮ್ಮಪ್ಪ ಹಿರಿಯರು, ಪಕ್ಷದ ಆಂತರಿಕ ವಿಚಾರ ಮಾತಾಡಲ್ಲ: ಖಂಡ್ರೆ

    ಕಾಗೋಡು ತಿಮ್ಮಪ್ಪ ಹಿರಿಯರು, ಪಕ್ಷದ ಆಂತರಿಕ ವಿಚಾರ ಮಾತಾಡಲ್ಲ: ಖಂಡ್ರೆ

    ರಾಯಚೂರು: ಕೆಪಿಸಿಸಿ ಅಧ್ಯಕ್ಷರ ಆಯ್ಕೆ ವಿಳಂಬವಾಗಿದೆ. ಎಲ್ಲಾ ಆಯಾಮಗಳ ಬಗ್ಗೆ ಯೋಚಿಸಿ ಅಧ್ಯಕ್ಷರ ಆಯ್ಕೆ ಮಾಡಲಾಗುತ್ತೆ ಅಂತ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದ್ದಾರೆ. ರಾಯಚೂರಿನಲ್ಲಿ ಮಾತನಾಡಿದ ಖಂಡ್ರೆ, ಕಾಗೋಡು ತಿಮ್ಮಪ್ಪ ಪಕ್ಷದ ಹಿರಿಯರು ಅವರ ಅಭಿಪ್ರಾಯ ಪರಿಗಣಿಸಲಾಗುತ್ತದೆ. ಪಕ್ಷದ ಹಿತದೃಷ್ಟಿಯಿಂದ ಪಕ್ಷದ ಆಂತರಿಕ ವಿಚಾರಗಳನ್ನ ನಾನು ಮಾತನಾಡುವುದಿಲ್ಲ ಎಂದರು.

    ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಹರಿಹಾಯ್ದ ಖಂಡ್ರೆ, ಕ್ರೂರ ರೀತಿಯಲ್ಲಿ ರಾಜ್ಯ ಕೇಂದ್ರ ಸರ್ಕಾರ ವರ್ತನೆ ಮಾಡುತ್ತಿವೆ. ಕೋಮುಸೌಹಾರ್ದ ಕದಡುವ ಹೇಳಿಕೆಯನ್ನ ಬಿಜೆಪಿ ನಾಯಕರು ನೀಡುತ್ತಿದ್ದಾರೆ. ಉದ್ಯೋಗ ಸೃಷ್ಟಿ ಮಾಡುವುದಿರಲಿ ಯುವಕರ ಉದ್ಯೋಗಗಳೇ ಹೋಗುತ್ತಿವೆ. ದೇಶ ಆರ್ಥಿಕವಾಗಿ ಕುಸಿಯುತ್ತಾ ಹೋಗುತ್ತಿದೆ. ರೈತರ ಕೃಷಿ ಭಾಗ್ಯ ಯೋಜನೆ ಕೈಬಿಡಲಾಗಿದೆ. ಅಸಂವಿಧಾನಿಕ ಕಾಯಿದೆ ರೂಪಿಸಿ ಜಾತಿ ಜಾತಿ ಮಧ್ಯೆ ಜಗಳ ತರುತ್ತಿದ್ದಾರೆ. ವಿಧಾನಸಭಾ ಅಧಿವೇಶನ ವೇಳೆ ಒಳಗೆ ಹಾಗೂ ಹೊರಗಡೆ ಹೋರಾಟ ಮಾಡುತ್ತೇವೆ. ಇದುವರೆಗೆ ಬಿಡುಗಡೆಯಾಗಿರುವ ಅನುದಾನದ ಬಗ್ಗೆ ಸರ್ಕಾರ ಶ್ವೇತಪತ್ರ ಹೊರಡಿಸಲಿ ಅಂತ ಈಶ್ವರ ಖಂಡ್ರೆ ಸರ್ಕಾರಕ್ಕೆ ಸವಾಲು ಹಾಕಿದರು.

    ರೈತ ವಿರೋಧಿ ಕ್ರಮಗಳನ್ನ ಸರ್ಕಾರ ತೆಗೆದುಕೊಳ್ಳುತ್ತಿದೆ. ನಮ್ಮ ಸರ್ಕಾರ ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡಗಳ ಅನುಕೂಲ ಮಾಡಲಾಗಿತ್ತು. ಬಿಜೆಪಿ ಸರ್ಕಾರದಲ್ಲಿ ಕೃಷಿ ಹೊಂಡಗಳನ್ನ ಸ್ಥಗಿತಗೊಳಿಸಲಾಗಿದೆ. ರೈತರ ಬೇಡಿಕೆಯಿದ್ದರೂ ಸ್ಪ್ರಿಕ್ಲರ್ ಸೆಟ್ ಗಳನ್ನ ರೈತರಿಗೆ ನೀಡುತ್ತಿಲ್ಲ. ಇದರಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರ ದಿವಾಳಿ ಹಂತದಲ್ಲಿವೆ ಅನ್ನೊದು ತಿಳಿಯುತ್ತೆ ಎಂದರು.

    ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಹೊಸ ಕಾಯಿದೆ ಅವಶ್ಯಕತೆಯಿರಲಿಲ್ಲ. ಈಗಾಗಲೇ ಪೌರತ್ವ ಕಾಯಿದೆ ಇದೆ. ಆದ್ರೆ ಈಗ ಧರ್ಮಾಧಾರಿತ ಕಾಯಿದೆ ಜಾರಿಗೆ ತರುವುದು ಸರಿಯಲ್ಲ ಅಂತ ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.

  • ಸಾಗರ ಗಣಪತಿ ಕೆರೆಗೆ ಕಾಯಕಲ್ಪ – ಬೋಟಲ್ಲಿ ಕುಳಿತು ಹೂಳು ದಬ್ಬಿದ ಶಾಸಕ ಹಾಲಪ್ಪ

    ಸಾಗರ ಗಣಪತಿ ಕೆರೆಗೆ ಕಾಯಕಲ್ಪ – ಬೋಟಲ್ಲಿ ಕುಳಿತು ಹೂಳು ದಬ್ಬಿದ ಶಾಸಕ ಹಾಲಪ್ಪ

    ಶಿವಮೊಗ್ಗ: ಮುಂಜಾನೆಯ ಚುಮು ಚುಮು ಚಳಿಯಲ್ಲೇ ಸಾಗರದ ಗಣಪತಿ ಕೆರೆ ಹೂಳು ತೆಗೆಯುವ ಕಾರ್ಯಕ್ಕೆ ಶಾಸಕ ಹರತಾಳು ಹಾಲಪ್ಪ ನೇತೃತ್ವದಲ್ಲಿ ನೂರಾರು ಮಂದಿ ಕಸರತ್ತು ನಡೆಸಿದರು.

    ಇಂದು ಮುಂಜಾನೆಯೇ ಗಣಪತಿ ಕೆರೆಯ ದಂಡೆಯ ಮೇಲೆ ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಸ್ವಯಂ ಸೇವಕರು, ಸಾರ್ವಜನಿಕರು ಆಗಮಿಸಿ ಕೆರೆಯ ಹೂಳು ತೆಗೆಯುವುದು, ತ್ಯಾಜ್ಯ ವಿಲೇವಾರಿ ಮಾಡುವ ಕಾರ್ಯ ನಡೆಸಿದರು. ಈ ವೇಳೆ ಸ್ಥಳೀಯ ಶಾಸಕ ಹರತಾಳು ಹಾಲಪ್ಪ ಸಹ ಬೋಟಿನಲ್ಲಿ ಕುಳಿತು ಹೂಳು ದಬ್ಬುವ ಕಾರ್ಯ ಮಾಡಿದರು.

    ಸುಮಾರು 5 ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ 5 ಬೋಟ್, 1 ಜೆಸಿಬಿ, ಹಾಗೂ ಟ್ರ್ಯಾಕ್ಟರ್‍ಗಳನ್ನು ಬಳಸಲಾಗಿತ್ತು. ಕೆರೆಯಿಂದ ತೆಗೆದ ಹೂಳನ್ನು ಇನ್ನೊಂದು ದಡದಲ್ಲಿ ಸಂಗ್ರಹಿಸಿದ್ದು, ಅದನ್ನು ವಿಲೇವಾರಿ ಮಾಡುವ ಕೆಲಸ ನಡೆಯುತ್ತಿದೆ. ಈ ಗಣಪತಿ ಕೆರೆ ಕಾಯಕಲ್ಪಕ್ಕೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಸಹ ಮೆಚ್ಚುಗೆ ವ್ಯಕ್ತಪಡಿಸಿದರು.

  • ಪ್ರಧಾನಿ ಮೋದಿ ವಿರುದ್ಧ ಕಾಗೋಡು ವಾಗ್ದಾಳಿ

    ಪ್ರಧಾನಿ ಮೋದಿ ವಿರುದ್ಧ ಕಾಗೋಡು ವಾಗ್ದಾಳಿ

    ಶಿವಮೊಗ್ಗ : ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ದೊಡ್ಡ ಅನ್ಯಾಯ ಎಸಗಿದ್ದಾರೆ. ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ನೆರೆ ಹಾನಿ ಉಂಟಾಗಿದ್ದರೂ ಒಂದು ಪೈಸೆ ಕೊಡುವುದಕ್ಕು ಅವರು ಬಾಯಿ ಬಿಡಲಿಲ್ಲ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಪ್ರಧಾನಮಂತ್ರಿಗಳ ವಿರುದ್ಧ ವಾಗ್ದಾಳಿ ನಡೆಸಿದರು.

    ನಗರದಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮೋದಿ ರಾಜ್ಯಕ್ಕೆ ದೊಡ್ಡ ದ್ರೋಹ ಮಾಡಿದ್ದಾರೆ. ಸ್ವತಃ ಮುಖ್ಯಮಂತ್ರಿಗಳೇ ಪರಿಹಾರ ಕೇಳಿದರೂ ಮೋದಿ ಸಾರ್ವಜನಿಕವಾಗಿ ಒಂದೇ ಒಂದು ಉತ್ತರ ನೀಡಲಿಲ್ಲ. ರಾಜ್ಯದ ಬಗ್ಗೆ ಮೋದಿಗೆ ಗೌರವವಿಲ್ಲ, ಮಮತೆ ಇಲ್ಲ, ವಿಶ್ವಾಸವಿಲ್ಲ. ಇಂತಹ ಒಬ್ಬ ಪ್ರಧಾನಿ ಹೊಂದಿರುವುದು ನಮ್ಮ ರಾಷ್ಟ್ರದ ದೌರ್ಭಾಗ್ಯ. ಹೀಗಾಗಿ ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸಲು ಕಾಂಗ್ರೆಸ್ ಹೋರಾಟ ಮಾಡಲಿದೆ ಎಂದು ತಿಳಿಸಿದರು.

    ಮುಖ್ಯಮಂತ್ರಿಗಳಿಗೆ ನಾಚಿಕೆ ಆಗಬೇಕು. ಸಾರ್ವಜನಿಕರ ಎದುರಿಗೆ ಪರಿಹಾರ ಕೇಳಿದರೂ ಕೊಡದೇ ಇಲ್ಲಿನ ಸರ್ಕಾರವನ್ನು ಮೋದಿ ಲಘುವಾಗಿ ಕಂಡಿದ್ದಾರೆ. ಈ ಸರ್ಕಾರದ ಬಗ್ಗೆ ಅವರಿಗೆ ಗೌರವವಿಲ್ಲ. ಹೀಗಾಗಿ ರಾಜ್ಯದ ಜನ ಸಂಕಷ್ಟಕ್ಕೆ ಸಿಲುಕಿ ಕೊಳೆಯುತ್ತ ಬಿದ್ದಿದ್ದಾರೆ ಎಂದು ಕಾಗೋಡು ಆಕ್ರೋಶ ವ್ಯಕ್ತಪಡಿಸಿದ್ದರು.

  • ಮೋದಿ ವಿರುದ್ಧ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ವಾಗ್ದಾಳಿ

    ಮೋದಿ ವಿರುದ್ಧ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ವಾಗ್ದಾಳಿ

    ಶಿವಮೊಗ್ಗ: ಈ ರಾಷ್ಟ್ರದಿಂದ ಮುಸ್ಲಿಮರನ್ನು ಖಾಲಿ ಮಾಡಿಸಿದರೆ ಮುಂದಿನ 20 ವರ್ಷ ಪ್ರಧಾನಿ ಆಗಿರಬಹುದು ಎಂಬುದು ಮೋದಿಯವರ ಉದ್ದೇಶವಾಗಿದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ವಾಗ್ದಾಳಿ ನಡೆಸಿದ್ದಾರೆ.

    ಶಿವಮೊಗ್ಗದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕಾಗೋಡು ಅವರು, ಏಕ ಪೌರತ್ವ ಜಾರಿಗೆ ತರುವ ಮೂಲಕ ಪ್ರಧಾನಿ ಮೋದಿ ಈ ರಾಷ್ಟ್ರದ ಪ್ರಜಾತಂತ್ರ ವ್ಯವಸ್ಥೆ ಬುಡಮೇಲು ಮಾಡಲು ಹೊರಟಿದ್ದಾರೆ. ಮುಂದಿನ ದಿನಗಳಲ್ಲಿ ಮೋದಿಗೆ ತಕ್ಕ ಪಾಠ ಕಲಿಸದಿದ್ದರೆ ಈ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದರು.

    ಈ ದೇಶದ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದ್ದೆ ಕಾಂಗ್ರೆಸ್. ಈ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಸ್ವಾತಂತ್ರ್ಯ ಉಳಿಯಬೇಕು ಅಂದರೆ ಬಿಜೆಪಿಯನ್ನು ಹೊರ ಹಾಕಬೇಕು ಹಾಗೂ ಮೋದಿಯನ್ನು ಪ್ರಧಾನಿ ಹುದ್ದೆಯಿಂದ ಕೆಳಗೆ ಇಳಿಸಬೇಕು.

    ಮೋದಿಯ ತಲೆ ತುಂಬಾ ಮುಸ್ಲಿಮರೆಲ್ಲಾ ಪಾಕಿಸ್ತಾನದ ಪರ ಇದ್ದಾರೆ ಎಂದು ತುಂಬಿಕೊಂಡಿದೆ. ಹೀಗಾಗಿಯೇ ಮುಸ್ಲಿಮರನ್ನು ಹತ್ತಿಕ್ಕಲು ಇಂತಹ ಕಾನೂನು ಜಾರಿ ಮಾಡುತ್ತಿದ್ದಾರೆ. ಇದನ್ನು ಖಂಡಿಸಿ ಇಂದು ನಾವು ಪ್ರತಿಭಟನೆಗೆ ಮುಂದಾದರೆ ಅದನ್ನು ಹತ್ತಿಕ್ಕುವ ಕೆಲಸ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತೆ ಪ್ರತಿಭಟನೆ ಮಾಡುತ್ತೇವೆ ಎಂದು ಕಾಗೋಡು ತಿಳಿಸಿದರು.