Tag: kadri temple

  • ಕದ್ರಿ ದೇಗುಲಕ್ಕೆ ನುಗ್ಗಲು ಯತ್ನಿಸಿದ ಮೂವರು!

    ಕದ್ರಿ ದೇಗುಲಕ್ಕೆ ನುಗ್ಗಲು ಯತ್ನಿಸಿದ ಮೂವರು!

    ಮಂಗಳೂರು: ನಗರದ ಪುರಾಣ ಪ್ರಸಿದ್ಧ ಕದ್ರಿ ಶ್ರೀ ಮಂಜುನಾಥ ದೇವಾಲಯ (Kadri Manjunath Temple) ಕ್ಕೆ ಮೂವರು ಅಪರಿಚಿತ ವ್ಯಕ್ತಿಗಳು ನುಗ್ಗಲು ಯತ್ನಿಸಿದ ಘಟನೆ ನಡೆದಿದೆ.

    ಬೈಕ್ ನಲ್ಲಿ ಬಂದ ಮೂವರು ದೇವಾಲಯದ ಆವರಣ ಪ್ರವೇಶಿಸಿದ್ದಾರೆ. ಈ ವೇಳೆ ಅನುಮಾನಗೊಂಡ ಸ್ಥಳೀಯರು ಮೂವರನ್ನೂ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಅಸೈಗೋಳಿ ನಿವಾಸಿ ಹಸನ್ ಶಾಹಿನ್, ಜಾಫರ್ ಹಾಗೂ ಫಾರೂಕ್‍ನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.

    ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು, ಮೂವರನ್ನು ಕದ್ರಿ ಠಾಣೆ (Kadri Police Station) ಗೆ ಕರೆದೊಯ್ದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಹಿಂದೆ ಶಂಕಿತ ಉಗ್ರ ಶಾರೀಕ್ (Shariq) ಕದ್ರಿ ದೇವಾಲಯವನ್ನು ಟಾರ್ಗೆಟ್ ಮಾಡಿದ್ದ. ಅಲ್ಲದೇ ಕದ್ರಿ ದೇವಾಲಯ ಆವರಣದಲ್ಲಿ ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸಿ ಭಯದ ವಾತಾವರಣ ಸೃಷ್ಟಿಸಿದ್ದನು.

     

  • ಕುಕ್ಕರ್ ಬಾಂಬ್ ಸ್ಫೋಟ ಕೇಸ್ – ಕದ್ರಿ ದೇವಸ್ಥಾನದ ಚಪ್ಪಲಿ ಸ್ಟ್ಯಾಂಡ್ ಶಾರೀಕ್ ಟಾರ್ಗೆಟ್!

    ಕುಕ್ಕರ್ ಬಾಂಬ್ ಸ್ಫೋಟ ಕೇಸ್ – ಕದ್ರಿ ದೇವಸ್ಥಾನದ ಚಪ್ಪಲಿ ಸ್ಟ್ಯಾಂಡ್ ಶಾರೀಕ್ ಟಾರ್ಗೆಟ್!

    ಬೆಂಗಳೂರು: ಕದ್ರಿ ದೇವಸ್ಥಾನವೇ (Kadri Temple) ಮಂಗಳೂರು (Mangaluru) ಕುಕ್ಕರ್ ಸ್ಫೋಟ (Cooker Bomb Blast) ಪ್ರಕರಣದ ಆರೋಪಿ ಶಾರೀಕ್‍ನ ಟಾರ್ಗೆಟ್ ಆಗಿತ್ತು ಎಂಬ ವಿಚಾರ ಈಗ ಬೆಳಕಿಗೆ ಬಂದಿದೆ.

    ಹೌದು. ಮಂಗಳೂರಿನ ಪಂಪ್‍ವೆಲ್, ರೈಲ್ವೇ ನಿಲ್ದಾಣ, ಆರ್‌ಎಸ್‌ಎಸ್ ಕಚೇರಿ ಶಾರೀಕ್‍ನ (Shariq) ಟಾರ್ಗೆಟ್ ಆಗಿರಬಹುದು ಎಂದು ಈ ಮೊದಲು ಅಂದಾಜಿಸಲಾಗಿತ್ತು. ಆದರೆ ಈಗ ಕದ್ರಿ ದೇವಸ್ಥಾನವೇ ಆತನ ಟಾರ್ಗೆಟ್ ಆಗಿತ್ತು ಎಂಬ ವಿಚಾರ ರಾಷ್ಟ್ರೀಯ ತನಿಖಾ ದಳದ (NIA) ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ಜಿಲ್ಲಾಧಿಕಾರಿ ಕಚೇರಿಯಲ್ಲೇ ಮಕ್ಕಳ ಜೊತೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

    ಎರಡೂವರೆ ತಿಂಗಳ ಚಿಕಿತ್ಸೆಯ ಬಳಿಕ ಶಾರೀಕ್ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಿಂದ ಮಾರ್ಚ್ 6 ರಂದು ಬಿಡುಗಡೆಯಾಗಿದ್ದ. ಸದ್ಯ ಎನ್‍ಐಎ ಕಸ್ಟಡಿಯಲ್ಲಿರುವ ಶಾರೀಕ್‍ನನ್ನು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ ಕದ್ರಿ ದೇವಸ್ಥಾನದ ಚಪ್ಪಲಿ ಸ್ಟ್ಯಾಂಡ್‍ನಲ್ಲಿ ಬಾಂಬ್ ಇಡಲು ಪ್ಲಾನ್ ಮಾಡಿದ್ದೆ ಎಂಬ ವಿಚಾರವನ್ನು ಶಾರೀಕ್ ತಿಳಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.

    ಈಗ ಎನ್‍ಐಎ (NIA) ಅಧಿಕಾರಿಗಳು ಆರೋಪಿಯನ್ನು ಕರೆದೊಯ್ದು ಸ್ಥಳ ಮಹಜರು ಮಾಡಲು ಸಿದ್ದತೆ ನಡೆಸಿದ್ದಾರೆ. ಅದರ ಜೊತೆಯಲ್ಲಿ ಜೈಲಿನಲ್ಲಿರೋ ಮತ್ತಿಬ್ಬರು ಶಂಕಿತ ಉಗ್ರ ಮಾಜ್ ಹಾಗೂ ಯಾಸಿರ್‍ನನ್ನು ಕಸ್ಟಡಿಗೆ ಪಡೆಯುವ ನಿರ್ಧಾರ ಮಾಡಿದ್ದಾರೆ.

    ಮಂಗಳೂರು ಪ್ರಕರಣದ ವಿಚಾರಣೆಯ ಬಳಿಕ ಶಾರೀಖ್‍ನನ್ನು ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಸಂಬಂಧ ವಿಚಾರಣೆ ನಡೆಸಲಿದೆ. ಟ್ರಯಲ್ ಬ್ಲಾಸ್ಟ್ ಪ್ರಕರಣದಲ್ಲಿ ಇದುವರೆಗೂ ಎಂಟು ಜನರನ್ನು ಬಂಧಿಸಿರೋ ಎನ್‍ಐಎ ತಂಡ ವಿಚಾರಣೆ ಪೂರ್ಣಗೊಳಿಸಿ ಚಾರ್ಜ್ ಶೀಟ್ ಸಲ್ಲಿಸಲು ಸಿದ್ದತೆ ನಡೆಸಿದೆ. ವಿಚಾರಣೆ ವೇಳೆ ಬಂಧಿತ ಆರೋಪಿಗಳು ಶಾರೀಖ್ ಕೈವಾಡದ ಬಗ್ಗೆಯೂ ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಶಾರೀಖ್‍ಗೂ ಹಾಗೂ ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಸಂಬಂಧ ವಿಚಾರಣೆ ನಡೆಯಲಿದೆ. ನಂತರ ಮಾಜ್ ಹಾಗೂ ಯಾಸಿರ್‍ನನ್ನು ಭೇಟಿ ಮಾಡಿಸಲು ನಿರ್ಧರಿಸಿದೆ.

    ತನಿಖೆಯಲ್ಲಿ ಬೇರೆ ಬೇರೆ ಸ್ನೇಹಿತರ ಹೆಸರು, ವಿಳಾಸ ಬಳಸಿ ಅಮೆಜಾನ್ ಮೂಲಕ ಸ್ಪೋಟಕ ಕಚ್ಚ ವಸ್ತು ಖರೀದಿಸಿದ್ದಾಗಿ ತಿಳಿದು ಬಂದಿದೆ. ಆರೋಪಿ ಬಳಿ ಸಿಕ್ಕ ಪ್ರೇಮ್ ರಾಜ್ ಹೆಸರಿನ ನಕಲಿ ಆಧಾರ್ ಕಾರ್ಡ್ ವಿಳಾಸ ಸಹ ಸ್ಪೋಟಕ ಸಾಮಗ್ರಿ ಖರೀದಿಗೆ ಬಳಕೆ ಮಾಡಿದ್ದ ಎಂದು ಮೂಲಗಳು ತಿಳಿಸಿವೆ.

    ಅಮೇಜಾನ್ (Amazon) ಡೆಲಿವರಿ ಕೊಟ್ಟ ಬಳಿಕ ಸ್ಪೋಟಕ ವಸ್ತುಗಳು ನಾಲ್ಕೈದು ಕೈ ಬದಲಾಯಿಸಿ ಕೊನೆಗೆ ಶಾರೀಖ್‍ನನ್ನು ತಲುಪುತ್ತಿದ್ದ ವಿಚಾರವೂ ಈಗ ತನಿಖೆಯಿಂದ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಮಠಕ್ಕೆ ಜಾಗ ನೀಡಿದ್ದು ಮುಸ್ಲಿಂ ರಾಜನಲ್ಲ, ದೊರೆ ರಾಮಭೋಜ ನೀಡಿದ್ದು- ಪೇಜಾವರ ಶ್ರೀ ಸ್ಪಷ್ಟನೆ

  • ಕದ್ರಿ ದೇಗುಲಕ್ಕೆ IRCಯಿಂದ ಬೆದರಿಕೆ ಪತ್ರ – ದೇಗುಲದ ಮಂಡಳಿಯಿಂದ ದೂರು

    ಕದ್ರಿ ದೇಗುಲಕ್ಕೆ IRCಯಿಂದ ಬೆದರಿಕೆ ಪತ್ರ – ದೇಗುಲದ ಮಂಡಳಿಯಿಂದ ದೂರು

    ಮಂಗಳೂರು: ಆಟೋ ರಿಕ್ಷಾ ಬಾಂಬ್ ಸ್ಪೋಟ (Auto Rikshaw Blast) ದಲ್ಲಿ ಕದ್ರಿ ದೇವಸ್ಥಾನ (Kadri Temple) ಟಾರ್ಗೆಟ್ ವಿಚಾರ ಸಂಬಂಧ ಇದೀಗ ಕದ್ರಿ ದೇವಸ್ಥಾನದ ಕಾರ್ಯ ನಿರ್ವಾಹಣಾಧಿಕಾರಿಯು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    ಸಾಮಾಜಿಕ ಜಾಲತಾಣ (Social Media) ದಲ್ಲಿ ಸಂದೇಶಗಳು ಹರಿದಾಡುತ್ತಿರುವುದು ಕಂಡುಬಂದಿದೆ. ಕದ್ರಿ ಮಂಜುನಾಥೇಶ್ವರ ದೇವಸ್ಥಾನಕ್ಕೆ ಪ್ರತಿದಿನ ಸಾವಿರಾರು ಭಕ್ತರು ಬರುತ್ತಿದ್ದಾರೆ. ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ (Islamic Resistance Council) ಕದ್ರಿ ದೇವಸ್ಥಾನದ ಮೇಲೆ ಬಾಂಬ್ ಬೆದರಿಕೆ ಹಾಕಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಿ. ಅಲ್ಲದೇ ದೇವಸ್ಥಾನಕ್ಕೆ ಸೂಕ್ತ ಭದ್ರತೆಯನ್ನು ಒದಗಿಸಬೇಕೆಂದು ಕಾರ್ಯ ನಿರ್ವಾಹಣಾಧಿಕಾರಿ ಜಯಮ್ಮ ಕದ್ರಿ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಕುಕ್ಕರ್‌ ಬಾಂಬ್‌ ಸ್ಫೋಟಕ್ಕೂ ಮುನ್ನ ದಿನ ಕರಾವಳಿಯಲ್ಲಿ ರಿಂಗಣಿಸಿದ್ದ ಸ್ಯಾಟಲೈಟ್‌ ಫೋನ್‌

    ಸದ್ಯ ಜಯಮ್ಮ ದೂರನ್ನು ಕದ್ರಿ ಠಾಣೆ ಪೊಲೀಸರು ಸ್ವೀಕರಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಾಂಬ್ ಸ್ಫೋಟದ ಹೊಣೆ ಹೊತ್ತುಕೊಂಡ ಇಸ್ಲಾಮಿಕ್ ರೆಸಿಸ್ಟನ್ಸ್ ಕೌನ್ಸಿಲ್ ಉಗ್ರ ಸಂಘಟನೆಯ ಟಾರ್ಗೆಟ್ ಆಗಿದ್ದು ಕದ್ರಿ ದೇವಸ್ಥಾನ ಅಂತ ಪೋಸ್ಟ್ ಮಾಡಿತ್ತು. ಅರೇಬಿಕ್ ಭಾಷೆಯಲ್ಲಿ ಬರೆದುಕೊಂಡು ತಮ್ಮ ಟಾರ್ಗೆಟ್ ಕದ್ರಿ ದೇವಸ್ಥಾನ ಆಗಿತ್ತು ಎಂದು ಉಗ್ರರು ಹೇಳಿರುವುದರಿಂದ ಈ ದೂರು ನೀಡಲಾಗಿದೆ. ಇದನ್ನೂ ಓದಿ: ಕದ್ರಿ ದೇವಸ್ಥಾನ ಮಾತ್ರವಲ್ಲ 6 ಸ್ಥಳಗಳು ಟಾರ್ಗೆಟ್‌ – ಮೊಬೈಲ್‌ನಲ್ಲಿ 6 ಜಾಗ ಸರ್ಚ್‌ ಮಾಡಿದ್ದ ಬಾಂಬರ್‌

    Live Tv
    [brid partner=56869869 player=32851 video=960834 autoplay=true]

  • ಕದ್ರಿ ದೇವಸ್ಥಾನ ನಮ್ಮ ಟಾರ್ಗೆಟ್‌ – ಮಂಗಳೂರು ಸ್ಫೋಟದ ಹೊಣೆ ಹೊತ್ತುಕೊಂಡ ಉಗ್ರ ಸಂಘಟನೆ

    ಕದ್ರಿ ದೇವಸ್ಥಾನ ನಮ್ಮ ಟಾರ್ಗೆಟ್‌ – ಮಂಗಳೂರು ಸ್ಫೋಟದ ಹೊಣೆ ಹೊತ್ತುಕೊಂಡ ಉಗ್ರ ಸಂಘಟನೆ

    ಬೆಂಗಳೂರು:  ಮಂಗಳೂರು ಬಾಂಬ್‌ ಸ್ಫೋಟ(Mangaluru Blast Case) ಉಗ್ರ ಕೃತ್ಯ ಎಂದು ದೃಢಪಟ್ಟರೂ ಶಾರೀಕ್‌(Shariq) ಹಿಂದೆ ಯಾರಿದ್ದಾರೆ ಎನ್ನುವುದು ತಿಳಿದು ಬಂದಿರಲಿಲ್ಲ. ಆದರೆ ಈಗ ʼಇಸ್ಲಾಮಿಕ್‌ ರೆಸಿಸ್ಟೆನ್ಸ್‌ ಕೌನ್ಸಿಲ್‌ʼ ಹೆಸರಿನ ಸಂಘಟನೆಯೊಂದು ಈ ಕೃತ್ಯದ ಹೊಣೆಯನ್ನು ಹೊತ್ತುಕೊಂಡಿದೆ.

    ಸಾಮಾಜಿಕ ಜಾಲತಾಣದಲ್ಲಿ Islamic Resistance Council ಸಂಘಟನೆ ಅರೆಬಿಕ್‌ ಭಾಷೆಯಲ್ಲಿ ಪೋಸ್ಟ್‌ ಹಂಚಿಕೊಂಡಿದೆ. ನಮ್ಮ ದಾಳಿ ಕದ್ರಿ ದೇವಸ್ಥಾನ(Kadri Temple) ಆಗಿತ್ತು. ಆದರೆ ಉದ್ದೇಶಿತ ಗುರಿಯನ್ನು ತಲುಪುವ ಮೊದಲೇ ಬಾಂಬ್‌ ಸ್ಫೋಟಗೊಂಡಿದೆ ಸಂಘಟನೆ ಹೇಳಿಕೊಂಡಿದೆ.

    ಶಾರೀಕ್‌ ಪಂಪ್‌ವೆಲ್‌ ಬಳಿ ಬಾಂಬ್‌ ಸ್ಫೋಟ ನಡೆಸಲು ಪ್ಲ್ಯಾನ್‌ ನಡೆಸಿದ್ದ ಎಂಬ ಮಾಹಿತಿ ಆರಂಭದಲ್ಲಿ ಸಿಕ್ಕಿತ್ತು. ಆದರೆ ಈಗ ಕದ್ರಿ ದೇವಸ್ಥಾನ ಉಗ್ರರ ಟಾರ್ಗೆಟ್‌ ಆಗಿದ್ದರಿಂದ ಈ ಪ್ರಕರಣ ಈಗ ಮತ್ತೊಂದು ಮಹತ್ವದ ತಿರುವು ಪಡೆದುಕೊಂಡಿದೆ. ಇದನ್ನೂ ಓದಿ: ಬುದ್ಧಿವಾದ ಹೇಳಿದ್ದಕ್ಕೆ ಶಾಲೆ ಬಿಟ್ಟ ಶಾರೀಕ್- ಕುಕ್ಕರ್ ಬಾಂಬರ್ ಹಿನ್ನೆಲೆಯೇ ರೋಚಕ

    ನ.23ರಂದು ಪ್ರಕಟಿಸಲಾದ ಅರೆಬಿಕ್‌ ಭಾಷೆಯಲ್ಲಿರುವ “Majlis Almuqawamat Al’islamia” ಪೋಸ್ಟ್‌ ಜೊತೆ ಬಾಂಬ್‌ ದಾಳಿಯಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾರೀಕ್‌ ಎರಡು ಹಳೆಯ ಫೋಟೋಗಳನ್ನು ಅಪ್ಲೋಡ್‌ ಮಾಡಲಾಗಿದೆ.

    ಅಷ್ಟೇ ಅಲ್ಲದೇ ಎಡಿಜಿಪಿ ಅಲೋಕ್‌ ಕುಮಾರ್‌ ಅವರಿಗೆ ಬೆದರಿಕೆ ಹಾಕಲಾಗಿದೆ. ನಿಮ್ಮ ಸಂತೋಷವು ಅಲ್ಪಕಾಲಿಕವಾಗಿರುತ್ತದೆ ಮತ್ತು ನಿಮ್ಮ ದಬ್ಬಾಳಿಕೆಯ ಫಲವನ್ನು ನೀವು ಅನುಭವಿಸುತ್ತೀರಿ ಎಂದು ಹೇಳಿದೆ.

    ರಾಜ್ಯದಲ್ಲಿ ಗುಂಪು ಹತ್ಯೆ, ದಬ್ಬಾಳಿಕೆಯ ಕಾನೂನುಗಳು ಮತ್ತು ಶಾಸನಗಳು ಮತ್ತು ಧರ್ಮದಲ್ಲಿ ಹಸ್ತಕ್ಷೇಪದ ನಡೆಯುವ ಮೂಲಕ ನಮ್ಮ ಮೇಲೆ ಯುದ್ಧ ಸಾರಲಾಗಿದೆ. ಈ ಯುದ್ಧಕ್ಕೆ ಪ್ರತಿಯಾಗಿ ದಾಳಿ ನಡೆಸಲಾಗುತ್ತಿದೆ ಎಂದು ಸಂಘಟನೆ ಹೇಳಿದೆ.

    ಈ ಸಂಘಟನೆ ಇದೆಯೋ ಇಲ್ಲವೋ ಎನ್ನುವುದು ತಿಳಿದು ಬಂದಿಲ್ಲ. ಕರ್ನಾಟಕ ಪೊಲೀಸ್‌ ಈ ಸಂಘಟನೆ ಅಸ್ತಿತ್ವದಲ್ಲಿದೆಯೇ ಇದೆಯೋ ಇಲ್ಲವೋ ಎಂಬುದನ್ನು ತಿಳಿಯಲು ಕೇಂದ್ರ ಗೃಹ ಇಲಾಖೆಯ ಸಹಾಯವನ್ನು ಕೇಳಿದೆ.

    ಕದ್ರಿಯಲ್ಲಿರುವ ಮಂಜುನಾಥ ದೇವಸ್ಥಾನ 10ನೇ ಶತಮಾನದಲ್ಲಿ ನಿರ್ಮಾಣವಾಗಿದ್ದು ಮಂಗಳೂರಿನ ಪ್ರಸಿದ್ಧ ದೇವಸ್ಥಾನವಾಗಿದೆ. ಮಂಗಳೂರು ಪಂಪ್‌ವೆಲ್‌ನಿಂದ 5 ಕಿ.ಮೀ ದೂರದಲ್ಲಿದ್ದರೆ ಸ್ಫೋಟ ನಡೆದ ಸ್ಥಳದಿಂದ 4.5 ಕಿ.ಮೀ ದೂರದಲ್ಲಿದೆ.

    Live Tv
    [brid partner=56869869 player=32851 video=960834 autoplay=true]

  • ಕೊರೊನಾ ಶಮನಕ್ಕೆ ದೇವರ ಮೊರೆ ಹೋದ ಮಂಗ್ಳೂರಿಗರು

    ಕೊರೊನಾ ಶಮನಕ್ಕೆ ದೇವರ ಮೊರೆ ಹೋದ ಮಂಗ್ಳೂರಿಗರು

    ಮಂಗಳೂರು: ಮಹಾಮಾರಿ ಕೊರೊನಾ ವೈರಸ್ ಶಮನಕ್ಕೆ ಮಂಗಳೂರಿನ ಜನ ದೇವರ ಮೊರೆ ಹೋಗಿದ್ದಾರೆ.

    ಕೊರೊನಾ ವೈರಸ್ ಶಮನಾರ್ಥ ಮಂಗಳೂರಿನ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಲ್ಲಿ ನೂರಾರು ಭಕ್ತರಿಂದ ಧನ್ವಂತರಿ ಜಪ ಪಾರಾಯಣ ಮಾಡಲಾಯಿತು. ರುದ್ರಪಠಣ ಮತ್ತು ವಿಷ್ಣುಸಹಸ್ರನಾಮ ಜನಪಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ನೇತೃತ್ವದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.

    ಜಪ ಪಾರಾಯಣಕ್ಕೂ ಮುನ್ನ ಮಂಜುನಾಥ ಸ್ವಾಮಿಗೆ ಪೂಜೆ ಸಲ್ಲಿಸಿ, ಜಪ ಪಾರಾಯಣದ ಬಳಿಕ ಮಂಜುನಾಥನಿಗೆ ಸಾಮೂಹಿಕ ಪ್ರಾರ್ಥನೆ ಮಾಡಲಾಯಿತು. ಇಂದು ಮುಂಜಾನೆಯಿಂದಲೇ ಜಪ ಪಾರಾಯಣ ಆರಂಭವಾಗಿದೆ.

    ದೇಶದಲ್ಲಿ ಕಿಲ್ಲರ್ ಕೊರೊನಾ ಸೋಂಕಿತರ ಸಂಖ್ಯೆ 101ಕ್ಕೆ ಏರಿಕ್ಕೆ ಆಗಿದ್ದು, ಇಬ್ಬರು ಬಲಿಯಾಗಿದ್ದಾರೆ. 4 ಸಾವಿರ ಮಂದಿಯ ಮೇಲೆ ನಿಗಾ ಇಡಲಾಗಿದೆ. ಬೆಂಗಳೂರಲ್ಲಿ 9 ಮಂದಿ, ಹಾಸನದಲ್ಲಿ ನಾಲ್ವರು, ದಕ್ಷಿಣ ಕನ್ನಡದಲ್ಲಿ 7 ಮಂದಿ, ಕಲಬುರಗಿಯಲ್ಲಿ ನಾಲ್ವರು, ಉಡುಪಿಯಲ್ಲಿ ಇಬ್ಬರು, ಬಳ್ಳಾರಿಯಲ್ಲಿ ಓರ್ವ, ಚಿಕ್ಕಮಗಳೂರಿನಲ್ಲಿ ಇಬ್ಬರು, ಕೊಡಗಿನಲ್ಲಿ ಓರ್ವ ಹಾಗೂ ಬೀದರ್ ನಲ್ಲಿ ಇಬ್ಬರ ಮೇಲೆ ಕೊರೊನಾ ಶಂಕೆ ವ್ಯಕ್ತವಾಗಿದೆ.

    ಮಹಾರಾಷ್ಟ್ರದಲ್ಲಿ ಮತೋರ್ವ ಕೊರೊನಾಗೆ ಸಾವನ್ನಪ್ಪಿರುವ ಶಂಕೆ ಇದೆ. ತೆಲಂಗಾಣ, ಛತ್ತೀಸ್‍ಗಢ, ಪಶ್ಚಿಮ ಬಂಗಾಳದಲ್ಲಿ ಮಾರ್ಚ್ 31ರವರೆಗೆ ಬಂದ್ ಮಾಡಲಾಗಿದೆ. ಭಾರತ-ಬಾಂಗ್ಲಾದೇಶ, ಭಾರತ-ನೇಪಾಳ, ಭಾರತ-ಭೂತಾನ್, ಭಾರತ-ಮ್ಯಾನ್ಮಾರ್ ಗಡಿ ಕೂಡ ಏಪ್ರಿಲ್ 16 ವರೆಗೂ ಬಂದ್ ಮಾಡಿ ಆದೇಶ ಹೊರಡಿಸಲಾಗಿದ್ದು, ರಾಜತಾಂತ್ರಿಕರು, ಅಧಿಕಾರಿಗಳಿಗೆ ಮಾತ್ರ ಗಡಿ ದಾಟುವ ಅವಕಾಶ ಮಾಡಿಕೊಡಲಾಗಿದೆ.