Tag: Kadur

  • ಬಾಲಕ ಪ್ರಾಣ ಕಳೆದುಕೊಂಡ್ರೂ ಬುದ್ಧಿ ಕಲಿಯದ ಪ್ರವಾಸಿಗರು – ವೀಕ್ಷಣಾ ಗೋಪುರದಿಂದ ಅಯ್ಯನಕೆರೆಗೆ ಜಿಗಿದು ಹುಚ್ಚಾಟ

    ಬಾಲಕ ಪ್ರಾಣ ಕಳೆದುಕೊಂಡ್ರೂ ಬುದ್ಧಿ ಕಲಿಯದ ಪ್ರವಾಸಿಗರು – ವೀಕ್ಷಣಾ ಗೋಪುರದಿಂದ ಅಯ್ಯನಕೆರೆಗೆ ಜಿಗಿದು ಹುಚ್ಚಾಟ

    ಚಿಕ್ಕಮಗಳೂರು: ದಸರಾ ರಜೆ ಇರುವುದರಿಂದ ಚಿಕ್ಕಮಗಳೂರಿನ (Chikkamagaluru) ಪ್ರವಾಸಿ ತಾಣಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿವೆ. ಹೀಗೆ ಬಂದ ಪ್ರವಾಸಿಗರು (Tourist) ಅಪಾಯಕಾರಿ ಸ್ಥಳಗಳಲ್ಲಿ ಹುಚ್ಚಾಟ ಮಾಡುತ್ತಿದ್ದಾರೆ.

    ಕಡೂರು (Kadur) ತಾಲೂಕಿನ ಅಯ್ಯನಕೆರೆಯ (Ayyana Kere) ವೀಕ್ಷಣಾ ಗೋಪುರದ ಮೇಲಿಂದ ಯುವಕ, ಯುವತಿಯರು, ಮಕ್ಕಳು ನೀರಿಗೆ ಜಿಗಿಯುತ್ತಿದ್ದಾರೆ. ವೇಗವಾಗಿ ಜಾರುವ ನೀರಿನಲ್ಲಿ ಸ್ವಲ್ಪ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಇನ್ನೂ ಶುಕ್ರವಾರ (ಅ.3) ಇದೇ ಜಾಗದಲ್ಲಿ ಈಜಲು ಹೋಗಿ ಬಾಲಕ ಮೃತಪಟ್ಟಿದ್ದ. ಇಷ್ಟಾದರೂ ಪ್ರವಾಸಿಗರು ಮಾತ್ರ ಪುಂಡಾಟ ನಿಲ್ಲಿಸಿಲ್ಲ. ಇದನ್ನೂ ಓದಿ: ಕಾಫಿನಾಡಿಗೆ ಹರಿದು ಬಂದ ಪ್ರವಾಸಿಗರ ದಂಡು – ಮುಳ್ಳಯ್ಯನಗಿರಿ ಬಳಿ 5 ಕಿ.ಮೀ ಸಾಲುಗಟ್ಟಿ ನಿಂತ ವಾಹನಗಳು

    ಏಳು ಗುಡ್ಡದ ಮಧ್ಯೆ ಇರುವ ಅಯ್ಯನಕೆರೆ ಸುಂದರ ಪ್ರವಾಸಿ ತಾಣವೂ ಹೌದು. ಸಾಲು ಸಾಲು ರಜೆ ಇರುವುದರಿಂದ ಇಲ್ಲಿಗೆ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ಹೀಗೆ ಬಂದವರು ಪ್ರಕೃತಿ ಸೌಂದರ್ಯ ಸವಿಯದೇ ಪುಂಡಾಟ ಮಾಡಿ ಅಪಾಯಕ್ಕೆ ಆಹ್ವಾನ ನೀಡುತ್ತಿದ್ದಾರೆ.

    ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಯ್ಯನಕೆರೆ ಇದ್ದು, ಪೊಲೀಸರು ಪ್ರವಾಸಿಗರ ಪುಂಡಾಟದ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಕೆಮ್ಮಣ್ಣುಗುಂಡಿ | ಪತ್ನಿ ಜೊತೆ ಸೆಲ್ಫಿ ತೆಗೆಯಲು ಹೋಗಿ 60 ಅಡಿ ಪ್ರಪಾತಕ್ಕೆ ಬಿದ್ದು ಶಿಕ್ಷಕ ಸಾವು

  • ಏಕಾಏಕಿ ಚಿರತೆ ದಾಳಿ – ಕಲ್ಲು ಹೊಡೆದು ಬೈಕ್ ಸವಾರರ ಜೀವ ಉಳಿಸಿದ ಗ್ರಾಮಸ್ಥರು

    ಏಕಾಏಕಿ ಚಿರತೆ ದಾಳಿ – ಕಲ್ಲು ಹೊಡೆದು ಬೈಕ್ ಸವಾರರ ಜೀವ ಉಳಿಸಿದ ಗ್ರಾಮಸ್ಥರು

    – ಇಬ್ಬರಿಗೆ ಗಂಭೀರ ಗಾಯ

    ಚಿಕ್ಕಮಗಳೂರು: ಬೈಕ್‌ನಲ್ಲಿ (Bike) ತೆರಳುತ್ತಿದ್ದವರ ಮೇಲೆ ಏಕಾಏಕಿ ಚಿರತೆ (Leopard) ದಾಳಿ ನೆಡೆಸಿದ ಪರಿಣಾಮ ಇಬ್ಬರು ಸವಾರರು ಗಂಭೀರವಾಗಿ ಗಾಯಗೊಂಡ ಘಟನೆ ಕಡೂರು (Kadur) ತಾಲೂಕಿನ ಸಿದ್ದರಹಳ್ಳಿ ಗ್ರಾಮದಲ್ಲಿ ನಡೆದಿದೆ. ಈ ವೇಳೆ ಸ್ಥಳೀಯರು ಚಿರತೆಗೆ ಕಲ್ಲು ಹೊಡೆದು ಸವಾರರನ್ನು ಬಚಾವ್‌ ಮಾಡಿದ್ದಾರೆ.

    ಗಾಯಾಳುಗಳನ್ನು ಗ್ರಾಮದ ಮಂಜುನಾಥ್ (59) ಮೂರ್ತಿ (60) ಎಂದು ಗುರುತಿಸಲಾಗಿದೆ. ಬೈಕ್ ಸವಾರರಿಬ್ಬರ ಕೈ, ಕಾಲಿಗೆ ಗಂಭೀರ ಗಾಯಗಳಾಗಿದೆ. ಇಬ್ಬರನ್ನೂ ಚಿಕ್ಕಮಗಳೂರು (Chikkamagaluru) ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಮಂಜುನಾಥ್ ಅವರ ಮೊಮ್ಮಗನನ್ನು ಶಾಲೆಗೆ ಬಿಡಲು ಬೈಕ್‌ನಲ್ಲಿ ಕಡೂರಿಗೆ ತೆರಳುವಾಗ ಚಿರತೆ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ತಾಯಿಯನ್ನು ಕೊಂದ ಪಾಪಿಯಿಂದ ತಂದೆಯ ಮೇಲೂ ಮೃಗೀಯ ವರ್ತನೆ – ಚರ್ಮ ಸುಲಿಯುವಂತೆ ಹಲ್ಲೆ

    ಸಿದ್ದರಹಳ್ಳಿ, ಮದಗದಕೆರೆ, ಎಮ್ಮೆದೊಡ್ಡಿ ಭಾಗದಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಇನ್ನೂ ಮದಗದ ಕೆರೆ ತಪ್ಪಲಿನಲ್ಲಿ ಚಿರತೆ ಇರುವುದರಿಂದ ಪ್ರವಾಸಿಗರು ಹೋಗದಂತೆ ಸ್ಥಳೀಯರು ಮನವಿ ಮಾಡಿದ್ದಾರೆ.

    ಕಡೂರು ಅರಣ್ಯ ಇಲಾಖೆ ಹಾಗೂ ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ತಾಯಿಗೆ ಬೆಂಕಿ – ಶವದ ಪಕ್ಕವೇ ಮಲಗಿದ್ದ ಪುತ್ರ ಅರೆಸ್ಟ್‌

  • ಚಿಕ್ಕಮಗಳೂರು| ಬೈಕಿಗೆ ಹಿಂದಿನಿಂದ ಪೊಲೀಸ್ ಜೀಪ್ ಡಿಕ್ಕಿ – ಸವಾರ ಸ್ಥಳದಲ್ಲೇ ಸಾವು

    ಚಿಕ್ಕಮಗಳೂರು| ಬೈಕಿಗೆ ಹಿಂದಿನಿಂದ ಪೊಲೀಸ್ ಜೀಪ್ ಡಿಕ್ಕಿ – ಸವಾರ ಸ್ಥಳದಲ್ಲೇ ಸಾವು

    – ಜೀಪ್ ಚಾಲಕ ಅಮಾನತು

    ಚಿಕ್ಕಮಗಳೂರು: ಬೈಕಿಗೆ ಹಿಂದಿನಿಂದ ಪೊಲೀಸ್ ಜೀಪ್ (Police Jeep) ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕಡೂರು  (Kadur) ತಾಲೂಕಿನ ಮಚ್ಚೇರಿ ಸಮೀಪದ ಶ್ರೀರಂಗ ಕಾಂಕ್ರೀಟ್ ಪ್ರಾಡಕ್ಟ್ ಬಳಿ ನಡೆದಿದೆ.

    ಮೃತನನ್ನು ಕಡೂರು ತಾಲೂಕಿನ ಸಿಂಗಟಗೆರೆ ಹೋಬಳಿ ಸಮೀಪದ ಪಟ್ಟೇದೇವರಹಳ್ಳಿಯ 47 ವರ್ಷದ ಗಂಗೋಜಿ ರಾವ್ ಎಂದು ತಿಳಿದು ಬಂದಿದೆ. ಮೃತ ಗಂಗೋಜಿರಾವ್ ಕಡೂರಿನಿಂದ ಪಟ್ಟೇದೇವರಹಳ್ಳಿಗೆ ಹೋಗುತ್ತಿದ್ದರು. ಸಿಂಗಟಗೆರೆ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಜೀಪ್ ಕೂಡ ಕಡೂರಿನಿಂದ ಸಿಂಗಟಗೆರೆ ಪೋಲಿಸ್ ಸ್ಟೇಷನ್‌ಗೆ ಹೋಗುತ್ತಿತ್ತು. ಈ ವೇಳೆ ಮಚ್ಚೇರಿಯ ಶ್ರೀರಂಗ ಕಾಂಕ್ರೀಟ್ ಪ್ರಾಡಕ್ಟ್ ಬಳಿ ಗಂಗೋಜಿರಾವ್ ತನ್ನ ಬೈಕ್ ನಿಲ್ಲಿಸಿಕೊಂಡು ಫೋನ್‌ನಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಕಡೂರು ಕಡೆಯಿಂದ ಬಂದ ಸಿಂಗಟಗೆರೆ ಠಾಣೆಯ ಪೊಲೀಸ್ ಜೀಪ್ ಸ್ಕೂಟಿಗೆ ಡಿಕ್ಕಿಯಾಗಿ ಗಂಗೋಜಿರಾವ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಆಯುಷ್ಮಾನ್ ಭಾರತ್ ವ್ಯಾಪ್ತಿಗೆ ಹೃದಯಾಘಾತ, ಪಾರ್ಶ್ವವಾಯುಗೆ ಚಿಕಿತ್ಸೆ ತರಲು ಹೆಚ್.ಡಿ.ದೇವೇಗೌಡರ ಒತ್ತಾಯ

    ಇತ್ತ ಪೊಲೀಸ್ ಜೀಪ್ ಚಾಲಕ ಜೀಪ್ ನಿಲ್ಲಿಸದೇ ಹೊರಟು ಹೋಗಿದ್ದಾನೆ. ಮೃತನ ಪತ್ನಿ ಸಂಬಂಧಿಕರು ಪೊಲೀಸ್ ಚಾಲಕನ ವರ್ತನೆಯನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿ ಚಾಲಕನನ್ನು ಬಂಧಿಸುವ ತನಕ ಶವ ತೆಗೆಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಸ್ಥಳಕ್ಕೆ ಆಗಮಿಸಿದ ತರೀಕೆರೆ ಡಿವೈಎಸ್ಪಿ ಹಾಲಮೂರ್ತಿ ರಾವ್ ಮೃತರ ಕುಟುಂಬಸ್ಥರನ್ನ ಸಮಾಧಾನ ಮಾಡಿ ಶವವನ್ನು ಕಡೂರು ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದ್ದಾರೆ. ಇದನ್ನೂ ಓದಿ: ಅಂತಾರಾಜ್ಯ ಜಲ ವಿವಾದ ಬಗೆಹರಿಸಲು ನ್ಯಾಯ ಮಂಡಳಿ ಸ್ಥಾಪನೆಗೆ ಸಂಸದ ಬಸವರಾಜ ಬೊಮ್ಮಾಯಿ ಸಲಹೆ

    ಅಫಘಾತಕ್ಕೆ ಕಾರಣವಾದ ಪೊಲೀಸ್ ಜೀಪನ್ನು ಕಡೂರು ಪೊಲೀಸರು ಸೀಜ್ ಮಾಡಿದ್ದು, ಜೀಪ್ ಚಾಲಕ ಶಿವಕುಮಾರ್‌ನನ್ನು ಎಸ್ಪಿ ವಿಕ್ರಂ ಅಮ್ಟೆ ಅಮಾನತು ಮಾಡಿ ಆದೇಶಿಸಿದ್ದಾರೆ. ಜೀಪ್ ಚಾಲಕ ಶಿವಕುಮಾರ್‌ನನ್ನ ಕಡೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ಸಂಬಂಧ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಉಡುಪಿ| ಮೀನು ಕದ್ದಳೆಂದು ಮರಕ್ಕೆ ಕಟ್ಟಿಹಾಕಿ ಮಹಿಳೆಗೆ ಥಳಿತ; ನಾಲ್ವರ ಬಂಧನ

  • ಭಾನುವಾರ ಮಾಡಿದ್ದ ಬಿರಿಯಾನಿಯನ್ನು ಸೋಮವಾರ ತಿಂದು 17 ಜನ ಅಸ್ವಸ್ಥ

    ಭಾನುವಾರ ಮಾಡಿದ್ದ ಬಿರಿಯಾನಿಯನ್ನು ಸೋಮವಾರ ತಿಂದು 17 ಜನ ಅಸ್ವಸ್ಥ

    ಚಿಕ್ಕಮಗಳೂರು: ಭಾನುವಾರ ಮಾಡಿದ್ದ ಬಿರಿಯಾನಿಯನ್ನು (Biriyani) ಸೋಮವಾರ ತಿಂದು 17 ಜನ ಅಸ್ವಸ್ಥರಾಗಿ ಆಸ್ಪತ್ರೆ ಸೇರಿರುವ ಘಟನೆ ಜಿಲ್ಲೆಯ ಕಡೂರು (Kadur) ತಾಲೂಕಿನ ಮರವಂಜಿ ಗ್ರಾಮದಲ್ಲಿ ನಡೆದಿದೆ.

    ತಾಲೂಕಿನ ಮರವಂಜಿ ಗ್ರಾಮದ ಮನೆಯೊಂದರಲ್ಲಿ ಖಾಸಗಿ ಕಾರ್ಯಕ್ರಮವೊಂದು ನಡೆದಿತ್ತು. ಕಾರ್ಯಕ್ರಮ ಮುಗಿದ ಬಳಿಕ ಸಂಬಂಧಿಕರಿಗಾಗಿ ಬಿರಿಯಾನಿ ತಯಾರಿಸಿದ್ದರು. ಭಾನುವಾರ ಮಾಡಿದ್ದ ಬಿರಿಯಾನಿಯನ್ನು ಸೋಮವಾರ ತಿಂದ 17 ಜನ ಗ್ರಾಮಸ್ಥರು ಅಸ್ವಸ್ಥರಾಗಿ ಕಡೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

    ಮರವಂಜಿ ಗ್ರಾಮದ ಮನೆಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ತಯಾರಿಸಿದ ಬಿರಿಯಾನಿಯನ್ನು ಸೋಮವಾರ ಕುಟುಂಬಸ್ಥರು ಹಾಗೂ ಕೆಲ ಗ್ರಾಮಸ್ಥರು ಸೇವಿಸಿದ್ದಾರೆ. ಸೇವಿಸಿದ ಸ್ವಲ್ಪ ಹೊತ್ತಿನ ಬಳಿಕ ವಾಂತಿ-ಭೇದಿಯಿಂದ ಅಸ್ವಸ್ಥಗೊಂಡ ಹಿನ್ನೆಲೆ ಗ್ರಾಮಸ್ಥರು ಅಂಬುಲೆನ್ಸ್‌ನಲ್ಲಿ ಎಲ್ಲರನ್ನೂ ಕಡೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನೂ ಓದಿ: ದಣಿದಿದ್ದ ರಾಹುಲ್ ಗಾಂಧಿಗೆ ಸೌತೆಕಾಯಿ ನೀಡಿದ್ದ ಅಜ್ಜಿ ನಿಧನ

    ಭಾನುವಾರ ತಯಾರಿಸಿದ್ದ ಮಾಂಸಾಹಾರ ಸೋಮವಾರ ವಿಷಪೂರಿತಗೊಂಡಿದ್ದು, ಅದನ್ನೇ ಗ್ರಾಮಸ್ಥರು ಸೇವಿಸಿದ್ದರಿಂದ ವಾಂತಿ-ಭೇದಿ ಕಾಣಿಸಿಕೊಂಡಿದೆ. ಕೂಡಲೇ ಪ್ರಾಥಮಿಕ ಚಿಕಿತ್ಸೆ ನೀಡಿದ್ದರಿಂದ ಯಾರ ಪ್ರಾಣಕ್ಕೂ ತೊಂದರೆ ಇಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಆಸ್ಪತ್ರೆಗೆ ದಾಖಲಾದ ಗ್ರಾಮಸ್ಥರ ಪೈಕಿ 8 ಪುರುಷರು ಹಾಗೂ 9 ಮಹಿಳೆಯರು ಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ವಿಷಯ ತಿಳಿದು ಕಡೂರು ಶಾಸಕ ಕೆಎಸ್ ಆನಂದ್ ಆಸ್ಪತ್ರೆಗೆ ಭೇಟಿ ನೀಡಿ ಅಸ್ವಸ್ಥಗೊಂಡವರ ಯೋಗಕ್ಷೇಮ ವಿಚಾರಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಉದ್ಯಮಿಗಳಿಗೆ ಐಟಿ ಅಧಿಕಾರಿಗಳು ಶಾಕ್ 

  • 1 ತಿಂಗಳ ಕರೆಂಟ್ ಬಿಲ್ 10 ಲಕ್ಷ! – ಗ್ರಾಹಕ ಶಾಕ್

    1 ತಿಂಗಳ ಕರೆಂಟ್ ಬಿಲ್ 10 ಲಕ್ಷ! – ಗ್ರಾಹಕ ಶಾಕ್

    ಚಿಕ್ಕಮಗಳೂರು: ಆಗಸ್ಟ್ 1 ರಿಂದ ಸೆಪ್ಟೆಂಬರ್ 1 ರವರೆಗೆ ಒಂದು ತಿಂಗಳ ಕರೆಂಟ್ ಬಿಲ್ (Electricity Bill) 10 ಲಕ್ಷ ರೂ. ಬಂದಿದ್ದು ಅಂಗಡಿ ಮಾಲೀಕ ಶಾಕ್ ಆಗಿರುವ ಘಟನೆ ಜಿಲ್ಲೆಯ ಕಡೂರು (Kadur) ಪಟ್ಟಣದಲ್ಲಿ ನಡೆದಿದೆ.

    ಕಡೂರು ಪಟ್ಟಣದ ಉಳುಕಿನಕಲ್ಲು ಸಮೀಪದ ಡಾಗಾ ಕಾಂಪ್ಲೆಕ್ಸ್ನಲ್ಲಿನ ಮೋಹಿತ್ ಏಜೆನ್ಸಿಗೆ ಆಗಸ್ಟ್ ತಿಂಗಳ ವಿದ್ಯುತ್ ಬಿಲ್ 10,26,054 ರೂ. ಬಂದಿದೆ. ಪ್ರತಿ ತಿಂಗಳು ವಿದ್ಯುತ್ ಬಿಲ್ ಅಂದಾಜು 4,000 ದಿಂದ 4,500 ರೂ. ಮಾತ್ರ ಬರುತ್ತಿತ್ತು. ಆದರೆ ಆಗಸ್ಟ್ ತಿಂಗಳ ಬಿಲ್ ಏಕಾಏಕಿ 10 ಲಕ್ಷ ರೂ. ಬಂದಿದೆ. ಬಿಲ್ ಅವಧಿ 1/8/2023 ರಿಂದ 1/9/2023 ರವರೆಗೆ ಎಂದು ನಮೂದಿಸಲಾಗಿದೆ.

    ಈ ಹಿಂದೆ ವಿದ್ಯುತ್ ಬಿಲ್ ಅನ್ನು ಸಮಯಕ್ಕೆ ಸರಿಯಾಗಿ ಪಾವತಿಸುತ್ತಾ ಬಂದಿದ್ದೇವೆ. ಯಾವ ತಿಂಗಳು ಕೂಡಾ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿಲ್ಲ. ಆದರೆ ಈ ತಿಂಗಳು 10 ಲಕ್ಷ ರೂ. ಬಿಲ್ ನೋಡಿ ಕಡೂರು ಮೆಸ್ಕಾಂ ಅಧಿಕಾರಿಗಳನ್ನು ಸಂಪರ್ಕಿಸಿದ್ದೇವೆ. ಅವರು ಸರಿ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಆದರೆ ಮೆಸ್ಕಾಂ ಸಿಬ್ಬಂದಿಗೆ ಹೇಳಿ 4 ದಿನವಾದರೂ ಈವರೆಗೂ ಯಾವುದೇ ಮಾಹಿತಿ ನೀಡಿಲ್ಲ ಎಂದು ಅಂಗಡಿ ಮಾಲೀಕ ಕಮಲ್ ಚಂದ್ ಡಾಗಾ ಹಾಗೂ ಮೊಹಿತ್ ಡಾಗಾ ಮೆಸ್ಕಾಂ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಇಂದು ಮಧ್ಯರಾತ್ರಿಯಿಂದ್ಲೇ ಬಂದ್ ಬಿಸಿ- ಸೋಮವಾರ ಆಟೋ, ಟ್ಯಾಕ್ಸಿ ಸಿಗೋದು ಅನುಮಾನ

    500 ರೂ. ಬರುವ ಜಾಗದಲ್ಲಿ 15 ಸಾವಿರ ರೂ. ಬಂದಿದೆ. ಇದು ಸಾಫ್ಟ್‌ವೇರ್ ಪ್ರಾಬ್ಲಂ. ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಮೆಸ್ಕಾಂ ಸಿಬ್ಬಂದಿ ತಿಳಿಸಿದ್ದಾರೆ. ಇದನ್ನೂ ಓದಿ: ರಸ್ತೆಯಲ್ಲಿ ಕುರಿಬಲಿ ಕೊಟ್ಟಿದ್ದನ್ನು ಪ್ರಶ್ನಿಸಿದ್ದಕ್ಕೆ ಯುವಕರಿಬ್ಬರ ಮೇಲೆ ಹಲ್ಲೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚಿಕ್ಕಮಗಳೂರಲ್ಲಿ ಧಾರಾಕಾರ ಮಳೆ- ಅಪಾರ ಪ್ರಮಾಣದ ಬೆಳೆ ನಾಶ

    ಚಿಕ್ಕಮಗಳೂರಲ್ಲಿ ಧಾರಾಕಾರ ಮಳೆ- ಅಪಾರ ಪ್ರಮಾಣದ ಬೆಳೆ ನಾಶ

    – ರಸ್ತೆ ಸಂಪರ್ಕ ಕಡಿತಗೊಂಡು ಜನರ ಪರದಾಟ

    ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಲ್ಲಿ (Chikkamagaluru) ಧಾರಾಕಾರವಾಗಿ ಮಳೆ (Rain) ಸುರಿದಿದ್ದು, ಭಾರೀ ಪ್ರಮಾಣದ ಬೆಳೆಗಳು ನಾಶವಾಗಿದೆ. ಅಲ್ಲದೇ ಗ್ರಾಮೀಣ ಭಾಗದಲ್ಲಿ ರಸ್ತೆ (Road) ಸಂಪರ್ಕ ಕಡಿತಗೊಂಡು ಜನರು ಪರದಾಡುತ್ತಿದ್ದಾರೆ.

    ಬುಧವಾರ ಚಿಕ್ಕಮಗಳೂರಿನ ಹಲವೆಡೆ ವರುಣನ ಆಗಮನವಾಗಿದೆ. ಕಡೂರು (Kadur) ತಾಲೂಕಿನ ಸಖರಾಯಪಟ್ಟಣ (Sakharayapatna) ಸುತ್ತಮುತ್ತ ಭಾರೀ ಮಳೆಯಾಗಿದೆ. ಹುಲಿಕೆರೆ, ಕೇತಮಾರನಹಳ್ಳಿಯಲ್ಲಿ ಧಾರಾಕಾರ ಮಳೆಯಿಂದಾಗಿ ಅನಾಹುತ ಸೃಷ್ಟಿಯಾಗಿದೆ. ಮಳೆಯಿಂದಾಗಿ ಕೆರೆ ಕೋಡಿ ಬಿದ್ದುಹೋಗಿ ನೀರು ರಸ್ತೆ ಮೇಲೆ ಹರಿಯುತ್ತಿದೆ. ಇದನ್ನೂ ಓದಿ: ಬಿಜೆಪಿಯಿಂದ ಸರಣಿ ಸಭೆ- ಸೋಲಿನ ಪರಾಮರ್ಶೆ ಮಾಡಲಿರುವ ನಾಯಕರು

    ಕೋಡಿ ನೀರು ಜಮೀನು ಹಾಗೂ ಗದ್ದೆಗಳಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆಗಳು ನಾಶವಾಗಿದೆ. ಅಲ್ಲದೇ ಗ್ರಾಮೀಣ ಭಾಗದ ರಸ್ತೆ ಸಂಪರ್ಕ ಕಡಿತಗೊಂಡು ಜನರು ಪರದಾಡುವಂತಾಗಿದೆ. ಬೆಳೆ ಚಿಗುರುವ ಸಮಯದಲ್ಲಿ ಭಾರೀ ಮಳೆ ಸುರಿದಿದ್ದು, ಮಳೆಯಿಂದಾಗಿ ನೀರು ಹೊಲದಲ್ಲಿ ನಿಂತು ಅಪಾರ ಬೆಳೆಗಳು ನಾಶವಾಗಿವೆ. ಇದನ್ನೂ ಓದಿ: ನಿಂತಿದ್ದ ಲಾರಿಗೆ ಶವ ಸಾಗಿಸ್ತಿದ್ದ ಅಂಬುಲೆನ್ಸ್ ಡಿಕ್ಕಿ- ಮೂವರ ದುರ್ಮರಣ!

  • ‘ಕೈ’ ತಪ್ಪಿದ ಟಿಕೆಟ್‌: ಸ್ವತಂತ್ರ ಅಭ್ಯರ್ಥಿಯಾಗಿ ವೈಎಸ್‌ವಿ ದತ್ತ ಸ್ಪರ್ಧೆ

    ‘ಕೈ’ ತಪ್ಪಿದ ಟಿಕೆಟ್‌: ಸ್ವತಂತ್ರ ಅಭ್ಯರ್ಥಿಯಾಗಿ ವೈಎಸ್‌ವಿ ದತ್ತ ಸ್ಪರ್ಧೆ

    – ಚುನಾವಣೆ ಖರ್ಚಿಗಾಗಿ ಟವೆಲ್‌ ಹಿಡಿದು ಜನರಿಂದ ಭಿಕ್ಷೆ

    ಚಿಕ್ಕಮಗಳೂರು: ಕಡೂರು (Kadur) ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆಗೆ ಕಾಂಗ್ರೆಸ್‌ನಿಂದ ಟಿಕೆಟ್‌ ಕೈತಪ್ಪಿದ ಕಾರಣಕ್ಕೆ ಮಾಜಿ ಎಂಎಲ್‌ಸಿ ವೈಎಸ್‌ವಿ ದತ್ತ (YSV Datta) ಅವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸುಳಿವು ಕೊಟ್ಟಿದ್ದಾರೆ.

    ಭಾನುವಾರ ನಡೆದ ಸ್ವಾಭಿಮಾನದ ಸಭೆಯಲ್ಲಿ, ಕಡೂರು ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ವೈಎಸ್‌ವಿ ದತ್ತ ಅವರಿಗೆ ಬೆಂಬಲಿಗರು ಒತ್ತಾಯಿಸಿದರು. ಬೆಂಬಲಿಗರ ಒತ್ತಾಯಕ್ಕೆ ದತ್ತ ಒಪ್ಪಿಗೆ ಸೂಚಿಸಿದ್ದಾರೆ. ಅಷ್ಟೇ ಅಲ್ಲದೇ ಚುನಾವಣೆಯಲ್ಲಿ ಸ್ಪರ್ಧೆ ಖರ್ಚಿಗಾಗಿ ಟವೆಲ್‌ ಹಿಡಿದು ಸಭೆಯಲ್ಲಿ ಜನರಿಂದ ಭಿಕ್ಷೆ ಕೂಡ ಎತ್ತಿದ್ದಾರೆ. ಇದನ್ನೂ ಓದಿ: ನೇಕಾರರ ನಾಡಲ್ಲಿ ಯಾರಿಗೆ ಟಿಕೆಟ್- ಎರಡೂ ಪಕ್ಷದಲ್ಲೂ ಎದ್ದಿದೆ ಅಸಮಾಧಾನದ ಬಿರುಗಾಳಿ

    ಅಭಿಮಾನಿಗಳು 50 ಸಾವಿರ, ಲಕ್ಷ ಹಾಗೂ 2 ಲಕ್ಷ ಹೀಗೆ ಹಣ ಮತ್ತು ಚೆಕ್‌ ಕೂಡ ನೀಡಿದ್ದಾರೆ. ಮತ್ತಷ್ಟು ಹಣ ಕೊಡುವುದಾಗಿಯೂ ಭರವಸೆಯನ್ನು ನೀಡಿದ್ದಾರೆ. ಅಭಿಮಾನಿಗಳ ಭರಪೂರ ಬೆಂಬಲಕ್ಕಾಗಿ ಈ ಬಾರಿ ಚುನಾವಣೆಯಲ್ಲಿ ಕಡೂರು ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸುಳಿವನ್ನು ದತ್ತ ಅವರು ಕೊಟ್ಟಿದ್ದಾರೆ.

    ಜೆಡಿಎಸ್‌ ತೊರೆದು ಈಚೆಗೆ ಕಾಂಗ್ರೆಸ್‌ ಸೇರಿದ್ದ ವೈಎಸ್‌ವಿ ದತ್ತ ಅವರು ಕಡೂರು ಕ್ಷೇತ್ರ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಆದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಜೊತೆಗಿನ ಒಳಮುನಿಸಿನಿಂದ ಟಿಕೆಟ್‌ ಕೈತಪ್ಪಿದೆ ಎನ್ನಲಾಗುತ್ತಿದೆ. ಕಾಂಗ್ರೆಸ್‌ ಸೇರುವಾಗ ಬೇಷರತ್ತಾಗಿ ಪಕ್ಷ ಸೇರುತ್ತಿದ್ದೇನೆ ಎಂದು ದತ್ತ ಹೇಳಿದ್ದರು. ಆದರೆ ಟಿಕೆಟ್‌ ಗಿಟ್ಟಿಸಲು ಒಳಗೊಳಗೆ ಸಾಕಷ್ಟು ಪ್ರಯತ್ನ ನಡೆಸಿದ್ದರು. ಇದನ್ನೂ ಓದಿ: ಕಾಂಗ್ರೆಸ್ ಟಿಕೆಟ್ ಹರಾಜಾಗಿದ್ದು, ಚುನಾವಣೆ ಮಾಡುವಷ್ಟೇ ಹಣ ನೀಡಿದ್ದಾರೆ – ಎಸ್.ಕೆ ಬಸವರಾಜನ್ ಕಿಡಿ

    ಕಾಂಗ್ರೆಸ್‌ ಹೈಕಮಾಂಡ್‌ ಬಿಡುಗಡೆ ಮಾಡಿದ ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ದತ್ತ ಅವರಿಗೆ ಟಿಕೆಟ್‌ ಕೈತಪ್ಪಿದೆ. ದತ್ತ ಬದಲಿಗೆ ಕೆ.ಎಸ್‌.ಆನಂದ್‌ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದೆ.

  • ಚುನಾವಣೆ ಖರ್ಚಿಗಾಗಿ ವೈಎಸ್‌ವಿ ದತ್ತಗೆ 101 ರೂ. ನೀಡಿದ ಅಭಿಮಾನಿ

    ಚುನಾವಣೆ ಖರ್ಚಿಗಾಗಿ ವೈಎಸ್‌ವಿ ದತ್ತಗೆ 101 ರೂ. ನೀಡಿದ ಅಭಿಮಾನಿ

    ಚಿಕ್ಕಮಗಳೂರು: ಜಿಲ್ಲೆಯ ಕಡೂರು (Kadur) ತಾಲೂಕಿನ ಮಾಜಿ ಶಾಸಕ ಹಾಗೂ ದತ್ತ ಮೇಷ್ಟ್ರು ಎಂದೇ ಖ್ಯಾತಿಯಾಗಿರುವ ವೈ.ಎಸ್.ವಿ. ದತ್ತ (YSV Datta) ಅವರಿಗೆ ಚುನಾವಣೆ ಖರ್ಚಿಗಾಗಿ ಅಭಿಮಾನಿಯೊಬ್ಬ 101 ರೂ. ಹಣ ನೀಡಿ ಶುಭ ಕೋರಿದ್ದಾರೆ.

    ಕಳೆದ 50 ವರ್ಷಗಳಿಂದ ಜೆಡಿಎಸ್‌ನ ಕಟ್ಟಾಳಾಗಿದ್ದ ವೈ.ಎಸ್.ವಿ.ದತ್ತ, ಮಾಜಿ ಪ್ರಧಾನಿ ದೇವೇಗೌಡರ ಮಾನಸ ಪುತ್ರನಂತೆಯೇ ಇದ್ದರು. ಆದರೆ, ಕಳೆದ 2 ತಿಂಗಳ ಹಿಂದೆ ಜೆಡಿಎಸ್ (JDS) ತೊರೆದು ಕಾಂಗ್ರೆಸ್ ಸೇರಿದ್ದರು. ಈಗ ಕಡೂರಿನ ಕಾಂಗ್ರೆಸ್ (Congress) ಅಭ್ಯರ್ಥಿ ಎಂದೇ ಬಿಂಬಿತವಾಗಿದ್ದಾರೆ. ಹಾಗಾಗಿ, ಕಡೂರು ತಾಲೂಕಿನ ಗಿರಿಯಾಪುರ ಮೂಲದ ವ್ಯಕ್ತಿಯೊಬ್ಬರು 101 ರೂಪಾಯಿ ದಾನ ನೀಡಿ ಚುನಾವಣೆಗೆ ಶುಭ ಕೋರಿದ್ದಾರೆ.

    ಕ್ಷೇತ್ರ ಹಾಗೂ ಮತದಾರರ ಮೇಲೆ ನಿಮಗೆ ಇದ್ದ ಪ್ರೀತಿ, ಕಾಳಜಿ, ಅಭಿಮಾನ ಹಾಗೂ ನೀವು ಮಾಡಿದ ಅಭಿವೃದ್ಧಿ ನೆನಪಿನಲ್ಲಿ ಉಳಿಯುವಂತದ್ದು. ಆಳ್ವಾಸ್ ನುಡಿಸಿರಿಯಲ್ಲಿ ಅಖಂಡ ಕರ್ನಾಟಕದ ವಿಷಯವಾಗಿ ನೀವು ಬಿತ್ತರಿಸಿದ ನಾಡಿನ ಅಖಂಡತೆಯ ವಿಚಾರಗಳು ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ. ನಿಮಗಿರುವ ಮಳೆ ನೀರು ಶೇಖರಣೆ ಹಾಗೂ ಪ್ರಕೃತಿ ಉಳಿಸುವ ಪರಿಕಲ್ಪನೆ ಜನರನ್ನು ಆಕರ್ಷಿಸಿದೆ. ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡುವ ನಿಮ್ಮ ವ್ಯಕ್ತಿತ್ವಕ್ಕೆ ಜನ ನಿಮ್ಮ ಜೊತೆಗಿದ್ದಾರೆ. ನಿಮಗೆ ಜನಸಾಮಾನ್ಯರ ಸಮಸ್ಯೆಯನ್ನು ಬಗೆಹರಿಸುವ ಹೊಸ ಜವಾಬ್ದಾರಿ ಇದೆ. ಅದನ್ನು ನಿರ್ವಹಿಸುತ್ತೀರಾ ಎಂದು ನಂಬಿದ್ದೇವೆ ಎಂದು ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಬಿಜೆಪಿಯಲ್ಲಿ ಟಿಕೆಟ್ ಕೊಟ್ಟರೆ ನಿಂತ್ಕೊತೀನಿ, ಇಲ್ಲ ಅಂದ್ರೆ ಇಲ್ಲ: ಸೋಮಣ್ಣ

    ನಾನು ಆರ್ಥಿಕವಾಗಿ ಶಕ್ತಿವಂತನಲ್ಲ. ಹಾಗಾಗಿ, ನಿಮಗೆ ಚಿಕ್ಕ ಕಾಣಿಕೆ ನೀಡಿದ್ದೇನೆ. ನಮ್ಮ ಮನೆಯವರ ಎಲ್ಲಾ ಮತಗಳನ್ನು ನಿಮಗೆ ನೀಡುತ್ತೇವೆ.‌ ಸಮಾನ ಮನಸ್ಕರಾದ ಜೊತೆ ಮಾತನಾಡಿ ತಮ್ಮ ಕೈ ಬಲಗೊಳ್ಳಲು ಸಹಕರಿಸುತ್ತೇವೆ ಎಂದು ಪತ್ರ ಬರೆದು, 101 ರೂಪಾಯಿ ಹಣ ನೀಡಿ ವೈ.ಎಸ್.ವಿ. ದತ್ತ ಅವರಿಗೆ ಶುಭ ಕೋರಿದ್ದಾರೆ. ಇದನ್ನೂ ಓದಿ: ಪತ್ನಿ ತಡವಾಗಿ ಏಳುತ್ತಾಳೆ – ಪತಿಯಿಂದ ಪೊಲೀಸರಿಗೆ ದೂರು

  • ಏಕಾಏಕಿ ಆರಂಭವಾದ ವೈನ್ ಶಾಪ್ – ಬಾಗಿಲಿಗೆ ಅಡ್ಡ ನಿಂತು ಸ್ಥಳೀಯರ ಪ್ರತಿಭಟನೆ

    ಏಕಾಏಕಿ ಆರಂಭವಾದ ವೈನ್ ಶಾಪ್ – ಬಾಗಿಲಿಗೆ ಅಡ್ಡ ನಿಂತು ಸ್ಥಳೀಯರ ಪ್ರತಿಭಟನೆ

    ಚಿಕ್ಕಮಗಳೂರು: ಏಕಾಏಕಿ ಆರಂಭವಾದ ವೈನ್ ಶಾಪನ್ನ ತೆರೆಯಲು ಗ್ರಾಮಸ್ಥರು ವಿರೋಧಿಸಿ ಬಾರ್ ಬಾಗಿಲ ಮುಂದೆಯೇ ಧರಣಿ ಕೂತು ಆಕ್ರೋಶ ವ್ಯಕ್ತಪಡಿಸಿರೋ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಅಂಚೇ ಚೋಮನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಮದ್ಯದ ಅಂಗಡಿಯನ್ನ ತೆರೆಯಲು ಅವಕಾಶ ನೀಡುವುದಿಲ್ಲ ಎಂದು ಅಂಚೇ ಚೋಮನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಬಾರ್ ಮುಂದೆಯೇ ಪ್ರತಿಭಟಿಸಿದ್ದಾರೆ. ಬಾರ್ ತೆರೆಯಲು ಸ್ಥಳೀಯ ಗ್ರಾಮ ಪಂಚಾಯಿತಿಯ ಅನುಮತಿಯನ್ನೇ ಪಡೆದಿಲ್ಲ. ಸಾಲದಕ್ಕೆ ಯಾವುದೇ ನಿಯಮ ಪಾಲನೆ ಕೂಡ ಮಾಡದೆ ಏಕಾಏಕಿ ಮದ್ಯದಂಗಡಿ ತೆರೆದಿದ್ದಾರೆ. ಅಂಚೇ ಚೋಮನಹಳ್ಳಿ ಹಾಗೂ ಸುತ್ತಮುತ್ತ ಬಡ ಕೂಲಿ ಕಾರ್ಮಿಕರೇ ಹೆಚ್ಚಿದ್ದಾರೆ. ಅಲೆಮಾರಿ ಬುಡಕಟ್ಟು ಜನಾಂಗದವರು ಇದ್ದಾರೆ. ಇಂತಹ ಜಾಗದಲ್ಲಿ ವೈನ್ ಶಾಪ್ ತೆರೆದರೆ ಕೂಲಿ ಕಾರ್ಮಿಕರು ಕುಡಿತದಿಂದ ಮನೆ ಮಠ ಮಾರಿಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಲಿದೆ.

    ಬಡಜನರ ಬದುಕಿನ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯೂ ಇದೆ. ಜನರ ಬದುಕಿನ ಮೇಲೆ ಪರಿಣಾಮ ಬೀರುವ ಇಂತಹಾ ವೈನ್‍ಶಾಪನ್ನ ತೆರೆಯಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಬಡಜನರ ಮೇಲೆ ದುಷ್ಪರಿಣಾಮ ಬೀರುವ, ಸಾಮಾಜಿಕ ಸ್ವಾಸ್ಥ್ಯ ಕೆಡಿಸುವ ಮದ್ಯದಂಗಡಿ ನಮಗೆ ಬೇಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮದ್ಯದಂಗಡಿ ತೆರೆಯಲು ಗ್ರಾಮ ಪಂಚಾಯಿತಿಯಿಂದಲೂ ಯಾವುದೇ ಅನುಮತಿ ಪಡೆದಿಲ್ಲ. ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರಿಂದಲೂ ಮದ್ಯದಂಗಡಿ ತೆರೆಯುವ ಬಗ್ಗೆ ವಿರೋಧ ವ್ಯಕ್ತವಾಗಿದೆ, ಈ ಮದ್ಯದಂಗಡಿ ತೆರೆಯಲು ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಪಂಚಾಯಿತಿ ಕೂಡ ಸ್ಪಷ್ಟಪಡಿಸಿದೆ.

  • ಭಾರೀ ಮಳೆ, ಗಾಳಿಗೆ ಮುರಿದ ಬಿದ್ದ ಟವರ್- ತಪ್ಪಿದ ಅನಾಹುತ

    ಭಾರೀ ಮಳೆ, ಗಾಳಿಗೆ ಮುರಿದ ಬಿದ್ದ ಟವರ್- ತಪ್ಪಿದ ಅನಾಹುತ

    ಚಿಕ್ಕಮಗಳೂರು: ಜಿಲ್ಲೆಯ ಬಯಲುಸೀಮೆ ಭಾಗ ಕಡೂರಿನಲ್ಲಿ ಹಲವು ದಿನಗಳಿಂದ ಕೈಕೊಟ್ಟಿದ್ದ ಮಳೆರಾಯ ನಿನ್ನೆ ಧಾರಾಕಾರವಾಗಿ ಸುರಿದು ಅವಾಂತರ ಸೃಷ್ಟಿಸಿದ್ದಾನೆ.

    ಭಾರೀ ಮಳೆ ಜೊತೆ ಗಾಳಿಯ ವೇಗವೂ ಹೆಚ್ಚಿದ್ದರಿಂದ ಪಟ್ಟಣದ ಹಲವೆಡೆ ಮರಗಿಡಗಳು ಧರೆಗುರುಳಿವೆ. ತಗ್ಗು ಪ್ರದೇಶಗಳು ಜಲಾವೃತವಾಗಿ ಜನಜೀವನ ಕೂಡ ಅಸ್ತವ್ಯಸ್ತಗೊಂಡಿದೆ. ಅಲ್ಲದೇ ಹಲವು ಭಾಗಗಳಲ್ಲಿ ಮನೆ ಮೇಲಿನ ಶೀಟ್‍ಗಳು ಹಾರಿ ಹೋಗಿವೆ. ರೈಲ್ವೆ ಅಂಡರ್ ಬ್ರಿಡ್ಜ್ ಬಳಿ 5 ಅಡಿ ಎತ್ತರಕ್ಕೆ ನೀರು ನಿಂತಿದ್ದು ವಾಹನಗಳೇ ಸಂಚರಿಸಲಾಗದ ಸ್ಥಿತಿ ನಿರ್ಮಾಣವಾಗಿತ್ತು. ಕೆಲ ವಾಹನಗಳು ನೀರಿನ ಮಧ್ಯೆಯೂ ಚಲಾಯಿಸಿ ಇಂಜಿನ್‍ಗೆ ನೀರು ನುಗ್ಗಿದ ಪರಿಣಾಮ ಕೆಟ್ಟು ನಿಂತವು.

    ಸರ್ಕಾರಿ ಬಸ್ ನಿಲ್ದಾಣದ ಎದುರಿನ ನಂಜುಡೇಶ್ವರ ಲಾಡ್ಜ್ ಕಟ್ಟಡದ ಮೇಲಿದ್ದ ಮೊಬೈಲ್ ಟವರ್ ಗಾಳಿಯ ರಭಸಕ್ಕೆ ಮಗುಚಿ ಬಿದ್ದಿದೆ. ಕಟ್ಟಡದ ಮೇಲೆ ಟವರ್‍ಗೆ ಹಾಕಿದ್ದ ಅಡಿಪಾಯ ಗಟ್ಟಿಯಾಗಿದ್ದರಿಂದ ಅದೃಷ್ಟವಶಾತ್ ಟವರ್ ಕಟ್ಟಡದ ಒಂದು ಭಾಗಕ್ಕೆ ವಾಲಿಕೊಂಡಿದೆ. ಟವರ್ ಗಾಳಿಗೆ ಹಾರಿ ನಿಲ್ದಾಣದ ಮುಂದಿನ ರಸ್ತೆಗೆ ಬಿದ್ದಿದ್ದರೆ ಭಾರಿ ಅನಾಹುತವಾಗುತ್ತಿತ್ತು. ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ. ಪುಷ್ಯ ಮಳೆ ಆರಂಭಗೊಂಡು ಇಂದಿಗೆ 6 ದಿನಗಳಾಗಿದ್ದು, ವರುಣದೇವನ ಅರ್ಭಟಕ್ಕೆ ಹಲವು ಭಾಗಗಳಲ್ಲಿ ಹಾನಿಯಾಗಿದೆ.