Tag: kagina river

  • ಪರೀಕ್ಷೆ ಬರೆಯಲು ತಂದೆಯ ಕೈ ಹಿಡಿದು ತುಂಬಿ ಹರಿಯುತ್ತಿರುವ ನದಿ ದಾಟಿದ ವಿದ್ಯಾರ್ಥಿನಿ

    ಪರೀಕ್ಷೆ ಬರೆಯಲು ತಂದೆಯ ಕೈ ಹಿಡಿದು ತುಂಬಿ ಹರಿಯುತ್ತಿರುವ ನದಿ ದಾಟಿದ ವಿದ್ಯಾರ್ಥಿನಿ

    ಕಲಬುರಗಿ: ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಸತತ ಮಳೆ (Rain) ಸುರಿಯುತ್ತಿದ್ದು, ಒಂದಡೆ ಜನಜೀವನ ಅಸ್ತವ್ಯಸ್ತ ಆಗಿದೆ. ಮತ್ತೊಂದಡೆ ವಿದ್ಯಾರ್ಥಿನಿಯೊಬ್ಬಳು (Student) ಪ್ರಾಣದ ಹಂಗು ತೊರೆದು ಪರೀಕ್ಷೆ ಬರೆಯಲು ಉಕ್ಕಿ ಹರಿಯುತಿದ್ದ ನದಿ ದಾಟಿದ ಪ್ರಸಂಗ ನಡೆದಿದೆ.

    ಜಿಲ್ಲೆಯ ಸೇಡಂ (Sedam) ತಾಲೂಕಿನ ಸಂಗಾವಿ (ಟಿ) ಗ್ರಾಮದ ಬಿಎ ಅಂತಿಮ ವರ್ಷದ ವಿಧ್ಯಾರ್ಥಿನಿ ರಾಣಿ ಪರೀಕ್ಷೆ ಬರೆಯಲು ತಂದೆಯ ಕೈ ಹಿಡಿದು ನದಿ ದಾಟಿದ್ದಾಳೆ. ಪರೀಕ್ಷೆ ಬರೆಯಲು ಸೇಡಂ ಪಟ್ಟಣಕ್ಕೆ ಹೋಗುವಾಗ ವಿದ್ಯಾರ್ಥಿನಿಯ ತಂದೆ ಹೆಗಲಿಗೆ ಬ್ಯಾಗ್ ಹಾಕಿಕೊಂಡು ಮಗಳ ಕೈಹಿಡಿದು ಕಾಗಿಣಾ ನದಿ ದಾಟಿಲು ಹರಸಾಹಸಪಟ್ಟಿದ್ದಾರೆ. ಇದನ್ನೂ ಓದಿ: ದರ್ಶನ್‌-ಪವಿತ್ರಾ ಲಿವ್‌ ಇನ್‌ ರಿಲೇಷನ್‌ ಶಿಪ್‌ನಲ್ಲಿದ್ದರು: ಸರ್ಕಾರ ಪರ ವಕೀಲ

    ನಿರಂತರ ಮಳೆಯಿಂದ ವಿವಿಧಡೆ ಹಳ್ಳ ಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಕಾಗಿಣ ನದಿಯು ಮೈದುಂಬಿ ಹರಿಯುತ್ತಿದ್ದು, ವಿದ್ಯಾರ್ಥಿನಿ ಅಪಾಯವನ್ನೂ ಲೆಕ್ಕಿಸದೇ ನದಿ ದಾಟಿ ಪರೀಕ್ಷೆ ಬರೆದಿದ್ದಾಳೆ. ಇದೀಗ ವಿದ್ಯಾರ್ಥಿನಿ ತಂದೆಯ ಕೈಹಿಡಿದು ನದಿ ದಾಟುತ್ತಿರುವ ವಿಡಿಯೋ ವೈರಲ್ ಆಗಿದೆ.

  • ಕಾಗಿಣಾ ನದಿಗೆ ಹಾರಿ ತಾಯಿ-ಮಗಳು ಆತ್ಮಹತ್ಯೆ

    ಕಾಗಿಣಾ ನದಿಗೆ ಹಾರಿ ತಾಯಿ-ಮಗಳು ಆತ್ಮಹತ್ಯೆ

    ಕಲಬುರಗಿ: ತಾಯಿ ಮತ್ತು ಮಗಳು ಜಿಲ್ಲೆಯ ಶಹಾಬಾದ್ ಬಳಿಯ ಕಾಗಿಣಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿ (Kalaburagi) ಜಿಲ್ಲೆಯಲ್ಲಿ ನಡೆದಿದೆ.

    ತಾಯಿ ಸುಮಲತಾ (45), ಹಾಗೂ ಮಗಳು ವರ್ಷಾ (22) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು. ಆತ್ಮಹತ್ಯೆ ಮಾಡಿಕೊಂಡ ತಾಯಿ ಮಗಳು ಕಲಬುರಗಿಯ ಎಂ.ಬಿ.ನಗರ ಬಡಾವಣೆಯ ನಿವಾಸಿಗಳಾಗಿದ್ದಾರೆ. ಇದನ್ನೂ ಓದಿ: ಪರೀಕ್ಷೆ ವೇಳೆ ಲೋಡ್ ಶೆಡ್ಡಿಂಗ್ – ಸೋಲಾರ್ ಬೀದಿ ದೀಪದ ಕೆಳಗೆ ಓದುತ್ತಿದ್ದಾರೆ ವಿದ್ಯಾರ್ಥಿನಿಯರು

    ಇವರಿಬ್ಬರು ಸೋಮವಾರ ಸಂಜೆಯಿಂದ ನಾಪತ್ತೆಯಾಗಿದ್ದು, ರಾತ್ರಿ ಕಾಗಿಣಾ ನದಿಗೆ ಹಾರಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೀವನದಲ್ಲಿ ಜಿಗುಪ್ಸೆಗೊಂಡು ತಾಯಿ-ಮಗಳು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಈ ಕುರಿತು ಶಹಾಬಾದ್  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕಲಬುರಗಿ ರೈತರ ಜೊತೆ ತೆಲಂಗಾಣ ಕಿರಿಕ್

    ಕಲಬುರಗಿ ರೈತರ ಜೊತೆ ತೆಲಂಗಾಣ ಕಿರಿಕ್

    – ಕಾಗಿಣಾ ನದಿಯ ನೀರು ನಮ್ದು ಅಂತಾ ಫೈಟ್

    ಕಲಬುರಗಿ: ಕಾಗಿಣಾ ನದಿಯ ನೀರಿಗಾಗಿ ನೆರೆಯ ರಾಜ್ಯವಾದ ತೆಲಂಗಾಣ ರೈತರು ಚಿಂಚೋಳಿ ತಾಲೂಕಿನ ಗಡಿಯಲ್ಲಿರುವ ಕಿರಿಕ್ ಮಾಡಿದ್ದಾರೆ.

    ಕಾಗಿಣಾ ನದಿ ಕರ್ನಾಟಕ ಹಾಗೂ ತೆಲಂಗಾಣದ ಗಡಿ ಪ್ರದೇಶದಲ್ಲಿದೆ. ಈ ನದಿ ನಮಗೆ ಸೇರಿದೆ ಎಂದು ತೆಲಂಗಾಣದ ಕ್ಯಾದಗೇರಾ ಗ್ರಾಮಸ್ಥರು ಕ್ಯಾತೆ ತೆಗೆದಿದ್ದಾರೆ. ಆದರೆ ಕರ್ನಾಟಕದ ಕೋತಂಗಲ್ ಗ್ರಾಮಸ್ಥರು ಇದು ನಮಗೆ ಸೇರಿದ್ದು ಎಂದು ವಾದ ಮಾಡಿಸಿದ್ದಾರೆ. ಈ ವೇಳೆ ಎರಡು ರಾಜ್ಯಗಳ ನಡುವೆ ವಾಗ್ವಾದ ಕೂಡ ನಡೆದಿದೆ.

    ಎರಡು ರಾಜ್ಯಗಳ ರೈತರ ಜಗಳ ಕುರಿತು ಮಾಹಿತಿ ಪಡೆದ ಹಿರಿಯ ಪೊಲೀಸರು ಹಾಗೂ ಎರಡು ರಾಜ್ಯಗಳ ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಿಸಲು ಹರಸಾಹಸಪಟ್ಟಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಯಾವುದೇ ರೀತಿಯ ವಾಗ್ವಾದಕ್ಕೂ ಮುಂದಾಗಬೇಡಿ ಈ ಕುರಿತು ಕಾನೂನಿನ ಅಡಿ ಕ್ರಮಕೈಗಳ್ಳುತ್ತೇವೆ. ಗ್ರಾಮಸ್ಥರು ನಮಗೆ ಸಹಕಾರ ನೀಡಿ ಎಂದು ಮನವಿ ಮಾಡಿದ್ದಾರೆ.

    ಪೊಲೀಸರು ಹಾಗೂ ಅಧಿಕಾರಿಗಳ ನಡುವೆಯೂ ತೆಲಂಗಾಣ ಗ್ರಾಮಸ್ಥರು ಮಾತುಕತೆ ನಡೆಸಿದ್ದು, ಅಧಿಕಾರಿಗಳ ಬಳಿಯೂ ಇದು ನಮ್ಮದೇ ಪ್ರದೇಶ ಎಂದು ವಾದ ಮಂಡಿಸಿದ್ದಾರೆ. ಈ ವೇಳೆ ಎರಡು ರಾಜ್ಯಗಳ ಅಧಿಕಾರಿಗಳು ಯಾವುದೇ ಅಹಿತಕರ ನಡೆಯದಂತೆ ಗ್ರಾಮಸ್ಥರ ಮನವೊಲಿಕೆ ಮಾಡಿದ್ದು, ಸಮಸ್ಯೆಯನ್ನು ಕಾನೂನು ಮೂಲಕ ಬಗೆಹರಿಸುವ ಭರವಸೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾಗಿಣಾ ನದಿಯಲ್ಲಿ ಮುಳುಗಿ ಬಾಲಕ, ಸೋದರಮಾವ ದುರ್ಮರಣ

    ಕಾಗಿಣಾ ನದಿಯಲ್ಲಿ ಮುಳುಗಿ ಬಾಲಕ, ಸೋದರಮಾವ ದುರ್ಮರಣ

    ಕಲಬುರಗಿ: ಕಾಗಿಣಾ ನದಿಯಲ್ಲಿ ಮುಳುಗಿ ಓರ್ವ ಬಾಲಕ ಸೇರಿದಂತೆ ಇಬ್ಬರು ಸಾವನಪ್ಪಿರುವ ಘಟನೆ ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಮೀನಹಾಬಾಳ ಗ್ರಾಮದಲ್ಲಿ ಬುಧವಾರ ನಡೆದಿದೆ.

    ಮೃತರನ್ನು ಭರತ್ ಹಾಗೂ ಮಲ್ಲಿಕಾರ್ಜುನ್ ಎಂದು ಗುರುತಿಸಲಾಗಿದ್ದು, ಇವರಿಬ್ಬರೂ ಇದೇ ಗ್ರಾಮದವರು ಎನ್ನಲಾಗಿದೆ. ಭರತ್ ಕಾಲು ಜಾರಿ ನದಿಯಲ್ಲಿ ಮುಳುಗಿದ್ದ ಸಂದರ್ಭದಲ್ಲಿ ಆತನನ್ನು ರಕ್ಷಿಸಲು ಹೋದ ಸೋದರಮಾವ ಮಲ್ಲಿಕಾರ್ಜುನ್ ಸಹ ನೀರಿನಲ್ಲಿ ಮುಳುಗಿ ಸಾವನಪ್ಪಿದ್ದಾರೆ.

    ಈಗಾಗಲೇ ಭರತ್‍ನ ಶವ ಹೊರತೆಗೆದಿದ್ದು, ಮಲ್ಲಿಕಾರ್ಜುನ್ ಅವರ ಶವಕ್ಕಾಗಿ ಇಂದು ಸಹ ಶೋಧ ಕಾರ್ಯ ಮುಂದುವರೆದಿದೆ. ಈ ಕುರಿತು ಮಳಖೇಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.