Tag: Kaggalipura

  • ಕಗ್ಗಲೀಪುರದಲ್ಲಿ ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ ನಿರ್ಮಾಣ?

    ಕಗ್ಗಲೀಪುರದಲ್ಲಿ ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ ನಿರ್ಮಾಣ?

    ಬೆಂಗಳೂರು: ಕಗ್ಗಲೀಪುರದಲ್ಲಿ (Kaggalipura) ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ (Bengaluru Second Airport) ನಿರ್ಮಾಣ ಆಗುತ್ತಾ ಹೀಗೊಂದು ಪ್ರಶ್ನೆ ಎದ್ದಿದೆ.

    ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (KIADB) ಬೆಂಗಳೂರು ದಕ್ಷಿಣದಲ್ಲಿಎರಡನೇ ವಿಮಾನ ನಿಲ್ದಾಣ ಭೂಸ್ವಾದೀನಕ್ಕೆ ಶಾರ್ಟ್ ಲಿಸ್ಟ್ ಮಾಡಿದ್ದರಿಂದ ಈ ಪ್ರಶ್ನೆ ಎದ್ದಿದೆ.

    ಹೌದು. ಬೆಂಗಳೂರು ಬಿಡದಿಯ (Bidadi) ಕೆಲ ಭಾಗ ಕಗ್ಗಲಿಪುರ ಭಾಗದಲ್ಲಿ ಭೂಸ್ವಾದೀನಕ್ಕೆ ಪ್ಲ್ಯಾನ್ ಮಾಡಿದೆ ಎಂದು ಪಬ್ಲಿಕ್‌ ಟಿವಿಗೆ ಉನ್ನತ ಮೂಲಗಳು ತಿಳಿಸಿವೆ. ಬೆಂಗಳೂರು ದಕ್ಷಿಣ ತಾಲೂಕಿನಲ್ಲಿ ಕಗ್ಗಲೀಪುರ ಬರುತ್ತದೆ.

    AI ಚಿತ್ರ
    AI ಚಿತ್ರ

    ಈ ಹಿಂದೆ ನೆಲಮಂಗಲದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪ್ಲ್ಯಾನ್‌ ನಡೆದಿತ್ತು. ಆದರೆ ಈಗ ಬಿಡದಿ – ಕಗ್ಗಲಿಪುರ ಭಾಗದಲ್ಲಿ ಕೆಐಎಡಿಬಿ 4,800 ಎಕ್ರೆ ಭೂಸ್ವಾಧೀನಕ್ಕೆ ಶಾರ್ಟ್ ಲಿಸ್ಟ್ ಮಾಡಿದೆ.

    ರಾಮನಗರವನ್ನು ಬೆಂಗಳೂರು ದಕ್ಷಿಣಕ್ಕೆ ಸೇರಿಸಬೇಕು ಎಂದು ಈ ಹಿಂದೆ ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಒತ್ತಾಯ ಮಾಡಿದ್ದರು. ಈ ಒತ್ತಾಯದ ಬೆನ್ನಲ್ಲೇ ವಿಮಾನ ನಿಲ್ದಾಣ ತರಲು ಪ್ಲ್ಯಾನ್‌ ಮಾಡಲಾಗಿದ್ಯಾ ಎಂಬ ಪ್ರಶ್ನೆ ಎದ್ದಿದೆ. ಇದನ್ನೂ ಓದಿ: `ಪಬ್ಲಿಕ್ ಟಿವಿ’ ಮುಖ್ಯಸ್ಥ ರಂಗನಾಥ್ ಪ್ರೇರಣೆ – ಇಡೀ ಗ್ರಾಮಕ್ಕೆ 24*7 ನೀರು ಸೌಲಭ್ಯ ಕಲ್ಪಿಸಿದ ಗ್ರಾಪಂ‌ ಅಧ್ಯಕ್ಷ

    ಕಳೆದ ಅಕ್ಟೋಬರ್‌ನಲ್ಲಿ ವಿಮಾನ ನಿಲ್ದಾಣ  ಸಂಬಂಧ ಡಿಸಿಎಂ ಡಿಕೆ ಶಿವಕುಮಾರ್‌, ಎಂಬಿ ಪಾಟೀಲ್‌, ಪ್ರಿಯಾಂಕ್‌ ಖರ್ಗೆ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರು. ಸಭೆಯ ನಂತರ ಪ್ರತಿಕ್ರಿಯಿಸಿದ್ದ ಎಂಬಿ ಪಾಟೀಲ್‌, ಎರಡನೇ ವಿಮಾನ ನಿಲ್ದಾಣ (Second Airport) ನಿರ್ಮಾಣಕ್ಕೆ 5 ಸ್ಥಳ ಗುರುತಿಸಲಾಗಿದೆ. ಆದರೆ ಯಾವುದೇ ಸ್ಥಳ ಅಂತಿಮವಾಗಿಲ್ಲ. ದಾಬಾಸ್ ಪೇಟೆ,‌ ನೆಲಮಂಗಲ, ಕುಣಿಗಲ್ ರಸ್ತೆಯಲ್ಲಿಎರಡು ಜಾಗ, ಹಾರೋಹಳ್ಳಿ ಹಾಗೂ ಬಿಡದಿ ಜಾಗ ಗುರುತಿಸಿದ್ದೇವೆ ಎಂದು ಮಾಹಿತಿ ನೀಡಿದ್ದರು.

    ಈ ಹಿಂದೆ ರಾಮನಗರ, ಕನಕಪುರ ಭಾಗದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದ ಡಿಕೆ ಶಿವಕುಮಾರ್‌, ಈ ಭಾಗದ ಜನರಿಗೆ ಮನವಿ ಮಾಡುತ್ತಿದ್ದೇನೆ. ಯಾವುದೇ ಕಾರಣಕ್ಕೂ ನಿಮ್ಮ ಆಸ್ತಿಯನ್ನು ಮಾರಬೇಡಿ. ಮುಂದಿನ ದಿನಗಳಲ್ಲಿ ಇಲ್ಲಿನ ಭೂಮಿಗೆ ಚಿನ್ನದ ಬೆಲೆ ಬರಲಿದೆ. ಆದ್ದರಿಂದ ಆಸ್ತಿಯನ್ನ ಮಾರದೇ ಉಳಿಸಿಕೊಳ್ಳಿ. ಒಂದಲ್ಲ ಒಂದು ದಿನ ಇಲ್ಲಿನ ಗ್ರಾಮಗಳು ಬೆಂಗಳೂರು ಆಗೇ ಆಗುತ್ತವೆ. ಪ್ರತಿ ಅಡಿ ಲೆಕ್ಕದಲ್ಲಿ ಬೆಲೆ ಕಟ್ಟಲಾಗುತ್ತದೆ. ಆದ ಕಾರಣ ನನ್ನ ಮಾತನ್ನು ನೆನಪಿನಲ್ಲಿ ಇಟ್ಟುಕೊಳ್ಳಿ ಎಂದಿದ್ದರು.

     

  • ಮರಕ್ಕೆ ಕಾರು ಡಿಕ್ಕಿ – ಇಬ್ಬರು ಎಂಬಿಎ ವಿದ್ಯಾರ್ಥಿಗಳ ದುರ್ಮರಣ, ಮೂವರು ಗಂಭೀರ

    ಮರಕ್ಕೆ ಕಾರು ಡಿಕ್ಕಿ – ಇಬ್ಬರು ಎಂಬಿಎ ವಿದ್ಯಾರ್ಥಿಗಳ ದುರ್ಮರಣ, ಮೂವರು ಗಂಭೀರ

    ಬೆಂಗಳೂರು/ರಾಮನಗರ: ಮರಕ್ಕೆ ಕಾರು  ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಎಂಬಿಎ ವಿದ್ಯಾರ್ಥಿಗಳು (MBA Students) ದಾರುಣವಾಗಿ ಸಾವನ್ನಪ್ಪಿದ ಘಟನೆ ಬೆಂಗಳೂರು ಗ್ರಾಮಾಂತರದ (Bengaluru Rural) ಕಗ್ಗಲೀಪುರ ಪೊಲೀಸ್ ಠಾಣಾ (Kaggalipura Police Station) ವ್ಯಾಪ್ತಿಯ ಸಾಲುಹುಣಸೆ ಗ್ರಾಮದ ಬಳಿ ನಡೆದಿದೆ.

    ಮುಖೇಶ್ (22) ಹಾಗೂ ಆಕಾಶ್ (22) ಮೃತ ವಿದ್ಯಾರ್ಥಿಗಳು. ಮೃತರು ಮೂಲತಃ ತಮಿಳುನಾಡಿನವರಾಗಿದ್ದು, ಬೆಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ಎಂಬಿಎ ಓದುತ್ತಿದ್ದರು. ಶನಿವಾರ ತಡರಾತ್ರಿ ವಿದ್ಯಾರ್ಥಿಗಳು ಸ್ನೇಹಿತರೊಂದಿಗೆ ಬೆಂಗಳೂರು ಕಡೆಯಿಂದ ಕನಕಪುರದ ಕಡೆಗೆ ತೆರಳುತ್ತಿದ್ದರು. ಈ ವೇಳೆ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. ಇದನ್ನೂ ಓದಿ: PUBLiC TV Impact | ಡೆಡ್‌ಲೈನ್ ಟೆನ್ಶನ್‌ನಲ್ಲಿ ಪಾಲಿಕೆ ಯಡವಟ್ಟು – ಬಿಬಿಎಂಪಿ ಮುಂದುವರಿದ ದುರಸ್ತಿ ಕಾರ್ಯ

    ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬಿಜೆಪಿ ಶಾಸಕ ಮುನಿರತ್ನ ಬಂಧನಕ್ಕೆ ಕೇಸರಿ ಕಲಿಗಳು ಕೆಂಡ – ಸರ್ಕಾರದ ವಿರುದ್ಧ ಅಶ್ವಥ್‌ ನಾರಾಯಣ್‌ ತೀವ್ರ ವಾಗ್ದಾಳಿ

  • ಉದ್ಯಮಿ ಪ್ರದೀಪ್ ಶೂಟೌಟ್ ಕೇಸ್- A3 ಆರೋಪಿ ಲಿಂಬಾವಳಿ ಹೇಳಿಕೆ ಕೂಡ ದಾಖಲು

    ಉದ್ಯಮಿ ಪ್ರದೀಪ್ ಶೂಟೌಟ್ ಕೇಸ್- A3 ಆರೋಪಿ ಲಿಂಬಾವಳಿ ಹೇಳಿಕೆ ಕೂಡ ದಾಖಲು

    ರಾಮನಗರ: ಕಗ್ಗಲೀಪುರದ ಉದ್ಯಮಿ ಪ್ರದೀಪ್ (Businessman Pradeep) ಶೂಟೌಟ್ ಕೇಸ್‍ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪೊಲೀಸರು ಇನ್ನೊಂದು ವಾರದಲ್ಲಿ ನ್ಯಾಯಾಲಯಕ್ಕೆ ತನಿಖಾ ರಿಪೋರ್ಟ್ ಸಲ್ಲಿಕೆ ಮಾಡಲಿದ್ದಾರೆ.

    ಬರೋಬ್ಬರಿ ಇಪ್ಪತ್ತು ಮಂದಿಯ ಹೇಳಿಕೆಯನ್ನ ದಾಖಲಿಸಿರೋ ಪೊಲೀಸ್ರು, ಎ3 ಆರೋಪಿ ಅರವಿಂದ್ ಲಿಂಬಾವಳಿ ಸೇರಿದಂತೆ ಎಲ್ಲರ ಮೇಲೂ ಬಿ ರಿಪೋರ್ಟ್ ಸಲ್ಲಿಕೆ ಸಾಧ್ಯತೆ ಇದೆ. ಪೊಲೀಸರು ಪ್ರಕರಣ ಸಂಬಂಧ ಶಾಸಕ ಅರವಿಂದ ಲಿಂಬಾವಳಿ (Aravind Limbavali) ಬಳಿ ಎರಡು ಪುಟಗಳ ಹೇಳಿಕೆ ಪಡೆದಿದ್ದಾರೆ ಎನ್ನಲಾಗ್ತಿದೆ. ಆದರೆ ನನಗೂ ಪ್ರದೀಪ್ ಆತ್ಮಹತ್ಯೆ ಕೇಸ್‍ಗೂ ಸಂಬಂಧವಿಲ್ಲ. ಪ್ರದೀಪ್ ಪರಿಚಿತ ವ್ಯಕ್ತಿವಾಗಿದ್ದು, ಸ್ನೇಹಿತರ ನಡುವಿನ ಹಣಕಾಸಿನ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸೂಚಿಸಿದ್ದೇ ಅಷ್ಟೇ ಎಂದು ಅರವಿಂದ ಲಿಂಬಾವಳಿ ಹೇಳಿಕೆ ನೀಡಿದ್ದಾರೆ ಎನ್ನಲಾಗ್ತಿದೆ. ಇದನ್ನೂ ಓದಿ: ಉದ್ಯಮಿ ಪ್ರದೀಪ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್- ಮೂರು ಡೆತ್‍ನೋಟ್ ಪತ್ತೆ

    ಅಲ್ಲದೆ ಡೆತ್‍ನೋಟ್‍ನಲ್ಲಿ ಪ್ರದೀಪ್ ಮಾಡಿರೋ ಆರೋಪಕ್ಕೆ ಸ್ಪಷ್ಟ ಸಾಕ್ಷ್ಯ ಸಿಗ್ತಿಲ್ಲ. ಮೊಬೈಲ್‍ನ ಟೆಕ್ನಿಕಲ್ ಎವಿಡೆನ್ಸ್ ಹಾಗೂ ಡೆತ್‍ನೋಟ್ ಬಗ್ಗೆಯೂ ಪ್ರಬಲ ಸಾಕ್ಷ್ಯವಿಲ್ಲ. ಸದ್ಯ ಎ1 ಆರೋಪಿ ಗೋಪಿ ಸೇರಿ ಶಾಸಕ ಅರವಿಂದ ಲಿಂಬಾವಳಿ ಒಳಗೊಂಡಂತೆ ಆರು ಮಂದಿ ಆರೋಪಿತರ ಹೇಳಿಕೆಯನ್ನ ದಾಖಲಿಸಿರೋ ಪೊಲೀಸ್ರು ತನಿಖಾ ರಿಪೋರ್ಟ್ ಸಲ್ಲಿಕೆಗೆ ಸಿದ್ಧರಾಗಿದ್ದಾರೆ. ಇದನ್ನೂ ಓದಿ: ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರದೀಪ್ ನಮ್ಮ ಕಾರ್ಯಕರ್ತನೇ – ಲಿಂಬಾವಳಿ ಸ್ಪಷ್ಟನೆ

  • ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದ ಸಂಸದ ಡಿ.ಕೆ. ಸುರೇಶ್

    ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದ ಸಂಸದ ಡಿ.ಕೆ. ಸುರೇಶ್

    ಬೆಂಗಳೂರು: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯನ್ನು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿಕೆ ಸುರೇಶ್‌ ನೆರವಾಗಿದ್ದಾರೆ.

    ಕನಕಪುರದಿಂದ ಬೆಂಗಳೂರಿಗೆ ಬರುವ ಮಾರ್ಗ ಮಧ್ಯೆ ಕಗ್ಗಲೀಪುರದಲ್ಲಿ ರಸ್ತೆ ಮಧ್ಯೆ. ಸಂಸದ ಡಿ.ಕೆ.ಸುರೇಶ್ ಕಣ್ಮುಂದೆಯೇ ಅಪಘಾತಾಗಿದೆ. ಕಾರೊಂದು ಅಂಗವಿಕಲ ವ್ಯಕ್ತಿಗೆ ಡಿಕ್ಕಿ ಹೊಡೆದಿದ್ದು ಅಪಘಾತದಲ್ಲಿ ಅಂಗವಿಕಲ ವ್ಯಕ್ತಿ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದಾರೆ. ಅಂಗವಿಕಲ ವ್ಯಕ್ತಿ, ಕನಕಪುರದ ಕೋಟೆ ನಿವಾಸಿಯಾಗಿದ್ದು ಜಯರಾಮು ಶಿವಲಿಂಗಯ್ಯ ಎಂಬುವವರ ಪುತ್ರ. ಇದನ್ನೂ ಓದಿ: ಪೆಟ್ರೋಲ್ ಬೆಲೆ ಶತಕ, ಲಸಿಕೆ ಮಂದಗತಿ, ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ: ಡಿ.ಕೆ ಶಿವಕುಮಾರ್ 

    ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗೆ ಸಂಸದ ಡಿ.ಕೆ.ಸುರೇಶ್ ನೀರು ಕುಡಿಸಿ ಸಂತೈಸಿದ್ದಾರೆ. ಕೆಲವೇ ನಿಮಿಷಗಳಲ್ಲಿ ಬೆಸ್ಕಾಂಗೆ ಸಂಬಂಧಿಸಿದ ವಾಹನದಲ್ಲಿ ಆ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದಾರೆ. ನಂತರ ಕಗ್ಗಲೀಪುರ ಪೊಲೀಸ್ ಠಾಣೆಗೆ ಹೋಗಿ ಸ್ವತಃ ಸಂಸದ ಡಿ.ಕೆ.ಸುರೇಶ್ ಅಪಘಾತದ ಮಾಹಿತಿಯನ್ನು ಪೊಲೀಸರಿಗೆ ತಿಳಿಸಿದ್ದಾರೆ.

  • 9 ಮನೆ ಕಳ್ಳತನಗೈದಿದ್ದ ಚಾಲಾಕಿ ಕಳ್ಳ ಅರೆಸ್ಟ್- 266 ಗ್ರಾಂ ಚಿನ್ನಾಭರಣ, ಬೈಕ್ ವಶ

    9 ಮನೆ ಕಳ್ಳತನಗೈದಿದ್ದ ಚಾಲಾಕಿ ಕಳ್ಳ ಅರೆಸ್ಟ್- 266 ಗ್ರಾಂ ಚಿನ್ನಾಭರಣ, ಬೈಕ್ ವಶ

    ರಾಮನಗರ: 9 ಮನೆಯಲ್ಲಿ ಚಿನ್ನಾಭರಣ, ನಗದು ಕಳ್ಳತ ಮಾಡಿದ್ದ ಚಾಲಾಕಿ ಕಳ್ಳನನ್ನು ಜಿಲ್ಲೆಯ ಕಗ್ಗಲೀಪುರ ಪೊಲೀಸರು ಬಂಧಿಸಿದ್ದಾರೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ತೋಟಗೆರೆ ಗ್ರಾಮದ ಮೋಹನ್ ಕುಮಾರ್ ಅಲಿಯಾಸ್ ಚಿಕ್ಕತಮ್ಮಯ್ಯ, ಅಲಿಯಾಸ್ ನವೀನ್ ಬಂಧಿತ ಕಳ್ಳ. ಆರೋಪಿ ಮೋಹನ್ ಕುಮಾರ್‌ನಿಂದ 266 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯ ಬಳಸುತ್ತಿದ್ದ ಬೈಕ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಆರೋಪಿ ಮೋಹನ್ ಕುಮಾರ್ ನಿರ್ಜನ ಪ್ರದೇಶದ ಬಡಾವಣೆಗಳಲ್ಲಿ ಸುತ್ತಾಡುತ್ತಿದ್ದ. ಸುಮಾರು ಎರಡ್ಮೂರು ದಿನಗಳಿಂದ ಬೀಗ ಜಡಿದಿರುತ್ತಿದ್ದ ಮನೆಗಳನ್ನು ಗುರುತಿಸಿ, ಯಾರು ಇಲ್ಲದೆ ಇರುವ ವೇಳೆ ಮನೆಯ ಹಿಂಬಾಗಿಲನ್ನು ಮುರಿದು ಮನೆಗೆ ನುಗುತ್ತಿದ್ದ. ಬಳಿಕ ಮನೆಯಲ್ಲಿದ್ದ ಚಿನ್ನಾಭರಣ, ನಗದು ದೋಚಿ ಪರಾರಿಯಾಗುತ್ತದ್ದ.

    ಬೆಂಗಳೂರು ದಕ್ಷಿಣ ತಾಲೂಕಿನ ಉತ್ತರಹಳ್ಳಿ ಸಮೀಪದ ಪಟ್ಟರೆಡ್ಡಿ ಪಾಳ್ಯದ ರಾಧಾ ಎಂಬವರು ಇತ್ತೀಚೆಗೆ ಎರಡು ದಿನಗಳ ಕಾಲ ಸಂಬಂಧಿಕರ ಮನೆಗೆ ತೆರಳಿದ್ದರು. ಮನೆಗೆ ಬೀಗ ಹಾಕಿದ್ದನ್ನು ನೋಡಿದ್ದ ಮೋಹನ್ ಮನೆಗೆ ಬಾಗಿಲು ಮುರಿದು ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿದ್ದ. ಈ ಸಂಬಂಧ ರಾಧಾ ಅವರು ಪೊಲೀಸರಿಗೆ ದೂರು ನೀಡಿದ್ದರು.

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಕಗ್ಗಲೀಪುರ ಪೊಲೀಸರು, ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದಾಗ ಮೋಹನ್ ಕೃತ್ಯ ಪೊಲೀಸರ ಗಮನಕ್ಕೆ ಬಂದಿತ್ತು. ಬಳಿಕ ಆರೋಪಿಗೆ ಬಲೆ ಬೀಸಿ ಬಂಧಿಸಿದ್ದಾರೆ. ಬಂಧಿತ ಕಳ್ಳ ಮೋಹನ್ ಕುಮಾರ್‌ನಿಂದ ಲಕ್ಷಾಂತರ ರೂಪಾಯಿ ಮೌಲ್ಯದ 266 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಕೆ ಮಾಡುತ್ತಿದ್ದ ಬೈಕ್ ಅನ್ನು ವಶಪಡಿಸಿಕೊಂಡು ಜೈಲಿಗಟ್ಟಿದ್ದಾರೆ.

    ಬಂಧಿತ ಕಳ್ಳ ಮೋಹನ್ ಕಗ್ಗಲೀಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 3, ರಾಜಾನುಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2 ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2, ಕುಂಬಳಗೂಡು ಪೊಲೀಸ್ ಠಾಣೆ ಹಾಗೂ ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಲಾ ಒಂದು ಸೇರಿ ಒಟ್ಟು 9 ಕಡೆಗಳಲ್ಲಿ ಮನೆಗಳವು ಮಾಡಿದ್ದ.