Tag: Kagaj 2

  • ‘ಕಾಗಜ್ 2’ ಅನುಪಮ್ ಖೇರ್ ನಟನೆಯ 526ನೇ ಸಿನಿಮಾ

    ‘ಕಾಗಜ್ 2’ ಅನುಪಮ್ ಖೇರ್ ನಟನೆಯ 526ನೇ ಸಿನಿಮಾ

    ಬಾಲಿವುಡ್ ಖ್ಯಾತ ನಟ ಅನುಪಮ್ ಖೇರ್ ಇದೀಗ 526ನೇ ಸಿನಿಮಾಗೆ ಬಣ್ಣ ಹಚ್ಚುತ್ತಿದ್ದಾರೆ. ಈ ಚಿತ್ರಕ್ಕೆ ಕಾಗಜ್ 2 ಎಂದು ಹೆಸರಿಡಲಾಗಿದೆ. ನಟನಾಗಿ, ನಾಯಕನಾಗಿ, ಖಳನಟನಾಗಿ ಸಿನಿಮಾ ರಂಗದಲ್ಲಿ ಮಿಂಚಿರುವ ಅನುಪಮ್ ಖೇರ್, ಇತ್ತೀಚೆಗಷ್ಟೇ ದಿ ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ದೇಶ ವಿದೇಶಗಳಲ್ಲಿ ಭಾರೀ ಸದ್ದು ಮಾಡಿತ್ತು. ಆ ಸಿನಿಮಾದ ನಂತರ ಕಾಗಜ್ 2 ಚಿತ್ರವನ್ನು ಅವರು ಒಪ್ಪಿಕೊಂಡಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ಅನುಪಮ್ ಖೇರ್ ಪಾತ್ರವನ್ನು ಒಪ್ಪಿಕೊಂಡರೆ, ಅಲ್ಲೊಂದು ಖಡಕ್ ಸಂದೇಶ ಇರಲಿದೆ ಎಂದಾಗಿದೆ. ದಿ ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲೂ ದೇಶ ಪ್ರೇಮವನ್ನು ಸಾರುವಂತಹ ಮತ್ತು ಕಾಶ್ಮೀರಿ ಪಂಡಿತರ ಹತ್ಯೆಯ ಕುರಿತಾದ ವಿಷಯಗಳು ಇದ್ದವು. ಕಾಗಜ್ 2 ನಲ್ಲೂ ಅಂಥದ್ದೇ ಪವರ್ ಫುಲ್ ಕಥೆ ಇರಲಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ:ಅಸ್ಸಾಂ ಪ್ರವಾಹ ಪೀಡಿತರ ಸಂಕಷ್ಟಕ್ಕೆ ಮಿಡಿದ ಆಮೀರ್ ಖಾನ್

    Anupam Kher

    ತಮ್ಮ 526ನೇ ಸಿನಿಮಾದ ಬಗ್ಗೆ ಯಾವುದೇ ಮಾಹಿತಿಯನ್ನು ಬಿಟ್ಟುಕೊಡದ ಅನುಪಮ್ ಖೇರ್, ಕ್ಪ್ಲ್ಯಾಪ್ ಬೋರ್ಡ್ ಇರುವಂತಹ  ವಿಡಿಯೋವೊಂದನ್ನು ಪೋಸ್ಟ್ ಮಾಡಿ, ಹೊಸ ಸಿನಿಮಾಗೆ ಶುಭ ಹಾರೈಸಿ ಎಂದು ಪೋಸ್ಟ್ ಮಾಡಿದ್ದಾರೆ. ಈ ಚಿತ್ರವನ್ನು ವಿ.ಕೆ. ಪ್ರಕಾಶ್ ನಿರ್ದೇಶನ ಮಾಡುತ್ತಿದ್ದು, ಎರಡು ದಿನಗಳ ಹಿಂದಿಯೇ ಶೂಟಿಂಗ್ ಆರಂಭಿಸಿದೆ.

    Live Tv