Tag: Kadu

  • ನಾಗರಹೊಳೆ ಕಾಡಲ್ಲಿ ಸಫಾರಿ: ಹುಲಿ ಸಿಗಲಿಲ್ಲ, ಬೇಜಾರಾಯ್ತು ಎಂದ ಯಶ್

    ನಾಗರಹೊಳೆ ಕಾಡಲ್ಲಿ ಸಫಾರಿ: ಹುಲಿ ಸಿಗಲಿಲ್ಲ, ಬೇಜಾರಾಯ್ತು ಎಂದ ಯಶ್

    ಸಿನಿಮಾ ಕೆಲಸಗಳ ಬ್ಯುಸಿ ನಡುವೆಯೂ ರಾಕಿಂಗ್ ಸ್ಟಾರ್ ಯಶ್ (Yash) ಕಾಡಿಗೆ ನುಗ್ಗಿದ್ದಾರೆ. ಮಕ್ಕಳಿಗೆ ಲೈವ್ ಆಗಿ ಕಾಡು ಪ್ರಾಣಿಗಳನ್ನು ತೋರಿಸಲು ಕುಟುಂಬ ಸಮೇತ ನಾಗರಹೊಳೆ (Nagarhole) ಕಾಡಿಗೆ ಬಂದಿದ್ದ ಅವರು, ಸತತ ಮೂರು ದಿನಗಳ ಕಾಲ ಸಫಾರಿ (Safari) ಮಾಡಿದ್ದಾರೆ. ನಾನಾ ಪ್ರಾಣಿಗಳನ್ನು ಕಣ್ತುಂಬಿ ಕೊಂಡ ಯಶ್ ಕುಟುಂಬ, ಹುಲಿ (Tiger) ಸಿಗದೇ ಹೋದ ಕಾರಣಕ್ಕಾಗಿ ಬೇಸರ ವ್ಯಕ್ತಪಡಿಸಿದ್ದಾರೆ.

    ಕೊರೋನಾದಿಂದಾಗಿ ಮೈಸೂರು ಕಡೆ ಪ್ರವಾಸ ಮಾಡಲು ಯಶ್ ಗೆ ಆಗಿರಲಿಲ್ಲವಂತೆ. ಹಾಗಾಗಿ ಇಬ್ಬರು ಮಕ್ಕಳು, ಪತ್ನಿ ರಾಧಿಕಾ ಪಂಡಿತ್ (Radhika Pandit) ಮತ್ತು ಅತ್ತೆ, ಮಾವನ ಜೊತೆ ಮೈಸೂರಿಗೆ ಆಗಮಿಸಿದ್ದರು. ಮೈಸೂರಿನ ಸುತ್ತ ಮುತ್ತಲಿನ ಸ್ಥಳಗಳನ್ನು ಮಕ್ಕಳಿಗೆ ತೋರಿಸಿದರು. ಅದರಲ್ಲೂ ಮಕ್ಕಳಿಗೆ ಇದು ಮೊದಲ ರಿಯಲ್ ಫಾರೆಸ್ಟ್ ಪ್ರವಾಸವಾಗಿದ್ದರಿಂದ ಆ ಸಂಭ್ರಮವನ್ನು ಹಂಚಿಕೊಂಡರು.

    ಮಾಧ್ಯಮಗಳೊಂದಿಗೆ ಮಾತನಾಡಿದ ಯಶ್, ‘ನಾವು ಮತ್ತು ಮಕ್ಕಳು ಕೂಡ ಸಫಾರಿ ಎಂಜಾಯ್ ಮಾಡಿದ್ರು. ಸಫಾರಿಯಲ್ಲಿ ಜಿಂಕೆ, ಕರಡಿ, ಆನೆ ಎಲ್ಲೂ ಕಂಡವು. ಹುಲಿಯೊಂದು ಸಿಗಲಿಲ್ಲ, ಬೇಜಾರಾಯ್ತು.ಇವತ್ತೂ ಸಫಾರಿ ಮಾಡಬೇಕಿತ್ತು, ಮಳೆ ಕಾರಣಕ್ಕೆ ಹೋಗಲಿಲ್ಲ. ಮುಂದೆ ಮತ್ತೆ ಸಫಾರಿ ಮಾಡಿ ನೋಡಿದ್ರಾಯ್ತು ಅಂತ ಬಂದೆವು’ ಎಂದಿದ್ದಾರೆ. ಇದನ್ನೂ ಓದಿ:ಮಹೇಶ್ ಬಾಬು ಚಿತ್ರದಿಂದ ಪೂಜಾ ಹೆಗ್ಡೆ ಕಿಕ್ ಔಟ್- ತ್ರಿಷಾ ಇನ್?

    ಸಫಾರಿ ಮುಗಿಸಿಕೊಂಡು ಕುಟುಂಬ ಸಮೇತ ಇಂದು ಯಶ್ ನಂಜನಗೂಡಿಗೆ ಆಗಮಿಸಿ, ನಂಜುಂಡೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಮಕ್ಕಳು ಹಾಗೂ ಅತ್ತೆ ಮಾವ ಸಮೇತ ದೇವಸ್ಥಾನಕ್ಕೆ ಆಗಮಿಸಿದ್ದ ಯಶ್ ಕೆಲ ಹೊತ್ತು ದೇವಸ್ಥಾನದಲ್ಲೇ ಇದ್ದು ನಂಜುಂಡೇಶ್ವರನ ದರ್ಶನ ಪಡೆದರು.

    ಸಿನಿಮಾ ಕೆಲಸಗಳ ಮಧ್ಯೆಯೇ ಬಿಡುವು ಮಾಡಿಕೊಂಡು ಫ್ಯಾಮಿಲಿಗೆ ಟೈಮ್ ಕೊಟ್ಟಿದ್ದಾರೆ ಯಶ್. ಕಳೆದ ಮೂರು ದಿನಗಳಿಂದ ಅವರು ಮೈಸೂರು ಭಾಗದಲ್ಲಿ ಪ್ರವಾಸದಲ್ಲಿದ್ದರು. ನಾಗರ ಹೊಳೆ, ಬಂಡೀಪುರ ಅರಣ್ಯದಲ್ಲಿ ಸಫಾರಿ ನಡುವೆ ಶ್ರೀಕಂಠೇಶ್ವರ ದೇವರಿಗೆ ಪೂಜೆ ನೆರವೇರಿಸಿದ್ದಾರೆ.